Sunday, November 1, 2020

#ಯಕ್ಷಮಂದಾರ - 37 | ಕಡಬಾಳ ಉದಯ ಹೆಗ್ಡೆ| Uday Hegde Kadabala | ಪೆರ್ಡೂರು ಮೇಳ |Perdoor mela | Yakshamandara

🌀ಯಕ್ಷ💥ಮಂದಾರ🌀

#ಯಕ್ಷಮಂದಾರ - 37 | ಕಡಬಾಳ ಉದಯ ಹೆಗ್ಡೆ| Uday Hegde Kadabala | ಪೆರ್ಡೂರು ಮೇಳ |Perdoor mela | Yakshamandara

ಇದು ಯಕ್ಷ ಕಲಾವಿದರ ಸಾಧನೆ ಮತ್ತು ಜೀವನಗಾಥೆಯ ಅನಾವರಣ... ಇಂದಿನ ನಮ್ಮ ಯಕ್ಷಸಾಧಕರು.ಬಡಗುತಿಟ್ಟಿನ ಸುಪ್ರಸಿದ್ದ ಪುರುಷ ಪಾತ್ರಧಾರಿ.. ಯುವ ಪ್ರೇಕ್ಷಕರ ಕಣ್ಮಣಿ ಕಡಬಾಳ ಉದಯ ಹೆಗಡೆಯವರು..... ಯಕ್ಷಗಾನ ಕಲೆಯು ಕಾಲದಿಂದ,ಕಾಲಕ್ಕೆ ಸಮಕಾಲೀನ ಕಲಾವಿದರ ಅತ್ಯಮೂಲ್ಯ ಕೊಡುಗೆಯಿಂದಾಗಿ,ತನ್ನ ಸಿದ್ಧಿ ಪ್ರಸಿದ್ಧಿಯನ್ನು ಹೆಚ್ಚಿಸಿಕೊಳ್ಳುತ್ತ,ವಿಶ್ವದಾದ್ಯಂತ ಸಂಪನ್ನಗೊಳ್ಳುತ್ತ ಬಂದಿದೆ...ಪೂರ್ವರಂಗದ ಪಡಿನೆರಳಿನಲ್ಲಿ,ವರ್ತಮಾನದ ಕಲಾವಿದರ ಪರಿಶ್ರಮ,ಶ್ರದ್ಧೆಯಿಂದ ಯಕ್ಷರಥ ಸಾಲಂಕೃತಗೊಂಡಿದೆ...ಪ್ರಸಕ್ತ ಕಾಲಮಾನದಲ್ಲಿ ಯಕ್ಷಗಾನವು,ಬಹು ಪ್ರಸಿದ್ಧಿಯನ್ನು ಗಳಿಸಿಕೊಂಡಿದೆ...ಪ್ರತಿಬಾನ್ವಿತರು,ಪದವೀಧರರು ಕೂಡ ಯಕ್ಷಗಾನದತ್ತ ಆಕರ್ಷಿತರಾಗಿ ಬದುಕುಕಟ್ಟಿಕೊಳ್ಳುದರ ಜೊತೆಗೆ ಕಲೆಯನ್ನು ಶ್ರೀಮಂತಗೊಳಿಸುತ್ತಿರುವುದು ಸಂತೋಷದ ಸಂಗತಿ. ಯಕ್ಷರಂಗಕ್ಕೆ ಕೀರ್ತಿ ತಂದುಕೊಡುತ್ತಿರುವ ಪ್ರತಿಭಾಸಂಪನ್ನ ಯುವ ಕಲಾವಿದರ ಸಾಲಿನಲ್ಲಿ ಕಡಬಾಳ ಉದಯ ಹೆಗಡೆಯವರ ಹೆಸರು ಬಹು ಪ್ರಸಿದ್ದವಾಗಿದೆ...ಯಕ್ಷರಂಗದ ಕಣ್ಮಣಿಯೆಂದೇ ಪ್ರಸಿದ್ದರಾದ ದಿ. ಕಣ್ಣಿಮನೆ ಗಣಪತಿ ಭಟ್ಟರ ಗಾಢ ಪ್ರಭಾವದಿಂದ ರಂಗಕ್ಕೆ ಬಂದ ಹೆಗಡೆಯವರು ತನ್ನದೇ ಆದ ವಿಶಿಷ್ಟ ಪ್ರತಿಭೆ,ಶೈಲಿ,ಆಕರ್ಷಕ ಕುಣಿತ,ಸುಂದರ ವೇಷಗಾರಿಕೆ, ಸತ್ವಪೂರಿತವಾದ ಮಾತುಗಾರಿಕೆಯ ಶೈಲಿಯಿಂದ ತನ್ನದೇ ಆದ ಅಸಂಖ್ಯಾತ ಅಭಿಮಾನಿಗಳ ಸಮೂಹವನ್ನೇ ಸೃಷ್ಟಿಸಿಕೊಂಡಿದ್ದಾರೆ. ಶಿರಸಿ ಸಮೀಪದ ಕಡಬಾಳದ ಮಧುಕೇಶ್ವರ ಹೆಗಡೆ ಮತ್ತು ಮಹಾದೇವಿ ಅಮ್ಮನವರ ಪುತ್ರನಾಗಿ ಜನಿಸಿದ ಹೆಗಡೆಯವರು,ಯಕ್ಷಗಾನ ಕಲೆಯ ಮೇಲಿನ ಅಭಿಮಾನದಿಂದ ಶಿರಸಿ ಕೋಳಿಗಾರು ಮೇಳದಲ್ಲಿ ರಂಗಪ್ರವೇಶ ಮಾಡಿದರು..ನಂತರ ಬೆಂಗಳೂರಿನ ಯಕ್ಷದೇಗುಲ ತಂಡವನ್ನು ಸೇರಿಕೊಂಡು ಅಲ್ಲಿನ ಕಲಾವಿದರ ನಡೆ,ನುಡಿ ವೇಷಗಾರಿಕೆಯನ್ನು ನೋಡುತ್ತ, ತನಗೆ ಹುಟ್ಟಿನಿಂದಲೇ ಬಂದಿದ್ದ,ಪ್ರತಿಭೆಯನ್ನು ಹೆಚ್ಚಿಸಿಕೊಳ್ಳುತ್ತ ಪ್ರಬುದ್ಧ ವೇಷಗಾರಿಕೆಯ ಕಲೆಯನ್ನು ಸಿದ್ಧಿಸಿಕೊಂಡರು...ನಂತರದ ದಿನದಲ್ಲಿ ಪೆರ್ಡೂರು ಮೇಳದಲ್ಲಿ ಸೇವೆಸಲ್ಲಿಸುತ್ತ,ಕಲಾಭಿಮಾನಿಗಳ ಪಾಲಿಗೆ ಮೆಚ್ಚಿನ ಕಲಾವಿದರಾಗಿ ಕಾಣಿಸಿಕೊಂಡರು..ಪ್ರಸ್ತುತ ಹಾಲಾಡಿ ಮೇಳದಲ್ಲಿ ಸೇವೆಸಲ್ಲಿಸುತ್ತಿದ್ದಾರೆ.. ತನ್ನ ಅತ್ಯುತ್ತಮ ಅಭಿನಯದಿಂದ ಸುದರ್ಶನ ಪಾತ್ರಕ್ಕೆ ಜೀವತುಂಬಿದ ಇವರು ಅಭಿಮಾನಿಗಳಿಂದ "ಯಕ್ಷಸುದರ್ಶನ" ಎಂದು ಕರೆಸಿಕೊಂಡವರು... ಪೌರಾಣಿಕ ಅಥವಾ ನೂತನ ಪ್ರಸಂಗದ ಯಾವುದೇ ಪಾತ್ರವಾಗಲಿ ಅದನ್ನು ಅಭಿನಯಿಸುವ ಚಾಕಚಕ್ಯತೆಯನ್ನು ಹೊಂದಿರುವ ಇವರಿಗೆ ಸುದರ್ಶನ,ಕೀಚಕ,ವಿಷ್ಣು,ಕೃಷ್ಣ,ಸುಂದರರಾವಣ, ಸಾಲ್ವ,ಈಶ್ವರ,ಬಾಹುಕ,ಚಂದ್ರಹಾಸ, ಮದನ,ಲವ,ಕುಶ,ಬರ್ಬರಿಕ,ಸುಧನ್ವ,ಧರ್ಮಾಂಗದ ಮೊದಲಾದ ಪಾತ್ರಗಳು ಕೀರ್ತಿ ತಂದುಕೊಟ್ಟಿದೆ ಯಕ್ಷಗಾನ ಕಲಾವಿದೆ ಅಶ್ವಿನಿ ಕೊಂಡದಕುಳಿಯವರನ್ನು ಬಾಳಸಂಗಾತಿಯಾಗಿ ಸ್ವೀಕರಿಸಿದ ಇವರು ಸಂತೃಪ್ತ ಜೀವನವನ್ನು ನಡೆಸುತ್ತಿದ್ದಾರೆ ಇವರ ಮುಂದಿನ ಯಕ್ಷಪಯಣ ಸುಗಮವಾಗಿ ಸಾಗಲಿ..ಶ್ರೀ ಅನಂತಪದ್ಮನಾಭ ಸ್ವಾಮಿಯೂ ಇವರ ಸರ್ವ ಇಷ್ಟಾರ್ಥವನ್ನು ಈಡೇರಿಸಲಿ ಎನ್ನುವುದು ಯಕ್ಷಮಂದಾರದ ಶುಭಹಾರೈಕೆ.. ಸಾಹಿತ್ಯ ಮತ್ತು ನಿರ್ವಹಣೆ:ಹಾಲಾಡಿ ಸಂತೋಷ ಶೆಟ್ಟಿ.. ನಿರೂಪಣೆ:ಶ್ರೀಮತಿ ಅಮೃತಾ ಶೆಟ್ಟಿ...

This is the exhibition of the achievements and life of yakshaartists... Our yakshaganas are the famous male characters of the badgutitt. The young audience's kanmani kadabala udayhegde..... Yakshagana art has been enriching the world with its precious contribution from time to time by contemporary artists. The work of the present artists is diligently sold in the shadow of the east. Yakshagana has gained popularity in the present time... It is a pleasure that every graduate and every graduate are attracted to yakshagana and live in the art. The name of Kadabala Uday Hegde is very famous among the talented young artistes who are giving fame to the yakshagana. The yakshagana is known as the eye-opener. Hegde, who came to the stage under the deep influence of Kannimane Ganapati Bhatt, has created a large crowd of fans with his own unique genius, style, attractive dance, beautiful disguise and a vivid, and powerful speech. Born as the son of Madhukeshwara Hegde and Mahadevi Amma from Kadabala near Sirsi, Hegde entered the stage at TheChirisikoli Koligaru Mela with pride in yakshagana art. Then he joined the Yakshatemple team in Bangalore and looked at the artists' manners and manners, and made a masterpiece of dress ing, growing up talent skill. The following day, he served at the Perdur Mela and appeared as a favourite artist for the artistes. Currently serving in Haladi Mela. He has been alive with his outstanding performance and he is known by his fans as "Yakshasudarshana". He has the ability to play any character of a mythological or new episode, and has gained fame in the roles like Sudarshana, Keechaka, Vishnu, Krishna, Sundara Ravana, Salva, Ishwara, Bahuka, Chandrahasa, Madan, Lava, Kusha, Barrika, Sudhanva, Dharmanga etc. Yakshagana artistEs Ashwini Kondakuli as his partner and leads a satisfying life May his next journey of yakshagana go smoothly. Wishing sri ananthapadmanabha swamy to fulfill all his wishes. Literature & Management:Haladi Santosh Shetty.. Narration:Smt. Amrita Shetty...

ಯಕ್ಷಮಂದಾರ ವಿಡಿಯೋ ನೋಡಲೋಸುಗವಾಗಿ.

ವಾಹಿನಿಯ ಹೋಮ್ ಪೇಜ್ ಗಾಗಿ: https://www.youtube.com/channel/UCsrL

ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: https://www.facebook.com/groups/27334

No comments:

Post a Comment

#ಯಕ್ಷಮಂದಾರ - 51 | ಹೆನ್ನಾಬೈಲು ಸಂಜೀವ ಶೆಟ್ಟಿ | Hennabailu Sanjeeva Shetty | ಪ್ರಸಿದ್ದ ಸ್ತ್ರೀಪಾತ್ರದಾರಿ |

🌀ಯಕ್ಷ💥ಮಂದಾರ🌀 #ಯಕ್ಷಮಂದಾರ  - 51 | ಹೆನ್ನಾಬೈಲು ಸಂಜೀವ ಶೆಟ್ಟಿ | Hennabailu Sanjeeva Shetty | ಪ್ರಸಿದ್ದ ಸ್ತ್ರೀಪಾತ್ರದಾರಿ...