🌀ಯಕ್ಷ💥ಮಂದಾರ🌀
ಯಕ್ಷಮಂದಾರ - 32 | ಪ್ರಸನ್ನ ಶೆಟ್ಟಿಗಾರ್ ಮಂದಾರ್ತಿ | Prasanna Shettygar Mandarti | Yakshagana Yuvakanmani
ಇದು ಯಕ್ಷಕಲಾವಿದರ ಸಾಧನೆ ಮತ್ತು ಜೀವನಗಾಥೆಯ ಅನಾವರಣ ಇಂದಿನ ನಮ್ಮ ಯಕ್ಷಸಾಧಕರು... ಯಕ್ಷರಂಗದ ಬಡಗುತಿಟ್ಟಿನ ರಂಗಭೂಮಿಕೆಯಲ್ಲಿ ತನ್ನ ಪ್ರತಿಭೆ, ಪರಿಶ್ರಮ ಮತ್ತು ಸಿದ್ಧಿಯಿಂದಲೇ ಪ್ರಸಿದ್ಧಿಯನ್ನು ಪಡೆದುಕೊಂಡ ಬೆರಳೆಣಿಕೆಯ ಯುವ ಸಾದಕರಲ್ಲಿ ಖ್ಯಾತನಾಮರಾದ ಪ್ರಸನ್ನ ಶೆಟ್ಟಿಗಾರ್ ಮಂದಾರ್ತಿಯವರು .. ಶ್ರೀಯುತರು ಉಡುಪಿ ಜಿಲ್ಲೆಯ ಮಂದಾರ್ತಿಯಲ್ಲಿ ಗಂಗಾಧರ ಶೆಟ್ಟಿಗಾರ್ ಮತ್ತು ಸುಲೋಚನಾ ದಂಪತಿಗಳ ಪುಣ್ಯಗರ್ಭದಲ್ಲಿ ದಿನಾಂಕ:14.07.1985ರಲ್ಲಿ ಜನಿಸಿದರು.. ಯಕ್ಷಗಾನದ ತವರೂರಾದ ಮಂದಾರ್ತಿಯಲ್ಲಿಯೇ ಹುಟ್ಟಿ ಬೆಳೆದಿದ್ದುದರಿಂದ ಬಾಲ್ಯದಲ್ಲಿಯೇ ಯಕ್ಷಗಾನ ಕ್ಷೇತ್ರದತ್ತ ಆಕರ್ಷಿತರಾದ ಇವರು ಮಕ್ಕಳ ಮೇಳ ತಂತ್ರಾಡಿ(ರಿ) ಇದರ ಯಕ್ಷಗುರುಗಳಾದ ಹಿರಿಯಣ್ಣ ಶೆಟ್ಟಿಗಾರರಲ್ಲಿ ಯಕ್ಷಗಾನದ ತಾಳ ಲಯ ಜ್ಞಾನದ ಸಂಪೂರ್ಣ ವಿದ್ಯೆಯನ್ನು ಕರಗತ ಮಾಡಿಕೊಂಡು, ಶ್ರೀ ಕ್ಷೇತ್ರ ಮಂದಾರ್ತಿ ಮೇಳದಲ್ಲಿ ಗೆಜ್ಜೆಕಟ್ಟಿ ರಂಗಪ್ರವೇಶ ಮಾಡಿದರು...ಅಲ್ಲಿ ಹಿರಿಯ ಕಲಾವಿದರ ರಂಗನಡೆಯನ್ನು ಅನುಸರಿಸುತ್ತ ಮುಂದುವರಿದ ಇವರು ಯಕ್ಷರಂಗದಲ್ಲಿ ಒಬ್ಬರು ಪರಿಪೂರ್ಣ ಕಲಾವಿದರಾಗಿ ಮೂಡಿಬಂದರು... ಆರು ವರ್ಷಗಳ ಕಾಲ ಮಂದಾರ್ತಿ ಮೇಳದಲ್ಲಿ ಸೇವೆಸಲ್ಲಿಸಿದ ಇವರು,ಪ್ರಸ್ತುತ ಹತ್ತು ವರ್ಷದಿಂದ ಸಾಲಿಗ್ರಾಮ ಮೇಳದಲ್ಲಿ ಕಲಾಸೇವೆ ಮುಂದುವರಿಸುತ್ತಿದ್ದಾರೆ... ಪುರುಷ ಮತ್ತು ಎರಡನೆಯ ವೇಷಕೊಪ್ಪುವ ಆಕರ್ಷಕ ಆಳಾಂಗವನ್ನು ಹೊಂದಿರುವ ಇವರು ಯಕ್ಷಗಾನದ ಚೌಕಟ್ಟನ್ನು ಮೀರದೆ ಪಾತ್ರದ ಔಚಿತ್ಯವನ್ನು ಕೆಡಿಸದೆ ತನ್ನ ಮಾತುಗಾರಿಕೆಯ ಮೋಡಿ ಮತ್ತು ವೇಷಗಾರಿಕೆ ಯ ಸೊಗಸಿನಿಂದಲೇ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಬಲ್ಲ ಪ್ರತಿಬಾನ್ವಿತರು.. ತನ್ನ ಗತ್ತು ಗಾಂಭೀರ್ಯದ ರಂಗನಡೆ ,ಲಾಲಿತ್ಯಪೂರ್ಣ ನಾಟ್ಯ,ಶ್ರುತಿಬದ್ದ ಮಾತುಗಾರಿಕೆ,ಸುಂದರವಾದ ವೇಷಗಾರಿಕೆ ಮತ್ತು ಪ್ರಬುದ್ಧವಾದ ಹೆಜ್ಜೆಗಾರಿಕೆ ಮತ್ತು ರಂಗನಿರ್ವಹಣೆಯಿಂದ ಜನಮನ ಸೂರೆಗೊಂಡಿದ್ದಾರೆ..ಇವರು ಭೀಷ್ಮವಿಜಯದ ಭೀಷ್ಮ ಮತ್ತು ಸಾಲ್ವನಾಗಿಯೂ,ಕೀಚಕ ವದೆಯ ಕೀಚಕ ಮತ್ತು ವಲಲನಾಗಿಯೂ,ರಾಮಾಯಣದ ರಾಮ ಮತ್ತು ರಾವಣನಾಗಿಯೂ ಅಭಿನಯಿಸಬಲ್ಲರು...ಪಾಂಚಜನ್ಯ ಮತ್ತು ಶ್ರೀ ಕೃಷ್ಣ ಪಾರಿಜಾತದ ಕೃಷ್ಣ,ಸುಧನ್ವ ಮೋಕ್ಷದ ಸುಧನ್ವ,ಧರ್ಮಾಂಗದ ಚರಿತ್ರೆಯ ಧರ್ಮಾಂಗದ, ಬ್ರಹ್ಮಕಪಾಲದ ಬ್ರಹ್ಮ,ಸತ್ಯ ಹರಿಶ್ಚಂದ್ರದ ಹರಿಶ್ಚಂದ್ರ, ದ್ರೌಪತಿ ವಸ್ತ್ರಾಪಹಾರದ ದುಶ್ಶಾಸನ, ಕೃಷ್ಣ,ವಿಷ್ಣು,ಮಾರ್ತಾಂಡತೇಜ, ಅರ್ಜುನ ಮೊದಲಾದ ಪಾತ್ರಗಳನ್ನು ನಿರ್ವಹಿಸಿ,ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ..ಆಧುನಿಕ ಪ್ರಸಂಗದ ಪಾತ್ರಗಳಲ್ಲೂ ತನ್ನ ಪ್ರಬುದ್ಧತೆಯನ್ನು ಮೆರೆಸಿರುವ ಇವರು ಕಸ್ತೂರಿ ತಿಲಕದ ತಿಲಕರತ್ನ ಮತ್ತು ಈ ವರ್ಷದ ಜನಪ್ರಿಯ ಪ್ರಸಂಗ ಸೂರ್ಯಸಖಿ ಚಂದ್ರಮುಖಿಯ ಸುಪ್ರಸನ್ನನ ಪಾತ್ರದಲ್ಲಿ ಅಪಾರ ಕೀರ್ತಿ ಸಂಪಾದಿಸಿದ್ದಾರೆ... ಅತ್ಯಂತ ಶಿಸ್ತು,ಸರಳತೆ ಮತ್ತು ಸೌಜನ್ಯದ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿರುವ ಇವರು,ಯಕ್ಷರಂಗದಲ್ಲಿ ದೇಶ, ವಿದೇಶಗಳಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದು,ಹಲವಾರು ಪ್ರಶಸ್ತಿ ಸನ್ಮಾನಗಳಿಗೆ ಬಾಜನರಾಗಿದ್ದಾರೆ... ಶ್ರೀಮತಿ ವೀಣಾರನ್ನು ಬಾಳಸಂಗಾತಿಯಾಗಿ ಸ್ವೀಕರಿಸಿದ ಇವರು ಧನಿಷ್ಕ ಎಂಬ ಮುದ್ದು ಮಗಳನ್ನು ಪಡೆದು ಸಂತೃಪ್ತ ಜೀವನವನ್ನು ನಡೆಸುತ್ತಿದ್ದಾರೆ.... ಇವರಿಗೆ ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿಯೂ ಆಯುರಾರೋಗ್ಯ,ಸುಖ ಸಂಪತ್ತನ್ನು ನೀಡಲಿ.. ಇವರ ಕೀರ್ತಿ ಗಗನದೆತ್ತರಕ್ಕೇರಲಿ ಎನ್ನುವುದು ನಮ್ಮ ಯಕ್ಷಮಂದಾರದ ಶುಭಹಾರೈಕೆ.. ಸಾಹಿತ್ಯ:ಹಾಲಾಡಿ ಸಂತೋಷ ಶೆಟ್ಟಿ.. ನಿರೂಪಣೆ:ಶ್ರೀಮತಿ ಅಮೃತಾ ಶೆಟ್ಟಿ... ಯಕ್ಷಗಾನ ಕಲಾವಿದರ ಪರಿಚಯ ಸರಣಿಯ ಎಲ್ಲ ವಿಡಿಯೋಗಳು ನಮ್ಮ ಯಕ್ಷ💥ಮಂದಾರ ಯೂಟ್ಯೂಬ್ ಚಾನಲ್..ನಲ್ಲಿ ಲಭ್ಯವಿದೆ.. ನಮ್ಮ ಯಕ್ಷ💥ಮಂದಾರ ಯೂಟ್ಯೂಬ್ ಚಾನಲ್ ಮತ್ತು ಫೇಸ್ಬುಕ್ ಪೇಜ್.. ನ್ನು download ಮಾಡಿಕೊಳ್ಳಿ..ಮತ್ತು ನಾವು upload ಮಾಡುವ ಎಲ್ಲ ಯಕ್ಷಗಾನ ವಿಡಿಯೋಗಳ ಮಾಹಿತಿ ಪಡೆಯಿರಿ..ನಮ್ಮ ವಿಡಿಯೋಗಳನ್ನು ನೋಡಿ like ಮಾಡಿ,share ಮಾಡಿ ಪ್ರೋತ್ಸಾಹಿಸಿ... ಯಕ್ಷಗಾನ ಕಲೆಯನ್ನು ಉಳಿಸಿ,ಬೆಳೆಸಿ, ಪ್ರೋತ್ಸಾಹಿಸಿ.. ಧನ್ಯವಾದಗಳು🙏🙏🙏 🌀💥🌀 This is the exhibition of the achievements and life of yakshaganaartists Today's yakshaganas... Prasanna Shettygar Mandarti, a handful of young sadars who gained fame for his talent, hard work and skill in the yakshagana theatre. Mr. Gangadhar Shettygar and Sulochana were born on 14.07.1985 at Mandarthi in Udupi district. Being born and brought up in Mandarthi, the home of Yakshagana, he was attracted to the yakshagana field in his early childhood and made his debut in the Sri Kshetra Mandarthi Mela, mastering the full knowledge of yakshagana's rhythms in the yakshagana saints, The Rhythm. He followed the stage of the veteran artistes and became a perfect artist in the Yakshagana... He has served in Mandarti Mela for six years and has been serving in Saligramam mela for ten years now. With a male and two-dressed attractive depth, he is a man who can hold the audience with the charm of his speech and the charm of his speech and the charm of his character without spoiling the character's character. His son's dancing, his dance, his sruti-dancing, his beautiful dress, his mature disguise and theatrical performance. They can play bhishma and salvana of bhishma vijaya, keechaka vadeya keechaka and valala, rama and ravana of ramayana. Panchjanya and Sri Krishna Parijata's Krishna, Sudhanva of Moksha, Dharmamanga of The History of Dharma, Brahma of Brahma, Harishchandra of Brahma, Harishchandra of Satya Harishchandra, Dushasana of Draupati Vastrapahara, Krishna, Vishnu, Martandateja, Arjuna and others are well received by the audience. He has also made his debut in the roleof modern context and has earned immense fame in the role of Supraana of Kasturi Tilak and this year's popular episode Suryasakhi Chandramukhi. He has a great following in the yakshagana and has a great fan following in the country and abroad and has been awarded with many awards. She accepted Mrs. Venugopal as a partner and was living a happy life with a daughter named Dhaniska. ವಾಹಿನಿಯ ಹೋಮ್ ಪೇಜ್ ಗಾಗಿ: https://www.youtube.com/channel/UCsrL... ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: https://www.facebook.com/groups/27334...
No comments:
Post a Comment