Tuesday, September 29, 2020

#ಯಕ್ಷಮಂದಾರ - 26 | ಪಂಜು ಪೂಜಾರಿ ಬಗ್ವಾಡಿ | Panju Poojaary Bagvadi | ಕಮಲಶಿಲೆ | ಸ್ತ್ರೀಪಾತ್ರದಾರಿ | Part 26

🌀ಯಕ್ಷ💥ಮಂದಾರ🌀


#ಯಕ್ಷಮಂದಾರ - 26 | ಪಂಜು ಪೂಜಾರಿ ಬಗ್ವಾಡಿ | Panju Poojaary Bagvadi | ಕಮಲಶಿಲೆ | ಸ್ತ್ರೀಪಾತ್ರದಾರಿ | Part 26

ಇದು ಯಕ್ಷ ಕಲಾವಿದರ ಸಾಧನೆ ಮತ್ತು ಜೀವನಗಾಥೆಯ ಅನಾವರಣ. ಇಂದಿನ ನಮ್ಮ ಯಕ್ಷಸಾಧಕರು ಬಡಗಿನ ಬೆಡಗಿನ ಯಕ್ಷಕನ್ಯೆ,ಕಮಲಶಿಲೆ ಮೇಳದ ಪ್ರಧಾನ ಸ್ತ್ರೀಪಾತ್ರದಾರಿ ಪಂಜು ಕುಮಾರ್ ಬಗ್ವಾಡಿ.. ಶ್ರೀಯುತರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬಗ್ವಾಡಿಯಲ್ಲಿ ಶ್ರೀ ಶೀನ ಪೂಜಾರಿ ಮತ್ತು ಶ್ರೀಮತಿ ತುಂಗಾ ದಂಪತಿಗಳ ಪುತ್ರನಾಗಿ ದಿನಾಂಕ:24.04.1983ರಲ್ಲಿ ಜನಿಸಿದರು.. ಬಾಲ್ಯದಲ್ಲಿಯೇ ಯಕ್ಷಗಾನದ ಬಗ್ಗೆ ಅಪಾರವಾದ ಒಲವನ್ನು ಬೆಳೆಸಿಕೊಂಡಿದ್ದ ಇವರು,ಕ್ರಮೇಣ ಊರ ಸುತ್ತಮುತ್ತಲೂ ನಡೆಯುತ್ತಿರುವ ಬಯಲಾಟಗಳಿಂದ ಮತ್ತಷ್ಟು ಆಕರ್ಷಿತರಾಗಿ ಶಾಲಾಜೀವನದಲ್ಲಿಯೇ ಸೆಳ್ಕೊಡು ಮಹಿಷಮರ್ದಿನಿ ಕಲಾಸಂಘದಲ್ಲಿ ವೇಷ ಮಾಡುತ್ತಿದ್ದರು.. ನಂತರ ತನ್ನ ಏಳನೆಯ ತರಗತಿಯ ವಿದ್ಯಾಭ್ಯಾಸಕ್ಕೆ ವಿದಾಯ ಹೇಳಿದ ಇವರು ಯಕ್ಷಗುರುಗಳಾಗಿದ್ದ ವಿಶ್ವೇಶ್ವರ ಸೋಮಯಾಜಿಯವರಿಂದ ಯಕ್ಷಗಾನದ ತಾಳ,ಲಯವನ್ನು ಅಭ್ಯಸಿಸಿ ,ಆರ್ಗೋಡು ಮೋಹನದಾಸ ಶೆಣೈಯವರಿಂದ ಮಾತುಗಾರಿಕೆಯ ಜ್ಞಾನವನ್ನು ಪಡೆದುಕೊಂಡರು.ನಂತರ ಪ್ರಥಮ ಬಾರಿಗೆ ಸಾಲಿಗ್ರಾಮ ಮೇಳದಲ್ಲಿ ಗೆಜ್ಜೆ ಕಟ್ಟಿ ರಂಗಪ್ರವೇಶ ಮಾಡಿದ ಇವರು ಉಳಿದೆಲ್ಲವನ್ನು ರಂಗದಲ್ಲಿ ಹಿರಿಯ ಕಲಾವಿದರ ನಡೆ ನುಡಿಯನ್ನು ನೋಡಿ ಕಲಿತದ್ದೇ ಹೆಚ್ಚು.ಸಾಲಿಗ್ರಾಮದಲ್ಲಿ ಒಂದು ವರ್ಷ ಸೇವೆಸಲ್ಲಿಸಿದ ಇವರು ನಂತರ ಹಾಲಾಡಿ ಮೇಳದಲ್ಲಿ ಒಂದು ವರ್ಷ,ಬಗ್ವಾಡಿ ಮೇಳದಲ್ಲಿ ನಾಲ್ಕು ವರ್ಷ, ಸಿಗಂದೂರು ಮೇಳದಲ್ಲಿ ಒಂದು ವರ್ಷ, ಸೇವೆಸಲ್ಲಿಸಿ,ನಿರಂತರವಾಗಿ ಹದಿನೈದು ವರ್ಷಗಳಿಂದ ಕಮಲಶಿಲೆ ಮೇಳದಲ್ಲಿ ಸೇವೆಸಲ್ಲಿಸುತ್ತಿರುವ ಇವರು,ಪ್ರಸ್ತುತ ಕಮಲಶಿಲೆ ಮೇಳದ ಪ್ರಧಾನ ಸ್ತ್ರೀಪಾತ್ರದಾರಿಯಾಗಿ ದುಡಿಯುತ್ತಿದ್ದಾರೆ.. ಕಳೆದ ಇಪ್ಪತ್ತೆರಡು ವರ್ಷಗಳಿಂದ ಯಕ್ಷರಂಗದಲ್ಲಿ ದುಡಿಯುತಿರುವ ಇವರು ತನ್ನ ಶೃಂಗಾರ ಮತ್ತು ಬಾವನಾತ್ಮಕವಾದ ಸ್ತ್ರೀಪಾತ್ರಗಳ ಅತ್ಯುತ್ತಮವಾದ ನಿರ್ವಹಣೆಯಿಂದ ಅಪಾರವಾದ ಅಭಿಮಾನಿಗಳ ಪ್ರೀತಿ ಮತ್ತು ಗೌರವಾದರಗಳಿಗೆ ಪಾತ್ರರಾದ ಯುವ ಕಲಾವಿದರಾಗಿದ್ದು, ಸತ್ಯ ಹರಿಶ್ಚಂದ್ರ ಮಹಾತ್ಮೆಯ ಚಂದ್ರಮತಿ,ರಾಜ ಉಗ್ರಸೇನದ ರುಚಿಮತಿ,ಪಾಪಣ್ಣ ವಿಜಯದ ಗುಣಸುಂದರಿ, ರಾಜರುದ್ರಕೋಪದ ಸತ್ಯಶೀಲೆ, ಅಭಿಮನ್ಯು ಕಾಳಗದ ಸುಭದ್ರೆ,ನಳಚರಿತ್ರೆಯ ದಮಯಂತಿ ಮೊದಲಾದ ಬಾವನಾತ್ಮಕ ಪಾತ್ರಗಳನ್ನು ಅತ್ಯಂತ ಮನೋಜ್ಞವಾಗಿ ಅಭಿನಯಿಸುವ ಮೂಲಕ ಪ್ರೇಕ್ಷಕರ ಕಣ್ಣಿನಲ್ಲೂ ನೀರು ತರಿಸಬಲ್ಲ ಉತ್ತಮ ಪ್ರತಿಭಸಂಪನ್ನರು... ವೀರಾವೇಶದ ದ್ರೌಪತಿ,ಸುಭದ್ರೆ,ಶಶಿಪ್ರಭೆ,ಆಸ್ತಿ,ಪ್ರಹಸ್ತಿ ಭ್ರಮರಕುಂತಲೆ,ಮೀನಾಕ್ಷಿ ಮೊದಲಾದ ಕಸೇವೇಷಗಳನ್ನು ಸಮರ್ಥವಾಗಿ ನಿಭಾಯಿಸುವ ಇವರು, ಶೃಂಗಾರಭರಿತವಾದ ಮೇನಕೆ,ಚಿತ್ರಾಕ್ಷಿ ಮೋಹಿನಿ,ಚಂದ್ರಾವಳಿ, ಅಸಿಕೆ ಮುಂತಾದ ಪಾತ್ರಗಳಲ್ಲಿ ಮೋಹಕ ರೂಪಸಿರಿ ಮತ್ತು ಲಾಲಿತ್ಯಪೂರ್ಣ ನಾಟ್ಯಶೈಲಿಯಿಂದ ಪ್ರೇಕ್ಷಕರ ಮನಸೂರೆಗೊಳ್ಳಬಲ್ಲರು.. ಸೀತೆ,ಲಕ್ಷ್ಮೀದೇವಿ,ದಾಕ್ಷಾಯಿಣಿ,ಪಾರ್ವತಿ,ಶಾರದೆ,ಮಂಡೋದರಿ,ಚಿತ್ರಾಂಗದೆ ಮೊದಲಾದ ಪಾತ್ರಗಳಿಗೆ ನ್ಯಾಯ ಒದಗಿಸಿಕೊಡಬಲ್ಲ ಇವರು,ದೇವಿ ಮಹಾತ್ಮೆಯ ದೇವಿ ಮತ್ತು ಕಮಲಶಿಲೆ ಕ್ಷೇತ್ರ ಮಹಾತ್ಮೆಯ ದೇವಿಯ ಪಾತ್ರವನ್ನು ಬಹು ಸುಂದರವಾಗಿ ಅಭಿನಯಿಸಬಲ್ಲರು ಇವರು ಬೆಂಗಳೂರು, ಮುಂಬೈ, ಹೈದರಾಬಾದ್ ಮತ್ತು ಉತ್ತರಕರ್ನಾಟಕ ಬಾಗದಲ್ಲಿಯೂ ಕೂಡ ಮಳೆಗಾಲದಲ್ಲಿ ತಿರುಗಾಟ ನಡೆಸಿದ್ದಾರೆ.. ಆರ್ಗೋಡು ಮೋಹನದಾಸ ಶೆಣೈ,ಮಲ್ಪೆ ವಾಸುದೇವ ಸಾಮಗ,ಹೆನ್ನಾಬೈಲು ಸಂಜೀವ ಶೆಟ್ಟಿ,ಕೊಳಗಿ ಕೇಶವ ಹೆಗಡೆ,ಕಿಗ್ಗ ಹಿರಿಯಣ್ಣ ಆಚಾರ್ಯ, ಕುಮಟಾ ಗೋವಿಂದ ನಾಯ್ಕ ಮೊದಲಾದ ಹಿರಿಯ ಕಲಾವಿದರ ಸಾಂಗತ್ಯದಲ್ಲಿ ತಿರುಗಾಟ ನಡೆಸಿರುವ ಇವರು ತನ್ನ ಸೌಮ್ಯ ಮತ್ತು ಸರಳ ಗುಣಗಳಿಂದ ಜನಮನ್ನಣೆ ಗಳಿಸಿದ್ದು,ಹಿರಿಯ ಕಲಾವಿದರ ಮೇಲೆ ಅಪಾರವಾದ ಗೌರವವನ್ನು ಇರಿಸಿಕೊಂಡಿದ್ದು,ಕಿರಿಯ ಕಲಾವಿದರಿಗೂ ಕೂಡ ತನ್ನ ಜ್ಞಾನವನ್ನು ನೀಡಿ ಅವರನ್ನು ಪರಿಪೂರ್ಣ ಕಲಾವಿದರನ್ನಾಗಿ ಮಾಡುವಲ್ಲಿ ಶ್ರಮಿಸುತ್ತಿದ್ದಾರೆ.. ಇವರು ಯಕ್ಷರಂಗದಲ್ಲಿ ಸಲ್ಲಿಸುತ್ತಿರುವ ಸೇವೆಗಾಗಿ,ಹೊಸೂರು ಹಕ್ಲುಮನೆ ಕುಟುಂಬಸ್ಥರಿಂದ ಸನ್ಮಾನ, ಮಹಿಷಮರ್ದಿನಿ ಯುವಕ ಮಂಡಲ ಬಗ್ವಾಡಿ ಇವರಿಂದ ಸನ್ಮಾನ, ಯಡಮೊಗೆ ಬಸವನಪಾಲು ಶಂಕರ ಶೆಟ್ಟಿ ಕುಟುಂಬಸ್ಥರಿಂದ ಸನ್ಮಾನ, ಬೈಲುಕೆರೆ ಮಲ್ಲಿಕಾ ರಮೇಶ ಸುವರ್ಣ ಕುಟುಂಬಸ್ಥರಿಂದ ಸನ್ಮಾನ, ರಾಮ್ ಪ್ರೆಂಡ್ಸ್ ಜಪ್ತಿ ಇವರಿಂದ ಸನ್ಮಾನ, ಶ್ರೀಮಹಾಗಣಪತಿ ಮಕ್ಕಳ ಮೇಳ ಬಗ್ವಾಡಿ ಅವರಿಂದ ಸನ್ಮಾನ, ಹೊಸೂರು ಹಕ್ಲುಮನೆ ಪಿಣಕಮ್ಮ ಶೆಡ್ತಿ ಮತ್ತು ಕುಟುಂಬಸ್ಥರಿಂದ ಸನ್ಮಾನ, ಬ್ರಾಹ್ಮೀ ಭಕ್ತಸಮೂಹ ಬೆಂಗಳೂರು ಇವರಿಂದ ಸನ್ಮಾನ, ಮಲೆನಾಡ ಸಿರಿ ಚಾರಿಟೇಬಲ್ ಟ್ರಸ್ಟ್ ಸೋಮೇಶ್ವರ ಇವರಿಂದ ಬೆಂಗಳೂರಿನಲ್ಲಿ ಸನ್ಮಾನ ಸೇರಿದಂತೆ ಅನೇಕ ಕಡೆ ಸನ್ಮಾನ ಮತ್ತು ಗೌರವ ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ... ದಿನಾಂಕ:03.05.2012ರಲ್ಲಿ ಜ್ಯೋತಿಯವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಇವರು ಮಗ ರವಿಕುಮಾರ್ ಮತ್ತು ಮಗಳು ಕೌಶಿಕೆಯೊಂದಿಗೆ ಪ್ರಸ್ತುತ ಸಿದ್ದಾಪುರ ಸಮೀಪದ ಹೆನ್ನಾಬೈಲುವಿನಲ್ಲಿ ವಾಸವಾಗಿದ್ದಾರೆ.. ಶ್ರೀ ಬ್ರಾಹ್ಮಿದುರ್ಗಾಪರಮೇಶ್ವರಿ ದೇವಿಯೂ ಇವರ ಸರ್ವ ಇಷ್ಟಾರ್ಥಗಳನ್ನು ಈಡೇರಿಸಿ, ವೈಯುಕ್ತಿಕ ಜೀವನ ಮತ್ತು ಕಲಾರಂಗದಲ್ಲಿ ಉನ್ನತ ಸ್ಥಾನಕ್ಕೇರುವ ಯೋಗವನ್ನು ನೀಡಲಿ ಎನ್ನುವುದು ನಮ್ಮ ಯಕ್ಷಮಂದಾರದ ಶುಭಹಾರೈಕೆ.. ಸಾಹಿತ್ಯ:ಹಾಲಾಡಿ ಸಂತೋಷ ಶೆಟ್ಟಿ... ನಿರೂಪಣೆ:ಶ್ರೀಮತಿ ಅಮೃತ ಶೆಟ್ಟಿ.. ಮಾಹಿತಿ ಮತ್ತು ಸಹಕಾರ: ಜಯರಾಮ ಶೆಟ್ಟಿ ಹೈಗಿನಕಟ್ಟೆ, ಹೊಸೂರು, ಯಕ್ಷಮಂದಾರದ ಸದಸ್ಯರು, ಕಮಲಶಿಲೆ ಮೇಳದ ಅಭಿಮಾನಿಗಳು.. ಯಕ್ಷಗಾನ ಕಲಾವಿದರ ಪರಿಚಯ ಸರಣಿಯ ಎಲ್ಲ ವಿಡಿಯೋಗಳು ನಮ್ಮ ಯಕ್ಷ💥ಮಂದಾರ ಯೂಟ್ಯೂಬ್ ಚಾನಲ್..ನಲ್ಲಿ ಲಭ್ಯವಿದೆ.. ನಮ್ಮ 🌀ಯಕ್ಷ💥ಮಂದಾರ🌀ಯೂಟ್ಯೂಬ್ ಚಾನಲ್ ಮತ್ತು ಫೇಸ್ಬುಕ್ ಪೇಜ್.. ನ್ನು download ಮಾಡಿಕೊಳ್ಳಿ..ಮತ್ತು ನಾವು upload ಮಾಡುವ ಎಲ್ಲ ಯಕ್ಷಗಾನ ವಿಡಿಯೋಗಳ ಮಾಹಿತಿ ಪಡೆಯಿರಿ..ನಮ್ಮ ವಿಡಿಯೋಗಳನ್ನು ನೋಡಿ like ಮಾಡಿ,share ಮಾಡಿ ಪ್ರೋತ್ಸಾಹಿಸಿ... ಯಕ್ಷಗಾನ ಕಲೆಯನ್ನು ಉಳಿಸಿ,ಬೆಳೆಸಿ, ಪ್ರೋತ್ಸಾಹಿಸಿ.. ಧನ್ಯವಾದಗಳು🙏🙏🙏
This is an exhibition of the achievements and life of yakshaartists. Our yakshakas are the yakshakinof carpenters, panju kumar bagwadi, the main female patron of kamalashile mela. Mr. Sheena Priest and Mrs Tunga were born on 24.04.1983 at Bagwadi in Kundapur taluk of Udupi district. He had developed a great passion for Yakshagana in his early childhood and gradually became more attracted to the open air around the village and disguised himself in the Selkodu Mahishamardini Arts Association. He then left for his seventh grade education, and studied the rhythm of yakshagana from Vishweshwara Somayaji, who studied the rhythm of yakshagana and learned the rhythm of yakshagana from Argodu Mohandas Shenoy, who made his first appearance at saligramam mela and learned the way the veterans were doing in the theatre. After serving for one year at Saligramam, he served for four years at The Bagwadi Mela. She is currently working as the main female lead of the Kamalastone Mela.

He has been working in the yakshagana for the past twenty-two years and has been a great artist erotic and admirable for his erotic and erotic feminine characters, and he has been a great actor in the audience with his beautiful performances like Chandramati of Mahathma, Raja Ugrasen's Ruchimati, Papanna Vijaya Gunasundari, Rajrudra's anger, Subhadra of Abhimanyu battle, Nalacharitri's damaya. He is able to handle the disguises of brave draupadi, subhadra, shastri prabhe, property, prahasti bhramarakundale, meenakshi, and the audience will be impressed with the charming and stylish dance style of the characters of the erotic menace, chitraksi mohini, chandravali, aasike etc. She can do justice to the characters of Sita, Lakshmi Devi, Dakshaini, Parvathi, Sharade, Mandodari, Chitrangade and others, and he can play the role of Mahatma Mahatma and Kamalastone Kshetra Mahatma very beautifully.

He also toured Bangalore, Mumbai, Hyderabad and North Karnataka during the monsoon.

He has been a popular artist erotic, with his gentle and simple characters, and he has been a great artist erotic and has been working to make younger artistes a perfect artist.

He is honoured by Hosur Haklumane Yavar, Honored by Mahishamardini Yuvamandal Bagwadi, Yadamoge Bybasavalapalu Shankarshetty, Honour edited by Bailukere Mallika Ramesh Suvarna, Honoured by Ram Friends, Honoured by Sri Mahaganapathi Children Mela Bagwadi, Hosur Haklumane Pinakamma Shetty and Brahmani Bhakta Ganga, Bangalore.

He married jyoti on 03.05.2012 and is currently living in Hennabailu near Sivagangai with his son Ravi Kumar and daughter Kaushik.

Our yakshamandar abunda i.e. sri brahmi durga parameshwari devi will fulfill all his wishes and give him a high level of personal life and art.

Saint Haladi Santosh Shetty

Narration:Smt. Amrita Shetty..

Information and Cooperation:
Jayaram Shetty Haiginakate, Hosur,
Members of Yakshamandar,
Fans of Kamalastone Mela..

All the videos of the Yakshagana Artistes Introduction Series are our Yaksha💥Mandar YouTube channel.. Available in..   

Our 🌀yss💥mandar🌀YouTube channel and Facebook page. Download.. And get information about all yakshagana videos we upload.. Watch our videos like, share and encourage... Save, develop and encourage yakshagana art..

Thank you🙏🙏🙏


ಯಕ್ಷಮಂದಾರ ವಿಡಿಯೋ ನೋಡಲೋಸುಗವಾಗಿ. ವಾಹಿನಿಯ ಹೋಮ್ ಪೇಜ್ ಗಾಗಿ: https://www.youtube.com/channel/UCsrL ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: https://www.facebook.com/groups/27334

No comments:

Post a Comment

#ಯಕ್ಷಮಂದಾರ - 51 | ಹೆನ್ನಾಬೈಲು ಸಂಜೀವ ಶೆಟ್ಟಿ | Hennabailu Sanjeeva Shetty | ಪ್ರಸಿದ್ದ ಸ್ತ್ರೀಪಾತ್ರದಾರಿ |

🌀ಯಕ್ಷ💥ಮಂದಾರ🌀 #ಯಕ್ಷಮಂದಾರ  - 51 | ಹೆನ್ನಾಬೈಲು ಸಂಜೀವ ಶೆಟ್ಟಿ | Hennabailu Sanjeeva Shetty | ಪ್ರಸಿದ್ದ ಸ್ತ್ರೀಪಾತ್ರದಾರಿ...