Saturday, January 16, 2021

#ಯಕ್ಷಮಂದಾರ - 51 | ಹೆನ್ನಾಬೈಲು ಸಂಜೀವ ಶೆಟ್ಟಿ | Hennabailu Sanjeeva Shetty | ಪ್ರಸಿದ್ದ ಸ್ತ್ರೀಪಾತ್ರದಾರಿ |

🌀ಯಕ್ಷ💥ಮಂದಾರ🌀


#ಯಕ್ಷಮಂದಾರ - 51 | ಹೆನ್ನಾಬೈಲು ಸಂಜೀವ ಶೆಟ್ಟಿ | Hennabailu Sanjeeva Shetty | ಪ್ರಸಿದ್ದ ಸ್ತ್ರೀಪಾತ್ರದಾರಿ |

ಇದು ಯಕ್ಷ ಕಲಾವಿದರ ಸಾದನೆ ಮತ್ತು ಜೀವನಗಾಥೆಯ ಅನಾವರಣ.. ಕನ್ನಡದಲ್ಲಿ ಸಿರಿಗನ್ನಡಂ ಗೆಲ್ಗೆ ಎನ್ನುವಂತೆ ,ನಮ್ಮ ಕರಾವಳಿಯಲ್ಲಿ ಯಕ್ಷಗಾನಂ ಗೆಲ್ಗೆ ಎನ್ನುವ ಮಾತಿದೆ..ಕರಾವಳಿಯ ಗಂಡುಕಲೆಯಾದ ಯಕ್ಷಗಾನವು ಕರ್ನಾಟಕದ ಎಲ್ಲ ಜಾನಪದೀಯ ಕಲೆಗಳಿಗಿಂತಲೂ ಹೆಚ್ಚು ಆಕರ್ಷಣೆ ಮತ್ತು ವೈಶಿಷ್ಟ್ಯಗಳನ್ನು ಹೊಂದಿರುವ ಕಲೆ...ಈ ಕಲೆಯ ಮೇಲೆ ವ್ಯಾಮೋಹ ಹುಟ್ಟಿತೆಂದರೆ ಅದು ಜೀವನದುದ್ದಕ್ಕೂ ಅವನನ್ನು ಕೈಬೀಸಿ ಕರೆಯುತ್ತದೆ...ಅಂತಹ ಯಕ್ಷಗಾನದ ಮೇಲಿನ ಅಭಿಮಾನದಿಂದಲೇ ಯಕ್ಷಗಾನ ಕ್ಷೇತ್ರದತ್ತ ಆಕರ್ಷಿತರಾದವರು ಬಡಗುತಿಟ್ಟಿನ ಸುಪ್ರಸಿದ್ಧ ಸ್ತ್ರೀಪಾತ್ರದಾರಿ ಹೆನ್ನಾಬೈಲು ಸಂಜೀವ ಶೆಟ್ಟಿಯವರು... ಇವರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಸಿದ್ದಾಪುರ ಸಮೀಪದ ಹೆನ್ನಾಬೈಲು ಎಂಬ ಪುಟ್ಟ ಗ್ರಾಮದಲ್ಲಿ ದಿ.ಶ್ರೀ ಅಂತಯ್ಯ ಶೆಟ್ಟಿ ಮತ್ತು ದಿ. ಪಾರ್ವತಿ ಶೆಡ್ತಿಯವರ ಪುತ್ರನಾಗಿ ದಿನಾಂಕ:02.06.1973ರಲ್ಲಿ ಜನಿಸಿದರು. ತಾನು ಪ್ರಾಥಮಿಕ ವಿದ್ಯಾಭ್ಯಾಸ ಮಾಡುತ್ತಿರುವ ಸಮಯದಲ್ಲಿ,ಹಾಲಾಡಿ ಮೇಳದವರ ಯಕ್ಷಗಾನ ಪದರ್ಶನವನ್ನು ಕಂಡು ಆಕರ್ಷಿತರಾಗಿ,ಖ್ಯಾತ ಹಾಸ್ಯಗಾರರಾದ ಶಿವರಾಮ ಭಟ್ಟರ ಪ್ರೇರಣೆಯಿಂದ 1983 84ರ ಸಾಲಿನಲ್ಲಿ ಹಾಲಾಡಿ ಮೇಳದಲ್ಲಿ ಗೆಜ್ಜೆಕಟ್ಟಿ ರಂಗಪ್ರವೇಶ ಮಾಡಿದರು..ಪ್ರಸಿದ್ಧ ವೇಷಧಾರಿಗಳಾದ ಆರ್ಗೋಡು ಮೋಹನದಾಸ ಶೆನೈ ಮತ್ತು ದಿ.ಅರಾಟೆ ಮಂಜುನಾಥರಲ್ಲಿ ಯಕ್ಷಗಾನದ ನೃತ್ಯ,ವೇಷಗಾರಿಕೆ ಮತ್ತು ಮಾತುಗಾರಿಕೆಯ ಜ್ಞಾನವನ್ನು ಪಡೆದರು. ನಂತರದ ದಿನಗಳಲ್ಲಿ ತಿರುಗಾಟದ ಅವಧಿಯಲ್ಲಿ ಹಿರಿಯ ಕಲಾವಿದರ ಒಡನಾಟದಿಂದ ಯಕ್ಷಗಾನದ ಪ್ರಸಂಗದ ಆಳವಾದ ಜ್ಞಾನವನ್ನು ಕರಗತಮಾಡಿಕೊಳ್ಳುತ್ತ ಮಾತುಗಾರಿಕೆ ಮತ್ತು ನಾಟ್ಯದಲ್ಲಿ ಹೆಚ್ಚಿನ ಅನುಭವವನ್ನು ಸಂಪಾದಿಸಿದರು..ಪುರುಷ ಮತ್ತು ಸ್ತ್ರೀಪಾತ್ರಗಳೆರಡನ್ನು ನಿರ್ವಹಿಸುತ್ತ ಬಂದ ಇವರು ನಂತರದ ದಿನಗಳಲ್ಲಿ ಸ್ತ್ರೀಪಾತ್ರದಲ್ಲಿ ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಂಡು ಪ್ರಧಾನ ಸ್ತ್ರೀಪಾತ್ರದಾರಿಯಾಗಿ ಗುರುತಿಸಿಕೊಂಡರು. ಕಮಲಶಿಲೆ, ಮಂದಾರ್ತಿ,ಸೌಕೂರು, ಪೆರ್ಡೂರು,ಹಾಲಾಡಿ ಮೇಳದಲ್ಲಿ ಸೇವೆಸಲ್ಲಿಸಿದ ಇವರು ಪ್ರಸ್ತುತ ಮಾರಣಕಟ್ಟೆ ಮೇಳದಲ್ಲಿ ಪ್ರಧಾನ ಸ್ತ್ರೀಪಾತ್ರದಾರಿಯಾಗಿ ಸೇವೆಸಲ್ಲಿಸುತ್ತಿದ್ದಾರೆ. ಸ್ತ್ರೀಪಾತ್ರಕೋಪ್ಪುವ ರೂಪ,ಆಕರ್ಷಕ ಅಂಗಸೌಷ್ಠವ,ಸುಮದುರವಾದ ಕಂಠಸಿರಿ,ಅಗಾಧವಾದ ಪ್ರಸಂಗ ಜ್ಞಾನ,ಮನಮೋಹಕವಾದ ನಾಟ್ಯಶೈಲಿಯಿಂದ ಯಾವುದೇ ಪ್ರಸಂಗದ ಯಾವುದೇ ಪಾತ್ರವನ್ನಾದರೂ ನಿರ್ವಹಿಸಬಲ್ಲರು... ಶೃಂಗಾರ, ವೀರ,ಭಾವನಾತ್ಮಕ ಪಾತ್ರಗಳಿಗೆ ಜೀವ ತುಂಬಿ ಅಭಿನಯಿಸಬಲ್ಲ ಇವರು ದೇವಿಮಹಾತ್ಮೆಯ ಶ್ರೀ ದೇವಿಯ ಪಾತ್ರದಲ್ಲಿನ ಅಭಿನಯದಿಂದ ಜನಮನ್ನಣೆ ಪಡೆದಿದ್ದಾರೆ...ಭಕ್ತಿಪ್ರಧಾನವಾದ ಶ್ರೀದೇವಿಯ ಪಾತ್ರದಲ್ಲಿ ಶೃಂಗಾರಭರಿತಳಾಗಿ,ವೀರಾವೇಶದಿಂದ ಸಿಂಹವಾಹಿನಿಯಾಗಿ ಬರುವ ಸನ್ನಿವೇಶದಲ್ಲಿ ಇವರ ಅಭಿನಯವನ್ನು ಮೆಚ್ಚಿಕೊಳ್ಳದೆ ಇರುವ ಕಲಾಭಿಮಾನಿಗಳು ವಿರಳ ಎನ್ನಬಹುದು.ಅಭಿಮನ್ಯು ಕಾಳಗದ ಸುಭದ್ರೆ,ದ್ರೌಪದಿ ಪ್ರತಾಪದ ದ್ರೌಪತಿ,ಭೀಷ್ಮವಿಜಯದ ಅಂಬೆ,ದಕ್ಷಯಜ್ಞದ ದಾಕ್ಷಯಣಿ,ಮೀನಾಕ್ಷಿ ಕಲ್ಯಾಣದ ಮೀನಾಕ್ಷಿ,ಸುದರ್ಶನ ವಿಜಯದ ಲಕ್ಷೀದೇವಿ,ಪ್ರಮೀಳೆ,ಶಶಿಪ್ರಭೆ, ಭ್ರಮರಕುಂತಲೆ,ಚಂದ್ರಮತಿ,ಗುಣಸುಂದರಿ,ಪ್ರಭಾವತಿ, ಪಾಂಚಜನ್ಯದ ಮೃತ್ಯುಮಾಲಿನಿ,ದಮಯಂತಿ,ಮದನಾಕ್ಷಿ, ಚಿತ್ರಾಂಗದೆ ಮೊದಲಾದ ಪಾತ್ರಗಳು ಇವರಿಗೆ ಪ್ರಸಿದ್ಧಿಯನ್ನು ತಂದುಕೊಟ್ಟಿದೆ.ಮಹಿಷಾಸುರನ ಪಾತ್ರವನ್ನು ನಿರ್ವಹಿಸಿ ಸೈ ಎನ್ನಿಸಿಕೊಂಡಿದ್ದಾರೆ. ಕರ್ನಾಟಕದಲ್ಲಷ್ಟೇ ಅಲ್ಲದೆ ಮುಂಬೈ,ಹೈದರಾಬಾದ್ ನಂತಹ ಮಹಾನಗರಗಳಲ್ಲಿಯೂ ಪ್ರದರ್ಶನ ನೀಡಿರುವ ಇವರಿಗೆ ಡಾ.ಶಾಂತರಾಮ ಪ್ರಶಸ್ತಿ,ಮಂಗಳೂರಿನ ಕಲ್ಕೂರ ಪ್ರಶಸ್ತಿ,ಕರ್ನಾಟಕ ಕರಾವಳಿ ಮೈತ್ರಿ ಸಂಘ(ರಿ) ಕೊಡಮಾಡುವ ಪ್ರಶಸ್ತಿ,ಬೈಂದೂರು ಬಂಟರ ಸಂಘದಿಂದ ಸನ್ಮಾನ,ಮೂಡ್ಲಕಟ್ಟೆ ನವಗ್ರಹ ಕ್ರಿಕೆಟರ್ಸ್ ಇವರಿಂದ ಸನ್ಮಾನ ಸೇರಿದಂತೆ ನಾಡಿನಾದ್ಯಂತ ಅಭಿಮಾನಿಗಳು ಮತ್ತು ಸಂಘಸಂಸ್ಥೆಗಳಿಂದ ಹಲವು ಪ್ರಶಸ್ತಿ,ಸಮ್ಮಾನಗಳು ದೊರೆತಿವೆ.. ಶ್ರೀಮತಿ ಕುಸುಮ ಇವರನ್ನು ಬಾಳ ಸಂಗಾತಿಯಾಗಿ ಸ್ವೀಕರಿಸಿ,ಪ್ರಶಾಂತ, ಪ್ರದೀಪ, ಪ್ರತ್ವಿಕ್ ಎಂಬ ಮಕ್ಕಳನ್ನು ಪಡೆದಿರುವ ಇವರು ಸುಖಸಂಸಾರವನ್ನು ನೆಡೆಸುತ್ತಿದ್ದಾರೆ... ತನ್ನ ವೃತ್ತಿ ಮತ್ತು ಸಾಂಸಾರಿಕ ಜೀವನದಲ್ಲಿ ಸರಳತೆ ಮತ್ತು ಶಿಸ್ತುಬದ್ಧತೆಯನ್ನು ಅಳವಡಿಸಿಕೊಂಡಿರುವ ಸೌಮ್ಯಸ್ವಭಾವದ ಇವರಿಗೆ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ಮತ್ತು ಮರಳುಚಿಕ್ಕು ದೇವಿಯು,ಸರ್ವಸಂಪತ್ತನ್ನು ನೀಡಿ,ಇವರ ಮುಂದಿನ ಕಲಾಬದುಕು ಸುಗಮವಾಗಿ ಸಾಗುವಂತೆ ಅನುಗ್ರಹಿಸಲಿ ಎನ್ನುವುದು ನಮ್ಮ ಯಕ್ಷಮಂದಾರದ ಶುಭಹಾರೈಕೆ ಸಾಹಿತ್ಯ:ಹಾಲಾಡಿ ಸಂತೋಷ ಶೆಟ್ಟಿ ನಿರೂಪಣೆ:ಶ್ರೀಮತಿ ಅಮೃತಾ ಶೆಟ್ಟಿ Yakshamandar This is the story of the yakshaartists and the story of life. In Kannada, it is said that yakshaganam gellge is the name of 'Yakshaganam' on our coast. Yakshagana, the male art of the coast, has more attraction and features than all the folk arts of Karnataka. The passion for this art will wave him all his life... The famous female character of Badaguthitta, Hennabailu Sanjeeva Shetty, was attracted to the yakshagana field because of his pride in yakshagana. He is a small village in Hennabailu near Kondapur taluk in Udupi district. Parvathi was born as the son of Shetti on 02.06.1973. He was attracted to the yakshagana of Haladi Mela while he was in elementary education and was inspired by the famous comedian Shivaram Bhatt, who made his debut at haladi mela in 1983 84. The famous attire saints Argodu Mohandas Shenai and D Arathe manjunatha gained knowledge of yakshagana dance, costume and speech. Later, he acquired a great experience in speech and dance, mastering the deepknowledge of the yakshagana episode through the interaction of senior artistes during the later period. He played both male and female roles and later became a female character. She has served in Kamalashila, Mandarthi, Saukur, Perdur, Haladi mela and is currently serving as the main female role in the Maranakate Mela. The female character is a beautiful body, a beautiful voice, a great context, a great sense of dancing, a charming dance style that can play any part of any episode. ವಾಹಿನಿಯ ಹೋಮ್ ಪೇಜ್ ಗಾಗಿ: https://www.youtube.com/channel/UCsrLaqAHspFB-wn7izLSb_w ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: https://www.facebook.com/groups/2733422163561846

Thursday, January 14, 2021

#ಯಕ್ಷಮಂದಾರ - 50 | ಮಜ್ಜಿಗೆಬೈಲು ಆನಂದ ಶೆಟ್ಟಿ| Majjigebail Ananda Shetty | Mandarthi | ಯಕ್ಷ ಸಾದನೆ |

🌀ಯಕ್ಷ💥ಮಂದಾರ🌀


#ಯಕ್ಷಮಂದಾರ - 50 | ಮಜ್ಜಿಗೆಬೈಲು ಆನಂದ ಶೆಟ್ಟಿ| Majjigebail Ananda Shetty | Mandarthi | ಯಕ್ಷ ಸಾದನೆ |

ಇದು ಯಕ್ಷ ಕಲಾವಿದರ ಸಾದನೆ ಮತ್ತು ಜೀವನಗಾಥೆಯ ಅನಾವರಣ.. ಇಂದಿನ ನಮ್ಮ ಯಕ್ಷಸಾಧಕರು ಬಡಗುತಿಟ್ಟಿನ ಹಿರಿಯ ಕಲಾವಿದರಾದ ಮಜ್ಜೆಗೆಬೈಲು ಆನಂದ ಶೆಟ್ಟಿಯವರು... ಪರಂಪರೆಯ ಹಿರಿಯ ಕಲಾವಿದರ ಸಾಲಿನಲ್ಲಿ ಅಗ್ರಮಾನ್ಯರಾಗಿ ಗುರುತಿಸಿಕೊಂಡಿರುವ ಇವರು, ಸಾಂಪ್ರದಾಯಿಕ ಮತ್ತು ಯಕ್ಷಗಾನೀಯ ಚೌಕಟ್ಟಿನಲ್ಲಿಯೇ ಸಾಗಿ,ಬಡಗುತಿಟ್ಟಿನ ಯಕ್ಷಗಾನ ರಂಗಭೂಮಿಗೆ ಮೌಲ್ಯ ತಂದುಕೊಟ್ಟ ಹಿರಿಯ ಕಲಾವಿದರು.. ಬಡಗುತಿಟ್ಟಿನ ನಡುತಿಟ್ಟಿನ ಉಭಯಶೈಲಿಗಳಾದ ಹಾರಾಡಿ ಮತ್ತು ಮಟ್ಪಾಡಿ ತಿಟ್ಟುಗಳಲ್ಲಿ ಸಮನ್ವಯ ಸಾಧಿಸಿಕೊಂಡ ಆನಂದ ಶೆಟ್ಟರು, ಬಡಗುತಿಟ್ಟಿನ ಖ್ಯಾತ ಕಲಾವಿದರಾದ ಮಜ್ಜಿಗೆಬೈಲು ಚಂದಯ್ಯ ಶೆಟ್ಟಿ ಮತ್ತು ಚಂದಮ್ಮ ಶೆಡ್ತಿ ದಂಪತಿಗಳ ಪುತ್ರನಾಗಿ 1944ರಲ್ಲಿ ಉಡುಪಿ ಜಿಲ್ಲೆಯ ಬಿಲ್ಲಾಡಿ ಸಮೀಪದ ಮಜ್ಜಿಗೆಬೈಲು ಎಂಬಲ್ಲಿ ಜನಿಸಿದರು. ಕೇವಲ ಐದನೇ ತರಗತಿಯವರೆಗಿನ ಶಿಕ್ಷಣವನ್ನು ಪಡೆದ ಇವರು,ಕಲಾವಿದರಾಗಿದ್ದ ತನ್ನ ತಂದೆಯವರಿಂದಲೇ ಯಕ್ಷಗಾನದ ಜ್ಞಾನವನ್ನು ಪಡೆದುಕೊಂಡು,ಆನೆಗುಡ್ದೆ ವಿನಾಯಕ ದೇವಸ್ಥಾನದಲ್ಲಿ ಗೆಜ್ಜೆ ಕಟ್ಟಿ, ಕೊಡವೂರು ಮೇಳದಲ್ಲಿ ರಂಗಪ್ರವೇಶ ಮಾಡಿದರು. ಯಕ್ಷಗಾನ ರಂಗದಲ್ಲಿ ಕಠಿಣ ಪರಿಶ್ರಮ ಮತ್ತುಅಧ್ಯಯನಶೀಲ ಗುಣಗಳಿಂದಲೇ ಹಂತ ಹಂತವಾಗಿ ಮೇಲೆರುತ್ತ ಬಂದ ಇವರು,ತನ್ನ ತಂದೆಯವರ ರಾವಣ,ಭೀಮ,ವಲಲ ಮೊದಲಾದ ವೇಷಗಳಿಂದ ಪ್ರಭಾವಿತರಾಗಿ,ಹಿರಿಯ ಕಲಾವಿದರ ರಂಗನಡೆಯನ್ನು ನೋಡಿ,ಕೇಳಿ, ಕಲಿತು ಬಡಗುತಿಟ್ಟಿನ ಹಿರಿಯ ಕಲಾವಿದರ ಸಾಲಿನಲ್ಲಿ ಮರೆಯಾಗದ ಹೆಜ್ಜೆಗುರುತು ಮೂಡಿಸಿದ ಹಿರಿಯ ಕಲಾವಿದರು.. ಆಕರ್ಷಕವಾದ, ಸದೃಢವಾದ, ಶರೀರ ಮತ್ತು ಶಾರೀರವನ್ನು ಹೊಂದಿರುವ ಇವರು, ಎರಡನೆಯ ಮತ್ತು ಪುರುಷ ಪಾತ್ರಗಳೆರಡನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ..ತನ್ನ ಗಜ ಗಾಂಭೀರ್ಯದ ರಂಗನಡೆ,ಸುಂದರವಾದ ವೇಷಗಾರಿಕೆ,ಪ್ರೌಢ ಸಾಹಿತ್ಯ ಮತ್ತು ಸ್ಪಷ್ಟ ಮಾತುಗಾರಿಕೆಯ ಮೂಲಕ ಎಲ್ಲ ಪಾತ್ರಗಳಿಗೂ ಜೀವತುಂಬಿ ಅಭಿನಯಿಸಬಲ್ಲ ಕಲೆಯನ್ನು ಕರಗತ ಮಾಡಿ ಕೊಂಡ ಹಿರಿಯ ಕಲಾವಿದರಿವರು.. ಕೊಡವೂರು,ಪೆರ್ಡೂರು,ಗೋಳಿಗರಡಿ,ಸಾಲಿಗ್ರಾಮ, ಅಮೃತೇಶ್ವರಿ,ಮಾರಣಕಟ್ಟೆ ಮೊದಲಾದ ಮೇಳಗಳಲ್ಲಿ ಸುದೀರ್ಘ ಐದು ದಶಕಗಳ ಕಾಲ ಸೇವೆಸಲ್ಲಿಸಿದ ಇವರು,ಎರಡು ದಶಕಗಳಿಗೂ ಹೆಚ್ಚು ಕಾಲ ಮಂದಾರ್ತಿ ಮೇಳವೊಂದರಲ್ಲೇ ಸೇವೆ ಸಲ್ಲಿಸಿರುವುದು ಅವರ ಯಕ್ಷಜೀವನದ ಸುವರ್ಣ ಯುಗ.. ಜಾನುವಾರುಕಟ್ಟೆ ಭಾಗವತರು, ಮರಿಯಪ್ಪಾಚಾರ್, ಶಿರಿಯಾರ ಮಂಜು ನಾಯಕ್, ಅರಾಟೆ ಮಂಜುನಾಥ, ಹಳ್ಳಾಡಿ ಮಂಜಯ್ಯ ಶೆಟ್ಟಿ, ಕೋಡಿ ಶಂಕರ ಗಾಣಿಗ, ಮೊಳಹಳ್ಳಿ ಹೆರಿಯ ನಾಯ್ಕ, ಉಡುಪಿ ಬಸವ, ಮತ್ಯಾಡಿ ನರಸಿಂಹ ಶೆಟ್ಟಿ,ಹೆರಂಜಾಲು ಸುಬ್ಬಣ್ಣ ಮೊದಲಾದ ಹಿರಿಯ ಕಲಾವಿದರ ಸಾಂಗತ್ಯದಲ್ಲಿ ಸಾರ್ಥಕ ತಿರುಗಾಟವನ್ನು ನಡೆಸಿದ್ದಾರೆ . ಹಾರಾಡಿ -ಮಟಪಾಡಿ ತಿಟ್ಟುಗಳ ಸಮನ್ವಯ ಸಾಧಿಸಿ ರಂಗದಲ್ಲಿ ಮೆರೆದ ಇವರು ಕರ್ಣ,ಅರ್ಜುನ,ಸುಧನ್ವ,ತಾಮ್ರಧ್ವಜ, ಮಾರ್ತಾಂಡತೇಜ, ಚಿತ್ರಸೇನ, ಪುಷ್ಕಳ,ಕೃಷ್ಣ,ವೀರಮಣಿ, ಜಾಂಬವ, ಬಲರಾಮ,ಭೀಷ್ಮ,ದಕ್ಷ,ಕಮಲಭೂಪ, ಯಯಾತಿ ಮೊದಲಾದ ಪಾತ್ರಗಳ ಮೂಲಕ ಜನಮನ್ನಣೆ ಪಡೆದಿದ್ದರು.. ಜೋಡಾಟದಲ್ಲಿ ರಂಗಸ್ಥಳದ ಕಾವು ಹೆಚ್ಚಿಸಬಲ್ಲ ಇವರು, ಜೋಡಾಟದಲ್ಲಿ ಮಂಡಿ ತಿರುಗುವುದರಲ್ಲಿ ದಾಖಲೆ ನಿರ್ಮಿಸಿದ್ದರು. ಆಧುನಿಕತೆಯ ಭರಾಟೆಯಲ್ಲಿ ಕಳೆದು ಹೋಗದೆ,ಸಾಂಪ್ರಾದಾಯಿಕ ಸೊಗಡನ್ನೇ ಮೈಗೂಡಿಸಿಕೊಂಡ ಇವರು ,ಪೆರ್ಡೂರು ಮೇಳದಲ್ಲಿದ್ದ ಕಾಲದಲ್ಲಿ ನಗರ ಜಗನ್ನಾಥ ಶೆಟ್ಟಿ ಮತ್ತು ಐರೋಡಿ ಗೋವಿಂದಪ್ಪನವರೊಂದಿಗಿನ ಇವರ ಪೌರಾಣಿಕ ಪಾತ್ರಗಳು ಜನಮನ್ನಣೆಗೆ ಪಾತ್ರವಾಗಿದ್ದವು.. ಬಡಗುತಿಟ್ಟಿನ ಪರಂಪರೆಯ ವೇಷದಾರಿಯಾಗಿ ಸೇವೆಸಲ್ಲಿಸಿ,ನಡುತಿಟ್ಟಿನ ಯಕ್ಷಭೂಮಿಯಲ್ಲಿ ತನ್ನದೇ ವಿಶಿಷ್ಟ ಹೆಜ್ಜೆಗುರುತು ಮೂಡಿಸಿ ರಂಗದಿಂದ ನಿವೃತ್ತರಾಗಿರುವ ,76ರ ಹರೆಯದ ಶೆಟ್ಟರು,ಪ್ರಸ್ತುತ ಶಿರಿಯಾರ ಸಮೀಪದ ಯಡಾಡಿಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ..,ಶ್ರೀಮತಿ ರತಿ ಶೆಡ್ತಿಯವರನ್ನು ಪತ್ನಿಯಾಗಿ ಸ್ವೀಕರಿಸಿ, ಸವಿತಾ,ಕವಿತಾ ಮತ್ತು ಸಂತೋಷಿನಿ ಎನ್ನುವ ಮೂವರು ಹೆಣ್ಣು ಮಕ್ಕಳನ್ನು ಪಡೆದಿರುವ ಇವರು ಸುಖ ಸಂತೃಪ್ತ ಜೀವನವನ್ನು ಸಾಗಿಸುತ್ತಿದ್ದಾರೆ ... ತನ್ನ ಪ್ರಾಮಾಣಿಕತೆ ಮತ್ತು ಕಲಾನಿಷ್ಠೆಗಾಗಿ ಜಾಗತಿಕ ಬಂಟರ ಸಂಘದಿಂದ ಸನ್ಮಾನ,ಉಡುಪಿ ಕಲಾರಂಗ ಪ್ರಶಸ್ತಿ,ಮಸ್ಕತ್ ಕನ್ನಡ ಸಂಘದಿಂದ ಸನ್ಮಾನ,ಹಾರಾಡಿ ರಾಮಗಾಣಿಗ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಯನ್ನು ಈಗಾಗಲೇ ಮುಡಿಗೇರಿಸಿಕೊಂಡಿರುವ ಶೆಟ್ಟರು, ಸಾಲಿಗ್ರಾಮ ಮಕ್ಕಳ ಮೇಳದ ಸಂಸ್ಥಾಪಕರಲ್ಲೊಬ್ಬರಾದ ಸಾಹಿತಿ ಮತ್ತು ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಕಾರ್ಕಡ ಶ್ರೀನಿವಾಸ ಉಡುಪ ಸಂಸ್ಮರಣಾ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಜನವರಿ 14ರಂದು ಕೋಟ ಪಟೇಲರ ಮನೆಯಲ್ಲಿ ನಡೆಯುವ ಸಮಾರಂಭದಲ್ಲಿ,ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.. ಮಂದಾರ್ತಿ ಶ್ರೀದುರ್ಗಾಪರಮೇಶ್ವರಿಯೂ ಇವರಿಗೆ ಇನ್ನು ಹೆಚ್ಚಿನ ಯಶಸ್ಸನ್ನು ನೀಡಲಿ ಮತ್ತು ಇವರ ವಿಶ್ರಾಂತ ಜೀವನ ಸುಖಮಯವಾಗಿ ಸಾಗಲಿ ಎನ್ನುವುದು ನಮ್ಮ ಯಕ್ಷಮಂದಾರದ ಶುಭಹಾರೈಕೆ.. ಸಾಹಿತ್ಯ:ಹಾಲಾಡಿ ಸಂತೋಷ ಶೆಟ್ಟಿ ನಿರೂಪಣೆ:ಶ್ರೀಮತಿ ಅಮೃತಾ ಶೆಟ್ಟಿ.. This is the story of the yakshaartists and the story of life. Today our yakshaganas are the veteran artists of Badgutti, Majgebailu Ananda Shetty. He is a leading artist eminent in the traditional and yakshagana framework and has brought value to the yakshagana theatre. Ananda Shettar, who had been united in the two styles of badaguthitta, haradi and matpadi tittu, was born in 1944 to the son of madjibailu chandaiah shetty and chandamma shetty, the famous artistes of Badaguthitta, at Majhibailai near Bhiladi in Udupi district. He had studied only up to fifth standard and took knowledge of Yakshagana from his father, who was an artist, tied a gage at the Anegudde Vinayaka temple and entered the theater at Kodavur mela. He has been gradually uplifted by his hard work and studies in the field of Yakshagana, and he is influenced by his father's disguises like Ravana, Bhima, Valala, and has seen the stage of the veteran artistes, listening and learning and making a footprint among the veteran artistes of Badagutti. Attractive, strong, body and body, he has managed both the second and the male characters. He is a great artist who has mastered the art of life and life through his elegant disguise, his beautiful costume, mature literature and clear speech. ಯಕ್ಷಮಂದಾರ ವಿಡಿಯೋ ನೋಡಲೋಸುಗವಾಗಿ. ವಾಹಿನಿಯ ಹೋಮ್ ಪೇಜ್ ಗಾಗಿ: https://www.youtube.com/channel/UCsrL ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: https://www.facebook.com/groups/27334

Friday, January 8, 2021

#ಯಕ್ಷಮಂದಾರ - 49 | ಹೆಚ್.ಎಸ್.ಶ್ರೀಕಂಠ ಭಟ್ | H.S.Shreekant Bhat | Megaravalli Mela | ಜೀವನಗಾಥೆ | Part- 49

                                                     #ಯಕ್ಷಮಂದಾರ

#ಯಕ್ಷಮಂದಾರ - 49 | ಹೆಚ್.ಎಸ್.ಶ್ರೀಕಂಠ ಭಟ್ | H.S.Shreekant Bhat | Megaravalli Mela | ಜೀವನಗಾಥೆ | Part- 49

🌀ಯಕ್ಷ💥ಮಂದಾರ🌀 ಇದು ಯಕ್ಷ ಕಲಾವಿದರ ಸಾದನೆ ಮತ್ತು ಜೀವನಗಾಥೆಯ ಅನಾವರಣ.. ಇಂದಿನ ನಮ್ಮ ಯಕ್ಷಸಾಧಕರು ಬಡಗುತಿಟ್ಟಿನ ಹಿರಿಯ ವೇಷಧಾರಿ ಮೇಗರವಳ್ಳಿ ಮೇಳದ ಪ್ರಧಾನ ಕಲಾವಿದರಾದ ಹೆಚ್.ಎಸ್.ಶ್ರೀಕಂಠ ಭಟ್ ಎಡ್ಲಕುಡಿಗೆಯವರು.. ಇವರು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಹೊನ್ನಕೊಡಿಗೆ ಎಂಬಲ್ಲಿ ಶ್ರೀ ಶೇಷಗಿರಿಯಯ್ಯ ಮತ್ತು ಶ್ರೀಮತಿ ವಿಶಾಲಾಕ್ಷಮ್ಮನವರ ಪುತ್ರನಾಗಿ 1961ರಲ್ಲಿ ಜನಿಸಿದರು.. ಬಾಲ್ಯದಲ್ಲಿಯೇ ಯಕ್ಷಗಾನದ ಆಸಕ್ತಿಯನ್ನು ಹೊಂದಿದ್ದ ಇವರು ಮನೆಯಲ್ಲಿನ ಆರ್ಥಿಕ ಪರಿಸ್ಥಿತಿ ಕಷ್ಟಕರವಾಗಿದ್ದರಿಂದ ಏಳನೇಯ ತರಗತಿಗೆ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ,ಉಡುಪಿ ಯಕ್ಷಗಾನ ಕೇಂದ್ರವನ್ನು ಸೇರಿಕೊಂಡು ಶಾಸ್ತ್ರೀಯವಾಗಿ ಯಕ್ಷಗಾನವನ್ನು ಅಭ್ಯಸಿಸಿ,ಸಾಲಿಗ್ರಾಮ ಮೇಳದ ಮೂಲಕ ರಂಗಪ್ರವೇಶಗೈದರು. ನಂತರ ಬಾಳೆಹೊಳೆ,ಕಮಲಶಿಲೆ,ಕಿಗ್ಗ,ಅಮೃತೇಶ್ವರಿಸೌಕೂರು,ಮಾರಣಕಟ್ಟೆ ಮಂದಾರ್ತಿ, ಸೀತೂರು, ಸೋಮವಾರಸಂತೆ,ಹಿರಿಯಡ್ಕ ಮೊದಲಾದ ಮೇಳಗಳಲ್ಲಿ ಸುದೀರ್ಘ 35 ವರ್ಷಗಳಿಗೂ ಹೆಚ್ಚು ವರ್ಷಗಳಿಂದ ಸೇವೆ ಸಲ್ಲಿಸಿರುವ ಇವರು,ಪ್ರಸ್ತುತ ವರ್ಷದಿಂದ ಮೇಗರವಳ್ಳಿ ಮೇಳದಲ್ಲಿ ಎರಡನೇ ವೇಷದಾರಿಯಾಗಿ ಸೇವೆಸಲ್ಲಿಸಲಿದ್ದಾರೆ.. ಜಾಂಬವ, ಈಶ್ವರ,ಅರ್ಜುನ,ಕೃಷ್ಣ, ಸುಧನ್ವ,ಕಂಸ,ಕೌರವ ಮೊದಲಾದ ಪಾತ್ರಗಳಲ್ಲಿ ಅತ್ಯುತ್ತಮ ರಂಗ ನಿರ್ವಹಣೆ,ಬಾವಪೂರ್ಣ ಅಭಿನಯ ಸ್ಪಷ್ಟ ಸುಲಲಿತ ಮತ್ತು ಪಾಂಡಿತ್ಯಭರಿತ ವಾಗ್ವೈಕರಿಯಿಂದ ಜೀವತುಂಬಿ ಅಭಿನಯಿಸುವುದರ ಮೂಲಕ ಕೀರ್ತಿ ಪಡೆದ ಇವರು, ಅಸಂಖ್ಯಾತ ಕಲಾಭಿಮಾನಿಗಳ ಮನಗೆದ್ದ ಅಪೂರ್ವ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ.. ಯಕ್ಷಗಾನದ ಪಾತ್ರವನ್ನು ನಿರ್ವಹಿಸುವುದರ ಜೊತೆಗೆ ಚಂಡೆ,ಮದ್ದಲೆಯನ್ನು ಕೂಡ ನುಡಿಸಬಲ್ಲ ಇವರು,ತಾಳಮದ್ದಳೆಯ ಅರ್ಥದಾರಿಯಾಗಿ ಯಕ್ಷಗಾನದ ಎಲ್ಲ ವಿಭಾಗಗಳಲ್ಲಿಯೂ ಪ್ರಬುದ್ಧತೆಯನ್ನು ಸಾಧಿಸಿರುವ ಇವರನ್ನು ಕಲಾದೇವಿಯ ವರಪುತ್ರರೆಂದರೆ ತಪ್ಪಾಗಲಾರದು.. ಯಕ್ಷಗಾನ ರಂಗದಲ್ಲಿ ತಾನು ಬೆಳೆದಿದ್ದಲ್ಲದೆ,ಸಹ ಕಲಾವಿದರನ್ನೂ ತಿದ್ದಿತೀಡಿ ಸರಿದಾರಿಗೆ ತಂದ ಇವರು ಅನೇಕ ಶಿಷ್ಯಸಮೂಹವನ್ನು ಹೊಂದಿದ್ದು,ಭವಿಷ್ಯದ ಯಕ್ಷರಂಗಕ್ಕೆ ಅಮೂಲ್ಯ ಕೊಡುಗೆಯನ್ನು ನೀಡಿದ್ದಾರೆ.. ಯಾವುದೇ ಪಾತ್ರವನ್ನು ನಿರ್ವಹಿಸಿದರು ಪಾತ್ರದ ಒಳಹೊಕ್ಕು ಜೀವ ತುಂಬಿ ಅಭಿನಯಿಸಬಲ್ಲ ಇವರು ಬಾವಪೂರ್ಣ ವಾಗಿ ಪಾತ್ರದಲ್ಲಿ ಸಂದರ್ಭಯೋಚಿತವಾಗಿ ಅಭಿನಯಿಸಬಲ್ಲರು.. ಹಿತಮಿತವಾದ ನಾಟ್ಯ,ತರ್ಕಬದ್ಧವಾದ ವಾದ ಮಂಡನೆ,ಪ್ರಬುದ್ಧ ರಂಗನಡೆ,ಅಸ್ಕಲಿತ ಮತ್ತು ಶೃತಿಬದ್ಧವಾದ ಪ್ರೌಢ ಮಾತುಗಾರಿಕೆ , ಮತ್ತು ಪಾತ್ರಪೋಷಣೆಯಿಂದಾಗಿ ಯಕ್ಷರಂಗದ ಘನತೆ ಮತ್ತು ಗೌರವಕ್ಕೆ ಚ್ಯುತಿ ಬಾರದ ಹಾಗೆ ವ್ಯವಹರಿಸಿ ಅನೇಕ ಗೌರವ ಪುರಸ್ಕಾರಗಳನ್ನು ಪಡೆದಿದ್ದಾರೆ .. ಯಕ್ಷಗಾನ ಬಯಲಾಟ ಅಕಾಡೆಮಿಯಿಂದ ಗೌರವ ಪುರಸ್ಕಾರ,ನಾಗೇಶ್ ರಾವ್ ಬೆಟ್ಟಗೆರೆ ಇವರಿಂದ ಸನ್ಮಾನ,ವೆಂಕಟೇಶ್ವರ ಯಕ್ಷಗಾನ ಸಂಘ ಹೊನ್ನವಳ್ಳಿ ಇವರಿಂದ ಸನ್ಮಾನ,ಶೃಂಗೇರಿ ಶೃಂಗೇಶ್ವರಯ್ಯ ಕುಟುಂಬದವರಿಂದ ಸನ್ಮಾನ ಸೇರಿದಂತೆ ಅನೇಕ ಸನ್ಮಾನ ಮತ್ತು ಪುರಸ್ಕಾರಗಳು ದೊರೆತಿವೆ.. ಶ್ರೀಮತಿ ಶಕುಂತಳಾ ಅವರೊಂದಿಗೆ ಆದರ್ಶ ಜೀವನವನ್ನು ನಡೆಸಿ, ಶ್ರೀರಕ್ಷಾ, ಶ್ರೀಲತಾ ಮತ್ತು ಶ್ರೀನಿಧಿ ಎನ್ನುವ ಮೂವರು ಸುಪುತ್ರಿಯರನ್ನು ಪಡೆದಿರುವ ಇವರು ಪ್ರಸ್ತುತ ಎಡ್ಬಕುಡಿಗೆಯಲ್ಲಿ ನೆಲೆಸಿದ್ದು, ಸುಖ ಸಂತೃಪ್ತ ಜೀವನವನ್ನು ನಡೆಸುತಿದ್ದಾರೆ.. ಇವರಿಗೆ ಸುಜ್ಞಾನ ಸಂಪದೆಯಾದ ಶೃಂಗೇರಿ ಶ್ರೀ ಶಾರದಾ ಮಾತೆಯೂ ಸಕಲ ಇಷ್ಟಾರ್ಥಗಳನ್ನು ನೀಡಿ ಕಾಪಾಡಲಿ ಎನ್ನುವುದು ನಮ್ಮ ಯಕ್ಷಮಂದಾರದ ಶುಭಹಾರೈಕೆ... ಸಾಹಿತ್ಯ:ಹಾಲಾಡಿ ಸಂತೋಷ ಶೆಟ್ಟಿ.. ನಿರೂಪಣೆ:ಶ್ರೀಮತಿ ಅಮೃತಾ ಶೆಟ್ಟಿ 🌀yaksha💥mandar🌀 This is the story of the yakshaartists and the story of life. Today our yakshaganas are the main artistes of Megaravalli Mela, who is a veteran of badaguthitt. He was born in 1961 as the son of Sri Seshagiriyya and Mrs. Vishalakshamma at Honnakode in Sringeri taluk of Chikmagalur district. He was interested in Yakshagana in his early childhood and had to cut his education in class 7 and went to the Udupi Yakshagana Centre and studied yakshagana classically and entered the theatre through Saligramam Mela. He has served for more than 35 years in banalehole, kamalashila, kigga, amriteshwari saukur, marankatte mandarthi, samanastha, hiriyadka etc. and will serve as the second dresser in megaravalli mela from this year. He has been known for his outstanding performance in roles like Jambava, Ishwara, Arjuna, Krishna, Sudhanva, Kansa, Kaurava, and his performance in the role of Baopurna with a clear and intelligent oratory, and has become a unique artist who has won the hearts of innumerable artists. He plays the role of Yakshagana and also plays chandelier and maddale, who has mastered all the disciplines of Yakshagana as a talamadale meaning. He has not only brought up the yakshagana field but also corrected his fellow artistes and has a large number of disciples and has made valuable contributions to the future yakshagana. He can play a role in a full-fledged role. He has been awarded many honors by acting in a way that does not degrade the dignity and dignity of the Yakshagana through his dancing, rational presentation, mature ranganade, askalaand a soft and serene, and a disrespectful character. Yakshagana Bayalata Academy has received many honors and awards including honors from Nageshwarrao Bettagere, Honored by Venkateswara Yakshagana Sangh Honnavalli, Honour from Srirangam Shringeswarayya family. Having lived an ideal life with Mrs. Shakuntala and having three daughters Sriraksha, Srilatha and Srinidhi, she lives in Edbakkudi and leads a happy and satisfied life. Our yakshamandar abree wished him all the wishes of Sri Sringeri, Sri Sarada Mother, who is a wealthy man of knowledge. Literature:Haladi Santosh Shetty.. Narrative:Smt. Amrita Shetty ಯಕ್ಷಮಂದಾರ ವಿಡಿಯೋ ನೋಡಲೋಸುಗವಾಗಿ. ವಾಹಿನಿಯ ಹೋಮ್ ಪೇಜ್ ಗಾಗಿ: https://www.youtube.com/channel/UCsrL ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: https://www.facebook.com/groups/27334

#ಯಕ್ಷಮಂದಾರ - 51 | ಹೆನ್ನಾಬೈಲು ಸಂಜೀವ ಶೆಟ್ಟಿ | Hennabailu Sanjeeva Shetty | ಪ್ರಸಿದ್ದ ಸ್ತ್ರೀಪಾತ್ರದಾರಿ |

🌀ಯಕ್ಷ💥ಮಂದಾರ🌀 #ಯಕ್ಷಮಂದಾರ  - 51 | ಹೆನ್ನಾಬೈಲು ಸಂಜೀವ ಶೆಟ್ಟಿ | Hennabailu Sanjeeva Shetty | ಪ್ರಸಿದ್ದ ಸ್ತ್ರೀಪಾತ್ರದಾರಿ...