ಯಕ್ಷಮಂದಾರ
#ಯಕ್ಷಮಂದಾರ - 40 | ಗಣೇಶ ನೆಲ್ಲಿಕಟ್ಟೆ | Ganesh Nellikatte | Yakshagana | Mandarthi Mela | ಮಂದಾರ್ತಿ ಮೇಳ
ಯಕ್ಷರಂಗದ ಬಡಗುತಿಟ್ಟಿನ ಶ್ರುತಿಬದ್ದ ಶೈಲಿಯ ಜನಪ್ರಿಯ ಯುವ ಬಾಗವತರಲ್ಲಿ ಯುವಕಣ್ಮಣಿ ಗಣೇಶ ನೆಲ್ಲಿಕಟ್ಟೆಯರದ್ದು ಚಿರಪರಿಚಿತ ಹೆಸರು.
ಇವರು ಉಡುಪಿ ಜಿಲ್ಲೆಯ ಯಕ್ಷಕಾಶಿಯೆಂದೇ ಪ್ರಸಿದ್ಧವಾದ ಕುಂದಾಪುರ ತಾಲೂಕಿನ ಅಂಪಾರು ಸಮೀಪದ ನೆಲ್ಲಿಕಟ್ಟೆಯ ಶ್ರೀ ನಾರಾಯಣ ಮೊಗವೀರ ಮತ್ತು ಶ್ರೀಮತಿ ಗುಲಾಬಿ ದಂಪತಿಗಳ ನಾಲ್ಕು ಗಂಡು ಮತ್ತು ಒಂದು ಹೆಣ್ಣು ಮಕ್ಕಳಲ್ಲಿ ಪ್ರಥಮ ಪುತ್ರನಾಗಿ ದಿನಾಂಕ:12.07.1987ರಲ್ಲಿ ಜನಿಸಿದರು ....
ಪ್ರಾಥಮಿಕ ವಿದ್ಯಾಭ್ಯಾಸವನ್ನು ನೆಲ್ಲಿಕಟ್ಟೆ ಜೈಭಾರತಿ ಶಾಲೆಯಲ್ಲಿ ಪಡೆದ ಇವರು,ಪ್ರೌಢ ಶಿಕ್ಷಣವನ್ನು ಪಡೆಯಲು ಅಂಪಾರು ಸಂಜಯಗಾಂದಿ ಪ್ರೌಢಶಾಲೆಗೆ ಸೇರಿದರು...ಅಲ್ಲಿ ಎಂಟನೆಯ ತರಗತಿಯ ವಿದ್ಯಾರ್ಥಿಯಾಗಿರುವಾಗಲೇ ಯಕ್ಷಗಾನದ ಕುರಿತ ಅಭಿರುಚಿಯಿಂದ,ವಿದ್ಯಾಭ್ಯಾಸಕ್ಕೆ ವಿದಾಯ ಹೇಳಿ ಯಕ್ಷಗಾನ ಕಲೆಯ ಆಕರ್ಷಣೆಗೆ ಒಳಗಾಗಿ ಯಕ್ಷಗಾನದ ಪ್ರಮುಖ ಭಾಗವಾದ ಬಾಗವತಿಕೆಯನ್ನು ಆರಿಸಿಕೊಂಡರು...ಮಂದಾರ್ತಿ ಯಕ್ಷಗಾನ ಕೇಂದ್ರದಲ್ಲಿ ಯಕ್ಷಗುರುಗಳಾಗಿದ್ದ ದಿವಂಗತ.ಗುಂಡ್ಮಿ ರಘುರಾಮ ಗಾಣಿಗರಲ್ಲಿ ತಾಳ ಲಯ ರಾಗದ ಜ್ಞಾನವನ್ನು ಪಡೆದುಕೊಂಡ ಇವರು,ಯಕ್ಷರಂಗದ ಹಿರಿಯ ಬಾಗವತ ಪ್ರಾಚಾರ್ಯ ಕೆ.ಪಿ.ಹೆಗಡೆ ಮತ್ತು ಮದ್ದಳೆವಾದಕರಾದ ಎನ್.ಜಿ.ಹೆಗಡೆಯವರ ಗುರುತನದಲ್ಲಿ ಪ್ರಬುದ್ಧ ಬಾಗವತರಾಗಿ ಮೂಡಿಬಂದರು..
ಹಾಲಾಡಿ ಮೇಳದಲ್ಲಿ ಪ್ರಥಮ ಬಾರಿಗೆ ಸಂಗೀತಗಾರನಾಗಿ ರಂಗಮಂಚವೇರಿದ ಇವರು ಎರಡು ವರ್ಷ ಹಾಲಾಡಿ ಮೇಳದಲ್ಲಿ ಸೇವೆಸಲ್ಲಿಸಿದ ನಂತರ ಎರಡು ವರ್ಷ ಸೌಕೂರು,ಒಂದು ವರ್ಷ ಸಾಲಿಗ್ರಾಮ ಮೇಳದಲ್ಲಿ ಸೇವೆ ಸಲ್ಲಿಸಿ ಕಳೆದ ಏಳು ವರ್ಷಗಳಿಂದ ನಿರಂತರವಾಗಿ ಮಂದಾರ್ತಿ ಮೇಳದಲ್ಲಿ ಸಹಬಾಗವತರಾಗಿ ಸೇವೆಸಲ್ಲಿಸುತ್ತಿದ್ದಾರೆ..
ರಾಘವೇಂದ್ರ ಮಯ್ಯ,ನಗರ ಸುಬ್ರಹ್ಮಣ್ಯ ಆಚಾರ್ಯ, ಪರಮೇಶ್ವರ ನಾಯ್ಕ ಕಾನಗೋಡು, ಸೂರಾಲು ರವಿ, ಹೊಸಂಗಡಿ ರವೀಂದ್ರ ಶೆಟ್ಟಿ,ಸದಾಶಿವ ಅಮೀನ್, ಗಣೇಶ ಶೆಟ್ಟಿ ಬೆಳ್ವೆ ಮೊದಲಾದ ಹಿರಿಯ ಬಾಗವತರ ಸಾಂಗತ್ಯದಲ್ಲಿ ತಿರುಗಾಟ ನಡೆಸಿದ್ದು,ಗೋಪಾಡಿ ಉಮೇಶ ಸುವರ್ಣ,ರಾಘವೇಂದ್ರ ಮಯ್ಯ,ಸುಬ್ರಹ್ಮಣ್ಯ ಆಚಾರ್ಯ,ಪರಮೇಶ್ವರ ನಾಯ್ಕ,ಸೂರಾಲು ರವಿ ಇವರು ನೀಡಿದ ಸಲಹೆ ಮತ್ತು ಮಾರ್ಗದರ್ಶನವನ್ನು ಮುಕ್ತ ಮನಸ್ಸಿನಿಂದ ಹೊಗಳುವ ಇವರು,ತನ್ನ ಜೀವನದಲ್ಲಿ ಕಲಾ ರಂಗದಲ್ಲಿ ಉನ್ನತಿಯನ್ನು ಸಾಧಿಸಲು ಕಾರಣಿಕರ್ತರಾದ ದಿ.ನಗರ ಸುಬ್ರಹ್ಮಣ್ಯ ಆಚಾರ್ಯರ ಅಕಾಲಿಕ ಅಗಲುವಿಕೆ ನಮ್ಮಿಂದ ಮರೆಯಾಗುವಂತದಲ್ಲ ಎಂದು ವಿಷಾದ ವ್ಯಕ್ತಪಡಿಸುತ್ತಿದ್ದಾರೆ.
ತನ್ನ ಕಲಾಜೀವನದಲ್ಲಿ ನರಾಡಿ ಭೋಜರಾಜ ಶೆಟ್ಟಿ,ಮಂದಾರ್ತಿ ರಘು ಮಡಿವಾಳ,ಆಜ್ರಿ ಗೋಪಾಲಗಾಣಿಗ,ಆರ್ಗೋಡು,ನಿಟ್ಟೂರು ಅನಂತ ಹೆಗಡೆ,ಹೊಳೆಕೊಪ್ಪ ಜಯಾನಂದ,ಗುಂಡಿಬೈಲು ಗಣಪತಿ ಭಟ್,ಕೆಮ್ಮಣ್ಣು ಪ್ರವೀಣ್ ಗಾಣಿಗ, ಕೃಷ್ಣಯಾಜಿ,ಕೊಂಡದಕುಳಿ,ಕೋಡಿ ವಿಶ್ವನಾಥ ಗಾಣಿಗ, ಬೆದ್ರಾಡಿ ನರಸಿಂಹ ಮೊದಲಾದ ಹಿರಿಯ ಕಲಾವಿದರನ್ನು ರಂಗದಲ್ಲಿ ಕುಣಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ...
ಕರಾವಳಿ ಮಲೆನಾಡು ಪ್ರದೇಶದಲ್ಲಷ್ಟೇ ಅಲ್ಲದೆ ಬೆಂಗಳೂರು, ಮುಂಬೈ, ಹೈದರಾಬಾದ್ ಮತ್ತು ಉತ್ತರ ಕರ್ನಾಟಕ ಬಾಗದಲ್ಲಿ ತಿರುಗಾಟ ನಡೆಸಿದ್ದಾರೆ.ಮಳೆಗಾಲದ ತಿರುಗಾಟದಲ್ಲಿ ಶ್ರಿ ಮಹಾಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿ ಹಾಲಾಡಿ ಮತ್ತು ಯಕ್ಷಸೌರಭ ಪ್ರವಾಸಿ ಯಕ್ಷಗಾನ ಮಂಡಳಿ ಕುಂದಾಪುರ ಇದರಲ್ಲಿ ಬಾಗವತರಾಗಿ ತಿರುಗಾಟ ನಡೆಸಿದ್ದಾರೆ..
ಸುಶ್ರಾವ್ಯವಾದ ಕಂಠಸಿರಿಯನ್ನು ಹೊಂದಿರುವ ಇವರು ರಾಗ,ತಾಳ,ಲಯದಲ್ಲಿ ಖಚಿತತೆ ಮತ್ತು ರಂಗದಲ್ಲಿ ನಿಖರತೆಯನ್ನು ಹೊಂದಿದ್ದು,ರಂಗದಲ್ಲಿ ತನ್ಮಯತೆಯಿಂದ ತನ್ನ ಗಾನಮಾದುರ್ಯವನ್ನು ಹರಿಸಿ ಪ್ರೇಕ್ಷಕರನ್ನು ಸಂಗೀತಲೋಕದಲ್ಲಿ ತೇಲಿಸಬಲ್ಲ ಪ್ರತಿಭಾವಂತ ಯುವ ಬಾಗವತರು..ಕರುಣೆ,ವೀರ,ಶೃಂಗಾರ ಮತ್ತು ಭಕ್ತಿಪ್ರಧಾನ ರಸಗಳಲ್ಲಿ ಗಾನ ಸಿರಿಯನ್ನು ಹೊರಹೊಮ್ಮಿಸಬಲ್ಲ ಇವರು,ಸುಧನ್ವ ಮೋಕ್ಷ, ನಳದಮಯಂತಿ,ಕರ್ಣಾರ್ಜುನ ಕಾಳಗ ಮೊದಲಾದ ಪ್ರಸಂಗದಲ್ಲಿ ತನ್ನ ಏರುಶ್ರುತಿಯಲ್ಲಿ ಹಾಡಿ ರಂಗದಲ್ಲಿ ಸಂಚಲನವನ್ನು ಮೂಡಿಸಬಲ್ಲ ಪ್ರತಿಭಾವಂತರು..
ಸತತ ಹನ್ನೆರಡು ವರುಷಗಳಿಂದ ಯಕ್ಷ ಕಲಾಮಾತೆಯ ಸೇವೆಸಲ್ಲಿಸುತ್ತಿರುವ ಇವರು...ನೆಲ್ಲಿಕಟ್ಟೆ ಜೈಭಾರತಿ ಶಾಲೆಯಲ್ಲಿ ನಡೆದ ಶಾರದೋತ್ಸವ ಸಮಿತಿಯ ವತಿಯಿಂದ ಹುಟ್ಟೂರ ಸನ್ಮಾನ,ಅಂಪಾರು ಗಣೇಶೋತ್ಸವ ಸಮಿತಿಯ ವತಿಯಿಂದ ಸನ್ಮಾನ,ನೆಲ್ಲಿಕಟ್ಟೆ ಗೆಳೆಯರ ಬಳಗದಿಂದ ಸನ್ಮಾನ, ಮೊಳಹಳ್ಳಿ ಗೆಳೆಯರ ಬಳಗದಿಂದ ಸನ್ಮಾನ ಸೇರಿದಂತೆ ಹಲವು ಕಡೆ ಸನ್ಮಾನ ಪುರಸ್ಕಾರಗಳನ್ನು ಪಡೆದುಕೊಂಡಿದ್ದಾರೆ...
2012ರಲ್ಲಿ ಶ್ರೀಮತಿ ಸತ್ಯವತಿಯವರೊಂದಿಗೆ ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡಿದ ಇವರು ತನ್ಮಯ್ ಮತ್ತು ತಸ್ಮಯ್ ಎಂಬ ಎರಡು ಮುದ್ದು ಮಕ್ಕಳನ್ನು ಪಡೆದು ಸಂತೃಪ್ತ ಜೀವನವನ್ನು ನಡೆಸುತ್ತಿದ್ದಾರೆ...
ಇವರ ಮುಂದಿನ ಕಲಾಪಯಣ ಸುಗಮವಾಗಿ ಸಾಗಲಿ,ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಅಮ್ಮನವರು ಆಯುರಾರೋಗ್ಯ,ಸುಖ ಸಮೃದ್ಧಿಯನ್ನು ನೀಡಲಿ ಎನ್ನುವುದು ನಮ್ಮ ಯಕ್ಷಮಂದಾರದ ಶುಭಹಾರೈಕೆ.....
ಸಾಹಿತ್ಯ: ಹಾಲಾಡಿ ಸಂತೋಷ ಶೆಟ್ಟಿ...
ನಿರೂಪಣೆ:ಶ್ರೀಮತಿ ಅಮೃತಾ ಶೆಟ್ಟಿ...
Yakshamandar
The famous young bhagavatha of the srutibada style of yaksharanga is the famous name of Ganesh anelliketta.
He was born on 12.07.1987 as the first son of four sons and one daughter of Sri Narayana Mogaveera and Mrs. Rose of Nellikatte near Ampar in Kundapur taluk, known as Yakshakashi in Udupi district .
He received primary education at Jai Bharathi School, Nellikate and joined The Sanjayagandi High School in Ampar to get secondary education. As a student of the eighth grade, he was interested in yakshagana and was attracted to the yakshagana art and chose Bagavatike, an important part of yakshagana. He gained knowledge of the tune of tala in the late Gundmi Raghuram Ganiga, who was yakshagana guru at the Centre of Mandarthi Yakshagana, and he became a mature man in the guruship of Yakshagana veteran Siddharth Agarwal K.P.Hegde and the madalavada.
He has been a musician for the first time in haladi mela and has been working in the Mandarti Mela for two years after serving in Haladi Mela for two years and serving in Saligramam mela for the past seven years.
Raghavendra Mayya, Nagar Subramanya Acharya, Parameshwara Nayak Kanagodu, Suralu Ravi, Hosangadi Ravindra Shetty, Sadashiv Amin, Ganesh Shetty Belve, etc., gopadi Suvarna, Raghavendra Mayya, Subramanya Acharya, Parameshwara Nayak, Suralu Ravi, who has been a great person to promote his career in art, is a great part of his life.
He is credited with dancing in the field of veteran artistes like Naradi Bhojaraja Shetty, Mandarthi Raghu Madhavan, Ajri Gopalganiga, Argodu, Nittoor Anantha Hegde, Holekoppa Jayananda, Gundibailu Ganapati Bhatt, Kemmannu Praveen Ganiga, Krishnayaji, Kondakuli, Kodi Vishwanath Ganiga, Bedradi Narasimha.
Sri Mahaganapathi Tourist Yakshagana Mandal Haladi and Yakshagana Bharadwaj Yakshagana Mandal, Kundapur, have been travelling in the coastal Malda region as well as in Bangalore, Mumbai, Hyderabad and North Karnataka.
With a melodious voice, he is a talented young man who is perfect in tune, rhythm, rhythm, and accuracy in the stage, and can sing his musicwith a sense of humour and music. He is a genius who can sing in the singing of karuna, heroic, erotic and bhakti-pradhana juices, singing in his singing and singing in the field of singing in the context of Sudhanva Moksha, Naladamayanti, Karnarjuna Battle etc.
He has been serving the Yaksha Kalamata for twelve years in a row. The Sharda Utsav Committee held at Nellikette Jai Bharathi School has won honors from the Village Council, the Ampar Ganeshotsav Samiti, the honour from the Nellikatte Friends Group, the Honour from the Molahalli Friends Group.
ಯಕ್ಷಮಂದಾರ ವಿಡಿಯೋ ನೋಡಲೋಸುಗವಾಗಿ.
ವಾಹಿನಿಯ ಹೋಮ್ ಪೇಜ್ ಗಾಗಿ: https://www.youtube.com/channel/UCsrL
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: https://www.facebook.com/groups/27334
No comments:
Post a Comment