Tuesday, July 21, 2020

ಯಕ್ಷಮಂದಾರ - 1 | ಸ್ತ್ರೀಪಾತ್ರದಾರಿ ವಿಷ್ಣುಮೂರ್ತಿ ಬಾಸ್ರಿಯವರು | Yakshagana Vishnumoorty Basri |

                                                             🌀ಯಕ್ಷ💥ಮಂದಾರ🌀


ಸ್ತ್ರೀಪಾತ್ರದಾರಿ ವಿಷ್ಣುಮೂರ್ತಿ ಬಾಸ್ರಿಯವರು | Yakshagana Vishnumoorty Basri |


ಇದು ಯಕ್ಷಕಲಾವಿದರ ಸಾಧನೆ ಮತ್ತು ಜೀವನಗಾಥೆಯ ಅನಾವರಣ. ಇಂದಿನ ನಮ್ಮ ಯಕ್ಷಸಾಧಕರು. ಬಡಗುತಿಟ್ಟಿನ ಸುಪ್ರಸಿದ್ದ ಸ್ತ್ರೀಪಾತ್ರದಾರಿ ವಿಷ್ಣುಮೂರ್ತಿ ಬಾಸ್ರಿಯವರು... ಯಕ್ಷಗಾನ ರಂಗದ ಬಡಗುತಿಟ್ಟಿನ ರಂಗಭೂಮಿಕೆಯ ಬಯಲಾಟದ ಮೇಳಗಳಲ್ಲಿ ಪ್ರಧಾನ ಸ್ತ್ರೀಪಾತ್ರದಾರಿಯಾಗಿ ತನ್ನ ಪ್ರಬುದ್ಧ ವೇಷಗಾರಿಕೆಯಿಂದ ಪ್ರಸಿದ್ದರಾಗಿ ತನ್ನದೇ ಹೆಜ್ಜೆಗುರುತು ಮೂಡಿಸಿದ ಹಿರಿಯ ಕಲಾವಿದರಲ್ಲಿ ಖ್ಯಾತನಾಮರಾದವರು ಶ್ರೀಯುತ ವಿಷ್ಣುಮೂರ್ತಿ ಬಾಸ್ರಿಯವರು. ಇವರು ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪದ ಕುಂಜಾಲಿನ ಸಾತ್ವಿಕ ಬ್ರಾಹ್ಮಣ ಕುಟುಂಬದ ಶ್ರೀನಿವಾಸ ಬಾಸ್ರಿ ಮತ್ತು ಸರಸ್ವತಿ ಅಮ್ಮನವರ ಎರಡನೆಯ ಸುಪುತ್ರರಾಗಿ ಜನಿಸಿದರು. ಮಡಿವಂತ ಬ್ರಾಹ್ಮಣ ಮನೆತನದಲ್ಲಿ ಜನಿಸಿದ ಇವರು,ಬಾಲ್ಯದಲ್ಲಿಯೇ ಯಕ್ಷಗಾನದ ಸೆಳೆತಕ್ಕೆ ಸಿಲುಕಿ,ಆಶ್ಚರ್ಯಕರವಾಗಿ ಯಕ್ಷರಂಗದಲ್ಲಿ ಬೆಳೆದು ತನ್ನನ್ನು ಸಂಪೂರ್ಣವಾಗಿ ಯಕ್ಷಕಲಾಮಾತೆಯ ಸೇವೆಗೆ ಸಮರ್ಪಿಸಿಕೊಂಡವರು. ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಸಮರ್ಥ ಯಕ್ಷಗುರುಗಳಾಗಿದ್ದ ನೀಲಾವರ ರಾಮಕೃಷ್ಣಯ್ಯ ಮತ್ತು ಹೆರಂಜಾಲು ವೆಂಕಟರಮಣ ಗಾಣಿಗರ ಗರಡಿಯಲ್ಲಿ ಪಳಗಿ ಕಲೆಯನ್ನು ಕರಗತ ಮಾಡಿಕೊಂಡವರು..ಯಕ್ಷಗಾನ ಕಲೆಯ ಬಗ್ಗೆ ಅಮಿತವಾದ ಉತ್ಸಾಹವನ್ನು ಹೊಂದಿರುವುದರಿಂದ ಅವರ ಶಿಷ್ಯಸಮೂಹದಲ್ಲಿ ಏಕಪಾಠಿಗಳಾಗಿ ಗುರುಗಳಿಬ್ಬರ ಅಂತರಂಗದ ಶಿಷ್ಯನಾಗಿ ಯಕ್ಷರಂಗದ ಪರಿಪೂರ್ಣ ಕಲಾವಿದರಾಗಿ ಮೂಡಿಬಂದರು. ಮೂಲ್ಕಿ ಮೇಳದಲ್ಲಿ ಗೆಜ್ಜೆಕಟ್ಟಿ ಬಾಲಗೋಪಾಲ ವೇಷದಾರಿಯಾಗಿ ರಂಗಪ್ರವೇಶ ಮಾಡಿದ ಇವರು,ನಂತರ ಕೋಟ ಅಮೃತೇಶ್ವರಿ ಮೇಳದಲ್ಲಿ ಸಖಿ ಸ್ತ್ರೀವೇಷದಾರಿಯಾಗಿ ಸೇವೆಸಲ್ಲಿಸಿದರು..ನಂತರ ಕಮಲಶಿಲೆ ಮೇಳವನ್ನು ಸೇರಿದ ಇವರು ಪ್ರಧಾನ ಸ್ತ್ರೀವೇಷಧಾರಿಯಾದರು...ಅಲ್ಲಿಂದ ಸೌಕೂರು ಮೇಳದಲ್ಲಿ ಸುದೀರ್ಘ ಕಾಲ ಪ್ರಧಾನ ಸ್ತ್ರೀ ವೇಷದಾರಿಯಾಗಿ ಸೇವೆಸಲ್ಲಿಸಿದ ಇವರು ತನ್ನ ಪ್ರಬುದ್ಧ ಅಭಿನಯದಿಂದ ಜನಪ್ರಿಯತೆಯನ್ನು ಗಳಿಸಿಕೊಂಡರು...ಸೌಕೂರು ಮೇಳದಲ್ಲಿರುವ ಕಾಲದಲ್ಲಿ ಯಕ್ಷಗಾನದ ಹಿರಿಯ ಕಲಾವಿದರಾದ ಕೋಡಿ ವಿಶ್ವನಾಥ ಗಾಣಿಗ ಮತ್ತು ಕೋಟ ಸುರೇಶರ ಸಾಂಗತ್ಯದಲ್ಲಿ ರಂಗದಲ್ಲಿನ ಪರಿಪೂರ್ಣ ಜ್ಞಾನವನ್ನು ಸಿದ್ಧಿಸಿಕೊಂಡರು... ಸ್ತ್ರೀ ಪಾತ್ರಕೋಪ್ಪುವ ಒನಪು ವೈಯಾರದ ರಂಗನಡೆ,ಅಪಾರ ಪ್ರತ್ಯುತ್ಪನ್ನಮತಿತ್ವ,ಪಾತ್ರಕೋಪ್ಪುವ ಆಳಾಂಗ, ಸುಸ್ವರದ ಕಂಠಸಿರಿ,ಹಿತಮಿತವಾದ ಮಾತು,ಸುಂದರವಾದ ವೇಷಭೂಷಣ, ಮಾದಕ ಸೌಂದರ್ಯದ ಮುಖಚರ್ಯೆಯಿಂದ ಬಡಗಿನ ಬೆಡಗಿನ ಸಂಪ್ರದಾಯದ ಕೊಂಡಿಯಾಗಿ ಗುರುತಿಸಿಕೊಂಡ ಪ್ರಸಿದ್ಧ ಸ್ತ್ರೀಪಾತ್ರಧಾರಿಗಳಲ್ಲಿ ಇವರು ಸುಪ್ರಸಿದ್ದರು.... ವೀರರಸದ ಕಸೆವೇಷಗಳಿಗೆ ಹೇಳಿಮಾಡಿಸಿದ ಇವರ ಆಳಾಂಗ,ಸ್ವರತ್ರಾಣಗಳಿಂದ ದ್ರೌಪತಿ ಪ್ರತಾಪದ ದ್ರೌಪತಿ,ಮೀನಾಕ್ಷಿ ಕಲ್ಯಾಣದ ಮೀನಾಕ್ಷಿ,ಮದನಾಕ್ಷಿ,ತಾರಾವಳಿ,ಆಸ್ತಿ ಪ್ರಹಸ್ತಿ,ಸುಭದ್ರೆ,ಪದ್ಮಗಂಧಿನಿ,ಪ್ರಮೀಳೆ ಮುಂತಾದ ವೇಷಗಳ ಸಮರ್ಥ ನಿರ್ವಹಣೆಯಿಂದ ಅಪಾರ ಜನಮನ್ನಣೆಗೆ ಪಾತ್ರರಾಗಿದ್ದಾರೆ..ಸೌಮ್ಯ ಪಾತ್ರಗಳಲ್ಲೂ ಪಾತ್ರದ ಚೌಕಟನ್ನು ಮೀರದೆ ಚಾಕಚಕ್ಯತೆಯಿಂದ ಅಭಿನಯಿಸಬಲ್ಲ ಇವರು, ಸೀತೆ,ಸಾವಿತ್ರಿಚಂದ್ರಮತಿ, ರುಚಿಮತಿ,ಮಂಡೋದರಿ,ಗಿರಿಜೆ,ದಮಯಂತಿ, ದಾಕ್ಷಾಯಿಣಿ ಮೊದಲಾದ ಪಾತ್ರಗಳಲ್ಲಿ ತನ್ನ ಸ್ವರತ್ರಾಣ ಮತ್ತು ಅಪಾರ ಪ್ರತ್ಯುತ್ಪನ್ನಮತಿತ್ವದಿಂದ ಸುಂದರವಾಗಿ ಅಭಿವ್ಯಕ್ತಿಗೊಳಿಸಿ ಬಡಗಿನ ಸುಪ್ರಸಿದ್ಧ ಸ್ತ್ರೀ ಪಾತ್ರಧಾರಿಯಾಗಿ ಗುರುತಿಸಿಕೊಂಡು ಜನಮಾನಸದಲ್ಲಿ ಆಳವಾದ ಪ್ರಭಾವವನ್ನು ಬೀರಿದ ಮೇರು ಕಲಾವಿದರಿವರು... ಜೋಡಾಟದಲ್ಲೂ ಅನಿವಾರ್ಯತೆ ಎದುರಾದಾಗ ಎರಡು ಮೂರು ವೇಷಗಳನ್ನು ನಿರ್ವಹಿಸಿ,ಎದುರು ಮೇಳಕ್ಕೆ ಸಮರ್ಥ ಪೈಪೋಟಿಯನ್ನು ನೀಡಿ ಸೈ ಎನಿಸಿಕೊಂಡ ಇವರು,ಮೀನಾಕ್ಷಿ ಕಲ್ಯಾಣದ ಮೀನಾಕ್ಷಿ ಪಾತ್ರದಲ್ಲಿನ ಅತ್ಯುತ್ತಮವಾದ ಅಭಿನಯದಿಂದ ಜೋಡಾಟ ಪ್ರೀಯರ ಮನಗೆದ್ದಿದ್ದಾರೆ... ಪ್ರಸ್ತುತ ಮಂದಾರ್ತಿ ಮೇಳದಲ್ಲಿ ಪ್ರಧಾನ ಸ್ತ್ರೀಪಾತ್ರದಾರಿಯಾಗಿ ಸುದೀರ್ಘ ಕಾಲದಿಂದ ಸೇವೆಸಲ್ಲಿಸುತ್ತಿರುವ ಇವರು ಮಂದಾರ್ತಿ ಕ್ಷೇತ್ರ ಮಹಾತ್ಮೆಯ ದೇವರತಿ, ದೇವಿ ಮತ್ತು ಶ್ರೀ ದೇವಿ ಮಹಾತ್ಮೆಯ ಶ್ರೀ ದೇವಿಯ ಪಾತ್ರದಲ್ಲಿ ತನ್ನ ಬಾವಪೂರ್ಣ ಅಭಿನಯದಿಂದ ಕಲಾಭಿಮಾನಿಗಳ ಮನದಂಗಳದಲ್ಲಿ ಮರೆಯದ ಹೆಜ್ಜೆಗುರುತು ಮೂಡಿಸಿದ್ದಾರೆ ತನ್ನ ಸುದೀರ್ಘ ಕಲಾಜೀವನದಲ್ಲಿ ಎಲ್ಲಿಯೂ ಪ್ರಚಾರ ಬಯಸದೆ,ಎಲೆಮರೆಯ ಕಾಯಿಯಂತೆ ಕಲಾಕೈಂಕರ್ಯದಲ್ಲಿ ತೊಡಗಿಸಿಕೊಂಡು,ಸಹಕಲಾವಿದರನ್ನು ಸದಾ ಪ್ರೋತ್ಸಾಹಿಸುವ ಗುಣಗ್ರಾಹಿಯಾಗಿರುವ ಇವರು,ತನ್ನ ಸರಳ ಸೌಜನ್ಯ ಮತ್ತು ಶಿಸ್ತುಬದ್ದ ಜೀವನಶೈಲಿಯಿಂದ ತನ್ನ ಕಲಾಜೀವನದಲ್ಲಿ ಅಜಾತಶತ್ರುವಾಗಿ ಮೆರದವರು.. ಯಕ್ಷಸಮೂಹ ಯಕ್ಷಕಲಾ ಪ್ರತಿಷ್ಠಾನ(ರಿ)ಕುಂಜಾಲು ಎಂಬ ಯಕ್ಷಗಾನ ಸಂಸ್ಥೆಯನ್ನು ಹುಟ್ಟುಹಾಕಿ, ಅನೇಕ ಯಕ್ಷಗಾನ ಆಸಕ್ತ ವಿದ್ಯಾರ್ಥಿಗಳಿಗೆ ತನ್ನ ಜ್ಞಾನವನ್ನು ದಾರೆಯೆರಿದಿರುವ ಇವರು,ಬಡಗುತಿಟ್ಟಿನ ಅನೇಕ ಬಡ ಕಲಾವಿದರಿಗೆ ಸಹಾಯಹಸ್ತವನ್ನು ಚಾಚಿದ್ದಾರೆ..ತನ್ನ ಜೀವನವನ್ನೇ ಕಲಾಮಾತೆಯ ಸೇವೆಗೆ ಮುಡಿಪಾಗಿರಿಸಿದ ಇವರು,ಹಲವಾರು ಶಿಷ್ಯರ ಅಚ್ಚುಮೆಚ್ಚಿನ ಗುರುವಾಗಿಯೂ,ಅಸಂಖ್ಯಾತ ಅಭಿಮಾನಿಗಳ ಪ್ರೀತಿಯ ಕಲಾವಿದರಾಗಿಯೂ ಗುರುತಿಸಿಕೊಂಡಿದ್ದಾರೆ.. ಕರಾವಳಿ, ಮಲೆನಾಡು,ಬೆಂಗಳೂರು,ಮುಂಬೈ,ಮೈಸೂರು ಮತ್ತು ಉತ್ತರಕರ್ನಾಟಕ ಬಾಗದಲ್ಲಿ ತಿರುಗಾಟವನ್ನು ನಡೆಸಿ, ಅಪಾರ ಅಭಿಮಾನಿಗಳನ್ನು ಹೊಂದಿರುವ ಇವರಿಗೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತು ಕೊಡಮಾಡುವ ಪ್ರಶಸ್ತಿ ,ಬ್ರಹ್ಮಾವರ ವಲಯ ವಿಪ್ರ ಪರಿಷತ್ತಿನ ವತಿಯಿಂದ ಸನ್ಮಾನ, ಯಕ್ಷಸಮೂಹ ಯಕ್ಷಕಲಾ ಪ್ರತಿಷ್ಠಾನ(ರಿ)ಕುಂಜಾಲು ಇದರ ದಶಮಾನೋತ್ಸವದ ಸಂದರ್ಭದಲ್ಲಿ ಬೆಳ್ಳಿಯ ಕಿರೀಟವನ್ನು ನೀಡಿ ಸನ್ಮಾನ ಮತ್ತು ಗುರುವಂದನೆ..25ನೆಯ ವರ್ಷದ ತಿರುಗಾಟ ಪೂರೈಸಿದ ಸಂದರ್ಭದಲ್ಲಿ ಶಿವಾಜಿ ಗೆಳೆಯರ ಬಳಗದಿಂದ ಹುಟ್ಟೂರ ಸನ್ಮಾನ ಮತ್ತು ಮಲೆನಾಡಿನ ಅನೇಕ ಕಡೆ ಸನ್ಮಾನವನ್ನು ಪಡೆದುಕೊಂಡಿದ್ದಾರೆ... ತನ್ನ ವೈಯುಕ್ತಿಕ ಬದುಕಿನಲ್ಲಿಯೂ ಶಿಸ್ತುಬದ್ಧತೆ ಮತ್ತು ಸರಳತೆಯನ್ನು ಮೈಗೂಡಿಸಿಕೊಂಡಿರುವ ಇವರು ಶ್ರೀಮತಿ ಹೇಮಾ.ವಿ.ಬಾಸ್ರಿಯವರನ್ನು ಬಾಳ ಸಂಗಾತಿಯಾಗಿ ಸ್ವೀಕರಿಸಿ ಯಕ್ಷಗಾನದ ಹವ್ಯಾಸಿ ಬಾಗವತರಾಗಿ ಮತ್ತು ಮೆಕ್ಯಾನಿಕಲ್ ಎಂಜಿನಿಯರ್ ಆಗಿ ದುಡಿಯುತ್ತಿರುವ ಕಾರ್ತಿಕ್.ವಿ.ಬಾಸ್ರಿ ಎನ್ನುವ ಏಕೈಕ ಪುತ್ರನನ್ನು ಪಡೆದಿದ್ದು ಆದರ್ಶ ಜೀವನವನ್ನು ನಡೆಸುತ್ತಿದ್ದಾರೆ.. ಇವರಿಗೆ ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿಯು ವೃತ್ತಿ ಮತ್ತು ಸಾಂಸಾರಿಕ ಬದುಕಿನಲ್ಲಿ ಆರೋಗ್ಯ,ಐಶ್ವರ್ಯ,ಸುಖ ನೆಮ್ಮದಿಯನ್ನು ನೀಡಲಿ ಎನ್ನುವ ಸದಾಶಯದೊಂದಿಗೆ. 🌀ಯಕ್ಷ 💥ಮಂದಾರ🌀 ಬಳಗ.🙏 ✍️ ಹಾಲಾಡಿ ಸಂತೋಷ ಶೆಟ್ಟಿ. 🎤 ಅಮೃತ ಶೆಟ್ಟಿ. ವಾಹಿನಿಯ ಹೋಮ್ ಪೇಜ್ ಗಾಗಿ: https://www.youtube.com/channel/UCsrL. ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: https://www.facebook.com/groups/27334.


                                                    🌀💥🌀

This is the exhibition of the achievements and life story of yakshaganaartists.

Today our yakshakas are. The famous lady of the badgutti, Vishnumurthy Basree...

Mr. Vishnumurthy Basri was one of the veteran artistes who made his own footprint sculpture.

He was born as the second son of Srinivasa Basri and Saraswathi Amma of the Satviva Brahman family in Kunjal near Brahmavar in Udupi district.

Born into a brahmin family, he was a child and was a strangely young man who grew up in yakshagana and dedicated himself to the service of yakshakalamata.

The yakshagana gurus of Udupi, Neelavara Ramakrishnayya and Heranjalu Venkataramana, mastered the art of palagi in the garadi of The Ganigara. With an unlimited enthusiasm for yakshagana art, he became a monologue in his discipleship and became the inner disciple of the two masters and become the perfect artist of yakshagana.

He entered the stage as a balgopal attire at Moolki Mela and later served as a sakhi woman at kota amritswari mela. Later, he joined the Kamalastone Mela and became the chief female dresser. From there, she served as a leading female attire for a long time at The Saukur Mela and gained popularity with her mature acting. During the Saukur Mela, yakshagana's veteran artists Kodi Vishwanath Ganiga and Kota Suresh had acquired the perfect knowledge of the stage.

He is famous for his female character, the great esteem, the character's adventure, the beautiful voice, the beautiful voice, the beautiful dress, the beauty of the beauty of the charming beauty.

His adoration and svaratranas are well known for his disguise and his performance in the disguise of Draupadi Pratap, Meenakshi Kalyana, Madanakshi, Taravali, Property Prahasti, Subhadra, Padmagandini, Pramile etc. He is a gentle man who can act with a skill and not exceed the character square, but he has been a profound lyricist who has made a profound impression in the popular ity of the carpenter, who has been a beautiful lyricist in the roles of Seethe, Savitri Chandramati, Ruchimati, Mandodari, Girije, Damayanti, Dakshaini and others.

He has managed to perform two or three dresses and compete with the opposite mela and has won the hearts of The Jodata Lovers with his outstanding performance in meenakshi kalyana.

She has been a leading female lead in the Mandarti Mela for a long time and has made a forgotten footprint in the hearts of the artistes with his performance in the role of Goddess of Mahatma, Devi and Sri Devi of Mahatma.

He is a man who has always been a person who has been a man of great encouragement and a disciplinary lifestyle, without any desire to promote his long art.

He has established yakshagana foundation kunjalu and has given his knowledge to many yakshagana interested students and has extended his hand to many poor artistes of Badaguthitt. He dedicated his life to the service of the mother of arts, became a favourite teacher of many disciples and a favorite artist of many fans.

He has a huge audience in the coastal, Malnad, Bangalore, Mumbai, Mysore and Uttara Karnataka region, with the Udupi District Rajya Sabha Award, Award by Kannada Sahitya Parishad, Brahmavara Zonal Vipra Parishad, Yakshagana Yakshakala Foundation (R) Kunjalu, who has a huge audience, was awarded with a silver crown on the occasion of its 100th anniversary. On the occasion of the 25th year of the tour, Shivaji has received the honor of his friends and the honour of the village rs.

He has also been disciplined and simplicity in his personal life and has taken Mrs. Hema V. Basri as his partner and has the only son, Kartik V Basri, who is a amateur and mechanical engineer of Yakshagana.

With the wish of Sri Mandarthi Durga Parameshwari to give them health, wealth and happiness in their professional and domestic life.

🌀💥🌀 🙏

✍️ Haladi Santosh Shetty...

🎤 Amritshetty......


Like Facebook page to watch video there: https://www.facebook.com/groups/27334

No comments:

Post a Comment

#ಯಕ್ಷಮಂದಾರ - 51 | ಹೆನ್ನಾಬೈಲು ಸಂಜೀವ ಶೆಟ್ಟಿ | Hennabailu Sanjeeva Shetty | ಪ್ರಸಿದ್ದ ಸ್ತ್ರೀಪಾತ್ರದಾರಿ |

🌀ಯಕ್ಷ💥ಮಂದಾರ🌀 #ಯಕ್ಷಮಂದಾರ  - 51 | ಹೆನ್ನಾಬೈಲು ಸಂಜೀವ ಶೆಟ್ಟಿ | Hennabailu Sanjeeva Shetty | ಪ್ರಸಿದ್ದ ಸ್ತ್ರೀಪಾತ್ರದಾರಿ...