#ಯಕ್ಷಮಂದಾರ
#ಯಕ್ಷಮಂದಾರ - 23 | ಶಂಕರ ನಾಯ್ಕ | Ulloor Shankara Naik | ಕಲಾಜೀವನದ ಕಿರುಪರಿಚಯ | 74ಉಳ್ಳೂರು | ಚಂದ್ರಾವಳಿ |
ಇದು ಯಕ್ಷ ಕಲಾವಿದರ ಸಾಧನೆ ಮತ್ತು ಜೀವನಗಾಥೆಯ ಅನಾವರಣ..
ಇಂದಿನ ನಮ್ಮ ಯಕ್ಷಸಾಧಕರು ಹಾಸ್ಯದ ಪ್ರಸ್ತುತಿಯ ಮೂಲಕ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಬಲ್ಲ ಬಡಗುತಿಟ್ಟಿನ ಖ್ಯಾತ ಹಾಸ್ಯಕಲಾವಿದರಾದ ಉಳ್ಳೂರು ಶಂಕರ ನಾಯ್ಕರು... ಶ್ರೀಯುತರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ 74 ಉಳ್ಳೂರಿನ ಶ್ರೀ ರಾಮ ನಾಯ್ಕ ಮತ್ತು ದಿ.ಸಿದ್ದು ಬಾಯಿಯವರ ಪುಣ್ಯಗರ್ಭದಲ್ಲಿ ಜನಿಸಿದರು.. ಬಾಲ್ಯದಲ್ಲಿಯೇ ಯಕ್ಷಗಾನದ ಗೀಳು ಅಂಟಿಸಿಕೊಂಡಿದ್ದ ಇವರು ಪ್ರಸಿದ್ಧ ವೇಷದಾರಿಯಾಗಿದ್ದ ತನ್ನ ಸೋದರ ಮಾವನಾದ ಉಳ್ಳೂರು ನಾರಾಯಣ ನಾಯ್ಕರ ವೇಷಗಾರಿಕೆಯಿಂದ ಪ್ರಭಾವಿತರಾದರು... ವಿದ್ಯಾರ್ಥಿಯಾಗಿರುವಾಗಲೇ ಮಾವನೊಂದಿಗೆ ಯಕ್ಷಗಾನ ಕಾರ್ಯಕ್ರಮಗಳಿಗೆ ಭೇಟಿಕೊಡುತ್ತಿದ್ದ ಇವರಿಗೆ ಯಕ್ಷಗಾನದ ಹುಚ್ಚು ವಿದ್ಯಾರ್ಜನೆಗೆ ತೊಡುಕಾಗಿ ಪರಿಣಮಿಸಿತ್ತು..ಶೈಕ್ಷಣಿಕ ಪ್ರಗತಿ ಕುಂಠಿತವಾಗಿ ನಾಲ್ಕನೆಯ ತರಗತಿಯಲ್ಲಿ ಅನುತಿರ್ಣರಾದಾಗ ಮನೆಯಲ್ಲೇ ಉಳಿದುಕೊಂಡ ಇವರು,ನಂತರ ಕಮಲಶಿಲೆ ಮೇಳಕ್ಕೆ ಸೇರಿಕೊಂಡರು..ಅಲ್ಲಿ ಸಹಾಯಕರಾಗಿ ದುಡಿಯುತ್ತ, ಸಣ್ಣಪುಟ್ಟ ಪಾತ್ರವನ್ನು ಮಾಡಲಾರಂಭಿಸಿದರು..ಅಲ್ಲಿ ನಾಲ್ಕು ವರ್ಷ ದುಡಿದ ಇವರು ನಂತರ ನಾಗರಕೊಡಿಗೆ ಮೇಳಕ್ಕೆ ಸೇರಿಕೊಂಡು ಪುಂಡು ವೇಷವನ್ನು ನಿರ್ವಹಿಸಿ ಸೈ ಎನಿಸಿಕೊಂಡರು..ಅಲ್ಲಿ ದೇವಪ್ಪ ಗಾಣಿಗರ ಪ್ರೇರಣೆ ಮತ್ತು ಮಾರ್ಗದರ್ಶನದಿಂದ ಸಣ್ಣ ಪುಟ್ಟ ಹಾಸ್ಯ ಪಾತ್ರಗಳನ್ನು ಮಾಡಿದರು.. ನಂತರ ಸೌಕೂರು ಮೇಳವನ್ನು ಸೇರಿ ಕೋಟ ಸುರೇಶ ಬಂಗೇರರ ಗುರುತನದಲ್ಲಿ, ಪುಂಡುವೇಷವನ್ನು ನಿರ್ವಹಿಸುತ್ತ ಬಂದ ಇವರು, ಸೌಕೂರು ಮೇಳದ ಆಗಿನ ಪ್ರಸಿದ್ದ ಹಾಸ್ಯಗಾರರಾಗಿದ್ದ ಸುಳುಗೋಡು ನಾರಾಯಣರ ಸಲಹೆ ಮತ್ತು ಮಾರ್ಗದರ್ಶನದಿಂದ ಹಾಸ್ಯಭೂಮಿಕೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಅವರ ಸಹ ಹಾಸ್ಯಗಾರರಾಗಿ ಗುರುತಿಸಿಕೊಂಡರು...ಸೌಕೂರು ಮೇಳದಲ್ಲಿ ಪ್ರಧಾನ ಹಾಸ್ಯಗಾರರಾಗಿ ಪದೋನ್ನತಿ ಹೊಂದಿದ ಇವರು ಸುದೀರ್ಘ ಹತ್ತೊಂಬತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದರು..ನಂತರ ನೀಲಾವರ ಮೇಳದಲ್ಲಿ ಸೇವೆಸಲ್ಲಿಸಿ,ಪ್ರಸ್ತುತ ಐದು ವರ್ಷದಿಂದ ಹಾಲಾಡಿ ಮೇಳದಲ್ಲಿ ಪ್ರಧಾನ ಹಾಸ್ಯಗಾರರಾಗಿ ಸೇವೆ ಸಲ್ಲಿಸುತ್ತಿರುವ ಇವರು ಯಕ್ಷರಂಗದಲ್ಲಿ ಸುದೀರ್ಘ ಮೂವತೈದು ವರ್ಷಗಳ ಕಲಾಜೀವನವನ್ನು ನಡೆಸಿದ್ದಾರೆ ಸಾಮಾಜಿಕ ಮತ್ತು ರಾಜಕೀಯದ ವಿದ್ಯಮಾನಗಳನ್ನು ತನ್ನದೇ ವಿಶಿಷ್ಟ ಶೈಲಿಯಲ್ಲಿ ಹಾಸ್ಯದಲ್ಲಿ ಪ್ರಸ್ತುತಿಗೊಳಿಸುತ್ತಿರುವ ಇವರು ಯಕ್ಷ ಸಂವಿಧಾನದ ಕಟ್ಟುಪಾಡುಗಳಿಗೆ ಬದ್ಧರಾಗಿ,ಪ್ರಚಾರಕೋಸ್ಕರ ಹಾಸ್ಯವನ್ನು ವಿರೂಪಗೊಳಿಸದೆ ಸಂಪ್ರದಾಯವನ್ನು ಪಾಲಿಸಿಕೊಂಡು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಬಲ್ಲ ಪ್ರಸಿದ್ಧ ಹಾಸ್ಯಕಲಾವಿದರಲ್ಲಿ ಒಬ್ಬರು... ಚಂದ್ರಾವಳಿ ವಿಲಾಸದ ಅಜ್ಜಿ ಮತ್ತು ಚಂದಗೋಪ,ಭೂಕೈಲಾಸದ ಮಾಣಿ, ಕಾಶಿಮಾಣಿ,ಲವಕುಶದ ಮಾಣಿ,ಭೀಷ್ಮವಿಜಯದ ಬ್ರಾಹ್ಮಣ,ದಕ್ಷಯಜ್ಞದ ಬ್ರಾಹ್ಮಣ,ಪಾಂಚಜನ್ಯದ ಉದ್ದವ,ಹಾಲಾಡಿ ಕ್ಷೇತ್ರಮಹಾತ್ಮೆಯ ರಕ್ಕಸದೂತ ಮತ್ತು ಬೆಸ್ತ,ಚಿತ್ರಾಕ್ಷಿ ಕಲ್ಯಾಣದ ಅಜ್ಜಿ,ಗದಾಯುದ್ಧದ ಬೆಹೀನಚರ ಮೊದಲಾದ ಪಾತ್ರಗಳನ್ನು ನಿರ್ವಹಿಸಿರುವ ಇವರು,ಆದುನಿಕ ಪ್ರಸಂಗದ ಪಾತ್ರಗಳಿಗೂ ನ್ಯಾಯ ದೊರಕಿಸಿಕೊಟ್ಟು ಪ್ರಸಿದ್ದಿ ಪಡೆದಿದ್ದಾರೆ... ಮಳೆಗಾಲದಲ್ಲಿ ರಾಘವೇಂದ್ರ ಮಯ್ಯರ ಶ್ರೀಮಹಾಗಣಪತಿ ಪ್ರವಾಸಿ ಯಕ್ಷಗಾನ ತಂಡದಲ್ಲಿ ದುಡಿಯುತ್ತಿರುವ ಇವರು,ಬೆಂಗಳೂರು,ಹೈದರಾಬಾದ್, ಮುಂಬೈ,ಹುಬ್ಬಳ್ಳಿಯಂಥ ಮಹಾನಗರದಲ್ಲಿಯೂ ಪ್ರದರ್ಶವನ್ನು ನೀಡಿದ್ದಾರೆ...ತನ್ನದೇ ಆದ ಅಭಿಮಾನಿಗಳನ್ನು ಹೊಂದಿರುವ ಇವರಿಗೆ ಹಲವು ಸನ್ಮಾನಗಳು ಸಂದಿವೆ. ರಾಘವೇಂದ್ರ ಮಯ್ಯ,ರಾಕೇಶ್ ಮಲ್ಯ,ಸದಾಶಿವ ಅಮೀನ್,ಹಡಿನಬಾಳ ಶ್ರೀಪಾದ ಹೆಗ್ಡೆ,ಶ್ರೀಧರ ಹಾರ್ಸಿಕಟ್ಟೆ ಆನಂದ ಅಂಕೋಲಾ,ಜನಾರ್ದನ ಆಚಾರ್ಯ,ಮಂಜುನಾಥ ನಾವಡ,ಕುಮಟಾ ಗಣಪತಿ ನಾಯ್ಕ,ಕೋಡಿ ವಿಶ್ವನಾಥ ಗಾಣಿಗ,ಕೋಟ ಸುರೇಶ,ಕೊಳಲಿ ಕೃಷ್ಣ ಶೆಟ್ಟಿ,ಬೆದ್ರಾಡಿ ನರಸಿಂಹ, ಜನಾರ್ದನ ಗುಡಿಗಾರ,ಹಾರಾಡಿ ಸರ್ವಗಾಣಿಗ,ಹೆನ್ನಾಬೈಲು ಸಂಜೀವ ಶೆಟ್ಟಿ,ಹೊಸಂಗಡಿ ರವೀಂದ್ರ ಶೆಟ್ಟಿ,ಜೋಗು ಕುಲಾಲ,ದಿ. ಸುಳುಗೋಡು ನಾರಾಯಣ,ಕಡಬಾಳ ಉದಯ ಹೆಗ್ಡೆ,ವಿಶ್ವನಾಥ ತೊಂಬಟ್ಟು,ಗಣೇಶ ಬಳೆಗಾರ, ಜಡ್ಕಲ್ ಗೋಪಾಲ ಮೊದಲಾದ ಹಿರಿಯ,ಕಿರಿಯ ಕಲಾವಿದರೊಂದಿಗೆ ತಿರುಗಾಟ ನಡೆಸಿದ್ದಾರೆ... ಸರಳ,ಸಜ್ಜನ,ಪ್ರಾಮಾಣಿಕ ವ್ಯಕ್ತಿತ್ವದ,ಶಂಕರ ನಾಯ್ಕರು,ತನ್ನ ಜೀವನದಲ್ಲಿ ಸ್ವಾಭಿಮಾನ ಮತ್ತು ಶಿಸ್ತುಬದ್ಧತೆಯನ್ನು ರೂಢಿಸಿಕೊಂಡಿದ್ದಾರೆ...ಅತ್ಯಂತ ಕಷ್ಟದ ಪರಿಸ್ಥಿತಿಯಲ್ಲಿ ಬೆಳೆದು ಬಂದ ಇವರು, ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡುವ ಅಭಿಲಾಷೆಯನ್ನು ಹೊಂದಿದ್ದಾರೆ... ಶ್ರೀಮತಿ ರತ್ನ ಇವರನ್ನು ಬಾಳ ಸಂಗಾತಿಯಾಗಿ ಸ್ವೀಕರಿಸಿ, ಶರತ್,ವಿನುತ್,ರಂಜಿತ್ ಮತ್ತು ರಶ್ಮಿತಾ ಎನ್ನುವ ನಾಲ್ಕು ಮಕ್ಕಳನ್ನು ಪಡೆದು ಆದರ್ಶ ಜೀವನವನ್ನು ನಡೆಸುತ್ತಿದ್ದಾರೆ ಯಕ್ಷಗಾನ ರಂಗದಲ್ಲಿ ಇವರ ಕೀರ್ತಿ ಉತ್ತುಂಗಕ್ಕೇರಲಿ,ಇವರಿಗೆ ಉಳ್ಳೂರು ಶ್ರೀ ಬನಶಂಕರಿ ಮತ್ತು ಮರಳುಚಿಕ್ಕು ದೇವಿಯು ಆಯುರಾರೋಗ್ಯ, ಸುಖ ಸಂಪತ್ತನ್ನು ಅನುಗ್ರಹಿಸಲಿ ಎನ್ನುವುದು ಯಕ್ಷಮಂದಾರದ ಶುಭಹಾರೈಕೆ.. ಸಾಹಿತ್ಯ:ಹಾಲಾಡಿ ಸಂತೋಷ ಶೆಟ್ಟಿ.... ನಿರೂಪಣೆ:ಶ್ರೀಮತಿ ಅಮೃತ ಶೆಟ್ಟಿ.. ಮಾಹಿತಿ ಮತ್ತು ಸಹಕಾರ: ಪ್ರಜತ್ ಶೆಟ್ಟಿ ಶೇರ್ಡಿ ಗೈನಾಡಿಮನೆ.. ಹಾಲಾಡಿ ಮೇಳದ ಅಭಿಮಾನಿಗಳುThis is an exhibition of the achievements and life of yakshaartists.
Today our yakshaganas are the famous comedians of Badgutitt, Ullur Shankara Naik who can make the audience laugh through a presentation of humour...
Sri Rama Nayak and D.Siddu Bai were born in The 74 Ullur in Kundapur taluk of Udupi district.
He was obsessed with Yakshagana in his early childhood and was influenced by the disguise of his famous uncle Ullur Narayana Naik. He was a student who had been visiting yakshagana programmes with his uncle and had become a crazy student of Yakshagana. He stayed at home when he was in fourth grade, where he was slow in academic progress and later joined the Kamala Stone Mela. He worked as an assistant and began to play a small role. After four years of working there, he joined the Nagarkodi mela and performed a sick dress. There, he played small comedy characters with the inspiration and guidance of Theappa Ganigar. Later, he joined the Saukur Mela and was a comedian of Kota Suresh Banker, who was a comedian who was fully involved in the comedy with the advice and guidance of the then famous comedian Sulgodu Narayana. He was promoted to the main comedian at Saukur Mela and served for a long period of nineteen years. He has served in the Nilavar mela and has been the main comedian for five years in the Haladi Mela and has been in the yakshagana for a long period of 35 years.
He is one of the famous comedians who is a discretionary comic who has his own unique style of humor, and who is a disgusting and humorous person who does not distort the humour for propaganda.
Chandravali Vilasa's grandmother and Chandagopa, Bhukailasada Mani, Kashimani, Lavakushada Mani, Bhishmavijaya's Brahmin, Dakshayajna's Brahman, Panchjanya's Long, Haladi Kshetra Mahatma's Rakkasaduta and Besta, Chitraksi Kalyana's Grandmother, Gadawara Behinachara, and also the roles of the same episode.
He is also working in the Sri Mahaganapathi Yakshagana team of Raghavendra Mayya during the rainy season and has also performed in a metropolis like Bangalore, Hyderabad, Mumbai, Hubli... He has his own fans and has received many honors.
Raghavendra Mayya, Rakesh Mallya, Sadashiv Ameen, Hadinabala Sripada Hegde, Sridhar Harsikate Ananda Ankola, Acharya, Manjunatha Nawada, Kodaganapati Naik, Kodi Vishwanath Ganiga, Kota Suresh, Kooly Krishna Shetty, Bedradi Narasimha, Narasimha Gudigara, Haradi Sarvaganiga, Hennabailu Sanjeeva Shetty, Hosangadi Ravindra Shetty, Jogu Kulal, D. He has been touring with senior and junior artistes like Sulugodu Narayan, Kadabala UdayHegde, Vishwanath Tombattu, Ganesh Bangalgara, Judkal Gopal and others.
Simple, good and honest personality, Shankar Anayak has developed self-respect and discipline in his life... He grew up in a very difficult situation and wanted to educate children better...
Mrs. Ratna is a partner and has four children Sharad, Vinuth, Ranjit and Rashmita, leading an ideal life
ಯಕ್ಷಮಂದಾರ ವಿಡಿಯೋ ನೋಡಲೋಸುಗವಾಗಿ.
ವಾಹಿನಿಯ ಹೋಮ್ ಪೇಜ್ ಗಾಗಿ: https://www.youtube.com/channel/UCsrL
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: https://www.facebook.com/groups/27334
No comments:
Post a Comment