#ಯಕ್ಷಮಂದಾರ
#ಯಕ್ಷಮಂದಾರ - 49 | ಹೆಚ್.ಎಸ್.ಶ್ರೀಕಂಠ ಭಟ್ | H.S.Shreekant Bhat | Megaravalli Mela | ಜೀವನಗಾಥೆ | Part- 49 🌀ಯಕ್ಷ💥ಮಂದಾರ🌀 ಇದು ಯಕ್ಷ ಕಲಾವಿದರ ಸಾದನೆ ಮತ್ತು ಜೀವನಗಾಥೆಯ ಅನಾವರಣ.. ಇಂದಿನ ನಮ್ಮ ಯಕ್ಷಸಾಧಕರು ಬಡಗುತಿಟ್ಟಿನ ಹಿರಿಯ ವೇಷಧಾರಿ ಮೇಗರವಳ್ಳಿ ಮೇಳದ ಪ್ರಧಾನ ಕಲಾವಿದರಾದ ಹೆಚ್.ಎಸ್.ಶ್ರೀಕಂಠ ಭಟ್ ಎಡ್ಲಕುಡಿಗೆಯವರು.. ಇವರು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಹೊನ್ನಕೊಡಿಗೆ ಎಂಬಲ್ಲಿ ಶ್ರೀ ಶೇಷಗಿರಿಯಯ್ಯ ಮತ್ತು ಶ್ರೀಮತಿ ವಿಶಾಲಾಕ್ಷಮ್ಮನವರ ಪುತ್ರನಾಗಿ 1961ರಲ್ಲಿ ಜನಿಸಿದರು.. ಬಾಲ್ಯದಲ್ಲಿಯೇ ಯಕ್ಷಗಾನದ ಆಸಕ್ತಿಯನ್ನು ಹೊಂದಿದ್ದ ಇವರು ಮನೆಯಲ್ಲಿನ ಆರ್ಥಿಕ ಪರಿಸ್ಥಿತಿ ಕಷ್ಟಕರವಾಗಿದ್ದರಿಂದ ಏಳನೇಯ ತರಗತಿಗೆ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ,ಉಡುಪಿ ಯಕ್ಷಗಾನ ಕೇಂದ್ರವನ್ನು ಸೇರಿಕೊಂಡು ಶಾಸ್ತ್ರೀಯವಾಗಿ ಯಕ್ಷಗಾನವನ್ನು ಅಭ್ಯಸಿಸಿ,ಸಾಲಿಗ್ರಾಮ ಮೇಳದ ಮೂಲಕ ರಂಗಪ್ರವೇಶಗೈದರು. ನಂತರ ಬಾಳೆಹೊಳೆ,ಕಮಲಶಿಲೆ,ಕಿಗ್ಗ,ಅಮೃತೇಶ್ವರಿಸೌಕೂರು,ಮಾರಣಕಟ್ಟೆ ಮಂದಾರ್ತಿ, ಸೀತೂರು, ಸೋಮವಾರಸಂತೆ,ಹಿರಿಯಡ್ಕ ಮೊದಲಾದ ಮೇಳಗಳಲ್ಲಿ ಸುದೀರ್ಘ 35 ವರ್ಷಗಳಿಗೂ ಹೆಚ್ಚು ವರ್ಷಗಳಿಂದ ಸೇವೆ ಸಲ್ಲಿಸಿರುವ ಇವರು,ಪ್ರಸ್ತುತ ವರ್ಷದಿಂದ ಮೇಗರವಳ್ಳಿ ಮೇಳದಲ್ಲಿ ಎರಡನೇ ವೇಷದಾರಿಯಾಗಿ ಸೇವೆಸಲ್ಲಿಸಲಿದ್ದಾರೆ.. ಜಾಂಬವ, ಈಶ್ವರ,ಅರ್ಜುನ,ಕೃಷ್ಣ, ಸುಧನ್ವ,ಕಂಸ,ಕೌರವ ಮೊದಲಾದ ಪಾತ್ರಗಳಲ್ಲಿ ಅತ್ಯುತ್ತಮ ರಂಗ ನಿರ್ವಹಣೆ,ಬಾವಪೂರ್ಣ ಅಭಿನಯ ಸ್ಪಷ್ಟ ಸುಲಲಿತ ಮತ್ತು ಪಾಂಡಿತ್ಯಭರಿತ ವಾಗ್ವೈಕರಿಯಿಂದ ಜೀವತುಂಬಿ ಅಭಿನಯಿಸುವುದರ ಮೂಲಕ ಕೀರ್ತಿ ಪಡೆದ ಇವರು, ಅಸಂಖ್ಯಾತ ಕಲಾಭಿಮಾನಿಗಳ ಮನಗೆದ್ದ ಅಪೂರ್ವ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ.. ಯಕ್ಷಗಾನದ ಪಾತ್ರವನ್ನು ನಿರ್ವಹಿಸುವುದರ ಜೊತೆಗೆ ಚಂಡೆ,ಮದ್ದಲೆಯನ್ನು ಕೂಡ ನುಡಿಸಬಲ್ಲ ಇವರು,ತಾಳಮದ್ದಳೆಯ ಅರ್ಥದಾರಿಯಾಗಿ ಯಕ್ಷಗಾನದ ಎಲ್ಲ ವಿಭಾಗಗಳಲ್ಲಿಯೂ ಪ್ರಬುದ್ಧತೆಯನ್ನು ಸಾಧಿಸಿರುವ ಇವರನ್ನು ಕಲಾದೇವಿಯ ವರಪುತ್ರರೆಂದರೆ ತಪ್ಪಾಗಲಾರದು.. ಯಕ್ಷಗಾನ ರಂಗದಲ್ಲಿ ತಾನು ಬೆಳೆದಿದ್ದಲ್ಲದೆ,ಸಹ ಕಲಾವಿದರನ್ನೂ ತಿದ್ದಿತೀಡಿ ಸರಿದಾರಿಗೆ ತಂದ ಇವರು ಅನೇಕ ಶಿಷ್ಯಸಮೂಹವನ್ನು ಹೊಂದಿದ್ದು,ಭವಿಷ್ಯದ ಯಕ್ಷರಂಗಕ್ಕೆ ಅಮೂಲ್ಯ ಕೊಡುಗೆಯನ್ನು ನೀಡಿದ್ದಾರೆ.. ಯಾವುದೇ ಪಾತ್ರವನ್ನು ನಿರ್ವಹಿಸಿದರು ಪಾತ್ರದ ಒಳಹೊಕ್ಕು ಜೀವ ತುಂಬಿ ಅಭಿನಯಿಸಬಲ್ಲ ಇವರು ಬಾವಪೂರ್ಣ ವಾಗಿ ಪಾತ್ರದಲ್ಲಿ ಸಂದರ್ಭಯೋಚಿತವಾಗಿ ಅಭಿನಯಿಸಬಲ್ಲರು.. ಹಿತಮಿತವಾದ ನಾಟ್ಯ,ತರ್ಕಬದ್ಧವಾದ ವಾದ ಮಂಡನೆ,ಪ್ರಬುದ್ಧ ರಂಗನಡೆ,ಅಸ್ಕಲಿತ ಮತ್ತು ಶೃತಿಬದ್ಧವಾದ ಪ್ರೌಢ ಮಾತುಗಾರಿಕೆ , ಮತ್ತು ಪಾತ್ರಪೋಷಣೆಯಿಂದಾಗಿ ಯಕ್ಷರಂಗದ ಘನತೆ ಮತ್ತು ಗೌರವಕ್ಕೆ ಚ್ಯುತಿ ಬಾರದ ಹಾಗೆ ವ್ಯವಹರಿಸಿ ಅನೇಕ ಗೌರವ ಪುರಸ್ಕಾರಗಳನ್ನು ಪಡೆದಿದ್ದಾರೆ .. ಯಕ್ಷಗಾನ ಬಯಲಾಟ ಅಕಾಡೆಮಿಯಿಂದ ಗೌರವ ಪುರಸ್ಕಾರ,ನಾಗೇಶ್ ರಾವ್ ಬೆಟ್ಟಗೆರೆ ಇವರಿಂದ ಸನ್ಮಾನ,ವೆಂಕಟೇಶ್ವರ ಯಕ್ಷಗಾನ ಸಂಘ ಹೊನ್ನವಳ್ಳಿ ಇವರಿಂದ ಸನ್ಮಾನ,ಶೃಂಗೇರಿ ಶೃಂಗೇಶ್ವರಯ್ಯ ಕುಟುಂಬದವರಿಂದ ಸನ್ಮಾನ ಸೇರಿದಂತೆ ಅನೇಕ ಸನ್ಮಾನ ಮತ್ತು ಪುರಸ್ಕಾರಗಳು ದೊರೆತಿವೆ.. ಶ್ರೀಮತಿ ಶಕುಂತಳಾ ಅವರೊಂದಿಗೆ ಆದರ್ಶ ಜೀವನವನ್ನು ನಡೆಸಿ, ಶ್ರೀರಕ್ಷಾ, ಶ್ರೀಲತಾ ಮತ್ತು ಶ್ರೀನಿಧಿ ಎನ್ನುವ ಮೂವರು ಸುಪುತ್ರಿಯರನ್ನು ಪಡೆದಿರುವ ಇವರು ಪ್ರಸ್ತುತ ಎಡ್ಬಕುಡಿಗೆಯಲ್ಲಿ ನೆಲೆಸಿದ್ದು, ಸುಖ ಸಂತೃಪ್ತ ಜೀವನವನ್ನು ನಡೆಸುತಿದ್ದಾರೆ.. ಇವರಿಗೆ ಸುಜ್ಞಾನ ಸಂಪದೆಯಾದ ಶೃಂಗೇರಿ ಶ್ರೀ ಶಾರದಾ ಮಾತೆಯೂ ಸಕಲ ಇಷ್ಟಾರ್ಥಗಳನ್ನು ನೀಡಿ ಕಾಪಾಡಲಿ ಎನ್ನುವುದು ನಮ್ಮ ಯಕ್ಷಮಂದಾರದ ಶುಭಹಾರೈಕೆ... ಸಾಹಿತ್ಯ:ಹಾಲಾಡಿ ಸಂತೋಷ ಶೆಟ್ಟಿ.. ನಿರೂಪಣೆ:ಶ್ರೀಮತಿ ಅಮೃತಾ ಶೆಟ್ಟಿ 🌀yaksha💥mandar🌀 This is the story of the yakshaartists and the story of life. Today our yakshaganas are the main artistes of Megaravalli Mela, who is a veteran of badaguthitt. He was born in 1961 as the son of Sri Seshagiriyya and Mrs. Vishalakshamma at Honnakode in Sringeri taluk of Chikmagalur district. He was interested in Yakshagana in his early childhood and had to cut his education in class 7 and went to the Udupi Yakshagana Centre and studied yakshagana classically and entered the theatre through Saligramam Mela. He has served for more than 35 years in banalehole, kamalashila, kigga, amriteshwari saukur, marankatte mandarthi, samanastha, hiriyadka etc. and will serve as the second dresser in megaravalli mela from this year. He has been known for his outstanding performance in roles like Jambava, Ishwara, Arjuna, Krishna, Sudhanva, Kansa, Kaurava, and his performance in the role of Baopurna with a clear and intelligent oratory, and has become a unique artist who has won the hearts of innumerable artists. He plays the role of Yakshagana and also plays chandelier and maddale, who has mastered all the disciplines of Yakshagana as a talamadale meaning. He has not only brought up the yakshagana field but also corrected his fellow artistes and has a large number of disciples and has made valuable contributions to the future yakshagana. He can play a role in a full-fledged role. He has been awarded many honors by acting in a way that does not degrade the dignity and dignity of the Yakshagana through his dancing, rational presentation, mature ranganade, askalaand a soft and serene, and a disrespectful character. Yakshagana Bayalata Academy has received many honors and awards including honors from Nageshwarrao Bettagere, Honored by Venkateswara Yakshagana Sangh Honnavalli, Honour from Srirangam Shringeswarayya family. Having lived an ideal life with Mrs. Shakuntala and having three daughters Sriraksha, Srilatha and Srinidhi, she lives in Edbakkudi and leads a happy and satisfied life. Our yakshamandar abree wished him all the wishes of Sri Sringeri, Sri Sarada Mother, who is a wealthy man of knowledge. Literature:Haladi Santosh Shetty.. Narrative:Smt. Amrita Shetty ಯಕ್ಷಮಂದಾರ ವಿಡಿಯೋ ನೋಡಲೋಸುಗವಾಗಿ. ವಾಹಿನಿಯ ಹೋಮ್ ಪೇಜ್ ಗಾಗಿ: https://www.youtube.com/channel/UCsrL ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: https://www.facebook.com/groups/27334
Subscribe to:
Post Comments (Atom)
#ಯಕ್ಷಮಂದಾರ - 51 | ಹೆನ್ನಾಬೈಲು ಸಂಜೀವ ಶೆಟ್ಟಿ | Hennabailu Sanjeeva Shetty | ಪ್ರಸಿದ್ದ ಸ್ತ್ರೀಪಾತ್ರದಾರಿ |
🌀ಯಕ್ಷ💥ಮಂದಾರ🌀 #ಯಕ್ಷಮಂದಾರ - 51 | ಹೆನ್ನಾಬೈಲು ಸಂಜೀವ ಶೆಟ್ಟಿ | Hennabailu Sanjeeva Shetty | ಪ್ರಸಿದ್ದ ಸ್ತ್ರೀಪಾತ್ರದಾರಿ...
-
#ಯಕ್ಷಮಂದಾರ #ಯಕ್ಷಮಂದಾರ - 39 | ತೊಂಬಟ್ಟು ವಿಶ್ವನಾಥ ಆಚಾರ್ಯ | Thumbattu Vishwanath...
-
🌀ಯಕ್ಷ💥ಮಂದಾರ🌀 #ಯಕ್ಷಮಂದಾರ - 18 | ಜಯಾನಂದ ಸಂಪಾಜೆ | Jayanand Sampaje | ಹನುಮಗಿರಿ ಮೇಳ | Hanumagiri Mela...
No comments:
Post a Comment