🌀ಯಕ್ಷ💥ಮಂದಾರ🌀
#ಯಕ್ಷಮಂದಾರ - 35 | ಪೆರ್ಲ ಜಗನ್ನಾಥ ಶೆಟ್ಟಿ | Perla Jaganath Shetty | Hanumagiri | ಹನುಮಗಿರಿ ಮೇಳ ಇದು ಯಕ್ಷ ಕಲಾವಿದರ ಸಾಧನೆ ಮತ್ತು ಜೀವನಗಾಥೆಯ ಅನಾವರಣ.. ಇಂದಿನ ನಮ್ಮ ಯಕ್ಷಸಾಧಕರು.. ತೆಂಕುತಿಟ್ಟಿನ ಪ್ರಸಿದ್ಧ ಪುರುಷ ಮತ್ತು ಪುಂಡು ವೇಷಧಾರಿ,ಹನುಮಗಿರಿ ಮೇಳದ ಕಲಾವಿದರಾದ ಪೆರ್ಲ ಜಗನ್ನಾಥ ಶೆಟ್ಟಿಯವರು... ಇವರು ಕಾಸರಗೋಡು ಜಿಲ್ಲೆಯ ಕಾಟುಕುಕ್ಕೆಯಲ್ಲಿ ಶ್ರೀ ಮಂಜಯ್ಯ ಶೆಟ್ಟಿ ಮತ್ತು ಶ್ರೀಮತಿ ಕಮಲಮ್ಮ ಶೆಡ್ತಿಯವರ ಪುತ್ರನಾಗಿ ದಿನಾಂಕ:25.10.1966ರಲ್ಲಿ ಜನಿಸಿದರು.. ಬಾಲ್ಯದಲ್ಲಿಯೇ ಯಕ್ಷಗಾನ ಕ್ಷೇತ್ರದತ್ತ ಆಕರ್ಷಿತರಾಗಿ ಎಂಟನೇಯ ತರಗತಿಯಲ್ಲಿರುವಾಗಲೇ, ತನ್ನ ವಿದ್ಯಾಭ್ಯಾಸಕ್ಕೆ ವಿದಾಯ ಹೇಳಿದ ಇವರು, ಕಾಟುಕುಕ್ಕೆ ಕುಂಜ್ನಿರಾಮ ಮಣಿಯಾಣಿಯವರಲ್ಲಿ ಯಕ್ಷಗಾನದ ಪ್ರಾಥಮಿಕ ವಿದ್ಯಾಭ್ಯಾಸವನ್ನು ಪಡೆದು,ನಂತರ ಧರ್ಮಸ್ಥಳ ಲಲಿತ ಕಲಾಕೇಂದ್ರದಲ್ಲಿ ಗುರುಗಳಾದ ಗೋವಿಂದ ಭಟ್ ಮತ್ತು ಕರ್ಗಲ್ ವಿಶ್ವೇಶ್ವರ ಭಟ್ಟರ ಮಾರ್ಗದರ್ಶನದಲ್ಲಿ ಯಕ್ಷಗಾನದ ಸರ್ವಾಂಗಗಳ ಮಾಹಿತಿಯನ್ನು ಕರಗತ ಮಾಡಿಕೊಂಡು,1981ರಲ್ಲಿ ಕದ್ರಿ ಮೇಳದಲ್ಲಿ ಗೆಜ್ಜೆಕಟ್ಟಿ ರಂಗ ಪ್ರವೇಶ ಮಾಡಿದರು..ಕದ್ರಿ ಮೇಳದಲ್ಲಿ ಏಳು ವರ್ಷ ಸೇವೆ ಸಲ್ಲಿಸಿದ ಇವರು ನಂತರ,ಹದಿಮೂರು ವರ್ಷ ಸುರತ್ಕಲ್ ಮೇಳದಲ್ಲಿ,ಕುಂಟಾರು ಮೇಳದಲ್ಲಿ ಐದು ವರ್ಷ,ಎಡನೀರು ಮೇಳದಲ್ಲಿ ಎರಡು ವರ್ಷ,ಹೊಸನಗರ ಮೇಳದಲ್ಲಿ ಹತ್ತು ವರ್ಷ ಸೇವೆಸಲ್ಲಿಸಿ, ಪ್ರಸ್ತುತ ಎರಡು ವರ್ಷಗಳಿಂದ ಹನುಮಗಿರಿ ಮೇಳದ ಪ್ರಧಾನ ವೇಷದಾರಿಗಳಲ್ಲೊಬ್ಬರಾಗಿ ಸೇವೆಸಲ್ಲಿಸುತ್ತಿದ್ದಾರೆ.. ಕಳೆದ ನಾಲ್ಕು ದಶಕಗಳಿಂದ ನಿಷ್ಠೆಯಿಂದ ಕಲಾಮಾತೆಯ ಸೇವೆಸಲ್ಲಿಸುತ್ತಿರುವ ಇವರು,ದಿ.ಶೇಣಿ ಗೋಪಾಲಕೃಷ್ಣ ಭಟ್, ದಿ.ತೆಕ್ಕಟ್ಟೆ ಆನಂದ ಮಾಸ್ಟರ್,ದಿ.ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟಿ,ಶಿವರಾಮ ಜೋಗಿ ,ಎಂ.ಕೆ ರಮೇಶ ಆಚಾರ್ಯ, ಉಜಿರೆ ಅಶೋಕ ಭಟ್,ಪದ್ಯಾಣ ಗಣಪತಿ ಭಟ್, ಅಂಬಾಪ್ರಸಾದ ಪಾತಾಳ,ಬಂಟ್ವಾಳ ಜಯರಾಮ ಆಚಾರ್ಯ ಮೊದಲಾದ ಹಿರಿಯ ಕಲಾವಿದರ ಸಾಂಗತ್ಯದಲ್ಲಿ ತಿರುಗಾಟ ನಡೆಸಿ,ಅಪಾರವಾದ ಅನುಭವವನ್ನು ಗಳಿಸಿಕೊಂಡಿದ್ದಾರೆ... ಅತ್ಯಂತ ಕ್ಷಿಪ್ರಗತಿಯಲ್ಲಿ ಬಣ್ಣ ಬಳಿದುಕೊಂಡು,ಆಕರ್ಷಕವಾಗಿ ವೇಷಗಾರಿಕೆ ಮಾಡಬಲ್ಲ ಸಿದ್ಧಿಯನ್ನು ಸಾದಿಸಿಕೊಂಡಿರುವ ಇವರು,ಒಂದೇ ಪ್ರದರ್ಶನದಲ್ಲಿ ಎರಡು ಮೂರು ವೇಷಗಳನ್ನು ಮಾಡಬಲ್ಲ ಅಪೂರ್ವ ಕಲಾವಿದರು....ಯಾವುದೇ ಸ್ವರೂಪದ ವೇಷಗಾರಿಕೆಯನ್ನು ಮಾಡಬಲ್ಲ ಇವರು,ಅನಿವಾರ್ಯ ಪರಿಸ್ಥಿತಿಯಲ್ಲಿ ಯಾವುದೇ ಪಾತ್ರವನ್ನಾದರೂ ನಿರ್ವಹಿಸಬಲ್ಲ ಚಾಕಚಕ್ಯತೆ ಯನ್ನು ಹೊಂದಿರುವ ಅಪೂರ್ವ ಸಾಧಕ ಕಲಾವಿದರಲ್ಲೊಬ್ಬರಾಗಿ ಗುರುತಿಸಿಕೊಂಡಿದ್ದಾರೆ.. ಸ್ಪಷ್ಟ ಮತ್ತು ಸುಲಲಿತವಾದ ಮಾತುಗಾರಿಕೆ, ಸುಂದರವಾದ ವೇಷಗಾರಿಕೆ, ಹಿತಮಿತವಾದ ನಾಟ್ಯ ಮತ್ತು ಪ್ರಬುದ್ಧವಾದ ರಂಗನಡೆ, ಯಾವುದೇ ಪಾತ್ರವನ್ನಾದರೂ ಔಚಿತ್ಯಪೂರ್ಣವಾಗಿ ಚಿತ್ರಿಸುವ ಪರಿ,ಆಗಾದವಾದ ಪುರಾಣ ಜ್ಞಾನ ಮತ್ತು ಅಪಾರವಾದ ಪಾಂಡಿತ್ಯದಿಂದ ಪಾತ್ರದ ಮೆರುಗು ಹೆಚ್ಚಿಸಬಲ್ಲ ಇವರ ಅಭಿನಯದ ಈಶ್ವರ,ರಾಮ,ಕೃಷ್ಣ,ವಿಷ್ಣು,ಶ್ರೀನಿವಾಸ ಮೊದಲಾದ ಪಾತ್ರಗಳು ಕಲಾಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದೆ, ಉಳಿಯಬಲ್ಲವು ... ಯಕ್ಷರಂಗದಲ್ಲಿ ಆರಕ್ಕೇರದೆ ಮೂರಕ್ಕಿಳಿಯದೆ ಸದಾ ತನ್ನತನವನ್ನು ಉಳಿಸಿಕೊಂಡು,ಯಕ್ಷಗಾನದ ಸರ್ವ ಸಾಧಾರಣ ಎಲ್ಲ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸುತ್ತ, ಕಲಾ ಕ್ಷೇತ್ರದಲ್ಲಿ ಕರ್ತವ್ಯ ನಿಷ್ಠೆ ಮತ್ತು ಪ್ರಾಮಾಣಿಕವಾಗಿ ಸೇವೆಸಲ್ಲಿಸುತ್ತ ಬಂದ ಇವರಿಗೆ, ವ್ಯಾಯಾಮ ಶಾಲೆ ಪಾವೂರು ಹರೇಕಳ...ವಿಶ್ವೇಶ್ವರ ಹಾಲ್ ಮುಂಬೈ...ಅಭ್ಯುದಯ(ರಿ) ಶಿವಮೊಗ್ಗ...ಕುಂಟಾರು ಮೇಳದ ಅಭಿಮಾನಿ ಬಳಗ ಕಲ್ಲುಗುಡ್ಡೆ... ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನ ಪಾವಂಜೆ.. ಸಾರ್ವಜನಿಕ ಗಣೇಶೋತ್ಸವ ಸಮಿತಿ ಪುತ್ತೂರು...ದುರ್ಗಾ ಮಿತ್ರ ವೃಂದ ಮೈರ, ಕೇಪು... ಪೆರ್ಲ ಅಭಿಮಾನಿ ಬಳಗ,ಬಸವೇಶ್ವರ ನಗರ,ಬೆಂಗಳೂರು.. ಬಸ್ತಿ ಚೌಟ ದಂಪತಿಗಳ ಷಷ್ಟಬ್ದಿ ಮಹೋತ್ಸವದ ಸಂದರ್ಭದಲ್ಲಿ ನಡೆದ ಸನ್ಮಾನ ಸೇರಿದಂತೆ ಅನೇಕ ಸನ್ಮಾನ ಮತ್ತು ಪುರಸ್ಕಾರಗಳು ಸಂದಿವೆ.. ಶ್ರೀಮತಿ ಮೋಹಿನಿ ಶೆಟ್ಟಿಯವರೊಂದಿಗೆ ಆದರ್ಶ ದಾಂಪತ್ಯ ಜೀವನವನ್ನು ನಡೆಸಿ ಧನ್ಯಶ್ರೀ, ರಮ್ಯಶ್ರೀ ಮತ್ತು ರೂಪಿತ್ ಎಂಬ ಮೂವರು ಮಕ್ಕಳನ್ನು ಪಡೆದಿದ್ದು,ಸುಖ,ಸಂತೃಪ್ತ ಜೀವನವನ್ನು ನಡೆಸುತ್ತಿರುವ ಇವರು ಪ್ರಸ್ತುತ ಈಶ್ವರಮಂಗಲದಲ್ಲಿ ವಾಸವಾಗಿದ್ದಾರೆ.. ಸದಾ ಸ್ನೇಹಜೀವಿಯಾದ ಶೆಟ್ಟರು,ಅತ್ಯಂತ ಸರಳ ಮತ್ತು ಸೌಜನ್ಯದ ಗುಣಗಳಿಂದ ಯಕ್ಷ ಕಲಾವಲಯದಲ್ಲಿ ಸರ್ವರ ಪ್ರೀತಿ ಮತ್ತು ಅಭಿಮಾನಕ್ಕೆ ಪಾತ್ರರಾಗಿದ್ದು, ವಿಜಯದಶಮಿಯ ಈ ಸುದಿನ ತನ್ನ ಐವತ್ತೈದನೇಯ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದು, ಅವರಿಗೆ ಕಟೀಲು ಶ್ರೀ ಭ್ರಮರಾಂಬಿಕೆಯೂ ವೃತ್ತಿ ಮತ್ತು ವೈಯಕ್ತಿಕ ಬದುಕಿನಲ್ಲಿ ಆಯುರಾರೋಗ್ಯ, ಸುಖ,ಸಂಪತ್ತನ್ನು ನೀಡಿ ಸರ್ವ ಇಷ್ಟಾರ್ಥವನ್ನು ದಯಪಾಲಿಸಲಿ ಎಂದು ಶುಭಹಾರೈಸುತ್ತ, ಯಕ್ಷಮಂದಾರದ ಪರವಾಗಿ ಹುಟ್ಟುಹಬ್ಬದ ಶುಭಾಶಯಗಳನ್ನು ಸಲ್ಲಿಸುತ್ತಿದ್ದೇನೆ...🙏 ಸಾಹಿತ್ಯ:ಹಾಲಾಡಿ ಸಂತೋಷ ಶೆಟ್ಟಿ... ನಿರೂಪಣೆ:ಶ್ರೀಮತಿ ಅಮೃತ ಶೆಟ್ಟಿ... ಯಕ್ಷಗಾನ ಕಲಾವಿದರ ಪರಿಚಯ ಸರಣಿಯ ಎಲ್ಲ ವಿಡಿಯೋಗಳು ನಮ್ಮ ಯಕ್ಷ💥ಮಂದಾರ ಯೂಟ್ಯೂಬ್ ಚಾನಲ್..ನಲ್ಲಿ ಲಭ್ಯವಿದೆ.. ನಮ್ಮ ಯಕ್ಷ💥ಮಂದಾರ ಯೂಟ್ಯೂಬ್ ಚಾನಲ್ ಮತ್ತು ಫೇಸ್ಬುಕ್ ಪೇಜ್.. ನ್ನು download ಮಾಡಿಕೊಳ್ಳಿ..ಮತ್ತು ನಾವು upload ಮಾಡುವ ಎಲ್ಲ ಯಕ್ಷಗಾನ ವಿಡಿಯೋಗಳ ಮಾಹಿತಿ ಪಡೆಯಿರಿ..ನಮ್ಮ ವಿಡಿಯೋಗಳನ್ನು ನೋಡಿ like ಮಾಡಿ,share ಮಾಡಿ ಪ್ರೋತ್ಸಾಹಿಸಿ... ಯಕ್ಷಗಾನ ಕಲೆಯನ್ನು ಉಳಿಸಿ,ಬೆಳೆಸಿ, ಪ್ರೋತ್ಸಾಹಿಸಿ.. ಧನ್ಯವಾದಗಳು🙏🙏🙏This is an exhibition of the achievements and life of yakshaartists.
Today's yakshakas are.. Perla Jagannath Shetty, the famous man and dressed in the garments of Tenkutitt, is the artist of Hanumagiri Mela.
He was born on 25.10.1966 as son of Sri Manjayya Shetty and Mrs. Kamalamma Shetty at Katukuku in Kasaragod district.
He was attracted to yakshagana in his early childhood and left his education in the eighth grade, and he took up yakshagana elementary education in Katukuku Kunjnirama Maniani and later under the guidance of gurus Govind Bhatt and Kargal Vishweshwara Bhatt at the Dharmapuri Fine Artcentre, and entered the stage at Kadri Mela in 1981. After serving seven years in Kadri Mela, he has served for thirteen years at Suratkal, five years at Kuntar mela, two years at The Left Water Mela, ten years at Hosanagar Mela and now serveas one of the main attire saints of Hanumagiri Mela for two years.
He has been serving the artmother with sincere devotion for the past four decades and has been in the company of veteran artistes like D.Sheni Gopalkrishna Bhatt, D.Thekkatte Ananda Master, D.Siddakate Chennappa Shetty, Shivaram Jogi, M.K. Ramesh Acharya, Ujire Ashok Asoka Bhatt, Padyana Ganapati Bhatt, Ambaprasad Patala, Banjara Jayaram acharya and others.
He is a very quick artist who can dress and dress with a very attractive dress, and can do two or three at the same exhibition. He is one of the most outstanding performers who can dress up any form of disguise and can play any role in an unavoidable situation.
Clear and smooth speech, beautiful dress, fine dance and mature ranganadu, the ability to portray any character with a discrete character, his legendary knowledge and great scholarship, his characters like Ishwar, Rama, Krishna, Vishnu, Srinivasa, etc. can remain in the minds of the artistes.
He has always maintained his own character in yakshagana, has been able to do all the ordinary roles of yakshagana, and he has been dedicated to the arts field and has been dedicated to the gymnasium Pavur Harekala. Vishveshwarhall Mumbai... Abhyudaya (R) Shivamogga... The fans of Kuntar Mela kalgude... Jnanashakti Subramanya Temple Pavanje.. Public Ganeshotsava Committee Puttur... Durga Mitra Vrinda Maira, Capu... Perla Fan Club, Basaveshwara Nagar, Bangalore.. Many honours and awards have been received, including honours and honours held on the occasion of shashtabdi of basti chauta couple.
Having three children dhanyasri, ramyasri and rupit, who have lived a happy and satisfied life with Mrs. Mohini Shetty, he is currently living in Ishwaramangalam.
ಯಕ್ಷಮಂದಾರ ವಿಡಿಯೋ ನೋಡಲೋಸುಗವಾಗಿ.
ವಾಹಿನಿಯ ಹೋಮ್ ಪೇಜ್ ಗಾಗಿ: https://www.youtube.com/channel/UCsrL
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: https://www.facebook.com/groups/27334
No comments:
Post a Comment