Sunday, October 4, 2020

ಯಕ್ಷ ಮಂದಾರ - 28 | ಮಂದಾರ್ತಿ ರಾಮಕೃಷ್ಣ ಕಾಮತ್ | Mandarthi Ramakrishna Kamath | Chandewada | ಚಂಡೆವಾದಕ

                           #ಯಕ್ಷಮಂದಾರ - 28

ಯಕ್ಷ ಮಂದಾರ - 28 | ಮಂದಾರ್ತಿ ರಾಮಕೃಷ್ಣ ಕಾಮತ್ | Mandarthi Ramakrishna Kamath | Chandewada | ಚಂಡೆವಾದಕ

ಇದು ಯಕ್ಷ ಕಲಾವಿದರ ಸಾಧನೆ ಮತ್ತು ಜೀವನಗಾಥೆಯ ಅನಾವರಣ. ಇಂದಿನ ನಮ್ಮ ಯಕ್ಷಸಾಧಕರು.. ಬಡಗುತಿಟ್ಟಿನ ಹಿರಿಯ ಚಂಡೆವಾದಕರಾದ ಮಂದಾರ್ತಿ ರಾಮಕೃಷ್ಣ ಕಾಮತ್. ಶ್ರೀಯುತರು ಉಡುಪಿ ಜಿಲ್ಲೆಯ ಮಂದಾರ್ತಿ ಪದ್ಮನಾಭಯ್ಯ ಮತ್ತು ರಾಧ ಬಾಯಿ ದಂಪತಿಗಳ ಮಗನಾಗಿ ದಿನಾಂಕ:14.07.1960ರಲ್ಲಿ ಜನಿಸಿದರು.. ಪ್ರಸಿದ್ದ ಮದ್ದಳೆವಾದಕರಾದ ಸುರುಗಿಕಟ್ಟೆ ಬಸವ ಗಾಣಿಗರಲ್ಲಿ ತಾಳ ಜ್ಞಾನವನ್ನು ಪಡೆದ ಇವರು ಕೊಲ್ಲೂರು ಕೊಗ್ಗು ಗಾಣಿಗ ಮತ್ತು ಚಂಡೆಯ ಜನಕ ಕೆಮ್ಮಣ್ಣು ಆನಂದರಲ್ಲಿ ಚಂಡೆಯ ಆಳವಾದ ಅಭ್ಯಾಸವನ್ನು ಮಾಡಿದರು. ಪ್ರಥಮ ಬಾರಿಗೆ ಮಂದಾರ್ತಿ ಮೇಳದಲ್ಲಿ ಕೊಡಂಗಿ ವೇಷದಾರಿಯಾಗಿ ರಂಗಪ್ರವೇಶ ಮಾಡಿದ ನಂತರ ಬಾಲಗೋಪಾಲ ವೇಷಗಳನ್ನು ಮಾಡುತ್ತ ಚಂಡೆವಾದನದ ಆಸಕ್ತಿ ಬೆಳೆಸಿಕೊಂಡ ಇವರು ನಂತರ ಕಮಲಶಿಲೆ ಮೇಳದಲ್ಲಿ ದಿ.ಎಂ.ಎಂ ಹೆಗಡೆ ಮತ್ತು ದಿ. ಕೆಮ್ಮಣ್ಣು ಆನಂದರ ಸಲಹೆಯಂತೆ ಚಂಡೆವಾದಕರಾಗಿ ಗುರುತಿಸಿಕೊಂಡರು..ನಂತರಮಾರಣಕಟ್ಟೆ ಮೇಳವನ್ನು ಸೇರಿ ಏಳು ವರ್ಷಗಳ ಕಾಲ ಚಂಡೆವಾದಕರಾಗಿ ದುಡಿದರು..ನಂತರ ಬಡಗುತಿಟ್ಟಿನ ಸುಪ್ರಸಿದ್ದ ಡೇರೆ ಮೇಳವಾದ ಸಾಲಿಗ್ರಾಮ ಮೇಳಕ್ಕೆ ಸೇರಿಕೊಂಡರು..ಅಲ್ಲಿ ಸುಮಾರು ಹತ್ತು ವರ್ಷಗಳ ಕಾಲ ದಿ. ಕಾಳಿಂಗನಾವಡರ ಭಾಗವತಿಕೆ,ಪ್ರಭಾಕರ ಭಂಡಾರಿಯವರ ಮದ್ದಲೆ ಮತ್ತು ಇವರ ಚಂಡೆವಾದನದಿಂದ ಹಿಮ್ಮೇಳದ ವೈಭವವನ್ನು ಸಾಕ್ಷಾತ್ಕರಿಸಿದರು... ಕುಂದಾಪುರದ ಆಡುಬಾಷೆಯಲ್ಲಿ "ನಿನ್ನ ಮಂಡೆ ಅಂದರೆ ಮಂದಾರ್ತಿಯವರ ಚಂಡೆ ಮಾರಾಯ" ಅಂಥ ಬುದ್ಧಿವಂತಿಕೆ ಮಾಡುವವರಿಗೆ ತಿಳಿಹಾಸ್ಯದ ಮೂಲಕ ತಮಾಷೆ ಮಾಡುವಷ್ಟರ ಮಟ್ಟಿಗೆ ರಾಮಣ್ಣ ಜನಪ್ರಿಯತೆಯನ್ನು ಉಳಿಸಿಕೊಂಡಿದ್ದಾರೆ...ಪದ್ಯದ ಸಾಹಿತ್ಯಕ್ಕೆ ಆಡಚಣೆಯಾಗದಂತೆ ನಯ ನಾಜೂಕಿನಿಂದ ಚಂಡೆಯನ್ನು ನುಡಿಸಬಲ್ಲ ಇವರ ಕೌಶಲ್ಯ ಅನುಪಮವಾದದ್ದು.... ಚಂಡೆಯ ಶ್ರುತಿ ಇಳಿಸಿದಾಗ ನಾದ ಕಡಿಮೆಯಾಗುತ್ತದೆ ಎನ್ನುವುದನ್ನು ಹುಸಿಗೊಳಿಸಿದ ಇವರು,ಇಳಿಶ್ರುತಿಯ ಬಾಗವತರು ಹಾಡುವಾಗಲೂ ಚಂಡೆಯ ನಾದವನ್ನು ಹೊರಹೊಮ್ಮಿಸಬಲ್ಲರು...ಶೃಂಗಾರ, ವೀರ,ಕರುಣರಸದ ಪದ್ಯಗಳಿಗೂ ರಸಪೂರಕವಾಗಿ ಚಂಡೆ ನುಡಿಸಬಲ್ಲ ಸಿದ್ಧಿ ಸಾಧಕರಿವರು...ಚಂಡೆಯ ಮುಚ್ಚಳಿಕೆಯನ್ನು ಮಾಡಬಲ್ಲ ಇವರು ಸಂಪೂರ್ಣ ಚಂಡೆಯ ಒಳಹೊರಗನ್ನು ಬಲ್ಲ ಪ್ರತಿಭಾವಂತರು... ಮಧ್ಯರಾತ್ರಿಯಲ್ಲಿ ನಿದ್ದೆಯ ಮಂಪರಿನಲ್ಲಿರುವ ಪ್ರೇಕ್ಷಕರನ್ನು ತನ್ನ ಅಬ್ಬರದ ಚಂಡೆಯ ಝೇಂಕಾರದಿಂದ ಬಡಿದೆಬ್ಬಿಸಬಲ್ಲ ಇವರು ಚಂಡೆಯ ಅಬ್ಬರದಿಂದಲೇ ಕಲಾವಿದರ ಪಾದಗತಿಯಲ್ಲಿ ಚುರುಕು ಮೂಡಿಸಬಲ್ಲ ಪರಿಪೂರ್ಣ ಚಂಡೆವಾದಕರು.. ಪ್ರಸ್ತುತ ವೃತ್ತಿ ತಿರುಗಾಟದಿಂದ ನಿವೃತ್ತರಾಗಿ ಮಂದಾರ್ತಿಯಲ್ಲಿ ಹಣ್ಣುಕಾಯಿ ಅಂಗಡಿ ನಡೆಸುತ್ತಿರುವ ಇವರು,ಅಭಿಮಾನಿಗಳ ಒತ್ತಾಯದ ಮೇರೆಗೆ ಅಲ್ಲಲ್ಲಿ ಅತಿಥಿ ಕಲಾವಿದರಾಗಿ ಗುರುತಿಸಿಕೊಳ್ಳುತ್ತಿದ್ದಾರೆ... ತನ್ನ ಅಪಾರ ಸಿದ್ಧಿಯಿಂದ ದೇಶವಿದೇಶಗಳಲ್ಲಿ ತನ್ನ ಪ್ರತಿಭೆಯನ್ನು ಪ್ರದರ್ಶಿಸಿ, ಅಪಾರ ಅಭಿಮಾನಿಗಳ ಪ್ರೀತಿ ಮನ್ನಣೆಗೆ ಪಾತ್ರರಾದ ಇವರು,ದಿ.ಕಾಳಿಂಗ ನಾವಡ ಪ್ರಶಸ್ತಿ, ನಿಟ್ಟೂರು ಭೋಜಪ್ಪ ಸುವರ್ಣ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ.. ತನ್ನ ಜೀವನದಲ್ಲಿ ಶಿಸ್ತು,ಸರಳತೆ ಮತ್ತು ಸಮಯಪ್ರಜ್ಞೆಯನ್ನು ರೂಢಿಸಿಕೊಂಡಿರುವ ಇವರು ಕಲಾವಲಯದಲ್ಲಿ ತನ್ನ ಹಾಸ್ಯಪ್ರಜ್ಞೆಯ ಮೂಲಕ ಅಜಾತಶತ್ರುವಾಗಿ ಗುರುತಿಸಿಕೊಂಡವರು.. ಶ್ರೀಯುತರು ಪತ್ನಿ ,ಇಬ್ಬರು ಹೆಣ್ಣು ಮಕ್ಕಳು ಮತ್ತು ಪುತ್ರ ರಾಜೇಶ ಅವರೊಂದಿಗೆ ಮಂದಾರ್ತಿಯಲ್ಲಿ ವಾಸವಾಗಿದ್ದಾರೆ.. ಇವರಿಗೆ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರು ಆಯುರಾರೋಗ್ಯ, ಸುಖ ಸಂಪತ್ತನ್ನು ನೀಡಲಿ,ಇವರ ನಿವೃತ್ತ ಜೀವನವು ಸುಖಮಯವಾಗಿ ಸಾಗಲಿ ಎನ್ನುವುದು ಯಕ್ಷಮಂದಾರದ ಶುಭಹಾರೈಕೆ... ಸಾಹಿತ್ಯ:ಹಾಲಾಡಿ ಸಂತೋಷ ಶೆಟ್ಟಿ. ನಿರೂಪಣೆ:ಶ್ರೀಮತಿ ಅಮೃತಾ ಶೆಟ್ಟಿ. This is an exhibition of the achievements and life of yakshaartists. Today's yakshakas are.. Mandarthi Ramakrishna Kamath, the veteran chandelier of Badgutti... Mr. Was born on 14.07.1960 as the son of Mandarthi Padmanabhayya and Radha Bai in Udupi district. He gained the knowledge of tala among the famous madalavadakars, Surugikate Basava, and he practiced the deep esteem of Chande in Kokku Ganiga and Chande janaka kemmannu ananda. After entering the stage as a kodangi at the Mandarti Mela for the first time, he made his film debut with Balgopal and took interest in Chandewada and later in the Kamalashilmela, D.M.M. Hegde and The. He became a chandelier on the advice of Ananda. Then he joined the Maranakatte Mela and worked as a chandelier for seven years. Then he joined the Saligramam Mela, the famous tent mela of Badaguthitt. There, for ten years. Kalingavada's bhagavataka, Prabhakar Bhandari's madale and his chandevadana made him the glory of the himmela... Ramanna has retained popularity in the goat-language of Kundapur a "Your Mande i.e. Mandarthi's Chande Maraya" to make such a joke to those who are wise... His skill to play chandelier with a smooth, smooth manner without being played in the verse literature is incredible. He has falsely said that the chundi's tune will decrease when it is lowered and the bagvatas of the sun can make the sound of the chande even when the singing is... The siddhi sadhaks who can play the chande as a supplement to the verses of erotic, heroic and karunarasa... They are talented men who can make a candle cover... He is currently retiring from his career and running a fruit shop in Mandarthi and is being recognized as a guest artist at the request of his fans. He has won many awards, including the Kalinga Nawada Award, The Nittoor Bhojappa Golden Award, and the Nittoor Bhojappa Award, which has been recognized by many fans. He has developed discipline, simplicity and time lines in his life and has become a jatashatra through his sense of humour in the art field. May Mandarti Sri Durga Parameshwari Amma wish him a long and healthy life and wish him a happy life. ವಾಹಿನಿಯ ಹೋಮ್ ಪೇಜ್ ಗಾಗಿ: https://www.youtube.com/channel/UCsrL... ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: https://www.facebook.com/groups/27334...

No comments:

Post a Comment

#ಯಕ್ಷಮಂದಾರ - 51 | ಹೆನ್ನಾಬೈಲು ಸಂಜೀವ ಶೆಟ್ಟಿ | Hennabailu Sanjeeva Shetty | ಪ್ರಸಿದ್ದ ಸ್ತ್ರೀಪಾತ್ರದಾರಿ |

🌀ಯಕ್ಷ💥ಮಂದಾರ🌀 #ಯಕ್ಷಮಂದಾರ  - 51 | ಹೆನ್ನಾಬೈಲು ಸಂಜೀವ ಶೆಟ್ಟಿ | Hennabailu Sanjeeva Shetty | ಪ್ರಸಿದ್ದ ಸ್ತ್ರೀಪಾತ್ರದಾರಿ...