#ಯಕ್ಷಮಂದಾರ
#ಯಕ್ಷಮಂದಾರ - 44 | ಕೋಟ ಸುರೇಶ ಬಂಗೇರ | ಅಮೃತೇಶ್ವರಿ ಮೇಳ | Kota Suresh | Amruteswari Mela| | ವೇಷಧಾರಿ |
ಇದು ಯಕ್ಷ ಕಲಾವಿದರ ಸಾಧನೆ ಮತ್ತು ಜೀವನಗಾಥೆಯ ಅನಾವರಣ
ಇಂದಿನ ನಮ್ಮ ಯಕ್ಷಸಾಧಕರು... ನಡುತಿಟ್ಟಿನ ಸಂಪ್ರದಾಯಬದ್ದ ವೇಷಧಾರಿ,ಕೋಟ ಅಮೃತೇಶ್ವರಿ ಮೇಳದ ಪ್ರಧಾನ ಕಲಾವಿದರಾದ *ಕೋಟ ಸುರೇಶ* *ಬಂಗೇರರು..*
ಇವರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕು ಕೋಟದ ಮಣೂರು ಪಡುಕೆರೆಯಲ್ಲಿ *ಬೇಡುಮರಕಾಲ* ಮತ್ತು *ಅಕ್ಕಮ್ಮ* ದಂಪತಿಯ ಮಗನಾಗಿ ದಿನಾಂಕ: __23.02.1965_ ರಲ್ಲಿ ಜನಿಸಿದರು.
ತನ್ನ ಹದಿನಾರನೆಯ ವಯಸ್ಸಿನಲ್ಲಿ ಯಕ್ಷಗಾನದ ಹಿರಿಯ ಕಲಾವಿದರಾದ ಮೊಳಹಳ್ಳಿ ಹೆರಿಯ ನಾಯ್ಕರಿಂದ ಯಕ್ಷಗಾನದ ಪ್ರಾಥಮಿಕ ಜ್ಞಾನವನ್ನು ಪಡೆದು ಅವರು ಕಲಾವಿದರಾಗಿದ್ದ ಮಂದಾರ್ತಿ ಮೇಳದಲ್ಲಿ ಗೆಜ್ಜೆಕಟ್ಟಿದರು..ಅಲ್ಲಿ ಸತತವಾಗಿ ಏಳು ವರ್ಷಗಳ ಕಾಲ ಸೇವೆಸಲ್ಲಿಸಿ, ಗುರುವಿಲ್ಲದ "ಏಕಲವ್ಯ"ನಂತೆ ಹಿರಿಯ ಕಲಾವಿದರ ಹೆಜ್ಜೆಗಾರಿಕೆ,ವೇಷಗಾರಿಕೆ ಮತ್ತು ಮಾತುಗಾರಿಕೆಯನ್ನು ನೋಡಿ,ಕೇಳಿ ಕಲಿತೆ ಯಕ್ಷಗಾನದ ಸರ್ವಾಂಗಗಗಳಲ್ಲೂ ಪರಿಪೂರ್ಣತೆಯನ್ನು ಕಂಡುಕೊಂಡರು.
ಹಿರಿಯ ಕಲಾವಿದರಾಗಿದ್ದ ಶಿರಿಯಾರ ಮಂಜು ನಾಯ್ಕರ ಹೂವಿನಕೋಲು ತಂಡದಲ್ಲಿ ಬಾಗವಹಿಸುತ್ತಿದ್ದದ್ದರಿಂದ ಇವರಿಗೆ ಯಕ್ಷಗಾನದ ಜ್ಞಾನಾರ್ಜನೆಗೆ ಅನುಕೂಲವಾಯಿತು..
ಸಾಲಿಗ್ರಾಮ, ಪೆರ್ಡೂರು ಕಮಲಶಿಲೆ ಮೇಳಗಳಲ್ಲಿ ಸೇವೆಸಲ್ಲಿಸಿರುವ ಇವರು ಸೌಕೂರು ಮೇಳದಲ್ಲಿ ಸುದೀರ್ಘ ಹದಿನೇಳು ವರ್ಷಗಳ ಕಾಲ ಸೇವೆಸಲ್ಲಿಸಿದ್ದಾರೆ,ಪ್ರಸ್ತುತ ಕೋಟ ಅಮೃತೇಶ್ವರಿ ಮೇಳದಲ್ಲಿ ಪ್ರಧಾನ ವೇಷಧಾರಿಯಾಗಿ ಮತ್ತು ಮೇಳದ ಪ್ರಬಂದಕರಾಗಿ ದುಡಿಯುತ್ತಿದ್ದಾರೆ
ಸೌಕೂರು ಮೇಳದಲ್ಲಿರುವ ಕಾಲದಲ್ಲಿ ರಾಘವೇಂದ್ರ ಮಯ್ಯ,ರಾಕೇಶ್ ಮಲ್ಯ,ಕೋಡಿ ವಿಶ್ವನಾಥ ಗಾಣಿಗ,ಹಾರಾಡಿ ಸರ್ವೋತ್ತಮ ಗಾಣಿಗ,ಕೋಟ ಸುರೇಶ,ಬೆದ್ರಾಡಿ ನರಸಿಂಹ,ಜೋಗು ಕುಲಾಲ್,ಹೊಸಂಗಡಿ ಕೃಷ್ಣ ಗಾಣಿಗ,ಸುಳುಗೋಡು ನಾರಾಯಣ, ಶಂಕರ ಉಳ್ಳೂರು ಮೊದಲಾದ ಪ್ರಸಿದ್ಧ ಕಲಾವಿದರಿಂದ ಬಡಗುತಿಟ್ಟಿನ ಪ್ರಸಿದ್ಧ ಮೇಳವಾಗಿತ್ತು
ಪರಂಪರೆಯ ಯಕ್ಷದಿಗ್ಗಜರ ಸಾಲಿನಲ್ಲಿ ತನ್ನದೆ ಚಾಪು ಛಾಪಿಸಿ,ಹೆಜ್ಜೆ ಮೂಡಿಸಿ ರಂಗವನ್ನು ಬೆಳಗಿದ ಇವರ ಪೌರಾಣಿಕ ಪ್ರಸಂಗದ ಸುಧನ್ವ,ಪುಷ್ಕಳ, ಧರ್ಮಾಂಗದ, ಚಂದ್ರಹಾಸ, ವಿಷ್ಣು,ಕೃಷ್ಣ,ಋತುಪರ್ಣ,ಅತಿಕಾಯ,ತಾಮ್ರಧ್ವಜ,ಮಾರ್ತಾಂಡತೇಜ, ಅರ್ಜುನ,ದೇವವೃತ ಮೊದಲಾದ ಪಾತ್ರಗಳು ಇವರಿಗೆ ಅಪಾರ ಕೀರ್ತಿಯನ್ನು ತಂದುಕೊಟ್ಟಿದೆ.
ಕೇವಲ ಪೌರಾಣಿಕ ಪ್ರಸಂಗಗಳಲ್ಲಿ ಮಾತ್ರವಲ್ಲದೆ,ಆಧುನಿಕ ಪ್ರಸಂಗದ ಪಾತ್ರಗಳಿಗೂ ಜೀವ ತುಂಬಬಲ್ಲ ಇವರ ಬಾನುತೇಜಸ್ವಿಯ ಬಾನುತೇಜ,ಸತಿ ಸೀಮಂತಿನಿಯ ಚಂದ್ರಾoಗದ, ಚೆಲುವೆ ಚಿತ್ರಾವತಿಯ ಹೇಮಾಂಗದ,ನಾಗಶ್ರೀಯ ಶುಭಾಂಗನ ಪಾತ್ರಗಳು ಬಹು ಪ್ರಸಿದ್ಧವಾಗಿದೆ.
ಯಕ್ಷಗಾನದ ಚೌಕಟ್ಟನ್ನು ಮೀರದೆ,ಪಾತ್ರದ ಔಚಿತ್ಯವನ್ನು ಕೆಡಿಸದೆ ತನ್ನ ಮಾತುಗಾರಿಕೆಯ ಮೋಡಿ ಮತ್ತು ವೇಷಗಾರಿಕೆಯ ಸೊಗಸಿನಿಂದಲೇ ಪ್ರೇಕ್ಷಕರ ಮನಸೂರೆಗೊಳ್ಳುವ ಇವರ ಲಾಲಿತ್ಯಪೂರ್ಣ ನೃತ್ಯ, ಶ್ರುತಿಬದ್ದ ಪಾಂಡಿತ್ಯಪೂರ್ಣ ವಾಗ್ವೈಕರಿ, ಹೆಜ್ಜೆಗಾರಿಕೆ,ರಂಗನಿರ್ವಹಣೆ ಅಪೂರ್ವ ವಾದದ್ದು. ಶೃಂಗಾರ, ವೀರ ಭಕ್ತಿರಸಗಳಿಂದ ಚಿತ್ರಿಸಲ್ಪಡುವ
ಸುಧನ್ವನ ಪಾತ್ರದಲ್ಲಿನ ಇವರ ಅಭಿನಯದಿಂದ "ಯಕ್ಷ ಸುಧನ್ವ" ಎಂದು ಅಭಿಮಾನಿಗಳಿಂದ ಕರೆಸಿಕೊಂಡವರು..
ದೇಶಾದ್ಯಂತದ್ಯಂತ ಹಲವಾರು ಕಾರ್ಯಕ್ರಮಗಳನ್ನು ನೀಡಿ ಅಸಂಖ್ಯಾತ ಅಭಿಮಾನಿಗಳ ಪ್ರೀತಿ ಮತ್ತು ಅಭಿಮಾನಕ್ಕೆ ಪಾತ್ರರಾಗಿರುವ ಇವರಿಗೆ ಯಕ್ಷಗಾನ ತಿರುಗಾಟದ 40 ವರ್ಷ ಪೂರೈಸಿದ ಸಂದರ್ಭದಲ್ಲಿ ಕೋಟದಲ್ಲಿ ಅದ್ದೂರಿಯಾಗಿ ಸನ್ಮಾನಿಸಲಾಯಿತು.. ಅಲ್ಲದೆ ಕರ್ನಾಟಕ ವಾರ್ತಾ ಮತ್ತು ಪ್ರಚಾರ ಇಲಾಖೆಯ ವತಿಯಿಂದ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ,ಸನ್ಮಾನಗಳು ಸಂದಿದೆ
ಇವರು ಪತ್ನಿ *ಸುಶೀಲಾ* ಮತ್ತು ಮಕ್ಕಳಾದ *ಸಮರ್ಥ,ಸುರಕ್ಷಾ ರೊಂದಿಗೆ* ಕೋಟ ಪಡುಕೆರೆಯಲ್ಲಿ ವಾಸವಾಗಿದ್ದಾರೆ.
ಸರಳ,ಸಜ್ಜನ,ಸೌಮ್ಯ ಸ್ವಭಾವದ ಇವರಿಗೆ ಅಮೃತೇಶ್ವರಿ ಅಮ್ಮನವರು ಆಯುರಾರೋಗ್ಯ, ಐಶ್ವರ್ಯ,ಸುಖ ಶಾಂತಿಯನ್ನು ಅನುಗ್ರಹಿಸಲಿ ಎನ್ನುವುದು ಯಕ್ಷಮಂದಾರದ ಶುಭಹಾರೈಕೆ...
ಸಾಹಿತ್ಯ: *ಹಾಲಾಡಿ ಸಂತೋಷ ಶೆಟ್ಟಿ*
ನಿರೂಪಣೆ: *ಶ್ರೀಮತಿ ಅಮೃತಾ ಶೆಟ್ಟಿ*
ಯಕ್ಷಗಾನ ಕಲಾವಿದರ ಪರಿಚಯ ಸರಣಿಯ ಎಲ್ಲ ವಿಡಿಯೋಗಳು ನಮ್ಮ🌀ಯಕ್ಷ💥ಮಂದಾರ🌀 ಯೂಟ್ಯೂಬ್ ಚಾನಲ್..ನಲ್ಲಿ ಲಭ್ಯವಿದೆ.. ನಮ್ಮ 🌀ಯಕ್ಷ💥ಮಂದಾರ🌀ಯೂಟ್ಯೂಬ್ ಚಾನಲ್ ಮತ್ತು ಫೇಸ್ಬುಕ್ ಪೇಜ್.. ನ್ನು download ಮಾಡಿಕೊಳ್ಳಿ..ಮತ್ತು ನಾವು upload ಮಾಡುವ ಎಲ್ಲ ಯಕ್ಷಗಾನ ವಿಡಿಯೋಗಳ ಮಾಹಿತಿ ಪಡೆಯಿರಿ..ನಮ್ಮ ವಿಡಿಯೋಗಳನ್ನು ನೋಡಿ like ಮಾಡಿ,share ಮಾಡಿ ಪ್ರೋತ್ಸಾಹಿಸಿ... ಯಕ್ಷಗಾನ ಕಲೆಯನ್ನು ಉಳಿಸಿ,ಬೆಳೆಸಿ, ಪ್ರೋತ್ಸಾಹಿಸಿ..
ಧನ್ಯವಾದಗಳು🙏🙏🙏#ಯಕ್ಷಮ
This is the exhibition of the achievements and life of yakshaartists
Today's yakshaganas... The main artists of kota amriteshwari mela are kota suresh, *bangeraru. *
He was born on 23.02.1965 as the son of *Bedumarakala* and Akkamma* in Manur Padukare in Kundapur taluk kota in Udupi district.
At the age of sixteen, he got the knowledge of Yakshagana from the veteran yakshagana artistmolahalli heri nayak and tied the knot at the artist's Mandarthi Mela. After seven years of service there, he saw the footwork, dress and speech of the veteran artistes like "Ekalavya" without a master, and learned to be perfect in all the parts of Yakshagana.
The veteran artist, Shiriyar Manju Nayak, was bending in to the floral stick team, which helped him to learn yakshagana.
He has served at Saligramam and Perdur Kamalashila Melas for a long period of seventeen years at Saukur Mela, currently working as a prominent attire and mela practitioner at Kota Amrutheswari Mela.
During the Saukur mela, badaguthittta was famous by famous artists like Raghavendra Mayya, Rakesh Mallya, Kodi Vishwanath Ganiga, Haradi Supreme Ganiga, Kota Suresh, Bedradi Narasimha, Jogu Kulal, Hosangadi Krishna Ganiga, Sulugodu Narayana, Shankarulur etc.
His mythological characters like Sudhanva, Pushkala, Dharmamangadha, Chandrahasa, Vishnu, Krishna, Rituparna, Atikaya, Thambardhwaj, Martandateja, Arjuna and Devavruta have brought him immense fame.
His characters are very famous for his roles in the modern context, not only in mythological contexts but also the roles of The Shubhunga of Nagasri, sati seemantini chandragadha, hemangaof beauty Chitravati, nagasree.
His skillful dance, his skillful speech, his skill, his skill, his character's charm and the charm of his character, without exceeding the framework of yakshagana, is a unique and incredible dance. Erotic, heroic bhakti juices painted
His performance in the role of Sudhanvana was called "Yaksha Sudhanva" by his fans.
He has been honoured with many programmes across the country and has been a dignifying and admired by the innumerable fans and the 40 years of yakshagana tour. Besides, karnataka information and publicity department has also won many awards and awards including awards.
He lives in Kota Padukare with his wife Sushila* and children *Saka,Suraksha.
Amriteshwari Amma wishes them a good, good and gentle nature, and may they bless them with a healthy, prosperous and happy life.
ಯಕ್ಷಮಂದಾರ ವಿಡಿಯೋ ನೋಡಲೋಸುಗವಾಗಿ.
ವಾಹಿನಿಯ ಹೋಮ್ ಪೇಜ್ ಗಾಗಿ: https://www.youtube.com/channel/UCsrL
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: https://www.facebook.com/groups/27334
No comments:
Post a Comment