🌀ಯಕ್ಷ💥ಮಂದಾರ🌀
ಯಕ್ಷಮಂದಾರ - 27 | ಹಾರಾಡಿ ಸರ್ವೋತ್ತಮ ಗಾಣಿಗ | Haradi Sarwoththam Ganiga ಕಲಾಜೀವನದ ಕಿರುಪರಿಚಯ | Part - 27
ಇದು ಯಕ್ಷ ಕಲಾವಿದರ ಸಾಧನೆ ಮತ್ತು ಜೀವನಗಾಥೆಯ ಅನಾವರಣ.. ಇಂದಿನ ನಮ್ಮ ಯಕ್ಷಸಾಧಕರು.. ಬಡಗುತಿಟ್ಟಿನ ಹಿರಿಯ ಸಂಪ್ರದಾಯ ಬದ್ದ ವೇಷದಾರಿ,ಹಾರಾಡಿ ಸರ್ವೋತ್ತಮ ಗಾಣಿಗರು.. ಶ್ರೀಯುತರು ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹಾರಾಡಿ ಸಾಲಿಮಕ್ಕಿಯಲ್ಲಿ ದಿ.ಕೃಷ್ಣ ಗಾಣಿಗ ಮತ್ತು ಗೋಪಮ್ಮ ದಂಪತಿಗಳ ಪುತ್ರನಾಗಿ ದಿನಾಂಕ:10.07.1955ರಲ್ಲಿ ಜನಿಸಿದರು.. ಪ್ರಾಥಮಿಕ ವಿದ್ಯಾಭ್ಯಾಸವನ್ನು ಪಡೆದ ಇವರು,ನಂತರ ಯಕ್ಷರಂಗದತ್ತ ಒಲವು ತಾಳಿ ಯಕ್ಷಗುರು ದಿ.ದಶಾವತಾರಿ ವೀರಭದ್ರ ನಾಯ್ಕರಲ್ಲಿ ಯಕ್ಷಗಾನದ ಹೆಜ್ಜೆಗಾರಿಕೆಯನ್ನು ಕಲಿತು, ಹಿರಿಯಡ್ಕ ಗೋಪಾಲರಾಯರು ಮತ್ತು ನೀಲಾವರ ರಾಮಕೃಷ್ಣಯ್ಯನವರಿಂದ ತಾಳ ನಾಟ್ಯ ಲಯವನ್ನು ಕಲಿತ ಇವರು ಕೋಟ ಅಮೃತೇಶ್ವರಿ ಮೇಳದಲ್ಲಿ ಗೆಜ್ಜೆಕಟ್ಟಿ ರಂಗಪ್ರವೇಶಗೈದರು..ನಂತರ ಮಂದಾರ್ತಿ, ಮಾರಣಕಟ್ಟೆ, ಕಟೀಲು, ಕಮಲಶಿಲೆ, ಸಾಲಿಗ್ರಾಮ,ಸೌಕೂರು ಮತ್ತು ಹಾಲಾಡಿ ಮೇಳದಲ್ಲಿ ಸೇವೆಸಲ್ಲಿಸಿದ ಇವರು ಪ್ರಸ್ತುತ ಮಂದಾರ್ತಿ ಮೇಳದಲ್ಲಿ ಸೇವೆಸಲ್ಲಿಸುತ್ತಿದ್ದಾರೆ.. ಸುಮಾರು ಐವತ್ತೆರಡು ವರ್ಷಗಳಿಂದ ಯಕ್ಷ ಕಲಾಮಾತೆಯ ಸೇವೆಸಲ್ಲಿಸುತ್ತಿರುವ ಇವರು ದಿ.ಹಾರಾಡಿ ರಾಮ ಗಾಣಿಗರ ಹತ್ತಿರದ ಸಂಬಂದಿಯಾಗಿದ್ದು, ಹಾರಾಡಿ ಮತ್ತು ಮಟಪಾಡಿ ಶೈಲಿಯ ಸಮರ್ಥ ಪ್ರತಿಪಾದಕರಾಗಿದ್ದು, ಬಡಗುತಿಟ್ಟಿನ ಶುದ್ಧ ಸಂಪ್ರದಾಯಬದ್ದ ಹಿರಿಯ ಕಲಾವಿದರಲ್ಲಿ ಒಬ್ಬರಾಗಿರುವ ಇವರು ಪರಂಪರೆಯ ಚೌಕಟ್ಟಿನಲ್ಲಿ ಪಾತ್ರ ಗೌರವವನ್ನು ಪ್ರತಿಪಾದಿಸುತ್ತ ಭಾಷಾಪ್ರೌಢಿಮೆ ಮತ್ತು ಲಯಬದ್ಧತೆಯನ್ನು ಹೊಂದಿರುವ ಹಿರಿಯ ಕಲಾವಿದರಾಗಿದ್ದಾರೆ.. ಖಚಿತ ಲಯಸಿದ್ದಿಯೊಂದಿಗೆ ಅಪಾರವಾದ ಪುರಾಣ ಜ್ಞಾನವನ್ನು ಹೊಂದಿರುವ ಇವರು ಸುಧನ್ವ, ಅಭಿಮನ್ಯು,ದುರ್ಜಯ, ಭೀಮ,ಕೌರವ ರುದ್ರಕೋಪ,ಕೃಷ್ಣ, ಬಬ್ರುವಾಹನ, ಅರ್ಜುನ,ಬಲರಾಮ ಮೊದಲಾದ ಪಾತ್ರಗಳನ್ನು ಬಹು ಸುಂದರವಾಗಿ ಅಭಿನಯಿಸಿ ಪಾತ್ರಕ್ಕೆ ಹೊಸ ಚಿತ್ರಣ ಮೂಡಿಸುವ ಮೂಲಕ ಪಾತ್ರದ ಹಿರಿಮೆಯನ್ನು ಹೆಚ್ಚಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ..ಆಧುನಿಕ ಪ್ರಸಂಗಳಾದ ರತ್ನಶ್ರೀ,ರೂಪಶ್ರೀ ಮತ್ತು ಬನಶಂಕರಿ ಪ್ರಸಂಗದ ಪಾತ್ರಗಳನ್ನು ಕೂಡ ಸಮರ್ಥವಾಗಿ ನಿಭಾಯಿಸುವ ಮೂಲಕ ಪ್ರಸಂಗದ ಮೌಲ್ಯ ಹೆಚ್ಚಿಸಿದ ಕೀರ್ತಿ ಇವರದ್ದು.. ಕೇವಲ ಕನ್ನಡ ನಾಡಿನಲ್ಲಷ್ಟೇ ಅಲ್ಲದೆ ಯಕ್ಷಗಾನವೆಂಬ ಕಲಾಪುಷ್ಪದ ಸುಗಂಧವನ್ನು ಸಾಗರದಾಚೆಯೂ ಪಸರಿಸಿದ ಇವರು,ಡಾ.ಶಿವರಾಮ ಕಾರಂತರು ಮತ್ತು ಬಿ.ವಿ.ಆಚಾರ್ಯರೊಂದಿಗೆ ಅಮೆರಿಕ,ಜರ್ಮನಿ, ಕ್ಯಾಲಿಫೋರ್ನಿಯಾ ಹಾಂಕಾಂಗ್ , ಕೆನಡಾ, ಸ್ವಿಡ್ಜರ್ಲ್ಯಾಂಡ್, ಪ್ರಾನ್ಸ್ ಮೊದಲಾದ ದೇಶದಲ್ಲಿ ಯಕ್ಷಗಾನ ಪ್ರದರ್ಶನವನ್ನು ನೀಡಿ,ಜಾಗತಿಕ ವೇದಿಕೆಯಲ್ಲಿ ಅಭಿಮಾನಿಗಳನ್ನು ಹುಟ್ಟುಹಾಕಿ ಯಕ್ಷಗಾನ ಕಲೆಗೆ ಗೌರವವನ್ನು ತಂದುಕೊಟ್ಟ ಕೀರ್ತಿ ಇವರಿಗೆ ಸಲ್ಲುತ್ತದೆ.. ಶುದ್ಧ ಸಂಪ್ರದಾಯಬದ್ದ ವೇಷಗಾರಿಕೆ,ಹೆಜ್ಜೆಗಾರಿಕೆ ಮತ್ತು ಮಾತುಗಾರಿಕೆಯ ಶೈಲಿಯಿಂದ ಬಡಗುತಿಟ್ಟಿನ ಯಕ್ಷರಂಗಕ್ಕೆ ಅನುಪಮ ಸೇವೆಯನ್ನು ಸಲ್ಲಿಸುತ್ತ,ಅನೇಕ ಯಕ್ಷಕಲಾವಿದರ ಪಾಲಿನ ನೆಚ್ಚಿನ ಗುರುಗಳಾಗಿ ಗುರುತಿಸಿಕೊಂಡಿರುವ ಇವರ ನಿರಂತರ ಹಾಗೂ ಪ್ರಾಮಾಣಿಕ ಕಲಾಸೇವೆಯನ್ನು ಪರಿಗಣಿಸಿ ಉಡುಪಿ ಜಿಲ್ಲಾ ಪ್ರಶಸ್ತಿ,ಯಕ್ಷಗಾನ ಪರಂಪರಾ ಪ್ರಶಸ್ತಿ,ಯಕ್ಷಗಾನ ಕಲಾರಂಗ ಪ್ರಶಸ್ತಿ,ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ,ಕಲಾ ಪ್ರಕಾಶ ಪ್ರತಿಷ್ಠಾನ ಮುಂಬೈ ಇವರಿಂದ ಸನ್ಮಾನ, ಕೋಡಿ ಅಭಿಮಾನಿ ಬಳಗದಿಂದ ಸನ್ಮಾನ,ಜಿಲ್ಲಾ ಸೋಮಕ್ಷತ್ರಿಯ ಸಂಘಟನೆಯ ಬಾರ್ಕೂರು ಘಟಕದಿಂದ ಸನ್ಮಾನ,ಹೊಸಮಠ ಲಕ್ಷ್ಮಣ ಪೂಜಾರಿ ಕುಟುಂಬದವರಿಂದ ಸನ್ಮಾನ, ದಾರೇಶ್ವರ ಯಕ್ಷಬಳಗ ಇವರಿಂದ ಉಡುಪಿ ಪಲಿಮಾರು ಮಠದಲ್ಲಿ ಸನ್ಮಾನ,ತೆಕ್ಕಟ್ಟೆ ಹಾಡಿ ನಂದಿಕೇಶ್ವರ ದೇವಸ್ಥಾನದಲ್ಲಿ ಸನ್ಮಾನ, ಬೆದ್ರಾಡಿ ನರಸಿಂಹ ನಾಯ್ಕರಿಂದ ಗುರುವಂದನೆ ಸೇರಿದಂತೆ ಅನೇಕ ಗೌರವ ಸನ್ಮಾನ ಮತ್ತು ಪ್ರಶಸ್ತಿ, ಪುರಸ್ಕಾರಗಳನ್ನು ನೀಡಿ ಗೌರವಿಸಲಾಗಿದೆ. ಸರಳ ಮತ್ತು ಶಿಸ್ತುಬದ್ಧ ಜೀವನಶೈಲಿಯ ಮೂಲಕ ಕಲಾಪ್ರೇಕ್ಷಕರ ಪಾಲಿನ ಅಭಿಮಾನದ ಕಲಾವಿದರಾಗಿರುವ ಇವರು ಪತ್ನಿ ಲಲಿತಾ ಮತ್ತು ಐವರು ಮಕ್ಕಳೊಂದಿಗೆ ವಾಸವಾಗಿದ್ದಾರೆ.. ಇವರಿಗೆ ಶ್ರೀಮಂದಾರ್ತಿ ದುರ್ಗಾಪರಮೇಶ್ವರಿಯೂ ಆಯುರಾರೋಗ್ಯ ಮತ್ತು ಅಷ್ಟೈಶ್ವರ್ಯವನ್ನು ನೀಡಿ ಅನುಗ್ರಹಿಸಲಿ ಎನ್ನುವುದು ಯಕ್ಷಮಂದಾರದ ಶುಭಹಾರೈಕೆ.. ಸಾಹಿತ್ಯ:ಹಾಲಾಡಿ ಸಂತೋಷ ಶೆಟ್ಟಿ.. ನಿರೂಪಣೆ:ಶ್ರೀಮತಿ ಅಮೃತಾ ಶೆಟ್ಟಿ.. ಮಾಹಿತಿ: ನಾಗರಾಜ ಶೆಟ್ಟಿ ನೈಕಂಬ್ಳಿ.. ವಿಡಿಯೋ:ಶರತ್ ಶೆಟ್ಟಿ ಜಾಂಬೂರು.. ಯಕ್ಷಗಾನ ಕಲಾವಿದರ ಪರಿಚಯ ಸರಣಿಯ ಎಲ್ಲ ವಿಡಿಯೋಗಳು ನಮ್ಮಯಕ್ಷ ಮಂದಾರ ಯೂಟ್ಯೂಬ್ ಚಾನಲ್..ನಲ್ಲಿ ಲಭ್ಯವಿದೆ.. ನಮ್ಮ ಯಕ್ಷ💥ಮಂದಾರ ಯೂಟ್ಯೂಬ್ ಚಾನಲ್ ಮತ್ತು ಫೇಸ್ಬುಕ್ ಪೇಜ್.. ನ್ನು download ಮಾಡಿಕೊಳ್ಳಿ..ಮತ್ತು ನಾವು upload ಮಾಡುವ ಎಲ್ಲ ಯಕ್ಷಗಾನ ವಿಡಿಯೋಗಳ ಮಾಹಿತಿ ಪಡೆಯಿರಿ..ನಮ್ಮ ವಿಡಿಯೋಗಳನ್ನು ನೋಡಿ like ಮಾಡಿ,share ಮಾಡಿ ಪ್ರೋತ್ಸಾಹಿಸಿ... ಯಕ್ಷಗಾನ ಕಲೆಯನ್ನು ಉಳಿಸಿ,ಬೆಳೆಸಿ, ಪ್ರೋತ್ಸಾಹಿಸಿ.. ಧನ್ಯವಾದಗಳು🙏🙏🙏 This is an exhibition of the achievements and life of yakshaartists. Today's yakshakas are.. The oldest customary disguise of the badgutittis, the best ganigas. Mr. Krishna Ganiga and Gopamma were born on 10.07.1955 at Haradi Salimakki in Brahmavartaluk of Udupi district. He received primary education and later became a passionate yakshagana, learnt yakshagana footprints in Yakshagana guru D.Dasavatari Veerbhadra Nayak, learnt the rhythm of tala by Hiriyadakka Gopalaraya and Neelavara Ramakrishnayya and entered the stage at Kota Amritswari Mela. Later, he served at Mandarti, Maranakate, Katilu, Kamalashila, Saligramam, Saukur and Haladi and is currently serving at The Mandarti Mela. He has been serving the Yaksha Kalamatta for over fifty-two years and is a close associate of The Haradi Rama Ganigar, a proponent of the Haradi and Matapadi style, and one of the purely orthodox artists of Badgutti, is a veteran artist who has a linguistic and rhythmic character in the traditional framework. With a lot of mythology with certain rhythm, he has been credited with enhancing the character's glory by playing the roles of Sudhanva, Abhimanyu, Durjaya, Bhima, Kaurava Rudrakopa, Krishna, Babruvahana, Arjuna, Balarama and others. He is credited with enhancing the value of the episode by handling the roles of the modern episodes like Ratnasri, Rupasree and Banashankari. He has spread the scent of yakshagana not only in Kannada but also across the ocean, and he has been credited with performing yakshagana in the US, Germany, California, Hong Kong, Canada, Switzerland, France and other countries. The best and most honest artistes who have been honoured with the udupi district award, yakshagana parampara award, yakshagana academy award, kala prakash akademi award, kala prakash foundation mumbai, honored by kodi fan club, barkur unit of district somakshatriya, honored by barkur unit of district somakshatri, honored by the family of hosamatlasamy priest. Thekkate song has been honoured with many honours and awards including honors and awards from Bedradi Narasimha Nayak, guru vandana at Nandikeshwara temple. He is a proud artist with a simple and disciplined lifestyle and lives with his wife Lalita and five children. Wish ing them a good luck with the auspicious and asthma- saint saint. Literature:Haladi Santosh Shetty.. Narration:Smt. Amrita Shetty.. Information: Nagaraja Shetty Naikambli.. Video:Sarath Shetty Jambur.. ಯಕ್ಷಮಂದಾರ ವಿಡಿಯೋ ನೋಡಲೋಸುಗವಾಗಿ. ವಾಹಿನಿಯ ಹೋಮ್ ಪೇಜ್ ಗಾಗಿ: https://www.youtube.com/channel/UCsrL ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: https://www.facebook.com/groups/27334
No comments:
Post a Comment