🌀ಯಕ್ಷ💥ಮಂದಾರ🌀.
ಕಮಲಶಿಲೆ ಮಹಾಬಲ ದೇವಾಡಿಗರ | Kamalashila Mahabala Dewadiga | Famous Yakshagana Comedy | ಇದು ಯಕ್ಷಕಲಾವಿದರ ಸಾಧನೆ ಮತ್ತು ಜೀವನಗಾಥೆಯ ಅನಾವರಣ.. ಇಂದಿನ ನಮ್ಮಯಕ್ಷಸಾಧಕರು.. ಬಡಗುತಿಟ್ಟಿನ ಸುಪ್ರಸಿದ್ದ ಹಾಸ್ಯಗಾರ ಕಮಲಶಿಲೆ ಮಹಾಬಲ ದೇವಾಡಿಗರು... ಯಕ್ಷರಂಗದ ಬಡಗುತಿಟ್ಟಿನ ಹಾಸ್ಯಭೂಮಿಕೆಯಲ್ಲಿ ತನ್ನ ಸಂಪ್ರದಾಯಬದ್ದ ರಾಜಹಾಸ್ಯದ ಮೂಲಕ ಚಿರಪರಿಚಿತರಾದ ಮೇರು ಕಲಾವಿದ ಹಾಸ್ಯದರಸು ಕಮಲಶಿಲೆ ಮಹಾಬಲ ದೇವಾಡಿಗರು.... ಶ್ರೀಯುತರು ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಕಮಲಶಿಲೆ ಸಮೀಪದ ತಟ್ಟೆಗುಳಿ ಎಂಬಲ್ಲಿ ಶ್ರೀ ಮಂಜು ದೇವಾಡಿಗ ಮತ್ತು ಅಕ್ಕಯ್ಯ ದಂಪತಿಗಳ ಸುಪುತ್ರನಾಗಿ ದಿನಾಂಕ:10.10.1955ರಲ್ಲಿ ಜನಿಸಿದರು... ಕಮಲಶಿಲೆ,ಆಜ್ರಿ ಎಂಬ ಹಳ್ಳಿಗಳು ಮೂಲತಃ ಯಕ್ಷಗಾನ ಕಲೆಯ ತವರೂರು... ರಾತ್ರಿಯಾಗುತ್ತಿದ್ದಂತೆ ಸುತ್ತಮುತ್ತಲೂ ಕೇಳಿ ಬರುತ್ತಿದ್ದ ಯಕ್ಷಗಾನದ ಚಂಡೆಮದ್ದಲೆಗಳ ನಾದನಿನಾದಗಳಿಂದ ಆಕರ್ಷಿತರಾಗಿ,ತನ್ನ ನಾಲ್ಕನೆಯ ತರಗತಿಯ ವಿದ್ಯಾಭ್ಯಾಸಕ್ಕೆ ತಿಲಾಂಜಲಿ ನೀಡಿದ ಇವರು ಉಡುಪಿಯ ಯಕ್ಷಗಾನ ಕಲಾಕೇಂದ್ರಕ್ಕೆ ಸೇರಿಕೊಂಡರು...ಅಲ್ಲಿನ ಗುರುಗಳಾಗಿದ್ದ ದಶಾವತಾರಿ ದಿ.ವೀರಭದ್ರ ನಾಯ್ಕರು,ನೀಲಾವರ ರಾಮಕೃಷ್ಣಯ್ಯನವರು ಮತ್ತು ಪ್ರಸಿದ್ಧ ಮದ್ದಳೆವಾದಕರಾದ ಹಿರಿಯಡ್ಕ ಗೋಪಾಲರಾಯರಲ್ಲಿ ಯಕ್ಷಗಾನದ ಸಂಪೂರ್ಣ ಹೆಜ್ಜೆಗಾರಿಕೆಯ ತಾಳ ಮತ್ತು ಲಯಜ್ಞಾನವನ್ನು ಅಭ್ಯಸಿಸಿ,ಶ್ರೀ ಕ್ಷೇತ್ರ ಕಮಲಶಿಲೆ ಮೇಳದಲ್ಲಿ ಗೆಜ್ಜೆಕಟ್ಟಿ ರಂಗಪ್ರವೇಶ ಮಾಡಿದರು...ಅಲ್ಲಿ ಸೇವೆಸಲ್ಲಿಸುತ್ತ ಹಿರಿಯ ಹಾಸ್ಯಗಾರರಾಗಿದ್ದ ವಂಡ್ಸೆ ನಾಗಯ್ಯ ಶೆಟ್ಟಿ ಮತ್ತು ದೇವಪ್ಪ ಗಾಣಿಗರಿಂದ ಹಾಸ್ಯದಲ್ಲಿನ ಮಾತುಗಾರಿಕೆ,ಹಾವಭಾವ,ನಾಟ್ಯಾಭ್ಯಾಸವನ್ನು ಕರಗತಮಾಡಿಕೊಳ್ಳುತ್ತ ಪೂರ್ಣ ಪ್ರಮಾಣದ ಹಾಸ್ಯಗಾರರಾಗಿ ರೂಪುಗೊಂಡರು... ತನ್ನ ಕಲಾಬದುಕಿನಲ್ಲಿ ಸುದೀರ್ಘ ನಲ್ವತೆ0ಟು ವರ್ಷಗಳ ಸೇವೆಯನ್ನು ಸಲ್ಲಿಸಿರುವ ಇವರು,ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಒಂದು ವರ್ಷ,ಕಮಲಶಿಲೆ ಮೇಳದಲ್ಲಿ ಏಳು ವರ್ಷ ಸೇವೆಸಲ್ಲಿಸಿದ ನಂತರ ಮಾರಣಕಟ್ಟೆಯಲ್ಲಿ ಹತ್ತು ವರ್ಷ ಸೇವೆಸಲ್ಲಿಸಿ, ಪ್ರಸ್ತುತ ಮೂವತ್ತು ವರ್ಷದಿಂದ ನಿರಂತರವಾಗಿ ಮಂದಾರ್ತಿ ಮೇಳದಲ್ಲಿ ಕಲಾಸೇವೆಗೈಯುತ್ತಿದ್ದಾರೆ.... ಗಾಂಭೀರ್ಯದಲ್ಲೂ ಹಾಸ್ಯರಸವಿದೆ ಎನ್ನುವುದನ್ನು ತೋರಿಸಿಕೊಟ್ಟು ಯಾವುದೇ ಪ್ರಚಾರವನ್ನು ಬಯಸದೆ ಎಲೆಮೆರೆಯ ಕಾಯಿಯಂತೆ ಕಲಾಸೇವೆ ಗೈಯುತ್ತ ತನ್ನನ್ನು ಸಂಪೂರ್ಣವಾಗಿ ಯಕ್ಷರಂಗಕ್ಕೆ ಸಮರ್ಪಿಸಿಕೊಂಡ ಇವರು ಯಳಬೇರು ಶೇಖರ ಶೆಟ್ಟಿ,ಕಮಲಶಿಲೆ ಆನಂದ ದೇವಾಡಿಗ, ಗೋಳಿಕೆರೆ ಚಂದ್ರ ಗೌಡ,ಕಾನ್ಕಿ ಸುಧಾಕರ ಶೆಟ್ಟಿ ಸೇರಿದಂತೆ,ತನ್ನ ಜೀವನದುದ್ದಕ್ಕೂ ಅನೇಕ ಕಲಾವಿದರರಿಗೆ ಗುರುವಾಗಿ,ತನ್ನ ಅನುಭವವನ್ನು ದಾರೆಯೆರೆದಿದ್ದು,ಹಲವಾರು ಸಂಘ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಯಕ್ಷ ಶಿಕ್ಷಣವನ್ನು ನೀಡುತ್ತಾ ಮುಂದಿನ ಪೀಳಿಗೆಗೆ ಯಕ್ಷಗಾನವನ್ನು ಕೊಂಡೊಯ್ಯುವಲ್ಲಿ ಅವಿರತವಾಗಿ ಶ್ರಮಿಸುತ್ತಿದ್ದಾರೆ... ಬಡಗುತಿಟ್ಟಿನ ಪ್ರಸಿದ್ಧ ಹಾಸ್ಯಗಾರರಾಗಿದ್ದ ಹಾಲಾಡಿ ಕೊರ್ಗು ಹಾಸ್ಯಗಾರರ ಛಾಪನ್ನು ಜೀವನದಲ್ಲಿ ಅಳವಡಿಸಿಕೊಂಡಿರುವ ಇವರು ಕುಂಜಾಲು ರಾಮಕೃಷ್ಣರಂತೆ ಹಾಸ್ಯದಲ್ಲಿ ಯಾವುದೇ ಗಿಮಿಕ್ ಮಾಡದೆ,ಹಾಸ್ಯವನ್ನು ವಿರೂಪಗೊಳಿಸದೆ,ತನ್ನದೇ ಸಾಂಪ್ರಾದಾಯಿಕ ಶೈಲಿಯ ಶಿಸ್ತುಬದ್ಧ ರಾಜಹಾಸ್ಯದ ಮೂಲಕವೇ ಜನಪ್ರಿಯತೆಯನ್ನು ಗಳಿಸಿಕೊಂಡ ಮೇರು ಹಾಸ್ಯಗಾರರು... ದೈನಂದಿನ ಸಾಮಾಜಿಕ ಸನ್ನಿವೇಶಗಳನ್ನು,ಸುಂದರವಾಗಿ ಹಾಸ್ಯದಲ್ಲಿ ಮಿಳಿತಗೊಳಿಸುವ ಚಾಕಚಕ್ಯತೆಯನ್ನು ಹೊಂದಿರುವ ಇವರು ತನ್ನ ಹಾವಭಾವ,ರಂಗನಡೆ ಮತ್ತು ನಾಟ್ಯಶೈಲಿಯಿಂದಲೆ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಬಲ್ಲ ಪ್ರಬುದ್ಧ ಹಾಸ್ಯಗಾರರು.... ಯಕ್ಷಗಾನದ ಹಾಸ್ಯಲೋಕದಲ್ಲಿಯೇ ಅನುಭವದ ಆಗರವಾಗಿ,ಜ್ಞಾನದ ಸಾಗರವಾಗಿ ಗುರುತಿಸಿಕೊಂಡಿರುವ ಇವರು ಪಾಂಡಿತ್ಯಪೂರ್ಣ ಮಾತುಗಾರಿಕೆ ಮತ್ತು ಹಾಸ್ಯರಸಪೂರಿತವಾದ ನಾಟ್ಯಾಭಿನಯದಿಂದ ಯಾವುದೇ ಹಾಸ್ಯ ಪಾತ್ರಕ್ಕಾದರೂ ನ್ಯಾಯ ಒದಗಿಸಿಕೊಡುವಲ್ಲಿ ಹಿಂದೆ ಉಳಿದವರಲ್ಲ...ಇವರ ನಳದಮಯಂತಿಯ ಬಾಹುಕ ಮತ್ತು ಪಾಪಣ್ಣ ವಿಜಯ ಗುಣಸುಂದರಿಯ ಪಾಪಣ್ಣನ ಪಾತ್ರಗಳು ಜನಮಾನಸದಲ್ಲಿ ಸ್ಪುಟವಾದ ಚಿತ್ರಣವನ್ನು ಮೂಡಿಸಿದೆ...ಭೀಷ್ಮ ಪ್ರತಿಜ್ಞೆಯ ಕಂದರ,ಕ್ಷೇತ್ರ ಮಹಾತ್ಮೆಯ ಸುದೇವ ಬ್ರಾಹ್ಮಣ,ಚಂದ್ರಾವಳಿ ವಿಲಾಸದ ಚಂದಗೋಪ, ಶೂರ್ಪನಖಾ ವಿವಾಹದ ವಿದ್ಯುಜಿಹ,ಲವಕುಶ ಕಾಳಗದ ವಾಲ್ಮೀಕಿ,ಪಟ್ಟಾಭಿಷೇಕದ ಮಂಥರೆ, ಕಂಸವದೆಯ ರಾಜರಜಕ ಮೊದಲಾದ ವೇಷಗಳನ್ನು ಜೀವಂತ ಕಡೆದಿಡುವ ಮೂಲಕ ಯಕ್ಷರಂಗದಲ್ಲಿ ಅಚ್ಚಳಿಯದ ಹೆಜ್ಜೆಗುರುತು ಮೂಡಿಸಿದ್ದಾರೆ... ಕರಾವಳಿ,ಮಲೆನಾಡು, ಉತ್ತರಕರ್ನಾಟಕ ಬಾಗದಲ್ಲಷ್ಟೇ ಅಲ್ಲದೆ,ಬೆಂಗಳೂರು, ಹೈದಾರಬಾದ್,ಮುಂಬೈ,ದೆಹಲಿ, ಮೈಸೂರು ಮೊದಲಾದ ಬಾಗಗಳಲ್ಲಿ ತನ್ನ ಪ್ರತಿಭೆಯನ್ನು ಪ್ರದರ್ಶಿಸಿ,ಅಪಾರ ಅಭಿಮಾನಿಗಳ ಪ್ರೀತಿ ಮನ್ನಣೆಗೆ ಪಾತ್ರರಾದ ಇವರು,ಉಡುಪಿ ಕಲಾರಂಗ(ರಿ) ಪ್ರಶಸ್ತಿ,ಬಾಗವತ ಗೋರ್ಪಾಡಿ ವಿಠಲ್ ಪಾಟೀಲ್ ಪ್ರಶಸ್ತಿ,ಆರ್ಗೋಡು ರಾಮಚಂದ್ರ ಶ್ಯಾನುಭೋಗ್ ಪ್ರತಿಷ್ಠಾನದ ಪ್ರಶಸ್ತಿ, ದಿ.ಅರಾಟೆ ಮಂಜುನಾಥ ಸ್ಮಾರಕ ಪ್ರಶಸ್ತಿ ಮತ್ತು 1974ರಲ್ಲಿ ದೆಹಲಿಯ ಸಂಗೀತ ಅಕಾಡೆಮಿಯಿಂದ ಅಭಿಮನ್ಯು ಪಾತ್ರದ ಅತ್ಯುತ್ತಮ ನಿರ್ವಹಣೆಗಾಗಿ ದಿ.ಶಿವರಾಮ ಕಾರಂತರ ಸಮ್ಮುಖದಲ್ಲಿ ಕಂಚಿನ ಪದಕವನ್ನು ಪಡೆದಿದ್ದಾರೆ ಸಾಂಸಾರಿಕ ಬದುಕು ಮತ್ತು ಕಲಾವಲಯದಲ್ಲೂ ಶಿಸ್ತು,ಸರಳತೆ, ಸೌಜನ್ಯದ ಮೂಲಕ ಆದರ್ಶಪ್ರಾಯರಾಗಿರುವ ಇವರು ಶ್ರೀಮತಿ ಕಮಲಾರೊಂದಿಗೆ ಸಂತೃಪ್ತ ವೈವಾಹಿಕ ಜೀವನವನ್ನು ನಡೆಸಿ ಅರುಣ,ವೀಣಾ,ಕಿರಣ ಎನ್ನುವ ಮೂರು ಮಕ್ಕಳನ್ನು ಪಡೆದಿದ್ದು, ಪ್ರಸ್ತುತ ಹೆಮ್ಮಾಡಿ ಸಮೀಪದ ಕಟ್ ಬೆಲ್ತೂರಿನಲ್ಲಿ ವಾಸವಾಗಿದ್ದಾರೆ... ಇವರಿಗೆ ಯಕ್ಷರಂಗದಲ್ಲಿ ಇನ್ನು ಹೆಚ್ಚಿನ ಸೇವೆ ಮಾಡುವ ಬಾಗ್ಯವನ್ನು,ಆಯುರಾರೋಗ್ಯ ಸುಖ ಸಂಪತ್ತನ್ನು ಆ ಜಗನ್ಮಾತೆ ಮಂದಾರ್ತಿ ಶ್ರೀದುರ್ಗಾಪರಮೇಶ್ವರಿಯು ಅನುಗ್ರಹಿಸಲಿ..ಎನ್ನುವ ಶುಭಹಾರೈಕೆಯೊಂದಿಗೆ.... 🌀ಯಕ್ಷ💥ಮಂದಾರ🌀 ಬಳಗ..🙏 ಸಾಹಿತ್ಯ: ಹಾಲಾಡಿ ಸಂತೋಷ ಶೆಟ್ಟಿ... ನಿರೂಪಣೆ: ಅಮೃತ ಶೆಟ್ಟಿ.......
🌀💥🌀
This is an exhibition of the achievements and life of yakshaganaartists.
Today's yakshaganas are.. The famous comedian Kamalashila Mahabal Adewadi...
The great artist, known for his orthodox royal humor in the yakshagana's humour, was the great artist of kamalashile mahabaladewadhi.
Mr. Manju Devadiga and Akkaiah were born on 10.10.1955 at Tateguli near Kamalashila in Kundapur taluk of Udupi district.
Kamalashila, Ajri villages are originally the home of Yakshagana art... As night fell, he was attracted to the sounds of yakshagana chandemadalas and joined the Yakshagana Art Centre in Udupi. The guru, Dasavatari D.Veerbhadra Naik, Neelavara Ramakrishnayya and the famous madalaka gopalaraya, studied the full yakshagana tala and rhythm of yakshagana and entered the stage at Sri Kshetra Kamalashila Mela. He was a full-fledged comedian, mastering the humorous, gestureand dance practice of the veteran comedian, Vandse Nagaiah Shetty and Devappa Ganiga.
He has served for a long period of time in his artcareer, has served for a year at Udupi Yakshagana Kendra, after serving for seven years at Kamalashila Mela and has been in the mandarti mela for thirty years continuously.
He has shown that he has a sense of humor and has dedicated himself to yakshagana, like a leafy nut, and has been a teacher of many artistes throughout his life, including Yalaberu Sekhar Shetty, Kamalashila Ananda Dewadiga, Golikere Chandra Gowda, Kanki Sudhakar Shetty, and has been a teacher of many institutions and has been working continuously to bring yaksha to the next generation.
Haladi Korgu, a famous comedian of Badgutitt, has impressed the humorists in life and has gained popularity with his own traditional style of disciplined humor without making any fun of his comedy like Kunjalu Ramakrishna.
He is a brilliant comic who can mix everyday social situations beautifully in to neat humour and make the audience laugh with his gestures, theatre and dance.
He is known as an ocean of knowledge and experience in the yakshagana comedy world and has not been behind in giving justice to any humorous character with his scholarly speech and humorous dance. His naladamayanti's bahuka and papanna vijaya gunasundari's roles have created a beautiful picture of the people. The bhishma swearing trench, the sudeva brahmin of the kshetra mahatma, chandravali vilasa chandagopa, the vidujiha of the shurpanakha marriage, valmiki of the lavakusha battle, the manthre of the coronation, the king of kansavade, etc. have made a stride in the yaksharanga.
He has been recognized for his talent in the coastal areas of Karnataka, Not only in North Karnataka but also in Bangalore, Hyderabad, Mumbai, Delhi, Mysore and other places, and has been recognized by many fans, including udupi kalaranga (R) award, Bagwatha Gorpadi Vithal Patil Award, Argodu Ramchandra Sanyubhog Foundation Award, D.Arate Manjunatha Memorial Award and Abhimanyu's performance in 1974 by the Music Academy of Delhi.
She is exemplary in domestic life and art, and has three children Arun, Venugopal and Raya, who live in Amarnath, Katbeltoor near Hemmadi.
May the world mother, Mandarti Sri Durga Parameshwari, bless them with the wealth of life and happiness, to serve them in yakshagana. With the best wishes....
🌀yaksh💥mandar🌀 group.. 🙏
Literature: Haladi Santosh Shetty...
Narrative: Amrita Shetty