#ಯಕ್ಷಮಂದಾರ
#ಯಕ್ಷಮಂದಾರ - 34 | ಎಂ.ಕೆ ರಮೇಶ ಆಚಾರ್ಯ ಮಂಗಳಗಾರ್ | M.K.Ramesh Acharya mangalgar | ಹನುಮಗಿರಿ ಮೇಳ | Part 34
ಇದು ಯಕ್ಷ ಕಲಾವಿದರ ಸಾಧನೆ ಮತ್ತು ಜೀವನಗಾಥೆಯ ಅನಾವರಣ..
ಇಂದಿನ ನಮ್ಮ ಯಕ್ಷಸಾಧಕರು.. ಉಭಯತಿಟ್ಟುಗಳಲ್ಲಿ ತನ್ನ ಪ್ರಬುದ್ಧ ಅಭಿನಯದ ಮೂಲಕ ಚಿರಪರಿಚಿತರಾದ ಯಕ್ಷರಂಗದ ಹಿರಿಯ ಸ್ತ್ರೀಪಾತ್ರಧಾರಿ ಎಂ.ಕೆ.ರಮೇಶ ಆಚಾರ್ಯರು..
ಶ್ರೀಯುತರು ತೀರ್ಥಹಳ್ಳಿ ತಾಲೂಕಿನ ಕಟ್ಟೆಹಕ್ಲು ಗ್ರಾಮದ ಮಂಗಳಗಾರ್ ಎಂಬಲ್ಲಿ ಶ್ರೀಕೃಷ್ಣಯ್ಯ ಆಚಾರ್ಯ ಮತ್ತು ರುಕ್ಮಣಿಯಮ್ಮ ದಂಪತಿಗಳ ಎಂಟು ಜನ ಮಕ್ಕಳಲ್ಲಿ ಎರಡನೆಯವರಾಗಿ ದಿನಾಂಕ:30.10.1949ರಲ್ಲಿ ಜನಿಸಿದರು..
ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮುಗಿಸಿದ ಇವರು,ತನ್ನ ಹನ್ನೊಂದನೆಯ ವಯಸ್ಸಿನಲ್ಲಿ ಯಕ್ಷಗಾನ ಕ್ಷೇತ್ರದತ್ತ ಆಕರ್ಷಿತರಾದರು.. ತನ್ನ ದೊಡ್ಡಪ್ಪನ ಮಗನಾದ ನರಸಿಂಹ ಆಚಾರ್ಯರ ಪ್ರೇರಣೆಯಿಂದ ತನ್ನ ತಂದೆಯವರು ಸ್ಥಾಪಿಸಿದ್ದ ಶ್ರೀ ಜಗದಾಂಬ ಕೃಪಾಪೋಷಿತ ಯಕ್ಷಗಾನ ಮಂಡಳಿಯಲ್ಲಿ ತನ್ನ ಶಾಲಾಜೀವನದಲ್ಲಿಯೆ ವೇಷಗಾರಿಕೆಯನ್ನು ಮಾಡಲಾರಂಭಿಸಿದರು..
ನಂತರ ಗೋಳಿಗರಡಿ ಮೇಳದಲ್ಲಿ ಗೆಜ್ಜೆಕಟ್ಟಿ ರಂಗಪ್ರವೇಶ ಮಾಡಿದ ಇವರು, ಅಲ್ಲಿ ಒಂದು ವರ್ಷ ಸೇವೆ ಸಲ್ಲಿಸಿದರು..ನಂತರ ಮಂದಾರ್ತಿ ಮೇಳವನ್ನು ಸೇರಿಕೊಂಡು ಅಲ್ಲಿ ದಿ.ದಶಾವತಾರಿ ವೀರಭದ್ರ ನಾಯ್ಕರಿಂದ ಯಕ್ಷಗಾನದ ಹೆಜ್ಜೆಗಾರಿಕೆ,ವೇಷಗಾರಿಕೆ, ನಾಟ್ಯ ಮತ್ತು ಮಾತುಗಾರಿಕೆಯ ಜ್ಞಾನವನ್ನು ಪಡೆದುಕೊಂಡರು..ಅಲ್ಲಿ ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರಾಗಿದ್ದ ಪುತ್ತೂರು ನಾರಾಯಣ ಹೆಗ್ಡೆ ಮತ್ತು ಪಾತಾಳ ವೆಂಕಟರಮಣ ಭಟ್ಟರ ಸಾಂಗತ್ಯ ಇವರಿಗೆ ದೊರೆಯಿತು..ಅಲ್ಲಿ ಮೂರು ವರ್ಷ ಸೇವೆಸಲ್ಲಿಸಿದ ಇವರು ಮುಂದಿನ ವರ್ಷ ಧರ್ಮಸ್ಥಳ ಮೇಳಕ್ಕೆ ಸೇರಿಕೊಂಡರು..ಅಲ್ಲಿ ಇವರ ಅನುಭವದ ಪರಿಪಕ್ವತೆಯ ಕೊರತೆಯಿಂದ ಮೇಳಕ್ಕೆ ಸೇರಿಸಿಕೊಳ್ಳಲು ಪೂಜ್ಯ ರತ್ನವರ್ಮ ಹೆಗ್ಗಡೆಯವರು ಒಪ್ಪದೆ ಇದ್ದಾಗ, ಹುಡುಗನ ಚುರುಕುಮತಿಯನ್ನು ಗಮನಿಸಿದ ಹಿರಿಯ ಭಾಗವತರಾದ ಕುರಿಯ ವಿಠ್ಠಲ ಶಾಸ್ತ್ರಿಯವರು ಹೆಗ್ಗಡೆಯವರಲ್ಲಿ ಮಾತನಾಡಿ ಮೇಳಕ್ಕೆ ಸೇರ್ಪಡೆಗೊಳಿಸಿದ್ದಲ್ಲದೆ ಮಳೆಗಾಲದಲ್ಲಿ ತಮ್ಮ ಮನೆಯಲ್ಲಿಯೇ ಇವರಿಗೆ ಸಂಪೂರ್ಣ ಯಕ್ಷಗಾನದ ಸರ್ವಾಂಗಗಳ ತರಬೇತಿಯನ್ನು ನೀಡಿದರು..ನಂತರ ಮೂರು ವರ್ಷಗಳ ಕಾಲ ದಿಗ್ಗಜ ಕಲಾವಿದರಿಂದ ಮೆರೆಯುತ್ತಿರುವ ಧರ್ಮಸ್ಥಳ ಮೇಳದಲ್ಲಿ ಕುರಿಯ ವಿಠ್ಠಲ ಶಾಸ್ತ್ರಿಗಳ ಮಾರ್ಗದರ್ಶನದಲ್ಲಿ ಸಂಪೂರ್ಣ ರಂಗದ ಜ್ಞಾನವನ್ನು ಪಡೆದ ಇವರು, ಮಳೆಗಾಲದಲ್ಲಿ ಶಾಸ್ತ್ರಿಗಳ ಮನೆಯಲ್ಲಿದ್ದುಕೊಂಡು ಅವರ ಸಲಹೆಯಂತೆ ರಂಗಕ್ಕೆ ಬೇಕಾದ ಎಲ್ಲ ರೀತಿಯ ಅಭ್ಯಾಸಗಳನ್ನು ಕಠಿಣ ಪರಿಶ್ರಮದಿಂದ ಸಂಪಾದಿಸಿಕೊಂಡರು..
ನಂತರ ಸುರತ್ಕಲ್ ಮೇಳವನ್ನು ಸೇರಿಕೊಂಡ ಇವರು ಆ ಕಾಲದ ಪ್ರಸಿದ್ಧ ಶ್ರೀದೇವಿ ವೇಷಧಾರಿಯಾಗಿದ್ದ ಕೊಕ್ಕಡ ಈಶ್ವರ ಭಟ್ಟರ ಸಹ ಸ್ತ್ರೀಪಾತ್ರದಾರಿಯಾಗಿ ಸೇವೆಸಲ್ಲಿಸುತ್ತ ಹಿರಿಯ ಕಲಾವಿದರಾದ ಶೇಣಿ ಮತ್ತು ತೆಕ್ಕಟ್ಟೆಯವರ ಸಾಂಗತ್ಯದಲ್ಲಿ ಪರಿಪೂರ್ಣ ಕಲಾವಿದರಾಗಿ ಮೂಡಿಬಂದರಲ್ಲದೆ, ಯಕ್ಷರಂಗದಲ್ಲಿ ಸರಸ್ವತಿಯ ವರಪುತ್ರರೆಂದೇ ಗುರುತಿಸಲ್ಪಡುವ ಶೇಣಿ ಮತ್ತು ಸಾಮಗರ ಎದುರು ತಾಳಮದ್ದಳೆಯ ಕೂಟದಲ್ಲೂ ಸಮದಂಡಿಯಾಗಿ ಅರ್ಥಗಾರಿಕೆ ಮಾಡಬಲ್ಲ ಸಿದ್ಧಿಯನ್ನು ಸಾದಿಸಿಕೊಂಡರು.. ಸುರತ್ಕಲ್ ಮೇಳದಲ್ಲಿ ಸುದೀರ್ಘ ಎರಡು ದಶಕಗಳ ಕಾಲ ಸೇವೆಸಲ್ಲಿಸಿ,ಯಕ್ಷಗಾನ ರಂಗದ ದಿಗ್ಗಜ ಕಲಾವಿದರಲ್ಲೊಬ್ಬರಾಗಿ ಗುರುತಿಸಿಕೊಂಡಿರುವ ಇವರು,ನಂತರ ಯಕ್ಷಗಾನದ ಯುಗಪವರ್ತಕ ದಿ.ಕಾಳಿಂಗ ನಾವಡರ ಒತ್ತಾಯದಿಂದ ಸಾಲಿಗ್ರಾಮ ಮೇಳಕ್ಕೆ ಪಾದಾರ್ಪಣೆ ಮಾಡಿದರು.ಆದರೆ ದುರಾದೃಷ್ಟವಶಾತ್ ನಾವಡರು ಅದೇ ವರ್ಷ ಅಸ್ತಂಗತರಾದರು.. ಸಾಲಿಗ್ರಾಮ ಮೇಳದಲ್ಲಿ ಎರಡು ವರ್ಷ ತಿರುಗಾಟ ಮಾಡಿ,ಪುನ ಸುರತ್ಕಲ್ ಮೇಳವನ್ನು ಸೇರಿಕೊಂಡು ಐದು ವರ್ಷ ತಿರುಗಾಟ ನಡೆಸಿದರು..ಆ ಕಾಲದಲ್ಲಿ ಅನಿವಾರ್ಯ ಕಾರಣಗಳಿಂದ ಸುರತ್ಕಲ್ ಮೇಳ ತಿರುಗಾಟ ನಿಲ್ಲಿಸಿದಾಗ ಪೆರ್ಡೂರು ಮೇಳಕ್ಕೆ ಸೇರಿದ ಇವರು ಅಲ್ಲಿ ಎರಡು ವರ್ಷ,ನೀಲಾವರ ಮೇಳದಲ್ಲಿ ಎರಡು ವರ್ಷ,ಗುತ್ಯಮ್ಮ ಮೇಳದಲ್ಲಿ ಒಂದು ವರ್ಷ,ಗೋಳಿಗರಡಿ ಮೇಳದಲ್ಲಿ ಮೂರು ವರ್ಷ,ಮಂಗಳಾದೇವಿ ಮೇಳದಲ್ಲಿ ಎರಡು ವರ್ಷ,ಸುಂಕದಕಟ್ಟೆ ಮೇಳದಲ್ಲಿ ಒಂದು ವರ್ಷ ಸೇವೆಸಲ್ಲಿಸಿ,ಪ್ರಸ್ತುತ ಹನುಮಗಿರಿ ಮೇಳದಲ್ಲಿ ಪ್ರಧಾನ ಸ್ತ್ರೀಪಾತ್ರದಾರಿಯಾಗಿ ಸೇವೆಸಲ್ಲಿಸುತ್ತಿದ್ದಾರೆ.
ತೆಂಕು ಮತ್ತು ಬಡಗು ಎಂಬ ಉಭಯತಿಟ್ಟುಗಳ ಸ್ತ್ರೀಭೂಮಿಕೆಯಲ್ಲಿ ಸಮರ್ಥವಾಗಿ ವೇಷಗಾರಿಕೆ ಮಾಡಬಲ್ಲ ಇವರು,ಪುರಾಣ ಪ್ರಸಂಗಗಳ ಅನುಭವದ ಅಗರವಾಗಿದ್ದು, ಯಕ್ಷಗಾನವೆಂಬ ಕಡಲಿನ, ಜ್ಞಾನದ ಒಡಲಿನಲ್ಲಿ ಮೂಡಿಬಂದ ಅನರ್ಘ್ಯ ರತ್ನವೆಂದರೂ ತಪ್ಪಾಗಲಾರದು...ಕಿರಿಯ ಕಲಾವಿದರನ್ನು ತಿದ್ದಿ ತೀಡಿ ಪರಿಪೂರ್ಣ ಕಲಾವಿದರನ್ನಾಗಿ ರೂಪಿಸುವ ಕಾಯಕದಲ್ಲಿ ಇವರದ್ದು ಮಹತ್ವದ ಪಾತ್ರ... ಯಕ್ಷರಂಗದಲ್ಲಿ ಹಿರಿಯ ಕಲಾವಿದರಾದರೂ ಸ್ವಲ್ಪವೂ ಅಹಂಕಾರವಿಲ್ಲದೆ, ತನ್ನ ಸರಳ ಮತ್ತು ಸೌಜನ್ಯದ ಗುಣಗಳಿಂದ ಯಕ್ಷರಂಗದಲ್ಲಿ ಅಜಾತಶತ್ರುವಾಗಿ ಗುರುತಿಸಿಕೊಂಡಿರುವ ಇವರು, ಯಕ್ಷಗಾನದ ಪಾತ್ರಧಾರಿಯಾಗಿ, ತಾಳಮದ್ದಲೆಯ ಅರ್ಥದಾರಿಯಾಗಿ, ಯಕ್ಷಗುರುವಾಗಿ,ಯಕ್ಷ ಚಿಂತಕರಾಗಿ, ಪ್ರಸಂಗಕರ್ತರಾಗಿ ಯಕ್ಷಸಾಹಿತ್ಯ ಕ್ಷೇತ್ರಗಳಲ್ಲಿಯೂ ತನ್ನ ಪ್ರೌಢಿಮೆಯನ್ನು ಪ್ರಚುರಪಡಿಸಿದ ಇವರು ಸೋಮವಾರಸಂತೆ ಕ್ಷೇತ್ರ ಮಹಾತ್ಮೆ, ಮಹಾಮುನಿ ವಿಬಾಂಡಕ,ಸಮಗ್ರ ವಿಶ್ವಾಮಿತ್ರ, ಹನುಮೋದ್ಭವ,ಕಿಗ್ಗ ಕ್ಷೇತ್ರ ಮಹಾತ್ಮೆ,ಶೃಂಗೇರಿ ಕ್ಷೇತ್ರ ಮಹಾತ್ಮೆ,ಕಳಸ ಕ್ಷೇತ್ರ ಮಹಾತ್ಮೆ,ಮಹಾಮಾತೆ ಕುಂತಿ,ಛತ್ರಪತಿ ಶಿವಾಜಿ, ವೀರರಾಣಿ ಚೆನ್ನಮ್ಮ ಮೊದಲಾದ ಅನೇಕ ಪ್ರಸಂಗಗಳನ್ನು ರಚಿಸಿದ್ದು,ಅನೇಕ ಪ್ರಸಂಗಗಳಿಗೆ ಪದ್ಯರಚನೆಯನ್ನು ಮಾಡಿದ್ದಾರೆ.
ಸ್ತ್ರೀಪಾತ್ರಕೋಪ್ಪುವ ರೂಪ ಮತ್ತು ಆಳಾಂಗ, ಸುಮದುರವಾದ ಕಂಠ, ಆಗಾದವಾದ ಪ್ರಸಂಗಜ್ಞಾನ, ಆಕರ್ಷಕವಾದ ನಾಟ್ಯಶೈಲಿ, ಪ್ರಸಂಗದ ಚೌಕಟ್ಟಿನ್ನು ಮೀರದೆ ವ್ಯವಹರಿಸುವ ರಂಗತಂತ್ರ,ಸುಂದರವಾದ ವೇಷಭೂಷಣ ಮತ್ತು ಹಿತಮಿತವಾದ ಮಾತುಗಾರಿಕೆಯಿಂದ ಯಾವುದೇ ಪಾತ್ರವನ್ನಾದರೂ ಜೀವಂತವಾಗಿ ಕಡೆದಿಡುವ ಇವರು, ನಳ ಚರಿತ್ರೆಯ ದಮಯಂತಿ, ರಾಜ ಉಗ್ರಸೇನದ ರುಚಿಮತಿ,ಹರಿಶ್ಚಂದ್ರ ಮಹಾತ್ಮೆಯ ಚಂದ್ರಮತಿ, ಪಾಪಣ್ಣ ವಿಜಯದ ಗುಣಸುಂದರಿ,ವಸ್ತ್ರಾಪಹಾರದ ದ್ರೌಪತಿ,ಪಾಂಚಜನ್ಯದ ಮೃತ್ಯುಮಾಲಿನಿ, ಲಂಕದಹನದ ಸೀತೆ,ವಾಲಿಮೋಕ್ಷದ ತಾರೆ, ಕೀಚಕ ವದೆಯ ಸೈರೆಂದ್ರಿ, ಮಂಡೋದರಿ,ಕುಂತಿ,ಕನ್ಯಾಕುಮಾರಿ, ಚಿತ್ರಾಂಗದೆ, ತಾರಾವಳಿ,ಮೇನಕೆ, ನಾಟ್ಯರಾಣಿ ಶಾಂತಲೆ ಸೇರಿದಂತೆ ಎಲ್ಲ ವೀರ ಶೃಂಗಾರ ಮತ್ತು ಬಾವನಾತ್ಮಕವಾದ ಪಾತ್ರಗಳನ್ನು ಲೀಲಾಜಾಲವಾಗಿ ರಂಗದಲ್ಲಿ ಶ್ರುತಪಡಿಸುವ ಇವರು, ಪುರುಷ ಪಾತ್ರಗಳನ್ನು ಅಷ್ಟೇ ಸಮರ್ಥವಾಗಿ ನಿಭಾಯಿಸಿ ಕಲಾಭಿಮಾನಿಗಳ ಮನಸೂರೆಗೊಳ್ಳಬಲ್ಲ ಅಭಿಜಾತ ಕಲಾವಿದರು..
ಸಾಧನೆಯ ತಪಸ್ಸಿನಿಂದ ಪರಿಪೂರ್ಣತೆಯ ಮೇರುಪಥದಲ್ಲಿ ಸಾಗಿದ ಇವರು,ತಾನು ಸಾಗಿಬಂದ ಕಠಿಣ ಹಾದಿಯ ಹೆಜ್ಜೆಗುರುತುಗಳನ್ನು ಮರೆತವರಲ್ಲ..ಮೃದು ಸ್ವಭಾವದ ಸದಾ ಹಸನ್ಮುಖಿಯಾಗಿರುವ ಇವರು ದೇಶದಾದ್ಯಂತ ಅಸಂಖ್ಯಾತ ಅಭಿಮಾನಿಗಳು ಮತ್ತು ಶಿಷ್ಯಸಮೂಹವನ್ನು ಹೊಂದಿದ್ದು, ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ,ಶೇಣಿ ಜನ್ಮಶತಾಬ್ದಿ ಮತ್ತು ಸಂಸ್ಮರಣಾ ಪ್ರಶಸ್ತಿ, ಕುರಿಯ ವಿಠ್ಠಲ ಶಾಸ್ತ್ರಿ ಶತಮಾನೋತ್ಸವ ಪ್ರಶಸ್ತಿ, ಜಾನಪದಶ್ರೀ ಪ್ರಶಸ್ತಿ,ಸ್ಕಂದ ಪುರಸ್ಕಾರ ಪ್ರಶಸ್ತಿ,ಯಕ್ಷಗಾನ ಕಲಾರಂಗ ಪ್ರಶಸ್ತಿ,ಅಗರಿ ಪ್ರಶಸ್ತಿ ,ಚಂದು ಪೂಜಾರಿ ಸಂಸ್ಮರಣಾ ಪ್ರಶಸ್ತಿ,ಕೋಟ ವೈಕುಂಠ ಪ್ರಶಸ್ತಿ,ಪಾತಾಳ ಪ್ರಶಸ್ತಿ,ಕಡಂದೇಲು ಪುರುಷೋತ್ತಮ ಭಟ್ ಜನ್ಮಶತಾಬ್ದಿ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ,ಪುರಸ್ಕಾರಗಳಿಗೆ ಬಾಜನರಾಗಿದ್ದಾರೆ.
ಇವರು ವಿಶಾಲಾಕ್ಷಿಯವರೊಂದಿಗೆ ಅನುರೂಪ ದಾಂಪತ್ಯ ಜೀವನವನ್ನು ನಡೆಸಿ ಆಶಾಲತ, ಮನೋಜ ಮತ್ತು ತನುಜ ಎನ್ನುವ ಮೂವರು ಮಕ್ಕಳನ್ನು ಪಡೆದಿದ್ದು,ಪ್ರಸ್ತುತ ತೀರ್ಥಹಳ್ಳಿ ತಾಲೂಕಿನ ಮಂಗಳಗಾರ್
This is an exhibition of the achievements and life of yakshaartists.
Today's yakshakas are.. M.K.Ramesh Acharya, a veteran female character of Yaksharanga, who was known for his mature performance in the ubhayatittu.
Srisritha was born on 30.10.1949 as the second of the eight children of Srikrishnayya Acharya and Rukmaniamma at Mangalagar in Kattehaklu village of Tirthahalli taluk.
After completing his primary education, he was attracted to yakshagana at the age of eleven. Inspired by his uncle's son Narasimha Acharya, he started dressing up in the Sri Jagadamba Krishaka Mandal, which was founded by his father.
He then entered the stage with a gazette at Goligaradi Mela and served there for a year. Later he joined The Mandarti Mela and got knowledge of yakshagana footprints, dancing, dance and speech from Dasavatari Veerbhadra Nayak. There he was found the association of Puttur Narayana Hegde and Patala Venkataramana Bhatt, the famous artistof Tenkutitt. He served for three years and joined dharmapuri next year. When the venerable Ratnavarma Hegde refused to join the mela due to the lack of experience, senior Bhagavata Vitthal Sastry, who had noticed the boy's skill, spoke to Hegde and gave him complete yakshagana training at his home during the rainy season. He then gained full knowledge of the field under the guidance of Vitthal Shastri of Kuri in the Dharmapuri Mela, which was being held by the great artists for three years, and worked hard to get all the habits he needed to do the stage in the rainy season.
Later, he joined the Suratkal Mela and served as a female lead in the co-role of the famous Sridevi-costumed Cockkada Ishwara Bhatt, who was a perfect artist in the company of veteran artistes Sheni and Thekkate, and also in the talamadadala kuta of Samagara and Sheni, who is also known as Saraswathi's sons in yakshasranga. He served for a long period of two decades in the Suratkal Mela and was recognized as one of the great artistes of yakshagana, and later, at the insistence of Yakshagana Yugavartaka D.Kalinga Navada, he entered the Saligramam mela, unfortunately, but unfortunately, the same year. He roamed the Saligramam Mela for two years and joined the Puna Suratkal Mela for five years. At that time, when suratkal mela stopped, he joined the Perdur mela for two years at Neelavar mela, two years at The Nilavar Mela, one year at Goligaradi Mela, three years at The Goligaradi Mela, two years at Mangaladevi Mela, one year at Sunkakate, and now serving as a female lead in Hanumagiri Mela.

The character is a live lyric, a damayant, a beautiful, beautiful dress and a beautiful speech, a lively, beautiful, and a damayanti of history. The heroic and bold characters are the ruchimati of King Uragasena, Harishchandra Mahatma's Chandramati, Papanna Vijaya's Gunasundari, Droopathi of Vastrapahara, Panchjanya's Death Malini, Sita of Lankadahana, Valimoksha Star, Keechaka Vadeya Sirendri, Mandori, Kunti, Kanyakumari, Chitrangade, Taravali, Meenake, Natyarani Shantale. The artists who can play male characters equally well and impress the artistes.
He had gone on the path of perfection by austerity and had not forgotten the hard track streak. He is a gentle man and has a large number of fans and disciples across the country, including Karnataka Yakshagana Academy Award, Sheni Janmashatabdi and Sammarna Award, Kuriya Vitthal Sastri Centenary Award, Folk Shri Award, Skanda Award, Yakshagana KalaRanga Award, Agari Award, Chandu Priest Sammana Award, Kota Vaikunta Award, Patala Award, Kadandelu Purushottam Bhatt Janmashtami Award.
She has three children, Ashalatha, Manojand Tanuja, who lived in a conjugal marriage with Vishalakshi and is currently in Mangalagar in Tirthahalli taluk.
No comments:
Post a Comment