Monday, October 12, 2020

#ಯಕ್ಷಮಂದಾರ - 33 | ರವಿ ಶೆಟ್ಟಿ ವಾಟಾರು | Ravi Shetty Vataru | ಯಕ್ಷರಂಗದ ಕೋಲ್ಮಿಂಚು | ಯಕ್ಷಸಾಧಕರ |Part 33

                            🌀ಯಕ್ಷ💥ಮಂದಾರ🌀

#ಯಕ್ಷಮಂದಾರ - 33 | ರವಿ ಶೆಟ್ಟಿ ವಾಟಾರು | Ravi Shetty Vataru | ಯಕ್ಷರಂಗದ ಕೋಲ್ಮಿಂಚು | ಯಕ್ಷಸಾಧಕರ |Part 33
ಇದು ಯಕ್ಷಕಲಾವಿದರ ಸಾಧನೆ ಮತ್ತು ಜೀವನಗಾಥೆಯ ಅನಾವರಣ.. ಇಂದಿನ ನಮ್ಮಯಕ್ಷಸಾಧಕರು ಯಕ್ಷಗಾನದ ಬಡಗುತಿಟ್ಟಿನ ರಂಗಭೂಮಿಕೆಯಲ್ಲಿ ಕರ್ತವ್ಯ ನಿಷ್ಠೆ ಮತ್ತು ಕಠಿಣ ಪರಿಶ್ರಮದಿಂದ ಪ್ರಬುದ್ಧತೆಯನ್ನು ಸಾಧಿಸಿ ಯುವ ಪ್ರತಿಭಾವಂತರ ಸಾಲಿನಲ್ಲಿ ಹೆಜ್ಜೆಗುರುತು ಮೂಡಿಸುತ್ತಿರುವ ಪುಂಡು ಮತ್ತು ಪುರುಷ ವೇಷಧಾರಿಗಳಲ್ಲಿ ಒಬ್ಬರಾದ ಯುವ ಪ್ರೇಕ್ಷಕರ ಕಣ್ಮಣಿ ವಾಟಾರು ರವಿ ಶೆಟ್ಟಿಯವರು... ಶ್ರೀಯುತರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಯಡಮೊಗೆ ಸಮೀಪದ ವಾಟಾರು ಎಂಬಲ್ಲಿ,ಶ್ರೀ ಶಿವರಾಮ ಶೆಟ್ಟಿ ಮತ್ತು ಜಲಜಮ್ಮ ಶೆಡ್ತಿಯವರ ಪ್ರಥಮ ಪುತ್ರನಾಗಿ ದಿನಾಂಕ:10.01.1978ರಲ್ಲಿ ಜನಿಸಿದರು... ಬಾಲ್ಯದಲ್ಲಿಯೇ ಯಕ್ಷಗಾನದತ್ತ ಆಕರ್ಷಿತರಾದ ಇವರು ತನ್ನ ನಾಲ್ಕನೆಯ ತರಗತಿಯ ವಿದ್ಯಾಭಾಸಕ್ಕೆ ವಿದಾಯ ಹೇಳಿ, ಹಿರಿಯ ಯಕ್ಷಗಾನ ಕಲಾವಿದರಾಗಿದ್ದ ಕೊಚ್ಚಾಡಿ ರಾಮ ದೇವಾಡಿಗರಲ್ಲಿ ಯಕ್ಷಗಾನದ ಹೆಜ್ಜೆಗಾರಿಕೆ ಮತ್ತು ವೇಷಗಾರಿಕೆಯನ್ನು ಕಲಿತು,ತನ್ನ ಹದಿನೇಳನೇಯ ವಯಸ್ಸಿನಲ್ಲಿ, ನಾರಾಯಣ ಶೆಟ್ಟಿಯವರ ಯಜಮಾನಿಕೆಯ ಕಮಲಶಿಲೆ ಮೇಳದಲ್ಲಿ ಗೆಜ್ಜೆಕಟ್ಟಿದರು.. ನಂತರ ಮಡಾಮಕ್ಕಿ ಮತ್ತು ಮಂದಾರ್ತಿ ಮೇಳದಲ್ಲಿ ಸೇವೆಸಲ್ಲಿಸಿ,ಪ್ರಸ್ತುತ ಹದಿಮೂರು ವರ್ಷದಿಂದ ಮಾರಣಕಟ್ಟೆ ಮೇಳದಲ್ಲಿ ಪುರುಷ ಮತ್ತು ಪುಂಡು ವೇಷದಾರಿಯಾಗಿ ಸೇವೆಸಲ್ಲಿಸುತ್ತಿದ್ದಾರೆ... ಆಕರ್ಷಕ ಆಳಾಂಗ ಮತ್ತು ಸುಂದರವಾದ ರೂಪಸಿರಿಯನ್ನು ಹೊಂದಿರುವ ಇವರು ಸ್ಪಷ್ಟ ಮತ್ತು ಸುಲಲಿತವಾದ ಮಾತುಗಾರಿಕೆ,ಸುಂದರವಾದ ವೇಷಗಾರಿಕೆ ಮತ್ತು ಲಾಲಿತ್ಯಪೂರ್ಣವಾದ ನರ್ತನ ಶೈಲಿಯ ಮೂಲಕ ಪ್ರೇಕ್ಷಕರನ್ನು ಸೆಳೆಯಬಲ್ಲ ಅಪೂರ್ವ ಕಲಾವಿದರು.. . ತನ್ನದೇ ಆದ ವಿಶಿಷ್ಟ ಶೈಲಿಯ ಮೂಲಕ ರಂಗದಲ್ಲಿ ಪ್ರಬುದ್ಧತೆಯನ್ನು ಸಾಧಿಸಿರುವ ಇವರು ಕೃಷ್ಣ,ವಿಷ್ಣು,ಚಂದ್ರಹಾಸ, ಸುಧನ್ವ,ಸುದರ್ಶನ,ಬರ್ಬರಿಕ,ಸುದೀರ,ಅಭಿಮನ್ಯು,ಲೋಹಿತನೇತ್ರ,ದೇವವೃತ,ವೃಷಸೇನ, ಲವ,ಕುಶ,ಬಬ್ರುವಾಹನ ಮೊದಲಾದ ಪಾತ್ರಗಳನ್ನು ಬಹು ಸುಂದರವಾಗಿ ಅಭಿನಯಿಸುತ್ತಿದ್ದಾರೆ..ಕ್ಷೇತ್ರಮಹಾತ್ಮೆಯ ಮನ್ಮಥ ಮತ್ತು ಶಶಿಕೀರ್ತಿ ಪಾತ್ರಗಳಲ್ಲಿ ಮಿಂಚು ಹರಿಸಬಲ್ಲ ಇವರ ಚುರುಕು ನಡೆ ಮತ್ತು ಮಾತುಗಾರಿಕೆಯ ಶೈಲಿಯಿಂದ ಜನಮನ್ನಣೆ ಗಳಿಸಿದ್ದಾರೆ.. ಐರ್ಬೈಲು ಆನಂದ ಶೆಟ್ಟಿ,ಉಮೇಶ ಸುವರ್ಣ,ಹೀರೆಮಕ್ಕಿ ಸುಬ್ರಾಯ ಭಾಗವತ,ಸುಧಾಕರ ಕೊಠಾರಿ,ಯಳಬೇರು ಶೇಖರ ಶೆಟ್ಟಿ,ಕೊಳಲಿ ಕೃಷ್ಣ ಶೆಟ್ಟಿ,ಅನಂತ ಕುಲಾಲ್,ಆನಂದ ಉಪ್ಪಿನಕುದ್ರು,ಶಂಕರ ದೇವಾಡಿಗ,ಗೋಳಿಕೆರೆ ಚಂದ್ರ ಗೌಡ ಮೊದಲಾದ ಹಿರಿಯ ಕಲಾವಿದರೊಂದಿಗೆ ತಿರುಗಾಟವನ್ನು ನಡೆಸಿದ್ದಾರೆ... ಕರಾವಳಿ,ಮಲೆನಾಡು ಪ್ರದೇಶದಲ್ಲಿ ಮಾತ್ರವಲ್ಲದೆ ಬೆಂಗಳೂರು, ಹುಬ್ಬಳ್ಳಿಯಲ್ಲಿ ಪ್ರದರ್ಶನವನ್ನು ನೀಡಿರುವ ಇವರು ವಿದೇಶ (UAE)ದಲ್ಲೂ ತನ್ನ ಕಲಾಪ್ರೌಡಿಮೆಯನ್ನು ಮೆರೆಸಿದ್ದಾರೆ. ವೃತ್ತಿ ಮತ್ತು ವೈಯುಕ್ತಿಕ ಬದುಕಿನಲ್ಲಿ ಶಿಸ್ತು ಮತ್ತು ಸೌಜನ್ಯದ ಗುಣಗಳನ್ನು ಅಳವಡಿಸಿಕೊಂಡು,ನಾಡಿನಾದ್ಯಂತ ತನ್ನ ಪ್ರತಿಭೆಯನ್ನು ಪ್ರದರ್ಶಿಸಿದ ಇವರು ಅಪಾರ ಅಭಿಮಾನಿಗಳ ಬಳಗವನ್ನು ಹೊಂದಿದ್ದು, ಹಲವಾರು ಸನ್ಮಾನ,ಪುರಸ್ಕಾರಗಳನ್ನು ಪಡೆದಿದ್ದಾರೆ.. ಸಾಂಸಾರಿಕ ಬದುಕಿನ ಸಂಗಾತಿಯಾಗಿ ಶ್ರೀಮತಿ ಅಂಬಿಕಾರವರ ಕೈ ಹಿಡಿದಿರುವ ಇವರು ಧನ್ಯ ಮತ್ತು ಧನುಷ್ ಎಂಬ ಇಬ್ಬರು ಮುದ್ದುಮಕ್ಕಳನ್ನು ಪಡೆದು ಸಂತೃಪ್ತ ಜೀವನವನ್ನು ನಡೆಸುತ್ತಿದ್ದಾರೆ.. ಯಕ್ಷಗಾನ ರಂಗದಲ್ಲಿ ಇವರ ಕೀರ್ತಿ ಸಾಧನೆಯ ಉತ್ತುಂಗ ಶಿಖರಕ್ಕೇರಲಿ..ಇವರ ಆರಾಧ್ಯ ಮೂರ್ತಿಯಾದ ಶ್ರೀ ಬ್ರಹ್ಮಲಿಂಗೇಶ್ವರ ಸ್ವಾಮಿಯು ಇವರಿಗೆ ಆಯುರಾರೋಗ್ಯ, ಸುಖ ಸಂಪತ್ತನ್ನು ಕರುಣಿಸಲಿ ಎನ್ನುವುದು ನಮ್ಮ ಯಕ್ಷಮಂದಾರದ ಶುಭ ಹಾರೈಕೆ.. ಸಾಹಿತ್ಯ:ಹಾಲಾಡಿ ಸಂತೋಷ ಶೆಟ್ಟಿ.... ನಿರೂಪಣೆ:ಶ್ರೀಮತಿ ಅಮೃತಾ ಶೆಟ್ಟಿ... ಮಾಹಿತಿ:ನಿತಿನ್ ಶೆಟ್ಟಿ ಹೊಸೂರು... ಸಹಕಾರ:ಜಯರಾಮ ಶೆಟ್ಟಿ ಹೊಸೂರು ಹೈಗಿನಕಟ್ಟೆ.. ಯಕ್ಷಗಾನ ಕಲಾವಿದರ ಪರಿಚಯ ಸರಣಿಯ ಎಲ್ಲ ವಿಡಿಯೋಗಳು ನಮ್ಮ ಯಕ್ಷ💥ಮಂದಾರ ಯೂಟ್ಯೂಬ್ ಚಾನಲ್..ನಲ್ಲಿ ಲಭ್ಯವಿದೆ.. ನಮ್ಮ ಯಕ್ಷ💥ಮಂದಾರ ಯೂಟ್ಯೂಬ್ ಚಾನಲ್ ಮತ್ತು ಫೇಸ್ಬುಕ್ ಪೇಜ್.. ನ್ನು download ಮಾಡಿಕೊಳ್ಳಿ..ಮತ್ತು ನಾವು upload ಮಾಡುವ ಎಲ್ಲ ಯಕ್ಷಗಾನ ವಿಡಿಯೋಗಳ ಮಾಹಿತಿ ಪಡೆಯಿರಿ..ನಮ್ಮ ವಿಡಿಯೋಗಳನ್ನು ನೋಡಿ like ಮಾಡಿ,share ಮಾಡಿ ಪ್ರೋತ್ಸಾಹಿಸಿ... ಯಕ್ಷಗಾನ ಕಲೆಯನ್ನು ಉಳಿಸಿ,ಬೆಳೆಸಿ, ಪ್ರೋತ್ಸಾಹಿಸಿ.. ಧನ್ಯವಾದಗಳು🙏🙏🙏

🌀💥🌀 This is an exhibition of the achievements and life of yakshaganaartists. Today, our yakshagana sadhakas are a disciple of yakshagana who is a young audience who is a man of the young talents who are doing their duty and hard work and are making a mark in the ranks of young talents. Mr. Sivaramshetty and Jalajamma Shetty were born on 10.01.1978 at Vataru near Yadamoge in Kundapur taluk of Udupi district. He was attracted to Yakshagana in his early childhood and bid farewell to his fourth grade education, learned the footwork and costume of Yakshagana among the veteran Yakshagana artistes, Kochchadi Rama Devadiga, and tied the knot at the Kamalasheelmemela of Narayan Shetty's mastery at the age of seventeen. He then served at Madamakki and Mandarti Mela and has been serving as a male and a spooky dresser for the past thirteen years. With a charming and beautiful look, he is a unique artist who can attract the audience with clear and smooth speech, beautiful dressand a loving dance style. . He has mastered the stage with his own unique style and is playing the roles krishna, vishnu, chandrahasa, sudhanva, sudarshana, barbarika, sudhira, abhimanyu, lohitanetra, devavruta, vrishasena, lava, kusha, babruvahana etc. He has gained popularity with his sharp and speech-style, which is a brilliant mananda and sasikala kirti. He has toured with veteran artists like Irbailu Ananda Shetty, Sukumar Suvarna, Heeramakki Subraya Bhagavata, Sudhakar Kothari, Yelaberu Sekhar Shetty, Flute Krishna Shetty, Anantha Kulal, Ananda Uppanakudru, Shankar Devadiga, Golikere Chandra Gowda and others. He has performed not only in the coastal and malaria regions but also in Bangalore and Hubli and has also performed in the UAE. He has imbibed discipline and courtesy in his professional and personal life and has shown his talentthroughout the country and has a large audience and has won many awards. She is holding the hands of Mrs. Ambika as a companion of domestic life and has two lovely children Dhanya and Dhanush and leads a satisfying life. May his reputation reach the peak of his achievementin the yakshagana field. Our yakshamandar abine wish ed to sri brahmaheswara swamy, his adored idol, to give him a healthy and happy life. Literature:Haladi Santosh Shetty.... Narration:Smt. Amrita Shetty... Information:Tirunelveli Shetty Hosur... Cooperation:Jayaram Shetty Hosur Haiginakatta.. All the videos of the Yakshagana Artistes Introduction Series are our Yaksha💥Mandar YouTube channel.. Available in.. Our Yaksha💥Mandar YouTube channel and Facebook page.. Download.. And get information about all yakshagana videos we upload.. Watch our videos like, share and encourage... Save, develop and encourage yakshagana art.. Thank you🙏🙏🙏


ಯಕ್ಷಮಂದಾರ ವಿಡಿಯೋ ನೋಡಲೋಸುಗವಾಗಿ.

ವಾಹಿನಿಯ ಹೋಮ್ ಪೇಜ್ ಗಾಗಿ: https://www.youtube.com/channel/UCsrL

ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: https://www.facebook.com/groups/27334

No comments:

Post a Comment

#ಯಕ್ಷಮಂದಾರ - 51 | ಹೆನ್ನಾಬೈಲು ಸಂಜೀವ ಶೆಟ್ಟಿ | Hennabailu Sanjeeva Shetty | ಪ್ರಸಿದ್ದ ಸ್ತ್ರೀಪಾತ್ರದಾರಿ |

🌀ಯಕ್ಷ💥ಮಂದಾರ🌀 #ಯಕ್ಷಮಂದಾರ  - 51 | ಹೆನ್ನಾಬೈಲು ಸಂಜೀವ ಶೆಟ್ಟಿ | Hennabailu Sanjeeva Shetty | ಪ್ರಸಿದ್ದ ಸ್ತ್ರೀಪಾತ್ರದಾರಿ...