Saturday, November 28, 2020

#ಯಕ್ಷಮಂದಾರ - 43 | ಪ್ರಸಾದ್ ಕುಮಾರ್ ಮೊಗೆಬೆಟ್ಟು | Prasad Kumar Mogebettu | ಯಕ್ಷ ಕವಿ | ಯಕ್ಷಗುರು | ಬಾಗವತರು

 #ಯಕ್ಷಮಂದಾರ


#ಯಕ್ಷಮಂದಾರ - 43 | ಪ್ರಸಾದ್ ಕುಮಾರ್ ಮೊಗೆಬೆಟ್ಟು | Prasad Kumar Mogebettu | ಯಕ್ಷ ಕವಿ | ಯಕ್ಷಗುರು | ಬಾಗವತರು

ಇದು ಯಕ್ಷಕಲಾವಿದರ ಸಾದನೆ ಮತ್ತು ಜೀವನಗಾಥೆಯ ಅನಾವರಣ... ಇಂದಿನ ನಮ್ಮ ಯಕ್ಷಸಾಧಕರು ಛಂದೋಬದ್ದ ಯಕ್ಷ ಕವಿ,ಯಕ್ಷಗುರು,ಬಾಗವತರು ಮತ್ತು ಪ್ರಸಿದ್ಧ ಪ್ರಸಂಗಕರ್ತರಾದ *ಪ್ರಸಾದ *ಕುಮಾರ್*ಮೊಗೆಬೆಟ್ಟುರವರು* ... ಶ್ರೀಯುತರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೊಗೆಬೆಟ್ಟು ಎಂಬಲ್ಲಿ ಪ್ರಸಿದ್ದ ಯಕ್ಷಗಾನ ಕಲಾವಿದರಾಗಿದ್ದ ಮೊಗೆಬೆಟ್ಟು *ಹೆರಿಯ ನಾಯ್ಕ* ಮತ್ತು *ಗುಲಾಬಿ* ದಂಪತಿಗಳ ಪುತ್ರನಾಗಿ ದಿನಾಂಕ: __20.06.1983_ ರಲ್ಲಿ ಜನಿಸಿದರು.. ಯಕ್ಷಗಾನ ಕಲೆಯೂ ಇವರಿಗೆ ರಕ್ತಗತವಾಗಿ ಬಂದಿತ್ತು..ಪ್ರಸಿದ್ಧ ವೇಷಧಾರಿಯಾಗಿದ್ದ ಇವರ ತಂದೆಯವರು ತನ್ನ ಶಿಷ್ಯರಿಗೆ ಅಭ್ಯಾಸ ಮಾಡಿಸುತ್ತಿದ್ದ ಯಕ್ಷಗಾನದ ಕ್ರಮವನ್ನು ನೋಡಿ ಆಕರ್ಷಿತರಾದ ಇವರು,ದಿ.ಕಾಳಿಂಗ ನಾವಡರ ಕಂಠಸಿರಿಗೆ ಮನಸೋತು ಅವರ ಯಕ್ಷಗಾನದ ಪದ್ಯಗಳತ್ತ ಆಕರ್ಷಿತರಾಗಿದ್ದರು.. ತನ್ನ ತಂದೆಯವರಿಂದ ಯಕ್ಷಗಾನದ ರಂಗಕ್ರಮ ಮತ್ತು ಪ್ರಸಂಗನಡೆಯನ್ನು ನೋಡಿ ಅಭ್ಯಸಿಸುತ್ತ ಸಾಂಪ್ರಾದಾಯಿಕ ಸೊಗಡಿನ ಯಕ್ಷಪರಂಪರೆಯನ್ನು ಮೈಗೂಡಿಸಿಕೊಂಡು ತನ್ನ ಹತ್ತರ ಹರೆಯದಲ್ಲಿ ಮೊಗೆಬೆಟ್ಟು ಚಿಕ್ಕಮ ಹೈಗುಳಿ ಯಕ್ಷಗಾನ ಕಲಾ ಸಂಘದಲ್ಲಿ ದಿ.ಹಳ್ಳಾಡಿ ಸುಬ್ರಾಯ ಮಲ್ಯರ ನಿರ್ದೇಶನದಲ್ಲಿ ಬಾಲ ಕಲಾವಿದನಾಗಿ ಗೆಜ್ಜೆಕಟ್ಟಿ ಬಬ್ರುವಾಹನನಾಗಿ ರಂಗಪ್ರವೇಶ ಮಾಡಿದ್ದರು.. ನಂತರ 1998ರಲ್ಲಿ ಉಡುಪಿ ಯಕ್ಷಗಾನ ಕೇಂದ್ರವನ್ನು ಸೇರಿಕೊಂಡ ಇವರು ನೀಲಾವರ ಲಕ್ಷ್ಮೀನಾರಾಯಣಯ್ಯ ಮತ್ತು ಸತೀಶ ಕೆದ್ಲಾಯರಿಂದ ಪ್ರಥಮ ವರ್ಷದ ಯಕ್ಷಶಿಕ್ಷಣವನ್ನು ಪಡೆದು, ರಾಜ್ಯಪ್ರಶಸ್ತಿ ಪುರಸ್ಕೃತರಾದ ಯಕ್ಷಗುರು ಬನ್ನಂಜೆ ಸಂಜೀವ ಸುವರ್ಣರಿಂದ ಸಾಂಪ್ರಾದಾಯಿಕ ನೃತ್ಯ,ಅಭಿನಯ, ಪ್ರಸಂಗ ನಿರ್ದೇಶನ, ಮತ್ತುರಂಗ ಕೊರೊಯೋಗ್ರಾಫಿಯನ್ನು ಕರಗತ ಮಾಡಿಕೊಂಡರು. ಯಕ್ಷಗಾನ ಕೇಂದ್ರದ ಮತ್ತಿಬ್ಬರು ಗುರುಗಳಾದ ದೇವದಾಸ ರಾವ್ ಮತ್ತು ಕೃಷ್ಣಮೂರ್ತಿ ಭಟ್ಟರಿಂದ ಯಕ್ಷಗಾನದ ರಂಗ ನಡೆಯನ್ನು ಆರ್ಜಿಸಿಕೊಂಡ ಇವರು,.ಹಿರಿಯ ಬಾಗವತರಾಗಿದ್ದ ಗೋರ್ಪಾಡಿ ವಿಠಲ ಪಾಟೀಲರಲ್ಲಿ ಪರಂಪರೆಯ ಬಾಗವತಿಕೆಯ ಶಿಕ್ಷಣವನ್ನು ಪಡೆದರು.. ಛಂದೋಬ್ರಹ್ಮ ಡಾ. ಶಿಮಂತೂರು ನಾರಾಯಣ ಶೆಟ್ಟಿಯವರ ನೇರ ಶಿಷ್ಯರಾಗಿರುವ ಪ್ರಸಿದ್ಧ ಛಾಂದಸ ಗಣೇಶ ಕೊಲೆಕಾಡಿಯವರಲ್ಲಿ ಛಂದಸ್ಸಿನ ಕುರಿತು ಶಿಕ್ಷಣವನ್ನು ಪಡೆದಿದ್ದು ನಂತರ 2005ರಿಂದ ತಾನು ಯಕ್ಷ ಶಿಕ್ಷಣವನ್ನು ಪಡೆದ ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಯಕ್ಷಗುರುವಾಗಿ ಸೇವೆ ಸಲ್ಲಿಸಿದ್ದರು... ಯಕ್ಷಗಾನದ ಗುರುವಾಗಿ, ಬಾಗವತರಾಗಿ, ರಂಗ ನಿರ್ದೇಶಕರಾಗಿ,ಛಂದೋಬದ್ದ ಯಕ್ಷ ಕವಿಯಾಗಿ, ಪ್ರಸಂಗಕರ್ತರಾಗಿ, ಕಲಾವಿದರಾಗಿ ಯಕ್ಷರಂಗದಲ್ಲಿ ಚಿರಪರಿಚಿತರಾಗಿರುವ ಇವರು ಕರ್ನಾಟಕವಷ್ಟೇ ಅಲ್ಲದೆ ಮುಂಬೈ, ಕೊಲ್ಕತ್ತಾ,ಮದ್ರಾಸ್, ನಾಗಪುರ,ಬಿಹಾರ್, ಗೋವಾ,ಭುವನೇಶ್ವರ,ಸಿಕ್ಕಿಂ, ಒರಿಸ್ಸಾ,ಕೇರಳ,ತಮಿಳುನಾಡು ಪುರಿ, ಗುಜರಾತ್ ಮೊದಲಾದ ರಾಜ್ಯಗಳಲ್ಲಿಯೂ ಮತ್ತು ವಿದೇಶಗಳಾದ ಬೆಲ್ಜಿಯಂ, ಆಸ್ಟ್ರೇಲಿಯಾ,ಐರ್ಲೆಂಡ್,ದುಬೈ,ಸ್ವೀಡ್ಜರ್ಲ್ಯಾಂಡ್, ಸಿಂಗಾಪುರ ಮೊದಲಾದ ವಿದೇಶಗಳಲ್ಲಿಯೂ ಕಾರ್ಯಕ್ರಮಗಳನ್ನು ನೀಡಿದ್ದಾರೆ.. ವಿಶ್ವ ಕುಂದಾಪುರ ದಿನಾಚರಣೆಯ ಅಂಗವಾಗಿ ಸಂಪೂರ್ಣ ಕುಂದಗನ್ನಡದಲ್ಲಿಯೇ ರಚಿಸಿ, ನಿರ್ದೇಶಿಸಿದ *ನರಹರಿ ಹೊಯ್ಕೈ* ಎನ್ನುವ ಕುಂದಗನ್ನಡದ ಪ್ರಪ್ರಥಮ ಪೌರಾಣಿಕ ಯಕ್ಷಗಾನ ಪ್ರಸಂಗ ಇವರ ಸೃಜನಶೀಲ ಅವಿಷ್ಕಾರಕ್ಕೆ ಮುನ್ನುಡಿ ಬರೆಯಿತಲ್ಲದೆ ಅಪಾರವಾದ ಜನಮನ್ನಣೆಗೆ ಪಾತ್ರವಾಗಿ ಯಶಸ್ವಿ ಪ್ರದರ್ಶನ ಕಂಡಿತು...ಪ್ರಸಿದ್ಧ ಕಲಾವಿದರ ಸಂಯೋಜನೆಯಲ್ಲಿ ಆಯೋಜಿಸಿದ್ದ *ಮೊಗವೀರ ಬಾಲೆ* ಯ ದೃಶ್ಯ ಸುರುಳಿಯ ನಿರ್ದೇಶನ,ಮಂಗಳೂರು ಆಕಾಶವಾಣಿಯಲ್ಲಿ 50 ಕ್ಕೂ ಹೆಚ್ಚು ತಾಳಮದ್ದಲೆಯ ಕಾರ್ಯಕ್ರಮ, ಬೆಂಗಳೂರು ಆಕಾಶವಾಣಿ ಕಲಾವಿದರಾಗಿ ರಂಗಕರ್ಮಿ ಗುರುರಾಜ ಮಾರ್ಪಳ್ಳಿ ನಿರ್ದೇಶಿತ ತುಳುನಾಟಕ *ಆಯನಕಾಲ* ದಲ್ಲಿ ಪಾತ್ರನಿರ್ವಹಣೆ, ಡಾ.ಶಿವರಾಮ ಕಾರಂತರ ಯಕ್ಷಗಾನ ಕಾರ್ಯಕ್ರಮಗಳಲ್ಲಿ ಕಲಾವಿದರಾಗಿ ಪಾತ್ರನಿರ್ವಹಣೆ , ಪ್ರಸಿದ್ಧ ರಂಗ ನಿರ್ದೇಶಕ ಚಿದಂಬರ ರಾವ್ ಜಂಟಿಯವರ *ಉತ್ತರ ರಾಮಾಯಣ* ಯಕ್ಷ ನಾಟಕದಲ್ಲಿ ಅಭಿನಯ , ರಾಜ್ಯಮಟ್ಟದ ಯಕ್ಷಗಾನ ಕಮ್ಮಟ,ಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ, ಹದಿನೈದಕ್ಕೂ ಹೆಚ್ಚು ಯಕ್ಷಗಾನ ಸಂಘಗಳಲ್ಲಿ ಯಕ್ಷಗುರುವಾಗಿ, ಅತಿಥಿ ಬಾಗವತರಾಗಿ ಮತ್ತು ಅನೇಕ ತಾಳಮದ್ದಲೆಯ ಕಾರ್ಯಕ್ರಮಗಳಲ್ಲಿ ಬಾಗವಹಿಸಿ ಜನಮನ್ನಣೆ ಪಡೆದಿದ್ದಾರೆ.. ಸಾಲಿಗ್ರಾಮ ಮಂದಾರ್ತಿ,ಗೋಳಿಗರಡಿ,ಜಲವಳ್ಳಿ ಮೇಳ ಸೇರಿದಂತೆ ತೆಂಕು ಮತ್ತು ಬಡಗುತಿಟ್ಟಿನ ಹೆಚ್ಚಿನ ವೃತ್ತಿಪರ ಮೇಳಗಳಲ್ಲಿ ಅತಿಥಿ ಬಾಗವತರಾಗಿ ಸೇವೆಸಲ್ಲಿಸಿರುವ ಇವರು,ಅಭಿಮನ್ಯು ಪ್ರಸೇನ,ಬಬ್ರುವಾಹನ,ಶ್ರೀಕೃಷ್ಣ,ರಾಮ,ಋತುಪರ್ಣ,ಪುಷ್ಕಳ,ಶನೀಶ್ವರ,ಧರ್ಮಾಂಗದ ಮೊದಲಾದ ಪುರುಷ ಪಾತ್ರಗಳನ್ನು,ಸೀತೆ,ಸುಭದ್ರೆ,ರಂಭೆ, ಭ್ರಮರಕುಂತಲೆ,ತ್ರೈಲೋಕ ಸುಂದರಿ ಮೊದಲಾದ ಸ್ತ್ರೀಪಾತ್ರಗಳನ್ನು ಕಿರಾತ ವೇಷ ಮತ್ತು ಹಾಸ್ಯ ಪಾತ್ರಗಳನ್ನು ನಿರ್ವಹಿಸಿದ್ದಾರೆ... ಇವರು ದಿ.ಪದ್ಮಶ್ರೀ ಚಿಟ್ಟಾಣಿ, ದಿ,ಜಲವಳ್ಳಿ ವೆಂಕಟೇಶ ರಾವ್,ಕೊಳ್ಯೂರು ರಾಮಚಂದ್ರ ರಾವ್,ಸುಬ್ರಮಣ್ಯ ದಾರೇಶ್ವರ, ಪಟ್ಲಸತೀಶ ಶೆಟ್ಟಿ,ಪುತ್ತಿಗೆ ರಘುರಾಮ ಹೊಳ್ಳಕೊಂಡದಕುಳಿ ರಾಮಚಂದ್ರ ಹೆಗ್ಡೆ, ಕೃಷ್ಣಯಾಜಿ ಬಳ್ಕೂರು,ದಿ.ಕಣ್ಣಿಮನೆ ಗಣಪತಿ ಭಟ್,ದಿ.ಮೊಳಹಳ್ಳಿ ಹೆರಿಯ ನಾಯ್ಕ,ಐರೋಡಿ ಗೋವಿಂದಪ್ಪ , ದಿ.ಅರಾಟೆ ಮಂಜುನಾಥ, ಹಾಲಾಡಿ ರಾಘವೇಂದ್ರ ಮಯ್ಯ,ಸುರೇಶ ಶೆಟ್ಟಿ ಶಂಕರನಾರಾಯಣ, ವಿದ್ಯಾದರ ರಾವ್ ಜಲವಳ್ಳಿ,ಹೆರಂಜಾಲು ಗೋಪಾಲ ಗಾಣಿಗ, ಕಾವ್ಯಶ್ರೀ ಆಜೇರು, ರವಿಚಂದ ಕನ್ನಡಿಕಟ್ಟೆ, ಸತ್ಯನಾರಾಯಣ ಪುಣಿಂಚಿತ್ತಾಯ,ಗಿರೀಶ್ ರೈ,ರಾಘವೇಂದ್ರ ಆಚಾರ್ಯ ಜನ್ಸಾಲೆ ಮೊದಲಾದವರೊಂದಿಗೆ ರಂಗವನ್ನು ಹಂಚಿಕೊಂಡಿದ್ದಾರೆ.. ಅತ್ಯಂತ ಸೃಜನಶೀಲ ಮತ್ತು ಕ್ರೀಯಾತ್ಮಕವಾದ ವ್ಯಕ್ತಿತ್ವವನ್ನು ಹೊಂದಿರುವ ಇವರು ಅನೇಕ ಸಮಾಜಮುಖಿ ಸಂಘಟನೆಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ.. ವಾಗ್ಜ್ಯೋತಿ ಅಂದ,ಮೂಕ ಮತ್ತುಕಿವುಡ ಮಕ್ಕಳ ಶಾಲೆಯ ವಿಕಲಚೇತನ ಮಕ್ಕಳು ಸೇರಿದಂತೆ 1600ಕ್ಕೂ ಹೆಚ್ಚು ಶಾಲಾವಿದ್ಯಾರ್ಥಿಗಳಿಗೆ ಯಕ್ಷಶಿಕ್ಷಣವನ್ನು ನೀಡುತ್ತ ಅವರಿಂದ ವಿಶೇಷ ಕಾರ್ಯಕ್ರಮಗಳಲ್ಲಿ ಯಕ್ಷಗಾನ ಮತ್ತು ತಾಳಮದ್ದಳೆಯ ಪ್ರದರ್ಶನವನ್ನು ಮಾಡಿಸಿ,ಯಕ್ಷಗಾನದ ಆಸಕ್ತಿ ಮೂಡಿಸುವ ಮೂಲಕ ಮುಂದಿನ ತಲೆಮಾರಿಗೆ ಯಕ್ಷಗಾನವನ್ನು ಕೊಂಡೊಯ್ಯುವ ನಿಟ್ಟಿನಲ್ಲಿ ಮಹತ್ತರವಾದ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ...ಯಕ್ಷ ಕವಿಯಾಗಿಯೂ ಗುರುತಿಸಿಕೊಂಡಿರುವ ಇವರ 1000ಕ್ಕೂ ಹೆಚ್ಚು ಯಕ್ಷ ಬರಹಗಳು ನಾಡಿನ ಪ್ರಸಿದ್ಧ ಪತ್ರಿಕೆಗಳಲ್ಲಿ ಬೆಳಕು ಕಂಡಿದೆ.. ಬಡಗುತಿಟ್ಟಿನ ಸಮಗ್ರ ಕಲಾವಿದರ ವ್ಯಕ್ತಿ ಪರಿಚಯದ *ಯಕ್ಷೋಪಾಸಕರು* ಎಂಬ ಮಹಾಗ್ರಂಥ ಯಕ್ಷಗಾನ ಅಕಾಡೆಮಿಯಿಂದ ಪ್ರಕಟವಾಗಿದೆ.. ಇವರ ಅಮರಾಮೃತ,ಅಮೃತಗಳಿಗೆ ಮತ್ತು ದುರ್ಗಾಷ್ಟಮಿ ಎನ್ನುವ ಯಕ್ಷಗಾನ ಪ್ರಸಂಗಗಳು ಶತದಿನೋತ್ಸವವನ್ನು ಆಚರಿಸಿಕೊಂಡಿದೆ.. ಅಲ್ಲದೆ ಅಗ್ನಿವರ್ಷ,ಅಪೂರ್ವ ಅರ್ದಾಂಗಿ ಮತ್ತು ಇತ್ತೀಚಿನ ಕ್ರಾಂತಿಸೂರ್ಯ ಭಗತಸಿಂಹ ಮತ್ತು ಹಾಸ್ಯರತ್ನ ತೆನಾಲಿ ರಾಮಕೃಷ್ಣ ಸೇರಿದಂತೆ 28ಕ್ಕೂ ಹೆಚ್ಚು ಸಾಮಾಜಿಕ,ಕಾಲ್ಪನಿಕ,ಜಾನಪದೀಯ, ಪೌರಾಣಿಕ,ಐತಿಹಾಸಿಕ,ಪ್ರಸಂಗಗಳನ್ನು ರಚಿಸಿದ್ದಾರೆ.. ರಮೇಶ ಬೇಗಾರರ ಕಥಾ ಕಲ್ಪನೆಯ ಚಿತ್ರಲೇಖ ,ಗಂದ ಚಂದನ, ಶಿವಶಾಂಭವಿ, ಮೇಘಧಾರಿಣಿ, ಅರ್ಪಿತಾ ಹೆಗಡೆಯವರ ಕಥಾರಚನೆಯ ನಾಗರ ಪಂಚಮಿ, ಪ್ರೇಮಸಾರಂಗ, ಗಂಡುಗಲಿ ದೇವರಾಯ ಮಣೂರು ವಾಸುದೇವ ಮಯ್ಯರ ಕಥಾರಚನೆಯ ಇಂದ್ರನಾಗ,ಪುಷ್ಪ ಸಿಂದೂರಿ,ಸೂರ್ಯಸಂಕ್ರಾಂತಿ, ದೇವಗಂಗೆ ಮೊದಲಾದ ಪ್ರಸಂಗಗಳಿಗೆ ಸೇರಿದಂತೆ 10000 ಕ್ಕೂ ಹೆಚ್ಚು ಪದ್ಯರಚನೆಯನ್ನು ಮಾಡಿಕೊಟ್ಟಿದ್ದಾರೆ ಸಿಂಗಾರ ಪುಷ್ಪ,ಶೃಂಗಾರ ಕಾವ್ಯ, ಕೋಳಿಪಡೆ ರಂಗ,ಸ್ವಪ್ನ ಮಂಟಪ ಮೊದಲ


#ಯಕ್ಷಮ This is the story of the yakshaganas and the story of life... Today our yakshasasadhakas are the chandobada yaksha kavi, yakshaguru, bagavatha and famous performers *prasada*kumar*mogebettu* ... Mr. Sreetha was born on 20.06.1983 as the son of The Eminent Yakshagana artiste Mogebettu *Heri Nayak* and Rose* at Mogebettu in Kundapur taluk of Udupi district. The art of Yakshagana was also bloody for them. His father, who was in famous costume, was fascinated by the yakshagana practice disciples and was attracted to his yakshagana poems. He had studied the yakshagana theatre and the stage of yakshagana from his father and had embraced the traditional yakshagana tradition and at the age of ten, he entered the yakshagana sangam in the direction of D Haladi Subraya Malayalam. Later in 1998, he joined the Udupi Yakshagana Kendra and received first year yakshagana education from Neelavara Lakshminarayanayya and Satish Kedlaya and mastered traditional dance, acting, context direction and ranga choroography by state award-winning Yakshaguru Bannanje Sanjeeva Suvarna. He took the stage of Yakshagana from devadasa rao and Krishnamurti Bhatt, two other teachers of yakshagana centre. He received the education of the heritage of the elder lyricist, Gorpadi Vithala Patil. Chandobrahma Dr. The famous Chandasa Ganesh, a direct disciple of Shimantur Narayana Shetty, had received education in metre from Kolekadi and later served as yakshaguru at Udupi Yakshagana Kendra where he had received yaksha education from 2005. He is a yakshagana guru, a theatre director, a meteoric yakshapoet, an artist, and has also performed in karnataka as well as in Mumbai, Kolkata, Madras, Nagpur, Bihar, Goa, Bhubaneswar, Sikkim, Orissa, Kerala, Puri, Gujarat and abroad, belgium, Australia, Ireland, Dubai, Sweden, Singapore and other countries. The first mythological yakshagana of Kundaganad, written and directed by 'Narahari Hoikai' was written and directed by The World Kundapur Aday, and was a successful performance in the film. The film was directed by 'Mogaveera Bale' in the composition of famous artistes, and a programme on mangalore radio, over 50 talamadalai. Rangakarimi Gururaja Marpalli, director of Bangalore Radio, played a role in 'Ayanakaala' and 'Ayanakaala' by Dr. Shivaram karanth, acting in the yakshagana drama by famous theatre director Chidambara Rao Joint, a resource person at the state level yakshagana workshop, as a yakshagana guru, guest bagavatha and many other talamadhale programmes.
He has served as guest in many professional melas of Tenku and Badaguthitt, including Saligramam Mandarti, Goligaradi, Jalavalli Mela, abhimanyu prasena, babruvahana, srikrishna, rama, rituparna, pushkala, shaniswara, dharmangada, seethe, subhadra, rambe, bhramamarakuntale, triloka and many other female characters.

He is The Padmashri Chittani, D.Jalavalli Venkateswara Rao, Koluru Ramachandra Rao, Subramanya Dareshwara, Patlasatish Shetty, Puttige Raghuram Holkondakuli Ramchandra Hegde, Krishnayaji Balkur, D.Kannimane Ganapati Bhatt, D.Molahalli Heri Nayak, Airodi Govindappa, D.Arate Manjunatha, Haladi Raghavendra Mayya, Suresh Shetty Shankaranarayana, Vidyadarrao Jalavalli, Heranjalu Gopal Ajeru, Ravi Kannincanda, Satyanarayana Puninchithaya, Girish Rai, Raghava.

He has a very creative and creative personality and has also been involved in many social organisations. The vagjoyothi, who is also a dumb and deaf children, is giving yakshagana education to more than 1600 school children, including the differently abled children of the dumb and deaf children, who are playing a major role in taking yakshagana to the next generation by performing yakshagana and talamdai in special programmes. His 1000 yaksha writings, also known as yaksha poets, have been illuminated in the famous newspapers of the state. The great book Yakshopasaka, a man of the entire artistof Badaguthitta, has been published by the Yakshagana Academy.

His amaramruta, amritagaland durgaashtami are the centenary of the yakshagana. He has written more than 28 social, imaginary, folk, mythological, historical and historical episodes including Agni Varsha, Apoorva Ardangi and the latest Kranti Surya Bhagatasimha and comedy Tenali Ramakrishna. Ramesh Begar's story story is written by Chitralekha, Ganda Chandana, Sivashambhavi, Meghdharini, Arpita Hegde's story-making Nagarpanchami, Premasaranga, Gandugali Devaraya Manur Vasudeva Mayya's story composer Indranaga, Pushpa Sinduri, Surya Sankranti, Devagange etc.


ಯಕ್ಷಮಂದಾರ ವಿಡಿಯೋ ನೋಡಲೋಸುಗವಾಗಿ.

ವಾಹಿನಿಯ ಹೋಮ್ ಪೇಜ್ ಗಾಗಿ: https://www.youtube.com/channel/UCsrL

ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: https://www.facebook.com/groups/27334

Saturday, November 21, 2020

#ಯಕ್ಷಮಂದಾರ - 42 | ಡಾ.ಬಸವರಾಜ್ ಶೆಟ್ಟಿಗಾರ್ ಕೋಟೇಶ್ವರ | Dr.Basavaraj Shettigar | Koteswara | Part 42

                                                                     #ಯಕ್ಷಮಂದಾರ


#ಯಕ್ಷಮಂದಾರ - 42 | ಡಾ.ಬಸವರಾಜ್ ಶೆಟ್ಟಿಗಾರ್ ಕೋಟೇಶ್ವರ | Dr.Basavaraj Shettigar | Koteswara | Part 42

ಇದು ಯಕ್ಷ ಕಲಾವಿದರ ಸಾಧನೆ ಮತ್ತು ಜೀವನಗಾಥೆಯ ಅನಾವರಣ.... ಇಂದಿನ ನಮ್ಮ ಯಕ್ಷಸಾಧಕರು..ಕ್ಷೇತ್ರ ಮಹಾತ್ಮೆಗಳ ಸರದಾರ ಮತ್ತು ಪ್ರಸಿದ್ದ ಯಕ್ಷಗಾನ ಪ್ರಸಂಗಕರ್ತರಾದ ಕೋಟೇಶ್ವರದ *ಡಾ.ಬಸವರಾಜ್* **ಶೆಟ್ಟಿಗಾರರು* ... ಶ್ರೀಯುತರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟೇಶ್ವರದಲ್ಲಿ *ದಿ.ಶ್ರೀನಿವಾಸ ಶೆಟ್ಟಿಗಾರ* ಮತ್ತು *ಪಣಿಯಮ್ಮ* ದಂಪತಿಗಳ ಪುಣ್ಯಗರ್ಭದಲ್ಲಿ ದಿನಾಂಕ: _11.10.1967_ ರಲ್ಲಿ ಜನಿಸಿದರು.. ಪದವಿ ಶಿಕ್ಷಣವನ್ನು ಪಡೆದಿರುವ ಇವರು ಪತ್ರಿಕೋದ್ಯಮ ಮತ್ತು ವಿದ್ಯುತ್ ಕ್ಷೇತ್ರದಲ್ಲಿ ಡಿಪ್ಲೋಮಾ ಶಿಕ್ಷಣವನ್ನು ಪಡೆದಿದ್ದು, ಕಂಪ್ಯೂಟರ್ ಶಿಕ್ಷಣ,ಟೈಪ್ ರೈಟಿಂಗ್ ಮತ್ತು ಕೃಷಿ ಕ್ಷೇತ್ರದಲ್ಲಿಯೂ ಕೂಡ ವಿಶೇಷ ಪದವಿಯನ್ನು ಪಡೆದುಕೊಂಡಿದ್ದಾರೆ... ಆಡು ಮುಟ್ಟದ ಸೊಪ್ಪಿಲ್ಲ ಎನ್ನುವ ಕುಂದಾಪುರದ ಆಡುಬಾಷೆಯಂತೆ ಶೆಟ್ಟಿಗಾರರು ಕೈಯಾಡಿಸದ ಕ್ಷೇತ್ರಗಳಿಲ್ಲ ಎನ್ನಬಹುದು.. ವಾಸ್ತು ಶಾಸ್ತ್ರಜ್ಞರಾಗಿ, ಜ್ಯೋತಿಷ್ಯ ಪಂಡಿತರಾಗಿ, ಪ್ರವಚನಕಾರರಾಗಿ, ಕೃಷಿಕರಾಗಿ,ಪತ್ರಿಕ ವರದಿಗಾರರಾಗಿ, ಸಾಹಿತಿಯಾಗಿ,ಶಾಲಾ ಶಿಕ್ಷಕರಾಗಿ, ನಾಟಕ ಕಲಾವಿದರಾಗಿ, ಭಜನಾ ತಂಡದ ಸದಸ್ಯರಾಗಿ, ಯಕ್ಷಗಾನದ ಹವ್ಯಾಸಿ ಕಲಾವಿದರಾಗಿ , ಪ್ರಸಂಗಕರ್ತರಾಗಿ, ಲೇಖಕರಾಗಿ,ಕಾದಂಬರಿಕಾರರಾಗಿ,ಕವಿಯಾಗಿ,ರಂಗ ನಿರ್ದೇಶಕರಾಗಿ ಶನಿಕಥಾ ಕಲಾವಿದರಾಗಿ,ಕರ್ಜೆ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ,ಕೃಷಿ, ಪತ್ರಿಕೋದ್ಯಮ,ಸಾಹಿತ್ಯಸಾಮಾಜಿಕ, ಧಾರ್ಮಿಕ,ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತನ್ನ ಅಸ್ತಿತ್ವವನ್ನು ಪ್ರಚುರಪಡಿಸಿ ಅಪರೂಪದಲ್ಲಿ ಅಪರೂಪದ ಸಾಧನೆಗೈದ ಬಹುಮುಖ ಪ್ರತಿಭೆಯುಳ್ಳ ಸಾಧಕರಾಗಿ ಗುರುತಿಸಿ ಕೊಂಡಿದ್ದಾರೆ... ಇವರು ಯಕ್ಷಗಾನದ ಹವ್ಯಾಸಿ ಕಲಾವಿದರಾಗಿ ಚಂದ್ರಸೇನ, ವೀರಮಣಿ, ಧನಪಾಲ ಶೆಟ್ಟಿ, ರಾಮಗಾಣಿಗ, ಹನುಮಂತ,ಸುಗ್ರೀವ, ರಾಮ,ಲಕ್ಷ್ಮಣ, ವಿಭೀಷಣ,ನಂದಿ ಶೆಟ್ಟಿ, ವಿಕ್ರಮ, ತಾಮ್ರಧ್ವಜ,ಸುಧನ್ವ,ವಿಷ್ಣು,ಅಭಿಮನ್ಯು,ಮಯೂರದ್ವಜ ಶನೈಶ್ಚರ ಮೊದಲಾದ ವೇಷಗಳನ್ನು ಸಮರ್ಥವಾಗಿ ನಿಭಾಯಿಸಿ ಅಪಾರವಾದ ಜನಮನ್ನಣೆಗೆ ಪಾತ್ರರಾಗಿದ್ದಾರೆ... ಸೌಕೂರು ಕ್ಷೇತ್ರ ಮಹಾತ್ಮೆ,ಸೂರಾಲು ಕ್ಷೇತ್ರ ಮಹಾತ್ಮೆ,ವಸುಪುರ ಕ್ಷೇತ್ರ ಮಹಾತ್ಮೆ,ಹಿರಿಯಡ್ಕ ಕ್ಷೇತ್ರ ಮಹಾತ್ಮೆ,ಕನ್ನಾರು ಕ್ಷೇತ್ರ ಮಹಾತ್ಮೆ,ಮಡಾಮಕ್ಕಿ ಕ್ಷೇತ್ರ ಮಹಾತ್ಮೆ,ಹಟ್ಟಿಯಂಗಡಿ ಕ್ಷೇತ್ರ ಮಹಾತ್ಮೆ,ಮೂರೂರು ಕ್ಷೇತ್ರ ಮಹಾತ್ಮೆ,ಮೊಗವೀರ ಪೇಟೆ ಕ್ಷೇತ್ರ ಮಹಾತ್ಮೆ, ಆರೂರು ಕ್ಷೇತ್ರ ಮಹಾತ್ಮೆ,ಮೇಸ್ತ್ರಿ ಮಾದಯ್ಯ, ಸ್ವಸ್ತಿ ಸಿಂಚನ,ಕೊರಗನ ಕೊರಪೋಲು(ತುಳು)ಸೌಮ್ಯ ಸೌಂದರ್ಯ ಸೇರಿದಂತೆ 57 ಕ್ಕೂ ಹೆಚ್ಚು ಪ್ರಸಂಗಗಳನ್ನು ರಚಿಸಿದ್ದಾರೆ.. ಪ್ರೇಮಚಕ್ರ,ಸಂಸಾರ ಚಕ್ರ,ಅಪಹರಣ, ಕಣ್ಣೀರ ಯಾತ್ರೆ ಮೊದಲಾದ ಕಾದಂಬರಿಗಳನ್ನು,ಪುನರ್ಜನ್ಮ,ಅತ್ತೆಯ ಸೋಲು,ಅರಿವು,ಕತ್ತಲಿಂದ ಬೆಳಕಿನೆಡೆಗೆ, ವಿಷಾಮೃತ,ಕನ್ಯಾದಾನ, ವ್ರಕೋದರ ಪ್ರತಿಜ್ಞೆ ಮೊದಲಾದ ನಾಟಕಗಳನ್ನು, ರತಿರೇಖಾ ಇತ್ಯಾದಿ ಕತೆಯನ್ನು, ಕವನಾಮೃತ ಎನ್ನುವ ಕವನ ಸಂಕಲನವನ್ನು,ಜಾನಪದ ಗೀತೆ, ಬಾವಗೀತೆ ಮತ್ತು ಭಕ್ತಿಗೀತೆಗಳನ್ನು ರಚಿಸಿದ್ದಾರೆ.. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ,ಗೌರವ ಡಾಕ್ಟರೇಟ್ ಪ್ರಶಸ್ತಿ,ಶಿವರಾಮ ಕಾರಂತ ಸದ್ಬಾವನ ಪ್ರಶಸ್ತಿ,ಪ್ರಸಂಗ ರಚನೆಗಾಗಿ ಸ್ಕಂದ ಪುರಸ್ಕಾರ,ಕರ್ನಾಟಕ ಭೂಷಣ ರಾಜ್ಯ, ಪ್ರಶಸ್ತಿ,ಭಾರತ ಭೂಷಣ ರಾಷ್ಟ ಪ್ರಶಸ್ತಿ,ಬಸವ ಪ್ರಶಸ್ತಿ ಸೇರಿದಂತೆ 15ಕ್ಕೊ ಹೆಚ್ಚು ಪ್ರಶಸ್ತಿ ಪುರಸ್ಕಾರಗಳು ಮತ್ತು 385 ಕ್ಕೂ ಹೆಚ್ಚು ಸನ್ಮಾನಗಳಿಗೆ ಪಾತ್ರರಾಗಿದ್ದಾರೆ ಕುಂದಾಪುರದ ಕಾರ್ಯನಿರತ ಪತ್ರಕರ್ತರ ಸಂಘದ ಸ್ಥಾಪಕ ಕೋಶಾಧಿಕಾರಿಯಾಗಿ, ಬೆಂಗಳೂರು ಪದ್ಮಸಾಲಿ ಸಮಾಜದ ಸ್ಥಾಪಕ ಸದಸ್ಯರಾಗಿ,ಕೋಟೇಶ್ವರದ ಮಾರಿಯಮ್ಮ ದೇವಸ್ಥಾನದ ಸಾಂಸ್ಕೃತಿಕ ಸಂಘದ ಸ್ಥಾಪಕ ಕೋಶಾಧಿಕಾರಿಯಾಗಿ, ಗಂಗೊಳ್ಳಿ ಸಂಗೀತ ಕಲಾಶಾಲೆಯ ಸ್ಥಾಪಕ ನಿರ್ದೇಶಕರಾಗಿ,ಕೋಟೇಶ್ವರ ಆಸ್ತಿಕ ಸಮಾಜದ ಉಪಾಧ್ಯಕ್ಷ ಸೇರಿದಂತೆ ಇನ್ನು ಅನೇಕ ಸಂಘಸಂಸ್ಥೆಗಳನ್ನು ಸ್ಥಾಪಿಸಿ, ಮುನ್ನೆಡಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ ಕರುನಾಡ ಕಣ್ಮಣಿ,ಕ್ಷೇತ್ರಮಹಾತ್ಮೆಗಳ ಸರದಾರ,ಪದ್ಮಶಾಲಿ ಕುಲತಿಲಕ, ಜ್ಯೋತಿಷ್ಯ ಶಿರೋಮಣಿ,ಪದ್ಮಶಾಲಿ ಕಣ್ಮಣಿ, ಕಲಾಕಸ್ತೂರಿ,ಸಮಾಜರತ್ನ ಸೇರಿದಂತೆ ಅನೇಕ ಬಿರುದುಗಳನ್ನು ಪಡೆದಿರುವ ಇವರು ಆಕಾಶವಾಣಿ, ದೂರದರ್ಶನ ಸೇರಿದಂತೆ ಅನೇಕ ಕಡೆ ಸಂದರ್ಶನವನ್ನು ನೀಡಿದ್ದಾರೆ... ಇವರ ಕುರಿತು ಕೀರ್ತಿಕಲಸ ಕೀರ್ತಿಕಿರೀಟ,ಶತಸನ್ಮಾನ ಸಂಭ್ರಮ ಎನ್ನುವ ಅಭಿನಂದನಾ ಗ್ರಂಥಗಳು ಬಿಡುಗಡೆಗೊಂಡಿವೆ.. ಜ್ಯೋತಿಷ್ಯ ಮತ್ತು ವಾಸ್ತುಶಾಸ್ತ್ರ ವಿನ್ಯಾಸದಲ್ಲಿ ಅಪಾರವಾದ ಸಿದ್ಧಿಯನ್ನು ಪಡೆದಿರುವ ಇವರು *2* ಲಕ್ಷಕ್ಕೂ ಮಿಕ್ಕಿ ಜಾತಕ ಪರಿಶೀಲನೆ ಮತ್ತು *75000* ಕ್ಕೂ ಹೆಚ್ಚು ವಾಸ್ತುವಿನ್ಯಾಸ ಮತ್ತು ನಕ್ಷೆಯನ್ನು ರಚಿಸಿಕೊಟ್ಟಿದ್ದಾರೆ... ಕಾರ್ಕಳದ *ಕಾವ್ಯಶ್ರೀ. ಬಿ.ಶೆಟ್ಟಿಗಾರ್* ರನ್ನು ಧರ್ಮಪತ್ನಿಯಾಗಿ ಸ್ವೀಕರಿಸಿ ಆದರ್ಶ ದಾಂಪತ್ಯ ಜೀವನವನ್ನು ನಡೆಸಿ, *ಸೌಜನ್ಯಶ್ರೀ* ( ಮಗಳು) *ಚೈತನ್ಯಶ್ರೀ* (ಮಗಳು) *ಲೋಕೇಶ್ ಕುಮಾರ್* (ಅಳಿಯ) *ಗುರುರಾಜ ಶೆಟ್ಟಿಗಾರ್* (ಅಳಿಯ) ಮತ್ತು *ಸಂಕಲ್ಪ* ಎನ್ನುವ ಮೊಮ್ಮಗನೊಂದಿಗೆ ಕೋಟೇಶ್ವರದ *ಓಂಶ್ರೀ* ಯಲ್ಲಿ ವಾಸವಾಗಿದ್ದಾರೆ.. ಇವರಿಗೆ ಕೋಟೇಶ್ವರದ ಕೋಟಿಲಿಂಗೇಶ್ವರ ಸ್ವಾಮಿಯೂ ಆಯುರಾರೋಗ್ಯ,ಸುಖ ನೆಮ್ಮದಿಯನ್ನು ನೀಡಿ ಕಾಪಾಡಲಿ ಎನ್ನುವುದು ನಮ್ಮ ಯಕ್ಷಮಂದಾರದ ಶುಭಹಾರೈಕೆ...🙏 ಸಾಹಿತ್ಯ: *ಹಾಲಾಡಿ ಸಂತೋಷ ಶೆಟ್ಟಿ* ನಿರೂಪಣೆ: *ಶ್ರೀಮತಿ ಅಮೃತಾ ಶೆಟ್ಟಿ* ಯಕ್ಷಗಾನ ಕಲಾವಿದರ ಪರಿಚಯ ಸರಣಿಯ ಎಲ್ಲ ವಿಡಿಯೋಗಳು ನಮ್ಮಯಕ್ಷ💥ಮಂದಾರ ಯೂಟ್ಯೂಬ್ ಚಾನಲ್..ನಲ್ಲಿ ಲಭ್ಯವಿದೆ.. ನಮ್ಮ 🌀ಯಕ್ಷ💥ಮಂದಾರ🌀ಯೂಟ್ಯೂಬ್ ಚಾನಲ್ ಮತ್ತು ಫೇಸ್ಬುಕ್ ಪೇಜ್.. ನ್ನು download ಮಾಡಿಕೊಳ್ಳಿ..ಮತ್ತು ನಾವು upload ಮಾಡುವ ಎಲ್ಲ ಯಕ್ಷಗಾನ ವಿಡಿಯೋಗಳ ಮಾಹಿತಿ ಪಡೆಯಿರಿ..ನಮ್ಮ ವಿಡಿಯೋಗಳನ್ನು ನೋಡಿ like ಮಾಡಿ,share ಮಾಡಿ ಪ್ರೋತ್ಸಾಹಿಸಿ... ಯಕ್ಷಗಾನ ಕಲೆಯನ್ನು ಉಳಿಸಿ,ಬೆಳೆಸಿ, ಪ್ರೋತ್ಸಾಹಿಸಿ.. ಧನ್ಯವಾದಗಳು🙏🙏🙏

This is an exhibition of the achievements and life of yakshaartists.... Today's yakshakas are.. The great sadar of the field and the famous Yakshagana episodewriter of Koteswara *Dr Basavaraj* *Shettygara* ... Mr. Srivastava was born on 11.10.1967 at Koteshwara in Kundapur taluk of Udupi district. He has a degree in journalism and power and has a special degree in computer education, typewriting and agriculture. The goat sapling saga of Kundapur aka Shettika seemed to have no hand. As an architect, astrologer, preacher, farmer, journalist, writer, school teacher, drama teacher, bhajan aamataartist, episode writer, novelist, poet, stage director, shanikatha artist, karje shala development committee president, president of karje shala development committee, agriculture, journalism, literature, social, religious, educational, cultural fields. He has been a great actor in yakshagana, chandrasena, veeramani, dhanapala shetty, ramaganiga, hanumantha, sugriva, rama, lakshmana, vibhishana, nandi shetty, vikram, thradhwaj, sudhanva, vishnu, abhimanyu, mayuradvaja shanaishchara etc. Saukur Kshetra Mahatma, Suralu Kshetra Mahatma, Vasupura Kshetra Mahatma, Hiriyadka Kshetra Mahatma, Kannaru Kshetra Mahatma, Madamakki Kshetra Mahatma, Hattiyangadi Kshetra Mahatma, Moore Kshetra Mahatma, Mogaweera Pettai Kshetra Mahatma, Aroor Kshetra Mahatma, Mastri Madaiah, Swasti Sinchana, Korakana Korapolu (Tulu) have written more than 57 episodes. He has written novels like Prema Chakra, Sanskarchakra, Kidnapping, Kidnapping, Tear Journey, Reincarnation, Failure of Mother-in-law, Awareness, Darkness to Light, Vishamrita, Kanyadan, Vrakodar's Vow, Etc. He has won over 15 awards and more than 385 awards including The District Rajyotsava Award, Honorary Doctorate Award, Shivaram Karanth Sadbhavana Award, Skanda Award for Context Composition, Karnataka Bhushan State, Bharat Bhushan Rashtra Award, Basava Award, etc. He is credited with establishing and running several other organisations including the founder cellor of the Working Journalists Association of Kundapur, founder cellor of the Bangalore Padmasali Samaj, the founder cellor of the Mariamma Temple Cultural Association in Koteshwara, the founding director of gangoli music school, vice president of koteswara aathika samaj. He has received many titles including Karunada Kanmani, Kshetra Mahatmas Adara, Padmashali Kulathilaka, Astrology Shiromani, Padmashali Kanmani, Kalakasturi, Samajratna and many other titles and has given interviews in many places including Radio, Television and... On these, the books of praise have been released titled Kirtikalasa Kirti, Satamantha Samsam.

He has received many titles including Karunada Kanmani, Kshetra Mahatmas Adara, Padmashali Kulathilaka, Astrology Shiromani, Padmashali Kanmani, Kalakasturi, Samajratna and many other titles and has given interviews in many places including Radio, Television and...

On these, the books of praise have been released titled Kirtikalasa Kirti, Satamantha Samsam.

Having a great synthesis of astrology and architecture, he has created over 2* lakh horoscope verification and *75000* architecture and maps.

Kavyasri of Karkala. Accept B. Shettygar* as his wife and lead an ideal marriage life. *Courtesy Sri* (daughter) *Chaitanya Sri* (daughter) *Rajesh Kumar* (son-in-law)
 *Gururaja Shettygar* (son-in-law) and grandson Sankalp* live in Koteshwara 'Omsri'.

Our yakshamandar ablothed them to the good health and happiness of kotilingaswara. 🙏

Literature: *Haladi Santosh Shetty*

Narration: *Mrs. Amrita Shetty*

All the videos of the Yakshagana Artistes Introduction Series are our yaksha💥mandar YouTube channel.. Available in.. 

Our 🌀yss💥mandar🌀YouTube channel and Facebook page. Download.. And get information about all yakshagana videos we upload.. Watch our videos like, share and encourage... Save, develop and encourage yakshagana art..

Thank you🙏🙏🙏
ವಾಹಿನಿಯ ಹೋಮ್ ಪೇಜ್ ಗಾಗಿ: https://www.youtube.com/channel/UCsrL ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: https://www.facebook.com/groups/27334

Saturday, November 14, 2020

#ಯಕ್ಷಮಂದಾರ - 41 | ವಿದ್ಯಾದರ ಜಲವಳ್ಳಿ | Vidyadara Jalavalli | ಕಲಾಜೀವನದ ಕಿರುಪರಿಚಯ ಯಕ್ಷಕಲಾಧರ | ದ್ರುವತಾರೆ


#ಯಕ್ಷಮಂದಾರ - 41 | ವಿದ್ಯಾದರ ಜಲವಳ್ಳಿ | Vidyadara Jalavalli | ಕಲಾಜೀವನದ ಕಿರುಪರಿಚಯ ಯಕ್ಷಕಲಾಧರ | ದ್ರುವತಾರೆ


 *ಸಮಸ್ತ ಯಕ್ಷಗಾನ ಕಲಾಭಿಮಾನಿಗಳಿಗೆ ಮತ್ತು ಯಕ್ಷಗಾನ ಕಲಾವಿದರಿಗೆ *ದೀಪಾವಳಿ ಹಬ್ಬದ* *ಹಾರ್ದಿಕವಾದ ಶುಭಾಶಯಗಳು* ...

*🌀ಯಕ್ಷ💥ಮಂದಾರ* ಇದು ಯಕ್ಷಕಲಾವಿದರ ಸಾದನೆ ಮತ್ತು ಜೀವನಗಾಥೆಯ ಅನಾವರಣ.. ಇಂದಿನ ನಮ್ಮ ಯಕ್ಷಸಾಧಕರು ...ಯಕ್ಷಲೋಕದ ದ್ರುವತಾರೆ... ಬಡಗುತಿಟ್ಟಿನ ಪ್ರಸಿದ್ಧ ನಾಯಕ ಮತ್ತು ಪ್ರತಿನಾಯಕ ಪಾತ್ರಧಾರಿ "ಯಕ್ಷಕಲಾಧರ" *ವಿದ್ಯಾಧರ ರಾವ್ ಜಲವಳ್ಳಿ* ಶ್ರೀಯುತರು ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಜಲವಳ್ಳಿಯಲ್ಲಿ ರಾಜ್ಯಪ್ರಶಸ್ತಿ ವಿಜೇತರಾದ ಪ್ರಸಿದ್ಧ ವೇಷಧಾರಿಗಳಾಗಿದ್ದ ದಿ.ಜಲವಳ್ಳಿ ವೆಂಕಟೇಶ ರಾವ್ ಮತ್ತು ಕಲ್ಯಾಣಿ ದಂಪತಿಗಳ ಪುಣ್ಯಗರ್ಭದಲ್ಲಿ ದಿನಾಂಕ:12.05.1974ರಲ್ಲಿ ಜನಿಸಿದರು... ತನ್ನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಮುಗಿಸಿದ ಇವರು ಯಕ್ಷಗಾನ ರಂಗದತ್ತ ಆಕರ್ಷಿತರಾದರು... ಅಭಿಜಾತ ಕಲಾವಿದರಾಗಿದ್ದ ತಂದೆಯವರ ಪ್ರಭಾವದಿಂದ ಯಕ್ಷಗಾನದ ಒಲವು ಬೆಳೆಸಿಕೊಂಡಿದ್ದ ಇವರಿಗೆ ತಂದೆಯವರ ಸಲಹೆ ಮತ್ತು ಮಾರ್ಗದರ್ಶನದಿಂದ ಯಕ್ಷರಂಗದಲ್ಲಿ ಬೆಳೆಯಲು ಅನುಕೂಲವಾಯಿತು... ಯಕ್ಷಗಾನದ ಗುರುಕುಲವೆನಿಸಿದ ಗುಂಡಬಾಳ ಮೇಳದಲ್ಲಿ ತನ್ನ ಹದಿನೇಳನೆಯ ವಯಸ್ಸಿನಲ್ಲಿ ಪ್ರಥಮ ಬಾರಿಗೆ ಯಕ್ಷಶಿಕ್ಷಣವನ್ನು ಪಡೆದ ಇವರು ಅಲ್ಲಿಯೇ ಗೆಜ್ಜೆಕಟ್ಟಿ ರಂಗಪ್ರವೇಶಗೈದರು.. ಯಕ್ಷರಂಗದಲ್ಲಿ ನಿರ್ದಿಷ್ಟವಾದ ಗುರು ಇಲ್ಲದೆ ಇದ್ದರೂ,ಹಿರಿಯ ಕಲಾವಿದರು ಮತ್ತು ತಂದೆಯವರ ರಂಗನಡೆ,ವೇಷಗಾರಿಕೆ ಮತ್ತು ಮಾತುಗಾರಿಕೆಯನ್ನು ನೋಡಿ,ಸ್ವಸಾಮರ್ಥದಿಂದ ಆರ್ಜಿಸಿಕೊಳ್ಳುತ್ತ ನಿಖರವಾದ ಗುರಿಯೆಡೆಗೆ ಸಾಗಿ ಯಕ್ಷ ಶಿಖರವನ್ನೆರಲು ಹೊರಟಿರುವ ಇವರ ಸಾದನೆ ಅಮೋಘವಾದದ್ದು... ಗುಂಡಬಾಳ,ಗೋಳಿಗರಡಿ,ಕಮಲಶಿಲೆ, ಸಾಲಿಗ್ರಾಮ ಮೇಳಗಳಲ್ಲಿ ಸೇವೆ ಸಲ್ಲಿಸಿದ ಇವರು ಪೆರ್ಡೂರು ಮೇಳದಲ್ಲಿ ತನ್ನ ಸುದೀರ್ಘವಾದ ಸೇವೆಯನ್ನು ಸಲ್ಲಿಸಿದ್ದಾರೆ... ಕೆಲವು ವರ್ಷ *ಕಲಾದರಯಕ್ಷರಂಗ ಬಳಗ* ( ರಿ ) *ಜಲವಳ್ಳಿ* ಎಂಬ ಯಕ್ಷ ಬಳಗವನ್ನು ಹುಟ್ಟು ಹಾಕಿದ ಇವರು ಸುಪ್ರಸಿದ್ದ ಕಲಾವಿದರನ್ನು ಸಂಘಟಿಸಿ ದೇಶ ವಿದೇಶಗಳಲ್ಲಿ ಕಾರ್ಯಕ್ರಮವನ್ನು ನೀಡಿದ್ದರು..ನಂತರ ದಕ್ಷಿಣೋತ್ತರ ಜಿಲ್ಲೆಯ ಸುಪ್ರಸಿದ್ದ ಕಲಾವಿದರ ಸಂಯೋಜನೆಯಲ್ಲಿ,ಅದನ್ನು ಪೂರ್ಣ ಪ್ರಮಾಣದಲ್ಲಿ ಡೇರೆಮೇಳವಾಗಿ ಬದಲಾಯಿಸಿ ಎರಡು ವರ್ಷ ಮುನ್ನೆಡಿಸಿದ ಇವರು,ಆರ್ಥಿಕವಾಗಿ ನಷ್ಟ ಅನುಭವಿಸಿ ತನ್ನ ಸ್ವಂತ ಮೇಳವನ್ನು ಸ್ಥಗಿತಗೊಳಿಸಿ,ಕಳೆದ ವರ್ಷ ಪೆರ್ಡೂರು ಮೇಳವನ್ನು ಸೇರಿಕೊಂಡು ಪ್ರಧಾನ ಪಾತ್ರಧಾರಿಯಾಗಿ ಸೇವೆಸಲ್ಲಿಸಿ..ಮುಂದಿನ ವರ್ಷದಿಂದ ಎರಡನೆಯ ವೇಷದಾರಿಯಾಗಿ ಸೇವೆಸಲ್ಲಿಸಲಿದ್ದಾರೆ.. ಆಕರ್ಷಕ ಮತ್ತು ಸದೃಢವಾದ ಶರೀರ ಮತ್ತು ಶಾರೀರವನ್ನು ಹೊಂದಿರುವ ಇವರು,ತನ್ನ ಪ್ರಬುದ್ಧವಾದ ಗತ್ತು ಗೈರತ್ತಿನ ರಂಗನಡೆ,ಗಂಭೀರ ನಿಲುವು,ಆಕರ್ಷಕ ಮುಖವರ್ಣಿಕೆ,ಸುಂದರವಾದ ವೇಷಭೂಷಣ,ಪಾತ್ರೋಚಿತವಾದ ರಂಗ ಕೌಶಲ್ಯ,ಹಿತಮಿತವಾದ ಮಾತುಗಾರಿಕೆ,ರಂಗದಲ್ಲಿ ದಣಿವರಿಯದೆ ಕುಣಿಯುವ ನಾಟ್ಯಶೈಲಿಯಿಂದ ಯುವ ಪ್ರೇಕ್ಷಕರನ್ನು ಆಕರ್ಷಿಸಿದಲ್ಲದೆ, ಯಕ್ಷಗಾನ ಆಸಕ್ತರನ್ನು ಬೆರಗುಗೊಳಿಸಬಲ್ಲ ಶ್ರೇಷ್ಠ ಕಲಾವಿದರಿವರು... ಯಕ್ಷರಂಗದ ಮೇರು ಕಲಾವಿದರಾದ ದಿ.ಚಿಟ್ಟಾಣಿ ರಾಮಚಂದ್ರ ಹೆಗಡೆ,ದಿ.ಜಲವಳ್ಳಿ ವೆಂಕಟೇಶ್ ರಾವ್,ದಿ.ವಾಸುದೇವ ಸಾಮಗ ಮಲ್ಪೆ,ದಿ.ದುರ್ಗಪ್ಪ ಗುಡಿಗಾರ,ದಿ,ಆಲ್ಮನೆ ಪದ್ಮನಾಭ, ದಿ.ಹುಡುಗೋಡು ಚಂದ್ರಹಾಸ, ದಿ.ಕಣ್ಣಿಮನೆ ಗಣಪತಿ ಭಟ್, ಸುಬ್ರಹ್ಮಣ್ಯ ದಾರೇಶ್ವರ,ಸುರೇಶ ಶೆಟ್ಟಿ, ಕೊಂಡದಕುಳಿ ರಾಮಚಂದ್ರ ಹೆಗಡೆ,ಬಳ್ಕೂರು ಕೃಷ್ಣಯಾಜಿ,ತೀರ್ಥಹಳ್ಳಿ ಗೋಪಾಲ ಆಚಾರ್ಯ,ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ,ಹೊಸಂಗಡಿ ರಾಜೀವ ಶೆಟ್ಟಿ,ಹಳ್ಳಾಡಿ ಜಯರಾಮ ಶೆಟ್ಟಿ,ಸುಬ್ರಹ್ಮಣ್ಯ ಹೆಗಡೆ ಚಿಟ್ಟಾಣಿ,ರಮೇಶ ಭಂಡಾರಿ,ಸೀತರಾಮ್ ಕುಮಾರ್ ಮೊದಲಾದ ಹಿರಿಯ ಕಲಾವಿದರೊಂದಿಗೆ ತಿರುಗಾಟವನ್ನು ನಡೆಸಿ ಅಪಾರವಾದ ಅನುಭವವನ್ನು ಪಡೆದಿದ್ದಾರೆ.. ಪ್ರಾರಂಭದಲ್ಲಿ ಸುಧನ್ವ ಮೋಕ್ಷದ ಸುಧನ್ವ, ಅಭಿಮನ್ಯು ಕಾಳಗದ ಅಭಿಮನ್ಯು,ಕಂಸವದೆಯ ಕೃಷ್ಣ ಮೊದಲಾದ ಪುಂಡುವೇಷಗಳಲ್ಲಿ ತನ್ನದೇ ಛಾಪುಮೂಡಿಸಿದ ಇವರು,ನಂತರದ ದಿನಗಳಲ್ಲಿ ಕರ್ಣಾರ್ಜುನದ ಅರ್ಜುನ ಮತ್ತು ಕರ್ಣ,ಗದಾಯುದ್ಧದ ಕೌರವ ಮತ್ತು ಭೀಮ, ಕಾರ್ತವೀರ್ಯಾರ್ಜುನದ ಕಾರ್ತ್ಯವೀರ್ಯ ಮತ್ತು ರಾವಣ,ಭೀಷ್ಮವಿಜಯದ ಭೀಷ್ಮ ಮತ್ತುಸಾಲ್ವ,ಮೊದಲಾದ ನಾಯಕ ಮತ್ತು ಪ್ರತಿನಾಯಕ ಪಾತ್ರಗಳನ್ನು ಸಮರ್ಥವಾಗಿ ಅಭಿನಯಿಸುವ ಮೂಲಕ ಯಕ್ಷಗಾನ ರಂಗಕ್ಕೆ ಭವಿಷ್ಯದ ಭರವಸೆಯ ಕಲಾವಿದರಾಗಿ ಮೂಡಿಬಂದರು.. ದುಷ್ಟಬುದ್ಧಿ,ದಕ್ಷ,ಶನಿಶ್ವರ,ಕಂಸ,ಮಾಗದ,ರಕ್ತಜಂಘ, ರಾವಣ ಮೊದಲಾದ ಖಳನಾಯಕನ ಪಾತ್ರದಲ್ಲಿ ತನ್ನ ಅಬ್ಬರದ ಅದ್ಬುತ ಅಭಿನಯದಿಂದ ಜನಮನ ಸೂರೆಗೊಂಡಿದ್ದಾರೆ. ಮೂರು ದಶಕಗಳಿಂದ ಯಕ್ಷ ಕಲಾಮಾತೆಯ ಸೇವೆಗೈಯುತ್ತ,ದೇಶ ವಿದೇಶಗಳಲ್ಲಿ ತನ್ನ ಯಕ್ಷಕಾಯಕದ ಮೂಲಕ ಅಪಾರ ಅಭಿಮಾನಿಗಳನ್ನು ಪಡೆದಿರುವ ಇವರು ಯಕ್ಷರಂಗದಲ್ಲಿ ಸಲ್ಲಿಸಿದ ಶಿಸ್ತುಬದ್ಧ ಮತ್ತು ಪ್ರಾಮಾಣಿಕವಾದ ಸೇವೆಯನ್ನು ಗುರುತಿಸಿ,ಶ್ರೀ ಆಂಜನೇಯ ಕೃಪಾ ಯಕ್ಷಬಳಗ ಕೇಡಲಸರ ಸಾಗರ ಇವರಿಂದ 2015ರಲ್ಲಿ *ಯಕ್ಷರಾಜ ಪ್ರಶಸ್ತಿ* ಮಣೂರು ಮಯ್ಯ ಯಕ್ಷಕಲಾ ಪ್ರತಿಷ್ಠಾನ (ರಿ)ಬೆಂಗಳೂರು ಇವರಿಂದ *ಮಯ್ಯ* *ಯಕ್ಷಸಾದಕ* *ಪುರಸ್ಕಾರ* ಯಕ್ಷಮಿತ್ರರು ಬ್ರಹ್ಮಾವರ ಬಾರ್ಕೂರು ಇವರಿಂದ ಸನ್ಮಾನ,ದಿವಾಕರ ಶೆಟ್ಟಿ ಶಿರಿಬೀಡು ಇವರ ನೇತೃತ್ವದಲ್ಲಿ ಸನ್ಮಾನ, ಹೊನ್ನಾವರ ಕುದ್ರಿಗೆ ರಾಮಕ್ಷತ್ರಿಯ ಸಂಘದ ವತಿಯಿಂದ ಗಣೇಶೋತ್ಸವದ ಸಂದರ್ಭದಲ್ಲಿ ಸನ್ಮಾನ ಸೇರಿದಂತೆ ಹಲವಾರು ಸನ್ಮಾನ ಪುರಸ್ಕಾರಗಳು ಸಂದಿವೆ... ತನ್ನ ವೈಯುಕ್ತಿಕ ಬದುಕಿನಲ್ಲಿ ಸಂಯಮ ಮತ್ತು ಶಿಸ್ತುಬದ್ಧತೆಯನ್ನು ರೂಡಿಸಿಕೊಂಡಿರುವ ಇವರು, ತನ್ನ ವೈವಾಹಿಕ ಜೀವನದ ಸಂಗಾತಿಯಾಗಿ ಶ್ರೀಮತಿ *ಜಾಹ್ನವಿ* ಯವರೊಂದಿಗೆ ಆದರ್ಶ ದಾಂಪತ್ಯ ಜೀವನವನ್ನು ನಡೆಸಿ ಮಗ *ಕಲಾಧರ* ಮತ್ತು ಮಗಳು *ಗಾನಶ್ರೀ* ಯೊಂದಿಗೆ ಸುಖ ಸಂತೃಪ್ತ ಜೀವನವನ್ನು ನಡೆಸುತ್ತಿದ್ದಾರೆ.. ಇವರ ಮುಂದಿನ ಯಕ್ಷಪಯಣ ಸುಗಮವಾಗಿ ಸಾಗಲಿ..ಇವರಿಗೆ ಯಕ್ಷರಂಗದಲ್ಲಿ ಹೆಚ್ಚಿನ ಯಶಸ್ಸು ದೊರೆಯಲಿ...ಪ್ರಶಸ್ತಿ ಪುರಸ್ಕಾರಗಳು ಇವರ ಮುಡಿಗೇರಲಿ...ಶ್ರೀ ಅನಂತ ಪದ್ಮನಾಭ ಸ್ವಾಮಿಯೂ ಇವರಿಗೆ ಸರ್ವ ಸಂಪದವನ್ನು ನೀಡಲಿ ಎನ್ನುವುದು ನಮ್ಮ ಯಕ್ಷಮಂದಾರದ ಶುಭಹಾರೈಕೆ... ಸಾಹಿತ್ಯ : *ಹಾಲಾಡಿ ಸಂತೋಷ ಶೆಟ್ಟಿ** ನಿರೂಪಣೆ: *ಶ್ರೀಮತಿ ಅಮೃತ ಶೆಟ್ಟಿ** ಯಕ್ಷಗಾನ ಕಲಾವಿದರ ಪರಿಚಯ ಸರಣಿಯ ಎಲ್ಲ ವಿಡಿಯೋಗಳು ನಮ್ಮ ಯಕ್ಷ💥ಮಂದಾರ ಯೂಟ್ಯೂಬ್ ಚಾನಲ್..ನಲ್ಲಿ ಲಭ್ಯವಿದೆ.. ನಮ್ಮ ಯಕ್ಷ💥ಮಂದಾರ ಯೂಟ್ಯೂಬ್ ಚಾನಲ್ ಮತ್ತು ಫೇಸ್ಬುಕ್ ಪೇಜ್.. ನ್ನು download ಮಾಡಿಕೊಳ್ಳಿ..ಮತ್ತು ನಾವು upload ಮಾಡುವ ಎಲ್ಲ ಯಕ್ಷಗಾನ ವಿಡಿಯೋಗಳ ಮಾಹಿತಿ ಪಡೆಯಿರಿ..ನಮ್ಮ ವಿಡಿಯೋಗಳನ್ನು ನೋಡಿ like ಮಾಡಿ,share ಮಾಡಿ ಪ್ರೋತ್ಸಾಹಿಸಿ... ಯಕ್ಷಗಾನ ಕಲೆಯನ್ನು ಉಳಿಸಿ,ಬೆಳೆಸಿ, ಪ್ರೋತ್ಸಾಹಿಸಿ.. ಧನ್ಯವಾದಗಳು🙏🙏🙏

*Best wishes to all Yakshagana artistes and Yakshagana artistes *Deepavali Festival* *Heartfelt greetings*

*🌀Yaksha💥Mandar*

This is the story of the yakshaganas and the story of life.

Today's yakshaganas are ... The yakshaloka is the drutha... The famous hero and hero of Badaguthitta is "Yakshakaladhara" *Vidyadhara Rao Jalavalli*

Mr. J. Jalavalli, the famous award-winning disguised couple of The Jalavalli Venkateswara Rao and Kalyani, was born on 12.05.1974 at Jalavalli in Honnavar taluk of Uttara Kannada district.

After completing his primary and secondary education, he was attracted to yakshagana. He was influenced by father who was a great artist and had developed a passion for yakshagana and his father's advice helped him to grow in yakshagana. He first received yakshagana education at the age of seventeen at the age of 17 and entered the theatre there with a bunch of glee.

Though there is no specific teacher in the Yakshagana, his stage walk, the costume and the disguise of his father, his own ability and his ability to set the yaksha peak in a perfect direction is a great achievement.

He has served at Gundabala, Goligaradi, Kamalashila and Saligramam melas and has done his long service at Perdur Mela... He formed a yaksha group called Kaladaryaksharanga Group ( R ) *Jalavalli" and organised the famous artistes and gave a programme abroad. Later, in the combination of famous artistes from the south, he transformed it into a full-fledged tent, and after two years, he had suffered financial losses and stopped his own mela and joined the Perdur Mela last year and served as the lead ingredient. He will serve as a second disguise from next year.

With a charming and strong body and a strong body, he has a mature, skinny, attractive face, beautiful dress, characteristic skill, a pleasant speech, a dancing dance style that attracts young audiences and is a great artist who can amaze yakshagana enthusiasts.

The great artists of Yakshasanga are D.Chittani Ramachandra Hegde, D.Jalavalli Venkatesh Rao, D.Vasudeva Samaga Malpe, D.Durgappa Gudigara, D.Almane Padmanabha, He has had a lot of experience with veteran artistes like D.Guddachandrahasa, D.Kannimane Ganapati Bhatt, Subramanya Dareshwara, Suresh Shetty, Kondakuli Ramachandra Hegde, Balkur Krishnayaji, Tirthahalli Gopalacharya, Subramanya Hegde Yalguppa, Hosangadi Rajiv Shetty, Haladi Jayaram Shetty, Subramanya Hegde Chittani, Ramesh Bhandari, Seetharamkumar.

 He initially made his mark in the roles of Sudhanva moksha, Abhimanyu of battle, Krishna of Kansavade, Arjuna of Karnarjuna, Kaurava of Gadawara and Bhima of Kartavirya, And Ravana, Bhishma and Salva of Bhishma vijaya, and the future hero of Yakshagana. The characterof the villain like Wicked Buddhi, Daksha, Shanishwara, Kansa, Magada, Raktajanga, Ravana has impressed the masses with his brilliant performance.

He has been a great fan of Yakshakamata for over three decades and has been a great fan of yakshakaya kayaksha, and he has been honoured with the disciplined and sincere service of yakshagana in yakshagana, and in 2015, the Yaksharaja Award by Mr. Anjaneya Krupa Yakshagana Kedalasara Sagar, Manur Mayya Yakshakala Foundation (R) Bangalore, Yakshasadaka* *Purasakara* Yakshamitra brahmavara barkur, honored by Diwakar Shetty. Honnavar Kudri has been awarded several honors including honors on the occasion of Ganeshotsava by the Ramkshatriya Sangh...

Having been restrained and disciplined in his personal life, she has a perfect marriage with Mrs. Janhvi, and leads a happy and satisfied life with his son Kaladhara* and daughter Ganasri.

May his next journey of yakshagana go smoothly. May they get more success in yakshagana... May the awards be their saints... Our Yakshamandar auspicious wishes to Sri Anantha Padmanabha Swamy to give him all the wealth.

Literature : *Haladi Santosh Shetty** 
 Narration: *Mrs. Amritshetty** 

All the videos of the Yakshagana Artistes Introduction Series are our Yaksha💥Mandar YouTube channel.. Available in.. 
  
Our Yaksha💥Mandar YouTube channel and Facebook page.. Download.. And get information about all yakshagana videos we upload.. Watch our videos like, share and encourage... Save, develop and encourage yakshagana art..

Thank you🙏🙏🙏

Thursday, November 12, 2020

#ಯಕ್ಷಮಂದಾರ - 40 | ಗಣೇಶ ನೆಲ್ಲಿಕಟ್ಟೆ | Ganesh Nellikatte | Yakshagana | Mandarthi Mela | ಮಂದಾರ್ತಿ ಮೇಳ

                                                          ಯಕ್ಷಮಂದಾರ


#ಯಕ್ಷಮಂದಾರ - 40 | ಗಣೇಶ ನೆಲ್ಲಿಕಟ್ಟೆ | Ganesh Nellikatte | Yakshagana | Mandarthi Mela | ಮಂದಾರ್ತಿ ಮೇಳ

ಯಕ್ಷರಂಗದ ಬಡಗುತಿಟ್ಟಿನ ಶ್ರುತಿಬದ್ದ ಶೈಲಿಯ ಜನಪ್ರಿಯ ಯುವ ಬಾಗವತರಲ್ಲಿ ಯುವಕಣ್ಮಣಿ ಗಣೇಶ ನೆಲ್ಲಿಕಟ್ಟೆಯರದ್ದು ಚಿರಪರಿಚಿತ ಹೆಸರು.


ಇವರು ಉಡುಪಿ ಜಿಲ್ಲೆಯ ಯಕ್ಷಕಾಶಿಯೆಂದೇ ಪ್ರಸಿದ್ಧವಾದ ಕುಂದಾಪುರ  ತಾಲೂಕಿನ ಅಂಪಾರು ಸಮೀಪದ ನೆಲ್ಲಿಕಟ್ಟೆಯ ಶ್ರೀ ನಾರಾಯಣ ಮೊಗವೀರ ಮತ್ತು ಶ್ರೀಮತಿ ಗುಲಾಬಿ ದಂಪತಿಗಳ ನಾಲ್ಕು ಗಂಡು ಮತ್ತು ಒಂದು ಹೆಣ್ಣು ಮಕ್ಕಳಲ್ಲಿ ಪ್ರಥಮ ಪುತ್ರನಾಗಿ ದಿನಾಂಕ:12.07.1987ರಲ್ಲಿ ಜನಿಸಿದರು ....


ಪ್ರಾಥಮಿಕ ವಿದ್ಯಾಭ್ಯಾಸವನ್ನು ನೆಲ್ಲಿಕಟ್ಟೆ ಜೈಭಾರತಿ ಶಾಲೆಯಲ್ಲಿ ಪಡೆದ ಇವರು,ಪ್ರೌಢ ಶಿಕ್ಷಣವನ್ನು ಪಡೆಯಲು ಅಂಪಾರು ಸಂಜಯಗಾಂದಿ ಪ್ರೌಢಶಾಲೆಗೆ ಸೇರಿದರು...ಅಲ್ಲಿ ಎಂಟನೆಯ ತರಗತಿಯ ವಿದ್ಯಾರ್ಥಿಯಾಗಿರುವಾಗಲೇ ಯಕ್ಷಗಾನದ ಕುರಿತ ಅಭಿರುಚಿಯಿಂದ,ವಿದ್ಯಾಭ್ಯಾಸಕ್ಕೆ ವಿದಾಯ ಹೇಳಿ ಯಕ್ಷಗಾನ ಕಲೆಯ ಆಕರ್ಷಣೆಗೆ ಒಳಗಾಗಿ ಯಕ್ಷಗಾನದ ಪ್ರಮುಖ ಭಾಗವಾದ ಬಾಗವತಿಕೆಯನ್ನು ಆರಿಸಿಕೊಂಡರು...ಮಂದಾರ್ತಿ ಯಕ್ಷಗಾನ ಕೇಂದ್ರದಲ್ಲಿ ಯಕ್ಷಗುರುಗಳಾಗಿದ್ದ ದಿವಂಗತ.ಗುಂಡ್ಮಿ ರಘುರಾಮ ಗಾಣಿಗರಲ್ಲಿ ತಾಳ ಲಯ ರಾಗದ ಜ್ಞಾನವನ್ನು ಪಡೆದುಕೊಂಡ ಇವರು,ಯಕ್ಷರಂಗದ ಹಿರಿಯ ಬಾಗವತ ಪ್ರಾಚಾರ್ಯ ಕೆ.ಪಿ.ಹೆಗಡೆ ಮತ್ತು ಮದ್ದಳೆವಾದಕರಾದ ಎನ್.ಜಿ.ಹೆಗಡೆಯವರ ಗುರುತನದಲ್ಲಿ ಪ್ರಬುದ್ಧ ಬಾಗವತರಾಗಿ ಮೂಡಿಬಂದರು..


ಹಾಲಾಡಿ ಮೇಳದಲ್ಲಿ ಪ್ರಥಮ ಬಾರಿಗೆ ಸಂಗೀತಗಾರನಾಗಿ ರಂಗಮಂಚವೇರಿದ ಇವರು ಎರಡು ವರ್ಷ ಹಾಲಾಡಿ ಮೇಳದಲ್ಲಿ ಸೇವೆಸಲ್ಲಿಸಿದ ನಂತರ ಎರಡು ವರ್ಷ ಸೌಕೂರು,ಒಂದು ವರ್ಷ ಸಾಲಿಗ್ರಾಮ ಮೇಳದಲ್ಲಿ ಸೇವೆ ಸಲ್ಲಿಸಿ  ಕಳೆದ ಏಳು ವರ್ಷಗಳಿಂದ ನಿರಂತರವಾಗಿ ಮಂದಾರ್ತಿ ಮೇಳದಲ್ಲಿ ಸಹಬಾಗವತರಾಗಿ ಸೇವೆಸಲ್ಲಿಸುತ್ತಿದ್ದಾರೆ..


ರಾಘವೇಂದ್ರ ಮಯ್ಯ,ನಗರ ಸುಬ್ರಹ್ಮಣ್ಯ ಆಚಾರ್ಯ, ಪರಮೇಶ್ವರ ನಾಯ್ಕ ಕಾನಗೋಡು, ಸೂರಾಲು ರವಿ, ಹೊಸಂಗಡಿ ರವೀಂದ್ರ ಶೆಟ್ಟಿ,ಸದಾಶಿವ ಅಮೀನ್, ಗಣೇಶ ಶೆಟ್ಟಿ ಬೆಳ್ವೆ ಮೊದಲಾದ ಹಿರಿಯ ಬಾಗವತರ ಸಾಂಗತ್ಯದಲ್ಲಿ ತಿರುಗಾಟ ನಡೆಸಿದ್ದು,ಗೋಪಾಡಿ ಉಮೇಶ ಸುವರ್ಣ,ರಾಘವೇಂದ್ರ ಮಯ್ಯ,ಸುಬ್ರಹ್ಮಣ್ಯ ಆಚಾರ್ಯ,ಪರಮೇಶ್ವರ ನಾಯ್ಕ,ಸೂರಾಲು ರವಿ ಇವರು ನೀಡಿದ ಸಲಹೆ ಮತ್ತು ಮಾರ್ಗದರ್ಶನವನ್ನು ಮುಕ್ತ ಮನಸ್ಸಿನಿಂದ ಹೊಗಳುವ ಇವರು,ತನ್ನ ಜೀವನದಲ್ಲಿ ಕಲಾ ರಂಗದಲ್ಲಿ ಉನ್ನತಿಯನ್ನು ಸಾಧಿಸಲು ಕಾರಣಿಕರ್ತರಾದ ದಿ.ನಗರ ಸುಬ್ರಹ್ಮಣ್ಯ ಆಚಾರ್ಯರ ಅಕಾಲಿಕ ಅಗಲುವಿಕೆ ನಮ್ಮಿಂದ ಮರೆಯಾಗುವಂತದಲ್ಲ ಎಂದು ವಿಷಾದ ವ್ಯಕ್ತಪಡಿಸುತ್ತಿದ್ದಾರೆ.


 ತನ್ನ ಕಲಾಜೀವನದಲ್ಲಿ ನರಾಡಿ ಭೋಜರಾಜ ಶೆಟ್ಟಿ,ಮಂದಾರ್ತಿ ರಘು ಮಡಿವಾಳ,ಆಜ್ರಿ ಗೋಪಾಲಗಾಣಿಗ,ಆರ್ಗೋಡು,ನಿಟ್ಟೂರು ಅನಂತ ಹೆಗಡೆ,ಹೊಳೆಕೊಪ್ಪ ಜಯಾನಂದ,ಗುಂಡಿಬೈಲು ಗಣಪತಿ ಭಟ್,ಕೆಮ್ಮಣ್ಣು ಪ್ರವೀಣ್ ಗಾಣಿಗ, ಕೃಷ್ಣಯಾಜಿ,ಕೊಂಡದಕುಳಿ,ಕೋಡಿ ವಿಶ್ವನಾಥ ಗಾಣಿಗ, ಬೆದ್ರಾಡಿ ನರಸಿಂಹ ಮೊದಲಾದ ಹಿರಿಯ ಕಲಾವಿದರನ್ನು ರಂಗದಲ್ಲಿ ಕುಣಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ...


ಕರಾವಳಿ ಮಲೆನಾಡು ಪ್ರದೇಶದಲ್ಲಷ್ಟೇ ಅಲ್ಲದೆ ಬೆಂಗಳೂರು, ಮುಂಬೈ, ಹೈದರಾಬಾದ್ ಮತ್ತು ಉತ್ತರ ಕರ್ನಾಟಕ ಬಾಗದಲ್ಲಿ ತಿರುಗಾಟ ನಡೆಸಿದ್ದಾರೆ.ಮಳೆಗಾಲದ ತಿರುಗಾಟದಲ್ಲಿ ಶ್ರಿ ಮಹಾಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿ ಹಾಲಾಡಿ ಮತ್ತು ಯಕ್ಷಸೌರಭ ಪ್ರವಾಸಿ ಯಕ್ಷಗಾನ ಮಂಡಳಿ ಕುಂದಾಪುರ ಇದರಲ್ಲಿ ಬಾಗವತರಾಗಿ ತಿರುಗಾಟ ನಡೆಸಿದ್ದಾರೆ..


ಸುಶ್ರಾವ್ಯವಾದ ಕಂಠಸಿರಿಯನ್ನು ಹೊಂದಿರುವ ಇವರು ರಾಗ,ತಾಳ,ಲಯದಲ್ಲಿ ಖಚಿತತೆ ಮತ್ತು ರಂಗದಲ್ಲಿ ನಿಖರತೆಯನ್ನು ಹೊಂದಿದ್ದು,ರಂಗದಲ್ಲಿ ತನ್ಮಯತೆಯಿಂದ ತನ್ನ ಗಾನಮಾದುರ್ಯವನ್ನು ಹರಿಸಿ ಪ್ರೇಕ್ಷಕರನ್ನು ಸಂಗೀತಲೋಕದಲ್ಲಿ ತೇಲಿಸಬಲ್ಲ ಪ್ರತಿಭಾವಂತ ಯುವ ಬಾಗವತರು..ಕರುಣೆ,ವೀರ,ಶೃಂಗಾರ ಮತ್ತು ಭಕ್ತಿಪ್ರಧಾನ ರಸಗಳಲ್ಲಿ ಗಾನ ಸಿರಿಯನ್ನು ಹೊರಹೊಮ್ಮಿಸಬಲ್ಲ ಇವರು,ಸುಧನ್ವ ಮೋಕ್ಷ, ನಳದಮಯಂತಿ,ಕರ್ಣಾರ್ಜುನ ಕಾಳಗ ಮೊದಲಾದ ಪ್ರಸಂಗದಲ್ಲಿ ತನ್ನ ಏರುಶ್ರುತಿಯಲ್ಲಿ ಹಾಡಿ ರಂಗದಲ್ಲಿ ಸಂಚಲನವನ್ನು ಮೂಡಿಸಬಲ್ಲ ಪ್ರತಿಭಾವಂತರು..


ಸತತ ಹನ್ನೆರಡು ವರುಷಗಳಿಂದ ಯಕ್ಷ ಕಲಾಮಾತೆಯ ಸೇವೆಸಲ್ಲಿಸುತ್ತಿರುವ ಇವರು...ನೆಲ್ಲಿಕಟ್ಟೆ ಜೈಭಾರತಿ ಶಾಲೆಯಲ್ಲಿ ನಡೆದ ಶಾರದೋತ್ಸವ ಸಮಿತಿಯ ವತಿಯಿಂದ ಹುಟ್ಟೂರ ಸನ್ಮಾನ,ಅಂಪಾರು ಗಣೇಶೋತ್ಸವ ಸಮಿತಿಯ ವತಿಯಿಂದ ಸನ್ಮಾನ,ನೆಲ್ಲಿಕಟ್ಟೆ ಗೆಳೆಯರ ಬಳಗದಿಂದ ಸನ್ಮಾನ, ಮೊಳಹಳ್ಳಿ ಗೆಳೆಯರ ಬಳಗದಿಂದ ಸನ್ಮಾನ ಸೇರಿದಂತೆ ಹಲವು ಕಡೆ ಸನ್ಮಾನ ಪುರಸ್ಕಾರಗಳನ್ನು ಪಡೆದುಕೊಂಡಿದ್ದಾರೆ...


2012ರಲ್ಲಿ ಶ್ರೀಮತಿ ಸತ್ಯವತಿಯವರೊಂದಿಗೆ ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡಿದ ಇವರು ತನ್ಮಯ್ ಮತ್ತು ತಸ್ಮಯ್ ಎಂಬ ಎರಡು ಮುದ್ದು ಮಕ್ಕಳನ್ನು ಪಡೆದು ಸಂತೃಪ್ತ ಜೀವನವನ್ನು ನಡೆಸುತ್ತಿದ್ದಾರೆ...


ಇವರ ಮುಂದಿನ ಕಲಾಪಯಣ ಸುಗಮವಾಗಿ ಸಾಗಲಿ,ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಅಮ್ಮನವರು ಆಯುರಾರೋಗ್ಯ,ಸುಖ ಸಮೃದ್ಧಿಯನ್ನು ನೀಡಲಿ ಎನ್ನುವುದು ನಮ್ಮ ಯಕ್ಷಮಂದಾರದ ಶುಭಹಾರೈಕೆ.....


ಸಾಹಿತ್ಯ: ಹಾಲಾಡಿ ಸಂತೋಷ ಶೆಟ್ಟಿ...


ನಿರೂಪಣೆ:ಶ್ರೀಮತಿ ಅಮೃತಾ ಶೆಟ್ಟಿ...



Yakshamandar

The famous young bhagavatha of the srutibada style of yaksharanga is the famous name of Ganesh anelliketta.

He was born on 12.07.1987 as the first son of four sons and one daughter of Sri Narayana Mogaveera and Mrs. Rose of Nellikatte near Ampar in Kundapur taluk, known as Yakshakashi in Udupi district .

He received primary education at Jai Bharathi School, Nellikate and joined The Sanjayagandi High School in Ampar to get secondary education. As a student of the eighth grade, he was interested in yakshagana and was attracted to the yakshagana art and chose Bagavatike, an important part of yakshagana. He gained knowledge of the tune of tala in the late Gundmi Raghuram Ganiga, who was yakshagana guru at the Centre of Mandarthi Yakshagana, and he became a mature man in the guruship of Yakshagana veteran Siddharth Agarwal K.P.Hegde and the madalavada.

He has been a musician for the first time in haladi mela and has been working in the Mandarti Mela for two years after serving in Haladi Mela for two years and serving in Saligramam mela for the past seven years.

Raghavendra Mayya, Nagar Subramanya Acharya, Parameshwara Nayak Kanagodu, Suralu Ravi, Hosangadi Ravindra Shetty, Sadashiv Amin, Ganesh Shetty Belve, etc., gopadi Suvarna, Raghavendra Mayya, Subramanya Acharya, Parameshwara Nayak, Suralu Ravi, who has been a great person to promote his career in art, is a great part of his life.

He is credited with dancing in the field of veteran artistes like Naradi Bhojaraja Shetty, Mandarthi Raghu Madhavan, Ajri Gopalganiga, Argodu, Nittoor Anantha Hegde, Holekoppa Jayananda, Gundibailu Ganapati Bhatt, Kemmannu Praveen Ganiga, Krishnayaji, Kondakuli, Kodi Vishwanath Ganiga, Bedradi Narasimha.

Sri Mahaganapathi Tourist Yakshagana Mandal Haladi and Yakshagana Bharadwaj Yakshagana Mandal, Kundapur, have been travelling in the coastal Malda region as well as in Bangalore, Mumbai, Hyderabad and North Karnataka.

With a melodious voice, he is a talented young man who is perfect in tune, rhythm, rhythm, and accuracy in the stage, and can sing his musicwith a sense of humour and music. He is a genius who can sing in the singing of karuna, heroic, erotic and bhakti-pradhana juices, singing in his singing and singing in the field of singing in the context of Sudhanva Moksha, Naladamayanti, Karnarjuna Battle etc.

He has been serving the Yaksha Kalamata for twelve years in a row. The Sharda Utsav Committee held at Nellikette Jai Bharathi School has won honors from the Village Council, the Ampar Ganeshotsav Samiti, the honour from the Nellikatte Friends Group, the Honour from the Molahalli Friends Group.


ಯಕ್ಷಮಂದಾರ ವಿಡಿಯೋ ನೋಡಲೋಸುಗವಾಗಿ.


ವಾಹಿನಿಯ ಹೋಮ್ ಪೇಜ್ ಗಾಗಿ: https://www.youtube.com/channel/UCsrL


ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: https://www.facebook.com/groups/27334


Monday, November 9, 2020

#ಯಕ್ಷಮಂದಾರ - 39 | ತೊಂಬಟ್ಟು ವಿಶ್ವನಾಥ ಆಚಾರ್ಯ | Thumbattu Vishwanath Acharya | Yakshagana | Yaksh |

                                                              #ಯಕ್ಷಮಂದಾರ

#ಯಕ್ಷಮಂದಾರ - 39 | ತೊಂಬಟ್ಟು ವಿಶ್ವನಾಥ ಆಚಾರ್ಯ | Thumbattu Vishwanath Acharya | Yakshagana | Yaksh |

ಯಕ್ಷಗಾನ ರಂಗದಲ್ಲಿ ಗಾನಗಂಧರ್ವ ದಿ. ಕಾಳಿಂಗ ನಾವಡರು ಉತ್ತುಂಗ ಶಿಖರದಲ್ಲಿ ಮೆರೆಯುತ್ತಿದ್ದ ಕಾಲವದು...ರೇಡಿಯೋ,ಧ್ವನಿಮುದ್ರಕಗಳಲ್ಲಿ ನಾವಡರ ಪದ್ಯದ ಕಂಠಸಿರಿಗೆ ಮನಸೋತು ಯಕ್ಷಗಾನ ಕ್ಷೇತ್ರದೆಡೆಗೆ ಅಭಿರುಚಿ ಬೆಳೆಸಿಕೊಂಡಿದ್ದ ಹಳ್ಳಿಯ ಹುಡುಗನೊಬ್ಬನನ್ನು ಯಕ್ಷ ಕಲಾಮಾತೆ ಕೈ ಬೀಸಿ ಕರೆಯುತ್ತಿದ್ದಳು..ಅವರು ಬೇರೆ ಯಾರು ಅಲ್ಲ..ಪ್ರಸ್ತುತ ಬಡಗುತಿಟ್ಟಿನ ಯಕ್ಷಗಾನ ಕ್ಷೇತ್ರದಲ್ಲಿ ಪುಂಡುವೇಷಗಳಲ್ಲಿ ತನ್ನದೇ ಶೈಲಿಯಿಂದ ಹೆಜ್ಜೆ ಗುರುತು ಮೂಡಿಸುತ್ತಿರುವ ಯುವ ಕಣ್ಮಣಿ ತೊಂಬಟ್ಟು ವಿಶ್ವನಾಥ ಆಚಾರ್ಯರು.... ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ತೊಂಬಟ್ಟು ಎಂಬ ಪುಟ್ಟ ಹಳ್ಳಿಯಲ್ಲಿ,ಕೃಷಿಕ ವಿಶ್ವಕರ್ಮ ಕುಟುಂಬದ ಅಣ್ಣಪ್ಪ ಆಚಾರ್ಯ ಮತ್ತು ಗಿರಿಜಾ ದಂಪತಿಗಳ ಮೂರು ಜನ ಮಕ್ಕಳಲ್ಲಿ ಕೊನೆಯವರಾಗಿ ಜನಿಸಿದರು. ತನ್ನ ಹತ್ತನೆಯ ವಯಸ್ಸಿನಲ್ಲಿ ಕಮಲಶಿಲೆ ಮೇಳದ ಈಗಿನ ಸಂಚಾಲಕರಾದ ನಾರಾಯಣ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಕಮಲಶಿಲೆ ಮೇಳದಲ್ಲಿ ಗೆಜ್ಜೆಕಟ್ಟಿದರು... ಅಲ್ಲಿಯೇ ಹಿರಿಯ ಕಲಾವಿದರ ಒಡನಾಟದಲ್ಲಿ ನೋಡಿ,ಕೇಳಿ ಕಲಿಯುತ್ತ,ಹೆಚ್ಚಿನ ಕಲಿಯುವಿಕೆಗಾಗಿ ಹಿರಿಯ ಕಲಾವಿದ ರಾಗಿದ್ದ ಕೊಚ್ಛಾಡಿ ರಾಮ ದೇವಾಡಿಗರಲ್ಲಿ ಸೇರಿಕೊಂಡು ಯಕ್ಷಗಾನದ ಪರಿಪೂರ್ಣ ಜ್ಞಾನವನ್ನು ಪಡೆದರು..ನಂತರದ ದಿನದಲ್ಲಿ ವಿದ್ಯಾದರ ಜಲವಳ್ಳಿಯವರ ಸಲಹೆಯಂತೆ ಪೆರ್ಡೂರು ಮೇಳವನ್ನು ಸೇರಿಕೊಂಡರು...ಅಲ್ಲಿ ಯಕ್ಷಗಾನದ ಮೇರುನಟರಾದ ದಿ.ಪದ್ಮಶ್ರೀ ಚಿಟ್ಟಾಣಿಯವರ ವೇಷಗಾರಿಕೆ ಇವರ ಮೇಲೆ ಗಾಢವಾದ ಪ್ರಭಾವವನ್ನು ಬೀರಿತಲ್ಲದೆ,ಅವರ ಪಟ್ಟದ ಶಿಷ್ಯನಂತೆ ಅವರ ಒಡನಾಟದಲ್ಲಿ ಯಕ್ಷಗಾನದ ಸಂಪೂರ್ಣ ಒಳಹೊರಗಿನ ವಿಷಯದಲ್ಲಿ ಪರಿಪೂರ್ಣತೆಯನ್ನು ಸಾದಿಸುತ್ತ ಬಂದರು... ಬಾಗವತರಾದ ಸುಬ್ರಮಣ್ಯ ದಾರೇಶ್ವರ,ಸುರೇಶ ಶೆಟ್ಟಿ,ತೀರ್ಥಹಳ್ಳಿ ಗೋಪಾಲಾಚಾರ್ಯರು ಮತ್ತು ಮೇಳದ ಹಿರಿಯ ಕಲಾವಿದರು ಇವರ ಜೀವನದಲ್ಲಿ ಹೆಚ್ಚಿನ ಕಲಿಕೆ ಮತ್ತು ಉನ್ನತಿಗೆ ಕಾರಣರಾಗಿದ್ದಾರೆ.. ಇವರ ವೃತ್ತಿ ಜೀವನದಲ್ಲಿ ದಿ.ಚಿಟ್ಟಾಣಿ, ದಿ.ಜಲವಳ್ಳಿ ವೆಂಕಟೇಶ ರಾವ್,ಆರ್ಗೋಡು,ದಿ. ಹುಡುಗೋಡು ಚಂದ್ರಹಾಸ, ದಿ. ಆಲ್ಮನೆ ಪದ್ಮನಾಭ,ತೀರ್ಥಹಳ್ಳಿ ಗೋಪಾಲಾಚಾರ್ಯ,ದಾರೇಶ್ವರ,ಸುರೇಶ್ ಶೆಟ್ಟಿ,ಹೊಸಂಗಡಿ ರವೀಂದ್ರ ಶೆಟ್ಟಿ, ಜನಾರ್ದನ ಗುಡಿಗಾರ,ಕುಮಟಾ ಗಣಪತಿ ನಾಯ್ಕ,ಥಂಡಿಮನೆ, ಯಲಗುಪ್ಪ,ಶಿರಳಗಿ, ಶಂಕರ ಹೆಗಡೆ,ಚಪ್ಪರಮನೆ,ಸೀತಾರಾಮ ಕುಮಾರ್, ರಮೇಶ್ ಭಂಡಾರಿ ಯವರಂತಹ ಹಿರಿಯ ಕಲಾವಿದರೊಂದಿಗೆ ತಿರುಗಾಟ ನಡೆಸಿದ್ದಾರೆ... ಕಮಲಶಿಲೆ, ಪೆರ್ಡೂರು, ನೀಲಾವರ, ಹಾಲಾಡಿ ಮೇಳದಲ್ಲಿ ಸೇವೆಸಲ್ಲಿಸಿ,ಪ್ರಸ್ತುತ ಪೆರ್ಡೂರು ಮೇಳದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.. ರಂಗಪ್ರವೇಶದಲ್ಲೇ ಮಿಂಚು ಹರಿಸಬಲ್ಲ ಪಾದಗತಿಯನ್ನು ಹೊಂದಿರುವ,ಹೆಚ್ಚಾಗಿ ಪುಂಡುವೇಷ ಮತ್ತು ಪುರುಷ ವೇಷವನ್ನೇ ಮೆಚ್ಚಿಕೊಳ್ಳುವ ಇವರಿಗೆ ಅಭಿಮನ್ಯು ಕಾಳಗದ ಅಭಿಮನ್ಯು ಮತ್ತು ಚಿತ್ರಾಕ್ಷಿ ಕಲ್ಯಾಣದ ರುದ್ರಕೋಪ ಪಾತ್ರಗಳು ಹೆಚ್ಚಿನ ಪ್ರಸಿದ್ಧಿಯನ್ನು ತಂದುಕೊಟ್ಟಿದೆ,ಸುಧನ್ವ,ಬರ್ಬರಿಕ,ಚಂಡ ಭಂಡ,ಮೈಂದ,ಬಬ್ರುವಾಹನ, ತರಣಿಸೇನ, ವೃಷಸೇನ,ಲವ,ಕುಶ,ಶುಭಾಂಗ,ಶತ್ರುಘ್ನ,ಕೌರವ ಮತ್ತು ಕೀಚಕನ ಪಾತ್ರವನ್ನು ಬಹು ಸುಂದರವಾಗಿ ಅಭಿನಯಿಸುತ್ತಿದ್ದಾರೆ... ದೇಶಾದ್ಯಂತ ಹಲವು ಕಾರ್ಯಕ್ರಮಗಳನ್ನು ನೀಡಿರುವ ಇವರು ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದು,ಹಲವು ಸನ್ಮಾನ ಪುರಸ್ಕಾರ ಗಳನ್ನು ಪಡೆದಿದ್ದಾರೆ.. ಅಮಾಸೆಬೈಲಿನ ತೊಂಬಟ್ಟಿನಲ್ಲಿ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಸಂತೃಪ್ತ ಜೀವನವನ್ನು ನಡೆಸುತ್ತಿದ್ದಾರೆ. ಅತ್ಯಂತ ಸರಳ,ಸೌಮ್ಯ ಮತ್ತು ಶಿಸ್ತುಬದ್ಧತೆಯನ್ನು ಹೊಂದಿರುವ ಇವರಿಗೆ ಅನಂತಪದ್ಮನಾಭ ಸ್ವಾಮಿಯೂ ಸರ್ವ ಸಂಪದವನ್ನು ನೀಡಲಿ ಎನ್ನುವುದು ನಮ್ಮ ಯಕ್ಷಮಂದಾರದ ಶುಭಹಾರೈಕೆ ಸಾಹಿತ್ಯ: ಹಾಲಾಡಿ ಸಂತೋಷ ಶೆಟ್ಟಿ ನಿರೂಪಣೆ:ಶ್ರೀಮತಿ ಅಮೃತಾ ಶೆಟ್ಟಿ.. Ganagandharva d. Kalinga Was the time when the Navadas were at the peak... The yakshakalamata was waving a young village boy who had been interested in the yakshagana field, who was impressed by the voice of Nawada's poem on the radio and the recordings. They are no one else.. The young Kanmani Thombattu Vishwanath Acharya, who is now making his own footprints in the yakshagana field of Badgutittt. He was born as the youngest of the three children of Annappa Acharya and Girija of the farmer Vishwakarma family in thumbattu village in Kundapur taluk of Udupi district. At the age of ten, he tied the knot at the Kamalashila Mela under the guidance of narayana shetty, the current convener of the Kamalashilmela... There he joined the veteran artistes, Kochhadi Rama Devadiga, to learn more and learn more and acquire the full knowledge of Yakshagana. The next day, on the advice of VidyadarJalavalli, he joined the Perdur Mela... There, the disguise of the great yakshagana actors, The Padma shri Chittani, was a profound influence and he was accompanied by his disciple, who, like his father, was perfect in the entire subject of Yakshagana. The bagavataras, Subramanya Dareshwara, Suresh Shetty, Tirthahalli Gopalacharya and the mela veteranartists have contributed to the great learning and elevation in their lives. In his career, D.Chittani, D.Jalavalli Venkateswara Rao, Argodu, D. Boys, Chandrahasa, The. Almane Padmanabha, Thirthahalli Gopalacharya, Dareshwara, Suresh Shetty, Hosangadi Ravindra Shetty, Srinivasan Gudigara, Kodagu Ganapathy Nayak, Thandimane, Yalaguppa, Shiragi, Shankar Ahekde, Chaparmane, Sitaramkumar, Ramesh Bhandari have been roaming with veteran artists. Kamalashila, Perdur, Neelavara, Haladi are serving at the present Perdur Mela. Abhimanyu and Chitrakshi Kalyana's Rudrakopa characters are very popular for their roles in the field of theatre, with the role of Sudhanva, Barbarika, Chanda Bhanda, Minda, Babruvahana, Taranisena, Vrishasena, Lava, Kusha, Shubhanga, Shatrughan Kaurava and Keechaka. He has given many programmes across the country and has a huge fan following and has won many awards. Our Yakshamandar avery wish to give an anantapadmanabha swamy the salvation of the simplest, mild and disciplined. ವಾಹಿನಿಯ ಹೋಮ್ ಪೇಜ್ ಗಾಗಿ: https://www.youtube.com/channel/UCsrL... ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: https://www.facebook.com/groups/27334

Saturday, November 7, 2020

#ಯಕ್ಷಮಂದಾರ - 38 | ಮಾದವ ಜೋಗಿ ನಾಗೂರು | Madava Jogi Nagooru | Amruteswari Mela| | ಅಮೃತೇಶ್ವರಿ ಮೇಳ |

 

#ಯಕ್ಷಮಂದಾರ - 38 | ಮಾದವ ಜೋಗಿ ನಾಗೂರು | Madava Jogi Nagooru | Amruteswari Mela| | ಅಮೃತೇಶ್ವರಿ ಮೇಳ |

ಇದು ಯಕ್ಷ ಕಲಾವಿದರ ಸಾಧನೆ ಮತ್ತು ಜೀವನಗಾಥೆಯ ಅನಾವರಣ..


ಇಂದಿನ ನಮ್ಮ ಯಕ್ಷಸಾಧಕರು..ಬಡಗಿನ ಬೆಡಗಿನ ಯಕ್ಷಕನ್ಯೆ.. ಅಮೃತೇಶ್ವರಿ ಮೇಳದ ಪ್ರದಾನ ಸ್ತ್ರೀಪಾತ್ರಧಾರಿ ಮಾದವ ಜೋಗಿ ನಾಗೂರು..


ಶ್ರೀಯುತರು ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕಂಬದಕೋಣೆ ಗ್ರಾಮದ ತೆಂಕಬೆಟ್ಟುವಿನಲ್ಲಿ ಶ್ರೀ ದಯಾನಂದ ನಾಗೂರು ಮತ್ತು ಲಲಿತಾ ದಂಪತಿಗಳ ಮೂರನೆಯ ಮಗನಾಗಿ ದಿನಾಂಕ:25.06.1982ರಲ್ಲಿ ಜನಿಸಿದರು..


ಬಾಲ್ಯದಿಂದಲೇ ಯಕ್ಷಗಾನದ ಬಗ್ಗೆ ಅಪಾರವಾದ ಆಸಕ್ತಿಯನ್ನು ಬೆಳೆಸಿಕೊಂಡಿದ್ದ ಇವರು,ಹತ್ತನೆಯ ತರಗತಿಯವರೆಗಿನ ಶಿಕ್ಷಣವನ್ನು ಪಡೆದ ನಂತರ ಆಗಿನ ಪ್ರಸಿದ್ಧ ಸ್ತ್ರೀಪಾತ್ರಧಾರಿಯಾಗಿದ್ದ ತನ್ನ ತಂದೆಯರಲ್ಲಿ ಮತ್ತು ಹೆರಂಜಾಲು ವೆಂಕಟರಮಣ ಗಾಣಿಗರಲ್ಲಿ ಯಕ್ಷಗಾನದ ಹೆಜ್ಜೆಗಾರಿಕೆ, ತಾಳ ಲಯಜ್ಞಾನವನ್ನು ಪಡೆದ ಇವರು ದಿ.ಎಂ.ಎಂ.ಹೆಗ್ಡೆಯವರ ಯಜಮಾನಿಕೆಯ ಮಾರಣಕಟ್ಟೆ ಮೇಳದಲ್ಲಿ ಗೆಜ್ಜೆಕಟ್ಟಿದರು.. ಅಲ್ಲಿ ನಾಲ್ಕು ವರ್ಷಗಳ ಕಾಲ ಬಾಲಗೋಪಾಲ, ಒಡ್ಡೋಲಗ ಮತ್ತು ಪೀಠಿಕೆ ಸ್ತ್ರೀವೇಷಗಳನ್ನು ನಿರ್ವಹಿಸಿದರು..ನಂತರ ಕಮಲಶಿಲೆ ಮೇಳದಲ್ಲಿ ಐದು ವರ್ಷ, ಮಂದಾರ್ತಿ ಮೇಳದಲ್ಲಿ ಮೂರು ವರ್ಷ ಸೇವೆಸಲ್ಲಿಸಿದ  ಇವರು ಪ್ರಸ್ತುತ ಕೋಟ ಅಮೃತೇಶ್ವರಿ ಮೇಳದ ಪ್ರಧಾನ ಸ್ತ್ರೀಪಾತ್ರಧಾರಿಯಾಗಿದ್ದು, ಅಲ್ಲಿ ಏಳು ವರ್ಷಗಳಿಂದ ಸತತವಾಗಿ ಸೇವೆ ಸಲ್ಲಿಸುತ್ತಿದ್ದಾರೆ..


ಮನಮೋಹಕ ರೂಪಲಾವಣ್ಯ,ಆಕರ್ಷಕ ಅಂಗಸೌಷ್ಠವ,ಕಣ್ಮನ ಸೆಳೆಯುವ ವೇಷಭೂಷಣ,ಲಾಲಿತ್ಯಪೂರ್ಣ ನಾಟ್ಯಶೈಲಿ, ಪ್ರಬುದ್ಧ ರಂಗನಡೆ ಮತ್ತು ಹಿತಮಿತವಾದ ಮಾತುಗಾರಿಕೆ ಮತ್ತು ಸ್ತ್ರೀಪಾತ್ರಕೋಪ್ಪುವ ಸುಸ್ವರದ ಮೂಲಕ ಎಲ್ಲ ರೀತಿಯ ಸ್ತ್ರೀಪಾತ್ರಗಳನ್ನು ಸುಲಲಿತವಾಗಿ ನಿರ್ವಹಿಸುವ ಇವರು ಅಷ್ಟೇ ಸಮರ್ಥವಾಗಿ ಪುರುಷಪಾತ್ರಗಳನ್ನು ನಿಭಾಯಿಸಬಲ್ಲರು.ದ್ರೌಪತಿ,ಸುಭದ್ರೆ, ಭ್ರಮರಕುಂತಲೆ,ಶಶಿಪ್ರಭೆ,ಆಸ್ತಿ ,ಪ್ರಹಸ್ತಿಮೀನಾಕ್ಷಿ ಮೊದಲಾದ ವೀರಾವೇಶದ ಕಸೆವೇಷಗಳಲ್ಲಿ ಆರ್ಭಟಿಸುತ್ತ ರಂಗದಲ್ಲಿ ಮಿಂಚು ಹರಿಸಬಲ್ಲ ಇವರು,ಸೀತೆ, ಸಾವಿತ್ರಿ, ಚಂದ್ರಮತಿ,ರುಚಿಮತಿ, ದಾಕ್ಷಾಯಿಣಿ ಮೊದಲಾದ ವೇಷಗಳನ್ನು ಬಾವಪೂರ್ಣವಾಗಿ ಅಭಿನಯಿಸಬಲ್ಲರು..ಚಿತ್ರಾಕ್ಷಿ,ಮೋಹಿನಿ,ಮೇನಕೆ ಮೊದಲಾದ ಶೃಂಗಾರಭರಿತ ಪಾತ್ರಗಳಲ್ಲಿ ತನ್ನ ಮೋಹಕ ರಂಗನಡೆಯಿಂದ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಇವರು,ಕೃಷ್ಣ ವೃಷಸೇನ,ಲವ ಕುಶ,ಅಭಿಮನ್ಯು,ಶೂರಸೇನ ಮೊದಲಾದ ಪುರುಷ ಪಾತ್ರಗಳನ್ನು ನಿಭಾಯಿಸಬಲ್ಲರು..



ಹೆರಂಜಾಲು ಗೋಪಾಲ ಗಾಣಿಗ,ಮೊಳಹಳ್ಳಿ ಕೃಷ್ಣ ಮೊಗವೀರ,ಆರ್ಗೋಡು ಮೋಹನದಾಸ 

ಶೆಣೈ,ಮಂದಾರ್ತಿ ರಘುರಾಮ ಮಡಿವಾಳ,ಹಳ್ಳಾಡಿ ಜನಾರ್ದನ ಆಚಾರ್ಯ, ಮಾಳ್ಕೊಡು ಜಗದೀಶ ಹೆಗಡೆ,ಕೋಟ ಸುರೇಶ ಬಂಗೇರ,ಚಿಟ್ಟಾಣಿ ನರಸಿಂಹ ಹೆಗಡೆ,ಸಂಜೀವ ಶೆಟ್ಟಿ ಹೆನ್ನಾಬೈಲು, ಉಪ್ಪುಂದ ನಾಗೇಂದ್ರ ರಾವ್,ಕೊಂಡದಕುಳಿ ರಾಮಚಂದ್ರ ಹೆಗ್ಡೆ ಮೊದಲಾದ ಹಿರಿಯ ಕಲಾವಿದರೊಂದಿಗೆ ತಿರುಗಾಟ ನಡೆಸಿರುವ ಇವರು,ಬೆಂಗಳೂರು, ಮುಂಬೈ,ಹೈದರಾಬಾದ್,ಚೆನ್ನೈ, ದೆಹಲಿ ಮತ್ತು ಪಟ್ಲ ಪೌಂಡೇಶನ್ ವತಿಯಿಂದ ಒಮಾನ್ ಮೊದಲಾದ ವಿದೇಶಗಳಲ್ಲಿಯೂ ಸಹ ಕಾರ್ಯಕ್ರಮವನ್ನು ನೀಡಿ,ತನ್ನ ಕಲಾಪ್ರೌಢಿಮೆಯನ್ನು ಮರೆಸಿದ್ದಾರೆ..


ಸುಮಾರು ಹತ್ತೊಂಬತ್ತು ವರ್ಷಗಳಿಂದ ಯಕ್ಷರಂಗದಲ್ಲಿ ಸಲ್ಲಿಸುತ್ತಿರುವ ಇವರ ಪ್ರಾಮಾಣಿಕ ಕಲಾಸೇವೆಗಾಗಿ ಜೋಗಿ ಸಮಾಜ ಸೇವಾ ಸಂಘ ಕುಂದಾಪುರ ಇವರಿಂದ ಸನ್ಮಾನ,ಕರ್ನಾಟಕ ಕರಾವಳಿ ಮೈತ್ರಿಸಂಘ ಹೈದರಾಬಾದ್ ಇವರಿಂದ ಸನ್ಮಾನ,ಎಸ್.ಜಿ. ಕೆ ಗೆಳಯರ ಬಳಗ ಬೈದಬೆಟ್ಟು ಇವರಿಂದ ಸನ್ಮಾನ,ಮಣೂರು ಬೌಂಡರಿ ಹೊಳ್ಳ ಕುಟುಂಬಸ್ಥರಿಂದ ಸನ್ಮಾನ ಸೇರಿದಂತೆ ನಾಡಿನಾದ್ಯಂತ ಹಲವು ಸನ್ಮಾನ ಪುರಸ್ಕಾರಗಳು ಸಂದಿವೆ..


ಶ್ರೀಯುತರು ಶ್ರೀಮತಿ ಶಬರಿಯವರೊಂದಿಗೆ ಆದರ್ಶ  ದಾಂಪತ್ಯ ಜೀವನವನ್ನು  ನಡೆಸಿ ,ಅಶ್ವಿನ್ ಎಂಬ ಮುದ್ದು ಮಗನನ್ನು ಪಡೆದಿದ್ದು ಸಂತೃಪ್ತ ಜೀವನವನ್ನು ನಡೆಸುತ್ತಿದ್ದಾರೆ..


ಇವರಿಗೆ ಯಕ್ಷರಂಗದಲ್ಲಿ ಹೆಚ್ಚಿನ ಯಶಸ್ಸು ಪ್ರಾಪ್ತವಾಗಲಿ,ಇವರ ಸಾಧನೆ ಗಗನ ಚುಂಬಿಯಾಗಿ ಬೆಳೆಯಲಿ,ಕೋಟ ಶ್ರೀ ಅಮೃತೇಶ್ವರಿ ತಾಯಿಯೂ ಇವರ ಸಕಲ ಇಷ್ಟಾರ್ಥಗಳನ್ನು ಈಡೇರಿಸಲಿ ಎನ್ನುವುದು ನಮ್ಮ ಯಕ್ಷಮಂದಾರದ ಶುಭಹಾರೈಕೆ...


ಸಾಹಿತ್ಯ:ಹಾಲಾಡಿ ಸಂತೋಷ ಶೆಟ್ಟಿ..


ನಿರೂಪಣೆ:ಶ್ರೀಮತಿ ಅಮೃತಾ ಶೆಟ್ಟಿ...


ಯಕ್ಷಗಾನ ಕಲಾವಿದರ ಪರಿಚಯ ಸರಣಿಯ ಎಲ್ಲ ವಿಡಿಯೋಗಳು ನಮ್ಮಯಕ್ಷ💥ಮಂದಾರ ಯೂಟ್ಯೂಬ್ ಚಾನಲ್..ನಲ್ಲಿ ಲಭ್ಯವಿದೆ.. 

  

  

This is an exhibition of the achievements and life of yakshaartists.


Today's yakshakas are.. The yakshakinof the saint of the saint.. Amriteshwari Mela Award saga madava jogi nagur..


Mr. Dayananda Nagore and Lalitha were born on 25.06.1982 at Tenkabettu in Kambadakondu village in Byndoor taluk of Udupi district.


He had developed a keen interest in Yakshagana from childhood, and after his education till 10th standard, he had gained knowledge of yakshagana and rhythm in her father and her father, who was then a female character, and had a great deal of rhythm. There, balagopal, emperor and introduction performed female disguises for four years. He served for five years at The Kamalashila Mela and three years in The Mandarti Mela, currently the main female character of Kota Amritswari Mela, where he has been serving continuously for seven years.


The charming, attractive body, attractive costume, a loving dance style, He can play all kinds of female roles smoothly through mature ranganade, pleasant speech and feminine characters. He can play the roles of men equally efficiently. He can shines in heroic disguises like Draupati, Subhadra, Brahmarakuntala, Sasiprabhe, Prahastimeenakshi and others. He can hold the audience in erotic roles like Chitrakshi, Mohini, Menake and others, and can play male roles like Krishna Vrishasena, Lava Kusa, Abhimanyu, Shurasena.


Heranjalu Gopala Ganiga, Molahalli Krishna Mogaweera, Argodu Mohandas 

Shenani, Mandarthi Raghuram Madhavan, Haladi Acharya, Malkodu Jagadish Hegde, Kota Suresh Bangera, Chittani Narasimha Hegde, Sanjeeva Shetty Hennabailu, Uppanda Nagendra Rao, Kondakuli Ramachandra Hegde, etc. have also performed in Bangalore, Mumbai, Hyderabad, Chennai, Delhi and Patla Foundation and also have also made a show in Omen and has also made his art.


He has been in yakshagana for nearly nineteen years and is honoured by Jogi Social Service Association Kundapur, Karnataka Coastal Maitri Sangh Hyderabad, S.G. K. Gella's group has received many honors from Baidabetu, honoured by Manur Boundary Holla Saints and many other awards.


Mr. Sabari has been living an ideal marriage with Mrs. Sabari and has a beautiful son named Ashwin and leads a satisfying life.


May they achieve great success in yakshagana, may their achievements grow in the sky, and the mother of Kota Sri Amriteshwari to fulfill all their wishes.


Literature:Haladi Santosh Shetty..


Narration:Smt. Amrita Shetty...


All the videos of the Yakshagana Artistes Introduction Series are our yaksha💥mandar YouTube channel.. Available in.. 


ಯಕ್ಷಮಂದಾರ ವಿಡಿಯೋ ನೋಡಲೋಸುಗವಾಗಿ.


ವಾಹಿನಿಯ ಹೋಮ್ ಪೇಜ್ ಗಾಗಿ: https://www.youtube.com/channel/UCsrL


ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: https://www.facebook.com/groups/27334


Sunday, November 1, 2020

#ಯಕ್ಷಮಂದಾರ - 37 | ಕಡಬಾಳ ಉದಯ ಹೆಗ್ಡೆ| Uday Hegde Kadabala | ಪೆರ್ಡೂರು ಮೇಳ |Perdoor mela | Yakshamandara

🌀ಯಕ್ಷ💥ಮಂದಾರ🌀

#ಯಕ್ಷಮಂದಾರ - 37 | ಕಡಬಾಳ ಉದಯ ಹೆಗ್ಡೆ| Uday Hegde Kadabala | ಪೆರ್ಡೂರು ಮೇಳ |Perdoor mela | Yakshamandara

ಇದು ಯಕ್ಷ ಕಲಾವಿದರ ಸಾಧನೆ ಮತ್ತು ಜೀವನಗಾಥೆಯ ಅನಾವರಣ... ಇಂದಿನ ನಮ್ಮ ಯಕ್ಷಸಾಧಕರು.ಬಡಗುತಿಟ್ಟಿನ ಸುಪ್ರಸಿದ್ದ ಪುರುಷ ಪಾತ್ರಧಾರಿ.. ಯುವ ಪ್ರೇಕ್ಷಕರ ಕಣ್ಮಣಿ ಕಡಬಾಳ ಉದಯ ಹೆಗಡೆಯವರು..... ಯಕ್ಷಗಾನ ಕಲೆಯು ಕಾಲದಿಂದ,ಕಾಲಕ್ಕೆ ಸಮಕಾಲೀನ ಕಲಾವಿದರ ಅತ್ಯಮೂಲ್ಯ ಕೊಡುಗೆಯಿಂದಾಗಿ,ತನ್ನ ಸಿದ್ಧಿ ಪ್ರಸಿದ್ಧಿಯನ್ನು ಹೆಚ್ಚಿಸಿಕೊಳ್ಳುತ್ತ,ವಿಶ್ವದಾದ್ಯಂತ ಸಂಪನ್ನಗೊಳ್ಳುತ್ತ ಬಂದಿದೆ...ಪೂರ್ವರಂಗದ ಪಡಿನೆರಳಿನಲ್ಲಿ,ವರ್ತಮಾನದ ಕಲಾವಿದರ ಪರಿಶ್ರಮ,ಶ್ರದ್ಧೆಯಿಂದ ಯಕ್ಷರಥ ಸಾಲಂಕೃತಗೊಂಡಿದೆ...ಪ್ರಸಕ್ತ ಕಾಲಮಾನದಲ್ಲಿ ಯಕ್ಷಗಾನವು,ಬಹು ಪ್ರಸಿದ್ಧಿಯನ್ನು ಗಳಿಸಿಕೊಂಡಿದೆ...ಪ್ರತಿಬಾನ್ವಿತರು,ಪದವೀಧರರು ಕೂಡ ಯಕ್ಷಗಾನದತ್ತ ಆಕರ್ಷಿತರಾಗಿ ಬದುಕುಕಟ್ಟಿಕೊಳ್ಳುದರ ಜೊತೆಗೆ ಕಲೆಯನ್ನು ಶ್ರೀಮಂತಗೊಳಿಸುತ್ತಿರುವುದು ಸಂತೋಷದ ಸಂಗತಿ. ಯಕ್ಷರಂಗಕ್ಕೆ ಕೀರ್ತಿ ತಂದುಕೊಡುತ್ತಿರುವ ಪ್ರತಿಭಾಸಂಪನ್ನ ಯುವ ಕಲಾವಿದರ ಸಾಲಿನಲ್ಲಿ ಕಡಬಾಳ ಉದಯ ಹೆಗಡೆಯವರ ಹೆಸರು ಬಹು ಪ್ರಸಿದ್ದವಾಗಿದೆ...ಯಕ್ಷರಂಗದ ಕಣ್ಮಣಿಯೆಂದೇ ಪ್ರಸಿದ್ದರಾದ ದಿ. ಕಣ್ಣಿಮನೆ ಗಣಪತಿ ಭಟ್ಟರ ಗಾಢ ಪ್ರಭಾವದಿಂದ ರಂಗಕ್ಕೆ ಬಂದ ಹೆಗಡೆಯವರು ತನ್ನದೇ ಆದ ವಿಶಿಷ್ಟ ಪ್ರತಿಭೆ,ಶೈಲಿ,ಆಕರ್ಷಕ ಕುಣಿತ,ಸುಂದರ ವೇಷಗಾರಿಕೆ, ಸತ್ವಪೂರಿತವಾದ ಮಾತುಗಾರಿಕೆಯ ಶೈಲಿಯಿಂದ ತನ್ನದೇ ಆದ ಅಸಂಖ್ಯಾತ ಅಭಿಮಾನಿಗಳ ಸಮೂಹವನ್ನೇ ಸೃಷ್ಟಿಸಿಕೊಂಡಿದ್ದಾರೆ. ಶಿರಸಿ ಸಮೀಪದ ಕಡಬಾಳದ ಮಧುಕೇಶ್ವರ ಹೆಗಡೆ ಮತ್ತು ಮಹಾದೇವಿ ಅಮ್ಮನವರ ಪುತ್ರನಾಗಿ ಜನಿಸಿದ ಹೆಗಡೆಯವರು,ಯಕ್ಷಗಾನ ಕಲೆಯ ಮೇಲಿನ ಅಭಿಮಾನದಿಂದ ಶಿರಸಿ ಕೋಳಿಗಾರು ಮೇಳದಲ್ಲಿ ರಂಗಪ್ರವೇಶ ಮಾಡಿದರು..ನಂತರ ಬೆಂಗಳೂರಿನ ಯಕ್ಷದೇಗುಲ ತಂಡವನ್ನು ಸೇರಿಕೊಂಡು ಅಲ್ಲಿನ ಕಲಾವಿದರ ನಡೆ,ನುಡಿ ವೇಷಗಾರಿಕೆಯನ್ನು ನೋಡುತ್ತ, ತನಗೆ ಹುಟ್ಟಿನಿಂದಲೇ ಬಂದಿದ್ದ,ಪ್ರತಿಭೆಯನ್ನು ಹೆಚ್ಚಿಸಿಕೊಳ್ಳುತ್ತ ಪ್ರಬುದ್ಧ ವೇಷಗಾರಿಕೆಯ ಕಲೆಯನ್ನು ಸಿದ್ಧಿಸಿಕೊಂಡರು...ನಂತರದ ದಿನದಲ್ಲಿ ಪೆರ್ಡೂರು ಮೇಳದಲ್ಲಿ ಸೇವೆಸಲ್ಲಿಸುತ್ತ,ಕಲಾಭಿಮಾನಿಗಳ ಪಾಲಿಗೆ ಮೆಚ್ಚಿನ ಕಲಾವಿದರಾಗಿ ಕಾಣಿಸಿಕೊಂಡರು..ಪ್ರಸ್ತುತ ಹಾಲಾಡಿ ಮೇಳದಲ್ಲಿ ಸೇವೆಸಲ್ಲಿಸುತ್ತಿದ್ದಾರೆ.. ತನ್ನ ಅತ್ಯುತ್ತಮ ಅಭಿನಯದಿಂದ ಸುದರ್ಶನ ಪಾತ್ರಕ್ಕೆ ಜೀವತುಂಬಿದ ಇವರು ಅಭಿಮಾನಿಗಳಿಂದ "ಯಕ್ಷಸುದರ್ಶನ" ಎಂದು ಕರೆಸಿಕೊಂಡವರು... ಪೌರಾಣಿಕ ಅಥವಾ ನೂತನ ಪ್ರಸಂಗದ ಯಾವುದೇ ಪಾತ್ರವಾಗಲಿ ಅದನ್ನು ಅಭಿನಯಿಸುವ ಚಾಕಚಕ್ಯತೆಯನ್ನು ಹೊಂದಿರುವ ಇವರಿಗೆ ಸುದರ್ಶನ,ಕೀಚಕ,ವಿಷ್ಣು,ಕೃಷ್ಣ,ಸುಂದರರಾವಣ, ಸಾಲ್ವ,ಈಶ್ವರ,ಬಾಹುಕ,ಚಂದ್ರಹಾಸ, ಮದನ,ಲವ,ಕುಶ,ಬರ್ಬರಿಕ,ಸುಧನ್ವ,ಧರ್ಮಾಂಗದ ಮೊದಲಾದ ಪಾತ್ರಗಳು ಕೀರ್ತಿ ತಂದುಕೊಟ್ಟಿದೆ ಯಕ್ಷಗಾನ ಕಲಾವಿದೆ ಅಶ್ವಿನಿ ಕೊಂಡದಕುಳಿಯವರನ್ನು ಬಾಳಸಂಗಾತಿಯಾಗಿ ಸ್ವೀಕರಿಸಿದ ಇವರು ಸಂತೃಪ್ತ ಜೀವನವನ್ನು ನಡೆಸುತ್ತಿದ್ದಾರೆ ಇವರ ಮುಂದಿನ ಯಕ್ಷಪಯಣ ಸುಗಮವಾಗಿ ಸಾಗಲಿ..ಶ್ರೀ ಅನಂತಪದ್ಮನಾಭ ಸ್ವಾಮಿಯೂ ಇವರ ಸರ್ವ ಇಷ್ಟಾರ್ಥವನ್ನು ಈಡೇರಿಸಲಿ ಎನ್ನುವುದು ಯಕ್ಷಮಂದಾರದ ಶುಭಹಾರೈಕೆ.. ಸಾಹಿತ್ಯ ಮತ್ತು ನಿರ್ವಹಣೆ:ಹಾಲಾಡಿ ಸಂತೋಷ ಶೆಟ್ಟಿ.. ನಿರೂಪಣೆ:ಶ್ರೀಮತಿ ಅಮೃತಾ ಶೆಟ್ಟಿ...

This is the exhibition of the achievements and life of yakshaartists... Our yakshaganas are the famous male characters of the badgutitt. The young audience's kanmani kadabala udayhegde..... Yakshagana art has been enriching the world with its precious contribution from time to time by contemporary artists. The work of the present artists is diligently sold in the shadow of the east. Yakshagana has gained popularity in the present time... It is a pleasure that every graduate and every graduate are attracted to yakshagana and live in the art. The name of Kadabala Uday Hegde is very famous among the talented young artistes who are giving fame to the yakshagana. The yakshagana is known as the eye-opener. Hegde, who came to the stage under the deep influence of Kannimane Ganapati Bhatt, has created a large crowd of fans with his own unique genius, style, attractive dance, beautiful disguise and a vivid, and powerful speech. Born as the son of Madhukeshwara Hegde and Mahadevi Amma from Kadabala near Sirsi, Hegde entered the stage at TheChirisikoli Koligaru Mela with pride in yakshagana art. Then he joined the Yakshatemple team in Bangalore and looked at the artists' manners and manners, and made a masterpiece of dress ing, growing up talent skill. The following day, he served at the Perdur Mela and appeared as a favourite artist for the artistes. Currently serving in Haladi Mela. He has been alive with his outstanding performance and he is known by his fans as "Yakshasudarshana". He has the ability to play any character of a mythological or new episode, and has gained fame in the roles like Sudarshana, Keechaka, Vishnu, Krishna, Sundara Ravana, Salva, Ishwara, Bahuka, Chandrahasa, Madan, Lava, Kusha, Barrika, Sudhanva, Dharmanga etc. Yakshagana artistEs Ashwini Kondakuli as his partner and leads a satisfying life May his next journey of yakshagana go smoothly. Wishing sri ananthapadmanabha swamy to fulfill all his wishes. Literature & Management:Haladi Santosh Shetty.. Narration:Smt. Amrita Shetty...

ಯಕ್ಷಮಂದಾರ ವಿಡಿಯೋ ನೋಡಲೋಸುಗವಾಗಿ.

ವಾಹಿನಿಯ ಹೋಮ್ ಪೇಜ್ ಗಾಗಿ: https://www.youtube.com/channel/UCsrL

ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: https://www.facebook.com/groups/27334

#ಯಕ್ಷಮಂದಾರ - 51 | ಹೆನ್ನಾಬೈಲು ಸಂಜೀವ ಶೆಟ್ಟಿ | Hennabailu Sanjeeva Shetty | ಪ್ರಸಿದ್ದ ಸ್ತ್ರೀಪಾತ್ರದಾರಿ |

🌀ಯಕ್ಷ💥ಮಂದಾರ🌀 #ಯಕ್ಷಮಂದಾರ  - 51 | ಹೆನ್ನಾಬೈಲು ಸಂಜೀವ ಶೆಟ್ಟಿ | Hennabailu Sanjeeva Shetty | ಪ್ರಸಿದ್ದ ಸ್ತ್ರೀಪಾತ್ರದಾರಿ...