Saturday, January 16, 2021

#ಯಕ್ಷಮಂದಾರ - 51 | ಹೆನ್ನಾಬೈಲು ಸಂಜೀವ ಶೆಟ್ಟಿ | Hennabailu Sanjeeva Shetty | ಪ್ರಸಿದ್ದ ಸ್ತ್ರೀಪಾತ್ರದಾರಿ |

🌀ಯಕ್ಷ💥ಮಂದಾರ🌀


#ಯಕ್ಷಮಂದಾರ - 51 | ಹೆನ್ನಾಬೈಲು ಸಂಜೀವ ಶೆಟ್ಟಿ | Hennabailu Sanjeeva Shetty | ಪ್ರಸಿದ್ದ ಸ್ತ್ರೀಪಾತ್ರದಾರಿ |

ಇದು ಯಕ್ಷ ಕಲಾವಿದರ ಸಾದನೆ ಮತ್ತು ಜೀವನಗಾಥೆಯ ಅನಾವರಣ.. ಕನ್ನಡದಲ್ಲಿ ಸಿರಿಗನ್ನಡಂ ಗೆಲ್ಗೆ ಎನ್ನುವಂತೆ ,ನಮ್ಮ ಕರಾವಳಿಯಲ್ಲಿ ಯಕ್ಷಗಾನಂ ಗೆಲ್ಗೆ ಎನ್ನುವ ಮಾತಿದೆ..ಕರಾವಳಿಯ ಗಂಡುಕಲೆಯಾದ ಯಕ್ಷಗಾನವು ಕರ್ನಾಟಕದ ಎಲ್ಲ ಜಾನಪದೀಯ ಕಲೆಗಳಿಗಿಂತಲೂ ಹೆಚ್ಚು ಆಕರ್ಷಣೆ ಮತ್ತು ವೈಶಿಷ್ಟ್ಯಗಳನ್ನು ಹೊಂದಿರುವ ಕಲೆ...ಈ ಕಲೆಯ ಮೇಲೆ ವ್ಯಾಮೋಹ ಹುಟ್ಟಿತೆಂದರೆ ಅದು ಜೀವನದುದ್ದಕ್ಕೂ ಅವನನ್ನು ಕೈಬೀಸಿ ಕರೆಯುತ್ತದೆ...ಅಂತಹ ಯಕ್ಷಗಾನದ ಮೇಲಿನ ಅಭಿಮಾನದಿಂದಲೇ ಯಕ್ಷಗಾನ ಕ್ಷೇತ್ರದತ್ತ ಆಕರ್ಷಿತರಾದವರು ಬಡಗುತಿಟ್ಟಿನ ಸುಪ್ರಸಿದ್ಧ ಸ್ತ್ರೀಪಾತ್ರದಾರಿ ಹೆನ್ನಾಬೈಲು ಸಂಜೀವ ಶೆಟ್ಟಿಯವರು... ಇವರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಸಿದ್ದಾಪುರ ಸಮೀಪದ ಹೆನ್ನಾಬೈಲು ಎಂಬ ಪುಟ್ಟ ಗ್ರಾಮದಲ್ಲಿ ದಿ.ಶ್ರೀ ಅಂತಯ್ಯ ಶೆಟ್ಟಿ ಮತ್ತು ದಿ. ಪಾರ್ವತಿ ಶೆಡ್ತಿಯವರ ಪುತ್ರನಾಗಿ ದಿನಾಂಕ:02.06.1973ರಲ್ಲಿ ಜನಿಸಿದರು. ತಾನು ಪ್ರಾಥಮಿಕ ವಿದ್ಯಾಭ್ಯಾಸ ಮಾಡುತ್ತಿರುವ ಸಮಯದಲ್ಲಿ,ಹಾಲಾಡಿ ಮೇಳದವರ ಯಕ್ಷಗಾನ ಪದರ್ಶನವನ್ನು ಕಂಡು ಆಕರ್ಷಿತರಾಗಿ,ಖ್ಯಾತ ಹಾಸ್ಯಗಾರರಾದ ಶಿವರಾಮ ಭಟ್ಟರ ಪ್ರೇರಣೆಯಿಂದ 1983 84ರ ಸಾಲಿನಲ್ಲಿ ಹಾಲಾಡಿ ಮೇಳದಲ್ಲಿ ಗೆಜ್ಜೆಕಟ್ಟಿ ರಂಗಪ್ರವೇಶ ಮಾಡಿದರು..ಪ್ರಸಿದ್ಧ ವೇಷಧಾರಿಗಳಾದ ಆರ್ಗೋಡು ಮೋಹನದಾಸ ಶೆನೈ ಮತ್ತು ದಿ.ಅರಾಟೆ ಮಂಜುನಾಥರಲ್ಲಿ ಯಕ್ಷಗಾನದ ನೃತ್ಯ,ವೇಷಗಾರಿಕೆ ಮತ್ತು ಮಾತುಗಾರಿಕೆಯ ಜ್ಞಾನವನ್ನು ಪಡೆದರು. ನಂತರದ ದಿನಗಳಲ್ಲಿ ತಿರುಗಾಟದ ಅವಧಿಯಲ್ಲಿ ಹಿರಿಯ ಕಲಾವಿದರ ಒಡನಾಟದಿಂದ ಯಕ್ಷಗಾನದ ಪ್ರಸಂಗದ ಆಳವಾದ ಜ್ಞಾನವನ್ನು ಕರಗತಮಾಡಿಕೊಳ್ಳುತ್ತ ಮಾತುಗಾರಿಕೆ ಮತ್ತು ನಾಟ್ಯದಲ್ಲಿ ಹೆಚ್ಚಿನ ಅನುಭವವನ್ನು ಸಂಪಾದಿಸಿದರು..ಪುರುಷ ಮತ್ತು ಸ್ತ್ರೀಪಾತ್ರಗಳೆರಡನ್ನು ನಿರ್ವಹಿಸುತ್ತ ಬಂದ ಇವರು ನಂತರದ ದಿನಗಳಲ್ಲಿ ಸ್ತ್ರೀಪಾತ್ರದಲ್ಲಿ ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಂಡು ಪ್ರಧಾನ ಸ್ತ್ರೀಪಾತ್ರದಾರಿಯಾಗಿ ಗುರುತಿಸಿಕೊಂಡರು. ಕಮಲಶಿಲೆ, ಮಂದಾರ್ತಿ,ಸೌಕೂರು, ಪೆರ್ಡೂರು,ಹಾಲಾಡಿ ಮೇಳದಲ್ಲಿ ಸೇವೆಸಲ್ಲಿಸಿದ ಇವರು ಪ್ರಸ್ತುತ ಮಾರಣಕಟ್ಟೆ ಮೇಳದಲ್ಲಿ ಪ್ರಧಾನ ಸ್ತ್ರೀಪಾತ್ರದಾರಿಯಾಗಿ ಸೇವೆಸಲ್ಲಿಸುತ್ತಿದ್ದಾರೆ. ಸ್ತ್ರೀಪಾತ್ರಕೋಪ್ಪುವ ರೂಪ,ಆಕರ್ಷಕ ಅಂಗಸೌಷ್ಠವ,ಸುಮದುರವಾದ ಕಂಠಸಿರಿ,ಅಗಾಧವಾದ ಪ್ರಸಂಗ ಜ್ಞಾನ,ಮನಮೋಹಕವಾದ ನಾಟ್ಯಶೈಲಿಯಿಂದ ಯಾವುದೇ ಪ್ರಸಂಗದ ಯಾವುದೇ ಪಾತ್ರವನ್ನಾದರೂ ನಿರ್ವಹಿಸಬಲ್ಲರು... ಶೃಂಗಾರ, ವೀರ,ಭಾವನಾತ್ಮಕ ಪಾತ್ರಗಳಿಗೆ ಜೀವ ತುಂಬಿ ಅಭಿನಯಿಸಬಲ್ಲ ಇವರು ದೇವಿಮಹಾತ್ಮೆಯ ಶ್ರೀ ದೇವಿಯ ಪಾತ್ರದಲ್ಲಿನ ಅಭಿನಯದಿಂದ ಜನಮನ್ನಣೆ ಪಡೆದಿದ್ದಾರೆ...ಭಕ್ತಿಪ್ರಧಾನವಾದ ಶ್ರೀದೇವಿಯ ಪಾತ್ರದಲ್ಲಿ ಶೃಂಗಾರಭರಿತಳಾಗಿ,ವೀರಾವೇಶದಿಂದ ಸಿಂಹವಾಹಿನಿಯಾಗಿ ಬರುವ ಸನ್ನಿವೇಶದಲ್ಲಿ ಇವರ ಅಭಿನಯವನ್ನು ಮೆಚ್ಚಿಕೊಳ್ಳದೆ ಇರುವ ಕಲಾಭಿಮಾನಿಗಳು ವಿರಳ ಎನ್ನಬಹುದು.ಅಭಿಮನ್ಯು ಕಾಳಗದ ಸುಭದ್ರೆ,ದ್ರೌಪದಿ ಪ್ರತಾಪದ ದ್ರೌಪತಿ,ಭೀಷ್ಮವಿಜಯದ ಅಂಬೆ,ದಕ್ಷಯಜ್ಞದ ದಾಕ್ಷಯಣಿ,ಮೀನಾಕ್ಷಿ ಕಲ್ಯಾಣದ ಮೀನಾಕ್ಷಿ,ಸುದರ್ಶನ ವಿಜಯದ ಲಕ್ಷೀದೇವಿ,ಪ್ರಮೀಳೆ,ಶಶಿಪ್ರಭೆ, ಭ್ರಮರಕುಂತಲೆ,ಚಂದ್ರಮತಿ,ಗುಣಸುಂದರಿ,ಪ್ರಭಾವತಿ, ಪಾಂಚಜನ್ಯದ ಮೃತ್ಯುಮಾಲಿನಿ,ದಮಯಂತಿ,ಮದನಾಕ್ಷಿ, ಚಿತ್ರಾಂಗದೆ ಮೊದಲಾದ ಪಾತ್ರಗಳು ಇವರಿಗೆ ಪ್ರಸಿದ್ಧಿಯನ್ನು ತಂದುಕೊಟ್ಟಿದೆ.ಮಹಿಷಾಸುರನ ಪಾತ್ರವನ್ನು ನಿರ್ವಹಿಸಿ ಸೈ ಎನ್ನಿಸಿಕೊಂಡಿದ್ದಾರೆ. ಕರ್ನಾಟಕದಲ್ಲಷ್ಟೇ ಅಲ್ಲದೆ ಮುಂಬೈ,ಹೈದರಾಬಾದ್ ನಂತಹ ಮಹಾನಗರಗಳಲ್ಲಿಯೂ ಪ್ರದರ್ಶನ ನೀಡಿರುವ ಇವರಿಗೆ ಡಾ.ಶಾಂತರಾಮ ಪ್ರಶಸ್ತಿ,ಮಂಗಳೂರಿನ ಕಲ್ಕೂರ ಪ್ರಶಸ್ತಿ,ಕರ್ನಾಟಕ ಕರಾವಳಿ ಮೈತ್ರಿ ಸಂಘ(ರಿ) ಕೊಡಮಾಡುವ ಪ್ರಶಸ್ತಿ,ಬೈಂದೂರು ಬಂಟರ ಸಂಘದಿಂದ ಸನ್ಮಾನ,ಮೂಡ್ಲಕಟ್ಟೆ ನವಗ್ರಹ ಕ್ರಿಕೆಟರ್ಸ್ ಇವರಿಂದ ಸನ್ಮಾನ ಸೇರಿದಂತೆ ನಾಡಿನಾದ್ಯಂತ ಅಭಿಮಾನಿಗಳು ಮತ್ತು ಸಂಘಸಂಸ್ಥೆಗಳಿಂದ ಹಲವು ಪ್ರಶಸ್ತಿ,ಸಮ್ಮಾನಗಳು ದೊರೆತಿವೆ.. ಶ್ರೀಮತಿ ಕುಸುಮ ಇವರನ್ನು ಬಾಳ ಸಂಗಾತಿಯಾಗಿ ಸ್ವೀಕರಿಸಿ,ಪ್ರಶಾಂತ, ಪ್ರದೀಪ, ಪ್ರತ್ವಿಕ್ ಎಂಬ ಮಕ್ಕಳನ್ನು ಪಡೆದಿರುವ ಇವರು ಸುಖಸಂಸಾರವನ್ನು ನೆಡೆಸುತ್ತಿದ್ದಾರೆ... ತನ್ನ ವೃತ್ತಿ ಮತ್ತು ಸಾಂಸಾರಿಕ ಜೀವನದಲ್ಲಿ ಸರಳತೆ ಮತ್ತು ಶಿಸ್ತುಬದ್ಧತೆಯನ್ನು ಅಳವಡಿಸಿಕೊಂಡಿರುವ ಸೌಮ್ಯಸ್ವಭಾವದ ಇವರಿಗೆ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ಮತ್ತು ಮರಳುಚಿಕ್ಕು ದೇವಿಯು,ಸರ್ವಸಂಪತ್ತನ್ನು ನೀಡಿ,ಇವರ ಮುಂದಿನ ಕಲಾಬದುಕು ಸುಗಮವಾಗಿ ಸಾಗುವಂತೆ ಅನುಗ್ರಹಿಸಲಿ ಎನ್ನುವುದು ನಮ್ಮ ಯಕ್ಷಮಂದಾರದ ಶುಭಹಾರೈಕೆ ಸಾಹಿತ್ಯ:ಹಾಲಾಡಿ ಸಂತೋಷ ಶೆಟ್ಟಿ ನಿರೂಪಣೆ:ಶ್ರೀಮತಿ ಅಮೃತಾ ಶೆಟ್ಟಿ Yakshamandar This is the story of the yakshaartists and the story of life. In Kannada, it is said that yakshaganam gellge is the name of 'Yakshaganam' on our coast. Yakshagana, the male art of the coast, has more attraction and features than all the folk arts of Karnataka. The passion for this art will wave him all his life... The famous female character of Badaguthitta, Hennabailu Sanjeeva Shetty, was attracted to the yakshagana field because of his pride in yakshagana. He is a small village in Hennabailu near Kondapur taluk in Udupi district. Parvathi was born as the son of Shetti on 02.06.1973. He was attracted to the yakshagana of Haladi Mela while he was in elementary education and was inspired by the famous comedian Shivaram Bhatt, who made his debut at haladi mela in 1983 84. The famous attire saints Argodu Mohandas Shenai and D Arathe manjunatha gained knowledge of yakshagana dance, costume and speech. Later, he acquired a great experience in speech and dance, mastering the deepknowledge of the yakshagana episode through the interaction of senior artistes during the later period. He played both male and female roles and later became a female character. She has served in Kamalashila, Mandarthi, Saukur, Perdur, Haladi mela and is currently serving as the main female role in the Maranakate Mela. The female character is a beautiful body, a beautiful voice, a great context, a great sense of dancing, a charming dance style that can play any part of any episode. ವಾಹಿನಿಯ ಹೋಮ್ ಪೇಜ್ ಗಾಗಿ: https://www.youtube.com/channel/UCsrLaqAHspFB-wn7izLSb_w ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: https://www.facebook.com/groups/2733422163561846

Thursday, January 14, 2021

#ಯಕ್ಷಮಂದಾರ - 50 | ಮಜ್ಜಿಗೆಬೈಲು ಆನಂದ ಶೆಟ್ಟಿ| Majjigebail Ananda Shetty | Mandarthi | ಯಕ್ಷ ಸಾದನೆ |

🌀ಯಕ್ಷ💥ಮಂದಾರ🌀


#ಯಕ್ಷಮಂದಾರ - 50 | ಮಜ್ಜಿಗೆಬೈಲು ಆನಂದ ಶೆಟ್ಟಿ| Majjigebail Ananda Shetty | Mandarthi | ಯಕ್ಷ ಸಾದನೆ |

ಇದು ಯಕ್ಷ ಕಲಾವಿದರ ಸಾದನೆ ಮತ್ತು ಜೀವನಗಾಥೆಯ ಅನಾವರಣ.. ಇಂದಿನ ನಮ್ಮ ಯಕ್ಷಸಾಧಕರು ಬಡಗುತಿಟ್ಟಿನ ಹಿರಿಯ ಕಲಾವಿದರಾದ ಮಜ್ಜೆಗೆಬೈಲು ಆನಂದ ಶೆಟ್ಟಿಯವರು... ಪರಂಪರೆಯ ಹಿರಿಯ ಕಲಾವಿದರ ಸಾಲಿನಲ್ಲಿ ಅಗ್ರಮಾನ್ಯರಾಗಿ ಗುರುತಿಸಿಕೊಂಡಿರುವ ಇವರು, ಸಾಂಪ್ರದಾಯಿಕ ಮತ್ತು ಯಕ್ಷಗಾನೀಯ ಚೌಕಟ್ಟಿನಲ್ಲಿಯೇ ಸಾಗಿ,ಬಡಗುತಿಟ್ಟಿನ ಯಕ್ಷಗಾನ ರಂಗಭೂಮಿಗೆ ಮೌಲ್ಯ ತಂದುಕೊಟ್ಟ ಹಿರಿಯ ಕಲಾವಿದರು.. ಬಡಗುತಿಟ್ಟಿನ ನಡುತಿಟ್ಟಿನ ಉಭಯಶೈಲಿಗಳಾದ ಹಾರಾಡಿ ಮತ್ತು ಮಟ್ಪಾಡಿ ತಿಟ್ಟುಗಳಲ್ಲಿ ಸಮನ್ವಯ ಸಾಧಿಸಿಕೊಂಡ ಆನಂದ ಶೆಟ್ಟರು, ಬಡಗುತಿಟ್ಟಿನ ಖ್ಯಾತ ಕಲಾವಿದರಾದ ಮಜ್ಜಿಗೆಬೈಲು ಚಂದಯ್ಯ ಶೆಟ್ಟಿ ಮತ್ತು ಚಂದಮ್ಮ ಶೆಡ್ತಿ ದಂಪತಿಗಳ ಪುತ್ರನಾಗಿ 1944ರಲ್ಲಿ ಉಡುಪಿ ಜಿಲ್ಲೆಯ ಬಿಲ್ಲಾಡಿ ಸಮೀಪದ ಮಜ್ಜಿಗೆಬೈಲು ಎಂಬಲ್ಲಿ ಜನಿಸಿದರು. ಕೇವಲ ಐದನೇ ತರಗತಿಯವರೆಗಿನ ಶಿಕ್ಷಣವನ್ನು ಪಡೆದ ಇವರು,ಕಲಾವಿದರಾಗಿದ್ದ ತನ್ನ ತಂದೆಯವರಿಂದಲೇ ಯಕ್ಷಗಾನದ ಜ್ಞಾನವನ್ನು ಪಡೆದುಕೊಂಡು,ಆನೆಗುಡ್ದೆ ವಿನಾಯಕ ದೇವಸ್ಥಾನದಲ್ಲಿ ಗೆಜ್ಜೆ ಕಟ್ಟಿ, ಕೊಡವೂರು ಮೇಳದಲ್ಲಿ ರಂಗಪ್ರವೇಶ ಮಾಡಿದರು. ಯಕ್ಷಗಾನ ರಂಗದಲ್ಲಿ ಕಠಿಣ ಪರಿಶ್ರಮ ಮತ್ತುಅಧ್ಯಯನಶೀಲ ಗುಣಗಳಿಂದಲೇ ಹಂತ ಹಂತವಾಗಿ ಮೇಲೆರುತ್ತ ಬಂದ ಇವರು,ತನ್ನ ತಂದೆಯವರ ರಾವಣ,ಭೀಮ,ವಲಲ ಮೊದಲಾದ ವೇಷಗಳಿಂದ ಪ್ರಭಾವಿತರಾಗಿ,ಹಿರಿಯ ಕಲಾವಿದರ ರಂಗನಡೆಯನ್ನು ನೋಡಿ,ಕೇಳಿ, ಕಲಿತು ಬಡಗುತಿಟ್ಟಿನ ಹಿರಿಯ ಕಲಾವಿದರ ಸಾಲಿನಲ್ಲಿ ಮರೆಯಾಗದ ಹೆಜ್ಜೆಗುರುತು ಮೂಡಿಸಿದ ಹಿರಿಯ ಕಲಾವಿದರು.. ಆಕರ್ಷಕವಾದ, ಸದೃಢವಾದ, ಶರೀರ ಮತ್ತು ಶಾರೀರವನ್ನು ಹೊಂದಿರುವ ಇವರು, ಎರಡನೆಯ ಮತ್ತು ಪುರುಷ ಪಾತ್ರಗಳೆರಡನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ..ತನ್ನ ಗಜ ಗಾಂಭೀರ್ಯದ ರಂಗನಡೆ,ಸುಂದರವಾದ ವೇಷಗಾರಿಕೆ,ಪ್ರೌಢ ಸಾಹಿತ್ಯ ಮತ್ತು ಸ್ಪಷ್ಟ ಮಾತುಗಾರಿಕೆಯ ಮೂಲಕ ಎಲ್ಲ ಪಾತ್ರಗಳಿಗೂ ಜೀವತುಂಬಿ ಅಭಿನಯಿಸಬಲ್ಲ ಕಲೆಯನ್ನು ಕರಗತ ಮಾಡಿ ಕೊಂಡ ಹಿರಿಯ ಕಲಾವಿದರಿವರು.. ಕೊಡವೂರು,ಪೆರ್ಡೂರು,ಗೋಳಿಗರಡಿ,ಸಾಲಿಗ್ರಾಮ, ಅಮೃತೇಶ್ವರಿ,ಮಾರಣಕಟ್ಟೆ ಮೊದಲಾದ ಮೇಳಗಳಲ್ಲಿ ಸುದೀರ್ಘ ಐದು ದಶಕಗಳ ಕಾಲ ಸೇವೆಸಲ್ಲಿಸಿದ ಇವರು,ಎರಡು ದಶಕಗಳಿಗೂ ಹೆಚ್ಚು ಕಾಲ ಮಂದಾರ್ತಿ ಮೇಳವೊಂದರಲ್ಲೇ ಸೇವೆ ಸಲ್ಲಿಸಿರುವುದು ಅವರ ಯಕ್ಷಜೀವನದ ಸುವರ್ಣ ಯುಗ.. ಜಾನುವಾರುಕಟ್ಟೆ ಭಾಗವತರು, ಮರಿಯಪ್ಪಾಚಾರ್, ಶಿರಿಯಾರ ಮಂಜು ನಾಯಕ್, ಅರಾಟೆ ಮಂಜುನಾಥ, ಹಳ್ಳಾಡಿ ಮಂಜಯ್ಯ ಶೆಟ್ಟಿ, ಕೋಡಿ ಶಂಕರ ಗಾಣಿಗ, ಮೊಳಹಳ್ಳಿ ಹೆರಿಯ ನಾಯ್ಕ, ಉಡುಪಿ ಬಸವ, ಮತ್ಯಾಡಿ ನರಸಿಂಹ ಶೆಟ್ಟಿ,ಹೆರಂಜಾಲು ಸುಬ್ಬಣ್ಣ ಮೊದಲಾದ ಹಿರಿಯ ಕಲಾವಿದರ ಸಾಂಗತ್ಯದಲ್ಲಿ ಸಾರ್ಥಕ ತಿರುಗಾಟವನ್ನು ನಡೆಸಿದ್ದಾರೆ . ಹಾರಾಡಿ -ಮಟಪಾಡಿ ತಿಟ್ಟುಗಳ ಸಮನ್ವಯ ಸಾಧಿಸಿ ರಂಗದಲ್ಲಿ ಮೆರೆದ ಇವರು ಕರ್ಣ,ಅರ್ಜುನ,ಸುಧನ್ವ,ತಾಮ್ರಧ್ವಜ, ಮಾರ್ತಾಂಡತೇಜ, ಚಿತ್ರಸೇನ, ಪುಷ್ಕಳ,ಕೃಷ್ಣ,ವೀರಮಣಿ, ಜಾಂಬವ, ಬಲರಾಮ,ಭೀಷ್ಮ,ದಕ್ಷ,ಕಮಲಭೂಪ, ಯಯಾತಿ ಮೊದಲಾದ ಪಾತ್ರಗಳ ಮೂಲಕ ಜನಮನ್ನಣೆ ಪಡೆದಿದ್ದರು.. ಜೋಡಾಟದಲ್ಲಿ ರಂಗಸ್ಥಳದ ಕಾವು ಹೆಚ್ಚಿಸಬಲ್ಲ ಇವರು, ಜೋಡಾಟದಲ್ಲಿ ಮಂಡಿ ತಿರುಗುವುದರಲ್ಲಿ ದಾಖಲೆ ನಿರ್ಮಿಸಿದ್ದರು. ಆಧುನಿಕತೆಯ ಭರಾಟೆಯಲ್ಲಿ ಕಳೆದು ಹೋಗದೆ,ಸಾಂಪ್ರಾದಾಯಿಕ ಸೊಗಡನ್ನೇ ಮೈಗೂಡಿಸಿಕೊಂಡ ಇವರು ,ಪೆರ್ಡೂರು ಮೇಳದಲ್ಲಿದ್ದ ಕಾಲದಲ್ಲಿ ನಗರ ಜಗನ್ನಾಥ ಶೆಟ್ಟಿ ಮತ್ತು ಐರೋಡಿ ಗೋವಿಂದಪ್ಪನವರೊಂದಿಗಿನ ಇವರ ಪೌರಾಣಿಕ ಪಾತ್ರಗಳು ಜನಮನ್ನಣೆಗೆ ಪಾತ್ರವಾಗಿದ್ದವು.. ಬಡಗುತಿಟ್ಟಿನ ಪರಂಪರೆಯ ವೇಷದಾರಿಯಾಗಿ ಸೇವೆಸಲ್ಲಿಸಿ,ನಡುತಿಟ್ಟಿನ ಯಕ್ಷಭೂಮಿಯಲ್ಲಿ ತನ್ನದೇ ವಿಶಿಷ್ಟ ಹೆಜ್ಜೆಗುರುತು ಮೂಡಿಸಿ ರಂಗದಿಂದ ನಿವೃತ್ತರಾಗಿರುವ ,76ರ ಹರೆಯದ ಶೆಟ್ಟರು,ಪ್ರಸ್ತುತ ಶಿರಿಯಾರ ಸಮೀಪದ ಯಡಾಡಿಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ..,ಶ್ರೀಮತಿ ರತಿ ಶೆಡ್ತಿಯವರನ್ನು ಪತ್ನಿಯಾಗಿ ಸ್ವೀಕರಿಸಿ, ಸವಿತಾ,ಕವಿತಾ ಮತ್ತು ಸಂತೋಷಿನಿ ಎನ್ನುವ ಮೂವರು ಹೆಣ್ಣು ಮಕ್ಕಳನ್ನು ಪಡೆದಿರುವ ಇವರು ಸುಖ ಸಂತೃಪ್ತ ಜೀವನವನ್ನು ಸಾಗಿಸುತ್ತಿದ್ದಾರೆ ... ತನ್ನ ಪ್ರಾಮಾಣಿಕತೆ ಮತ್ತು ಕಲಾನಿಷ್ಠೆಗಾಗಿ ಜಾಗತಿಕ ಬಂಟರ ಸಂಘದಿಂದ ಸನ್ಮಾನ,ಉಡುಪಿ ಕಲಾರಂಗ ಪ್ರಶಸ್ತಿ,ಮಸ್ಕತ್ ಕನ್ನಡ ಸಂಘದಿಂದ ಸನ್ಮಾನ,ಹಾರಾಡಿ ರಾಮಗಾಣಿಗ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಯನ್ನು ಈಗಾಗಲೇ ಮುಡಿಗೇರಿಸಿಕೊಂಡಿರುವ ಶೆಟ್ಟರು, ಸಾಲಿಗ್ರಾಮ ಮಕ್ಕಳ ಮೇಳದ ಸಂಸ್ಥಾಪಕರಲ್ಲೊಬ್ಬರಾದ ಸಾಹಿತಿ ಮತ್ತು ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಕಾರ್ಕಡ ಶ್ರೀನಿವಾಸ ಉಡುಪ ಸಂಸ್ಮರಣಾ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಜನವರಿ 14ರಂದು ಕೋಟ ಪಟೇಲರ ಮನೆಯಲ್ಲಿ ನಡೆಯುವ ಸಮಾರಂಭದಲ್ಲಿ,ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.. ಮಂದಾರ್ತಿ ಶ್ರೀದುರ್ಗಾಪರಮೇಶ್ವರಿಯೂ ಇವರಿಗೆ ಇನ್ನು ಹೆಚ್ಚಿನ ಯಶಸ್ಸನ್ನು ನೀಡಲಿ ಮತ್ತು ಇವರ ವಿಶ್ರಾಂತ ಜೀವನ ಸುಖಮಯವಾಗಿ ಸಾಗಲಿ ಎನ್ನುವುದು ನಮ್ಮ ಯಕ್ಷಮಂದಾರದ ಶುಭಹಾರೈಕೆ.. ಸಾಹಿತ್ಯ:ಹಾಲಾಡಿ ಸಂತೋಷ ಶೆಟ್ಟಿ ನಿರೂಪಣೆ:ಶ್ರೀಮತಿ ಅಮೃತಾ ಶೆಟ್ಟಿ.. This is the story of the yakshaartists and the story of life. Today our yakshaganas are the veteran artists of Badgutti, Majgebailu Ananda Shetty. He is a leading artist eminent in the traditional and yakshagana framework and has brought value to the yakshagana theatre. Ananda Shettar, who had been united in the two styles of badaguthitta, haradi and matpadi tittu, was born in 1944 to the son of madjibailu chandaiah shetty and chandamma shetty, the famous artistes of Badaguthitta, at Majhibailai near Bhiladi in Udupi district. He had studied only up to fifth standard and took knowledge of Yakshagana from his father, who was an artist, tied a gage at the Anegudde Vinayaka temple and entered the theater at Kodavur mela. He has been gradually uplifted by his hard work and studies in the field of Yakshagana, and he is influenced by his father's disguises like Ravana, Bhima, Valala, and has seen the stage of the veteran artistes, listening and learning and making a footprint among the veteran artistes of Badagutti. Attractive, strong, body and body, he has managed both the second and the male characters. He is a great artist who has mastered the art of life and life through his elegant disguise, his beautiful costume, mature literature and clear speech. ಯಕ್ಷಮಂದಾರ ವಿಡಿಯೋ ನೋಡಲೋಸುಗವಾಗಿ. ವಾಹಿನಿಯ ಹೋಮ್ ಪೇಜ್ ಗಾಗಿ: https://www.youtube.com/channel/UCsrL ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: https://www.facebook.com/groups/27334

Friday, January 8, 2021

#ಯಕ್ಷಮಂದಾರ - 49 | ಹೆಚ್.ಎಸ್.ಶ್ರೀಕಂಠ ಭಟ್ | H.S.Shreekant Bhat | Megaravalli Mela | ಜೀವನಗಾಥೆ | Part- 49

                                                     #ಯಕ್ಷಮಂದಾರ

#ಯಕ್ಷಮಂದಾರ - 49 | ಹೆಚ್.ಎಸ್.ಶ್ರೀಕಂಠ ಭಟ್ | H.S.Shreekant Bhat | Megaravalli Mela | ಜೀವನಗಾಥೆ | Part- 49

🌀ಯಕ್ಷ💥ಮಂದಾರ🌀 ಇದು ಯಕ್ಷ ಕಲಾವಿದರ ಸಾದನೆ ಮತ್ತು ಜೀವನಗಾಥೆಯ ಅನಾವರಣ.. ಇಂದಿನ ನಮ್ಮ ಯಕ್ಷಸಾಧಕರು ಬಡಗುತಿಟ್ಟಿನ ಹಿರಿಯ ವೇಷಧಾರಿ ಮೇಗರವಳ್ಳಿ ಮೇಳದ ಪ್ರಧಾನ ಕಲಾವಿದರಾದ ಹೆಚ್.ಎಸ್.ಶ್ರೀಕಂಠ ಭಟ್ ಎಡ್ಲಕುಡಿಗೆಯವರು.. ಇವರು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಹೊನ್ನಕೊಡಿಗೆ ಎಂಬಲ್ಲಿ ಶ್ರೀ ಶೇಷಗಿರಿಯಯ್ಯ ಮತ್ತು ಶ್ರೀಮತಿ ವಿಶಾಲಾಕ್ಷಮ್ಮನವರ ಪುತ್ರನಾಗಿ 1961ರಲ್ಲಿ ಜನಿಸಿದರು.. ಬಾಲ್ಯದಲ್ಲಿಯೇ ಯಕ್ಷಗಾನದ ಆಸಕ್ತಿಯನ್ನು ಹೊಂದಿದ್ದ ಇವರು ಮನೆಯಲ್ಲಿನ ಆರ್ಥಿಕ ಪರಿಸ್ಥಿತಿ ಕಷ್ಟಕರವಾಗಿದ್ದರಿಂದ ಏಳನೇಯ ತರಗತಿಗೆ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ,ಉಡುಪಿ ಯಕ್ಷಗಾನ ಕೇಂದ್ರವನ್ನು ಸೇರಿಕೊಂಡು ಶಾಸ್ತ್ರೀಯವಾಗಿ ಯಕ್ಷಗಾನವನ್ನು ಅಭ್ಯಸಿಸಿ,ಸಾಲಿಗ್ರಾಮ ಮೇಳದ ಮೂಲಕ ರಂಗಪ್ರವೇಶಗೈದರು. ನಂತರ ಬಾಳೆಹೊಳೆ,ಕಮಲಶಿಲೆ,ಕಿಗ್ಗ,ಅಮೃತೇಶ್ವರಿಸೌಕೂರು,ಮಾರಣಕಟ್ಟೆ ಮಂದಾರ್ತಿ, ಸೀತೂರು, ಸೋಮವಾರಸಂತೆ,ಹಿರಿಯಡ್ಕ ಮೊದಲಾದ ಮೇಳಗಳಲ್ಲಿ ಸುದೀರ್ಘ 35 ವರ್ಷಗಳಿಗೂ ಹೆಚ್ಚು ವರ್ಷಗಳಿಂದ ಸೇವೆ ಸಲ್ಲಿಸಿರುವ ಇವರು,ಪ್ರಸ್ತುತ ವರ್ಷದಿಂದ ಮೇಗರವಳ್ಳಿ ಮೇಳದಲ್ಲಿ ಎರಡನೇ ವೇಷದಾರಿಯಾಗಿ ಸೇವೆಸಲ್ಲಿಸಲಿದ್ದಾರೆ.. ಜಾಂಬವ, ಈಶ್ವರ,ಅರ್ಜುನ,ಕೃಷ್ಣ, ಸುಧನ್ವ,ಕಂಸ,ಕೌರವ ಮೊದಲಾದ ಪಾತ್ರಗಳಲ್ಲಿ ಅತ್ಯುತ್ತಮ ರಂಗ ನಿರ್ವಹಣೆ,ಬಾವಪೂರ್ಣ ಅಭಿನಯ ಸ್ಪಷ್ಟ ಸುಲಲಿತ ಮತ್ತು ಪಾಂಡಿತ್ಯಭರಿತ ವಾಗ್ವೈಕರಿಯಿಂದ ಜೀವತುಂಬಿ ಅಭಿನಯಿಸುವುದರ ಮೂಲಕ ಕೀರ್ತಿ ಪಡೆದ ಇವರು, ಅಸಂಖ್ಯಾತ ಕಲಾಭಿಮಾನಿಗಳ ಮನಗೆದ್ದ ಅಪೂರ್ವ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ.. ಯಕ್ಷಗಾನದ ಪಾತ್ರವನ್ನು ನಿರ್ವಹಿಸುವುದರ ಜೊತೆಗೆ ಚಂಡೆ,ಮದ್ದಲೆಯನ್ನು ಕೂಡ ನುಡಿಸಬಲ್ಲ ಇವರು,ತಾಳಮದ್ದಳೆಯ ಅರ್ಥದಾರಿಯಾಗಿ ಯಕ್ಷಗಾನದ ಎಲ್ಲ ವಿಭಾಗಗಳಲ್ಲಿಯೂ ಪ್ರಬುದ್ಧತೆಯನ್ನು ಸಾಧಿಸಿರುವ ಇವರನ್ನು ಕಲಾದೇವಿಯ ವರಪುತ್ರರೆಂದರೆ ತಪ್ಪಾಗಲಾರದು.. ಯಕ್ಷಗಾನ ರಂಗದಲ್ಲಿ ತಾನು ಬೆಳೆದಿದ್ದಲ್ಲದೆ,ಸಹ ಕಲಾವಿದರನ್ನೂ ತಿದ್ದಿತೀಡಿ ಸರಿದಾರಿಗೆ ತಂದ ಇವರು ಅನೇಕ ಶಿಷ್ಯಸಮೂಹವನ್ನು ಹೊಂದಿದ್ದು,ಭವಿಷ್ಯದ ಯಕ್ಷರಂಗಕ್ಕೆ ಅಮೂಲ್ಯ ಕೊಡುಗೆಯನ್ನು ನೀಡಿದ್ದಾರೆ.. ಯಾವುದೇ ಪಾತ್ರವನ್ನು ನಿರ್ವಹಿಸಿದರು ಪಾತ್ರದ ಒಳಹೊಕ್ಕು ಜೀವ ತುಂಬಿ ಅಭಿನಯಿಸಬಲ್ಲ ಇವರು ಬಾವಪೂರ್ಣ ವಾಗಿ ಪಾತ್ರದಲ್ಲಿ ಸಂದರ್ಭಯೋಚಿತವಾಗಿ ಅಭಿನಯಿಸಬಲ್ಲರು.. ಹಿತಮಿತವಾದ ನಾಟ್ಯ,ತರ್ಕಬದ್ಧವಾದ ವಾದ ಮಂಡನೆ,ಪ್ರಬುದ್ಧ ರಂಗನಡೆ,ಅಸ್ಕಲಿತ ಮತ್ತು ಶೃತಿಬದ್ಧವಾದ ಪ್ರೌಢ ಮಾತುಗಾರಿಕೆ , ಮತ್ತು ಪಾತ್ರಪೋಷಣೆಯಿಂದಾಗಿ ಯಕ್ಷರಂಗದ ಘನತೆ ಮತ್ತು ಗೌರವಕ್ಕೆ ಚ್ಯುತಿ ಬಾರದ ಹಾಗೆ ವ್ಯವಹರಿಸಿ ಅನೇಕ ಗೌರವ ಪುರಸ್ಕಾರಗಳನ್ನು ಪಡೆದಿದ್ದಾರೆ .. ಯಕ್ಷಗಾನ ಬಯಲಾಟ ಅಕಾಡೆಮಿಯಿಂದ ಗೌರವ ಪುರಸ್ಕಾರ,ನಾಗೇಶ್ ರಾವ್ ಬೆಟ್ಟಗೆರೆ ಇವರಿಂದ ಸನ್ಮಾನ,ವೆಂಕಟೇಶ್ವರ ಯಕ್ಷಗಾನ ಸಂಘ ಹೊನ್ನವಳ್ಳಿ ಇವರಿಂದ ಸನ್ಮಾನ,ಶೃಂಗೇರಿ ಶೃಂಗೇಶ್ವರಯ್ಯ ಕುಟುಂಬದವರಿಂದ ಸನ್ಮಾನ ಸೇರಿದಂತೆ ಅನೇಕ ಸನ್ಮಾನ ಮತ್ತು ಪುರಸ್ಕಾರಗಳು ದೊರೆತಿವೆ.. ಶ್ರೀಮತಿ ಶಕುಂತಳಾ ಅವರೊಂದಿಗೆ ಆದರ್ಶ ಜೀವನವನ್ನು ನಡೆಸಿ, ಶ್ರೀರಕ್ಷಾ, ಶ್ರೀಲತಾ ಮತ್ತು ಶ್ರೀನಿಧಿ ಎನ್ನುವ ಮೂವರು ಸುಪುತ್ರಿಯರನ್ನು ಪಡೆದಿರುವ ಇವರು ಪ್ರಸ್ತುತ ಎಡ್ಬಕುಡಿಗೆಯಲ್ಲಿ ನೆಲೆಸಿದ್ದು, ಸುಖ ಸಂತೃಪ್ತ ಜೀವನವನ್ನು ನಡೆಸುತಿದ್ದಾರೆ.. ಇವರಿಗೆ ಸುಜ್ಞಾನ ಸಂಪದೆಯಾದ ಶೃಂಗೇರಿ ಶ್ರೀ ಶಾರದಾ ಮಾತೆಯೂ ಸಕಲ ಇಷ್ಟಾರ್ಥಗಳನ್ನು ನೀಡಿ ಕಾಪಾಡಲಿ ಎನ್ನುವುದು ನಮ್ಮ ಯಕ್ಷಮಂದಾರದ ಶುಭಹಾರೈಕೆ... ಸಾಹಿತ್ಯ:ಹಾಲಾಡಿ ಸಂತೋಷ ಶೆಟ್ಟಿ.. ನಿರೂಪಣೆ:ಶ್ರೀಮತಿ ಅಮೃತಾ ಶೆಟ್ಟಿ 🌀yaksha💥mandar🌀 This is the story of the yakshaartists and the story of life. Today our yakshaganas are the main artistes of Megaravalli Mela, who is a veteran of badaguthitt. He was born in 1961 as the son of Sri Seshagiriyya and Mrs. Vishalakshamma at Honnakode in Sringeri taluk of Chikmagalur district. He was interested in Yakshagana in his early childhood and had to cut his education in class 7 and went to the Udupi Yakshagana Centre and studied yakshagana classically and entered the theatre through Saligramam Mela. He has served for more than 35 years in banalehole, kamalashila, kigga, amriteshwari saukur, marankatte mandarthi, samanastha, hiriyadka etc. and will serve as the second dresser in megaravalli mela from this year. He has been known for his outstanding performance in roles like Jambava, Ishwara, Arjuna, Krishna, Sudhanva, Kansa, Kaurava, and his performance in the role of Baopurna with a clear and intelligent oratory, and has become a unique artist who has won the hearts of innumerable artists. He plays the role of Yakshagana and also plays chandelier and maddale, who has mastered all the disciplines of Yakshagana as a talamadale meaning. He has not only brought up the yakshagana field but also corrected his fellow artistes and has a large number of disciples and has made valuable contributions to the future yakshagana. He can play a role in a full-fledged role. He has been awarded many honors by acting in a way that does not degrade the dignity and dignity of the Yakshagana through his dancing, rational presentation, mature ranganade, askalaand a soft and serene, and a disrespectful character. Yakshagana Bayalata Academy has received many honors and awards including honors from Nageshwarrao Bettagere, Honored by Venkateswara Yakshagana Sangh Honnavalli, Honour from Srirangam Shringeswarayya family. Having lived an ideal life with Mrs. Shakuntala and having three daughters Sriraksha, Srilatha and Srinidhi, she lives in Edbakkudi and leads a happy and satisfied life. Our yakshamandar abree wished him all the wishes of Sri Sringeri, Sri Sarada Mother, who is a wealthy man of knowledge. Literature:Haladi Santosh Shetty.. Narrative:Smt. Amrita Shetty ಯಕ್ಷಮಂದಾರ ವಿಡಿಯೋ ನೋಡಲೋಸುಗವಾಗಿ. ವಾಹಿನಿಯ ಹೋಮ್ ಪೇಜ್ ಗಾಗಿ: https://www.youtube.com/channel/UCsrL ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: https://www.facebook.com/groups/27334

Sunday, December 20, 2020


#ಯಕ್ಷಮಂದಾರ - 48 | ಕೊಳಲಿ ಕೃಷ್ಣ ಶೆಟ್ಟಿ | Kolali Krishna Shetty | ಮಾರಣಕಟ್ಟೆ ಮೇಳ | Maranakatte |

ಇದು ಯಕ್ಷ ಕಲಾವಿದರ ಸಾದನೆ ಮತ್ತು ಜೀವನಗಾಥೆಯ ಅನಾವರಣ.. ಇಂದಿನ ನಮ್ಮ ಯಕ್ಷಸಾಧಕರು ಬಡಗುತಿಟ್ಟಿನ ಜನಪ್ರಿಯ ಪುಂಡುವೇಷಧಾರಿ,ಅಭಿನವ ಅಭಿಮನ್ಯು.ಮಾರಣಕಟ್ಟೆ ಮೇಳದ ಕಲಾವಿದರಾದ ಕೊಳಲಿ ಕೃಷ್ಣ ಶೆಟ್ಟಿಯವರು.. ಇವರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಯಡಮೊಗೆ ಸಮೀಪದ ಕೊಳಾಲಿ ಎಂಬ ಪುಟ್ಟ ಹಳ್ಳಿಯಲ್ಲಿ ಗೋವಿಂದ ಶೆಟ್ಟಿ ಮತ್ತು ಸದಿಯಮ್ಮ ಶೆಡ್ತಿಯವರ ಕಿರಿಯ ಪುತ್ರನಾಗಿ ದಿನಾಂಕ: 09.08.1967ರಲ್ಲಿ ಜನಿಸಿದರು.. ಬಾಲ್ಯದಲ್ಲಿಯೇ ಯಕ್ಷಗಾನದ ಅಭಿರುಚಿಯನ್ನು ಬೆಳೆಸಿಕೊಂಡಿದ್ದ ಇವರು, ತನ್ನ ಹದಿಮೂರನೆಯ ವಯಸ್ಸಿನಲ್ಲಿ ತನ್ನ ಐದನೆಯ ತರಗತಿಗೆ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ, ಆಗಿನ ಕಮಲಶಿಲೆ ಮೇಳದ ಯಜಮಾನರಾದ ಶ್ರೀಧರ ಕನ್ನಂತರ ಪ್ರೇರಣೆಯಿಂದ ಕಮಲಶಿಲೆ ಮೇಳಕ್ಕೆ ಸೇರಿಕೊಂಡರು.. ನಂತರ ಆಲೂರು ಸುರೇಂದ್ರ ಮತ್ತು ವಿಶ್ವೇಶ್ವರ ಸೋಮಯಾಜಿಯವರಿಂದ ಯಕ್ಷಗಾನ ಕಲೆಯ ಸರ್ವಾಂಗಗಳ ಮಾಹಿತಿಯನ್ನು ಕರಗತ ಮಾಡಿಕೊಂಡು, ಹಂತಹಂತವಾಗಿ ಯಕ್ಷರಂಗದಲ್ಲಿ ಪ್ರಬುದ್ಧತೆಯನ್ನು ಸಾದಿಸುತ್ತ ಬಂದರು.. ಖಚಿತ ಲಯಸಿದ್ದಿಯೊಂದಿಗೆ,ಪಾದರಸ ಸದೃಶ್ಯ ಪಾದಗತಿಯನ್ನು ಹೊಂದಿರುವ ಇವರ, ಆಕರ್ಷಕ ನಾಟ್ಯ, ಹಿತಮಿತವಾದ ಮಾತುಗಾರಿಕೆ,ರಂಗದ ಚೌಕಟ್ಟನ್ನು ಮೀರದ ಇವರ ರಂಗನಡೆ,ಸುಂದರವಾದ ವೇಷಭೂಷಣಗಳ ಮೂಲಕ ಕಲಾಭಿಮಾನಿಗಳನ್ನು ಆಕರ್ಷಿಸಬಲ್ಲ ವ್ಯಕ್ತಿತ್ವ ಇವರದ್ದು... ದಕ್ಷ ಯಜಮಾನರೆಂದೇ ಪ್ರಸಿದ್ಧರಾದ ಯಕ್ಷಭೀಷ್ಮ ದಿ. ಎಂ.ಎಂ.ಹೆಗ್ಡೆಯವರ ಶಿಸ್ತಿನ ರಂಗ ಚೌಕಟ್ಟಿನಲ್ಲಿ,ಐರ್ಬೈಲು ಆನಂದ ಶೆಟ್ಟಿ,ಗೋಳಿಕೆರೆ ಚಂದ್ರ ಗೌಡ,ದಿ.ನೀಲಾವರ ಮಹಾಬಲ ಶೆಟ್ಟಿ,ಉಮೇಶ ಸುವರ್ಣ,ದಿ.ಮೊಳಹಳ್ಳಿ ಹೆರಿಯ ನಾಯ್ಕ ಆಲೂರು ಸುರೇಂದ್ರ ಉಪ್ಪಿನಕುದ್ರು ಆನಂದ,ಯಳಬೇರು ಶೇಖರ ಶೆಟ್ಟಿ ಹೆನ್ನಾಬೈಲು ಸಂಜೀವ ಶೆಟ್ಟಿಯವರಂಥ ಹಿರಿಯ ಕಲಾವಿದರ ಒಡನಾಟದಲ್ಲಿ,ಬಡಗುತಿಟ್ಟಿನ ಪ್ರಸಿದ್ದ ವೇಷಧಾರಿಯಾಗಿ ರೂಪಗೊಂಡರು ... ಅಭಿಮನ್ಯು ಕಾಳಗದ ಇವರ ಅಭಿಮನ್ಯು ಪಾತ್ರ ಇವರಿಗೆ ಬಹು ಪ್ರಸಿದ್ಧಿಯನ್ನು ತಂದುಕೊಟ್ಟಿದೆ ಅಲ್ಲದೆ ಕೃಷ್ಣ,ಸುಧನ್ವ,ಧರ್ಮಾಂಗದ,ಲವ,ಕುಶ, ಶುಭಾಂಗ,ಬಬ್ರುವಾಹನ,ದೇವವ್ರತ, ಮತ್ತು ಮಾರಣಕಟ್ಟೆ ಕ್ಷೇತ್ರ ಮಹಾತ್ಮೆಯ ಸ್ಕಂದನ ಪಾತ್ರಗಳು ಇವರಿಗೆ ಹೆಚ್ಚಿನ ಪ್ರಸಿದ್ಧಿಯನ್ನು ತಂದುಕೊಟ್ಟಿದೆ..ಕೃಷ್ಣನ ಪಾತ್ರದಲ್ಲಿನ ಇವರ ಪಾತ್ರಪೋಷಣೆ,ಅಭಿನಯ,ಲಾಲಿತ್ಯಪೂರ್ಣ ನಾಟ್ಯವನ್ನು ಮೆಚ್ಚದೆ ಇರುವ ಕಲಾಭಿಮಾನಿಗಳೇ ಇಲ್ಲ ಎನ್ನಬಹುದು..ಬಹು ಸುದೀರ್ಘ ವರ್ಷ ಮಾರಣಕಟ್ಟೆ ಮೇಳದಲ್ಲಿ ಸೇವೆ ಸಲ್ಲಿಸಿದ ಇವರು,ಪೆರ್ಡೂರು, ಕಮಲಶಿಲೆ,ಸೌಕೂರು, ನೀಲಾವರ,ಮಂದಾರ್ತಿ. ಮೊದಲಾದ ಮೇಳದಲ್ಲಿ ತಮ್ಮ ಕಲಾ ಪ್ರೌಢಿಮೆಯನ್ನು ಪದರ್ಶಿಸಿ ಪ್ರಸ್ತುತ ಪುನಃ ಮಾರಣಕಟ್ಟೆ ಮೇಳದಲ್ಲಿ ಸೇವೆಸಲ್ಲಿಸುತ್ತಿದ್ದಾರೆ.. ಇವರ ಪ್ರಾಮಾಣಿಕ ಕಲಾಸೇವೆಯನ್ನು ಪರಿಗಣಿಸಿ ಹಲವು ಸಂಘ ಸಂಸ್ಥೆಗಳು ಇವರನ್ನು ಗೌರವಪೂರ್ವಕವಾಗಿ ಸನ್ಮಾನಿಸಿವೆ.. ಪತ್ನಿ ಶೀಲಾವತಿ ಇವರೊಂದಿಗೆ ಅನುರೂಪ ದಾಂಪತ್ಯವನ್ನು ನಡೆಸಿ ಪವಿತ್ರ ಮತ್ತು ಪ್ರಸಾದ ಎನ್ನುವ ಎರಡು ಮಕ್ಕಳನ್ನು ಪಡೆದಿರುವ ಇವರು ಸಂತೃಪ್ತ ಜೀವನವನ್ನು ನಡೆಸುತ್ತಿದ್ದಾರೆ.. ಇವರಿಗೆ ಇನ್ನು ಹೆಚ್ಚಿನ ವರ್ಷ ಯಕ್ಷಮಾತೆಯ ಕಲಾಸೇವೆಗೈಯುವ ಭಾಗ್ಯವನ್ನು ಶ್ರೀ ಬ್ರಹ್ಮಲಿಂಗೇಶ್ವರ ಸ್ವಾಮಿಯು ಅನುಗ್ರಹಿಸಲಿ,ಇವರ ಕೀರ್ತಿ ಪ್ರಜ್ವಲಿಸಲಿ ಎನ್ನುವುದು ಯಕ್ಷಮಂದಾರದ ಶುಭಹಾರೈಕೆ... ಸಾಹಿತ್ಯ: ಸಂತೋಷ ಶೆಟ್ಟಿ ಹಾಲಾಡಿ. ನಿರೂಪಣೆ: ಶ್ರೀಮತಿ ಅಮೃತಾ ಶೆಟ್ಟಿ.. This is the story of the yakshaartists and the story of life. Our yakshaganas today are the popular saints of Badaguthitta, Abhinavabhimanyu. He was born on 09.08.1967 as the youngest son of Govinda Shetty and Sadiyamma Shetty in a small village near Yadamoge in Kundapur taluk of Udupi district. He had developed a passion for Yakshagana in his early childhood and at the age of thirteen he had cut out his fifth grade and joined kamalashilmela inspired by the then kamalashile master Sridhara Kannan. Then, alur surendra and vishveswara somayaji mastered the all-round information of yakshagana art and gradually came to the yakshagana. With a certain rhythm, mercury and a soft foot, he has a charming dance, a pleasant speech, his rangade, his rangadhe, his beautiful costumes, and a personality that attracts artists with beautiful costumes. Yakshasbhishma, famous as daksha masters. In the disciplinary framework of M.M.Hegde, Irbailu Ananda Shetty, Golikere Chandra Gowda, D.Neelavara Mahabalshetty, Sukumar Suvarna, D.Molahalli Heri Nayak Surendra Uppankudru Ananda, Yelaberu Sekhar Shetty, hennabailu Sanjeeva Shetty, etc., became the famous garb of caragutittis. His role in the battle of Abhimanyu has brought him great fame and has brought him the most popular characters krishna, sudhanva, dharmanga, lava, kusha, shubhanga, babruvahana, devavrata and maranaketta kshetra mahatma skanda. There are no artistes who do not appreciate the role of Krishna in the role of the actor. He served for a long time at The Maranakatte Mela, perdur, kamalashili, saukur, neelavara, mandarthi. He has been performing his artistic excellence in the mela and is now serving in marankatte mela. Many institutions have honoured him with respect for his sincere work. He has two children, Sacred and Prasad, who have married with his wife, Sheelavathi, and lead a satisfying life. May Sri Brahma Lingaswami bless him with the blessing of his artfor more years and his reputation to brighten his glory. Literature: Santosh Shetty Haladi. Narration: Mrs. Amrita Shetty.. ಯಕ್ಷಮಂದಾರ ವಿಡಿಯೋ ನೋಡಲೋಸುಗವಾಗಿ. ವಾಹಿನಿಯ ಹೋಮ್ ಪೇಜ್ ಗಾಗಿ: https://www.youtube.com/channel/UCsrL ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: https://www.facebook.com/groups/27334

Monday, December 14, 2020

#ಯಕ್ಷಮಂದಾರ - 46 | ಉಪ್ಪುಂದ ಶ್ರೀದರ ಗಾಣಿಗ | Uppunda Shreedhara Ganiga | ಯಕ್ಷರಂಗ

#ಯಕ್ಷಮಂದಾರ



#ಯಕ್ಷಮಂದಾರ - 46 | ಉಪ್ಪುಂದ ಶ್ರೀದರ ಗಾಣಿಗ | Uppunda Shreedhara Ganiga |

ಬಡಗುತಿಟ್ಟಿನ ಯಕ್ಷರಂಗದಲ್ಲಿ ಪ್ರಧಾನ ಸ್ತ್ರೀವೇಷದಾರಿಗಳ ಸಾಲಿನಲ್ಲಿ ಗುರುತಿಸಿಕೊಂಡಿರುವ ಕಲಾವಿದರಲ್ಲಿ ಉಪ್ಪುಂದ ಶ್ರೀದರ ಗಾಣಿಗರದ್ದು ಪ್ರಸಿದ್ಧ ಹೆಸರು... ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಉಪ್ಪುಂದ ರಾಮ ಗಾಣಿಗ ಮತ್ತು ಗಿರಿಜ ಗಾಣಿಗರ ದ್ವಿತೀಯ ಪುತ್ರನಾಗಿ ದಿನಾಂಕ:09.09.1973ರಲ್ಲಿ ಜನಿಸಿದರು. ಬಾಲ್ಯದಲ್ಲಿಯೇ ಯಕ್ಷಗಾನದ ಬಗ್ಗೆ ಅಪಾರವಾದ ಆಸಕ್ತಿಯನ್ನು ಬೆಳೆಸಿಕೊಂಡಿರುವ ಇವರು ಹೆರಂಜಾಲು ವೆಂಕಟರಮಣ ಗಾಣಿಗರಿಂದ ಯಕ್ಷಗಾನ ಕಲೆಯ ಹೆಜ್ಜೆಗಾರಿಕೆಯ ಮೂಲಸ್ವರೂಪವನ್ನು ಅಭ್ಯಸಿಸಿ,ಹಿರಿಯ ಕಲಾವಿದರ ವೇಷಗಾರಿಕೆ, ಮಾತುಗಾರಿಕೆಯನ್ನು ನೋಡಿ ಶ್ರದ್ಧೆ ಮತ್ತು ಕಠಿಣ ಅಭ್ಯಾಸದಿಂದ ಕರಗತ ಮಾಡಿಕೊಂಡು ಪ್ರಬುದ್ಧ ವೇಷದಾರಿಯಾಗಿ ಮೂಡಿಬಂದರು. ಸ್ತ್ರೀವೇಷಕೊಪ್ಪುವ ಆಳಾಂಗ, ಮಾದಕ ಸೌಂದರ್ಯ,ಒನಪು ವೈಯಾರದ ರಂಗನಡೆ,ಶೃಂಗಾರಭರಿತ ನಾಟ್ಯ,ಸುಲಲಿತವಾದ ಮಾತುಗಾರಿಕೆ,ಅಪಾರ ರಂಗಾನುಭವಗಳಿಂದ ಕಲಾಭಿಮಾನಿಗಳ ಅಭಿಮಾನ,ಮನ್ನಣೆಗೆ ಪಾತ್ರರಾಗಿದ್ದಾರೆ ಶೃಂಗಾರ,ವೀರ,ಬಾವನಾತ್ಮಕ ಸ್ತ್ರೀಪಾತ್ರಗಳಿಗೆ ತನ್ನದೆ ಸ್ವಂತಿಕೆಯ ನೆಲೆಯಲ್ಲಿ ಜೀವ ತುಂಬಬಲ್ಲ ಕಲಾವಿದರಿವರು.ಯಾವುದೇ ಪ್ರಸಂಗದ ಯಾವುದೇ ಸ್ತ್ರೀ ಪಾತ್ರವನ್ನು ನೀಡಿದರೂ ಅದಕ್ಕೆ ನ್ಯಾಯ ಒದಗಿಸಬಲ್ಲ ಕಲಾವಿದರು.ಶಶಿಪ್ರಭೆ,ಭ್ರಮರಕುಂತಲೆ,ಮೀನಾಕ್ಷಿ,ದ್ರೌಪತಿ,ಸುಭದ್ರೆ ಮೊದಲಾದ ವೀರರಸದ ಪಾತ್ರಗಳ ಜೊತೆಗೆ ಸೀತೆ ಅಂಬೆ,ಚಿತ್ರಾಂಗದೆ,ಚಂದ್ರಮತಿ, ದಮಯಂತಿ ಕಯಾದು,ರುಚಿಮತಿ,ಗುಣಸುಂದರಿ ಮೊದಲಾದ ಬಾವನಾತ್ಮಕ ಪಾತ್ರಗಳನ್ನು,ಚಿತ್ರಾಕ್ಷಿ,ವಿಷಯೆ, ಲಕ್ಷೀದೇವಿ,ಅಶಿಕೆ,ಮೇನಕೆ,ಮೋಹಿನಿಮೊದಲಾದ ಶೃಂಗಾರಭರಿತ ಪಾತ್ರಗಳನ್ನು ಔಚಿತ್ಯಪೂರ್ಣವಾಗಿ ಅಭಿನಯಿಸಬಲ್ಲರು..ಇವರ ಶ್ರೀದೇವಿಯ ಪಾತ್ರ ಇವರಿಗೆ ಹೆಚ್ಚಿನ ಪ್ರಸಿದ್ಧಿಯನ್ನು ತಂದುಕೊಟ್ಟಿದೆ... ನಿರಂತರ ಇಪ್ಪತ್ತೈದು ವರ್ಷಗಳಿಂದ ಕಲಾಮಾತೆಯ ಸೇವೆಸಲ್ಲಿಸುತ್ತಿರುವ ಇವರು ಮಾರಣಕಟ್ಟೆ,ಸೌಕೂರು, ಕಮಲಶಿಲೆ, ಕೋಟ ಅಮೃತೇಶ್ವರಿ ಮತ್ತು ಹದಿನಾರು ವರ್ಷಗಳ ಕಾಲ ನಿರಂತರ ಮಂದಾರ್ತಿ ಮೇಳಗಳಲ್ಲಿ ಸೇವೆ ಸಲ್ಲಿಸಿ,ಪ್ರಸಕ್ತ ವರ್ಷದಿಂದ ಮಾರಣಕಟ್ಟೆ ಮೇಳದಲ್ಲಿ ತಿರುಗಾಟ ನಡೆಸುತ್ತಿದ್ದಾರೆ. ಅತ್ಯಂತ ಮೃದುಸ್ವಭಾವದವರಾದ ಗಾಣಿಗರು ಶಿಸ್ತು,ಸರಳ,ಸಜ್ಜನಿಕೆಯ ಸಾಕಾರಮೂರ್ತಿಯೆಂದರೂ ತಪ್ಪಾಗಲಾರದು. ತನ್ನ ವೃತಿಪರ ಮತ್ತು ವೈಯುಕ್ತಿಕ ಬದುಕಿನಲ್ಲೂ ಕರ್ತವ್ಯನಿಷ್ಠೆ,ಸಮಯಪ್ರಜ್ಞೆ,ವಿನಮ್ರತೆ,ಕಠಿಣ ಪರಿಶ್ರಮದ ಗುಣಗಳನ್ನು ಅಳವಡಿಸಿಕೊಂಡಿರುವ ಇವರು,ತನ್ನ ಬಿಡುವಿನ ಅವಧಿಯಲ್ಲಿ ಟೈಲರಿಂಗ್ ವೃತ್ತಿಯನ್ನು ಮಾಡುತ್ತಿದ್ದಾರೆ.. ಯಕ್ಷಗಾನ ಆಸಕ್ತಿಯನ್ನು ಹೊಂದಿರುವ ಯುವಕರು ಮತ್ತು ವಿದ್ಯಾರ್ಥಿಗಳಿಗೆ ಯಕ್ಷಗಾನದ ಶಿಕ್ಷಣವನ್ನು ನೀಡುತ್ತಿರುವ ಇವರು ಯಡ್ತರೆ ರಾಹುತನಕಟ್ಟೆ ರಾಹುತೇಶ್ವರ ಯಕ್ಷಗಾನ ಸಂಘದ ವಿದ್ಯಾರ್ಥಿಗಳು ಸೇರಿದಂತೆ ಹಲವರಿಗೆ ಯಕ್ಷಗಾನದ ಜ್ಞಾನವನ್ನು ನೀಡಿದ್ದಾರೆ... ನಾಡಿನಾದ್ಯಂತ ಸಹಸ್ರಾರು ಅಭಿಮಾನಿಗಳನ್ನು ಹೊಂದಿರುವ ಇವರಿಗೆ ದಿ.ಹಾರಾಡಿ ರಾಮ ಗಾಣಿಗ ಸ್ಮರಣಾರ್ಥ ನೀಡುವ ಪ್ರಶಸ್ತಿ,ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಬೈಂದೂರು ಶಾಖೆಯಿಂದ ಸನ್ಮಾನ, ಯಡ್ತರೆ ರಾಹುತೇಶ್ವರ ಯಕ್ಷಕಲಾಕೇಂದ್ರದ ವಿದ್ಯಾರ್ಥಿಗಳಿಂದ ಗುರುವಂದನೆ ಸೇರಿದಂತೆ ಹಲವಾರು ಸಂಘಸಂಸ್ಥೆಗಳಿಂದ ಸನ್ಮಾನ, ಪುರಸ್ಕಾರಗಳು ದೊರಕಿವೆ. ಶ್ರೀಮತಿ ಸುಮಿತ್ರಾರವರನ್ನು ಬಾಳಸಂಗಾತಿಯನ್ನಾಗಿ ಸ್ವೀಕರಿಸಿದ ಇವರು ಶ್ರೇಯಾ ಮತ್ತು ಚಿರಾಗ್ ಎಂಬ ಎರಡು ಮಕ್ಕಳನ್ನು ಪಡೆದಿದ್ದಾರೆ.. ಸದ್ಯ ತಂದೆ,ತಾಯಿ, ಪತ್ನಿ ಮತ್ತು ಮಕ್ಕಳೊಂದಿಗೆ ಉಪ್ಪುಂದದಲ್ಲಿ ವಾಸವಾಗಿದ್ದಾರೆ... ಇವರ ಮುಂದಿನ ಕಲಾಪಯಣವು ಸಾಂಗವಾಗಿ ಸಾಗಲಿ,ಇವರಿಗೆ ಶ್ರೀ ಬ್ರಹ್ಮಲಿಂಗೇಶ್ವರ ಸ್ವಾಮಿಯು ಆಯುರಾರೋಗ್ಯ, ಸುಖಸಂಪತ್ತನ್ನು ಅನುಗ್ರಹಿಸಲಿ ಎನ್ನುವುದು ನಮ್ಮ ಯಕ್ಷಮಂದಾರ ದ ಶುಭಹಾರೈಕೆ....🙏 ಸಾಹಿತ್ಯ:ಸಂತೋಷ ಶೆಟ್ಟಿ ಹಾಲಾಡಿ... ನಿರೂಪಣೆ:ಶ್ರೀಮತಿ ಅಮೃತಾ ಶೆಟ್ಟಿ..


#ಯಕ್ಷಮ

The famous name of The Salt Sreedar Ganigarathu is among the artists who are among the leading female disguises in the yakshaganaranga of Badaguthitti...

He was born on 09.09.1973 as the second son of Rama Ganiga and Girija Ganiga in Kundapur taluk of Udupi district.

He had developed a great interest in Yakshagana in his childhood and studied the basic form of yakshagana art by Heranjalu Venkataramana Ganiga, and became a mature disguise man with his disguise and discourse.

Alanga, a woman's disguise, The artists who are able to give their own life to the female characters of sexy beauty, erotic dance, and a lot of theatrical experiences, are artists who can give life to the female characters of their own. Damayanti Kayadu, Ruchimati, Gunasundari, etc. She can play erotic characters like Lakshmi Devi, Aashike, Menake, Mohini. His role in Sridevi has made him more famous...
He has been serving the artmother for twenty-five years and has been roaming in Marankatte, Saukur, Kamalashila, Kota Amriteshwari and Mandaranam amriteswari for sixteen years and has been roaming the marankatte mela since this year.

The most gentle man is a disciplined, simple, and good-natured figure. He has also adopted his duty, time lines, humility, hard work and is doing tailoring during his spare time.

He is giving yakshagana education to youth and students who are interested in Yakshagana and has given knowledge of Yakshagana to many students including students of Yadtare Rahutakate Rahutheswara Yakshagana Sangam.

He has a thousand fans across the country and has been awarded the Award in memory of D.Haradi Rama Ganiga, honoured by the Byndoor branch of Karnataka Dalit Samiti, guru vandana from students of Yadre Rahuteswara Yakshakala Kendra.

She took Mrs. Sumitra as a partner and had two children, Shreya and Chirag. Currently he lives in Uppanda with his parents, wife and children...

Our yakshamandar a blessing that Sri Brahma lingaswami will bless him with a long life and happiness. 🙏

Santosh Shetty Haladi...

Narration:Smt. Amrita Shetty..


ಯಕ್ಷಮಂದಾರ ವಿಡಿಯೋ ನೋಡಲೋಸುಗವಾಗಿ.


ವಾಹಿನಿಯ ಹೋಮ್ ಪೇಜ್ ಗಾಗಿ: https://www.youtube.com/channel/UCsrL


ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: https://www.facebook.com/groups/27334

#ಯಕ್ಷಮಂದಾರ - 47 | ಕೆದಿಲ ಜಯರಾಮ ಭಟ್ | Kedila Jayaram Bhat | ಧರ್ಮಸ್ಥಳ ಮೇಳ | ಯಕ್ಷಗಾನ ಕಲಾವಿದ| ಸ್ತ್ರೀಪಾತ್ರ

                                                           #ಯಕ್ಷಮಂದಾರ


#ಯಕ್ಷಮಂದಾರ - 47 | ಕೆದಿಲ ಜಯರಾಮ ಭಟ್ | Kedila Jayaram Bhat | ಧರ್ಮಸ್ಥಳ ಮೇಳ | ಯಕ್ಷಗಾನ ಕಲಾವಿದ| ಸ್ತ್ರೀಪಾತ್ರ

ಇದು ಯಕ್ಷ ಕಲಾವಿದರ ಸಾದನೆ ಮತ್ತು ಜೀವನಗಾಥೆಯ ಅನಾವರಣ.. ಇಂದಿನ ನಮ್ಮ ಯಕ್ಷಸಾಧಕರು.. ಯಕ್ಷಲೋಕದ ಚಿರಕನ್ಯೆ.. ಉಭಯತಿಟ್ಟುಗಳ ಸ್ತ್ರೀಪಾತ್ರದಾರಿ ಕೆದಿಲ ಜಯರಾಮ ಭಟ್ಟರು.. ಶ್ರೀಯುತರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೆದಿಲ ಎನ್ನುವ ಗ್ರಾಮದಲ್ಲಿ ದಿ.ಶಂಕರನಾರಾಯಣ ಭಟ್ ಮತ್ತು ದಿ.ಲಕ್ಷಿಯಮ್ಮ ದಂಪತಿಗಳ ಸುಪುತ್ರರಾಗಿ ದಿನಾಂಕ:04.04.1964ರಲ್ಲಿ ಜನಿಸಿದರು.. ಪುತ್ತೂರಿನ ಸೈ0ಟ್ ಫಿಲೋಮಿನಾ ಹೈಸ್ಕೂಲ್.. ನಲ್ಲಿ ಹತ್ತನೇಯ ತರಗತಿಯವರೆಗಿನ ಶಿಕ್ಷಣವನ್ನು ಪಡೆದರು. ಬಾಲ್ಯದಲ್ಲಿಯೇ ಇವರಿಗೆ ನೃತ್ಯ, ನಾಟಕ ಮೊದಲಾದ ಕ್ಷೇತ್ರಗಳಲ್ಲಿ ಅಭಿರುಚಿ ಇದ್ದರೂ ಕೂಡ,ಯಕ್ಷಗಾನದ ಕುರಿತಾದ ಮಾಹಿತಿ ಇರಲಿಲ್ಲ.. ತಾನು ಶಾಲೆಗೆ ಹೋಗುವಾಗ ಸಹಪಾಠಿ ವಿದ್ಯಾರ್ಥಿಗಳು ಯಕ್ಷಗಾನದ ಅಭ್ಯಾಸ ಮಾಡುವುದನ್ನು ನೋಡಿ ಕುತೂಹಲದಿಂದ ಆಸಕ್ತಿಯನ್ನು ಬೆಳೆಸಿಕೊಂಡ ಇವರು,ನಂತರ ಪಾಂಡುರಂಗ ಠಾಕ್ರೆಯವರ ಪ್ರೇರಣೆಯಿಂದ, ಧರ್ಮಸ್ಥಳದ ಯಕ್ಷಗಾನ ಕೇಂದ್ರದಲ್ಲಿ ಗುರುಗಳಾದ ಕರ್ಗಲ್ಲು ವಿಶ್ವೇಶ್ವರ ಭಟ್ ಮತ್ತು ಸೂರಿಕುಮೇರು ಗೋವಿಂದ ಭಟ್ಟರ ಶಿಷ್ಯರಾಗಿ, ಯಕ್ಷಗಾನದ ಸರ್ವಾಂಗಗಳ ಮಾಹಿತಿ ಪಡೆದುಕೊಂಡು,ಮುಂದಿನ ತಿರುಗಾಟದ ಅವಧಿಯಲ್ಲಿ ಹಿರಿಯ ಕಲಾವಿದರ ರಂಗನಡೆ ಮತ್ತು ಹೆಜ್ಜೆಗಾರಿಕೆ,ನಾಟ್ಯ ಮತ್ತು ಮಾತುಗಾರಿಕೆಯನ್ನು ಕಲಿತು,ಸ್ವಸಾಮರ್ಥದಿಂದ ಆರ್ಜಿಸಿಕೊಳ್ಳುತ್ತ ಯಕ್ಷರಂಗದ ಭರವಸೆಯ ಕಲಾವಿದರಾಗಿ ಮೂಡಿಬಂದರು.. ಪ್ರಪ್ರಥಮವಾಗಿ ಅರುವ ಮೇಳದಲ್ಲಿ ಗೆಜ್ಜೆಕಟ್ಟಿ,ಯಕ್ಷ ಸೇವೆಯನ್ನು ಪ್ರಾರಂಭಿಸಿದ ಇವರು ನಂತರ ತೆಂಕುತಿಟ್ಟಿನ ಕರ್ನಾಟಕ,ಮದೂರು,ಕದ್ರಿ, ಸುರತ್ಕಲ್, ಮಂಗಳಾದೇವಿ ಮೇಳಗಳಲ್ಲಿ ಮತ್ತು ಮಂದಾರ್ತಿ ಪೆರ್ಡೂರು, ಸಾಲಿಗ್ರಾಮ,ಗೋಳಿಗರಡಿ ಮೊದಲಾದ ಬಡಗುತಿಟ್ಟಿನ ಮೇಳಗಳಲ್ಲಿಯೂ ಕೂಡ ಸೇವೆಸಲ್ಲಿಸಿದ್ದಾರೆ.. ಸುದೀರ್ಘ ಹನ್ನೊಂದು ವರ್ಷಗಳ ಕಾಲ ಪ್ರದಾನ ಸ್ತ್ರೀಪಾತ್ರದಾರಿಯಾಗಿ ಧರ್ಮಸ್ಥಳ ಮೇಳದಲ್ಲಿ ಸೇವೆಸಲ್ಲಿಸಿದ ಇವರು,ಪ್ರಸ್ತುತ ವರ್ಷದಿಂದ ಶ್ರೀಕ್ಷೇತ್ರ ಹಟ್ಟಿಯಂಗಡಿ ಮೇಳದಲ್ಲಿ ಸೇವೆವಿಸಲ್ಲಿಸುತ್ತಿದ್ದಾರೆ.. ಸ್ತ್ರೀ ಪಾತ್ರಕೋಪ್ಪುವ ಸುಂದರವಾದ ಶರೀರ ಮತ್ತು ಶಾರೀರವನ್ನು ಹೊಂದಿರುವ ಇವರು ಶೃಂಗಾರ, ವೀರ ಮತ್ತುಭಕ್ತಿ ಪ್ರಧಾನ ವೇಷಗಳಿಗೆ ಹೊಸ ಅರ್ಥವನ್ನು ಕಲ್ಪಿಸಿಕೊಡಬಲ್ಲ ಮೇರು ಕಲಾವಿದರಾಗಿದ್ದು, ಸಾಲಿಗ್ರಾಮ ಮೇಳದಲ್ಲಿ ಪ್ರದರ್ಶಿಸಲ್ಪಟ್ಟ ಗೀತಗಾಯತ್ರಿ ಪ್ರಸಂಗದಲ್ಲಿ ಗೀತಾಪಾಲಿ ಎಂಬ ಶೃಂಗಾರ ಭರಿತ ವೈಶ್ಯೆಯ ಪಾತ್ರದಲ್ಲಿ ವಿಡಂಬಾನಾತ್ಮಕವಾಗಿ ಬಾಗವತರನ್ನು ಮಾತಿಗೆಳೆಯುತ್ತ, ರಂಗದಲ್ಲಿ ನೈಜ್ಯ ಸನ್ನಿವೇಶವನ್ನು ಸೃಷ್ಟಿಸಿ ಪ್ರೇಕ್ಷರರನ್ನು ಮಂತ್ರಮುಗ್ದಗೊಳಿಸಿದ ಇವರ ಪಾತ್ರಚಿತ್ರಣ ಇವರ ಪ್ರಬುದ್ಧತೆಯ ವೇಷಗಾರಿಕೆಗೊಂದು ಉದಾಹರಣೆಯಷ್ಟೇ... ಧರ್ಮಸ್ಥಳ ಕ್ಷೇತ್ರ ಮಹಾತ್ಮೆಯ ಅಂಬುದೇವಿಯ ಪಾತ್ರದಲ್ಲಿನ ಇವರ ಅಭಿನಯ ಜನಮನದಲ್ಲಿ ನೆಲೆನಿಲ್ಲುವಂತದ್ದು... ಪಾತ್ರವೇ ತಾನಾಗಿ ರಂಗದಲ್ಲಿ ಮೈಮರೆಯುವ ಇವರು ತನಗೊದಗಿ ಬಂದ ಪಾತ್ರಗಳಿಗೆ ಔಚಿತ್ಯಪೂರ್ಣ ಅರ್ಥವನ್ನು ಕಲ್ಪಿಸಿಕೊಡಬಲ್ಲ ಸಾಧಕ ಕಲಾವಿದರು.. ಪೌರಾಣಿಕ ಪ್ರಸಂಗದ ಗಿರಿಜೆ,ದೇವಿ,ದಮಯಂತಿ, ದ್ರೌಪತಿ, ಅಂಬೆ,ಕಯಾದು,ಮೇನಕೆ,ಮೋಹಿನಿ, ಸೀತೆ,ಅಜಮುಖಿ, ಪೂತನಿ,ಕಯಾದು ಮೊದಲಾದ ಪಾತ್ರಗಳು ಇವರಿಗೆ ಕೀರ್ತಿ ತಂದುಕೊಟ್ಟಿದೆ.. ಸಾಲಿಗ್ರಾಮ, ಪೆರ್ಡೂರು ಮೊದಲಾದ ಡೇರೆ ಮೇಳಗಳಲ್ಲಿ ಪ್ರದರ್ಶನ ಕಾಣುತ್ತಿದ್ದ ಆಧುನಿಕ ಪ್ರಸಂಗಗಳ ಪಾತ್ರಗಳಲ್ಲಿಯೂ ಕೂಡ ಅವರ ಅಭಿನಯ ಅಮೋಘವಾಗಿತ್ತು... ಸ್ಪಷ್ಟವಾದ ಸುಸ್ವರ,ಮೋಹಕವಾದ ಚೆಲುವು,ಆಕರ್ಷಕವಾದ ನೃತ್ಯಶೈಲಿಯನ್ನು ಮೈಗೂಡಿಸಿಕೊಂಡಿರುವ ಇವರಿಗೆ ಯಕ್ಷರಂಗದ ಹಿರಿಯ ಸ್ತ್ರೀಪಾತ್ರದಾರಿ ಎಂ.ಕೆ ರಮೇಶ ಆಚಾರ್ಯರು ತಿರುಗಾಟದ ಅವಧಿಯಲ್ಲಿ ನೀಡಿದ ಸಹಕಾರವನ್ನು ಮುಕ್ತಮನಸ್ಸಿನಿಂದ ಹೊಗಳುತ್ತಿದ್ದಾರೆ.. ಇವರು ಸುದೀರ್ಘ 35 ವರ್ಷಗಳ ತಿರುಗಾಟದಲ್ಲಿ ಅಪಾರವಾದ ಕಲಾಭಿಮಾನಿಗಳನ್ನು ಸಂಪಾದಿಸಿದ್ದು, ಅನೇಕ ಸಂಘ ಸಂಸ್ಥೆಗಳು ಮತ್ತು ಕಲಾಭಿಮಾನಿಗಳಿಂದ ಗೌರವ ಸನ್ಮಾನ ವನ್ನು ಸ್ವೀಕರಿಸಿದ್ದಾರೆ..ದಿ.ಐತಪ್ಪ ರೈ ಹೊಸಮನೆಗುತ್ತು ಅಡ್ಡಬೈಲು ಇವರ ಸ್ಮರಣಾರ್ಥ ಸನ್ಮಾನ, ಶ್ರೀ ಕೃಷ್ಣ ಯಕ್ಷಸಭಾ ಕದ್ರಿ,ಮಂಗಳೂರು ಇವರಿಂದ ಸನ್ಮಾನ,ಕೀರ್ತಿಶೇಷ ದಿ.ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಸಂಸ್ಮರಣಾ ಸಮಿತಿ ಮುಂಬೈ, ಇವರಿಂದ ಸನ್ಮಾನ ಸೇರಿದಂತೆ ಅನೇಕ ಗೌರವಗಳಿಗೆ ಪಾತ್ರರಾಗಿದ್ದಾರೆ.. ಶ್ರೀಮತಿ ವಾಣಿಯವರನ್ನು ಧರ್ಮಪತ್ನಿಯಾಗಿ ಸ್ವೀಕರಿಸಿ,ಪ್ರಸ್ತುತ 8ನೇಯ ತರಗತಿಯಲ್ಲಿ ವಿದ್ಯಾಭಾಸವನ್ನು ಮಾಡುತ್ತಿರುವ ಮಗ ಶಮಿತ್ ನೊಂದಿಗೆ ಕೆದಿಲದಲ್ಲಿ ವಾಸವಾಗಿದ್ದಾರೆ.. ಇವರ ಮುಂದಿನ ಯಕ್ಷಜೀವನ ಮತ್ತು ಸಾಂಸಾರಿಕ ಬದುಕು ಸುಗಮವಾಗಿ ಸಾಗಲಿ,ಅನೇಕ ಪ್ರಶಸ್ತಿ, ಪುರಸ್ಕಾರಗಳು ಇವರ ಮುಡಿಗೇರಲಿ ಎಂದು ಹಾರೈಸುತ್ತ,ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿಯೂ ಇವರ ಸರ್ವ ಇಷ್ಟಾರ್ಥವನ್ನು ಈಡೇರಿಸಲಿ ಎನ್ನುವುದು ನಮ್ಮ ಯಕ್ಷ💥ಮಂದಾರದ ಶುಭಹಾರೈಕೆ. ಸಾಹಿತ್ಯ:ಹಾಲಾಡಿ ಸಂತೋಷ ಶೆಟ್ಟಿ.. ನಿರೂಪಣೆ:ಶ್ರೀಮತಿ ಅಮೃತಾ ಶೆಟ್ಟಿ.. ಯಕ್ಷಗಾನ ಕಲಾವಿದರ ಪರಿಚಯ ಸರಣಿಯ ಎಲ್ಲ ವಿಡಿಯೋಗಳು ನಮ್ಮ🌀ಯಕ್ಷ💥ಮಂದಾರ🌀 ಯೂಟ್ಯೂಬ್ ಚಾನಲ್..ನಲ್ಲಿ ಲಭ್ಯವಿದೆ.. ನಮ್ಮ 🌀ಯಕ್ಷ💥ಮಂದಾರ🌀ಯೂಟ್ಯೂಬ್ ಚಾನಲ್ ಮತ್ತು ಫೇಸ್ಬುಕ್ ಪೇಜ್.. ನ್ನು download ಮಾಡಿಕೊಳ್ಳಿ..ಮತ್ತು ನಾವು upload ಮಾಡುವ ಎಲ್ಲ ಯಕ್ಷಗಾನ ವಿಡಿಯೋಗಳ ಮಾಹಿತಿ ಪಡೆಯಿರಿ..ನಮ್ಮ ವಿಡಿಯೋಗಳನ್ನು ನೋಡಿ like ಮಾಡಿ,share ಮಾಡಿ ಪ್ರೋತ್ಸಾಹಿಸಿ... ಯಕ್ಷಗಾನ ಕಲೆಯನ್ನು ಉಳಿಸಿ,ಬೆಳೆಸಿ, ಪ್ರೋತ್ಸಾಹಿಸಿ.. ಧನ್ಯವಾದಗಳು🙏🙏🙏

#ಯಕ್ಷಮ

This is the story of the yakshaartists and the story of life.

Today's yakshakas are.. The virgin of the yakshaloka.. The female character of the Ubhayatittu is Kedila Jayaram Bhatt.

Mr. Sreetha was born on 04.04.1964 as the son of D.Shankaranarayana Bhatt and D.Lakshmiamma in Kedila village in Puttur taluk of Dakshina Kannada district.

Sit Philomina High School, Puttur.. He received education up to 10th standard.
Even though he was interested in dance, drama and other fields in his childhood, he did not have knowledge of Yakshagana. He was curious about the study of yakshagana by his classmates during his school visit, and later inspired by Pandurang Thackeray, he became a disciple of The Yakshagana Centre in Dharmapuri, learnt the theatre and dance and speech of senior artistes and gained the knowledge of the entire yakshagana.

He started the Yaksha service at Theruva Mela and later served in Karnataka, Madur, Kadri, Suratkal, Mangaladevi Melas and Badgutittina melas like Mandarthi Perdur, Saligramam, Goligaradi etc. She has served in Dharmapuri Mela for eleven years and has been serving at Therikshetra Hattiyangadi Mela from this year.

With a beautiful body and body, he is a great artist who can give a new meaning to erotic, heroic and bhakti-dominated costumes, and his character is a character that has been satisfying the audience with the role of a gitapali, a erotic Vaishya in the saligramam mela. His performance in the role of Mahatma AmbuDevi in Dharmapuri kshetra is a popular one.
The character itself is a self-imminent artist who can give a proper meaning to the characters he has come up with. The characters of the mythological episode girije, devi, damayanti, draupati, ambe, kayadu, menake, mohini, seethe, ajamukhi, putani, kayadu etc. have brought him fame. His performance was also impressive in the roles of modern episodes performed at tent fairs like Saligramam and Perdur.

With a clear, charming beauty and a charming dance style, the yaksharanga veteran mk ramesh acharya has been openly praised for his cooperation during the tour. He has earned a lot of artistic love rs thirty-five years and has received honors from many associations and artistes. D.Aitappa Rai Hosamanegudu Adabailu honored with honors, Honoured by Sri Krishna Yakshasabha Kadri, Mangalore, Kirtishesha D.Katilu Gopalkrishna Asranna Sanskrit Samiti Mumbai, and many other honours.

Mrs. Vani is a wife and is currently living in Kedila with his son Shamit, who is currently studying in 8th standard.

ಯಕ್ಷಮಂದಾರ ವಿಡಿಯೋ ನೋಡಲೋಸುಗವಾಗಿ.

ವಾಹಿನಿಯ ಹೋಮ್ ಪೇಜ್ ಗಾಗಿ: https://www.youtube.com/channel/UCsrL

ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: https://www.facebook.com/groups/27334


Saturday, December 5, 2020

#ಯಕ್ಷಮಂದಾರ - 45 | ಮಂದಾರ್ತಿ ರಘುರಾಮ ಮಡಿವಾಳ | Mandarthi Raghuram Madivala | ಹಿರಿಯ ವೇಷಧಾರಿ | ಯಕ್ಷಸಾಧಕರು

                           #ಯಕ್ಷಮಂದಾರ


#ಯಕ್ಷಮಂದಾರ - 45 | ಮಂದಾರ್ತಿ ರಘುರಾಮ ಮಡಿವಾಳ | Mandarthi Raghuram Madivala | ಹಿರಿಯ ವೇಷಧಾರಿ | ಯಕ್ಷಸಾಧಕರು

ಇದು ಯಕ್ಷಕಲಾವಿದರ ಸಾಧನೆ ಮತ್ತು ಜೀವನಗಾಥೆಯ ಅನಾವರಣ.. ಇಂದಿನ ನಮ್ಮ ಯಕ್ಷಸಾಧಕರು... ಬಡಗುತಿಟ್ಟಿನ ಹಿರಿಯ ಸಂಪ್ರದಾಯಬದ್ದ ಹಿರಿಯ ವೇಷಧಾರಿ,ಮಂದಾರ್ತಿ ಮೇಳದ ಕಲಾವಿದರಾದ ಮಂದಾರ್ತಿ ರಘುರಾಮ ಮಡಿವಾಳರು... ಇವರು ಉಡುಪಿ ಜಿಲ್ಲೆಯ ಮಂದಾರ್ತಿಯಲ್ಲಿ ಶ್ರೀಯುತ ಕುಷ್ಠ ಮಡಿವಾಳ ಮತ್ತು ಲಚ್ಚ ಮಡಿವಾಳ್ತಿಯವರ ಪುಣ್ಯಗರ್ಭದಲ್ಲಿ ದಿನಾಂಕ:30.10.1960ರಲ್ಲಿ ಜನಿಸಿದರು.. ಆ ಕಾಲದಲ್ಲಿ ಇವರ ತಂದೆ ಕುಷ್ಠ ಮಡಿವಾಳರು ಮಂದಾರ್ತಿ ಮೇಳದಲ್ಲಿ ಗಣಪತಿ ಪೆಟ್ಟಿಗೆ ಹೊರುವ ಕೆಲಸವನ್ನು ನಿರ್ವಹಿಸುತ್ತಿದ್ದರು.. ಆದ್ದರಿಂದಲೇ ಬಾಲ್ಯದಲ್ಲಿಯೇ ಇವರಿಗೆ ಯಕ್ಷಗಾನದ ಕುರಿತು ಆಸಕ್ತಿ ಇದ್ದಿತ್ತು.. ಐದನೆಯ ತರಗತಿಯವರೆಗೆ ವಿದ್ಯಾಭ್ಯಾಸ ಮುಗಿಸಿದ ಇವರು ತನ್ನ ಹನ್ನೊಂದನೆಯ ವಯಸ್ಸಿನಲ್ಲಿ ತನ್ನ ತಂದೆ ತಾಯಿಯವರ ಅಭಿಲಾಷೆಯಂತೆ ಉಡುಪಿಯ ಯಕ್ಷಗಾನ ಕೇಂದ್ರವನ್ನು ಸೇರಿಕೊಂಡು ಗುರುಗಳಾದ ದಶಾವತಾರಿ ದಿ.ವೀರಭದ್ರ ನಾಯ್ಕರು, ಹಿರಿಯಡ್ಕ ಗೋಪಾಲ ರಾಯರು, ನೀಲಾವರ ರಾಮಕೃಷ್ಣಯ್ಯನವರಂತ ಅಗ್ರಮಾನ್ಯರ ಗುರುತನದಲ್ಲಿ ಮೂರುವರ್ಷಗಳ ಕಾಲ ಯಕ್ಷಗಾನದ ಹೆಜ್ಜೆಗಾರಿಕೆ,ಸಾಂಪ್ರದಾಯಿಕ ರಂಗನಡೆ,ಮಾತುಗಾರಿಕೆ,ಪ್ರಸಂಗಜ್ಞಾನ, ಪಾತ್ರನಿರ್ವಹಣೆ ಸೇರಿದಂತೆ ಯಕ್ಷಗಾನದ ವಿವಿಧ ವಿಭಾಗದಲ್ಲಿ ಯಕ್ಷಶಿಕ್ಷಣವನ್ನು ಪಡೆದರು.. ಉಡುಪಿ ಬಸವ ನಾಯ್ಕರ ಪ್ರೇರಣೆಯಿಂದ ಗುರು ವೀರಭದ್ರ ನಾಯ್ಕರ ಮಾರ್ಗದರ್ಶನದಲ್ಲಿ ಬಡಗಿನ ಸಾಂಪ್ರದಾಯಿಕ ಶೈಲಿಯನ್ನು ಮೈಗೂಡಿಸಿಕೊಂಡರು.. ಜೋಡಾಟಗಳಲ್ಲಿ ಅತಿ ಎತ್ತರದ ಮುಂಡಾಸುಗಳನ್ನು ಕಟ್ಟಿ ಇವರು ಅಬ್ಬರದಿಂದ ರಂಗ ಪ್ರವೇಶಗೈಯುತ್ತಿದ್ದಂತೆ, ರಂಗಸ್ಥಳದ ಮೇಲೆ ಕಟ್ಟಿದ ಪರದೆಯನ್ನು ಇನ್ನಷ್ಟು ಎತ್ತರಕ್ಕೆ ಏರಿಸುತ್ತಿದ್ದದ್ದು ವಿಶೇಷವಾಗಿತ್ತು.. ಮಂದಾರ್ತಿ ಮೇಳದಲ್ಲಿ ಪ್ರಪ್ರಥಮ ಬಾರಿಗೆ ಗೆಜ್ಜೆಕಟ್ಟಿ ರಂಗಪ್ರವೇಶ ಮಾಡಿದ ಇವರು, ಬಾಲಗೋಪಾಲ ಮೊದಲಾದ ವೇಷಗಳನ್ನು ನಿರ್ವಹಿಸುತ್ತ ಹಂತ ಹಂತವಾಗಿ ಮೇಲೇರಿದರು.. ನಂತರ ಬಡಗುತಿಟ್ಟಿನ ಸುಪ್ರಸಿದ್ದ ಮೇಳಗಳಾದ ಇಡಗುಂಜಿ,ಕಮಲಶಿಲೆ,ಸೌಕೂರು,ಪೆರ್ಡೂರು ಮೇಳಗಳಲ್ಲಿ ಸೇವೆಸಲ್ಲಿಸಿದ ಇವರು, ಸುದೀರ್ಘ ಮೂವತ್ತೈದು ವರ್ಷಗಳಿಂದ ಮಂದಾರ್ತಿ ಮೇಳದಲ್ಲಿ ಸೇವೆಸಲ್ಲಿಸುತ್ತಿದ್ದು,ಪ್ರಸ್ತುತ ಕೆಲವು ವರ್ಷಗಳಿಂದ ಎರಡನೆಯ ವೇಷದಾರಿಯಾಗಿ ಶ್ರೀದೇವಿಯ ಕಲಾಕೈಂಕರ್ಯವನ್ನು ಮುಂದುವರಿಸುತ್ತ,ಸುದೀರ್ಘ 46 ವರ್ಷಗಳ ಯಕ್ಷತಿರುಗಾಟವನ್ನು ಪೂರೈಸಿದ್ದಾರೆ.. ನೀಳಕಾಯ ಮತ್ತು ಸದೃಢವಾದ ಶರೀರ,ಗಂಭೀರ ನಿಲುವು, ಗಜ ಗಾಂಭೀರ್ಯದ ಹೆಜ್ಜೆಗಾರಿಕೆ, ಸ್ಪಷ್ಟವಾದ ಸ್ವರಬಾರವನ್ನು ಹೊಂದಿರುವ ಇವರ ಶಲ್ಯ,ವೀರಮಣಿ,ದುರ್ಜಯ, ಜಾಂಬವ,ಋತುಪರ್ಣ,ಕಮಲಭೂಪ,ಹಿರಣ್ಯಕಶ್ಯಪು,ಭೀಮ, ಯಮ ಮೊದಲಾದ ಪಾತ್ರಗಳಲ್ಲಿ ರಂಗಸ್ಥಳದಲ್ಲಿ ರೋಮಾಂಚನಕಾರಿ ವಾತಾವರಣವನ್ನು ಮೂಡಿಸಬಲ್ಲ ಇವರು,ಯಕ್ಷಗಾನದ ಯುಗಪವರ್ತಕ ದಿ.ಕಾಳಿಂಗ ನಾವಡ,ಮಲ್ಪೆ ಶಂಕರನಾರಾಯಣ ಸಾಮಗ,ದಿ.ಕುಮಟಾ ಗೋವಿಂದ ನಾಯ್ಕ,ದಿ.ಕೆರೆಮನೆ ಶಂಭು ಹೆಗಡೆ,ಎಂ.ಎ. ನಾಯ್ಕ,ಗೋಡೆ ನಾರಾಯಣ ಹೆಗಡೆಯವರಂತಹ ಯಕ್ಷದಿಗ್ಗಜರೊಂದಿಗೆ ಪಾತ್ರನಿರ್ವಹಿಸಿ,ಸೈ ಎನಿಸಿಕೊಂಡಿದ್ದಾರೆ... ನಾಡಿನಾದ್ಯಂತ ಯಕ್ಷಗಾನ ಪ್ರದರ್ಶವನ್ನು ನೀಡಿ,ಯಕ್ಷಗಾನ ಕಲಾಭಿಮಾನಿಗಳ ಪ್ರೀತಿ ಮತ್ತು ಮನ್ನಣೆಗೆ ಪಾತ್ರರಾಗಿರುವ ಇವರಿಗೆ,ಕನ್ನಡ ವಾರ್ತಾ ಮತ್ತು ಪ್ರಚಾರ ಇಲಾಖೆ,ಬೆಂಗಳೂರು... ಕನ್ನಡ ಸಂಘ ದೆಹಲಿ,.. ಸುಮಕೃಷ್ಣ ಪ್ರಶಸ್ತಿ,.. ಮಡಿವಾಳ ಸಂಘ,..ರಂಗಸ್ಥಳ ಪ್ರಶಸ್ತಿ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಗುರುತಿಸಿ ಗೌರವಿಸಿದೆ.. ಸರಳ ಮತ್ತು ಸಜ್ಜನರಾದ ಇವರು ಮಂದಾರ್ತಿಯಲ್ಲಿ ಸ್ವಲ್ಪ ಕೃಷಿ ಕಾಯಕದೊಂದಿಗೆ,ಪತ್ನಿ, ಇಬ್ಬರು ಗಂಡುಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳೊಂದಿಗೆ ಸುಖ ಸಂತೃಪ್ತ ಜೀವನವನ್ನು ನಡೆಸುತ್ತಿದ್ದಾರೆ... ಇವರ ಮುಂದಿನ ವೃತ್ತಿ ಮತ್ತು ವೈಯುಕ್ತಿಕ ಬದುಕು ಸುಗಮವಾಗಿ ಸಾಗಲಿ,ಇವರಿಗೆ ಜಗನ್ಮಾತೆ ಮಂದಾರ್ತಿ ಶ್ರೀದುರ್ಗಾ ಪರಮೇಶ್ವರಿ ತಾಯಿಯೂ ಸರ್ವ ಸಂಪದವನ್ನು ನೀಡಿ ಕಾಪಾಡಲಿ ಎನ್ನುವುದು ನಮ್ಮ ಯಕ್ಷಮಂದಾರದ ಶುಭಹಾರೈಕೆ... ಸಾಹಿತ್ಯ: ಹಾಲಾಡಿ ಸಂತೋಷ ಶೆಟ್ಟಿ.. ನಿರೂಪಣೆ:ಶ್ರೀಮತಿ ಅಮೃತಾ ಶೆಟ್ಟಿ.. ಯಕ್ಷಗಾನ ಕಲಾವಿದರ ಪರಿಚಯ ಸರಣಿಯ ಎಲ್ಲ ವಿಡಿಯೋಗಳು ನಮ್ಮ🌀ಯಕ್ಷ💥ಮಂದಾರ🌀 ಯೂಟ್ಯೂಬ್ ಚಾನಲ್..ನಲ್ಲಿ ಲಭ್ಯವಿದೆ.. ನಮ್ಮ 🌀ಯಕ್ಷ💥ಮಂದಾರ🌀ಯೂಟ್ಯೂಬ್ ಚಾನಲ್ ಮತ್ತು ಫೇಸ್ಬುಕ್ ಪೇಜ್.. ನ್ನು download ಮಾಡಿಕೊಳ್ಳಿ..ಮತ್ತು ನಾವು upload ಮಾಡುವ ಎಲ್ಲ ಯಕ್ಷಗಾನ ವಿಡಿಯೋಗಳ ಮಾಹಿತಿ ಪಡೆಯಿರಿ..ನಮ್ಮ ವಿಡಿಯೋಗಳನ್ನು ನೋಡಿ like ಮಾಡಿ,share ಮಾಡಿ ಪ್ರೋತ್ಸಾಹಿಸಿ... ಯಕ್ಷಗಾನ ಕಲೆಯನ್ನು ಉಳಿಸಿ,ಬೆಳೆಸಿ, ಪ್ರೋತ್ಸಾಹಿಸಿ.. ಧನ್ಯವಾದಗಳು🙏🙏🙏 *Yakshamandara* Issue 54 This is an exhibition of the achievements and life of yakshaganaartists. Today's yakshaganas... The older traditional dressed in the badgutitti, the artists of The Mandarti Mela, Mandarthi Raghuram Awadh... He was born on 30.10.1960 at The Holy Garbha of Mr. Kushtha Madhavan and Lachcha Madivalthi in Mandarthi in Udupi District. At that time, his father, Kushtha Madhavan, was carrying the Ganapati box at the Mandarthi Mela. That is why he was interested in Yakshagana in his early childhood. He completed his studies till the age of fifth and joined the Yakshagana Centre at Udupi at the age of 11 and received yakshagana education in various disciplines including the three years of yakshagana footprints, traditional theatre, speech, context, and role-playing. Inspired by Udupi Basava Nayak, he embraced the traditional style of the garbage under the guidance of Guru Veerbhadra Nayak. The high-rise of the saints in the shoes was the most remarkable of the screen styling the stage as they entered the stage with a roar. He made his first appearance at the Mandarti Mela and stepped up stage by dressing up balgopal. Later, he served in the famous melas of Badaguthi, Idagunji, Kamalashila, Saukur, Perdur and has served in The Mandarti Mela for 35 years and has completed a long 46 years of yakshagana, continuing to perform the art of Sridevi as a second dresser for some years. He has a long and strong body, a strong, serious, a dignified, a clear voice, and he can create a thrilling atmosphere in the theatre in the roles of Veeramani, Durjaya, Jambava, Rituparna, Kamalabhupa, Hiranyakashyapu, Bhima, Yama, yama, yakshagana yugapavartaka d.kalinga navada, malpe samagarama, d.govinda naik, d.keremane, m.a. Naik has played a role with yakshaganas like Godu, Narayana Hegde and has become a sai. https://www.youtube.com/channel/UCsrL https://www.facebook.com/groups/27334

Wednesday, December 2, 2020

#ಯಕ್ಷಮಂದಾರ - 44 | ಕೋಟ ಸುರೇಶ ಬಂಗೇರ | ಅಮೃತೇಶ್ವರಿ ಮೇಳ | Kota Suresh | Amruteswari Mela| | ವೇಷಧಾರಿ |

                                                             #ಯಕ್ಷಮಂದಾರ


#ಯಕ್ಷಮಂದಾರ - 44 | ಕೋಟ ಸುರೇಶ ಬಂಗೇರ | ಅಮೃತೇಶ್ವರಿ ಮೇಳ | Kota Suresh | Amruteswari Mela| | ವೇಷಧಾರಿ |

ಇದು ಯಕ್ಷ ಕಲಾವಿದರ ಸಾಧನೆ ಮತ್ತು ಜೀವನಗಾಥೆಯ ಅನಾವರಣ ಇಂದಿನ ನಮ್ಮ ಯಕ್ಷಸಾಧಕರು... ನಡುತಿಟ್ಟಿನ ಸಂಪ್ರದಾಯಬದ್ದ ವೇಷಧಾರಿ,ಕೋಟ ಅಮೃತೇಶ್ವರಿ ಮೇಳದ ಪ್ರಧಾನ ಕಲಾವಿದರಾದ *ಕೋಟ ಸುರೇಶ* *ಬಂಗೇರರು..* ಇವರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕು ಕೋಟದ ಮಣೂರು ಪಡುಕೆರೆಯಲ್ಲಿ *ಬೇಡುಮರಕಾಲ* ಮತ್ತು *ಅಕ್ಕಮ್ಮ* ದಂಪತಿಯ ಮಗನಾಗಿ ದಿನಾಂಕ: __23.02.1965_ ರಲ್ಲಿ ಜನಿಸಿದರು. ತನ್ನ ಹದಿನಾರನೆಯ ವಯಸ್ಸಿನಲ್ಲಿ ಯಕ್ಷಗಾನದ ಹಿರಿಯ ಕಲಾವಿದರಾದ ಮೊಳಹಳ್ಳಿ ಹೆರಿಯ ನಾಯ್ಕರಿಂದ ಯಕ್ಷಗಾನದ ಪ್ರಾಥಮಿಕ ಜ್ಞಾನವನ್ನು ಪಡೆದು ಅವರು ಕಲಾವಿದರಾಗಿದ್ದ ಮಂದಾರ್ತಿ ಮೇಳದಲ್ಲಿ ಗೆಜ್ಜೆಕಟ್ಟಿದರು..ಅಲ್ಲಿ ಸತತವಾಗಿ ಏಳು ವರ್ಷಗಳ ಕಾಲ ಸೇವೆಸಲ್ಲಿಸಿ, ಗುರುವಿಲ್ಲದ "ಏಕಲವ್ಯ"ನಂತೆ ಹಿರಿಯ ಕಲಾವಿದರ ಹೆಜ್ಜೆಗಾರಿಕೆ,ವೇಷಗಾರಿಕೆ ಮತ್ತು ಮಾತುಗಾರಿಕೆಯನ್ನು ನೋಡಿ,ಕೇಳಿ ಕಲಿತೆ ಯಕ್ಷಗಾನದ ಸರ್ವಾಂಗಗಗಳಲ್ಲೂ ಪರಿಪೂರ್ಣತೆಯನ್ನು ಕಂಡುಕೊಂಡರು. ಹಿರಿಯ ಕಲಾವಿದರಾಗಿದ್ದ ಶಿರಿಯಾರ ಮಂಜು ನಾಯ್ಕರ ಹೂವಿನಕೋಲು ತಂಡದಲ್ಲಿ ಬಾಗವಹಿಸುತ್ತಿದ್ದದ್ದರಿಂದ ಇವರಿಗೆ ಯಕ್ಷಗಾನದ ಜ್ಞಾನಾರ್ಜನೆಗೆ ಅನುಕೂಲವಾಯಿತು.. ಸಾಲಿಗ್ರಾಮ, ಪೆರ್ಡೂರು ಕಮಲಶಿಲೆ ಮೇಳಗಳಲ್ಲಿ ಸೇವೆಸಲ್ಲಿಸಿರುವ ಇವರು ಸೌಕೂರು ಮೇಳದಲ್ಲಿ ಸುದೀರ್ಘ ಹದಿನೇಳು ವರ್ಷಗಳ ಕಾಲ ಸೇವೆಸಲ್ಲಿಸಿದ್ದಾರೆ,ಪ್ರಸ್ತುತ ಕೋಟ ಅಮೃತೇಶ್ವರಿ ಮೇಳದಲ್ಲಿ ಪ್ರಧಾನ ವೇಷಧಾರಿಯಾಗಿ ಮತ್ತು ಮೇಳದ ಪ್ರಬಂದಕರಾಗಿ ದುಡಿಯುತ್ತಿದ್ದಾರೆ ಸೌಕೂರು ಮೇಳದಲ್ಲಿರುವ ಕಾಲದಲ್ಲಿ ರಾಘವೇಂದ್ರ ಮಯ್ಯ,ರಾಕೇಶ್ ಮಲ್ಯ,ಕೋಡಿ ವಿಶ್ವನಾಥ ಗಾಣಿಗ,ಹಾರಾಡಿ ಸರ್ವೋತ್ತಮ ಗಾಣಿಗ,ಕೋಟ ಸುರೇಶ,ಬೆದ್ರಾಡಿ ನರಸಿಂಹ,ಜೋಗು ಕುಲಾಲ್,ಹೊಸಂಗಡಿ ಕೃಷ್ಣ ಗಾಣಿಗ,ಸುಳುಗೋಡು ನಾರಾಯಣ, ಶಂಕರ ಉಳ್ಳೂರು ಮೊದಲಾದ ಪ್ರಸಿದ್ಧ ಕಲಾವಿದರಿಂದ ಬಡಗುತಿಟ್ಟಿನ ಪ್ರಸಿದ್ಧ ಮೇಳವಾಗಿತ್ತು ಪರಂಪರೆಯ ಯಕ್ಷದಿಗ್ಗಜರ ಸಾಲಿನಲ್ಲಿ ತನ್ನದೆ ಚಾಪು ಛಾಪಿಸಿ,ಹೆಜ್ಜೆ ಮೂಡಿಸಿ ರಂಗವನ್ನು ಬೆಳಗಿದ ಇವರ ಪೌರಾಣಿಕ ಪ್ರಸಂಗದ ಸುಧನ್ವ,ಪುಷ್ಕಳ, ಧರ್ಮಾಂಗದ, ಚಂದ್ರಹಾಸ, ವಿಷ್ಣು,ಕೃಷ್ಣ,ಋತುಪರ್ಣ,ಅತಿಕಾಯ,ತಾಮ್ರಧ್ವಜ,ಮಾರ್ತಾಂಡತೇಜ, ಅರ್ಜುನ,ದೇವವೃತ ಮೊದಲಾದ ಪಾತ್ರಗಳು ಇವರಿಗೆ ಅಪಾರ ಕೀರ್ತಿಯನ್ನು ತಂದುಕೊಟ್ಟಿದೆ. ಕೇವಲ ಪೌರಾಣಿಕ ಪ್ರಸಂಗಗಳಲ್ಲಿ ಮಾತ್ರವಲ್ಲದೆ,ಆಧುನಿಕ ಪ್ರಸಂಗದ ಪಾತ್ರಗಳಿಗೂ ಜೀವ ತುಂಬಬಲ್ಲ ಇವರ ಬಾನುತೇಜಸ್ವಿಯ ಬಾನುತೇಜ,ಸತಿ ಸೀಮಂತಿನಿಯ ಚಂದ್ರಾoಗದ, ಚೆಲುವೆ ಚಿತ್ರಾವತಿಯ ಹೇಮಾಂಗದ,ನಾಗಶ್ರೀಯ ಶುಭಾಂಗನ ಪಾತ್ರಗಳು ಬಹು ಪ್ರಸಿದ್ಧವಾಗಿದೆ. ಯಕ್ಷಗಾನದ ಚೌಕಟ್ಟನ್ನು ಮೀರದೆ,ಪಾತ್ರದ ಔಚಿತ್ಯವನ್ನು ಕೆಡಿಸದೆ ತನ್ನ ಮಾತುಗಾರಿಕೆಯ ಮೋಡಿ ಮತ್ತು ವೇಷಗಾರಿಕೆಯ ಸೊಗಸಿನಿಂದಲೇ ಪ್ರೇಕ್ಷಕರ ಮನಸೂರೆಗೊಳ್ಳುವ ಇವರ ಲಾಲಿತ್ಯಪೂರ್ಣ ನೃತ್ಯ, ಶ್ರುತಿಬದ್ದ ಪಾಂಡಿತ್ಯಪೂರ್ಣ ವಾಗ್ವೈಕರಿ, ಹೆಜ್ಜೆಗಾರಿಕೆ,ರಂಗನಿರ್ವಹಣೆ ಅಪೂರ್ವ ವಾದದ್ದು. ಶೃಂಗಾರ, ವೀರ ಭಕ್ತಿರಸಗಳಿಂದ ಚಿತ್ರಿಸಲ್ಪಡುವ ಸುಧನ್ವನ ಪಾತ್ರದಲ್ಲಿನ ಇವರ ಅಭಿನಯದಿಂದ "ಯಕ್ಷ ಸುಧನ್ವ" ಎಂದು ಅಭಿಮಾನಿಗಳಿಂದ ಕರೆಸಿಕೊಂಡವರು.. ದೇಶಾದ್ಯಂತದ್ಯಂತ ಹಲವಾರು ಕಾರ್ಯಕ್ರಮಗಳನ್ನು ನೀಡಿ ಅಸಂಖ್ಯಾತ ಅಭಿಮಾನಿಗಳ ಪ್ರೀತಿ ಮತ್ತು ಅಭಿಮಾನಕ್ಕೆ ಪಾತ್ರರಾಗಿರುವ ಇವರಿಗೆ ಯಕ್ಷಗಾನ ತಿರುಗಾಟದ 40 ವರ್ಷ ಪೂರೈಸಿದ ಸಂದರ್ಭದಲ್ಲಿ ಕೋಟದಲ್ಲಿ ಅದ್ದೂರಿಯಾಗಿ ಸನ್ಮಾನಿಸಲಾಯಿತು.. ಅಲ್ಲದೆ ಕರ್ನಾಟಕ ವಾರ್ತಾ ಮತ್ತು ಪ್ರಚಾರ ಇಲಾಖೆಯ ವತಿಯಿಂದ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ,ಸನ್ಮಾನಗಳು ಸಂದಿದೆ ಇವರು ಪತ್ನಿ *ಸುಶೀಲಾ* ಮತ್ತು ಮಕ್ಕಳಾದ *ಸಮರ್ಥ,ಸುರಕ್ಷಾ ರೊಂದಿಗೆ* ಕೋಟ ಪಡುಕೆರೆಯಲ್ಲಿ ವಾಸವಾಗಿದ್ದಾರೆ. ಸರಳ,ಸಜ್ಜನ,ಸೌಮ್ಯ ಸ್ವಭಾವದ ಇವರಿಗೆ ಅಮೃತೇಶ್ವರಿ ಅಮ್ಮನವರು ಆಯುರಾರೋಗ್ಯ, ಐಶ್ವರ್ಯ,ಸುಖ ಶಾಂತಿಯನ್ನು ಅನುಗ್ರಹಿಸಲಿ ಎನ್ನುವುದು ಯಕ್ಷಮಂದಾರದ ಶುಭಹಾರೈಕೆ... ಸಾಹಿತ್ಯ: *ಹಾಲಾಡಿ ಸಂತೋಷ ಶೆಟ್ಟಿ* ನಿರೂಪಣೆ: *ಶ್ರೀಮತಿ ಅಮೃತಾ ಶೆಟ್ಟಿ* ಯಕ್ಷಗಾನ ಕಲಾವಿದರ ಪರಿಚಯ ಸರಣಿಯ ಎಲ್ಲ ವಿಡಿಯೋಗಳು ನಮ್ಮ🌀ಯಕ್ಷ💥ಮಂದಾರ🌀 ಯೂಟ್ಯೂಬ್ ಚಾನಲ್..ನಲ್ಲಿ ಲಭ್ಯವಿದೆ.. ನಮ್ಮ 🌀ಯಕ್ಷ💥ಮಂದಾರ🌀ಯೂಟ್ಯೂಬ್ ಚಾನಲ್ ಮತ್ತು ಫೇಸ್ಬುಕ್ ಪೇಜ್.. ನ್ನು download ಮಾಡಿಕೊಳ್ಳಿ..ಮತ್ತು ನಾವು upload ಮಾಡುವ ಎಲ್ಲ ಯಕ್ಷಗಾನ ವಿಡಿಯೋಗಳ ಮಾಹಿತಿ ಪಡೆಯಿರಿ..ನಮ್ಮ ವಿಡಿಯೋಗಳನ್ನು ನೋಡಿ like ಮಾಡಿ,share ಮಾಡಿ ಪ್ರೋತ್ಸಾಹಿಸಿ... ಯಕ್ಷಗಾನ ಕಲೆಯನ್ನು ಉಳಿಸಿ,ಬೆಳೆಸಿ, ಪ್ರೋತ್ಸಾಹಿಸಿ.. ಧನ್ಯವಾದಗಳು🙏🙏🙏

#ಯಕ್ಷಮ This is the exhibition of the achievements and life of yakshaartists Today's yakshaganas... The main artists of kota amriteshwari mela are kota suresh, *bangeraru. * He was born on 23.02.1965 as the son of *Bedumarakala* and Akkamma* in Manur Padukare in Kundapur taluk kota in Udupi district. At the age of sixteen, he got the knowledge of Yakshagana from the veteran yakshagana artistmolahalli heri nayak and tied the knot at the artist's Mandarthi Mela. After seven years of service there, he saw the footwork, dress and speech of the veteran artistes like "Ekalavya" without a master, and learned to be perfect in all the parts of Yakshagana. The veteran artist, Shiriyar Manju Nayak, was bending in to the floral stick team, which helped him to learn yakshagana. He has served at Saligramam and Perdur Kamalashila Melas for a long period of seventeen years at Saukur Mela, currently working as a prominent attire and mela practitioner at Kota Amrutheswari Mela. During the Saukur mela, badaguthittta was famous by famous artists like Raghavendra Mayya, Rakesh Mallya, Kodi Vishwanath Ganiga, Haradi Supreme Ganiga, Kota Suresh, Bedradi Narasimha, Jogu Kulal, Hosangadi Krishna Ganiga, Sulugodu Narayana, Shankarulur etc. His mythological characters like Sudhanva, Pushkala, Dharmamangadha, Chandrahasa, Vishnu, Krishna, Rituparna, Atikaya, Thambardhwaj, Martandateja, Arjuna and Devavruta have brought him immense fame. His characters are very famous for his roles in the modern context, not only in mythological contexts but also the roles of The Shubhunga of Nagasri, sati seemantini chandragadha, hemangaof beauty Chitravati, nagasree. His skillful dance, his skillful speech, his skill, his skill, his character's charm and the charm of his character, without exceeding the framework of yakshagana, is a unique and incredible dance. Erotic, heroic bhakti juices painted His performance in the role of Sudhanvana was called "Yaksha Sudhanva" by his fans. He has been honoured with many programmes across the country and has been a dignifying and admired by the innumerable fans and the 40 years of yakshagana tour. Besides, karnataka information and publicity department has also won many awards and awards including awards. He lives in Kota Padukare with his wife Sushila* and children *Saka,Suraksha. Amriteshwari Amma wishes them a good, good and gentle nature, and may they bless them with a healthy, prosperous and happy life.
ಯಕ್ಷಮಂದಾರ ವಿಡಿಯೋ ನೋಡಲೋಸುಗವಾಗಿ. ವಾಹಿನಿಯ ಹೋಮ್ ಪೇಜ್ ಗಾಗಿ: https://www.youtube.com/channel/UCsrL ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: https://www.facebook.com/groups/27334

Saturday, November 28, 2020

#ಯಕ್ಷಮಂದಾರ - 43 | ಪ್ರಸಾದ್ ಕುಮಾರ್ ಮೊಗೆಬೆಟ್ಟು | Prasad Kumar Mogebettu | ಯಕ್ಷ ಕವಿ | ಯಕ್ಷಗುರು | ಬಾಗವತರು

 #ಯಕ್ಷಮಂದಾರ


#ಯಕ್ಷಮಂದಾರ - 43 | ಪ್ರಸಾದ್ ಕುಮಾರ್ ಮೊಗೆಬೆಟ್ಟು | Prasad Kumar Mogebettu | ಯಕ್ಷ ಕವಿ | ಯಕ್ಷಗುರು | ಬಾಗವತರು

ಇದು ಯಕ್ಷಕಲಾವಿದರ ಸಾದನೆ ಮತ್ತು ಜೀವನಗಾಥೆಯ ಅನಾವರಣ... ಇಂದಿನ ನಮ್ಮ ಯಕ್ಷಸಾಧಕರು ಛಂದೋಬದ್ದ ಯಕ್ಷ ಕವಿ,ಯಕ್ಷಗುರು,ಬಾಗವತರು ಮತ್ತು ಪ್ರಸಿದ್ಧ ಪ್ರಸಂಗಕರ್ತರಾದ *ಪ್ರಸಾದ *ಕುಮಾರ್*ಮೊಗೆಬೆಟ್ಟುರವರು* ... ಶ್ರೀಯುತರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೊಗೆಬೆಟ್ಟು ಎಂಬಲ್ಲಿ ಪ್ರಸಿದ್ದ ಯಕ್ಷಗಾನ ಕಲಾವಿದರಾಗಿದ್ದ ಮೊಗೆಬೆಟ್ಟು *ಹೆರಿಯ ನಾಯ್ಕ* ಮತ್ತು *ಗುಲಾಬಿ* ದಂಪತಿಗಳ ಪುತ್ರನಾಗಿ ದಿನಾಂಕ: __20.06.1983_ ರಲ್ಲಿ ಜನಿಸಿದರು.. ಯಕ್ಷಗಾನ ಕಲೆಯೂ ಇವರಿಗೆ ರಕ್ತಗತವಾಗಿ ಬಂದಿತ್ತು..ಪ್ರಸಿದ್ಧ ವೇಷಧಾರಿಯಾಗಿದ್ದ ಇವರ ತಂದೆಯವರು ತನ್ನ ಶಿಷ್ಯರಿಗೆ ಅಭ್ಯಾಸ ಮಾಡಿಸುತ್ತಿದ್ದ ಯಕ್ಷಗಾನದ ಕ್ರಮವನ್ನು ನೋಡಿ ಆಕರ್ಷಿತರಾದ ಇವರು,ದಿ.ಕಾಳಿಂಗ ನಾವಡರ ಕಂಠಸಿರಿಗೆ ಮನಸೋತು ಅವರ ಯಕ್ಷಗಾನದ ಪದ್ಯಗಳತ್ತ ಆಕರ್ಷಿತರಾಗಿದ್ದರು.. ತನ್ನ ತಂದೆಯವರಿಂದ ಯಕ್ಷಗಾನದ ರಂಗಕ್ರಮ ಮತ್ತು ಪ್ರಸಂಗನಡೆಯನ್ನು ನೋಡಿ ಅಭ್ಯಸಿಸುತ್ತ ಸಾಂಪ್ರಾದಾಯಿಕ ಸೊಗಡಿನ ಯಕ್ಷಪರಂಪರೆಯನ್ನು ಮೈಗೂಡಿಸಿಕೊಂಡು ತನ್ನ ಹತ್ತರ ಹರೆಯದಲ್ಲಿ ಮೊಗೆಬೆಟ್ಟು ಚಿಕ್ಕಮ ಹೈಗುಳಿ ಯಕ್ಷಗಾನ ಕಲಾ ಸಂಘದಲ್ಲಿ ದಿ.ಹಳ್ಳಾಡಿ ಸುಬ್ರಾಯ ಮಲ್ಯರ ನಿರ್ದೇಶನದಲ್ಲಿ ಬಾಲ ಕಲಾವಿದನಾಗಿ ಗೆಜ್ಜೆಕಟ್ಟಿ ಬಬ್ರುವಾಹನನಾಗಿ ರಂಗಪ್ರವೇಶ ಮಾಡಿದ್ದರು.. ನಂತರ 1998ರಲ್ಲಿ ಉಡುಪಿ ಯಕ್ಷಗಾನ ಕೇಂದ್ರವನ್ನು ಸೇರಿಕೊಂಡ ಇವರು ನೀಲಾವರ ಲಕ್ಷ್ಮೀನಾರಾಯಣಯ್ಯ ಮತ್ತು ಸತೀಶ ಕೆದ್ಲಾಯರಿಂದ ಪ್ರಥಮ ವರ್ಷದ ಯಕ್ಷಶಿಕ್ಷಣವನ್ನು ಪಡೆದು, ರಾಜ್ಯಪ್ರಶಸ್ತಿ ಪುರಸ್ಕೃತರಾದ ಯಕ್ಷಗುರು ಬನ್ನಂಜೆ ಸಂಜೀವ ಸುವರ್ಣರಿಂದ ಸಾಂಪ್ರಾದಾಯಿಕ ನೃತ್ಯ,ಅಭಿನಯ, ಪ್ರಸಂಗ ನಿರ್ದೇಶನ, ಮತ್ತುರಂಗ ಕೊರೊಯೋಗ್ರಾಫಿಯನ್ನು ಕರಗತ ಮಾಡಿಕೊಂಡರು. ಯಕ್ಷಗಾನ ಕೇಂದ್ರದ ಮತ್ತಿಬ್ಬರು ಗುರುಗಳಾದ ದೇವದಾಸ ರಾವ್ ಮತ್ತು ಕೃಷ್ಣಮೂರ್ತಿ ಭಟ್ಟರಿಂದ ಯಕ್ಷಗಾನದ ರಂಗ ನಡೆಯನ್ನು ಆರ್ಜಿಸಿಕೊಂಡ ಇವರು,.ಹಿರಿಯ ಬಾಗವತರಾಗಿದ್ದ ಗೋರ್ಪಾಡಿ ವಿಠಲ ಪಾಟೀಲರಲ್ಲಿ ಪರಂಪರೆಯ ಬಾಗವತಿಕೆಯ ಶಿಕ್ಷಣವನ್ನು ಪಡೆದರು.. ಛಂದೋಬ್ರಹ್ಮ ಡಾ. ಶಿಮಂತೂರು ನಾರಾಯಣ ಶೆಟ್ಟಿಯವರ ನೇರ ಶಿಷ್ಯರಾಗಿರುವ ಪ್ರಸಿದ್ಧ ಛಾಂದಸ ಗಣೇಶ ಕೊಲೆಕಾಡಿಯವರಲ್ಲಿ ಛಂದಸ್ಸಿನ ಕುರಿತು ಶಿಕ್ಷಣವನ್ನು ಪಡೆದಿದ್ದು ನಂತರ 2005ರಿಂದ ತಾನು ಯಕ್ಷ ಶಿಕ್ಷಣವನ್ನು ಪಡೆದ ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಯಕ್ಷಗುರುವಾಗಿ ಸೇವೆ ಸಲ್ಲಿಸಿದ್ದರು... ಯಕ್ಷಗಾನದ ಗುರುವಾಗಿ, ಬಾಗವತರಾಗಿ, ರಂಗ ನಿರ್ದೇಶಕರಾಗಿ,ಛಂದೋಬದ್ದ ಯಕ್ಷ ಕವಿಯಾಗಿ, ಪ್ರಸಂಗಕರ್ತರಾಗಿ, ಕಲಾವಿದರಾಗಿ ಯಕ್ಷರಂಗದಲ್ಲಿ ಚಿರಪರಿಚಿತರಾಗಿರುವ ಇವರು ಕರ್ನಾಟಕವಷ್ಟೇ ಅಲ್ಲದೆ ಮುಂಬೈ, ಕೊಲ್ಕತ್ತಾ,ಮದ್ರಾಸ್, ನಾಗಪುರ,ಬಿಹಾರ್, ಗೋವಾ,ಭುವನೇಶ್ವರ,ಸಿಕ್ಕಿಂ, ಒರಿಸ್ಸಾ,ಕೇರಳ,ತಮಿಳುನಾಡು ಪುರಿ, ಗುಜರಾತ್ ಮೊದಲಾದ ರಾಜ್ಯಗಳಲ್ಲಿಯೂ ಮತ್ತು ವಿದೇಶಗಳಾದ ಬೆಲ್ಜಿಯಂ, ಆಸ್ಟ್ರೇಲಿಯಾ,ಐರ್ಲೆಂಡ್,ದುಬೈ,ಸ್ವೀಡ್ಜರ್ಲ್ಯಾಂಡ್, ಸಿಂಗಾಪುರ ಮೊದಲಾದ ವಿದೇಶಗಳಲ್ಲಿಯೂ ಕಾರ್ಯಕ್ರಮಗಳನ್ನು ನೀಡಿದ್ದಾರೆ.. ವಿಶ್ವ ಕುಂದಾಪುರ ದಿನಾಚರಣೆಯ ಅಂಗವಾಗಿ ಸಂಪೂರ್ಣ ಕುಂದಗನ್ನಡದಲ್ಲಿಯೇ ರಚಿಸಿ, ನಿರ್ದೇಶಿಸಿದ *ನರಹರಿ ಹೊಯ್ಕೈ* ಎನ್ನುವ ಕುಂದಗನ್ನಡದ ಪ್ರಪ್ರಥಮ ಪೌರಾಣಿಕ ಯಕ್ಷಗಾನ ಪ್ರಸಂಗ ಇವರ ಸೃಜನಶೀಲ ಅವಿಷ್ಕಾರಕ್ಕೆ ಮುನ್ನುಡಿ ಬರೆಯಿತಲ್ಲದೆ ಅಪಾರವಾದ ಜನಮನ್ನಣೆಗೆ ಪಾತ್ರವಾಗಿ ಯಶಸ್ವಿ ಪ್ರದರ್ಶನ ಕಂಡಿತು...ಪ್ರಸಿದ್ಧ ಕಲಾವಿದರ ಸಂಯೋಜನೆಯಲ್ಲಿ ಆಯೋಜಿಸಿದ್ದ *ಮೊಗವೀರ ಬಾಲೆ* ಯ ದೃಶ್ಯ ಸುರುಳಿಯ ನಿರ್ದೇಶನ,ಮಂಗಳೂರು ಆಕಾಶವಾಣಿಯಲ್ಲಿ 50 ಕ್ಕೂ ಹೆಚ್ಚು ತಾಳಮದ್ದಲೆಯ ಕಾರ್ಯಕ್ರಮ, ಬೆಂಗಳೂರು ಆಕಾಶವಾಣಿ ಕಲಾವಿದರಾಗಿ ರಂಗಕರ್ಮಿ ಗುರುರಾಜ ಮಾರ್ಪಳ್ಳಿ ನಿರ್ದೇಶಿತ ತುಳುನಾಟಕ *ಆಯನಕಾಲ* ದಲ್ಲಿ ಪಾತ್ರನಿರ್ವಹಣೆ, ಡಾ.ಶಿವರಾಮ ಕಾರಂತರ ಯಕ್ಷಗಾನ ಕಾರ್ಯಕ್ರಮಗಳಲ್ಲಿ ಕಲಾವಿದರಾಗಿ ಪಾತ್ರನಿರ್ವಹಣೆ , ಪ್ರಸಿದ್ಧ ರಂಗ ನಿರ್ದೇಶಕ ಚಿದಂಬರ ರಾವ್ ಜಂಟಿಯವರ *ಉತ್ತರ ರಾಮಾಯಣ* ಯಕ್ಷ ನಾಟಕದಲ್ಲಿ ಅಭಿನಯ , ರಾಜ್ಯಮಟ್ಟದ ಯಕ್ಷಗಾನ ಕಮ್ಮಟ,ಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ, ಹದಿನೈದಕ್ಕೂ ಹೆಚ್ಚು ಯಕ್ಷಗಾನ ಸಂಘಗಳಲ್ಲಿ ಯಕ್ಷಗುರುವಾಗಿ, ಅತಿಥಿ ಬಾಗವತರಾಗಿ ಮತ್ತು ಅನೇಕ ತಾಳಮದ್ದಲೆಯ ಕಾರ್ಯಕ್ರಮಗಳಲ್ಲಿ ಬಾಗವಹಿಸಿ ಜನಮನ್ನಣೆ ಪಡೆದಿದ್ದಾರೆ.. ಸಾಲಿಗ್ರಾಮ ಮಂದಾರ್ತಿ,ಗೋಳಿಗರಡಿ,ಜಲವಳ್ಳಿ ಮೇಳ ಸೇರಿದಂತೆ ತೆಂಕು ಮತ್ತು ಬಡಗುತಿಟ್ಟಿನ ಹೆಚ್ಚಿನ ವೃತ್ತಿಪರ ಮೇಳಗಳಲ್ಲಿ ಅತಿಥಿ ಬಾಗವತರಾಗಿ ಸೇವೆಸಲ್ಲಿಸಿರುವ ಇವರು,ಅಭಿಮನ್ಯು ಪ್ರಸೇನ,ಬಬ್ರುವಾಹನ,ಶ್ರೀಕೃಷ್ಣ,ರಾಮ,ಋತುಪರ್ಣ,ಪುಷ್ಕಳ,ಶನೀಶ್ವರ,ಧರ್ಮಾಂಗದ ಮೊದಲಾದ ಪುರುಷ ಪಾತ್ರಗಳನ್ನು,ಸೀತೆ,ಸುಭದ್ರೆ,ರಂಭೆ, ಭ್ರಮರಕುಂತಲೆ,ತ್ರೈಲೋಕ ಸುಂದರಿ ಮೊದಲಾದ ಸ್ತ್ರೀಪಾತ್ರಗಳನ್ನು ಕಿರಾತ ವೇಷ ಮತ್ತು ಹಾಸ್ಯ ಪಾತ್ರಗಳನ್ನು ನಿರ್ವಹಿಸಿದ್ದಾರೆ... ಇವರು ದಿ.ಪದ್ಮಶ್ರೀ ಚಿಟ್ಟಾಣಿ, ದಿ,ಜಲವಳ್ಳಿ ವೆಂಕಟೇಶ ರಾವ್,ಕೊಳ್ಯೂರು ರಾಮಚಂದ್ರ ರಾವ್,ಸುಬ್ರಮಣ್ಯ ದಾರೇಶ್ವರ, ಪಟ್ಲಸತೀಶ ಶೆಟ್ಟಿ,ಪುತ್ತಿಗೆ ರಘುರಾಮ ಹೊಳ್ಳಕೊಂಡದಕುಳಿ ರಾಮಚಂದ್ರ ಹೆಗ್ಡೆ, ಕೃಷ್ಣಯಾಜಿ ಬಳ್ಕೂರು,ದಿ.ಕಣ್ಣಿಮನೆ ಗಣಪತಿ ಭಟ್,ದಿ.ಮೊಳಹಳ್ಳಿ ಹೆರಿಯ ನಾಯ್ಕ,ಐರೋಡಿ ಗೋವಿಂದಪ್ಪ , ದಿ.ಅರಾಟೆ ಮಂಜುನಾಥ, ಹಾಲಾಡಿ ರಾಘವೇಂದ್ರ ಮಯ್ಯ,ಸುರೇಶ ಶೆಟ್ಟಿ ಶಂಕರನಾರಾಯಣ, ವಿದ್ಯಾದರ ರಾವ್ ಜಲವಳ್ಳಿ,ಹೆರಂಜಾಲು ಗೋಪಾಲ ಗಾಣಿಗ, ಕಾವ್ಯಶ್ರೀ ಆಜೇರು, ರವಿಚಂದ ಕನ್ನಡಿಕಟ್ಟೆ, ಸತ್ಯನಾರಾಯಣ ಪುಣಿಂಚಿತ್ತಾಯ,ಗಿರೀಶ್ ರೈ,ರಾಘವೇಂದ್ರ ಆಚಾರ್ಯ ಜನ್ಸಾಲೆ ಮೊದಲಾದವರೊಂದಿಗೆ ರಂಗವನ್ನು ಹಂಚಿಕೊಂಡಿದ್ದಾರೆ.. ಅತ್ಯಂತ ಸೃಜನಶೀಲ ಮತ್ತು ಕ್ರೀಯಾತ್ಮಕವಾದ ವ್ಯಕ್ತಿತ್ವವನ್ನು ಹೊಂದಿರುವ ಇವರು ಅನೇಕ ಸಮಾಜಮುಖಿ ಸಂಘಟನೆಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ.. ವಾಗ್ಜ್ಯೋತಿ ಅಂದ,ಮೂಕ ಮತ್ತುಕಿವುಡ ಮಕ್ಕಳ ಶಾಲೆಯ ವಿಕಲಚೇತನ ಮಕ್ಕಳು ಸೇರಿದಂತೆ 1600ಕ್ಕೂ ಹೆಚ್ಚು ಶಾಲಾವಿದ್ಯಾರ್ಥಿಗಳಿಗೆ ಯಕ್ಷಶಿಕ್ಷಣವನ್ನು ನೀಡುತ್ತ ಅವರಿಂದ ವಿಶೇಷ ಕಾರ್ಯಕ್ರಮಗಳಲ್ಲಿ ಯಕ್ಷಗಾನ ಮತ್ತು ತಾಳಮದ್ದಳೆಯ ಪ್ರದರ್ಶನವನ್ನು ಮಾಡಿಸಿ,ಯಕ್ಷಗಾನದ ಆಸಕ್ತಿ ಮೂಡಿಸುವ ಮೂಲಕ ಮುಂದಿನ ತಲೆಮಾರಿಗೆ ಯಕ್ಷಗಾನವನ್ನು ಕೊಂಡೊಯ್ಯುವ ನಿಟ್ಟಿನಲ್ಲಿ ಮಹತ್ತರವಾದ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ...ಯಕ್ಷ ಕವಿಯಾಗಿಯೂ ಗುರುತಿಸಿಕೊಂಡಿರುವ ಇವರ 1000ಕ್ಕೂ ಹೆಚ್ಚು ಯಕ್ಷ ಬರಹಗಳು ನಾಡಿನ ಪ್ರಸಿದ್ಧ ಪತ್ರಿಕೆಗಳಲ್ಲಿ ಬೆಳಕು ಕಂಡಿದೆ.. ಬಡಗುತಿಟ್ಟಿನ ಸಮಗ್ರ ಕಲಾವಿದರ ವ್ಯಕ್ತಿ ಪರಿಚಯದ *ಯಕ್ಷೋಪಾಸಕರು* ಎಂಬ ಮಹಾಗ್ರಂಥ ಯಕ್ಷಗಾನ ಅಕಾಡೆಮಿಯಿಂದ ಪ್ರಕಟವಾಗಿದೆ.. ಇವರ ಅಮರಾಮೃತ,ಅಮೃತಗಳಿಗೆ ಮತ್ತು ದುರ್ಗಾಷ್ಟಮಿ ಎನ್ನುವ ಯಕ್ಷಗಾನ ಪ್ರಸಂಗಗಳು ಶತದಿನೋತ್ಸವವನ್ನು ಆಚರಿಸಿಕೊಂಡಿದೆ.. ಅಲ್ಲದೆ ಅಗ್ನಿವರ್ಷ,ಅಪೂರ್ವ ಅರ್ದಾಂಗಿ ಮತ್ತು ಇತ್ತೀಚಿನ ಕ್ರಾಂತಿಸೂರ್ಯ ಭಗತಸಿಂಹ ಮತ್ತು ಹಾಸ್ಯರತ್ನ ತೆನಾಲಿ ರಾಮಕೃಷ್ಣ ಸೇರಿದಂತೆ 28ಕ್ಕೂ ಹೆಚ್ಚು ಸಾಮಾಜಿಕ,ಕಾಲ್ಪನಿಕ,ಜಾನಪದೀಯ, ಪೌರಾಣಿಕ,ಐತಿಹಾಸಿಕ,ಪ್ರಸಂಗಗಳನ್ನು ರಚಿಸಿದ್ದಾರೆ.. ರಮೇಶ ಬೇಗಾರರ ಕಥಾ ಕಲ್ಪನೆಯ ಚಿತ್ರಲೇಖ ,ಗಂದ ಚಂದನ, ಶಿವಶಾಂಭವಿ, ಮೇಘಧಾರಿಣಿ, ಅರ್ಪಿತಾ ಹೆಗಡೆಯವರ ಕಥಾರಚನೆಯ ನಾಗರ ಪಂಚಮಿ, ಪ್ರೇಮಸಾರಂಗ, ಗಂಡುಗಲಿ ದೇವರಾಯ ಮಣೂರು ವಾಸುದೇವ ಮಯ್ಯರ ಕಥಾರಚನೆಯ ಇಂದ್ರನಾಗ,ಪುಷ್ಪ ಸಿಂದೂರಿ,ಸೂರ್ಯಸಂಕ್ರಾಂತಿ, ದೇವಗಂಗೆ ಮೊದಲಾದ ಪ್ರಸಂಗಗಳಿಗೆ ಸೇರಿದಂತೆ 10000 ಕ್ಕೂ ಹೆಚ್ಚು ಪದ್ಯರಚನೆಯನ್ನು ಮಾಡಿಕೊಟ್ಟಿದ್ದಾರೆ ಸಿಂಗಾರ ಪುಷ್ಪ,ಶೃಂಗಾರ ಕಾವ್ಯ, ಕೋಳಿಪಡೆ ರಂಗ,ಸ್ವಪ್ನ ಮಂಟಪ ಮೊದಲ


#ಯಕ್ಷಮ This is the story of the yakshaganas and the story of life... Today our yakshasasadhakas are the chandobada yaksha kavi, yakshaguru, bagavatha and famous performers *prasada*kumar*mogebettu* ... Mr. Sreetha was born on 20.06.1983 as the son of The Eminent Yakshagana artiste Mogebettu *Heri Nayak* and Rose* at Mogebettu in Kundapur taluk of Udupi district. The art of Yakshagana was also bloody for them. His father, who was in famous costume, was fascinated by the yakshagana practice disciples and was attracted to his yakshagana poems. He had studied the yakshagana theatre and the stage of yakshagana from his father and had embraced the traditional yakshagana tradition and at the age of ten, he entered the yakshagana sangam in the direction of D Haladi Subraya Malayalam. Later in 1998, he joined the Udupi Yakshagana Kendra and received first year yakshagana education from Neelavara Lakshminarayanayya and Satish Kedlaya and mastered traditional dance, acting, context direction and ranga choroography by state award-winning Yakshaguru Bannanje Sanjeeva Suvarna. He took the stage of Yakshagana from devadasa rao and Krishnamurti Bhatt, two other teachers of yakshagana centre. He received the education of the heritage of the elder lyricist, Gorpadi Vithala Patil. Chandobrahma Dr. The famous Chandasa Ganesh, a direct disciple of Shimantur Narayana Shetty, had received education in metre from Kolekadi and later served as yakshaguru at Udupi Yakshagana Kendra where he had received yaksha education from 2005. He is a yakshagana guru, a theatre director, a meteoric yakshapoet, an artist, and has also performed in karnataka as well as in Mumbai, Kolkata, Madras, Nagpur, Bihar, Goa, Bhubaneswar, Sikkim, Orissa, Kerala, Puri, Gujarat and abroad, belgium, Australia, Ireland, Dubai, Sweden, Singapore and other countries. The first mythological yakshagana of Kundaganad, written and directed by 'Narahari Hoikai' was written and directed by The World Kundapur Aday, and was a successful performance in the film. The film was directed by 'Mogaveera Bale' in the composition of famous artistes, and a programme on mangalore radio, over 50 talamadalai. Rangakarimi Gururaja Marpalli, director of Bangalore Radio, played a role in 'Ayanakaala' and 'Ayanakaala' by Dr. Shivaram karanth, acting in the yakshagana drama by famous theatre director Chidambara Rao Joint, a resource person at the state level yakshagana workshop, as a yakshagana guru, guest bagavatha and many other talamadhale programmes.
He has served as guest in many professional melas of Tenku and Badaguthitt, including Saligramam Mandarti, Goligaradi, Jalavalli Mela, abhimanyu prasena, babruvahana, srikrishna, rama, rituparna, pushkala, shaniswara, dharmangada, seethe, subhadra, rambe, bhramamarakuntale, triloka and many other female characters.

He is The Padmashri Chittani, D.Jalavalli Venkateswara Rao, Koluru Ramachandra Rao, Subramanya Dareshwara, Patlasatish Shetty, Puttige Raghuram Holkondakuli Ramchandra Hegde, Krishnayaji Balkur, D.Kannimane Ganapati Bhatt, D.Molahalli Heri Nayak, Airodi Govindappa, D.Arate Manjunatha, Haladi Raghavendra Mayya, Suresh Shetty Shankaranarayana, Vidyadarrao Jalavalli, Heranjalu Gopal Ajeru, Ravi Kannincanda, Satyanarayana Puninchithaya, Girish Rai, Raghava.

He has a very creative and creative personality and has also been involved in many social organisations. The vagjoyothi, who is also a dumb and deaf children, is giving yakshagana education to more than 1600 school children, including the differently abled children of the dumb and deaf children, who are playing a major role in taking yakshagana to the next generation by performing yakshagana and talamdai in special programmes. His 1000 yaksha writings, also known as yaksha poets, have been illuminated in the famous newspapers of the state. The great book Yakshopasaka, a man of the entire artistof Badaguthitta, has been published by the Yakshagana Academy.

His amaramruta, amritagaland durgaashtami are the centenary of the yakshagana. He has written more than 28 social, imaginary, folk, mythological, historical and historical episodes including Agni Varsha, Apoorva Ardangi and the latest Kranti Surya Bhagatasimha and comedy Tenali Ramakrishna. Ramesh Begar's story story is written by Chitralekha, Ganda Chandana, Sivashambhavi, Meghdharini, Arpita Hegde's story-making Nagarpanchami, Premasaranga, Gandugali Devaraya Manur Vasudeva Mayya's story composer Indranaga, Pushpa Sinduri, Surya Sankranti, Devagange etc.


ಯಕ್ಷಮಂದಾರ ವಿಡಿಯೋ ನೋಡಲೋಸುಗವಾಗಿ.

ವಾಹಿನಿಯ ಹೋಮ್ ಪೇಜ್ ಗಾಗಿ: https://www.youtube.com/channel/UCsrL

ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: https://www.facebook.com/groups/27334

Saturday, November 21, 2020

#ಯಕ್ಷಮಂದಾರ - 42 | ಡಾ.ಬಸವರಾಜ್ ಶೆಟ್ಟಿಗಾರ್ ಕೋಟೇಶ್ವರ | Dr.Basavaraj Shettigar | Koteswara | Part 42

                                                                     #ಯಕ್ಷಮಂದಾರ


#ಯಕ್ಷಮಂದಾರ - 42 | ಡಾ.ಬಸವರಾಜ್ ಶೆಟ್ಟಿಗಾರ್ ಕೋಟೇಶ್ವರ | Dr.Basavaraj Shettigar | Koteswara | Part 42

ಇದು ಯಕ್ಷ ಕಲಾವಿದರ ಸಾಧನೆ ಮತ್ತು ಜೀವನಗಾಥೆಯ ಅನಾವರಣ.... ಇಂದಿನ ನಮ್ಮ ಯಕ್ಷಸಾಧಕರು..ಕ್ಷೇತ್ರ ಮಹಾತ್ಮೆಗಳ ಸರದಾರ ಮತ್ತು ಪ್ರಸಿದ್ದ ಯಕ್ಷಗಾನ ಪ್ರಸಂಗಕರ್ತರಾದ ಕೋಟೇಶ್ವರದ *ಡಾ.ಬಸವರಾಜ್* **ಶೆಟ್ಟಿಗಾರರು* ... ಶ್ರೀಯುತರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟೇಶ್ವರದಲ್ಲಿ *ದಿ.ಶ್ರೀನಿವಾಸ ಶೆಟ್ಟಿಗಾರ* ಮತ್ತು *ಪಣಿಯಮ್ಮ* ದಂಪತಿಗಳ ಪುಣ್ಯಗರ್ಭದಲ್ಲಿ ದಿನಾಂಕ: _11.10.1967_ ರಲ್ಲಿ ಜನಿಸಿದರು.. ಪದವಿ ಶಿಕ್ಷಣವನ್ನು ಪಡೆದಿರುವ ಇವರು ಪತ್ರಿಕೋದ್ಯಮ ಮತ್ತು ವಿದ್ಯುತ್ ಕ್ಷೇತ್ರದಲ್ಲಿ ಡಿಪ್ಲೋಮಾ ಶಿಕ್ಷಣವನ್ನು ಪಡೆದಿದ್ದು, ಕಂಪ್ಯೂಟರ್ ಶಿಕ್ಷಣ,ಟೈಪ್ ರೈಟಿಂಗ್ ಮತ್ತು ಕೃಷಿ ಕ್ಷೇತ್ರದಲ್ಲಿಯೂ ಕೂಡ ವಿಶೇಷ ಪದವಿಯನ್ನು ಪಡೆದುಕೊಂಡಿದ್ದಾರೆ... ಆಡು ಮುಟ್ಟದ ಸೊಪ್ಪಿಲ್ಲ ಎನ್ನುವ ಕುಂದಾಪುರದ ಆಡುಬಾಷೆಯಂತೆ ಶೆಟ್ಟಿಗಾರರು ಕೈಯಾಡಿಸದ ಕ್ಷೇತ್ರಗಳಿಲ್ಲ ಎನ್ನಬಹುದು.. ವಾಸ್ತು ಶಾಸ್ತ್ರಜ್ಞರಾಗಿ, ಜ್ಯೋತಿಷ್ಯ ಪಂಡಿತರಾಗಿ, ಪ್ರವಚನಕಾರರಾಗಿ, ಕೃಷಿಕರಾಗಿ,ಪತ್ರಿಕ ವರದಿಗಾರರಾಗಿ, ಸಾಹಿತಿಯಾಗಿ,ಶಾಲಾ ಶಿಕ್ಷಕರಾಗಿ, ನಾಟಕ ಕಲಾವಿದರಾಗಿ, ಭಜನಾ ತಂಡದ ಸದಸ್ಯರಾಗಿ, ಯಕ್ಷಗಾನದ ಹವ್ಯಾಸಿ ಕಲಾವಿದರಾಗಿ , ಪ್ರಸಂಗಕರ್ತರಾಗಿ, ಲೇಖಕರಾಗಿ,ಕಾದಂಬರಿಕಾರರಾಗಿ,ಕವಿಯಾಗಿ,ರಂಗ ನಿರ್ದೇಶಕರಾಗಿ ಶನಿಕಥಾ ಕಲಾವಿದರಾಗಿ,ಕರ್ಜೆ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ,ಕೃಷಿ, ಪತ್ರಿಕೋದ್ಯಮ,ಸಾಹಿತ್ಯಸಾಮಾಜಿಕ, ಧಾರ್ಮಿಕ,ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತನ್ನ ಅಸ್ತಿತ್ವವನ್ನು ಪ್ರಚುರಪಡಿಸಿ ಅಪರೂಪದಲ್ಲಿ ಅಪರೂಪದ ಸಾಧನೆಗೈದ ಬಹುಮುಖ ಪ್ರತಿಭೆಯುಳ್ಳ ಸಾಧಕರಾಗಿ ಗುರುತಿಸಿ ಕೊಂಡಿದ್ದಾರೆ... ಇವರು ಯಕ್ಷಗಾನದ ಹವ್ಯಾಸಿ ಕಲಾವಿದರಾಗಿ ಚಂದ್ರಸೇನ, ವೀರಮಣಿ, ಧನಪಾಲ ಶೆಟ್ಟಿ, ರಾಮಗಾಣಿಗ, ಹನುಮಂತ,ಸುಗ್ರೀವ, ರಾಮ,ಲಕ್ಷ್ಮಣ, ವಿಭೀಷಣ,ನಂದಿ ಶೆಟ್ಟಿ, ವಿಕ್ರಮ, ತಾಮ್ರಧ್ವಜ,ಸುಧನ್ವ,ವಿಷ್ಣು,ಅಭಿಮನ್ಯು,ಮಯೂರದ್ವಜ ಶನೈಶ್ಚರ ಮೊದಲಾದ ವೇಷಗಳನ್ನು ಸಮರ್ಥವಾಗಿ ನಿಭಾಯಿಸಿ ಅಪಾರವಾದ ಜನಮನ್ನಣೆಗೆ ಪಾತ್ರರಾಗಿದ್ದಾರೆ... ಸೌಕೂರು ಕ್ಷೇತ್ರ ಮಹಾತ್ಮೆ,ಸೂರಾಲು ಕ್ಷೇತ್ರ ಮಹಾತ್ಮೆ,ವಸುಪುರ ಕ್ಷೇತ್ರ ಮಹಾತ್ಮೆ,ಹಿರಿಯಡ್ಕ ಕ್ಷೇತ್ರ ಮಹಾತ್ಮೆ,ಕನ್ನಾರು ಕ್ಷೇತ್ರ ಮಹಾತ್ಮೆ,ಮಡಾಮಕ್ಕಿ ಕ್ಷೇತ್ರ ಮಹಾತ್ಮೆ,ಹಟ್ಟಿಯಂಗಡಿ ಕ್ಷೇತ್ರ ಮಹಾತ್ಮೆ,ಮೂರೂರು ಕ್ಷೇತ್ರ ಮಹಾತ್ಮೆ,ಮೊಗವೀರ ಪೇಟೆ ಕ್ಷೇತ್ರ ಮಹಾತ್ಮೆ, ಆರೂರು ಕ್ಷೇತ್ರ ಮಹಾತ್ಮೆ,ಮೇಸ್ತ್ರಿ ಮಾದಯ್ಯ, ಸ್ವಸ್ತಿ ಸಿಂಚನ,ಕೊರಗನ ಕೊರಪೋಲು(ತುಳು)ಸೌಮ್ಯ ಸೌಂದರ್ಯ ಸೇರಿದಂತೆ 57 ಕ್ಕೂ ಹೆಚ್ಚು ಪ್ರಸಂಗಗಳನ್ನು ರಚಿಸಿದ್ದಾರೆ.. ಪ್ರೇಮಚಕ್ರ,ಸಂಸಾರ ಚಕ್ರ,ಅಪಹರಣ, ಕಣ್ಣೀರ ಯಾತ್ರೆ ಮೊದಲಾದ ಕಾದಂಬರಿಗಳನ್ನು,ಪುನರ್ಜನ್ಮ,ಅತ್ತೆಯ ಸೋಲು,ಅರಿವು,ಕತ್ತಲಿಂದ ಬೆಳಕಿನೆಡೆಗೆ, ವಿಷಾಮೃತ,ಕನ್ಯಾದಾನ, ವ್ರಕೋದರ ಪ್ರತಿಜ್ಞೆ ಮೊದಲಾದ ನಾಟಕಗಳನ್ನು, ರತಿರೇಖಾ ಇತ್ಯಾದಿ ಕತೆಯನ್ನು, ಕವನಾಮೃತ ಎನ್ನುವ ಕವನ ಸಂಕಲನವನ್ನು,ಜಾನಪದ ಗೀತೆ, ಬಾವಗೀತೆ ಮತ್ತು ಭಕ್ತಿಗೀತೆಗಳನ್ನು ರಚಿಸಿದ್ದಾರೆ.. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ,ಗೌರವ ಡಾಕ್ಟರೇಟ್ ಪ್ರಶಸ್ತಿ,ಶಿವರಾಮ ಕಾರಂತ ಸದ್ಬಾವನ ಪ್ರಶಸ್ತಿ,ಪ್ರಸಂಗ ರಚನೆಗಾಗಿ ಸ್ಕಂದ ಪುರಸ್ಕಾರ,ಕರ್ನಾಟಕ ಭೂಷಣ ರಾಜ್ಯ, ಪ್ರಶಸ್ತಿ,ಭಾರತ ಭೂಷಣ ರಾಷ್ಟ ಪ್ರಶಸ್ತಿ,ಬಸವ ಪ್ರಶಸ್ತಿ ಸೇರಿದಂತೆ 15ಕ್ಕೊ ಹೆಚ್ಚು ಪ್ರಶಸ್ತಿ ಪುರಸ್ಕಾರಗಳು ಮತ್ತು 385 ಕ್ಕೂ ಹೆಚ್ಚು ಸನ್ಮಾನಗಳಿಗೆ ಪಾತ್ರರಾಗಿದ್ದಾರೆ ಕುಂದಾಪುರದ ಕಾರ್ಯನಿರತ ಪತ್ರಕರ್ತರ ಸಂಘದ ಸ್ಥಾಪಕ ಕೋಶಾಧಿಕಾರಿಯಾಗಿ, ಬೆಂಗಳೂರು ಪದ್ಮಸಾಲಿ ಸಮಾಜದ ಸ್ಥಾಪಕ ಸದಸ್ಯರಾಗಿ,ಕೋಟೇಶ್ವರದ ಮಾರಿಯಮ್ಮ ದೇವಸ್ಥಾನದ ಸಾಂಸ್ಕೃತಿಕ ಸಂಘದ ಸ್ಥಾಪಕ ಕೋಶಾಧಿಕಾರಿಯಾಗಿ, ಗಂಗೊಳ್ಳಿ ಸಂಗೀತ ಕಲಾಶಾಲೆಯ ಸ್ಥಾಪಕ ನಿರ್ದೇಶಕರಾಗಿ,ಕೋಟೇಶ್ವರ ಆಸ್ತಿಕ ಸಮಾಜದ ಉಪಾಧ್ಯಕ್ಷ ಸೇರಿದಂತೆ ಇನ್ನು ಅನೇಕ ಸಂಘಸಂಸ್ಥೆಗಳನ್ನು ಸ್ಥಾಪಿಸಿ, ಮುನ್ನೆಡಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ ಕರುನಾಡ ಕಣ್ಮಣಿ,ಕ್ಷೇತ್ರಮಹಾತ್ಮೆಗಳ ಸರದಾರ,ಪದ್ಮಶಾಲಿ ಕುಲತಿಲಕ, ಜ್ಯೋತಿಷ್ಯ ಶಿರೋಮಣಿ,ಪದ್ಮಶಾಲಿ ಕಣ್ಮಣಿ, ಕಲಾಕಸ್ತೂರಿ,ಸಮಾಜರತ್ನ ಸೇರಿದಂತೆ ಅನೇಕ ಬಿರುದುಗಳನ್ನು ಪಡೆದಿರುವ ಇವರು ಆಕಾಶವಾಣಿ, ದೂರದರ್ಶನ ಸೇರಿದಂತೆ ಅನೇಕ ಕಡೆ ಸಂದರ್ಶನವನ್ನು ನೀಡಿದ್ದಾರೆ... ಇವರ ಕುರಿತು ಕೀರ್ತಿಕಲಸ ಕೀರ್ತಿಕಿರೀಟ,ಶತಸನ್ಮಾನ ಸಂಭ್ರಮ ಎನ್ನುವ ಅಭಿನಂದನಾ ಗ್ರಂಥಗಳು ಬಿಡುಗಡೆಗೊಂಡಿವೆ.. ಜ್ಯೋತಿಷ್ಯ ಮತ್ತು ವಾಸ್ತುಶಾಸ್ತ್ರ ವಿನ್ಯಾಸದಲ್ಲಿ ಅಪಾರವಾದ ಸಿದ್ಧಿಯನ್ನು ಪಡೆದಿರುವ ಇವರು *2* ಲಕ್ಷಕ್ಕೂ ಮಿಕ್ಕಿ ಜಾತಕ ಪರಿಶೀಲನೆ ಮತ್ತು *75000* ಕ್ಕೂ ಹೆಚ್ಚು ವಾಸ್ತುವಿನ್ಯಾಸ ಮತ್ತು ನಕ್ಷೆಯನ್ನು ರಚಿಸಿಕೊಟ್ಟಿದ್ದಾರೆ... ಕಾರ್ಕಳದ *ಕಾವ್ಯಶ್ರೀ. ಬಿ.ಶೆಟ್ಟಿಗಾರ್* ರನ್ನು ಧರ್ಮಪತ್ನಿಯಾಗಿ ಸ್ವೀಕರಿಸಿ ಆದರ್ಶ ದಾಂಪತ್ಯ ಜೀವನವನ್ನು ನಡೆಸಿ, *ಸೌಜನ್ಯಶ್ರೀ* ( ಮಗಳು) *ಚೈತನ್ಯಶ್ರೀ* (ಮಗಳು) *ಲೋಕೇಶ್ ಕುಮಾರ್* (ಅಳಿಯ) *ಗುರುರಾಜ ಶೆಟ್ಟಿಗಾರ್* (ಅಳಿಯ) ಮತ್ತು *ಸಂಕಲ್ಪ* ಎನ್ನುವ ಮೊಮ್ಮಗನೊಂದಿಗೆ ಕೋಟೇಶ್ವರದ *ಓಂಶ್ರೀ* ಯಲ್ಲಿ ವಾಸವಾಗಿದ್ದಾರೆ.. ಇವರಿಗೆ ಕೋಟೇಶ್ವರದ ಕೋಟಿಲಿಂಗೇಶ್ವರ ಸ್ವಾಮಿಯೂ ಆಯುರಾರೋಗ್ಯ,ಸುಖ ನೆಮ್ಮದಿಯನ್ನು ನೀಡಿ ಕಾಪಾಡಲಿ ಎನ್ನುವುದು ನಮ್ಮ ಯಕ್ಷಮಂದಾರದ ಶುಭಹಾರೈಕೆ...🙏 ಸಾಹಿತ್ಯ: *ಹಾಲಾಡಿ ಸಂತೋಷ ಶೆಟ್ಟಿ* ನಿರೂಪಣೆ: *ಶ್ರೀಮತಿ ಅಮೃತಾ ಶೆಟ್ಟಿ* ಯಕ್ಷಗಾನ ಕಲಾವಿದರ ಪರಿಚಯ ಸರಣಿಯ ಎಲ್ಲ ವಿಡಿಯೋಗಳು ನಮ್ಮಯಕ್ಷ💥ಮಂದಾರ ಯೂಟ್ಯೂಬ್ ಚಾನಲ್..ನಲ್ಲಿ ಲಭ್ಯವಿದೆ.. ನಮ್ಮ 🌀ಯಕ್ಷ💥ಮಂದಾರ🌀ಯೂಟ್ಯೂಬ್ ಚಾನಲ್ ಮತ್ತು ಫೇಸ್ಬುಕ್ ಪೇಜ್.. ನ್ನು download ಮಾಡಿಕೊಳ್ಳಿ..ಮತ್ತು ನಾವು upload ಮಾಡುವ ಎಲ್ಲ ಯಕ್ಷಗಾನ ವಿಡಿಯೋಗಳ ಮಾಹಿತಿ ಪಡೆಯಿರಿ..ನಮ್ಮ ವಿಡಿಯೋಗಳನ್ನು ನೋಡಿ like ಮಾಡಿ,share ಮಾಡಿ ಪ್ರೋತ್ಸಾಹಿಸಿ... ಯಕ್ಷಗಾನ ಕಲೆಯನ್ನು ಉಳಿಸಿ,ಬೆಳೆಸಿ, ಪ್ರೋತ್ಸಾಹಿಸಿ.. ಧನ್ಯವಾದಗಳು🙏🙏🙏

This is an exhibition of the achievements and life of yakshaartists.... Today's yakshakas are.. The great sadar of the field and the famous Yakshagana episodewriter of Koteswara *Dr Basavaraj* *Shettygara* ... Mr. Srivastava was born on 11.10.1967 at Koteshwara in Kundapur taluk of Udupi district. He has a degree in journalism and power and has a special degree in computer education, typewriting and agriculture. The goat sapling saga of Kundapur aka Shettika seemed to have no hand. As an architect, astrologer, preacher, farmer, journalist, writer, school teacher, drama teacher, bhajan aamataartist, episode writer, novelist, poet, stage director, shanikatha artist, karje shala development committee president, president of karje shala development committee, agriculture, journalism, literature, social, religious, educational, cultural fields. He has been a great actor in yakshagana, chandrasena, veeramani, dhanapala shetty, ramaganiga, hanumantha, sugriva, rama, lakshmana, vibhishana, nandi shetty, vikram, thradhwaj, sudhanva, vishnu, abhimanyu, mayuradvaja shanaishchara etc. Saukur Kshetra Mahatma, Suralu Kshetra Mahatma, Vasupura Kshetra Mahatma, Hiriyadka Kshetra Mahatma, Kannaru Kshetra Mahatma, Madamakki Kshetra Mahatma, Hattiyangadi Kshetra Mahatma, Moore Kshetra Mahatma, Mogaweera Pettai Kshetra Mahatma, Aroor Kshetra Mahatma, Mastri Madaiah, Swasti Sinchana, Korakana Korapolu (Tulu) have written more than 57 episodes. He has written novels like Prema Chakra, Sanskarchakra, Kidnapping, Kidnapping, Tear Journey, Reincarnation, Failure of Mother-in-law, Awareness, Darkness to Light, Vishamrita, Kanyadan, Vrakodar's Vow, Etc. He has won over 15 awards and more than 385 awards including The District Rajyotsava Award, Honorary Doctorate Award, Shivaram Karanth Sadbhavana Award, Skanda Award for Context Composition, Karnataka Bhushan State, Bharat Bhushan Rashtra Award, Basava Award, etc. He is credited with establishing and running several other organisations including the founder cellor of the Working Journalists Association of Kundapur, founder cellor of the Bangalore Padmasali Samaj, the founder cellor of the Mariamma Temple Cultural Association in Koteshwara, the founding director of gangoli music school, vice president of koteswara aathika samaj. He has received many titles including Karunada Kanmani, Kshetra Mahatmas Adara, Padmashali Kulathilaka, Astrology Shiromani, Padmashali Kanmani, Kalakasturi, Samajratna and many other titles and has given interviews in many places including Radio, Television and... On these, the books of praise have been released titled Kirtikalasa Kirti, Satamantha Samsam.

He has received many titles including Karunada Kanmani, Kshetra Mahatmas Adara, Padmashali Kulathilaka, Astrology Shiromani, Padmashali Kanmani, Kalakasturi, Samajratna and many other titles and has given interviews in many places including Radio, Television and...

On these, the books of praise have been released titled Kirtikalasa Kirti, Satamantha Samsam.

Having a great synthesis of astrology and architecture, he has created over 2* lakh horoscope verification and *75000* architecture and maps.

Kavyasri of Karkala. Accept B. Shettygar* as his wife and lead an ideal marriage life. *Courtesy Sri* (daughter) *Chaitanya Sri* (daughter) *Rajesh Kumar* (son-in-law)
 *Gururaja Shettygar* (son-in-law) and grandson Sankalp* live in Koteshwara 'Omsri'.

Our yakshamandar ablothed them to the good health and happiness of kotilingaswara. 🙏

Literature: *Haladi Santosh Shetty*

Narration: *Mrs. Amrita Shetty*

All the videos of the Yakshagana Artistes Introduction Series are our yaksha💥mandar YouTube channel.. Available in.. 

Our 🌀yss💥mandar🌀YouTube channel and Facebook page. Download.. And get information about all yakshagana videos we upload.. Watch our videos like, share and encourage... Save, develop and encourage yakshagana art..

Thank you🙏🙏🙏
ವಾಹಿನಿಯ ಹೋಮ್ ಪೇಜ್ ಗಾಗಿ: https://www.youtube.com/channel/UCsrL ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: https://www.facebook.com/groups/27334

#ಯಕ್ಷಮಂದಾರ - 51 | ಹೆನ್ನಾಬೈಲು ಸಂಜೀವ ಶೆಟ್ಟಿ | Hennabailu Sanjeeva Shetty | ಪ್ರಸಿದ್ದ ಸ್ತ್ರೀಪಾತ್ರದಾರಿ |

🌀ಯಕ್ಷ💥ಮಂದಾರ🌀 #ಯಕ್ಷಮಂದಾರ  - 51 | ಹೆನ್ನಾಬೈಲು ಸಂಜೀವ ಶೆಟ್ಟಿ | Hennabailu Sanjeeva Shetty | ಪ್ರಸಿದ್ದ ಸ್ತ್ರೀಪಾತ್ರದಾರಿ...