Saturday, November 7, 2020

#ಯಕ್ಷಮಂದಾರ - 38 | ಮಾದವ ಜೋಗಿ ನಾಗೂರು | Madava Jogi Nagooru | Amruteswari Mela| | ಅಮೃತೇಶ್ವರಿ ಮೇಳ |

 

#ಯಕ್ಷಮಂದಾರ - 38 | ಮಾದವ ಜೋಗಿ ನಾಗೂರು | Madava Jogi Nagooru | Amruteswari Mela| | ಅಮೃತೇಶ್ವರಿ ಮೇಳ |

ಇದು ಯಕ್ಷ ಕಲಾವಿದರ ಸಾಧನೆ ಮತ್ತು ಜೀವನಗಾಥೆಯ ಅನಾವರಣ..


ಇಂದಿನ ನಮ್ಮ ಯಕ್ಷಸಾಧಕರು..ಬಡಗಿನ ಬೆಡಗಿನ ಯಕ್ಷಕನ್ಯೆ.. ಅಮೃತೇಶ್ವರಿ ಮೇಳದ ಪ್ರದಾನ ಸ್ತ್ರೀಪಾತ್ರಧಾರಿ ಮಾದವ ಜೋಗಿ ನಾಗೂರು..


ಶ್ರೀಯುತರು ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕಂಬದಕೋಣೆ ಗ್ರಾಮದ ತೆಂಕಬೆಟ್ಟುವಿನಲ್ಲಿ ಶ್ರೀ ದಯಾನಂದ ನಾಗೂರು ಮತ್ತು ಲಲಿತಾ ದಂಪತಿಗಳ ಮೂರನೆಯ ಮಗನಾಗಿ ದಿನಾಂಕ:25.06.1982ರಲ್ಲಿ ಜನಿಸಿದರು..


ಬಾಲ್ಯದಿಂದಲೇ ಯಕ್ಷಗಾನದ ಬಗ್ಗೆ ಅಪಾರವಾದ ಆಸಕ್ತಿಯನ್ನು ಬೆಳೆಸಿಕೊಂಡಿದ್ದ ಇವರು,ಹತ್ತನೆಯ ತರಗತಿಯವರೆಗಿನ ಶಿಕ್ಷಣವನ್ನು ಪಡೆದ ನಂತರ ಆಗಿನ ಪ್ರಸಿದ್ಧ ಸ್ತ್ರೀಪಾತ್ರಧಾರಿಯಾಗಿದ್ದ ತನ್ನ ತಂದೆಯರಲ್ಲಿ ಮತ್ತು ಹೆರಂಜಾಲು ವೆಂಕಟರಮಣ ಗಾಣಿಗರಲ್ಲಿ ಯಕ್ಷಗಾನದ ಹೆಜ್ಜೆಗಾರಿಕೆ, ತಾಳ ಲಯಜ್ಞಾನವನ್ನು ಪಡೆದ ಇವರು ದಿ.ಎಂ.ಎಂ.ಹೆಗ್ಡೆಯವರ ಯಜಮಾನಿಕೆಯ ಮಾರಣಕಟ್ಟೆ ಮೇಳದಲ್ಲಿ ಗೆಜ್ಜೆಕಟ್ಟಿದರು.. ಅಲ್ಲಿ ನಾಲ್ಕು ವರ್ಷಗಳ ಕಾಲ ಬಾಲಗೋಪಾಲ, ಒಡ್ಡೋಲಗ ಮತ್ತು ಪೀಠಿಕೆ ಸ್ತ್ರೀವೇಷಗಳನ್ನು ನಿರ್ವಹಿಸಿದರು..ನಂತರ ಕಮಲಶಿಲೆ ಮೇಳದಲ್ಲಿ ಐದು ವರ್ಷ, ಮಂದಾರ್ತಿ ಮೇಳದಲ್ಲಿ ಮೂರು ವರ್ಷ ಸೇವೆಸಲ್ಲಿಸಿದ  ಇವರು ಪ್ರಸ್ತುತ ಕೋಟ ಅಮೃತೇಶ್ವರಿ ಮೇಳದ ಪ್ರಧಾನ ಸ್ತ್ರೀಪಾತ್ರಧಾರಿಯಾಗಿದ್ದು, ಅಲ್ಲಿ ಏಳು ವರ್ಷಗಳಿಂದ ಸತತವಾಗಿ ಸೇವೆ ಸಲ್ಲಿಸುತ್ತಿದ್ದಾರೆ..


ಮನಮೋಹಕ ರೂಪಲಾವಣ್ಯ,ಆಕರ್ಷಕ ಅಂಗಸೌಷ್ಠವ,ಕಣ್ಮನ ಸೆಳೆಯುವ ವೇಷಭೂಷಣ,ಲಾಲಿತ್ಯಪೂರ್ಣ ನಾಟ್ಯಶೈಲಿ, ಪ್ರಬುದ್ಧ ರಂಗನಡೆ ಮತ್ತು ಹಿತಮಿತವಾದ ಮಾತುಗಾರಿಕೆ ಮತ್ತು ಸ್ತ್ರೀಪಾತ್ರಕೋಪ್ಪುವ ಸುಸ್ವರದ ಮೂಲಕ ಎಲ್ಲ ರೀತಿಯ ಸ್ತ್ರೀಪಾತ್ರಗಳನ್ನು ಸುಲಲಿತವಾಗಿ ನಿರ್ವಹಿಸುವ ಇವರು ಅಷ್ಟೇ ಸಮರ್ಥವಾಗಿ ಪುರುಷಪಾತ್ರಗಳನ್ನು ನಿಭಾಯಿಸಬಲ್ಲರು.ದ್ರೌಪತಿ,ಸುಭದ್ರೆ, ಭ್ರಮರಕುಂತಲೆ,ಶಶಿಪ್ರಭೆ,ಆಸ್ತಿ ,ಪ್ರಹಸ್ತಿಮೀನಾಕ್ಷಿ ಮೊದಲಾದ ವೀರಾವೇಶದ ಕಸೆವೇಷಗಳಲ್ಲಿ ಆರ್ಭಟಿಸುತ್ತ ರಂಗದಲ್ಲಿ ಮಿಂಚು ಹರಿಸಬಲ್ಲ ಇವರು,ಸೀತೆ, ಸಾವಿತ್ರಿ, ಚಂದ್ರಮತಿ,ರುಚಿಮತಿ, ದಾಕ್ಷಾಯಿಣಿ ಮೊದಲಾದ ವೇಷಗಳನ್ನು ಬಾವಪೂರ್ಣವಾಗಿ ಅಭಿನಯಿಸಬಲ್ಲರು..ಚಿತ್ರಾಕ್ಷಿ,ಮೋಹಿನಿ,ಮೇನಕೆ ಮೊದಲಾದ ಶೃಂಗಾರಭರಿತ ಪಾತ್ರಗಳಲ್ಲಿ ತನ್ನ ಮೋಹಕ ರಂಗನಡೆಯಿಂದ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಇವರು,ಕೃಷ್ಣ ವೃಷಸೇನ,ಲವ ಕುಶ,ಅಭಿಮನ್ಯು,ಶೂರಸೇನ ಮೊದಲಾದ ಪುರುಷ ಪಾತ್ರಗಳನ್ನು ನಿಭಾಯಿಸಬಲ್ಲರು..



ಹೆರಂಜಾಲು ಗೋಪಾಲ ಗಾಣಿಗ,ಮೊಳಹಳ್ಳಿ ಕೃಷ್ಣ ಮೊಗವೀರ,ಆರ್ಗೋಡು ಮೋಹನದಾಸ 

ಶೆಣೈ,ಮಂದಾರ್ತಿ ರಘುರಾಮ ಮಡಿವಾಳ,ಹಳ್ಳಾಡಿ ಜನಾರ್ದನ ಆಚಾರ್ಯ, ಮಾಳ್ಕೊಡು ಜಗದೀಶ ಹೆಗಡೆ,ಕೋಟ ಸುರೇಶ ಬಂಗೇರ,ಚಿಟ್ಟಾಣಿ ನರಸಿಂಹ ಹೆಗಡೆ,ಸಂಜೀವ ಶೆಟ್ಟಿ ಹೆನ್ನಾಬೈಲು, ಉಪ್ಪುಂದ ನಾಗೇಂದ್ರ ರಾವ್,ಕೊಂಡದಕುಳಿ ರಾಮಚಂದ್ರ ಹೆಗ್ಡೆ ಮೊದಲಾದ ಹಿರಿಯ ಕಲಾವಿದರೊಂದಿಗೆ ತಿರುಗಾಟ ನಡೆಸಿರುವ ಇವರು,ಬೆಂಗಳೂರು, ಮುಂಬೈ,ಹೈದರಾಬಾದ್,ಚೆನ್ನೈ, ದೆಹಲಿ ಮತ್ತು ಪಟ್ಲ ಪೌಂಡೇಶನ್ ವತಿಯಿಂದ ಒಮಾನ್ ಮೊದಲಾದ ವಿದೇಶಗಳಲ್ಲಿಯೂ ಸಹ ಕಾರ್ಯಕ್ರಮವನ್ನು ನೀಡಿ,ತನ್ನ ಕಲಾಪ್ರೌಢಿಮೆಯನ್ನು ಮರೆಸಿದ್ದಾರೆ..


ಸುಮಾರು ಹತ್ತೊಂಬತ್ತು ವರ್ಷಗಳಿಂದ ಯಕ್ಷರಂಗದಲ್ಲಿ ಸಲ್ಲಿಸುತ್ತಿರುವ ಇವರ ಪ್ರಾಮಾಣಿಕ ಕಲಾಸೇವೆಗಾಗಿ ಜೋಗಿ ಸಮಾಜ ಸೇವಾ ಸಂಘ ಕುಂದಾಪುರ ಇವರಿಂದ ಸನ್ಮಾನ,ಕರ್ನಾಟಕ ಕರಾವಳಿ ಮೈತ್ರಿಸಂಘ ಹೈದರಾಬಾದ್ ಇವರಿಂದ ಸನ್ಮಾನ,ಎಸ್.ಜಿ. ಕೆ ಗೆಳಯರ ಬಳಗ ಬೈದಬೆಟ್ಟು ಇವರಿಂದ ಸನ್ಮಾನ,ಮಣೂರು ಬೌಂಡರಿ ಹೊಳ್ಳ ಕುಟುಂಬಸ್ಥರಿಂದ ಸನ್ಮಾನ ಸೇರಿದಂತೆ ನಾಡಿನಾದ್ಯಂತ ಹಲವು ಸನ್ಮಾನ ಪುರಸ್ಕಾರಗಳು ಸಂದಿವೆ..


ಶ್ರೀಯುತರು ಶ್ರೀಮತಿ ಶಬರಿಯವರೊಂದಿಗೆ ಆದರ್ಶ  ದಾಂಪತ್ಯ ಜೀವನವನ್ನು  ನಡೆಸಿ ,ಅಶ್ವಿನ್ ಎಂಬ ಮುದ್ದು ಮಗನನ್ನು ಪಡೆದಿದ್ದು ಸಂತೃಪ್ತ ಜೀವನವನ್ನು ನಡೆಸುತ್ತಿದ್ದಾರೆ..


ಇವರಿಗೆ ಯಕ್ಷರಂಗದಲ್ಲಿ ಹೆಚ್ಚಿನ ಯಶಸ್ಸು ಪ್ರಾಪ್ತವಾಗಲಿ,ಇವರ ಸಾಧನೆ ಗಗನ ಚುಂಬಿಯಾಗಿ ಬೆಳೆಯಲಿ,ಕೋಟ ಶ್ರೀ ಅಮೃತೇಶ್ವರಿ ತಾಯಿಯೂ ಇವರ ಸಕಲ ಇಷ್ಟಾರ್ಥಗಳನ್ನು ಈಡೇರಿಸಲಿ ಎನ್ನುವುದು ನಮ್ಮ ಯಕ್ಷಮಂದಾರದ ಶುಭಹಾರೈಕೆ...


ಸಾಹಿತ್ಯ:ಹಾಲಾಡಿ ಸಂತೋಷ ಶೆಟ್ಟಿ..


ನಿರೂಪಣೆ:ಶ್ರೀಮತಿ ಅಮೃತಾ ಶೆಟ್ಟಿ...


ಯಕ್ಷಗಾನ ಕಲಾವಿದರ ಪರಿಚಯ ಸರಣಿಯ ಎಲ್ಲ ವಿಡಿಯೋಗಳು ನಮ್ಮಯಕ್ಷ💥ಮಂದಾರ ಯೂಟ್ಯೂಬ್ ಚಾನಲ್..ನಲ್ಲಿ ಲಭ್ಯವಿದೆ.. 

  

  

This is an exhibition of the achievements and life of yakshaartists.


Today's yakshakas are.. The yakshakinof the saint of the saint.. Amriteshwari Mela Award saga madava jogi nagur..


Mr. Dayananda Nagore and Lalitha were born on 25.06.1982 at Tenkabettu in Kambadakondu village in Byndoor taluk of Udupi district.


He had developed a keen interest in Yakshagana from childhood, and after his education till 10th standard, he had gained knowledge of yakshagana and rhythm in her father and her father, who was then a female character, and had a great deal of rhythm. There, balagopal, emperor and introduction performed female disguises for four years. He served for five years at The Kamalashila Mela and three years in The Mandarti Mela, currently the main female character of Kota Amritswari Mela, where he has been serving continuously for seven years.


The charming, attractive body, attractive costume, a loving dance style, He can play all kinds of female roles smoothly through mature ranganade, pleasant speech and feminine characters. He can play the roles of men equally efficiently. He can shines in heroic disguises like Draupati, Subhadra, Brahmarakuntala, Sasiprabhe, Prahastimeenakshi and others. He can hold the audience in erotic roles like Chitrakshi, Mohini, Menake and others, and can play male roles like Krishna Vrishasena, Lava Kusa, Abhimanyu, Shurasena.


Heranjalu Gopala Ganiga, Molahalli Krishna Mogaweera, Argodu Mohandas 

Shenani, Mandarthi Raghuram Madhavan, Haladi Acharya, Malkodu Jagadish Hegde, Kota Suresh Bangera, Chittani Narasimha Hegde, Sanjeeva Shetty Hennabailu, Uppanda Nagendra Rao, Kondakuli Ramachandra Hegde, etc. have also performed in Bangalore, Mumbai, Hyderabad, Chennai, Delhi and Patla Foundation and also have also made a show in Omen and has also made his art.


He has been in yakshagana for nearly nineteen years and is honoured by Jogi Social Service Association Kundapur, Karnataka Coastal Maitri Sangh Hyderabad, S.G. K. Gella's group has received many honors from Baidabetu, honoured by Manur Boundary Holla Saints and many other awards.


Mr. Sabari has been living an ideal marriage with Mrs. Sabari and has a beautiful son named Ashwin and leads a satisfying life.


May they achieve great success in yakshagana, may their achievements grow in the sky, and the mother of Kota Sri Amriteshwari to fulfill all their wishes.


Literature:Haladi Santosh Shetty..


Narration:Smt. Amrita Shetty...


All the videos of the Yakshagana Artistes Introduction Series are our yaksha💥mandar YouTube channel.. Available in.. 


ಯಕ್ಷಮಂದಾರ ವಿಡಿಯೋ ನೋಡಲೋಸುಗವಾಗಿ.


ವಾಹಿನಿಯ ಹೋಮ್ ಪೇಜ್ ಗಾಗಿ: https://www.youtube.com/channel/UCsrL


ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: https://www.facebook.com/groups/27334


No comments:

Post a Comment

#ಯಕ್ಷಮಂದಾರ - 51 | ಹೆನ್ನಾಬೈಲು ಸಂಜೀವ ಶೆಟ್ಟಿ | Hennabailu Sanjeeva Shetty | ಪ್ರಸಿದ್ದ ಸ್ತ್ರೀಪಾತ್ರದಾರಿ |

🌀ಯಕ್ಷ💥ಮಂದಾರ🌀 #ಯಕ್ಷಮಂದಾರ  - 51 | ಹೆನ್ನಾಬೈಲು ಸಂಜೀವ ಶೆಟ್ಟಿ | Hennabailu Sanjeeva Shetty | ಪ್ರಸಿದ್ದ ಸ್ತ್ರೀಪಾತ್ರದಾರಿ...