Monday, September 14, 2020

#ಯಕ್ಷಮಂದಾರ- 19 | ಕಮಲಶಿಲೆ ಆನಂದ ದೇವಾಡಿಗ |Ananda Devadiga Kamalashile | ಕಲಾಜೀವನದ ಕಿರುಪರಿಚಯ | ಯಕ್ಷಸಾಧ

🌀ಯಕ್ಷ💥ಮಂದಾರ 🌀



#ಯಕ್ಷಮಂದಾರ- 19 | ಕಮಲಶಿಲೆ ಆನಂದ ದೇವಾಡಿಗ |Ananda Devadiga Kamalashile | ಕಲಾಜೀವನದ ಕಿರುಪರಿಚಯ | ಯಕ್ಷಸಾಧ

ಇದು ಯಕ್ಷ ಕಲಾವಿದರ ಸಾಧನೆ ಮತ್ತು ಜೀವನಗಾಥೆಯ ಅನಾವರಣ. ಇಂದಿನ ನಮ್ಮ ಯಕ್ಷಸಾಧಕರು.. ಬಡಗುತಿಟ್ಟಿನ ಪ್ರಸಿದ್ಧ ಪೋಷಕ ಮತ್ತು ಪುರುಷ ಪಾತ್ರಧಾರಿ.. ಮಾರಣಕಟ್ಟೆ ಮೇಳದ ಕಲಾವಿದ.. ಕಮಲಶಿಲೆ ಆನಂದ ದೇವಾಡಿಗರು.. ಶ್ರೀಯುತರು ಉಡುಪಿ ಜಿಲ್ಲೆಯ ಕಮಲಶಿಲೆ ಸಮೀಪದ ತಟ್ಟೆಗುಳಿ ಎಂಬಲ್ಲಿ ಕೆ. ಮಂಜು ದೇವಾಡಿಗ ಮತ್ತು ಅಕ್ಕಯ್ಯ ದಂಪತಿಗಳ ಆರು ಜನ ಮಕ್ಕಳಲ್ಲಿ ಮೂರನೆಯವರಾಗಿ 1965ರಲ್ಲಿ ಜನಿಸಿದರು.. ಆಜ್ರಿ ಕಮಲಶಿಲೆಯ ಮಾನಂಜೆ ಶಾಲೆಯಲ್ಲಿ ತನ್ನ ನಾಲ್ಕನೆಯ ತರಗತಿಯವರೆಗಿನ ವಿದ್ಯಾಭ್ಯಾಸವನ್ನು ಪೂರೈಸಿದ ಇವರು,ಆರ್ಗೋಡು ಗೋವಿಂದರಾಯ ಶೆಣೈಯವರ ಪ್ರೇರಣೆಯಿಂದ ಯಕ್ಷಗಾನದ ಕಡೆಗೆ ಒಲವು ಬೆಳೆಸಿಕೊಂಡರು..ತನ್ನ ಅಣ್ಣನಾದ ಕಮಲಶಿಲೆ ಮಹಾಬಲ ದೇವಾಡಿಗರಲ್ಲಿ ಯಕ್ಷಗಾನದ ನಾಟ್ಯಾಬ್ಯಾಸವನ್ನು ಮಾಡಿದ ಇವರು ಪ್ರಪ್ರಥಮವಾಗಿ ಹಿರಿಯಡ್ಕ ಮೇಳದಲ್ಲಿ ಗೆಜ್ಜೆಕಟ್ಟಿದರು.. ಹಿರಿಯಡ್ಕ ಮೇಳದಲ್ಲಿ ಒಂದು ವರ್ಷ ಸೇವೆ ಸಲ್ಲಿಸಿದ ಇವರು,ಮಾರಣಕಟ್ಟೆಯಲ್ಲಿ ಹದಿಮೂರು ವರ್ಷ,ಶಿರಸಿಯಲ್ಲಿ ಮೂರು ವರ್ಷ,ಮಂದಾರ್ತಿಯಲ್ಲಿ ಒಂದು ವರ್ಷ,ಸಾಲಿಗ್ರಾಮದಲ್ಲಿ ಒಂದು ವರ್ಷ,ಸೌಕೂರಿನಲ್ಲಿ ಆರು ವರ್ಷ,ಹಾಲಾಡಿಯಲ್ಲಿ ನಾಲ್ಕು ವರ್ಷ,ಮಡಾಮಕ್ಕಿಯಲ್ಲಿ ಒಂದು ವರ್ಷ,ಸಿಗಂದೂರಿನಲ್ಲಿ ಎರಡು ವರ್ಷ,ಆಜ್ರಿಯಲ್ಲಿ ಎರಡು ವರ್ಷ ನೀಲಾವರ ಮೇಳದಲ್ಲಿ ಆರು ವರ್ಷ ಸೇವೆಸಲ್ಲಿಸಿದ ಇವರು ಪ್ರಸ್ತುತ ಮಾರಣಕಟ್ಟೆ ಮೇಳದಲ್ಲಿ ದುಡಿಯುತ್ತಿದ್ದಾರೆ. ಯಕ್ಷರಂಗದಲ್ಲಿ ನಿರಂತರವಾಗಿ ನಲವತ್ತು ವರ್ಷಗಳಿಂದ ಸೇವೆಸಲ್ಲಿಸುತ್ತಿರುವ ಇವರು ಕರಾವಳಿ, ಮಲೆನಾಡು,ಮುಂಬೈ ಬೆಂಗಳೂರು,ಹೈದ್ರಾಬಾದ್, ಮೈಸೂರು,ಹುಬ್ಬಳ್ಳಿ ಮೊದಲಾದ ಕಡೆ ತನ್ನ ಪ್ರತಿಭೆಯನ್ನು ಪ್ರದರ್ಶಿಸಿ, ಕಲಾಭಿಮಾನಿಗಳ ಪಾಲಿನ ಮೆಚ್ಚಿನ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ.. ಯಕ್ಷರಂಗದ ಅನೇಕ ಹಿರಿಯ ಕಿರಿಯ ಕಲಾವಿದರೊಂದಿಗೆ ತಿರುಗಾಟವನ್ನು ನಡೆಸಿ ಸೈ ಎನಿಸಿಕೊಂಡಿರುವ ಇವರು ನೆಲ್ಲೂರು ಮರಿಯಪ್ಪ ಆಚಾರ್ಯ, ಕುಂಜಾಲು ರಾಮಕೃಷ್ಣ,ಕಮಲಶಿಲೆ ಮಹಾಬಲ ದೇವಾಡಿಗ,ಹೆರಂಜಾಲು ಗೋಪಾಲ ಗಾಣಿಗ,ಕೊಂಡದಕುಳಿ ರಾಮಚಂದ್ರ ಹೆಗ್ಡೆ,ಬಳ್ಕೂರು ಕೃಷ್ಣಯಾಜಿ ತೀರ್ಥಹಳ್ಳಿ ಗೋಪಾಲ ಆಚಾರ್ಯ, ಸದಾಶಿವ ಅಮೀನ್, ಐರ್ಬೈಲು ಆನಂದ ಶೆಟ್ಟಿ,ಕೋಡಿ ವಿಶ್ವನಾಥ ಗಾಣಿಗ,ಕೋಟ ಸುರೇಶ ಬಂಗೇರ ಮೊದಲಾದ ಹಿರಿಯ ಕಲಾವಿದರನ್ನು ಮೆಚ್ಚಿಕೊಂಡಿದ್ದಾರೆ... ಪುಂಡುವೇಷ ಮತ್ತು ಪೋಷಕ ಪಾತ್ರಗಳಲ್ಲಿ ತನ್ನದೇ ಆದ ವಿಶಿಷ್ಟ ರಂಗನಡೆಯ ಮೂಲಕ ಪಾತ್ರಕ್ಕೆ ಮೆರಗು ನೀಡಬಲ್ಲ ಇವರು ಅಭಿಮನ್ಯು,ಕೃಷ್ಣ, ವೃಷಸೇನ,ಬಬ್ರುವಾಹನ, ಲವ,ಕುಶ ಮತ್ತು ಮಾರುತಿ ಪ್ರತಾಪದ ನಾರದನ ಪಾತ್ರವನ್ನು ಬಹು ಸುಂದರವಾಗಿ ಅಭಿನಯಿಸುತ್ತಿದ್ದಾರೆ... ತನ್ನ ಪ್ರಬುದ್ಧ ಮಾತುಗಾರಿಕೆ,ಆಕರ್ಷಕ ನಾಟ್ಯ, ಚುರುಕುನಡೆ ಮತ್ತು ಸುಂದರವಾದ ವೇಷಭೂಷಣಗಳ ಮೂಲಕ ತನ್ನದೇ ಆದ ಅಭಿಮಾನಿಗಳನ್ನು ಹೊಂದಿರುವ ಇವರನ್ನು ಮುಂಬೈ ಮತ್ತು ಸಿದ್ದಾಪುರದಲ್ಲಿ ಸನ್ಮಾನಿಸಿ ಗೌರವಿಸಲಾಗಿದೆ. ಅತ್ಯಂತ ಸರಳ ಮತ್ತು ಸೌಮ್ಯಸ್ವಭಾವದ ಇವರು ಶ್ರೀಮತಿ ಭಾಗ್ಯ ಇವರೊಂದಿಗೆ ದಾಂಪತ್ಯ ಜೀವನವನ್ನು ನಡೆಸಿ,ಮಗ ಅಕ್ಷಯ ಮತ್ತು ಮಗಳು ಅಮೃತಳೊಂದಿಗೆ ಸುಖ ಸಂತೃಪ್ತ ಜೀವನವನ್ನು ನಡೆಸುತ್ತಿದ್ದಾರೆ.. ಇವರಿಗೆ ಯಕ್ಷರಂಗದಲ್ಲಿ ಹೆಚ್ಚಿನ ಯಶಸ್ಸು ದೊರೆಯಲಿ ಮತ್ತು ಶ್ರೀ ಬ್ರಹ್ಮಲಿಂಗೇಶ್ವರ ಸ್ವಾಮಿಯೂ ಸರ್ವ ಸಂಪತ್ತನ್ನು, ಸುಖ ನೆಮ್ಮದಿಯನ್ನು ನೀಡಿ ಕಾಪಾಡಲಿ ಎನ್ನುವುದು ನಮ್ಮ ಯಕ್ಷಮಂದಾರದ ಶುಭಹಾರೈಕೆ.... ಸಾಹಿತ್ಯ:ಹಾಲಾಡಿ ಸಂತೋಷ ಶೆಟ್ಟಿ.. ನಿರೂಪಣೆ:ಶ್ರೀಮತಿ ಅಮೃತ ಶೆಟ್ಟಿ... ಮಾಹಿತಿ ಮತ್ತು ಸಹಕಾರ: ಕಿರಣ್ ಕುಮಾರ್ ಕಮಲಶಿಲೆ ಜಯರಾಮ ಶೆಟ್ಟಿ ಹೈಗಿನಕಟ್ಟೆ ಹೊಸೂರು ಯಕ್ಷಮಂದಾರದ ಸದಸ್ಯರು. ಮಾರಣಕಟ್ಟೆ ಮೇಳದ ಕಲಾವಿದರು. ಆನಂದ ದೇವಾಡಿಗ ಅಭಿಮಾನಿಗಳು. ಯಕ್ಷಗಾನ ಕಲಾವಿದರ ಪರಿಚಯ ಸರಣಿಯ ಎಲ್ಲ ವಿಡಿಯೋಗಳು ನಮ್ಮಯಕ್ಷ💥ಮಂದಾರ ಯೂಟ್ಯೂಬ್ ಚಾನಲ್..ನಲ್ಲಿ ಲಭ್ಯವಿದೆ.. ನಮ್ಮ 🌀ಯಕ್ಷ💥ಮಂದಾರ🌀ಯೂಟ್ಯೂಬ್ ಚಾನಲ್ ಮತ್ತು ಫೇಸ್ಬುಕ್ ಪೇಜ್.. ನ್ನು download ಮಾಡಿಕೊಳ್ಳಿ..ಮತ್ತು ನಾವು upload ಮಾಡುವ ಎಲ್ಲ ಯಕ್ಷಗಾನ ವಿಡಿಯೋಗಳ ಮಾಹಿತಿ ಪಡೆಯಿರಿ..ನಮ್ಮ ವಿಡಿಯೋಗಳನ್ನು ನೋಡಿ like ಮಾಡಿ,share ಮಾಡಿ ಪ್ರೋತ್ಸಾಹಿಸಿ... ಯಕ್ಷಗಾನ ಕಲೆಯನ್ನು ಉಳಿಸಿ,ಬೆಳೆಸಿ, ಪ್ರೋತ್ಸಾಹಿಸಿ.. ಧನ್ಯವಾದಗಳು🙏🙏🙏

This is an exhibition of the achievements and life of yakshaartists. Today's yakshakas are.. The famous patron and male character of the badgutitta. Maranakatte Mela Artist.. Kamalashile Ananda Dewadigaru.. Mr. K. Attateguli near Kamalashila in Udupi district. Manju Devadiga and Akkaiah were born in 1965 as the third of the six children. He completed his fourth grade in Mananje School at Ajri Kamalashila and was inspired by Argodu Govindaraya Shenoy and developed a passion for Yakshagana. He performed yakshagana in his elder brother Kamalashila Mahabala Dewadi, and tied the knot at the Hiriyadka mela for the first time. He served in the Hiriyadka Mela for thirteen years at Maaranakatte, three years at Sirsi, one year in Saligramam, six years in Saukur, four years in Haladi, one year in Madamakki, two years at Sigandur, two years at Ajri and two years at Neelavar amela. He has been in the yakshagana for forty years and has shown his talent in coastal, malaria, mumbai, bangalore, hyderabad, mysore, hubli etc. and has become a favourite artist of the art lovers. He has been known for his tourwith many senior yakshagana artistes like Nellore Mariappa Acharya, Kunjalu Ramakrishna, Kamalashila Mahabaladewadiga, Heranjalu Gopalganiga, Kondakuli Ramachandra Hegde, Balkur Krishnayaji Tirthahalli Gopalacharya, Sadashiv Ameen, Irbailu Ananda Shetty, Kodi Vishwanath Ganiga, Kota Suresh Bangera etc. He can be a dazzling character in his own role stylish lyrics and supporting roles. He has his own fans with his mature speech, charming dance, agility and beautiful costumes and has been honoured in Mumbai and Singrauli. She is very simple and mild and has married with Mrs Bhagya and leads a happy and happy life with son Akshaya and daughter Amrita. May they be successful in the Yakshagana and may Sri Brahma lingaswami also be given all wealth and happiness and happiness. Literature:Haladi Santosh Shetty.. Narrative:Mrs. Amrita Shetty... Information and Cooperation: Kiran Kumar Kamalashila Jayaram Shetty Haiginakate Hosur Members of Yakshamandar. Artists from The Marankate Mela. Ananda Devadiga fans. All the videos of the Yakshagana Artistes Introduction Series are our yaksha💥mandar YouTube channel.. Available in.. Our 🌀yss💥mandar🌀YouTube channel and Facebook page. Download.. And get information about all yakshagana videos we upload.. Watch our videos like, share and encourage... Save, develop and encourage yakshagana art.. Thank you🙏🙏🙏

ಯಕ್ಷಮಂದಾರ ವಿಡಿಯೋ ನೋಡಲೋಸುಗವಾಗಿ.

ವಾಹಿನಿಯ ಹೋಮ್ ಪೇಜ್ ಗಾಗಿ: https://www.youtube.com/channel/UCsrL

ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: https://www.facebook.com/groups/27334

 #ಯಕ್ಷಮಂದಾರ,#ಕಮಲಶಿಲೆ ಆನಂದ ದೇವಾಡಿಗ,#Ananda Devadiga Kamalashile

No comments:

Post a Comment

#ಯಕ್ಷಮಂದಾರ - 51 | ಹೆನ್ನಾಬೈಲು ಸಂಜೀವ ಶೆಟ್ಟಿ | Hennabailu Sanjeeva Shetty | ಪ್ರಸಿದ್ದ ಸ್ತ್ರೀಪಾತ್ರದಾರಿ |

🌀ಯಕ್ಷ💥ಮಂದಾರ🌀 #ಯಕ್ಷಮಂದಾರ  - 51 | ಹೆನ್ನಾಬೈಲು ಸಂಜೀವ ಶೆಟ್ಟಿ | Hennabailu Sanjeeva Shetty | ಪ್ರಸಿದ್ದ ಸ್ತ್ರೀಪಾತ್ರದಾರಿ...