Tuesday, September 29, 2020

#ಯಕ್ಷಮಂದಾರ - 26 | ಪಂಜು ಪೂಜಾರಿ ಬಗ್ವಾಡಿ | Panju Poojaary Bagvadi | ಕಮಲಶಿಲೆ | ಸ್ತ್ರೀಪಾತ್ರದಾರಿ | Part 26

🌀ಯಕ್ಷ💥ಮಂದಾರ🌀


#ಯಕ್ಷಮಂದಾರ - 26 | ಪಂಜು ಪೂಜಾರಿ ಬಗ್ವಾಡಿ | Panju Poojaary Bagvadi | ಕಮಲಶಿಲೆ | ಸ್ತ್ರೀಪಾತ್ರದಾರಿ | Part 26

ಇದು ಯಕ್ಷ ಕಲಾವಿದರ ಸಾಧನೆ ಮತ್ತು ಜೀವನಗಾಥೆಯ ಅನಾವರಣ. ಇಂದಿನ ನಮ್ಮ ಯಕ್ಷಸಾಧಕರು ಬಡಗಿನ ಬೆಡಗಿನ ಯಕ್ಷಕನ್ಯೆ,ಕಮಲಶಿಲೆ ಮೇಳದ ಪ್ರಧಾನ ಸ್ತ್ರೀಪಾತ್ರದಾರಿ ಪಂಜು ಕುಮಾರ್ ಬಗ್ವಾಡಿ.. ಶ್ರೀಯುತರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬಗ್ವಾಡಿಯಲ್ಲಿ ಶ್ರೀ ಶೀನ ಪೂಜಾರಿ ಮತ್ತು ಶ್ರೀಮತಿ ತುಂಗಾ ದಂಪತಿಗಳ ಪುತ್ರನಾಗಿ ದಿನಾಂಕ:24.04.1983ರಲ್ಲಿ ಜನಿಸಿದರು.. ಬಾಲ್ಯದಲ್ಲಿಯೇ ಯಕ್ಷಗಾನದ ಬಗ್ಗೆ ಅಪಾರವಾದ ಒಲವನ್ನು ಬೆಳೆಸಿಕೊಂಡಿದ್ದ ಇವರು,ಕ್ರಮೇಣ ಊರ ಸುತ್ತಮುತ್ತಲೂ ನಡೆಯುತ್ತಿರುವ ಬಯಲಾಟಗಳಿಂದ ಮತ್ತಷ್ಟು ಆಕರ್ಷಿತರಾಗಿ ಶಾಲಾಜೀವನದಲ್ಲಿಯೇ ಸೆಳ್ಕೊಡು ಮಹಿಷಮರ್ದಿನಿ ಕಲಾಸಂಘದಲ್ಲಿ ವೇಷ ಮಾಡುತ್ತಿದ್ದರು.. ನಂತರ ತನ್ನ ಏಳನೆಯ ತರಗತಿಯ ವಿದ್ಯಾಭ್ಯಾಸಕ್ಕೆ ವಿದಾಯ ಹೇಳಿದ ಇವರು ಯಕ್ಷಗುರುಗಳಾಗಿದ್ದ ವಿಶ್ವೇಶ್ವರ ಸೋಮಯಾಜಿಯವರಿಂದ ಯಕ್ಷಗಾನದ ತಾಳ,ಲಯವನ್ನು ಅಭ್ಯಸಿಸಿ ,ಆರ್ಗೋಡು ಮೋಹನದಾಸ ಶೆಣೈಯವರಿಂದ ಮಾತುಗಾರಿಕೆಯ ಜ್ಞಾನವನ್ನು ಪಡೆದುಕೊಂಡರು.ನಂತರ ಪ್ರಥಮ ಬಾರಿಗೆ ಸಾಲಿಗ್ರಾಮ ಮೇಳದಲ್ಲಿ ಗೆಜ್ಜೆ ಕಟ್ಟಿ ರಂಗಪ್ರವೇಶ ಮಾಡಿದ ಇವರು ಉಳಿದೆಲ್ಲವನ್ನು ರಂಗದಲ್ಲಿ ಹಿರಿಯ ಕಲಾವಿದರ ನಡೆ ನುಡಿಯನ್ನು ನೋಡಿ ಕಲಿತದ್ದೇ ಹೆಚ್ಚು.ಸಾಲಿಗ್ರಾಮದಲ್ಲಿ ಒಂದು ವರ್ಷ ಸೇವೆಸಲ್ಲಿಸಿದ ಇವರು ನಂತರ ಹಾಲಾಡಿ ಮೇಳದಲ್ಲಿ ಒಂದು ವರ್ಷ,ಬಗ್ವಾಡಿ ಮೇಳದಲ್ಲಿ ನಾಲ್ಕು ವರ್ಷ, ಸಿಗಂದೂರು ಮೇಳದಲ್ಲಿ ಒಂದು ವರ್ಷ, ಸೇವೆಸಲ್ಲಿಸಿ,ನಿರಂತರವಾಗಿ ಹದಿನೈದು ವರ್ಷಗಳಿಂದ ಕಮಲಶಿಲೆ ಮೇಳದಲ್ಲಿ ಸೇವೆಸಲ್ಲಿಸುತ್ತಿರುವ ಇವರು,ಪ್ರಸ್ತುತ ಕಮಲಶಿಲೆ ಮೇಳದ ಪ್ರಧಾನ ಸ್ತ್ರೀಪಾತ್ರದಾರಿಯಾಗಿ ದುಡಿಯುತ್ತಿದ್ದಾರೆ.. ಕಳೆದ ಇಪ್ಪತ್ತೆರಡು ವರ್ಷಗಳಿಂದ ಯಕ್ಷರಂಗದಲ್ಲಿ ದುಡಿಯುತಿರುವ ಇವರು ತನ್ನ ಶೃಂಗಾರ ಮತ್ತು ಬಾವನಾತ್ಮಕವಾದ ಸ್ತ್ರೀಪಾತ್ರಗಳ ಅತ್ಯುತ್ತಮವಾದ ನಿರ್ವಹಣೆಯಿಂದ ಅಪಾರವಾದ ಅಭಿಮಾನಿಗಳ ಪ್ರೀತಿ ಮತ್ತು ಗೌರವಾದರಗಳಿಗೆ ಪಾತ್ರರಾದ ಯುವ ಕಲಾವಿದರಾಗಿದ್ದು, ಸತ್ಯ ಹರಿಶ್ಚಂದ್ರ ಮಹಾತ್ಮೆಯ ಚಂದ್ರಮತಿ,ರಾಜ ಉಗ್ರಸೇನದ ರುಚಿಮತಿ,ಪಾಪಣ್ಣ ವಿಜಯದ ಗುಣಸುಂದರಿ, ರಾಜರುದ್ರಕೋಪದ ಸತ್ಯಶೀಲೆ, ಅಭಿಮನ್ಯು ಕಾಳಗದ ಸುಭದ್ರೆ,ನಳಚರಿತ್ರೆಯ ದಮಯಂತಿ ಮೊದಲಾದ ಬಾವನಾತ್ಮಕ ಪಾತ್ರಗಳನ್ನು ಅತ್ಯಂತ ಮನೋಜ್ಞವಾಗಿ ಅಭಿನಯಿಸುವ ಮೂಲಕ ಪ್ರೇಕ್ಷಕರ ಕಣ್ಣಿನಲ್ಲೂ ನೀರು ತರಿಸಬಲ್ಲ ಉತ್ತಮ ಪ್ರತಿಭಸಂಪನ್ನರು... ವೀರಾವೇಶದ ದ್ರೌಪತಿ,ಸುಭದ್ರೆ,ಶಶಿಪ್ರಭೆ,ಆಸ್ತಿ,ಪ್ರಹಸ್ತಿ ಭ್ರಮರಕುಂತಲೆ,ಮೀನಾಕ್ಷಿ ಮೊದಲಾದ ಕಸೇವೇಷಗಳನ್ನು ಸಮರ್ಥವಾಗಿ ನಿಭಾಯಿಸುವ ಇವರು, ಶೃಂಗಾರಭರಿತವಾದ ಮೇನಕೆ,ಚಿತ್ರಾಕ್ಷಿ ಮೋಹಿನಿ,ಚಂದ್ರಾವಳಿ, ಅಸಿಕೆ ಮುಂತಾದ ಪಾತ್ರಗಳಲ್ಲಿ ಮೋಹಕ ರೂಪಸಿರಿ ಮತ್ತು ಲಾಲಿತ್ಯಪೂರ್ಣ ನಾಟ್ಯಶೈಲಿಯಿಂದ ಪ್ರೇಕ್ಷಕರ ಮನಸೂರೆಗೊಳ್ಳಬಲ್ಲರು.. ಸೀತೆ,ಲಕ್ಷ್ಮೀದೇವಿ,ದಾಕ್ಷಾಯಿಣಿ,ಪಾರ್ವತಿ,ಶಾರದೆ,ಮಂಡೋದರಿ,ಚಿತ್ರಾಂಗದೆ ಮೊದಲಾದ ಪಾತ್ರಗಳಿಗೆ ನ್ಯಾಯ ಒದಗಿಸಿಕೊಡಬಲ್ಲ ಇವರು,ದೇವಿ ಮಹಾತ್ಮೆಯ ದೇವಿ ಮತ್ತು ಕಮಲಶಿಲೆ ಕ್ಷೇತ್ರ ಮಹಾತ್ಮೆಯ ದೇವಿಯ ಪಾತ್ರವನ್ನು ಬಹು ಸುಂದರವಾಗಿ ಅಭಿನಯಿಸಬಲ್ಲರು ಇವರು ಬೆಂಗಳೂರು, ಮುಂಬೈ, ಹೈದರಾಬಾದ್ ಮತ್ತು ಉತ್ತರಕರ್ನಾಟಕ ಬಾಗದಲ್ಲಿಯೂ ಕೂಡ ಮಳೆಗಾಲದಲ್ಲಿ ತಿರುಗಾಟ ನಡೆಸಿದ್ದಾರೆ.. ಆರ್ಗೋಡು ಮೋಹನದಾಸ ಶೆಣೈ,ಮಲ್ಪೆ ವಾಸುದೇವ ಸಾಮಗ,ಹೆನ್ನಾಬೈಲು ಸಂಜೀವ ಶೆಟ್ಟಿ,ಕೊಳಗಿ ಕೇಶವ ಹೆಗಡೆ,ಕಿಗ್ಗ ಹಿರಿಯಣ್ಣ ಆಚಾರ್ಯ, ಕುಮಟಾ ಗೋವಿಂದ ನಾಯ್ಕ ಮೊದಲಾದ ಹಿರಿಯ ಕಲಾವಿದರ ಸಾಂಗತ್ಯದಲ್ಲಿ ತಿರುಗಾಟ ನಡೆಸಿರುವ ಇವರು ತನ್ನ ಸೌಮ್ಯ ಮತ್ತು ಸರಳ ಗುಣಗಳಿಂದ ಜನಮನ್ನಣೆ ಗಳಿಸಿದ್ದು,ಹಿರಿಯ ಕಲಾವಿದರ ಮೇಲೆ ಅಪಾರವಾದ ಗೌರವವನ್ನು ಇರಿಸಿಕೊಂಡಿದ್ದು,ಕಿರಿಯ ಕಲಾವಿದರಿಗೂ ಕೂಡ ತನ್ನ ಜ್ಞಾನವನ್ನು ನೀಡಿ ಅವರನ್ನು ಪರಿಪೂರ್ಣ ಕಲಾವಿದರನ್ನಾಗಿ ಮಾಡುವಲ್ಲಿ ಶ್ರಮಿಸುತ್ತಿದ್ದಾರೆ.. ಇವರು ಯಕ್ಷರಂಗದಲ್ಲಿ ಸಲ್ಲಿಸುತ್ತಿರುವ ಸೇವೆಗಾಗಿ,ಹೊಸೂರು ಹಕ್ಲುಮನೆ ಕುಟುಂಬಸ್ಥರಿಂದ ಸನ್ಮಾನ, ಮಹಿಷಮರ್ದಿನಿ ಯುವಕ ಮಂಡಲ ಬಗ್ವಾಡಿ ಇವರಿಂದ ಸನ್ಮಾನ, ಯಡಮೊಗೆ ಬಸವನಪಾಲು ಶಂಕರ ಶೆಟ್ಟಿ ಕುಟುಂಬಸ್ಥರಿಂದ ಸನ್ಮಾನ, ಬೈಲುಕೆರೆ ಮಲ್ಲಿಕಾ ರಮೇಶ ಸುವರ್ಣ ಕುಟುಂಬಸ್ಥರಿಂದ ಸನ್ಮಾನ, ರಾಮ್ ಪ್ರೆಂಡ್ಸ್ ಜಪ್ತಿ ಇವರಿಂದ ಸನ್ಮಾನ, ಶ್ರೀಮಹಾಗಣಪತಿ ಮಕ್ಕಳ ಮೇಳ ಬಗ್ವಾಡಿ ಅವರಿಂದ ಸನ್ಮಾನ, ಹೊಸೂರು ಹಕ್ಲುಮನೆ ಪಿಣಕಮ್ಮ ಶೆಡ್ತಿ ಮತ್ತು ಕುಟುಂಬಸ್ಥರಿಂದ ಸನ್ಮಾನ, ಬ್ರಾಹ್ಮೀ ಭಕ್ತಸಮೂಹ ಬೆಂಗಳೂರು ಇವರಿಂದ ಸನ್ಮಾನ, ಮಲೆನಾಡ ಸಿರಿ ಚಾರಿಟೇಬಲ್ ಟ್ರಸ್ಟ್ ಸೋಮೇಶ್ವರ ಇವರಿಂದ ಬೆಂಗಳೂರಿನಲ್ಲಿ ಸನ್ಮಾನ ಸೇರಿದಂತೆ ಅನೇಕ ಕಡೆ ಸನ್ಮಾನ ಮತ್ತು ಗೌರವ ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ... ದಿನಾಂಕ:03.05.2012ರಲ್ಲಿ ಜ್ಯೋತಿಯವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಇವರು ಮಗ ರವಿಕುಮಾರ್ ಮತ್ತು ಮಗಳು ಕೌಶಿಕೆಯೊಂದಿಗೆ ಪ್ರಸ್ತುತ ಸಿದ್ದಾಪುರ ಸಮೀಪದ ಹೆನ್ನಾಬೈಲುವಿನಲ್ಲಿ ವಾಸವಾಗಿದ್ದಾರೆ.. ಶ್ರೀ ಬ್ರಾಹ್ಮಿದುರ್ಗಾಪರಮೇಶ್ವರಿ ದೇವಿಯೂ ಇವರ ಸರ್ವ ಇಷ್ಟಾರ್ಥಗಳನ್ನು ಈಡೇರಿಸಿ, ವೈಯುಕ್ತಿಕ ಜೀವನ ಮತ್ತು ಕಲಾರಂಗದಲ್ಲಿ ಉನ್ನತ ಸ್ಥಾನಕ್ಕೇರುವ ಯೋಗವನ್ನು ನೀಡಲಿ ಎನ್ನುವುದು ನಮ್ಮ ಯಕ್ಷಮಂದಾರದ ಶುಭಹಾರೈಕೆ.. ಸಾಹಿತ್ಯ:ಹಾಲಾಡಿ ಸಂತೋಷ ಶೆಟ್ಟಿ... ನಿರೂಪಣೆ:ಶ್ರೀಮತಿ ಅಮೃತ ಶೆಟ್ಟಿ.. ಮಾಹಿತಿ ಮತ್ತು ಸಹಕಾರ: ಜಯರಾಮ ಶೆಟ್ಟಿ ಹೈಗಿನಕಟ್ಟೆ, ಹೊಸೂರು, ಯಕ್ಷಮಂದಾರದ ಸದಸ್ಯರು, ಕಮಲಶಿಲೆ ಮೇಳದ ಅಭಿಮಾನಿಗಳು.. ಯಕ್ಷಗಾನ ಕಲಾವಿದರ ಪರಿಚಯ ಸರಣಿಯ ಎಲ್ಲ ವಿಡಿಯೋಗಳು ನಮ್ಮ ಯಕ್ಷ💥ಮಂದಾರ ಯೂಟ್ಯೂಬ್ ಚಾನಲ್..ನಲ್ಲಿ ಲಭ್ಯವಿದೆ.. ನಮ್ಮ 🌀ಯಕ್ಷ💥ಮಂದಾರ🌀ಯೂಟ್ಯೂಬ್ ಚಾನಲ್ ಮತ್ತು ಫೇಸ್ಬುಕ್ ಪೇಜ್.. ನ್ನು download ಮಾಡಿಕೊಳ್ಳಿ..ಮತ್ತು ನಾವು upload ಮಾಡುವ ಎಲ್ಲ ಯಕ್ಷಗಾನ ವಿಡಿಯೋಗಳ ಮಾಹಿತಿ ಪಡೆಯಿರಿ..ನಮ್ಮ ವಿಡಿಯೋಗಳನ್ನು ನೋಡಿ like ಮಾಡಿ,share ಮಾಡಿ ಪ್ರೋತ್ಸಾಹಿಸಿ... ಯಕ್ಷಗಾನ ಕಲೆಯನ್ನು ಉಳಿಸಿ,ಬೆಳೆಸಿ, ಪ್ರೋತ್ಸಾಹಿಸಿ.. ಧನ್ಯವಾದಗಳು🙏🙏🙏
This is an exhibition of the achievements and life of yakshaartists. Our yakshakas are the yakshakinof carpenters, panju kumar bagwadi, the main female patron of kamalashile mela. Mr. Sheena Priest and Mrs Tunga were born on 24.04.1983 at Bagwadi in Kundapur taluk of Udupi district. He had developed a great passion for Yakshagana in his early childhood and gradually became more attracted to the open air around the village and disguised himself in the Selkodu Mahishamardini Arts Association. He then left for his seventh grade education, and studied the rhythm of yakshagana from Vishweshwara Somayaji, who studied the rhythm of yakshagana and learned the rhythm of yakshagana from Argodu Mohandas Shenoy, who made his first appearance at saligramam mela and learned the way the veterans were doing in the theatre. After serving for one year at Saligramam, he served for four years at The Bagwadi Mela. She is currently working as the main female lead of the Kamalastone Mela.

He has been working in the yakshagana for the past twenty-two years and has been a great artist erotic and admirable for his erotic and erotic feminine characters, and he has been a great actor in the audience with his beautiful performances like Chandramati of Mahathma, Raja Ugrasen's Ruchimati, Papanna Vijaya Gunasundari, Rajrudra's anger, Subhadra of Abhimanyu battle, Nalacharitri's damaya. He is able to handle the disguises of brave draupadi, subhadra, shastri prabhe, property, prahasti bhramarakundale, meenakshi, and the audience will be impressed with the charming and stylish dance style of the characters of the erotic menace, chitraksi mohini, chandravali, aasike etc. She can do justice to the characters of Sita, Lakshmi Devi, Dakshaini, Parvathi, Sharade, Mandodari, Chitrangade and others, and he can play the role of Mahatma Mahatma and Kamalastone Kshetra Mahatma very beautifully.

He also toured Bangalore, Mumbai, Hyderabad and North Karnataka during the monsoon.

He has been a popular artist erotic, with his gentle and simple characters, and he has been a great artist erotic and has been working to make younger artistes a perfect artist.

He is honoured by Hosur Haklumane Yavar, Honored by Mahishamardini Yuvamandal Bagwadi, Yadamoge Bybasavalapalu Shankarshetty, Honour edited by Bailukere Mallika Ramesh Suvarna, Honoured by Ram Friends, Honoured by Sri Mahaganapathi Children Mela Bagwadi, Hosur Haklumane Pinakamma Shetty and Brahmani Bhakta Ganga, Bangalore.

He married jyoti on 03.05.2012 and is currently living in Hennabailu near Sivagangai with his son Ravi Kumar and daughter Kaushik.

Our yakshamandar abunda i.e. sri brahmi durga parameshwari devi will fulfill all his wishes and give him a high level of personal life and art.

Saint Haladi Santosh Shetty

Narration:Smt. Amrita Shetty..

Information and Cooperation:
Jayaram Shetty Haiginakate, Hosur,
Members of Yakshamandar,
Fans of Kamalastone Mela..

All the videos of the Yakshagana Artistes Introduction Series are our Yaksha💥Mandar YouTube channel.. Available in..   

Our 🌀yss💥mandar🌀YouTube channel and Facebook page. Download.. And get information about all yakshagana videos we upload.. Watch our videos like, share and encourage... Save, develop and encourage yakshagana art..

Thank you🙏🙏🙏


ಯಕ್ಷಮಂದಾರ ವಿಡಿಯೋ ನೋಡಲೋಸುಗವಾಗಿ. ವಾಹಿನಿಯ ಹೋಮ್ ಪೇಜ್ ಗಾಗಿ: https://www.youtube.com/channel/UCsrL ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: https://www.facebook.com/groups/27334

Monday, September 28, 2020

#ಯಕ್ಷಮಂದಾರ - 25 | ಉಪ್ಪುಂದ ಕೃಷ್ಣ ದೇವಾಡಿಗ | Uppunda Krishna Devadiga | ಸೌಕೂರು ಮೇಳ | ಪುಂಡು ವೇಷಧಾರಿ |

🌀ಯಕ್ಷ💥ಮಂದಾರ🌀

#ಯಕ್ಷಮಂದಾರ - 25 | ಉಪ್ಪುಂದ ಕೃಷ್ಣ ದೇವಾಡಿಗ | Uppunda Krishna Devadiga | ಸೌಕೂರು ಮೇಳ | ಪುಂಡು ವೇಷಧಾರಿ |

ಇದು ಯಕ್ಷ ಕಲಾವಿದರ ಸಾಧನೆ ಮತ್ತು ಜೀವನಗಾಥೆಯ ಅನಾವರಣ.. ಇಂದಿನ ನಮ್ಮ ಯಕ್ಷಸಾಧಕರು ಬಡಗುತಿಟ್ಟಿನ ಬಯಲಾಟ ಮೇಳದಲ್ಲಿ ತನ್ನ ಪರಿಶ್ರಮ ಮತ್ತು ಕಲಾನಿಷ್ಠೆಯಿಂದ ಪ್ರಸಿದ್ದರಾದ ಯುವಸಾದಕರಲ್ಲಿ ಖ್ಯಾತನಾಮರಾದ, ಸೌಕೂರು ಮೇಳದ ಪುಂಡು ವೇಷಧಾರಿ ಉಪ್ಪುಂದ ಕೃಷ್ಣ ದೇವಾಡಿಗರು... ಶ್ರೀಯುತರು ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಉಪ್ಪುಂದ ಎಂಬಲ್ಲಿ ದಿ. ಶುಕ್ರ ದೇವಾಡಿಗ ಮತ್ತು ಶ್ರೀಮತಿ ನಾಗಿ ಇವರ ಎಂಟು ಜನ ಮಕ್ಕಳಲ್ಲಿ ದ್ವಿತೀಯ ಪುತ್ರನಾಗಿ ಜನಿಸಿದರು... ಬಡತನದ ಭವಣೆಯಲ್ಲಿಯೇ ಬಾಲ್ಯವನ್ನು ಕಳೆದ ಇವರು,ಏಳನೆಯ ತರಗತಿಗೆ ತನ್ನ ವಿದ್ಯಾಭ್ಯಾಸವನ್ನು ನಿಲ್ಲಿಸಬೇಕಾದ ಪರಿಸ್ಥಿತಿ ಎದುರಾದಾಗ, ಯಕ್ಷಗಾನ ಕ್ಷೇತ್ರದತ್ತ ಆಕರ್ಷಿತರಾಗಿ ಯಕ್ಷಗಾನದ ಹಿರಿಯ ಸ್ತ್ರೀ ಪಾತ್ರಧಾರಿಯಾಗಿದ್ದ ಉಪ್ಪುಂದ ಗಣೇಶರಲ್ಲಿ ಯಕ್ಷಗಾನ ನಾಟ್ಯಭ್ಯಾಸವನ್ನು ಮಾಡಿದರು...ನಂತರ ನಾಗರಕೊಡಿಗೆ ಮೇಳದಲ್ಲಿ ಗೆಜ್ಜೆಕಟ್ಟಿ ರಂಗಪ್ರವೇಶ ಮಾಡಿದ ಇವರು ಹಿರಿಯ ಕಲಾವಿದರ ರಂಗನಡೆ,ಮಾತುಗಾರಿಕೆ, ವೇಷಭೂಷಣಗಳನ್ನು ನೋಡಿ,ಕೇಳಿ ಕಲಿತು,ರಂಗದಲ್ಲಿ ಪ್ರಬುದ್ಧತೆಯನ್ನು ಸಾಧಿಸಿದರು....ನಂತರ ಶಿರಸಿ ಮೇಳದಲ್ಲಿ ಒಂದು ವರ್ಷ, ಪೆರ್ಡೂರು ಮೇಳದಲ್ಲಿ ಎರಡು ವರ್ಷ,ಮಂದಾರ್ತಿ ಮೇಳದಲ್ಲಿ ಮೂರು ವರ್ಷ,ಮಾರಣಕಟ್ಟೆ ಮೇಳದಲ್ಲಿ ಐದು ವರ್ಷ ಸೇವೆಸಲ್ಲಿಸಿ,ಪ್ರಸ್ತುತ ಹದಿನೇಳು ವರ್ಷಗಳಿಂದ ನಿರಂತರವಾಗಿ ಸೌಕೂರು ಮೇಳದಲ್ಲಿ ಕಲಾಸೇವೆಯನ್ನು ಮುಂದುವರಿಸುತ್ತಿದ್ದಾರೆ... ಅದ್ಬುತ ಲಯಸಿದ್ದಿಯೊಂದಿಗೆ,ಮಿಂಚಿನ ಪಾದಗತಿಯನ್ನು ಹೊಂದಿರುವ ಇವರು ಅಭಿಮನ್ಯು,ಬಬ್ರುವಾಹನ,ಸುಧನ್ವ,ಕೃಷ್ಣ,ವಿಷ್ಣು,ವೃಷಸೇನ,ದೇವವೃತ, ಲವ,ಕುಶ,ಚಂಡ, ಮುಂಡ ಮತ್ತು ಸೌಕೂರು ಕ್ಷೇತ್ರ ಮಹಾತ್ಮೆಯ ಹಂದ,ಕುಂದ ಮೊದಲಾದ ಪೌರಾಣಿಕ ಪಾತ್ರಗಳನ್ನು ಬಹುಸುಂದರವಾಗಿ ಅಭಿನಯಿಸುವುದರೊಂದಿಗೆ,ಆದುನಿಕ ಪ್ರಸಂಗಗಳಾದ ಮೇಘಮಯೂರಿಯ ಶಶಾಂಕ,ಧರ್ಮಸಂಕ್ರಾಂತಿಯ ಚರಿತ್ರಸೇನ ನಾಗಶ್ರೀಯ ಶೈಥಿಲ್ಯ,ರವಿ ಶೆಟ್ಟಿ ಅಸೋಡಿ ವಿರಚಿತ ಜನ್ಮದಾತೆ ಪ್ರಸಂಗದ ಸಿದ್ದಾಂತ ಮತ್ತು ಮಾತಾಂತರಂಗ ಪ್ರಸಂಗದ ಶ್ರೀ ಹರ್ಷನ ಪಾತ್ರವನ್ನು ನಿರ್ವಹಿಸಿ ಜನಮನ್ನಣೆ ಗಳಿಸಿದ್ದಾರೆ...ಜೋಡಾಟದಲ್ಲಿ ತನ್ನ ಚುರುಕುಗತಿಯ ಹೆಜ್ಜೆಗಾರಿಕೆ, ಮಿಂಚಿನ ರಂಗಪ್ರವೇಶದ ಮೂಲಕ ಪ್ರಸಿದ್ದರಾದ ಇವರು,ಪಿ.ಕಿಶನ್ ಹೆಗ್ಡೆಯವರು ಹಾಲಾಡಿ ಮತ್ತು ಸೌಕೂರು ಮೇಳವನ್ನು ನಡೆಸುತ್ತಿದ್ದ ಕಾಲದಲ್ಲಿ ಜೋಡಾಟದಲ್ಲಿ ಹಾಲಾಡಿ ಮೇಳದಲ್ಲಿ ಮಾನ್ಯ ಶ್ರೀಧರ, ರಾಘವೇಂದ್ರ ತೆಂಕೂರು ಮತ್ತು ಸೌಕೂರು ಮೇಳದಲ್ಲಿ ಹಾಲಾಡಿ ಚಂದ್ರಕುಲಾಲ ಮತ್ತು ಇವರ ಲವಕುಶ ಕಾಳಗದ ಜೋಡಿ ರಂಗದಲ್ಲಿ ಅದ್ಬುತ ಸ್ಪರ್ಧಾತ್ಮಕ ಪೈಪೋಟಿಯನ್ನು ನೀಡಿ ಪ್ರಬುದ್ಧತೆಯನ್ನು ಸಾದಿಸುತ್ತಿತ್ತು.. ಎಲ್ಲಿಯೂ ವೈಮನಸ್ಸು ಮತ್ತು ಸಂಘರ್ಷಕ್ಕೆ ಎಡೆಮಾಡಿಕೊಡದೆ ಸಾಮರಸ್ಯವನ್ನು ಕಾಪಾಡಿಕೊಂಡು ರಂಗದ ನ್ಯಾಯ ಕಾಪಾಡಿಕೊಂಡು ಪಾತ್ರಕ್ಕೆ ಮೆರಗು ನೀಡುತ್ತಿದ್ದ ಇವರು ಪ್ರೇಕ್ಷಕರ ಮನಸೂರೆಗೊಳ್ಳಬಲ್ಲ ಪ್ರತಿಭಾವಂತರು ... ಆಕರ್ಷಕ ನಾಟ್ಯ,ಪ್ರಬುದ್ಧ ಮಾತುಗಾರಿಕೆ ಮತ್ತು ಸುಂದರವೇಷಭೂಷಣದೊಂದಿಗೆ ಪುಂಡು ಮತ್ತು ಪುರುಷವೇಷದ ಪಾತ್ರಗಳನ್ನು ನಿರ್ವಹಿಸಿ ಪ್ರಸಿದ್ದರಾಗಿದ್ದಾರೆ... ತನ್ನ ಪ್ರತಿಭೆಯಿಂದಲೇ ಪ್ರಸಿದ್ಧಿಯನ್ನು ಗಳಿಸಿಕೊಂಡ ಇವರು ಅಪಾರ ಅಭಿಮಾನಿಗಳನ್ನು ಹೊಂದಿದ್ದು,,"ಯಕ್ಷಕುವರ"ಎಂಬ ಬಿರುದು ಸೇರಿದಂತೆ ಹಲವು ಸನ್ಮಾನವನ್ನು ಪಡೆದಿದ್ದಾರೆ... ತನ್ನ ವೃತ್ತಿ ಬದುಕಿನಲ್ಲಿ ವಾಸುದೇವ ಸಾಮಗ,ಕೋಡಿ ವಿಶ್ವನಾಥ ಗಾಣಿಗ ರಾಘವೇಂದ್ರ ಮಯ್ಯ, ರವಿ ಸೂರಾಲು,ಹೆನ್ನಾಬೈಲು ಸಂಜೀವ ಶೆಟ್ಟಿ,ಜೋಗು ಕುಲಾಲ, ಕೋಟ ಸುರೇಶ,ಬೆದ್ರಾಡಿ ನರಸಿಂಹ,ಬೆಲ್ತೂರು ರಮೇಶ,ದಿ.ಸುಳುಗೋಡು ನಾರಾಯಣ,ರಾಕೇಶ ಮಲ್ಯ,ಹಾರಾಡಿ ಸರ್ವ ಗಾಣಿಗ,ಉಪ್ಪಿನಕುದ್ರು ಆನಂದ,ಶ್ರೀದರ ಭದ್ರಾಪುರ ಮೊದಲಾದ ಕಲಾವಿದರೊಂದಿಗೆ ತಿರುಗಾಟ ನಡೆಸಿರುವ ಇವರು ಅಪಾರ ಅನುಭವವನ್ನು ಸಾಧಿಸಿದ್ದಾರೆ.. ತನ್ನ ಜೀವನ ಸಂಗಾತಿಯಾಗಿ ಶ್ರೀಮತಿ ರಾಧ ಅವರನ್ನು ಕೈ ಹಿಡಿದು ದಿನಾಂಕ:18.02.2013ರಲ್ಲಿ ಸಾಂಸಾರಿಕ ಬದುಕಿಗೆ ಕಾಲಿಟ್ಟ ಇವರು ವಿನಮ್ರ ಎಂಬ ಪುತ್ರನನ್ನು ಪಡೆದಿದ್ದು,ಸುಖ ಸಂಸಾರವನ್ನು ನಡೆಸುತ್ತಿದ್ದಾರೆ... ವೈಯುಕ್ತಿಕ ಮತ್ತು ಕಲಾಜೀವನದಲ್ಲಿ ಸರಳ ಸಜ್ಜನಿಕೆಯನ್ನು ಅಳವಡಿಸಿಕೊಂಡ ಇವರ ಮುಂದಿನ ಕಲಾಬದುಕು ಸುಗಮವಾಗಿ ಸಾಗಲಿ..ಸೌಕೂರು ಶೀ ದುರ್ಗಾಪರಮೇಶ್ವರಿ ಅಮ್ಮನವರು ಇವರಿಗೆ ಆಯುರಾರೋಗ್ಯ,ಸುಖ ಸಂಪತ್ತನ್ನು ಕೊಟ್ಟು ಕಾಪಾಡಲಿ ಎನ್ನುವುದು ಯಕ್ಷಮಂದಾರದ ಶುಭಹಾರೈಕೆ.. ಸಾಹಿತ್ಯ:ಹಾಲಾಡಿ ಸಂತೋಷ ಶೆಟ್ಟಿ... ನಿರೂಪಣೆ:ಶ್ರೀಮತಿ ಅಮೃತಾ ಶೆಟ್ಟಿ.. ಯಕ್ಷಗಾನ ಕಲಾವಿದರ ಪರಿಚಯ ಸರಣಿಯ ಎಲ್ಲ ವಿಡಿಯೋಗಳು ನಮ್ಮ ಯಕ್ಷ ಮಂದಾರ ಯೂಟ್ಯೂಬ್ ಚಾನಲ್..ನಲ್ಲಿ ಲಭ್ಯವಿದೆ.. ನಮ್ಮ 🌀ಯಕ್ಷ💥ಮಂದಾರ🌀ಯೂಟ್ಯೂಬ್ ಚಾನಲ್ ಮತ್ತು ಫೇಸ್ಬುಕ್ ಪೇಜ್.. ನ್ನು download ಮಾಡಿಕೊಳ್ಳಿ..ಮತ್ತು ನಾವು upload ಮಾಡುವ ಎಲ್ಲ ಯಕ್ಷಗಾನ ವಿಡಿಯೋಗಳ ಮಾಹಿತಿ ಪಡೆಯಿರಿ..ನಮ್ಮ ವಿಡಿಯೋಗಳನ್ನು ನೋಡಿ like ಮಾಡಿ,share ಮಾಡಿ ಪ್ರೋತ್ಸಾಹಿಸಿ... ಯಕ್ಷಗಾನ ಕಲೆಯನ್ನು ಉಳಿಸಿ,ಬೆಳೆಸಿ, ಪ್ರೋತ್ಸಾಹಿಸಿ.. ಧನ್ಯವಾದಗಳು🙏🙏🙏 This is an exhibition of the achievements and life of yakshaartists. Today our yakshakas are the famous young sadars who are known for their hard work and artistic devotion in the saukkur mela, salupanda krishna devadiga, who is dressed in the saucer mela. Mr. S. S. At Uppanda in Byndoor Taluk of Udupi District. Venus devadiga and Mrs Nagi were born as the second son of their eight children... He spent his childhood in poverty and had to stop his education in class seven, and he was attracted to the yakshagana field and practiced yakshagana dance in Uppanda Ganesha, the elder lying female character of Yakshagana. He then made his debut at nagarakodi mela and learnt the stage, listened to the stage, and gained a great mastery of the stage. Then he served for one year at Sirsi Mela, two years at Perdur, three years at Mandarti Mela, five years in Maranakatte Mela and continued to serve in Saukur mela for seventeen years. With a wonderful rhythm, they have lightning footing, abhimanyu, babruvahana, sudhanva, krishna, vishnu, vrishasena, devavruta, With the beautiful performance of mythological characters like Lava, Kusha, Chanda, Munda and Saukur Kshetra, The Great Hand, Kunda, and the advent of the great meghamayuri shashanka, the history of DharmaSankranti, Nagasree Saithlya, Ravi Shetty, has earned the popularity by playing the role of Sri Harsha in the siddhantha and the matantaraka episode. He was known for his quick pace and lightning entry in Jodata, and during the time p.kishan hegde was conducting haladi and saukur mela in jodata, he was able to compete with the duo of Hon. Sridhar, Raghavendra Tenkur and Haladi Chandrakulala and his lavakusha battle. He was a talented person who was a genius who was a part of the role of the theatre and the justice of the theatre, without causing conflict and conflict. He is famous for playing the roles of a man with attractive dance, mature speech and beautiful costume... He has gained fame with his talentand has a huge fan base and has received many accolades including the title "Yakshakuvara". He has been a great experience in his career with artists like Vasudeva Samaga, Kodi Vishwanath Ganiga Raghavendra Mayya, Ravi Suralu, Hennabailu Sanjeeva Shetty, Jogu Kulala, Kota Suresh, Bedradi Narasimha, Beltoor Ramesh, D.Sulugodu Narayana, Rakesh Malya, Haradi Sarva Ganiga, Uppanakudru Ananda, Sridara Bhadrapur. She entered domestic life on 18.02.2013, holding her hand as her life partner, and having a son called Humble, and running a happy family... His next career, which he adopted with a simple goodwill in personal and art life, may his next career go smoothly. Yakshamandar avery wished that Saukur Shi Durga Parameswari Amma would give her a healthy and prosperous life.

ಯಕ್ಷಮಂದಾರ ವಿಡಿಯೋ ನೋಡಲೋಸುಗವಾಗಿ. ವಾಹಿನಿಯ ಹೋಮ್ ಪೇಜ್ ಗಾಗಿ: https://www.youtube.com/channel/UCsrL ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: https://www.facebook.com/groups/27334

Sunday, September 27, 2020

#ಯಕ್ಷಮಂದಾರ - 24 | ಬಂಗಾಡಿ ಜನಾರ್ದನ ಗುಡಿಗಾರ | Janardana Gudigara | ಕಲಾಜೀವನದ ಕಿರುಪರಿಚಯ | ಬೆಳ್ತಂಗಡಿ |

                                                    🌀ಯಕ್ಷ💥ಮಂದಾರ🌀

#ಯಕ್ಷಮಂದಾರ - 24 | ಬಂಗಾಡಿ ಜನಾರ್ದನ ಗುಡಿಗಾರ | Janardana Gudigara | ಕಲಾಜೀವನದ ಕಿರುಪರಿಚಯ | ಬೆಳ್ತಂಗಡಿ |

ಇದು ಯಕ್ಷ ಕಲಾವಿದರ ಸಾಧನೆ ಮತ್ತು ಜೀವನಗಾಥೆಯ ಅನಾವರಣ ಇಂದಿನ ನಮ್ಮ ಯಕ್ಷಸಾಧಕರು ತೆಂಕು ಮತ್ತು ಬಡಗುತಿಟ್ಟಿನ ಅಗ್ರಮಾನ್ಯ ಕಲಾವಿದರು, ಹಾಲಾಡಿ ಮೇಳದ ಪ್ರಧಾನ ವೇಷಧಾರಿ ಬಂಗಾಡಿ ಜನಾರ್ದನ ಗುಡಿಗಾರರು.. ಬೆಳ್ತಂಗಡಿ ತಾಲೂಕು ಇಂದುಬೆಟ್ಟುವಿನಲ್ಲಿ ಶ್ರೀ ಬಾಬು ಗುಡಿಗಾರ ಮತ್ತು ಶ್ರೀಮತಿ ಕುಸುಮಾವತಿಯವರ ಹಿರಿಯ ಪುತ್ರನಾಗಿ ದಿನಾಂಕ:12.02.1960ರಲ್ಲಿ ಜನಿಸಿದ ಇವರಿಗೆ ಎಳೆವೆಯಲ್ಲಿಯೇ ಯಕ್ಷಗಾನದ ಆಸಕ್ತಿ ಹುಟ್ಟಿಕೊಂಡಿತು.ಮೂರನೇ ತರಗತಿ ವಿದ್ಯಾರ್ಥಿಯಾಗಿರುವಾಗಲೇ ಬಣ್ಣಹಚ್ಚಿ ವೇಷ ಮಾಡುವುದಕ್ಕೆ ಪ್ರಾರಂಭ ಮಾಡಿದ ಇವರು ಧರ್ಮಸ್ಥಳದಲ್ಲಿ ಹಿರಿಯ ಯಕ್ಷಗಾನ ಕಲಾವಿದರಾದ ಪಡ್ರೆ ಚಂದು ಇವರಲ್ಲಿ ಯಕ್ಷಗಾನ ನಾಟ್ಯಬ್ಯಾಸವನ್ನು ಪಡೆದರು. ಆಗಿನ ತೆಂಕುತಿಟ್ಟಿನ ಪ್ರಸಿದ್ಧ ಮೇಳವಾದ ಸುರತ್ಕಲ್ ಮತ್ತು ಕದ್ರಿ ಮೇಳದಲ್ಲಿ ಹತ್ತೊಂಬತ್ತು ವರ್ಷ ಸೇವೆಸಲ್ಲಿಸಿ, ಬಡಗುತಿಟ್ಟಿನ ಗಜಗಟ್ಟಿ ಮೇಳವೆನಿಸಿದ ಸಾಲಿಗ್ರಾಮ ಮೇಳಕ್ಕೆ ಪಾದಾರ್ಪಣೆಗೈದರು,ಪಿ.ಕಿಶನ್ ಹೆಗ್ಡೆಯವರ ಯಜಮಾನಿಕೆಯ ಸಾಲಿಗ್ರಾಮ ಮತ್ತು ಮಂಗಳಾದೇವಿ ಮೇಳದಲ್ಲಿ ಹನ್ನೊಂದು ವರ್ಷ ಸೇವೆ ಸಲ್ಲಿಸಿ, ನಂತರದ ದಿನಗಳಲ್ಲಿ ಪೆರ್ಡೂರು, ಕಮಲಶಿಲೆ,ಮಂದಾರ್ತಿ ಮೇಳದಲ್ಲಿ ಸೇವೆಸಲ್ಲಿಸಿದರು..ಪ್ರಸ್ತುತ ಆರು ವರ್ಷದಿಂದ ವೈ.ಕರುಣಾಕರ ಶೆಟ್ಟಿಯವರ ದಕ್ಷ ಯಜಮಾನಿಕೆಯ ಪ್ರಸಿದ್ಧ ಮೇಳವಾದ ಹಾಲಾಡಿ ಮೇಳದಲ್ಲಿ ಪ್ರಧಾನ ವೇಷಧಾರಿಯಾಗಿ ಕಲಾಸೇವೆಗೈಯುತ್ತಿದ್ದಾರೆ. ಹಿರಿಯ ಕಲಾವಿದರಾದ ಶೇಣಿ ಗೋಪಾಲಕೃಷ್ಣ ಭಟ್,ತೆಕ್ಕಟ್ಟೆ ಆನಂದ ಮಾಸ್ಟರ್,ಪದ್ಯಾಣ ಗಣಪತಿ ಭಟ್,ನಾರಾಯಣ ಶಬರಾಯ,ವೆಂಕಟರಮಣ ಪಾತಾಳ,ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟಿ,ಆರ್ಗೋಡು,ಸುಬ್ರಹ್ಮಣ್ಯ ದಾರೇಶ್ವರರಂಥ ಹಿರಿಯ ಕಲಾವಿದರ ಒಡನಾಟ ಇವರಿಗೆ ಹೆಚ್ಚಿನ ಅನುಭವವನ್ನು ತಂದುಕೊಟ್ಟಿತು ಪಾತ್ರಕೋಪ್ಪುವ ಆಳಾಂಗ, ವಿಶಿಷ್ಟ ಶ್ರುತಿಬದ್ಧತೆ,ಹಿತಮಿತವಾದ ನವರಸ ಭರಿತ ನಾಟ್ಯ,ಪ್ರತ್ಯುತ್ಪನ್ನಮತಿತ್ವ,ಅಪಾರ ಅನುಭವ ಹೊಂದಿರುವ ಇವರ ವಾಗ್ವೈಕರಿ,ಪಾತ್ರಪೋಷಣೆ ಕಲಾಭಿಮಾನಿಗಳು ಇವರನ್ನು ಮೆಚ್ಚಿಕೊಳ್ಳಲು ಸಹಕಾರಿಯಾಯಿತು.. ಹಿರಿಯ ಕಲಾವಿದರಾದರು ಸ್ವಲ್ಪವೂ ಅಹಂಕಾರವಿಲ್ಲದೆ ತನ್ನ ಕಿರಿಯ ಸಹವರ್ತಿ ಕಲಾವಿದರಿಗೆ ನೀಡುವ ಮಾರ್ಗದರ್ಶನ ಮತ್ತು ಕಲಾಭಿಮಾನಿಗಳೊಂದಿಗೆ ಬೆರೆಯುವ ಇವರ ಸೌಮ್ಯಸ್ವಭಾವ ಇವರಿಗೆ ಅಪಾರ ಅಭಿಮಾನಿಗಳ ಸಮೂಹ ಸೃಷ್ಟಿಯಾಗುವಲ್ಲಿ ಸಹಕಾರಿಯಾಯಿತು ಪುರುಷ ಪಾತ್ರ ಮತ್ತು ಖಳ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸುವ ಚಾಕಚಕ್ಯತೆ ಹೊಂದಿರುವ ಇವರು ದೇವಿಮಹಾತ್ಮೆಯ ಮಧು,ಕೈಟಬ,ಶುಂಭ,ಹಾಲಾಡಿ ಕ್ಷೇತ್ರ ಮಹಾತ್ಮೆಯ ಮುಂಡಾಸುರ,ಹಿಡಿಂಬಾಸುರ ಮೊದಲಾದ ಖಳಪಾತ್ರಗಳ ಜೊತೆಗೆ,ಭೀಮ,ಅರ್ಜುನ,ದ್ರೋಣ,ಕರ್ಣ,ಭೀಷ್ಮ,ಪರಶುರಾಮ, ಬಲಿ, ರಾವಣ,ಕೋಟಿಚೆನ್ನಯ್ಯ ಪ್ರಸಂಗದ ಕೋಟಿ ಮೊದಲಾದ ಪಾತ್ರಗಳನ್ನು ಅತ್ಯುತ್ತಮವಾಗಿ ನಿರ್ವಹಿಸುತ್ತಿದ್ದಾರೆ. ಮುಸ್ಲಿಂ ಸುಲ್ತಾನರ ಪಾತ್ರವನ್ನು ಬಹು ಸುಂದರವಾಗಿ ಅಭಿನಯಿಸುವ ಇವರ ಧರ್ಮಸಂಕ್ರಾಂತಿ ಪ್ರಸಂಗದ ಬೈರಾನ್ ಖಾನ್ ಮತ್ತು ಗೌರಿ ಶ್ರೀಗೌರಿ ಪ್ರಸಂಗದ ನಾಶೀರ್ ಖಾನ್ ಪಾತ್ರಗಳು ಇವರಿಗೆ ಬಹು ಪ್ರಸಿದ್ಧಿಯನ್ನು ತಂದುಕೊಟ್ಟಿದೆ ಕರಾವಳಿಯ ಭಾಗದಲ್ಲಷ್ಟೇ ಅಲ್ಲದೆ ದೂರದ ಮುಂಬೈ, ಮಿಜೋರಾಮ್, ದೆಹಲಿ,ದುಬೈ,ಕುವೈತ್, ಮಸ್ಕತ್ ನಲ್ಲೂ ಇವರು ತಮ್ಮ ಕಲಾಪ್ರೌಡಿಮೆಯನ್ನು ಪದರ್ಶಿಸಿದ್ದಾರೆ ಇವರ ಸೇವೆಯನ್ನು ಪರಿಗಣಿಸಿ ಹಲವು ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಿ,ಪುರಸ್ಕರಿಸಿದೆ ಶ್ರೀಮತಿ ಹರಿಣಿಯವರನ್ನು ಬಾಳ ಸಂಗಾತಿಯನ್ನಾಗಿ ಸ್ವೀಕರಿಸಿ ಮೂರು ಪುತ್ರಿಯರು ಮತ್ತು ಒರ್ವ ಪುತ್ರರನ್ನು ಪಡೆದಿರುವ ಇವರು ಆದರ್ಶ ಜೀವನವನ್ನು ನೆಡೆಸುತ್ತಿದ್ದಾರೆ ಇವರ ಮುಂದಿನ ಕಲಾಪಯಣ ಸುಗಮವಾಗಿ ಸಾಗಲಿ ಎಂದು ಹಾರೈಸುತ್ತ ಶ್ರೀದುರ್ಗಾಪರಮೇಶ್ವರಿ ಮತ್ತು ಶ್ರೀಮರಳುಚಿಕ್ಕು ದೇವಿಯು ಇವರಿಗೆ ಸರ್ವಸಂಪತ್ತನ್ನು ನೀಡಲಿ ಎನ್ನುವುದು ನಮ್ಮ ಯಕ್ಷಮಂದಾರದ ಶುಭಹಾರೈಕೆ.. ಸಾಹಿತ್ಯ:ಸಂತೋಷ ಶೆಟ್ಟಿ ಹಾಲಾಡಿ.. ನಿರೂಪಣೆ:ಶ್ರೀಮತಿ ಅಮೃತಾ ಶೆಟ್ಟಿ...

This is the exhibition of the achievements and life of yakshaartists Today our yakshasas are the leading artists of Tenku and Badaguthitt, the main garb of The Haladi Mela, Bangadi Sivakumara Gudigaru. Born on 12.02.1960 as the eldest son of Sri Babu Gudigara and Mrs Kusumavati in Indubettu in Taluk, He started painting and dressed as a third class student and got yakshagana dance. He served for nineteen years at the then Famous Mela, Suratkal and Kadri, and served at Thessaloniki, the gajagatti mela of Badaguthitt, served for eleven years at Saligramam and Mangaladevi mela, owned by P Kishan Hegde and later served at Perdur, Kamalashila and Mandarthi Mela. For the past six years, He has been performing as a leading artist erection at the Haladi Mela, the famous mela of Y. Karunakara Shetty's daksha mastery. He was also experienced by the association of veteran artistes like Sheni Gopalkrishna Bhatt, Thekkate Ananda Master, Padyana Ganapati Bhatt, Narayana Shabaraya, Venkataramana Patala, Siddhakate Chennappa Shetty, Argodu, Subrahmanya Dareshwara etc. His character-resembles the character, his unique sruti, his soothing dance, his recipe, his experience, his speech and his character-making helped him to appreciate him. The gentle ness of his younger fellow artistes and his gentle ness, without any pride, helped him create a huge crowd of fans. He is able to play male characters and villains and has been able to play the roles of Devi Mahatma, Madhu, Kaitaba, Shumbha, Haladi Kshetra Mahatma, Mundasura, Hidimbasura, bhima, arjuna, drona, karna, bhishma, parshuram, bali, ravana, kotichenayya and other villains. The roles of Byron Khan and Nashir Khan of Gauri Srigowri episode have made him a very popular character in the dharma sankranti episode, which plays the role of the Muslim Sultans. Apart from the coastal areas, he has also visited far-flung Mumbai, Mizoram, Delhi, Dubai, Kuwait and Muscat. Many organizations have honoured and honoured him for his services. She has three daughters and one son who has taken Mrs. Harini as a partner and leads an ideal life Wishing him a smooth journey of art, we wish sri durga parameshwari and sri sandaruchiku devi for their wealth. Santosh Shetty Haladi.. Narration:Smt. Amrita Shetty...


ಯಕ್ಷಮಂದಾರ ವಿಡಿಯೋ ನೋಡಲೋಸುಗವಾಗಿ.

ವಾಹಿನಿಯ ಹೋಮ್ ಪೇಜ್ ಗಾಗಿ: https://www.youtube.com/channel/UCsrL

ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: https://www.facebook.com/groups/2733

Tuesday, September 22, 2020

#ಯಕ್ಷಮಂದಾರ - 23 | ಶಂಕರ ನಾಯ್ಕ | Ulloor Shankara Naik | ಕಲಾಜೀವನದ ಕಿರುಪರಿಚಯ | 74ಉಳ್ಳೂರು | ಚಂದ್ರಾವಳಿ |

#ಯಕ್ಷಮಂದಾರ

#ಯಕ್ಷಮಂದಾರ - 23 | ಶಂಕರ ನಾಯ್ಕ | Ulloor Shankara Naik | ಕಲಾಜೀವನದ ಕಿರುಪರಿಚಯ | 74ಉಳ್ಳೂರು | ಚಂದ್ರಾವಳಿ |

 ಇದು ಯಕ್ಷ ಕಲಾವಿದರ ಸಾಧನೆ ಮತ್ತು ಜೀವನಗಾಥೆಯ ಅನಾವರಣ..

ಇಂದಿನ ನಮ್ಮ ಯಕ್ಷಸಾಧಕರು ಹಾಸ್ಯದ ಪ್ರಸ್ತುತಿಯ ಮೂಲಕ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಬಲ್ಲ ಬಡಗುತಿಟ್ಟಿನ ಖ್ಯಾತ ಹಾಸ್ಯಕಲಾವಿದರಾದ ಉಳ್ಳೂರು ಶಂಕರ ನಾಯ್ಕರು... ಶ್ರೀಯುತರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ 74 ಉಳ್ಳೂರಿನ ಶ್ರೀ ರಾಮ ನಾಯ್ಕ ಮತ್ತು ದಿ.ಸಿದ್ದು ಬಾಯಿಯವರ ಪುಣ್ಯಗರ್ಭದಲ್ಲಿ ಜನಿಸಿದರು.. ಬಾಲ್ಯದಲ್ಲಿಯೇ ಯಕ್ಷಗಾನದ ಗೀಳು ಅಂಟಿಸಿಕೊಂಡಿದ್ದ ಇವರು ಪ್ರಸಿದ್ಧ ವೇಷದಾರಿಯಾಗಿದ್ದ ತನ್ನ ಸೋದರ ಮಾವನಾದ ಉಳ್ಳೂರು ನಾರಾಯಣ ನಾಯ್ಕರ ವೇಷಗಾರಿಕೆಯಿಂದ ಪ್ರಭಾವಿತರಾದರು... ವಿದ್ಯಾರ್ಥಿಯಾಗಿರುವಾಗಲೇ ಮಾವನೊಂದಿಗೆ ಯಕ್ಷಗಾನ ಕಾರ್ಯಕ್ರಮಗಳಿಗೆ ಭೇಟಿಕೊಡುತ್ತಿದ್ದ ಇವರಿಗೆ ಯಕ್ಷಗಾನದ ಹುಚ್ಚು ವಿದ್ಯಾರ್ಜನೆಗೆ ತೊಡುಕಾಗಿ ಪರಿಣಮಿಸಿತ್ತು..ಶೈಕ್ಷಣಿಕ ಪ್ರಗತಿ ಕುಂಠಿತವಾಗಿ ನಾಲ್ಕನೆಯ ತರಗತಿಯಲ್ಲಿ ಅನುತಿರ್ಣರಾದಾಗ ಮನೆಯಲ್ಲೇ ಉಳಿದುಕೊಂಡ ಇವರು,ನಂತರ ಕಮಲಶಿಲೆ ಮೇಳಕ್ಕೆ ಸೇರಿಕೊಂಡರು..ಅಲ್ಲಿ ಸಹಾಯಕರಾಗಿ ದುಡಿಯುತ್ತ, ಸಣ್ಣಪುಟ್ಟ ಪಾತ್ರವನ್ನು ಮಾಡಲಾರಂಭಿಸಿದರು..ಅಲ್ಲಿ ನಾಲ್ಕು ವರ್ಷ ದುಡಿದ ಇವರು ನಂತರ ನಾಗರಕೊಡಿಗೆ ಮೇಳಕ್ಕೆ ಸೇರಿಕೊಂಡು ಪುಂಡು ವೇಷವನ್ನು ನಿರ್ವಹಿಸಿ ಸೈ ಎನಿಸಿಕೊಂಡರು..ಅಲ್ಲಿ ದೇವಪ್ಪ ಗಾಣಿಗರ ಪ್ರೇರಣೆ ಮತ್ತು ಮಾರ್ಗದರ್ಶನದಿಂದ ಸಣ್ಣ ಪುಟ್ಟ ಹಾಸ್ಯ ಪಾತ್ರಗಳನ್ನು ಮಾಡಿದರು.. ನಂತರ ಸೌಕೂರು ಮೇಳವನ್ನು ಸೇರಿ ಕೋಟ ಸುರೇಶ ಬಂಗೇರರ ಗುರುತನದಲ್ಲಿ, ಪುಂಡುವೇಷವನ್ನು ನಿರ್ವಹಿಸುತ್ತ ಬಂದ ಇವರು, ಸೌಕೂರು ಮೇಳದ ಆಗಿನ ಪ್ರಸಿದ್ದ ಹಾಸ್ಯಗಾರರಾಗಿದ್ದ ಸುಳುಗೋಡು ನಾರಾಯಣರ ಸಲಹೆ ಮತ್ತು ಮಾರ್ಗದರ್ಶನದಿಂದ ಹಾಸ್ಯಭೂಮಿಕೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಅವರ ಸಹ ಹಾಸ್ಯಗಾರರಾಗಿ ಗುರುತಿಸಿಕೊಂಡರು...ಸೌಕೂರು ಮೇಳದಲ್ಲಿ ಪ್ರಧಾನ ಹಾಸ್ಯಗಾರರಾಗಿ ಪದೋನ್ನತಿ ಹೊಂದಿದ ಇವರು ಸುದೀರ್ಘ ಹತ್ತೊಂಬತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದರು..ನಂತರ ನೀಲಾವರ ಮೇಳದಲ್ಲಿ ಸೇವೆಸಲ್ಲಿಸಿ,ಪ್ರಸ್ತುತ ಐದು ವರ್ಷದಿಂದ ಹಾಲಾಡಿ ಮೇಳದಲ್ಲಿ ಪ್ರಧಾನ ಹಾಸ್ಯಗಾರರಾಗಿ ಸೇವೆ ಸಲ್ಲಿಸುತ್ತಿರುವ ಇವರು ಯಕ್ಷರಂಗದಲ್ಲಿ ಸುದೀರ್ಘ ಮೂವತೈದು ವರ್ಷಗಳ ಕಲಾಜೀವನವನ್ನು ನಡೆಸಿದ್ದಾರೆ ಸಾಮಾಜಿಕ ಮತ್ತು ರಾಜಕೀಯದ ವಿದ್ಯಮಾನಗಳನ್ನು ತನ್ನದೇ ವಿಶಿಷ್ಟ ಶೈಲಿಯಲ್ಲಿ ಹಾಸ್ಯದಲ್ಲಿ ಪ್ರಸ್ತುತಿಗೊಳಿಸುತ್ತಿರುವ ಇವರು ಯಕ್ಷ ಸಂವಿಧಾನದ ಕಟ್ಟುಪಾಡುಗಳಿಗೆ ಬದ್ಧರಾಗಿ,ಪ್ರಚಾರಕೋಸ್ಕರ ಹಾಸ್ಯವನ್ನು ವಿರೂಪಗೊಳಿಸದೆ ಸಂಪ್ರದಾಯವನ್ನು ಪಾಲಿಸಿಕೊಂಡು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಬಲ್ಲ ಪ್ರಸಿದ್ಧ ಹಾಸ್ಯಕಲಾವಿದರಲ್ಲಿ ಒಬ್ಬರು... ಚಂದ್ರಾವಳಿ ವಿಲಾಸದ ಅಜ್ಜಿ ಮತ್ತು ಚಂದಗೋಪ,ಭೂಕೈಲಾಸದ ಮಾಣಿ, ಕಾಶಿಮಾಣಿ,ಲವಕುಶದ ಮಾಣಿ,ಭೀಷ್ಮವಿಜಯದ ಬ್ರಾಹ್ಮಣ,ದಕ್ಷಯಜ್ಞದ ಬ್ರಾಹ್ಮಣ,ಪಾಂಚಜನ್ಯದ ಉದ್ದವ,ಹಾಲಾಡಿ ಕ್ಷೇತ್ರಮಹಾತ್ಮೆಯ ರಕ್ಕಸದೂತ ಮತ್ತು ಬೆಸ್ತ,ಚಿತ್ರಾಕ್ಷಿ ಕಲ್ಯಾಣದ ಅಜ್ಜಿ,ಗದಾಯುದ್ಧದ ಬೆಹೀನಚರ ಮೊದಲಾದ ಪಾತ್ರಗಳನ್ನು ನಿರ್ವಹಿಸಿರುವ ಇವರು,ಆದುನಿಕ ಪ್ರಸಂಗದ ಪಾತ್ರಗಳಿಗೂ ನ್ಯಾಯ ದೊರಕಿಸಿಕೊಟ್ಟು ಪ್ರಸಿದ್ದಿ ಪಡೆದಿದ್ದಾರೆ... ಮಳೆಗಾಲದಲ್ಲಿ ರಾಘವೇಂದ್ರ ಮಯ್ಯರ ಶ್ರೀಮಹಾಗಣಪತಿ ಪ್ರವಾಸಿ ಯಕ್ಷಗಾನ ತಂಡದಲ್ಲಿ ದುಡಿಯುತ್ತಿರುವ ಇವರು,ಬೆಂಗಳೂರು,ಹೈದರಾಬಾದ್, ಮುಂಬೈ,ಹುಬ್ಬಳ್ಳಿಯಂಥ ಮಹಾನಗರದಲ್ಲಿಯೂ ಪ್ರದರ್ಶವನ್ನು ನೀಡಿದ್ದಾರೆ...ತನ್ನದೇ ಆದ ಅಭಿಮಾನಿಗಳನ್ನು ಹೊಂದಿರುವ ಇವರಿಗೆ ಹಲವು ಸನ್ಮಾನಗಳು ಸಂದಿವೆ. ರಾಘವೇಂದ್ರ ಮಯ್ಯ,ರಾಕೇಶ್ ಮಲ್ಯ,ಸದಾಶಿವ ಅಮೀನ್,ಹಡಿನಬಾಳ ಶ್ರೀಪಾದ ಹೆಗ್ಡೆ,ಶ್ರೀಧರ ಹಾರ್ಸಿಕಟ್ಟೆ ಆನಂದ ಅಂಕೋಲಾ,ಜನಾರ್ದನ ಆಚಾರ್ಯ,ಮಂಜುನಾಥ ನಾವಡ,ಕುಮಟಾ ಗಣಪತಿ ನಾಯ್ಕ,ಕೋಡಿ ವಿಶ್ವನಾಥ ಗಾಣಿಗ,ಕೋಟ ಸುರೇಶ,ಕೊಳಲಿ ಕೃಷ್ಣ ಶೆಟ್ಟಿ,ಬೆದ್ರಾಡಿ ನರಸಿಂಹ, ಜನಾರ್ದನ ಗುಡಿಗಾರ,ಹಾರಾಡಿ ಸರ್ವಗಾಣಿಗ,ಹೆನ್ನಾಬೈಲು ಸಂಜೀವ ಶೆಟ್ಟಿ,ಹೊಸಂಗಡಿ ರವೀಂದ್ರ ಶೆಟ್ಟಿ,ಜೋಗು ಕುಲಾಲ,ದಿ. ಸುಳುಗೋಡು ನಾರಾಯಣ,ಕಡಬಾಳ ಉದಯ ಹೆಗ್ಡೆ,ವಿಶ್ವನಾಥ ತೊಂಬಟ್ಟು,ಗಣೇಶ ಬಳೆಗಾರ, ಜಡ್ಕಲ್ ಗೋಪಾಲ ಮೊದಲಾದ ಹಿರಿಯ,ಕಿರಿಯ ಕಲಾವಿದರೊಂದಿಗೆ ತಿರುಗಾಟ ನಡೆಸಿದ್ದಾರೆ... ಸರಳ,ಸಜ್ಜನ,ಪ್ರಾಮಾಣಿಕ ವ್ಯಕ್ತಿತ್ವದ,ಶಂಕರ ನಾಯ್ಕರು,ತನ್ನ ಜೀವನದಲ್ಲಿ ಸ್ವಾಭಿಮಾನ ಮತ್ತು ಶಿಸ್ತುಬದ್ಧತೆಯನ್ನು ರೂಢಿಸಿಕೊಂಡಿದ್ದಾರೆ...ಅತ್ಯಂತ ಕಷ್ಟದ ಪರಿಸ್ಥಿತಿಯಲ್ಲಿ ಬೆಳೆದು ಬಂದ ಇವರು, ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡುವ ಅಭಿಲಾಷೆಯನ್ನು ಹೊಂದಿದ್ದಾರೆ... ಶ್ರೀಮತಿ ರತ್ನ ಇವರನ್ನು ಬಾಳ ಸಂಗಾತಿಯಾಗಿ ಸ್ವೀಕರಿಸಿ, ಶರತ್,ವಿನುತ್,ರಂಜಿತ್ ಮತ್ತು ರಶ್ಮಿತಾ ಎನ್ನುವ ನಾಲ್ಕು ಮಕ್ಕಳನ್ನು ಪಡೆದು ಆದರ್ಶ ಜೀವನವನ್ನು ನಡೆಸುತ್ತಿದ್ದಾರೆ ಯಕ್ಷಗಾನ ರಂಗದಲ್ಲಿ ಇವರ ಕೀರ್ತಿ ಉತ್ತುಂಗಕ್ಕೇರಲಿ,ಇವರಿಗೆ ಉಳ್ಳೂರು ಶ್ರೀ ಬನಶಂಕರಿ ಮತ್ತು ಮರಳುಚಿಕ್ಕು ದೇವಿಯು ಆಯುರಾರೋಗ್ಯ, ಸುಖ ಸಂಪತ್ತನ್ನು ಅನುಗ್ರಹಿಸಲಿ ಎನ್ನುವುದು ಯಕ್ಷಮಂದಾರದ ಶುಭಹಾರೈಕೆ.. ಸಾಹಿತ್ಯ:ಹಾಲಾಡಿ ಸಂತೋಷ ಶೆಟ್ಟಿ.... ನಿರೂಪಣೆ:ಶ್ರೀಮತಿ ಅಮೃತ ಶೆಟ್ಟಿ.. ಮಾಹಿತಿ ಮತ್ತು ಸಹಕಾರ: ಪ್ರಜತ್ ಶೆಟ್ಟಿ ಶೇರ್ಡಿ ಗೈನಾಡಿಮನೆ.. ಹಾಲಾಡಿ ಮೇಳದ ಅಭಿಮಾನಿಗಳು


This is an exhibition of the achievements and life of yakshaartists.

Today our yakshaganas are the famous comedians of Badgutitt, Ullur Shankara Naik who can make the audience laugh through a presentation of humour...

Sri Rama Nayak and D.Siddu Bai were born in The 74 Ullur in Kundapur taluk of Udupi district.

He was obsessed with Yakshagana in his early childhood and was influenced by the disguise of his famous uncle Ullur Narayana Naik. He was a student who had been visiting yakshagana programmes with his uncle and had become a crazy student of Yakshagana. He stayed at home when he was in fourth grade, where he was slow in academic progress and later joined the Kamala Stone Mela. He worked as an assistant and began to play a small role. After four years of working there, he joined the Nagarkodi mela and performed a sick dress. There, he played small comedy characters with the inspiration and guidance of Theappa Ganigar. Later, he joined the Saukur Mela and was a comedian of Kota Suresh Banker, who was a comedian who was fully involved in the comedy with the advice and guidance of the then famous comedian Sulgodu Narayana. He was promoted to the main comedian at Saukur Mela and served for a long period of nineteen years. He has served in the Nilavar mela and has been the main comedian for five years in the Haladi Mela and has been in the yakshagana for a long period of 35 years.

He is one of the famous comedians who is a discretionary comic who has his own unique style of humor, and who is a disgusting and humorous person who does not distort the humour for propaganda.

Chandravali Vilasa's grandmother and Chandagopa, Bhukailasada Mani, Kashimani, Lavakushada Mani, Bhishmavijaya's Brahmin, Dakshayajna's Brahman, Panchjanya's Long, Haladi Kshetra Mahatma's Rakkasaduta and Besta, Chitraksi Kalyana's Grandmother, Gadawara Behinachara, and also the roles of the same episode.

He is also working in the Sri Mahaganapathi Yakshagana team of Raghavendra Mayya during the rainy season and has also performed in a metropolis like Bangalore, Hyderabad, Mumbai, Hubli... He has his own fans and has received many honors.

Raghavendra Mayya, Rakesh Mallya, Sadashiv Ameen, Hadinabala Sripada Hegde, Sridhar Harsikate Ananda Ankola, Acharya, Manjunatha Nawada, Kodaganapati Naik, Kodi Vishwanath Ganiga, Kota Suresh, Kooly Krishna Shetty, Bedradi Narasimha, Narasimha Gudigara, Haradi Sarvaganiga, Hennabailu Sanjeeva Shetty, Hosangadi Ravindra Shetty, Jogu Kulal, D. He has been touring with senior and junior artistes like Sulugodu Narayan, Kadabala UdayHegde, Vishwanath Tombattu, Ganesh Bangalgara, Judkal Gopal and others.

Simple, good and honest personality, Shankar Anayak has developed self-respect and discipline in his life... He grew up in a very difficult situation and wanted to educate children better...

Mrs. Ratna is a partner and has four children Sharad, Vinuth, Ranjit and Rashmita, leading an ideal life

ಯಕ್ಷಮಂದಾರ ವಿಡಿಯೋ ನೋಡಲೋಸುಗವಾಗಿ.

ವಾಹಿನಿಯ ಹೋಮ್ ಪೇಜ್ ಗಾಗಿ: https://www.youtube.com/channel/UCsrL 

ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: https://www.facebook.com/groups/27334

#ಯಕ್ಷಮಂದಾರ - 22 | ಅರೆಹೊಳೆ ಸಂಜೀವ ಶೆಟ್ಟಿ | Arehole Sanjeev Shetty | ಯಕ್ಷಭೂಮಿಕೆ


#ಯಕ್ಷಮಂದಾರ

#ಯಕ್ಷಮಂದಾರ - 22 | ಅರೆಹೊಳೆ ಸಂಜೀವ ಶೆಟ್ಟಿ | Arehole Sanjeev Shetty | ಯಕ್ಷಭೂಮಿಕೆ | ಯಕ್ಷಗಾನ ಬಯಲಾಟ |
ಇದು ಯಕ್ಷ ಕಲಾವಿದರ ಸಾಧನೆ ಮತ್ತು ಜೀವನಗಾಥೆಯ ಅನಾವರಣ.. ಇಂದಿನ ನಮ್ಮ ಯಕ್ಷಸಾಧಕರು ಬಡಗುತಿಟ್ಟಿನ ಯಕ್ಷಭೂಮಿಕೆಯಲ್ಲಿ ಎರಡನೆಯ ವೇಷ ಮತ್ತು ಪುರುಷ ಪಾತ್ರಗಳಲ್ಲಿ ಭರವಸೆ ಮೂಡಿಸುತ್ತಿರುವ ಸುಪ್ರಸಿದ್ದ ವೇಷಧಾರಿ ಅರೆಹೊಳೆ ಸಂಜೀವ ಶೆಟ್ಟಿಯವರು... ಇವರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹೇರೂರು ಗ್ರಾಮದ ಅರೆಹೊಳೆ ಎಂಬ ಪುಟ್ಟ ಹಳ್ಳಿಯಲ್ಲಿ ನಾರಾಯಣ ಶೆಟ್ಟಿ ಮತ್ತು ಮುಕಾಂಬು ಶೆಡ್ತಿಯವರ ಆರು ಜನ ಮಕ್ಕಳಲ್ಲಿ ಎರಡನೆಯವರಾಗಿ ದಿನಾಂಕ:15.01.1980ರಲ್ಲಿ ಜನಿಸಿದರು.. ಹವ್ಯಾಸಿ ಕಲಾವಿದರಾದ ತಂದೆ ನಾರಾಯಣ ಶೆಟ್ಟಿಯವರ ಪ್ರೇರೆಪಣೆಯಿಂದ, ಊರ ಸುತ್ತಮುತ್ತ ಪ್ರದರ್ಶನಗೊಳ್ಳುತ್ತಿದ್ದ ಯಕ್ಷಗಾನ ಬಯಲಾಟಗಳಿಂದ ಆಕರ್ಷಿತರಾಗಿ,ಯಕ್ಷಗಾನದ ಒಲವು ಮೂಡಿಸಿಕೊಂಡರು.. ಅರೆಹೊಳೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏಳನೆಯ ತರಗತಿಯವರೆಗಿನ ಶಿಕ್ಷಣವನ್ನು ಪಡೆದು,ಪ್ರಸಿದ್ದ ಕಲಾವಿದರಾದ ಉಳ್ಳೂರು ಶಂಕರ ದೇವಾಡಿಗರಲ್ಲಿ ಹೆಜ್ಜೆಗಾರಿಕೆ,ವೇಷಗಾರಿಕೆ ಮತ್ತು ಮಾತುಗಾರಿಕೆಯ ಜ್ಞಾನವನ್ನು ಪಡೆದ ಇವರು ಹೆರಂಜಾಲು ಗೋಪಾಲ ಗಾಣಿಗರಲ್ಲಿ ತಾಳ ಜ್ಞಾನದ ಮಾಹಿತಿಯನ್ನು ಪಡೆದರು...ತನ್ನ ಹದಿನಾರನೆಯ ವಯಸ್ಸಿನಲ್ಲಿ ಯಕ್ಷಗಾನದ ರಂಗಮಂಚವೇರಿದ ಇವರು,ಮಾರಣಕಟ್ಟೆ ಮೇಳದಲ್ಲಿ ಗೆಜ್ಜೆಕಟ್ಟಿ ತನ್ನ ಯಕ್ಷಬದುಕನ್ನು ಪ್ರಾರಂಭಿಸಿದರು.ನಂತರ ಹಾಲಾಡಿ ಮೇಳದಲ್ಲಿ ಒಂದು ವರ್ಷ,ಶಿರಸಿ ಮೇಳದಲ್ಲಿ ಒಂದು ವರ್ಷ,ಸೌಕೂರು ಮೇಳದಲ್ಲಿ ಒಂದು ವರ್ಷ,ಕಮಲಶಿಲೆ ಮೇಳದಲ್ಲಿ ಎರಡು ವರ್ಷ,ಮಂದಾರ್ತಿ ಮೇಳದಲ್ಲಿ ನಾಲ್ಕು ವರ್ಷ ಸೇವೆ ಸಲ್ಲಿಸಿ,ಪ್ರಸ್ತುತ ಹದಿನೇಳು ವರ್ಷದಿಂದ ನಿರಂತರವಾಗಿ ಮಾರಣಕಟ್ಟೆ ಮೇಳದಲ್ಲಿ ತಿರುಗಾಟ ನೆಡೆಸುತ್ತಿದ್ದಾರೆ... ಸ್ಪಷ್ಟ,ಸುಲಲಿತವಾದ ಇವರ ವಾಗ್ವೈಕರಿ,ನೀಳಕಾಯ,ಎರಡನೆಯ ಮತ್ತು ಪುರುಷ ಪಾತ್ರಕೋಪ್ಪುವ ಇವರ ಆಳಾಂಗ,ಸುಂದರ ಮುಖಚರ್ಯೆ,ಗಾಂಭೀರ್ಯ ಮತ್ತು ಲಾಲಿತ್ಯದ ಮಿಶ್ರಣವನ್ನು ಹೊಂದಿರುವ ನಾಟ್ಯ,ಸುಂದರವಾದ ವೇಷಭೂಷಣ ದೊಂದಿದೆ ರಂಗದಲ್ಲಿ ಪ್ರಬುದ್ಧತೆಯನ್ನು ಸಾದಿಸಿರುವ ಪ್ರಸಿದ್ಧ ಕಲಾವಿದರಿವರು... ಭೀಷ್ಮ, ಕರ್ಣ,ಕೌರವ,ಅರ್ಜುನ,ರಕ್ತಜಂಘ,ದ್ರೋಣ,ಶಲ್ಯ,ಕಂಸ,ಜಾಂಬವಂತ,ಶತ್ರುಘ್ನ ಮೊದಲಾದ ಪಾತ್ರಗಳನ್ನು ನಿರ್ವಹಿಸಿ ಸೈ ಎನಿಸಿಕೊಂಡಿರುವ ಇವರು,ಮಾರಣಕಟ್ಟೆ ಕ್ಷೇತ್ರ ಮಹಾತ್ಮೆಯ,ಕಂಹಾಸುರ, ಮೂಕಾಸುರ,ಕೋಲಮುನಿ,ಚಂದಯ್ಯ ಶೆಟ್ಟಿ ಪಾತ್ರಗಳಿಗೆ ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಜೀವ ತುಂಬಿ ಅಭಿನಯಿಸಬಲ್ಲರು... ಅತ್ಯುತ್ತಮ ವಾಗ್ವಿಶಾರದರಾದ ಇವರು ಕೇವಲ ಆಟದಲ್ಲಷ್ಟೇ ಅಲ್ಲದೆ ,ತಾಳಮದ್ದಳೆಯ ಕೂಟಗಳಲ್ಲೂ ಬಾಗವಹಿಸಿ,ತಮ್ಮ ಪ್ರಖರ ಮತ್ತು ಪಾಂಡಿತ್ಯಪೂರ್ಣ ಮಾತುಗಾರಿಕೆಯ ಶೈಲಿಯಿಂದ ಜನಮನ ಗೆದ್ದಿದ್ದಾರೆ..ಸಿದ್ದಿವಿನಾಯಕ ಯಕ್ಷಮಿತ್ರ ಮಂಡಳಿಯ ತಾಳಮದ್ದಳೆಯ ಕೂಟದಲ್ಲಿ ದಿ. ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟಿ,ವಾಸುದೇವ ಸಾಮಗ, ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ,ಮಡಾಮಕ್ಕಿ ಪ್ರಭಾಕರ ಶೆಟ್ಟಿಯವರೊಂದಿಗೆ ಬಾಗವಹಿಸಿ ತಮ್ಮ ಪಾಂಡಿತ್ಯವನ್ನು ಪದರ್ಶಿಸಿದ್ದಾರೆ.. ಇವರು ಶನಿಕಥೆಯ ಕಲಾವಿದರಾಗಿಯೂ ಕೂಡ ಸೇವೆ ಸಲ್ಲಿಸುತ್ತಿದ್ದಾರೆ.. ದಿನಾಂಕ:31.08.2015ರಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕೊಠಾರಿ ಸಮಾಜೋದ್ದಾರಕ ಸಂಘಟನೆಯ ವತಿಯಿಂದ ಪೆರ್ಡೂರು ಮೇಳ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಪ್ರದರ್ಶನಗೊಂಡ ಜಾಂಬವತಿ ಕಲ್ಯಾಣದಲ್ಲಿ ಜಾಂಬವನಾಗಿ ಅಭಿನಯಿಸಿ,ಸುಪ್ರಸಿದ್ಧ ಕೃಷ್ಣನ ಪಾತ್ರಧಾರಿಗೆ ಸಮದಂಡಿಯಾಗಿ ತನ್ನ ಪ್ರಬುದ್ಧತೆಯ,ಪಾಂಡಿತ್ಯಪೂರ್ಣ ವಾಗ್ವೈಕರಿಯಿಂದ ಕಿಕ್ಕಿರಿದು ತುಂಬಿದ ಸಭಾಸದರ ಮನ್ನಣೆಗೆ ಪಾತ್ರರಾಗಿದ್ದಾರೆ.. ಕಳೆದ ವರ್ಷ ಬೆಂಗಳೂರು ವಿಜಯನಗರದ ಬಂಟರಭವನದಲ್ಲಿ ವಿಶ್ವ ಕುಂದಾಪ್ರ ದಿನಾಚರಣೆಯ ಅಂಗವಾಗಿ ನಡೆದ ಕುಂದಾಪ್ರ ಭಾಷೆಯ ನರಹರಿ ಹೊಯ್ಕೈ ಪ್ರಸಂಗದಲ್ಲಿ ಅರ್ಜುನನ ಪಾತ್ರ ನಿರ್ವಹಿಸಿ ಸೈ ಎನಿಸಿಕೊಂಡಿದ್ದಾರೆ. ನಾಡಿನಾದ್ಯಂತ ಹಲವಾರು ಪದರ್ಶನಗಳನ್ನು ನೀಡಿ,ಅಪಾರ ಅಭಿಮಾನಿಗಳನ್ನು ಪಡೆದಿರುವ ಇವರಿಗೆ,ಅಭಿಮಾನಿಗಳು ಮತ್ತು ಸಂಘಸಂಸ್ಥೆಗಳಿಂದ "ವಾಗ್ವಿಶಾರದ" ಬಿರುದು ಸೇರಿದಂತೆ ಹಲವಾರು ಸಮ್ಮಾನಗಳು ಸಂದಿವೆ.. ದಿನಾಂಕ:20.03.2002 ರಲ್ಲಿ ಜ್ಯೋತಿಯವರ ಕೈಹಿಡಿದು ಛಾಯಾಶ್ರೀ ಮತ್ತು ಬ್ರಹ್ಮಣಿ ಎಂಬ ಇಬ್ಬರು ಮುದ್ದು ಮಕ್ಕಳನ್ನು ಪಡೆದಿರುವ ಇವರು ಸುಖ ಸಂತೃಪ್ತ ಜೀವನವನ್ನು ನಡೆಸುತ್ತಿದ್ದಾರೆ ಯಕ್ಷಗಾನ ರಂಗದಲ್ಲಿ ಇವರ ಕೀರ್ತಿ ಆಕಾಶದೆತ್ತರಕ್ಕೆರಲಿ,ಶ್ರೀ ಬ್ರಹ್ಮಲಿಂಗೇಶ್ವರ ಸ್ವಾಮಿಯು ಇವರಿಗೆ ಸುಖ ಸಮೃದ್ಧಿಯನ್ನು ನೀಡಲಿ ಎನ್ನುವುದು ನಮ್ಮ ಯಕ್ಷಮಂದಾರದ ಶುಭಹಾರೈಕೆ.. ಸಾಹಿತ್ಯ:ಹಾಲಾಡಿ ಸಂತೋಷ ಶೆಟ್ಟಿ.. ನಿರೂಪಣೆ:ಶ್ರೀಮತಿ ಅಮೃತ ಶೆಟ್ಟಿ.. ಮಾಹಿತಿ ಮತ್ತು ಸಹಕಾರ ಜಯರಾಮ ಶೆಟ್ಟಿ ಹೈಗಿನಕಟ್ಟೆ ಹೊಸೂರು.. ಪ್ರದೀಪ ಶೆಟ್ಟಿ ನಾರ್ಕಳಿ ಯಕ್ಷಮಂದಾರದ ಸದಸ್ಯರು ಮಾರಣಕಟ್ಟೆ ಮೇಳದ ಅಭಿಮಾನಿಗಳು ನಮ್ಮ ಯಕ್ಷಮಂದಾರ facebook pageಗೆ join ಆಗಿ ಮತ್ತು ಯೂಟ್ಯೂಬ್ ಚಾನಲ್...ನ್ನು subscribe ಮಾಡಿಕೊಳ್ಳಿ.. ನಮ್ಮ ವಿಡಿಯೋವನ್ನು ನೋಡಿ like ಮಾಡಿ,share ಮಾಡಿ ಪ್ರೋತ್ಸಾಹಿಸಿ.. ಧನ್ಯವಾದಗಳು..🙏🙏🙏


This is an exhibition of the achievements and life of yakshaartists.

Today our yakshakas are the famous saints who are in the second and male roles in the yakshabhoori of badgutitttis.

He was born on 15.01.1980 in the small village of Arehole in Kundapur taluk of Udupi district and was the second of the six children of Narayanshetty and Mukambu Shetty.

Inspired by the amateur artistes, Narayana Shetty, he was attracted to yakshagana and attracted to the yakshagana saga, which was performed around the village.

He had studied in the Government Primary School, Arehole up to class VII, and gained knowledge of the footwork, costume and speech of the famous artistes ullur Shankar adewadi, and gained the knowledge of tala in Heranjalu Gopala Ganiga. At the age of sixteen, he started his yakshagana at Themarankate Mela, then he started his yakshagana at Themarankate Mela, one year at Haladi Mela, one year at Sakur Mela, two years at The Kamalashile Mela, four years in The Mandarti Mela, and now he has been roaming the Marankate Mela for seventeen years.

His eloquent, smooth, elegant, long and male characters are the most famous artists who have mastered the stage with a beautiful face, a mixture of dignity and salutation.

He is known for his roles like Bhishma, Karna, Kaurava, Arjuna, Raktajanga, Drona, Shalya, Kansa, Jambawant, Shatrughan and others, and can give life to the characters of Mahatma, Kamasura, Mookasura, Kolamuni, Chandayya Shetty and others.
He is a great speaker, not only in the game but also in the talamadala parties, and has won the hearts of the people with his brilliant and scholarly style of speech. Siddhivinayak Yaksamitra's talamadalaya party of the Board of Yakshamitra Siddhakate Chennappa Shetty, Vasudeva Samaga, Siddhakate Vishwanath Shetty, Madamakki Prabhakar Shetty have also studied their scholarship. He is also serving as an artist of Saturn..

On 31.08.2015, he played a jambaava in The Perdur Mela and guest artistes in the rabindra kalakshetra in Bangalore and was recognized as a jambava, who was acclaimed as a well-known krishna character with his maturity and scholarly orator.
Arjuna played the role of Arjuna in the Narhari Hoikai episode of Kundapra language held on the occasion of World Kundapra Day at Bantar Awana in Bangalore, Vijayanagara last year.

He has received many praises and fans across the country, including the title of "Vagvisaradha" by fans and associations.

On 20.03.2002, jyoti held his hand and had two lovely children, Chayasri and Brahmani, and lead a happy and satisfied life.




 #ಯಕ್ಷಮಂದಾರ, #ಅರೆಹೊಳೆ ಸಂಜೀವ ಶೆಟ್ಟಿ,#Arehole Sanjeev Shetty |

Sunday, September 20, 2020

#ಯಕ್ಷಮಂದಾರ - 21 | ನಾಗೂರು ಶ್ರೀನಿವಾಸ ದೇವಾಡಿಗರ | Nagooru Shrinivasa Devadiga | ಉಡುಪಿ ಜಿಲ್ಲೆ | MMಹೆಗ್ಡೆ

🌀ಯಕ್ಷ💥ಮಂದಾರ

#ಯಕ್ಷಮಂದಾರ - 21 | ನಾಗೂರು ಶ್ರೀನಿವಾಸ ದೇವಾಡಿಗರ | Nagooru Shrinivasa Devadiga | ಉಡುಪಿ ಜಿಲ್ಲೆ | MMಹೆಗ್ಡೆ

ಇದು ಯಕ್ಷಕಲಾವಿದರ ಸಾಧನೆ ಮತ್ತು ಜೀವನಗಾಥೆಯ ಅನಾವರಣ.. ಇಂದಿನ ನಮ್ಮ ಯಕ್ಷಸಾಧಕರು ಬಡಗುತಿಟ್ಟಿನ ಪ್ರಸಿದ್ಧ ವೇಷಧಾರಿ, ಮಾರಣಕಟ್ಟೆ ಮೇಳದ ಕಲಾವಿದ ನಾಗೂರು ಶ್ರೀನಿವಾಸ ದೇವಾಡಿಗರು... ಇವರು ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ನಾಗೂರಿನ ಕಬ್ಬಾಗಿಲು ಎಂಬಲ್ಲಿ ಶ್ರೀ ತಿಮ್ಮ ದೇವಾಡಿಗ ಮತ್ತು ಕಾವೇರಿ ದಂಪತಿಗಳ ಪುಣ್ಯಗರ್ಬಾಂಭುದಿಯಲ್ಲಿ ಪ್ರಥಮ ಪುತ್ರನಾಗಿ ಜನಿಸಿದರು.. ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಕಿರಿಮಂಜೇಶ್ವರ ಶಾಲೆಯಲ್ಲಿ ಮುಗಿಸಿದ ಇವರು ಯಕ್ಷಗಾನದ ಮೇಲಿನ ಆಸಕ್ತಿಯಿಂದ1982ರಲ್ಲಿ ಉಡುಪಿಯ ಯಕ್ಷಗಾನ ಕೇಂದ್ರವನ್ನು ಸೇರಿಕೊಂಡರು.. ಅಲ್ಲಿ ಕಡಲತಡಿಯ ಭಾರ್ಗವ ಕೀರ್ತಿಶೇಷ ದಿ.ಶಿವರಾಮ ಕಾರಂತರಿಂದ ನಾಟ್ಯಾಬ್ಯಾಸವನ್ನು ಮತ್ತು ಹೆರಂಜಾಲು ವೆಂಕಟರಮಣ ಗಾಣಿಗರಿಂದ ತಾಳ ಲಯದ ಜ್ಞಾನವನ್ನು ಪಡೆದುಕೊಂಡರು..ನಂತರ 1983ರಲ್ಲಿ ಯಕ್ಷಭೀಷ್ಮ ಎಂ.ಎಂ.ಹೆಗ್ಡೆಯವರ ಮಾರ್ಗದರ್ಶನದಲ್ಲಿ ಮಾರಣಕಟ್ಟೆ ಮೇಳದಲ್ಲಿ ಗೆಜ್ಜೆಕಟ್ಟಿದ ಇವರು ಸುದೀರ್ಘವಾಗಿ ಮೂವತ್ತೇಳು ವರ್ಷಗಳಿಂದ ಮಾರಣಕಟ್ಟೆ ಮೇಳವೊಂದರಲ್ಲೆ ಸೇವೆಸಲ್ಲಿಸುತ್ತಿದ್ದಾರೆ ಶುದ್ಧ ಸಂಪ್ರದಾಯಬದ್ದ ನಾಟ್ಯಶೈಲಿ, ಶುದ್ಧ ಮತ್ತು ಸ್ಪಷ್ಠವಾದ ಸಾಹಿತ್ಯ, ಗಂಭೀರವಾದ ರಂಗನಡೆ,ಪಾತ್ರವನ್ನು ಸಚೇತನಗೊಳಿಸಬಲ್ಲ ಚಾಣಾಕ್ಷಮತಿತ್ವ.. ರಂಗದ ಚೌಕಟ್ಟನ್ನು ಮೀರದೆ ವ್ಯವಹರಿಸಬಲ್ಲ ಇವರ ರಂಗಕೌಶಲ್ಯದಿಂದಾಗಿ ಬಡಗುತಿಟ್ಟಿನ ಶುದ್ಧ ಸಂಪ್ರದಾಯಬದ್ದ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ.. ಚಂದ್ರಹಾಸ ಚರಿತ್ರೆಯ ದುಷ್ಟಬುದ್ಧಿ, ಕರ್ಣಾರ್ಜುನದ ಶಲ್ಯ,ರತಿಕಲ್ಯಾಣದ ಕಮಲಭೂಪ ಮತ್ತು ಕೌಂಡ್ಲಿಕ, ಗದಾಯುದ್ಧದ ಕೌರವ ಮತ್ತು ಭೀಮ, ಸುದರ್ಶನ ವಿಜಯದ ಶತೃಪ್ರಸೂಧನ, ಕಾರ್ತ್ಯವೀರ್ಯ, ರುಕ್ಮಭೂಪ, ಸುಂದರರಾವಣ, ಬಲರಾಮ, ಯಮ, ರಕ್ತಜಂಘ,ಮಧು, ಕೈಟಬ,ಕೀಚಕ, ಭದ್ರಸೇನ, ರಾಮ,ಮಹಿಷಾಸುರ ಮೊದಲಾದ ಪಾತ್ರ್ರವನ್ನು ಬಹು ಸುಂದರವಾಗಿ ಅಭಿನಯಿಸುತ್ತಿದ್ದಾರೆ.. ಮಾರಣಕಟ್ಟೆ ಕ್ಷೇತ್ರ ಮಹಾತ್ಮೆ,ಶ್ರೀ ದೇವಿಮಹಾತ್ಮೆ ಮತ್ತು ಕಪ್ಪಣ್ಣಸ್ವಾಮಿ ಮಹಾತ್ಮೆಯ ದೃಶ್ಯ ಮುದ್ರಿಕೆಯಲ್ಲಿಯೂ ಕೂಡ ಅಭಿನಯಿಸಿದ್ದಾರೆ.. ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ಇವರು ನಿರ್ವಹಿಸಿದ್ದ ಮಹಿಷಾಸುರನ ಪಾತ್ರ ಅಪಾರ ಜನಮನ್ನಣೆಗೆ ಪಾತ್ರವಾಗಿದ್ದು ಬಯಲಾಟದ ಮಹಿಷಾಸುರನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.. ಮಳೆಗಾಲದಲ್ಲಿ ತನ್ನ ಸ್ವಂತ ಪ್ರವಾಸಿ ಯಕ್ಷತಂಡದ ಮೂಲಕ ಬೆಂಗಳೂರು, ಮುಂಬೈ,ಹೈದರಾಬಾದ್ ಮೊದಲಾದ ಕಡೆ ಪ್ರದರ್ಶನವನ್ನು ನೀಡಿ,ಅಪಾರವಾದ ಯಕ್ಷಾಭಿಮಾನಿಗಳ ಪ್ರೀತಿ ಮತ್ತು ಅಭಿಮಾನಕ್ಕೆ ಪಾತ್ರರಾಗಿದ್ದಾರೆ.. ಯಾವುದೇ ಪ್ರಚಾರವನ್ನು ಬಯಸದೆ, ಕಲಾನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಶ್ರೀಬ್ರಹ್ಮಲಿಂಗೇಶ್ವರನ ಕಲಾಸೇವೆಯನ್ನು ನೆರವೇರಿಸುತ್ತಿರುವ ಇವರಿಗೆ ಹಲವು ಕಡೆ ಸನ್ಮಾನ ಪುರಸ್ಕಾರಗಳು ದೊರೆತಿದೆ.. ದೇವಾಡಿಗ ಯುವ ಸಂಘಟನೆಯ ಉಪ ಘಟಕ ಹಿರಿಯಡ್ಕ ಇವರಿಂದ ಸನ್ಮಾನ, ಮೇಲ್ ಹೊಸೂರು ಕಾನ್ಬೇರು ಸಂಜೀವ ಶೆಟ್ಟಿ ಕುಟುಂಬಸ್ಥರಿಂದ "ಯಕ್ಷರೂವಾರಿ" ಬಿರುದಿನೊಂದಿಗೆ ಸನ್ಮಾನ,ಸುರಭಿ ಮಿತ್ರ ಬಳಗ ಕಿರಿಮಂಜೇಶ್ವರ ಇವರಿಂದ ಸನ್ಮಾನ,ಮಾರಣಕಟ್ಟೆ ಶ್ರೀದರ ಮಂಜರ ಕುಟುಂಬಸ್ಥರಿಂದ ಸನ್ಮಾನ, ಕರಾವಳಿ ಮೈತ್ರಿ ಸಂಘ ಹೈದರಾಬಾದ್ ಇವರಿಂದ ಸನ್ಮಾನ ಸೇರಿದಂತೆ ಹಲವಾರು ಸನ್ಮಾನ ಪುರಸ್ಕಾರಗಳಿಗೆ ಬಾಜನರಾದ ಹಿರಿಮೆ ಇವರದ್ದು.. ಇವರು ಶ್ರೀಮತಿ ಪಾರ್ವತಿಯವರೊಂದಿಗೆ ಅನುರೂಪ ದಾಂಪತ್ಯ ಜೀವನವನ್ನು ನಡೆಸಿ,ಕಿರಣ್ ಮತ್ತು ಕೀರ್ತನ್ ಎನ್ನುವ ಇಬ್ಬರು ಸುಪುತ್ರರನ್ನು ಪಡೆದಿದ್ದಾರೆ.. ಶಿಸ್ತುಬದ್ದ ಮತ್ತು ಸರಳ ಜೀವನವನ್ನು ನಡೆಸುತ್ತಿರುವ ಇವರಿಗೆ ಶ್ರೀಬ್ರಹ್ಮಲಿಂಗೇಶ್ವರ ಸ್ವಾಮಿಯೂ ಸುಖಸಂಪದವನ್ನು ನೀಡಿ,ನಿರಂತರವಾಗಿ ಕಲಾಸೇವೆಯನ್ನು ಮಾಡುವ ಸುಯೋಗವನ್ನು ಕರುಣಿಸಲಿ ಎನ್ನುವುದು ನಮ್ಮ ಯಕ್ಷಮಂದಾರದ ಶುಭಹಾರೈಕೆ.. ಸಾಹಿತ್ಯ:ಹಾಲಾಡಿ ಸಂತೋಷ ಶೆಟ್ಟಿ.. ನಿರೂಪಣೆ:ಶ್ರೀಮತಿ ಅಮೃತ ಶೆಟ್ಟಿ.. ಸಹಕಾರ ಮತ್ತು ಮಾಹಿತಿ: ಜಯರಾಮ ಶೆಟ್ಟಿ ಹೈಗಿನಕಟ್ಟೆ ಹೊಸೂರು.. ಶ್ರೀನಿವಾಸ ಶೆಟ್ಟಿ ಶಂಕರನಾರಾಯಣ ಯಕ್ಷಮಂದಾರದ ಸರ್ವಸದಸ್ಯರು.. ಯಕ್ಷಗಾನ ಕಲಾವಿದರ ಪರಿಚಯ ಸರಣಿಯ ಎಲ್ಲ ವಿಡಿಯೋಗಳು ನಮ್ಮಯಕ್ಷ💥ಮಂದಾರ ಯೂಟ್ಯೂಬ್ ಚಾನಲ್..ನಲ್ಲಿ ಲಭ್ಯವಿದೆ.. ನಮ್ಮ 🌀ಯಕ್ಷ💥ಮಂದಾರ🌀ಯೂಟ್ಯೂಬ್ ಚಾನಲ್ ಮತ್ತು ಫೇಸ್ಬುಕ್ ಪೇಜ್.. ನ್ನು download ಮಾಡಿಕೊಳ್ಳಿ..ಮತ್ತು ನಾವು upload ಮಾಡುವ ಎಲ್ಲ ಯಕ್ಷಗಾನ ವಿಡಿಯೋಗಳ ಮಾಹಿತಿ ಪಡೆಯಿರಿ..ನಮ್ಮ ವಿಡಿಯೋಗಳನ್ನು ನೋಡಿ like ಮಾಡಿ,share ಮಾಡಿ ಪ್ರೋತ್ಸಾಹಿಸಿ... ಯಕ್ಷಗಾನ ಕಲೆಯನ್ನು ಉಳಿಸಿ,ಬೆಳೆಸಿ, ಪ್ರೋತ್ಸಾಹಿಸಿ.. ಧನ್ಯವಾದಗಳು🙏🙏🙏


This is an exhibition of the achievements and life of yakshaganaartists.

Today our yakshaganas are famous lyricists of Badaguthittti, the artist of The Maranakatte Mela Nagur Srinivasa Dewadiga...

He was born to sri thimma devadiga and kaveri couple at Kabdoor in Kiribasavillage in Byndoor taluk of Udupi district.

After completing his primary education at Kiribasamy School, he joined the Yakshagana Centre in Udupi in 1982 with interest in Yakshagana. Where bhargava keerthisesha of the sea sat i.shivarama karanth received the knowledge of the rhythm of tala from heranjalu venkataramana ganiga. Later in 1983, he built a bunch of maranaketta melas under the guidance of Yakshasbhishma M.M.Hegde and served in a maranakatte mela for a long period of thirty-seven years.

Pure orthodox dance, pure and clear literature, serious theatre, cleverness that can energize the character. He is a purely orthodox artist with his theatrical skills.

The characters of Chandrahasa history are the evil minds of The History of The History, The Kamlabhuof Alota and Koundlika of Ratikalyana, Kaurava and Bhima of Gadawara, Shatruprasudhana of Sudarshana Vijaya, Kartyaveerya, Rukmabhupa, Sundararavana, Balarama, Yama, Raktajanga, Madhu, Kaitaba, Keechaka, Bhadrasena, Rama, Mahishasura and others. He also acted in the scene of The Maranakate Kshetra Mahatma, Sri Devi Mahatma and Kappannaswamy Mahatma. Mahishasura, who played the role of A.R. In The Rabindra Kalakshetra, Bangalore, is well known for his role as The Bayalata Mahishasura.

During the rainy season, he has performed in Bangalore, Mumbai, Hyderabad and has been a great admirer of yakshagana.

He has been honoured in many places for his artistic service, without seeking any publicity, sincerely and sincerely. The deputy unit of the Devadiga Youth Organisation, Hiriyadka, Mail Hosur Kanberu Sanjeeva Shetty honored with the title of "Yakshavaru" by Sanjeev Shetty, Surabhi Mitra Group Kiriheswara, Honored by Maranakate Sridarmanjara Sangam, Coastal Maitri Sangh Hyderabad Honor.

She has a married life with Mrs. Parvathi and has two sons, Kiran and Kirtan.
Our yakshamandar a blessing to those who are living a disciplined and simple life and wish ing to sribrahmaheswara swamy to give him a good sampada and to continue to perform artwork.

Literature:Haladi Santosh Shetty..

Narration:Smt. Amrita Shetty..

Cooperation and Information:
Jayaram Shetty Haiginakate Hosur..
Srinivasa Shetty Shankaranarayana

All members of Yakshamandar..

All the videos of the Yakshagana Artistes Introduction Series are our yaksha💥mandar YouTube channel.. Available in..

ಯಕ್ಷಮಂದಾರ ವಿಡಿಯೋ ನೋಡಲೋಸುಗವಾಗಿ.

ವಾಹಿನಿಯ ಹೋಮ್ ಪೇಜ್ ಗಾಗಿ: https://www.youtube.com/channel/UCsrL

ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: https://www.facebook.com/groups/27334

 #ಯಕ್ಷಮಂದಾರ,#ನಾಗೂರು ಶ್ರೀನಿವಾಸ ದೇವಾಡಿಗರ,#Nagooru Shrinivasa Devadiga


Tuesday, September 15, 2020

#ಯಕ್ಷಮಂದಾರ - 20 | ಅನಂತ ಕುಲಾಲ್ ಕಕ್ಕುಂಜೆ | Anantha Kulal Kakkunje | Maranakatte Mela | ಯಕ್ಷಸಾಧಕರು |

🌀ಯಕ್ಷ💥ಮಂದಾರ🌀

#ಯಕ್ಷಮಂದಾರ - 20 | ಅನಂತ ಕುಲಾಲ್ ಕಕ್ಕುಂಜೆ | Anantha Kulal Kakkunje | Maranakatte Mela | ಯಕ್ಷಸಾಧಕರು |

ಇದು ಯಕ್ಷ ಕಲಾವಿದರ ಸಾಧನೆ ಮತ್ತು ಜೀವನಗಾಥೆಯ ಅನಾವರಣ ಇಂದಿನ ನಮ್ಮ ಯಕ್ಷಸಾಧಕರು ಮಾರಣಕಟ್ಟೆ ಮೇಳದ ಹಿರಿಯ ವೇಷಧಾರಿ ಕಕ್ಕುಂಜೆ ಅನಂತ ಕುಲಾಲರು.. ಕರಾವಳಿಯ ತೀರದಲ್ಲಿ ಹುಟ್ಟಿ,ದೂರದ ಸಾಗರದಾಚೆಗೂ ಹಬ್ಬಿ,ಕಾಲಾಂತರದಲ್ಲಿ ದೇಶ ವಿದೇಶಗಳಲ್ಲಿ ತನ್ನ ಪ್ರಸಿದ್ಧಿಯನ್ನು ಹೆಚ್ಚಿಸಿಕೊಳ್ಳುತ್ತ, ಮಹಾ ವೃಕ್ಷದೋಪಾದಿಯಲ್ಲಿ ಬೆಳದ ಯಕ್ಷರಂಗದಲ್ಲಿ ನಿಷ್ಠೆ ಮತ್ತು ಪ್ರಾಮಾಣಿಕರಾಗಿ ದುಡಿದು ಕೀರ್ತಿ ಪಡೆದ ಕಲಾವಿದರಲ್ಲಿ ಇವರು ಅಗ್ರಮಾನ್ಯರು.. ಶ್ರೀಯುತರು ಉಡುಪಿ ತಾಲೂಕಿನ ಕಕ್ಕುಂಜೆ ಗ್ರಾಮದ ಶ್ರೀ ಬಚ್ಚ ಕುಲಾಲ ಮತ್ತು ಶ್ರೀಮತಿ ದ್ಯಾವಮ್ಮ ದಂಪತಿಗಳ ಮೂರನೆಯ ಪುತ್ರರಾಗಿ ದಿನಾಂಕ:26.02.1956ರಲ್ಲಿ ಜನಿಸಿದರು... ಬಾಲ್ಯದಲ್ಲಿಯೇ ಯಕ್ಷಗಾನದ ಕುರಿತು ಅಭಿರುಚಿಯನ್ನು ಬೆಳೆಸಿಕೊಂಡಿದ್ದ ಇವರು,ಹಳ್ಳಾಡಿ ಮಂಜಯ್ಯ ಶೆಟ್ಟಿಯವರ ಪ್ರೇರಣೆಯಿಂದ,ಉಡುಪಿ ಯಕ್ಷರಂಗದ ಗುರುಗಳಾಗಿದ್ದ ದಶಾವತಾರಿ ದಿ.ಮಟಪಾಡಿ ವೀರಭದ್ರ ನಾಯ್ಕರಲ್ಲಿ ಯಕ್ಷಗಾನದ ಜ್ಞಾನವನ್ನು ಪಡೆದುಕೊಂಡು,ತನ್ನ ಹದಿನೈದನೆಯ ವಯಸ್ಸಿನಲ್ಲಿ ಕೋಟ ಅಮೃತೇಶ್ವರಿ ಮೇಳದಲ್ಲಿ ಗೆಜ್ಜೆಕಟ್ಟಿ ರಂಗಪ್ರವೇಶ ಮಾಡಿದರು... ನಂತರ ಹಿರಿಯಡ್ಕ,ಪೆರ್ಡೂರು,ಸಾಲಿಗ್ರಾಮ ಮತ್ತು ಹಾಲಾಡಿ ಮೇಳದಲ್ಲಿ ಸೇವೆಸಲ್ಲಿಸಿ ,ಹಲವು ವರುಷಗಳಿಂದ ನಿರಂತರವಾಗಿ ಮಾರಣಕಟ್ಟೆ ಮೇಳದಲ್ಲಿ ಸೇವೆ ಸಲ್ಲಿಸುತ್ತಿರುವ ಇವರದ್ದು ಯಕ್ಷರಂಗದಲ್ಲಿ ಐವತ್ತು ವರ್ಷಗಳ ಸುದೀರ್ಘ ಅನುಭವ... ಅತ್ಯಂತ ಸುಂದರವಾದ ವೇಷಗಾರಿಕೆ,ಶ್ರುತಿ, ತಾಳ,ಲಯಬದ್ಧವಾದ ಹೆಜ್ಜೆಗಾರಿಕೆ,ಪಾಂಡಿತ್ಯಪೂರ್ಣವಾದ ಪ್ರಖರ ಮಾತುಗಾರಿಕೆಯಿಂದ ನಾಡಿನಾದ್ಯಂತ ಅಪಾರವಾದ ಅಭಿಮಾನಿಗಳನ್ನು ಹೊಂದಿರುವುದು ಇವರ ವಿಶೇಷತೆ... ಲವಕುಶ ಕಾಳಗದ ರಾಮ,ಸತ್ಯಹರಿಶ್ಚಂದ್ರ ಮಹಾತ್ಮೆಯ ಹರಿಶ್ಚಂದ್ರ, ಸುಧನ್ವ ಮೋಕ್ಷದ ಸುಧನ್ವ,ಗದಾಯುದ್ಧದ ಕೃಷ್ಣ,ಕ್ಷೇತ್ರಮಹಾತ್ಮೆಯ ಕೋಲಮುನಿ ಮತ್ತು ಶಂಕರಾಚಾರ್ಯ,ಚಕ್ರವ್ಯೂಹದ ಅಭಿಮನ್ಯು,ನಳ ದಮಯಂತಿಯ ಋತುಪರ್ಣ, ಬಬ್ರುವಾಹನ ಕಾಳಗದ ಬಬ್ರುವಾಹನ, ಶನಿಮಹಾತ್ಮೆಯ ರಾಜವಿಕ್ರಮ,ಧರ್ಮಾಂಗದ, ಕೌಂಡ್ಲಿಕ,ದುಷ್ಯಂತ, ದೇವವೃತ ಮೊದಲಾದ ಪಾತ್ರಗಳು ಇವರಿಗೆ ಕೀರ್ತಿ ತಂದುಕೊಟ್ಟಿದೆ... ಆಕರ್ಷಕ ಆಳಾಂಗ, ನವರಸಭರಿತ ನಾಟ್ಯ,ವಿದ್ವತ್ಪೂರ್ಣ ಮಾತುಗಾರಿಕೆ,ಭಾವಪೂರ್ಣ ಅಭಿನಯ,ಅಪಾರವಾದ ರಂಗಾನುಭವಗಳಿಂದ ನಾಡಿನಾದ್ಯಂತ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿರುವ ಇವರು ಹಲವು ಸನ್ಮಾನ, ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ... ಪ್ರಸಕ್ತ ಪತ್ನಿ ಲೀಲಾ ಮತ್ತು ಪುತ್ರರೊಂದಿಗೆ ಮೊಳಹಳ್ಳಿ ಸಮೀಪದ ಹೊರ್ನಾಡಿಯಲ್ಲಿ ವಾಸವಾಗಿರುವ ಇವರಿಗೆ,ಶ್ರೀ ಬ್ರಹ್ಮಲಿಂಗೇಶ್ವರ ಸ್ವಾಮಿಯು ಸರ್ವ ಸಂಪದವನ್ನು ನೀಡಲಿ ಎನ್ನುವುದು ಯಕ್ಷಮಂದಾರದ ಶುಭಹಾರೈಕೆ.. ಸಾಹಿತ್ಯ:ಹಾಲಾಡಿ ಸಂತೋಷ ಶೆಟ್ಟಿ.. ನಿರೂಪಣೆ: ಶ್ರೀಮತಿ ಅಮೃತ ಶೆಟ್ಟಿ.. ಮಾಹಿತಿ ಮತ್ತು ಸಹಕಾರ: ಸುಬ್ರಹ್ಮಣ್ಯ ಕುಲಾಲ್ ಕಕ್ಕುಂಜೆ ಜಯರಾಮ ಶೆಟ್ಟಿ ಹೈಗಿನಕಟ್ಟೆ, ಹೊಸೂರು.. ಶೀನಿವಾಸ ಶೆಟ್ಟಿ ಶಂಕರನಾರಾಯಣ ಯಕ್ಷಮಂದಾರದ ಸದಸ್ಯರು ಅನಂತ ಕುಲಾಲ ಅಭಿಮಾನಿಗಳು ಮಾರಣಕಟ್ಟೆ ಮೇಳದ ಅಭಿಮಾನಿಗಳು ಯಕ್ಷಗಾನ ಕಲಾವಿದರ ಪರಿಚಯ ಸರಣಿಯ ಎಲ್ಲ ವಿಡಿಯೋಗಳು ನಮ್ಮಯಕ್ಷ💥ಮಂದಾರ ಯೂಟ್ಯೂಬ್ ಚಾನಲ್..ನಲ್ಲಿ ಲಭ್ಯವಿದೆ.. ನಮ್ಮ 🌀ಯಕ್ಷ💥ಮಂದಾರ🌀ಯೂಟ್ಯೂಬ್ ಚಾನಲ್ ಮತ್ತು ಫೇಸ್ಬುಕ್ ಪೇಜ್.. ನ್ನು download ಮಾಡಿಕೊಳ್ಳಿ..ಮತ್ತು ನಾವು upload ಮಾಡುವ ಎಲ್ಲ ಯಕ್ಷಗಾನ ವಿಡಿಯೋಗಳ ಮಾಹಿತಿ ಪಡೆಯಿರಿ..ನಮ್ಮ ವಿಡಿಯೋಗಳನ್ನು ನೋಡಿ like ಮಾಡಿ,share ಮಾಡಿ ಪ್ರೋತ್ಸಾಹಿಸಿ... ಯಕ್ಷಗಾನ ಕಲೆಯನ್ನು ಉಳಿಸಿ,ಬೆಳೆಸಿ, ಪ್ರೋತ್ಸಾಹಿಸಿ.. ಧನ್ಯವಾದಗಳು🙏🙏🙏


This is the exhibition of the achievements and life of yakshaartists

Our yakshaganas today are the elderly attire of Maranakatte Mela, Kakkunje Ananta Kulal.

Born on the coast, spread ing across the sea, and over time, he was among the most renowned artists who had earned fame in the yakshagana, which grew up in the great tree.

Mr. Bachcha Kulal a kakkunje village in Udupi Taluk was born on 26.02.1956 as the third son of Shri Bachcha Kulal and Mrs. Dyamma...

He had developed a passion for Yakshagana in his childhood, inspired by Haladi Manjayya Shetty, who was the guru of Udupi Yakshagana, Dasavatari D. Matapadi, who had gained knowledge of Yakshagana in Veerbhadra Nayak and entered the theatre at kota amritswari mela at the age of fifteen.

He has been serving at Theeryadaka, Perdur, Saligramam and Haladi melas and has been serving in the Maranakatte Mela for many years and has had over fifty years of experience in Yakshagana.
He has a great audience all over the country with his beautiful costume, sruti, rhythmic footsteps, and a scholarly speech.

Rama of Lavakusa Battle, Sathyaharishchandra Mahatma's Harishchandra, Sudhanva of Salvation, Krishna of Sudanva Moksha, Kshetra Mahatma And Shankaracharya, Abhimanyu of Chakra, Rituparna of Nala Damayanti, Babruvahana of Babruvahana, Rajvikrama of Sani Mahatma, Dharmangada, Dushyanta, Deva etc.

He has a great audience all over the country with his impressive dance, his scholarly speech, his passionate performance, his immense performances and his many awards.

Yakshamandar avery wished sri brahmalingaswara swamy to give sarva sampada to his wife Leela and sons who live in Hornadi near Molahalli.

Literature:Haladi Santosh Shetty..

Narration: Mrs. Amritshetty..

Information and Cooperation:
Subramanya Kulal Kakunje
Jayaram Shetty Haiginakate, Hosur..
Sinivasa Shetty Shankaranarayana

Members of Yakshamandar
Anantha Kulal admirers
Marankatte Mela Fans

All the videos of the Yakshagana Artistes Introduction Series are our yaksha💥mandar YouTube channel.. Available in..

Our 🌀yss💥mandar🌀YouTube channel and Facebook page. Download.. And get information about all yakshagana videos we upload.. Watch our videos like, share and encourage... Save, develop and encourage yakshagana art..

Thank you🙏🙏🙏

ಯಕ್ಷಮಂದಾರ ವಿಡಿಯೋ ನೋಡಲೋಸುಗವಾಗಿ. ವಾಹಿನಿಯ ಹೋಮ್ ಪೇಜ್ ಗಾಗಿ: https://www.youtube.com/channel/UCsrL ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: https://www.facebook.com/groups/27334

Monday, September 14, 2020

#ಯಕ್ಷಮಂದಾರ- 19 | ಕಮಲಶಿಲೆ ಆನಂದ ದೇವಾಡಿಗ |Ananda Devadiga Kamalashile | ಕಲಾಜೀವನದ ಕಿರುಪರಿಚಯ | ಯಕ್ಷಸಾಧ

🌀ಯಕ್ಷ💥ಮಂದಾರ 🌀



#ಯಕ್ಷಮಂದಾರ- 19 | ಕಮಲಶಿಲೆ ಆನಂದ ದೇವಾಡಿಗ |Ananda Devadiga Kamalashile | ಕಲಾಜೀವನದ ಕಿರುಪರಿಚಯ | ಯಕ್ಷಸಾಧ

ಇದು ಯಕ್ಷ ಕಲಾವಿದರ ಸಾಧನೆ ಮತ್ತು ಜೀವನಗಾಥೆಯ ಅನಾವರಣ. ಇಂದಿನ ನಮ್ಮ ಯಕ್ಷಸಾಧಕರು.. ಬಡಗುತಿಟ್ಟಿನ ಪ್ರಸಿದ್ಧ ಪೋಷಕ ಮತ್ತು ಪುರುಷ ಪಾತ್ರಧಾರಿ.. ಮಾರಣಕಟ್ಟೆ ಮೇಳದ ಕಲಾವಿದ.. ಕಮಲಶಿಲೆ ಆನಂದ ದೇವಾಡಿಗರು.. ಶ್ರೀಯುತರು ಉಡುಪಿ ಜಿಲ್ಲೆಯ ಕಮಲಶಿಲೆ ಸಮೀಪದ ತಟ್ಟೆಗುಳಿ ಎಂಬಲ್ಲಿ ಕೆ. ಮಂಜು ದೇವಾಡಿಗ ಮತ್ತು ಅಕ್ಕಯ್ಯ ದಂಪತಿಗಳ ಆರು ಜನ ಮಕ್ಕಳಲ್ಲಿ ಮೂರನೆಯವರಾಗಿ 1965ರಲ್ಲಿ ಜನಿಸಿದರು.. ಆಜ್ರಿ ಕಮಲಶಿಲೆಯ ಮಾನಂಜೆ ಶಾಲೆಯಲ್ಲಿ ತನ್ನ ನಾಲ್ಕನೆಯ ತರಗತಿಯವರೆಗಿನ ವಿದ್ಯಾಭ್ಯಾಸವನ್ನು ಪೂರೈಸಿದ ಇವರು,ಆರ್ಗೋಡು ಗೋವಿಂದರಾಯ ಶೆಣೈಯವರ ಪ್ರೇರಣೆಯಿಂದ ಯಕ್ಷಗಾನದ ಕಡೆಗೆ ಒಲವು ಬೆಳೆಸಿಕೊಂಡರು..ತನ್ನ ಅಣ್ಣನಾದ ಕಮಲಶಿಲೆ ಮಹಾಬಲ ದೇವಾಡಿಗರಲ್ಲಿ ಯಕ್ಷಗಾನದ ನಾಟ್ಯಾಬ್ಯಾಸವನ್ನು ಮಾಡಿದ ಇವರು ಪ್ರಪ್ರಥಮವಾಗಿ ಹಿರಿಯಡ್ಕ ಮೇಳದಲ್ಲಿ ಗೆಜ್ಜೆಕಟ್ಟಿದರು.. ಹಿರಿಯಡ್ಕ ಮೇಳದಲ್ಲಿ ಒಂದು ವರ್ಷ ಸೇವೆ ಸಲ್ಲಿಸಿದ ಇವರು,ಮಾರಣಕಟ್ಟೆಯಲ್ಲಿ ಹದಿಮೂರು ವರ್ಷ,ಶಿರಸಿಯಲ್ಲಿ ಮೂರು ವರ್ಷ,ಮಂದಾರ್ತಿಯಲ್ಲಿ ಒಂದು ವರ್ಷ,ಸಾಲಿಗ್ರಾಮದಲ್ಲಿ ಒಂದು ವರ್ಷ,ಸೌಕೂರಿನಲ್ಲಿ ಆರು ವರ್ಷ,ಹಾಲಾಡಿಯಲ್ಲಿ ನಾಲ್ಕು ವರ್ಷ,ಮಡಾಮಕ್ಕಿಯಲ್ಲಿ ಒಂದು ವರ್ಷ,ಸಿಗಂದೂರಿನಲ್ಲಿ ಎರಡು ವರ್ಷ,ಆಜ್ರಿಯಲ್ಲಿ ಎರಡು ವರ್ಷ ನೀಲಾವರ ಮೇಳದಲ್ಲಿ ಆರು ವರ್ಷ ಸೇವೆಸಲ್ಲಿಸಿದ ಇವರು ಪ್ರಸ್ತುತ ಮಾರಣಕಟ್ಟೆ ಮೇಳದಲ್ಲಿ ದುಡಿಯುತ್ತಿದ್ದಾರೆ. ಯಕ್ಷರಂಗದಲ್ಲಿ ನಿರಂತರವಾಗಿ ನಲವತ್ತು ವರ್ಷಗಳಿಂದ ಸೇವೆಸಲ್ಲಿಸುತ್ತಿರುವ ಇವರು ಕರಾವಳಿ, ಮಲೆನಾಡು,ಮುಂಬೈ ಬೆಂಗಳೂರು,ಹೈದ್ರಾಬಾದ್, ಮೈಸೂರು,ಹುಬ್ಬಳ್ಳಿ ಮೊದಲಾದ ಕಡೆ ತನ್ನ ಪ್ರತಿಭೆಯನ್ನು ಪ್ರದರ್ಶಿಸಿ, ಕಲಾಭಿಮಾನಿಗಳ ಪಾಲಿನ ಮೆಚ್ಚಿನ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ.. ಯಕ್ಷರಂಗದ ಅನೇಕ ಹಿರಿಯ ಕಿರಿಯ ಕಲಾವಿದರೊಂದಿಗೆ ತಿರುಗಾಟವನ್ನು ನಡೆಸಿ ಸೈ ಎನಿಸಿಕೊಂಡಿರುವ ಇವರು ನೆಲ್ಲೂರು ಮರಿಯಪ್ಪ ಆಚಾರ್ಯ, ಕುಂಜಾಲು ರಾಮಕೃಷ್ಣ,ಕಮಲಶಿಲೆ ಮಹಾಬಲ ದೇವಾಡಿಗ,ಹೆರಂಜಾಲು ಗೋಪಾಲ ಗಾಣಿಗ,ಕೊಂಡದಕುಳಿ ರಾಮಚಂದ್ರ ಹೆಗ್ಡೆ,ಬಳ್ಕೂರು ಕೃಷ್ಣಯಾಜಿ ತೀರ್ಥಹಳ್ಳಿ ಗೋಪಾಲ ಆಚಾರ್ಯ, ಸದಾಶಿವ ಅಮೀನ್, ಐರ್ಬೈಲು ಆನಂದ ಶೆಟ್ಟಿ,ಕೋಡಿ ವಿಶ್ವನಾಥ ಗಾಣಿಗ,ಕೋಟ ಸುರೇಶ ಬಂಗೇರ ಮೊದಲಾದ ಹಿರಿಯ ಕಲಾವಿದರನ್ನು ಮೆಚ್ಚಿಕೊಂಡಿದ್ದಾರೆ... ಪುಂಡುವೇಷ ಮತ್ತು ಪೋಷಕ ಪಾತ್ರಗಳಲ್ಲಿ ತನ್ನದೇ ಆದ ವಿಶಿಷ್ಟ ರಂಗನಡೆಯ ಮೂಲಕ ಪಾತ್ರಕ್ಕೆ ಮೆರಗು ನೀಡಬಲ್ಲ ಇವರು ಅಭಿಮನ್ಯು,ಕೃಷ್ಣ, ವೃಷಸೇನ,ಬಬ್ರುವಾಹನ, ಲವ,ಕುಶ ಮತ್ತು ಮಾರುತಿ ಪ್ರತಾಪದ ನಾರದನ ಪಾತ್ರವನ್ನು ಬಹು ಸುಂದರವಾಗಿ ಅಭಿನಯಿಸುತ್ತಿದ್ದಾರೆ... ತನ್ನ ಪ್ರಬುದ್ಧ ಮಾತುಗಾರಿಕೆ,ಆಕರ್ಷಕ ನಾಟ್ಯ, ಚುರುಕುನಡೆ ಮತ್ತು ಸುಂದರವಾದ ವೇಷಭೂಷಣಗಳ ಮೂಲಕ ತನ್ನದೇ ಆದ ಅಭಿಮಾನಿಗಳನ್ನು ಹೊಂದಿರುವ ಇವರನ್ನು ಮುಂಬೈ ಮತ್ತು ಸಿದ್ದಾಪುರದಲ್ಲಿ ಸನ್ಮಾನಿಸಿ ಗೌರವಿಸಲಾಗಿದೆ. ಅತ್ಯಂತ ಸರಳ ಮತ್ತು ಸೌಮ್ಯಸ್ವಭಾವದ ಇವರು ಶ್ರೀಮತಿ ಭಾಗ್ಯ ಇವರೊಂದಿಗೆ ದಾಂಪತ್ಯ ಜೀವನವನ್ನು ನಡೆಸಿ,ಮಗ ಅಕ್ಷಯ ಮತ್ತು ಮಗಳು ಅಮೃತಳೊಂದಿಗೆ ಸುಖ ಸಂತೃಪ್ತ ಜೀವನವನ್ನು ನಡೆಸುತ್ತಿದ್ದಾರೆ.. ಇವರಿಗೆ ಯಕ್ಷರಂಗದಲ್ಲಿ ಹೆಚ್ಚಿನ ಯಶಸ್ಸು ದೊರೆಯಲಿ ಮತ್ತು ಶ್ರೀ ಬ್ರಹ್ಮಲಿಂಗೇಶ್ವರ ಸ್ವಾಮಿಯೂ ಸರ್ವ ಸಂಪತ್ತನ್ನು, ಸುಖ ನೆಮ್ಮದಿಯನ್ನು ನೀಡಿ ಕಾಪಾಡಲಿ ಎನ್ನುವುದು ನಮ್ಮ ಯಕ್ಷಮಂದಾರದ ಶುಭಹಾರೈಕೆ.... ಸಾಹಿತ್ಯ:ಹಾಲಾಡಿ ಸಂತೋಷ ಶೆಟ್ಟಿ.. ನಿರೂಪಣೆ:ಶ್ರೀಮತಿ ಅಮೃತ ಶೆಟ್ಟಿ... ಮಾಹಿತಿ ಮತ್ತು ಸಹಕಾರ: ಕಿರಣ್ ಕುಮಾರ್ ಕಮಲಶಿಲೆ ಜಯರಾಮ ಶೆಟ್ಟಿ ಹೈಗಿನಕಟ್ಟೆ ಹೊಸೂರು ಯಕ್ಷಮಂದಾರದ ಸದಸ್ಯರು. ಮಾರಣಕಟ್ಟೆ ಮೇಳದ ಕಲಾವಿದರು. ಆನಂದ ದೇವಾಡಿಗ ಅಭಿಮಾನಿಗಳು. ಯಕ್ಷಗಾನ ಕಲಾವಿದರ ಪರಿಚಯ ಸರಣಿಯ ಎಲ್ಲ ವಿಡಿಯೋಗಳು ನಮ್ಮಯಕ್ಷ💥ಮಂದಾರ ಯೂಟ್ಯೂಬ್ ಚಾನಲ್..ನಲ್ಲಿ ಲಭ್ಯವಿದೆ.. ನಮ್ಮ 🌀ಯಕ್ಷ💥ಮಂದಾರ🌀ಯೂಟ್ಯೂಬ್ ಚಾನಲ್ ಮತ್ತು ಫೇಸ್ಬುಕ್ ಪೇಜ್.. ನ್ನು download ಮಾಡಿಕೊಳ್ಳಿ..ಮತ್ತು ನಾವು upload ಮಾಡುವ ಎಲ್ಲ ಯಕ್ಷಗಾನ ವಿಡಿಯೋಗಳ ಮಾಹಿತಿ ಪಡೆಯಿರಿ..ನಮ್ಮ ವಿಡಿಯೋಗಳನ್ನು ನೋಡಿ like ಮಾಡಿ,share ಮಾಡಿ ಪ್ರೋತ್ಸಾಹಿಸಿ... ಯಕ್ಷಗಾನ ಕಲೆಯನ್ನು ಉಳಿಸಿ,ಬೆಳೆಸಿ, ಪ್ರೋತ್ಸಾಹಿಸಿ.. ಧನ್ಯವಾದಗಳು🙏🙏🙏

This is an exhibition of the achievements and life of yakshaartists. Today's yakshakas are.. The famous patron and male character of the badgutitta. Maranakatte Mela Artist.. Kamalashile Ananda Dewadigaru.. Mr. K. Attateguli near Kamalashila in Udupi district. Manju Devadiga and Akkaiah were born in 1965 as the third of the six children. He completed his fourth grade in Mananje School at Ajri Kamalashila and was inspired by Argodu Govindaraya Shenoy and developed a passion for Yakshagana. He performed yakshagana in his elder brother Kamalashila Mahabala Dewadi, and tied the knot at the Hiriyadka mela for the first time. He served in the Hiriyadka Mela for thirteen years at Maaranakatte, three years at Sirsi, one year in Saligramam, six years in Saukur, four years in Haladi, one year in Madamakki, two years at Sigandur, two years at Ajri and two years at Neelavar amela. He has been in the yakshagana for forty years and has shown his talent in coastal, malaria, mumbai, bangalore, hyderabad, mysore, hubli etc. and has become a favourite artist of the art lovers. He has been known for his tourwith many senior yakshagana artistes like Nellore Mariappa Acharya, Kunjalu Ramakrishna, Kamalashila Mahabaladewadiga, Heranjalu Gopalganiga, Kondakuli Ramachandra Hegde, Balkur Krishnayaji Tirthahalli Gopalacharya, Sadashiv Ameen, Irbailu Ananda Shetty, Kodi Vishwanath Ganiga, Kota Suresh Bangera etc. He can be a dazzling character in his own role stylish lyrics and supporting roles. He has his own fans with his mature speech, charming dance, agility and beautiful costumes and has been honoured in Mumbai and Singrauli. She is very simple and mild and has married with Mrs Bhagya and leads a happy and happy life with son Akshaya and daughter Amrita. May they be successful in the Yakshagana and may Sri Brahma lingaswami also be given all wealth and happiness and happiness. Literature:Haladi Santosh Shetty.. Narrative:Mrs. Amrita Shetty... Information and Cooperation: Kiran Kumar Kamalashila Jayaram Shetty Haiginakate Hosur Members of Yakshamandar. Artists from The Marankate Mela. Ananda Devadiga fans. All the videos of the Yakshagana Artistes Introduction Series are our yaksha💥mandar YouTube channel.. Available in.. Our 🌀yss💥mandar🌀YouTube channel and Facebook page. Download.. And get information about all yakshagana videos we upload.. Watch our videos like, share and encourage... Save, develop and encourage yakshagana art.. Thank you🙏🙏🙏

ಯಕ್ಷಮಂದಾರ ವಿಡಿಯೋ ನೋಡಲೋಸುಗವಾಗಿ.

ವಾಹಿನಿಯ ಹೋಮ್ ಪೇಜ್ ಗಾಗಿ: https://www.youtube.com/channel/UCsrL

ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: https://www.facebook.com/groups/27334

 #ಯಕ್ಷಮಂದಾರ,#ಕಮಲಶಿಲೆ ಆನಂದ ದೇವಾಡಿಗ,#Ananda Devadiga Kamalashile

Thursday, September 10, 2020

#ಯಕ್ಷಮಂದಾರ - 18 | ಜಯಾನಂದ ಸಂಪಾಜೆ | Jayanand Sampaje | ಹನುಮಗಿರಿ ಮೇಳ | Hanumagiri Mela | ಯಕ್ಷಸಾಧಕರು |

                                        🌀ಯಕ್ಷ💥ಮಂದಾರ🌀

#ಯಕ್ಷಮಂದಾರ - 18 | ಜಯಾನಂದ ಸಂಪಾಜೆ | Jayanand Sampaje | ಹನುಮಗಿರಿ ಮೇಳ | Hanumagiri Mela | ಯಕ್ಷಸಾಧಕರು |

ಇದು ಯಕ್ಷ ಕಲಾವಿದರ ಸಾಧನೆ ಮತ್ತು ಜೀವನಗಾಥೆಯ ಅನಾವರಣ.. ಇಂದಿನ ನಮ್ಮ ಯಕ್ಷಸಾಧಕರು ತೆಂಕುತಿಟ್ಟಿನ ಸಮರ್ಥ ಪೀಠಿಕೆ ವೇಷಧಾರಿ, ಹನುಮಗಿರಿ ಮೇಳದ ಕಲಾವಿದರಾದ ಜಯಾನಂದ ಸಂಪಾಜೆಯವರು.. ಶ್ರೀಯುತರು ಸುಳ್ಯ ಸಂಪಾಜೆ ಕಲ್ಲುಗುಂಡಿಯ ಸುಳ್ಳಕೋಡಿಯಲ್ಲಿ ತಿಮ್ಮಯ್ಯ ಗೌಡ ಮತ್ತು ಲಕ್ಷ್ಮೀ ದಂಪತಿಗಳ ಪುತ್ರನಾಗಿ ದಿನಾಂಕ 08.12.1973ರಲ್ಲಿ ಜನಿಸಿದರು. ಬಾಲ್ಯದಲ್ಲಿಯೇ ಯಕ್ಷಗಾನದ ಕುರಿತಾದ ಆಸಕ್ತಿಯನ್ನು ಹೊಂದಿದ್ದ ಇವರು, ಪಿ.ಯು.ಸಿಯವರೆಗಿನ ಶಿಕ್ಷಣವನ್ನು ಪೂರೈಸಿದ ನಂತರ ಅರಸಿನಮಕ್ಕಿ ಪರಮೇಶ್ವರ ಆಚಾರ್ಯರಿಂದ ನಾಟ್ಯಾಬ್ಯಾಸವನ್ನು ಮತ್ತು ಖ್ಯಾತ ತಾಳಮದ್ದಲೆಪಟು ಜಬ್ಬಾರ್ ಸಮೋ ಅವರಿಂದ ಮಾತುಗಾರಿಕೆಯ ಜ್ಞಾನವನ್ನು ಪಡೆದುಕೊಂಡರು..1992ರಲ್ಲಿ ಕಟೀಲು ಮೇಳದಲ್ಲಿ ಗೆಜ್ಜೆಕಟ್ಟಿದ ಇವರು ಅಲ್ಲಿ ಹನ್ನೆರಡು ವರ್ಷಗಳ ಕಾಲ ಸೇವೆ ಸಲ್ಲಿಸಿದರು ನಂತರ ಕುಂಟಾರು ಮೇಳದಲ್ಲಿ ಮೂರು ವರ್ಷ,ಹೊಸನಗರ ಮೇಳದಲ್ಲಿ ಎಂಟು ವರ್ಷ,ಪುತ್ತೂರು ಮೇಳದಲ್ಲಿ ಒಂದು ವರ್ಷ ಸೇವೆಸಲ್ಲಿಸಿದ ಇವರು ಪ್ರಸ್ತುತ ಮೂರು ವರ್ಷದಿಂದ ಹನುಮಗಿರಿ ಮೇಳದಲ್ಲಿ ಸೇವೆಸಲ್ಲಿಸುತ್ತಿದ್ದಾರೆ.. ದೇವೇಂದ್ರ ಪಾತ್ರದಾರಿಯಾಗಿ ರಂಗದಲ್ಲಿ ಖ್ಯಾತನಾಮರಾದ ಇವರು, ಕಿರೀಟ ವೇಷಗಳಾದ ರಕ್ತಬೀಜ, ಇಂದ್ರಜಿತು,ಶತ್ರುಘ್ನ,ಸುಗ್ರೀವ, ಅರ್ಜುನ,ಕಾರ್ತ್ಯವೀರ್ಯಾರ್ಜುನ ಮತ್ತು ಕಟೀಲು ಕ್ಷೇತ್ರ ಮಹಾತ್ಮೆಯ ಅರುಣಾಸುರ ಮೊದಲಾದ ವೇಷಗಳನ್ನು ತನ್ನ ವಿಶಿಷ್ಟ ನಾಟ್ಯಶೈಲಿ ಮತ್ತು ಗತ್ತು ಗಾಂಭೀರ್ಯದ ಹಾವಬಾವಗಳ ಮೂಲಕ ಸುಂದರವಾಗಿ ಅಭಿನಯಿಸುವ ಇವರು, ಪುಂಡುವೇಷಗಳಾದ ಕೃಷ್ಣ,ವಿಷ್ಣು, ಶ್ರೀನಿವಾಸ ಮೊದಲಾದ ವೇಷಗಳಲ್ಲಿ ರಂಗದಲ್ಲಿ ಸಂಚಲನ ಮೂಡಿಸಬಲ್ಲರು.. ಹನುಮಗಿರಿ ಮೇಳದಲ್ಲಿ ಈ ವರ್ಷ ಪ್ರದರ್ಶನಗೊಂಡ ಮಾನಿಷಾದ ಪ್ರಸಂಗದಲ್ಲಿ ವಾಲ್ಮೀಕಿಯ ಪಾತ್ರದಲ್ಲಿ ಇವರ ಅತ್ಯುತ್ತಮವಾದ ಅಭಿನಯ ಮತ್ತು ಪಾಂಡಿತ್ಯಪೂರ್ಣವಾದ ವಾಗ್ವೈಖರಿಯಿಂದ ಅಪಾರವಾದ ಜನಮನ್ನಣೆಗೆ ಪಾತ್ರರಾದರು.. ಸ್ಪಷ್ಟ ಮತ್ತು ಸುಲಲಿತವಾದ ಮಾತುಗಾರಿಕೆ, ಕರ್ಣಾನಂದಕರವಾದ ಸ್ವರಸಿರಿ,ನೀಳಕಾಯ,ಅಪಾರವಾದ ಪಾಂಡಿತ್ಯ,ಆಕರ್ಷಕವಾದ ಹೆಜ್ಜೆಗಾರಿಕೆ ಮತ್ತು ರಂಗ ನಡೆಯಿಂದ ಅಪಾರವಾದ ಅಭಿಮಾನಿಗಳ ಪ್ರೀತಿ ಮತ್ತು ಮನ್ನಣೆಗೆ ಪಾತ್ರರಾಗಿರುವ ಇವರು ತೆಂಕುತಿಟ್ಟಿನ ಪ್ರಸಿದ್ಧ ಪೀಠಿಕೆ ವೇಷಧಾರಿಗಳಲ್ಲಿ ಒಬ್ಬರಾಗಿದ್ದಾರೆ.. ಕೇದಗಡಿ ಗುಡ್ಡಪ್ಪ ಗೌಡ,ಪೆರುವಾಯಿ ನಾರಾಯಣ ಶೆಟ್ಟಿ,ಕುರಿಯ ಗಣಪತಿ ಶಾಸ್ತ್ರಿ,ಬೊಟ್ಟಿಕೆರೆ ಪುರುಷೋತ್ತಮ ಪೂಂಜ,ಪದ್ಯಾಣ ಗಣಪತಿ ಭಟ್,ಪದ್ಯಾಣ ಶಂಕರನಾರಾಯಣ ಭಟ್,ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟಿ ಶಿವರಾಮ ಜೋಗಿ ಮೊದಲಾದ ಹಿರಿಯ ಕಲಾವಿದರ ಸಾಂಗತ್ಯದಲ್ಲಿ ತೆಂಕುತಿಟ್ಟಿನ ಪರಿಪೂರ್ಣ ಕಲಾವಿದರಾಗಿ ರೂಪಗೊಂಡಿರುವ ಇವರು,ಸದಾ ಅಧ್ಯಯನಶೀಲ ಗುಣಗಳಿಂದ,ರಂಗದಲ್ಲಿ ಯಾವುದೇ ಪ್ರಸಂಗದ ಯಾವುದೇ ಪಾತ್ರದಲ್ಲಿಯೂ ಕೂಡ ತನ್ನ ಪ್ರತ್ಯುತ್ಪನ್ನಮತಿತ್ವದಿಂದ ಹಿರಿಯ ಕಲಾವಿದರಿಗೆ ಸಮದಂಡಿಯಾಗಿ ವ್ಯವಹರಿಸಬಲ್ಲ ಸಮರ್ಥ ಕಲಾವಿದರು.. ಜಬ್ಬಾರ್ ಸಮೋ ಅವರ ಶಿಷ್ಯ ಸಮೂಹದಲ್ಲಿ ಗುರುತಿಸಿ ಕೊಂಡಿರುವ ಇವರು, ತನ್ನ ವಿದ್ವತ್ಪೂರ್ಣ ಮತ್ತು ಪ್ರಖರ ಮಾತುಗಾರಿಕೆಯ ಶೈಲಿಯಿಂದ ಜನಮನ್ನಣೆ ಗಳಿಸಿದ್ದು, ಕೇವಲ ಆಟವಷ್ಟೇ ಅಲ್ಲದೆ ತಾಳಮದ್ದಲೆಯ ಕೂಟದಲ್ಲೂ ಬಾಗವಹಿಸುತ್ತಿದ್ದಾರೆ.. ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಂಘಟನೆಗಳಲ್ಲಿಯೂ ಗುರುತಿಸಿಕೊಂಡಿರುವ ಇವರು ಕಲ್ಲುಗುಂಡಿ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಹದಿನೈದು ವರ್ಷ ಮತ್ತು ಯಶಸ್ವಿ ಯುವಕ ಮಂಡಲ ಕಲ್ಲುಗುಂಡಿ ಇದರ ಅಧ್ಯಕ್ಷರಾಗಿ ಎಂಟು ವರ್ಷ ಸೇವೆಸಲ್ಲಿಸಿದ್ದಾರೆ.. ಸತತ ಇಪ್ಪತ್ತೇಳು ವರ್ಷಗಳಿಂದ ಯಕ್ಷರಂಗದಲ್ಲಿ ಸೇವೆಸಲ್ಲಿಸುತ್ತಿರುವ ಇವರು ಕರಾವಳಿ,ಮಲೆನಾಡು ಬೆಂಗಳೂರು ಮುಂಬೈ ಮೊದಲಾದ ಕಡೆ ತನ್ನ ಕಲಾಪ್ರೌಢಿಮೆಯನ್ನು ಮೆರೆಸಿದ್ದಾರೆ.. ಇವರ ಯಕ್ಷಸೇವೆಯನ್ನು ಗುರುತಿಸಿ ತರುಣ ಕಲಾವೃಂದ ದಾಮಸಕಟ್ಟೆ ಇವರಿಂದ ಸನ್ಮಾನ,ದುರ್ಗಾ ಸೇವಾ ಸಮಿತಿ ಕನ್ಯಾನ ಬಂಟ್ವಾಳ ಇವರಿಂದ ಯಕ್ಷನಿಧಿ ಬಿರುದಿನೊಂದಿಗೆ ಸನ್ಮಾನ,ಕಾಸರಗೋಡು ಸಂತಡ್ಕದ ಅರಸು ಸಂಕಲ ದೈವಕ್ಷೇತ್ರದಿಂದ "ಅರಸು ಸಂಕಲ ಪ್ರಶಸ್ತಿ", ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸುಳ್ಯ ಅವರಿಂದ ಸನ್ಮಾನ, ಕೃಷ್ಣ ಯಕ್ಷಸಭಾ ಕದ್ರಿ, ಮಲ್ಲಿಕಟ್ಟೆ ಅವರಿಂದ ಸನ್ಮಾನ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳು ಸನ್ಮಾನ ಪುರಸ್ಕಾರವನ್ನು ನೀಡಿ ಗೌರವಿಸಿವೆ .. ಸರಳ ಮತ್ತು ಸೌಮ್ಯ ಸ್ವಭಾವದ ಇವರು ಬಾಳಸಂಗಾತಿಯಾದ ವಿಜಯಾ,ಮಗಳು ಬ್ರಾಮರಿ, ಮಗ ನೈರುತ್ಯರೊಡನೆ ಸುಖ ಸಂತೃಪ್ತ ಜೀವನವನ್ನು ನಡೆಸುತ್ತಿದ್ದಾರೆ.. ಇವರಿಗೆ ಕಲಾಮಾತೆಯಾದ ಶ್ರೀಕಟೀಲು ಭ್ರಮರಾಂಬಿಕೆಯೂ ಯಕ್ಷರಂಗದಲ್ಲಿ ಮತ್ತು ವೈಯುಕ್ತಿಕ ಬದುಕಿನಲ್ಲಿ ಹೆಚ್ಚಿನ ಅಭಿವೃದ್ಧಿಯನ್ನು ನೀಡಿ ಕಾಪಾಡಲಿ ಎನ್ನುವುದು ಯಕ್ಷ💥ಮಂದಾರದ ಶುಭಹಾರೈಕೆ.. ಸಾಹಿತ್ಯ:ಹಾಲಾಡಿ ಸಂತೋಷ ಶೆಟ್ಟಿ.. ನಿರೂಪಣೆ: ಶ್ರೀಮತಿ ಅಮೃತ ಶೆಟ್ಟಿ.. ಯಕ್ಷಗಾನ ಕಲಾವಿದರ ಪರಿಚಯ ಸರಣಿಯ ಎಲ್ಲ ವಿಡಿಯೋಗಳು ನಮ್ಮಯಕ್ಷ💥ಮಂದಾರ ಯೂಟ್ಯೂಬ್ ಚಾನಲ್..ನಲ್ಲಿ ಲಭ್ಯವಿದೆ.. ನಮ್ಮ 🌀ಯಕ್ಷ💥ಮಂದಾರ🌀ಯೂಟ್ಯೂಬ್ ಚಾನಲ್ ಮತ್ತು ಫೇಸ್ಬುಕ್ ಪೇಜ್.. ನ್ನು download ಮಾಡಿಕೊಳ್ಳಿ..ಮತ್ತು ನಾವು upload ಮಾಡುವ ಎಲ್ಲ ಯಕ್ಷಗಾನ ವಿಡಿಯೋಗಳ ಮಾಹಿತಿ ಪಡೆಯಿರಿ..ನಮ್ಮ ವಿಡಿಯೋಗಳನ್ನು ನೋಡಿ like ಮಾಡಿ,share ಮಾಡಿ ಪ್ರೋತ್ಸಾಹಿಸಿ... ಯಕ್ಷಗಾನ ಕಲೆಯನ್ನು ಉಳಿಸಿ,ಬೆಳೆಸಿ, ಪ್ರೋತ್ಸಾಹಿಸಿ.. ಧನ್ಯವಾದಗಳು🙏🙏🙏


🌀💥🌀 This is an exhibition of the achievements and life of yakshaartists. Our yakshaganas today are the artists of Hanumangiri Mela, Jayananda Sampaje, who is dressed in the best introduction of Tenkutitt. Mr. Sulaiya sampaje was born on 08.12.1973 as the son of Thimmayya Gowda and Lakshmi in Sallakody, Kallugundi. He was interested in Yakshagana in his early childhood and after completing his education till PUC, he acquired the knowledge of the natabeyasa from Arasinamakki Parameshwara Acharya and the famous talamaddalepatu Jabbar Samo. He built a kettle mela in 1992 and served for twelve years at Kuntaru Mela, for three years at Hosanagar Mela, eight years at Puttur, and now he has been serving at Hanumagiri Mela for three years. He is known for his characters like Rakta Seed, Indrajitu, Shatrughan, Sugreeva, Arjuna, Kartyaviryarjuna and Katila Kshetra Mahatma Arunasura, who play beautifully with his unique dance style and gorgeous gestures, can make a movement in the attires of Krishna, Vishnu and Srinivas. In the manisha episode performed at Hanumangiri Mela this year, valmiki was well known for his outstanding performance and scholarly rhetoric. He is a well-known introduction to tenkutittis, a clear and smooth speech, a long, long,skillful, attractive step-by-step and a discrete admirer of the attire. Kedagadi Gudappa Gowda, Peruvai Narayana Shetty, Kuriya Ganapati Sastry, Bottikere Purushottam Poonja, Padyana Ganapati Bhatt, Padyana Shankaranarayana Bhatt, Siddakate Chennappa Shetty ShivaramA Jogi, etc., has always been a perfect artist with his studies and in any role in any context. He is recognized by Jabbar Samo's disciple group and has gained popularity with his scholarly and brilliant speech style and is not only playing but also in the rhythmic party. He is also known for his social, religious and cultural organizations and has served as the President of Kallugundi Ganeshotsav Committee for fifteen years and successful Youth Mandal Kallugundi for eight years. He has been in yakshagana for twenty-seven years and has mastered his arts in coastal, Malappuram, Bangalore, Mumbai and other places. The young artistes have been honoured with the title of Yakshanidhi by The Young Kalavandram Damasakate, The Durga Seva Samiti Kanya Bantwane, 'Arasu Sankala Award' from Thearasu Sankala Daivakshetra, Taluk Aara Sahitya Parishad Sulimala, Krishna Yakshasabha Kadri, Mallikatte.

Simple and mild,he is a partner, vijaya, daughter Bramary, son, and son, and a happy life.  The best wishes of The Yaksha💥 Mandar a kamata, Srikatil Bhramaramabike, also give them greater progress in yakshagana and personal life.

Literature:Haladi Santosh Shetty..

Narration: Mrs. Amritshetty..

All the videos of the Yakshagana Artistes Introduction Series are our yaksha💥mandar YouTube channel.. Available in..   

Our 🌀yss💥mandar🌀YouTube channel and Facebook page. Download.. And get information about all yakshagana videos we upload.. Watch our videos like, share and encourage... Save, develop and encourage yakshagana art..

       Thank you🙏🙏🙏

ಯಕ್ಷಮಂದಾರ ವಿಡಿಯೋ ನೋಡಲೋಸುಗವಾಗಿ.

ವಾಹಿನಿಯ ಹೋಮ್ ಪೇಜ್ ಗಾಗಿ: https://www.youtube.com/channel/UCsrL

ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: https://www.facebook.com/groups/27334

Monday, September 7, 2020

#ಯಕ್ಷಮಂದಾರ - 17 | ರವೀಂದ್ರ ಶೆಟ್ಟಿ ಯಡಮೊಗೆ | Raveendra Shetty Yadamoge | ಕಮಲಶಿಲೆ ಮೇಳ | ಸ್ತ್ರೀಪಾತ್ರದಾರಿ

🌀ಯಕ್ಷ💥ಮಂದಾರ🌀


#ಯಕ್ಷಮಂದಾರ - 17 | ರವೀಂದ್ರ ಶೆಟ್ಟಿ ಯಡಮೊಗೆ | Raveendra Shetty Yadamoge | ಕಮಲಶಿಲೆ ಮೇಳ | ಸ್ತ್ರೀಪಾತ್ರದಾರಿ

ಇದು ಯಕ್ಷಕಲಾವಿದರ ಸಾಧನೆ ಮತ್ತು ಜೀವನಗಾಥೆಯ ಅನಾವರಣ.. ಇಂದಿನ ನಮ್ಮ ಯಕ್ಷಸಾಧಕರು ಬಡಗುತಿಟ್ಟಿನ ಮೋಹಕ ತಾರೆ,ಕಮಲಶಿಲೆ ಮೇಳದ ಸ್ತ್ರೀಪಾತ್ರದಾರಿ ರವೀಂದ್ರ ಶೆಟ್ಟಿ ಯಡಮೊಗೆ.. ಶ್ರೀಯುತರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಯಡಮೊಗೆಯ ಕೊಳಾಲಿ ಎಂಬಲ್ಲಿ ಶ್ರೀ ನಾಗು ಶೆಟ್ಟಿ ಮತ್ತು ಗುಲಾಬಿ ಶೆಡ್ತಿಯವರ ಪುಣ್ಯಗರ್ಭದಲ್ಲಿ ದಿನಾಂಕ:15.01.1984ರಲ್ಲಿ ಜನಿಸಿದರು.. ಇವರು ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಯಡಮೊಗೆಯ ಕೊಳಾಲಿ ಶಾಲೆಯಲ್ಲಿ ಮುಗಿಸಿ,ಹೊಸಂಗಡಿ ಪ್ರೌಢಶಾಲೆಯಲ್ಲಿ ಹತ್ತನೆಯ ತರಗತಿಯವರೆಗಿನ ಶಿಕ್ಷಣವನ್ನು ಪಡೆದರು..ಬಾಲ್ಯದಲ್ಲಿಯೇ ಯಕ್ಷಗಾನದ ಬಾಗವತಿಕೆಯ ಬಗ್ಗೆ ಅಪಾರವಾದ ಆಸಕ್ತಿಯನ್ನು ಹೊಂದಿದ್ದ ಇವರು,ತನ್ನ ಶಾಲಾಜೀವನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಯಕ್ಷಗಾನದ ಪದ್ಯಗಳನ್ನು ಹಾಡಿ ಸಹಪಾಠಿಗಳನ್ನು ರಂಜಿಸುತ್ತಿದ್ದರು..ಇವರ ಪ್ರತಿಭೆಯನ್ನು ಗುರುತಿಸಿದ ಇವರ ಶಾಲಾ ಶಿಕ್ಷಕಿಯವರಾದ ಪುಷ್ಪಾವತಿ ಮೇಡಮ್ ಅವರು ಇವರನ್ನು ಪ್ರೋತ್ಸಾಹಿಸಿದಲ್ಲದೆ,ಇವರ ಆಸಕ್ತಿಯನ್ನು ಮತ್ತಷ್ಟು ಬೆಳೆಸುವಲ್ಲಿ ಕಾರಣಿಕರ್ತರಾದ ರು..ಮುಂದೆ ಶಿಕ್ಷಣವನ್ನು ಮುಗಿಸಿದ ಇವರು ಹೈದರಾಬಾದ್..ಗೆ ಹೋಗಿ ಹೋಟೆಲಿನಲ್ಲಿ ಕೆಲಸಕ್ಕೆ ಸೇರಿಕೊಂಡು,ಅಲ್ಲಿ ನಾಲ್ಕು ವರ್ಷ ದುಡಿದರು. ಆ ಸಮಯದಲ್ಲಿ ಇವರ ಅಣ್ಣನಾದ ಶೇಖರ ಶೆಟ್ಟಿಯವರು ಅನಾರೋಗ್ಯಕ್ಕೀಡಾದಾಗ ಊರು ಸೇರಿಕೊಂಡ ಇವರು ಅಣ್ಣನ ನಿಧನದ ನಂತರ ಯಡಮೊಗೆಯಲ್ಲಿ ಅವರು ನಡೆಸುತ್ತಿರುವ ಹೊಟೇಲನ್ನು ಮುಂದುವರಿಸಿದರು..ಆದರೆ ಕ್ರಮೇಣ ಯಕ್ಷಗಾನದ ಮೇಲಿನ ಇವರ ಆಸಕ್ತಿ ಇವರನ್ನು ಯಕ್ಷಲೋಕದತ್ತ ಕರೆತಂದಿತು..2003ರಲ್ಲಿ ಉಡುಪಿ ಇಂದ್ರಾಳಿಯ ಯಕ್ಷಗಾನ ಕೇಂದ್ರವನ್ನು ಸೇರಿಕೊಂಡ ಇವರು ದಿ.ನಗರ ಸುಬ್ರಹ್ಮಣ್ಯ ಆಚಾರ್ಯ,ಪ್ರಸಾದ್ ಕುಮಾರ್ ಮೊಗೆಬೆಟ್ಟು ಇವರಲ್ಲಿ ತಾಳ,ರಾಗ,ಲಯ ಜ್ಞಾನವನ್ನು ಅಭ್ಯಸಿಸಿ, ಬನ್ನಂಜೆ ಸಂಜೀವ ಸುವರ್ಣ, ಮಂಜುನಾಥ ಕುಲಾಲ ಐರೋಡಿ,ಗಣೇಶ ಚೇರ್ಕಾಡಿ ಮತ್ತು ಪ್ರಕಾಶ ಜೋಗಿಯವರಲ್ಲಿ ಯಕ್ಷಗಾನದ ನಾಟ್ಯಾಬ್ಯಾಸವನ್ನು ಮಾಡಿದರು. 2004ರಲ್ಲಿ ಮಂದಾರ್ತಿ ಮೇಳದಲ್ಲಿ ಪೀಠಿಕೆ ಸ್ತ್ರೀವೇಷಧಾರಿಯಾಗಿ ಗೆಜ್ಜೆಕಟ್ಟಿ ರಂಗಪ್ರವೇಶ ಮಾಡಿದ ಇವರು ಅಲ್ಲಿ ಒಂದು ವರ್ಷ ಸೇವೆ ಸಲ್ಲಿಸಿದರು..ನಂತರ ಸೌಕೂರು ಮೇಳದಲ್ಲಿ ಒಂದು ವರ್ಷ,ಸಿಗಂದೂರು ಮೇಳದಲ್ಲಿ ಒಂದು ವರ್ಷ,ಮಡಾಮಕ್ಕಿ ಮೇಳದಲ್ಲಿ ಆರು ವರ್ಷ,ಹಟ್ಟಿಯಂಗಡಿ ಮೇಳದಲ್ಲಿ ಒಂದು ವರ್ಷ,ಕಮಲಶಿಲೆ ಮೇಳದಲ್ಲಿ ಆರು ವರ್ಷ ಸೇವೆಸಲ್ಲಿಸಿದ ಇವರು,ಪ್ರಸ್ತುತ ಕಮಲಶಿಲೆ ಮೇಳದ ಸ್ತ್ರೀವೇಷದಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.. ಹದಿನಾರು ವರ್ಷಗಳಿಂದ ನಿರಂತರವಾಗಿ ಯಕ್ಷರಂಗದಲ್ಲಿ ದುಡಿಯುತ್ತಿರುವ ಇವರು ಅನಿವಾರ್ಯ ಪರಿಸ್ಥಿತಿಯಲ್ಲಿ ಬಾಗವತಿಕೆಯನ್ನು ಮಾಡಬಲ್ಲರು.. ಸ್ತ್ರೀವೇಷಕ್ಕೊಪ್ಪುವ ಇವರ ಆಳಾಂಗ, ಮೋಹಕ ರೂಪಸಿರಿ,ಸ್ಪಷ್ಟ ಮತ್ತು ಸುಲಲಿತವಾದ ವಾಗ್ವೈಕರಿ, ಆಕರ್ಷಕವಾದ ನಾಟ್ಯಶೈಲಿಯಿಂದ ಯಕ್ಷರಂಗದ ಭರವಸೆಯ ಪ್ರತಿಭಾವಂತ ಸ್ತ್ರೀಪಾತ್ರದಾರಿಯಾಗಿ ಗುರುತಿಸಿಕೊಂಡಿರುವ ಇವರು,ಕಮಲಶಿಲೆ ಕ್ಷೇತ್ರ ಮಹಾತ್ಮೆಯ ಪಿಂಗಳೆ, ಅಭಿಮನ್ಯು ಕಾಳಗದ ಸುಭದ್ರೆ,ಮೀನಾಕ್ಷಿ, ಜಾಂಬವತಿ, ಶ್ವೇತಕುಮಾರ ಚರಿತ್ರೆಯ ಶಿವೆ,ದೇವಿ ಬನಶಂಕರಿಯ ಶೀಲೆ ಮತ್ತು ಬನಶಂಕರಿ, ಪದ್ಮಗಂದಿನಿ,ದೇವಿಮಹಾತ್ಮೆಯ ಶ್ರೀ ದೇವಿ ಮೊದಲಾದ ಪಾತ್ರಗಳನ್ನು ಬಹು ಸುಂದರವಾಗಿ ಅಭಿನಯಿಸುತ್ತಿದ್ದಾರೆ.. ಇವರ ಸೋದರ ಮಾವನಾದ ಕೊಳಲಿ ಕೃಷ್ಣ ಶೆಟ್ಟಿ, ಮಂದಾರ್ತಿ ಮೇಳದಲ್ಲಿ ಎಂ.ಎ. ನಾಯ್ಕ,ಮತ್ತು ಹಟ್ಟಿಯಂಗಡಿ ಮೇಳದಲ್ಲಿ ಸುಧೀರ್ ಉಪ್ಪೂರು, ಕಮಲಶಿಲೆ ಮೇಳದಲ್ಲಿ ಹೆನ್ನಾಬೈಲು ಸಂಜೀವ ಶೆಟ್ಟಿ ಮತ್ತು ಪಂಜು ಬಗ್ವಾಡಿಯವರು ಇವರಿಗೆ ಯಕ್ಷಗಾನ ರಂಗದಲ್ಲಿ ಬೆಳೆಯಲು ಸಂಪೂರ್ಣವಾಗಿ ಸಹಕರಿಸಿದ್ದಾರೆ.. ಕರಾವಳಿ ಮಲೆನಾಡು ಮತ್ತು ಬೆಂಗಳೂರು ಸೇರಿದಂತೆ ವಿವಿದೆಡೆ ಸಂಚರಿಸಿ ತನ್ನದೇ ಅಭಿಮಾನಿಗಳನ್ನು ಹೊಂದಿರುವ ಇವರು ಚಪ್ಪರಮನೆ ಶ್ರೀಧರ ಹೆಗಡೆ,ಸುರೇಶ ಶೆಟ್ಟಿ ಶಂಕರನಾರಾಯಣ, ಹಳ್ಳಾಡಿ ಜಯರಾಮ ಶೆಟ್ಟಿ,ಹೊಸಂಗಡಿ ರವೀಂದ್ರ ಶೆಟ್ಟಿ, ಸೌಡ ಗೋಪಾಲ, ನಾಗೇಶ ದೇವಾಡಿಗ ಬೀಜೂರು, ಸಂಜೀವ ಗಾಣಿಗ ಹೆರಂಜಾಲು, ವಿಶ್ವನಾಥ ಹೆನ್ನಾಬೈಲು, ನಿತಿನ್ ಶೆಟ್ಟಿ ಸಿದ್ದಾಪುರ, ಗಣೇಶ ಯಡಮೊಗೆ,ನಾಗರಾಜ ಆಲೂರು ಹೆನ್ನಾಬೈಲು ಸಂಜೀವ ಶೆಟ್ಟಿ ಮೊದಲಾದ ಹಿರಿಯ ಕಿರಿಯ ಕಲಾವಿದರೊಂದಿಗೆ ತಿರುಗಾಟವನ್ನು ನಡೆಸಿದ್ದಾರೆ.. ಶ್ರೀಮತಿ ಜ್ಯೋತಿಯವರೊಂದಿಗೆ ಆದರ್ಶ ದಾಂಪತ್ಯ ಜೀವನವನ್ನು ನಡೆಸುತ್ತಿರುವ ಇವರು ಪ್ರಸ್ತುತ ಯಡಮೊಗೆಯಲ್ಲಿ ವಾಸವಾಗಿದ್ದಾರೆ.. ಇವರಿಗೆ ಯಕ್ಷರಂಗದಲ್ಲಿ ಹೆಚ್ಚಿನ ಯಶಸ್ಸು ದೊರೆಯಲಿ.. ಬಡಗಿನ ಅಗ್ರಮಾನ್ಯ ಕಲಾವಿದರ ಸಾಲಿನಲ್ಲಿ ಗುರುತಿಸಿಕೊಳ್ಳುವ ಯೋಗಬಾಗ್ಯವನ್ನು ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿಯು ಅನುಗ್ರಹಿಸಲಿ ಎನ್ನುವುದು ಯಕ್ಷಮಂದಾರದ ಶುಭ ಹಾರೈಕೆ.. ಸಾಹಿತ್ಯ:ಹಾಲಾಡಿ ಸಂತೋಷ ಶೆಟ್ಟಿ ನಿರೂಪಣೆ; ಶ್ರೀಮತಿ ಅಮೃತ ಶೆಟ್ಟಿ.. ಸಲಹೆ ಮತ್ತು ಸಹಕಾರ: ಯಡಮೊಗೆ ರವೀಂದ್ರ ಶೆಟ್ಟಿ ಅಭಿಮಾನಿಗಳು ಮತ್ತು ಯಕ್ಷಮಂದಾರದ ಸರ್ವಸದಸ್ಯರು.. ಯಕ್ಷಗಾನ ಕಲಾವಿದರ ಪರಿಚಯ ಸರಣಿಯ ಎಲ್ಲ ವಿಡಿಯೋಗಳು ನಮ್ಮಯಕ್ಷ💥ಮಂದಾರ ಯೂಟ್ಯೂಬ್ ಚಾನಲ್..ನಲ್ಲಿ ಲಭ್ಯವಿದೆ.. ನಮ್ಮ 🌀ಯಕ್ಷ💥ಮಂದಾರ🌀ಯೂಟ್ಯೂಬ್ ಚಾನಲ್ ಮತ್ತು ಫೇಸ್ಬುಕ್ ಪೇಜ್.. ನ್ನು download ಮಾಡಿಕೊಳ್ಳಿ..ಮತ್ತು ನಾವು upload ಮಾಡುವ ಎಲ್ಲ ಯಕ್ಷಗಾನ ವಿಡಿಯೋಗಳ ಮಾಹಿತಿ ಪಡೆಯಿರಿ..ನಮ್ಮ ವಿಡಿಯೋಗಳನ್ನು ನೋಡಿ like ಮಾಡಿ,share ಮಾಡಿ ಪ್ರೋತ್ಸಾಹಿಸಿ... ಯಕ್ಷಗಾನ ಕಲೆಯನ್ನು ಉಳಿಸಿ,ಬೆಳೆಸಿ, ಪ್ರೋತ್ಸಾಹಿಸಿ.. ಧನ್ಯವಾದಗಳು🙏🙏🙏


🌀💥🌀

This is an exhibition of the achievements and life of yakshaganaartists.

Today our yakshaganas are the charming star of the badgutitti, the female patron of Kamalashile Mela, Ravindra Shetty Yadamoge.

Mr. Nagu Shetty and Rose Shetty were born on 15.01.1984 at Kollali in Yadamoge in Kundapur taluk of Udupi district.

He completed his primary education at Kollali School in Yedamoge and went to Hosangadi High School up to class 10. He was very interested in the bagavati of Yakshagana in his early childhood and entertained his classmates by singing yakshagana poems in cultural programmes during his school life. His school teacher Pushpavathi Madam, who recognized his talents, encouraged him and helped him to further promote his interest. After completing his studies, he was in Hyderabad. He went to The Hague and worked there for four years. At that time, when his elder brother Sekhar Shetty fell ill, he moved to the town and continued his hotel at Yadamoge after his brother's death. But gradually his interest in Yakshagana brought him to Yakshaloka. He joined the Yakshagana Centre at Udupi Indrali in 2003 and studied tala, raga and rhythm in D.Nagar Subramanya Acharya, Prasad Kumar Mogebettu, and performed yakshagana in Bannanje Sanjeeva Suvarna, Manjunatha Kulal Airodi, Ganesh Cherkadi and Prakash Jogi.

He made his debut in 2004 at The Mandarthi Mela and made his debut as a woman in the attire and served there for a year. He has served for one year at Saukur Mela, one year at Sigandur, six years at Madamakki Mela, one year at The Hattiyangadi Mela, six years at Kamalashilmela and is currently serving as a female attire of kamalashilmela. They have been working continuously for sixteen years and can do the bagavati in the inevitable situation.

He is a brilliant woman with a clear and smooth, dancing style, and has been a brilliant female character in the kamalashile kshetra mahatma pingle, abhimanyu battle subhadra, meenakshi, jambavati, shwetakumara charitra shive, devi banashankari, padmagandini, devi mahatma sri and many others.

His uncle, Kulli Krishna Shetty, m.a. at The Mandarti Mela. Naik, Sudhir Uppur, Hennabailu Sanjeeva Shetty and Panju Bagwadi have fully supported him in the yakshagana field.

He has his own fans, including coastal Malappuram and Bangalore, and has travelled with senior artistes like Chaparmane Sridhar Hegde, Suresh Shetty Shankaranarayana, Haladi Jayaram shetty, Hosangadi Ravindra Shetty, Sauda Gopal, Nagesh Dewadiga Beejur, Sanjeeva Ganiga Heranjalu, Vishwanath Hennabailu, Nitin Shetty, Ganesh Yadamoge, Nagaraja Hinnabailu Sanjeeva Shetty etc.

She lives in Yedamoge, where she lives in an ideal marriage with Mrs. Jyoti. May they get more success in yakshagana. Yakshamandar abrowse to wish Sri Brahmi Durga Parameswari to bless the yoga baggya of the top artistes of the karpon.

Literature:Haladi Santosh Shetty

Narration; Mrs. Amritshetty..

Advice and Cooperation:

Yedamoge Rabindra Shetty fans
              and all members of yakshamandar..

All the videos of the Yakshagana Artistes Introduction Series are our yaksha💥mandar YouTube channel.. Available in..    

Our 🌀yss💥mandar🌀YouTube channel and Facebook page. Download.. And get information about all yakshagana videos we upload.. Watch our videos like, share and encourage... Save, develop and encourage yakshagana art..

Thank you🙏🙏🙏


ಯಕ್ಷಮಂದಾರ ವಿಡಿಯೋ ನೋಡಲೋಸುಗವಾಗಿ.

ವಾಹಿನಿಯ ಹೋಮ್ ಪೇಜ್ ಗಾಗಿ: https://www.youtube.com/channel/UCsrL 

ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: https://www.facebook.com/groups/27334 

 #ಯಕ್ಷಮಂದಾರ,#ರವೀಂದ್ರ ಶೆಟ್ಟಿ, #ಯಡಮೊಗೆ, #Raveendra Shetty, #Yadamoge ,#ಕಮಲಶಿಲೆ ಮೇಳ,# ಸ್ತ್ರೀಪಾತ್ರದಾರಿ

#ಯಕ್ಷಮಂದಾರ - 51 | ಹೆನ್ನಾಬೈಲು ಸಂಜೀವ ಶೆಟ್ಟಿ | Hennabailu Sanjeeva Shetty | ಪ್ರಸಿದ್ದ ಸ್ತ್ರೀಪಾತ್ರದಾರಿ |

🌀ಯಕ್ಷ💥ಮಂದಾರ🌀 #ಯಕ್ಷಮಂದಾರ  - 51 | ಹೆನ್ನಾಬೈಲು ಸಂಜೀವ ಶೆಟ್ಟಿ | Hennabailu Sanjeeva Shetty | ಪ್ರಸಿದ್ದ ಸ್ತ್ರೀಪಾತ್ರದಾರಿ...