Sunday, October 11, 2020

ಯಕ್ಷ ಮಂದಾರ - 31 | ಮಧುಕರ ಹೆಗ್ಡೆ ಮಡಾಮಕ್ಕಿ | Madhukar Hegde Madamakki | ಯುವ ಯಕ್ಷಸವ್ಯಸಾಚಿ

ಇದು ಯಕ್ಷ ಕಲಾವಿದರ ಸಾಧನೆ ಮತ್ತು ಜೀವನಗಾಥೆಯ ಅನಾವರಣ...

ಇಂದಿನ ನಮ್ಮ ಯುವ ಯಕ್ಷಸಾಧಕರು..ಯಕ್ಷರಂಗದ ಸವ್ಯಸಾಚಿ ಕಲಾವಿದ ಮಧುಕರ ಹೆಗ್ಡೆ ಮಡಾಮಕ್ಕಿ.. ಇವರು ಶ್ರೀ ತಿಮ್ಮಪ್ಪ ಹೆಗ್ಡೆ ಮತ್ತು ನಾಗರತ್ನ ಹೆಗ್ಗಡ್ತಿಯವರ ಪುತ್ರನಾಗಿ ದಿನಾಂಕ:8.10.1997ರಲ್ಲಿ ಮಡಾಮಕ್ಕಿಯಲ್ಲಿ ಜನಿಸಿದರು.. ಇವರು ತನ್ನ ಪ್ರಾಥಮಿಕ ಶಿಕ್ಷಣವನ್ನು ಮಡಾಮಕ್ಕಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಗಿಸಿ,ತನ್ನ ಪ್ರೌಢಶಿಕ್ಷಣವನ್ನು ಬೆಳಂಜೆ ಹೆರ್ಗ ವಿಠಲ ಶೆಟ್ಟಿ ಪ್ರೌಢಶಾಲೆಯಲ್ಲಿ ಪಡೆದರು..ನಂತರ ಸರ್ಕಾರಿ ಪದವಿಪೂರ್ವ ಕಾಲೇಜು ಹೆಬ್ರಿ ಇಲ್ಲಿ ದ್ವಿತೀಯ ಪಿ.ಯು.ಸಿಯವರೆಗಿನ ಶಿಕ್ಷಣವನ್ನು ಪಡೆದ ಇವರು ತನ್ನ ಶಿಕ್ಷಣವನ್ನು ಮುಗಿಸಿ, ಎರಡು ವರ್ಷಗಳ ಕಾಲ ಮಂಗಳೂರಿನಲ್ಲಿ ಹೊಟೇಲನಲ್ಲಿ ದುಡಿದರು.. ಬಾಗವತರಾದ ಸಂತೋಷ ಕುಮಾರ್ ಆರ್ಡಿ ಮತ್ತು ಹೆರಂಜಾಲು ಗೋಪಾಲ ಗಾಣಿಗರ ಪ್ರಭಾವಕ್ಕೆ ಒಳಗಾಗಿ,ಶಾಲಾ ಜೀವನದಲ್ಲಿಯೇ ಯಕ್ಷಗಾನದ ಬಗ್ಗೆ ಅಮಿತವಾದ ಆಸಕ್ತಿಯನ್ನು ತಳೆದಿದ್ದ ಇವರು ಒಂಬತ್ತನೆಯ ತರಗತಿಯಲ್ಲಿ ವಿದ್ಯಾಭ್ಯಾಸವನ್ನು ಪಡೆಯುತಿರುವ ಕಾಲದಲ್ಲಿಯೇ ಬಿಡುವಿನಲ್ಲಿ ಸತತವಾಗಿ ನಾಲ್ಕು ವರ್ಷಗಳ ಕಾಲ ಮಡಾಮಕ್ಕಿ ಮೇಳದಲ್ಲಿ ಸಣ್ಣಪುಟ್ಟ ಪಾತ್ರವನ್ನು ಮಾಡುತ್ತ, ಶ್ರೀ ವೀರಭದ್ರನ ಸೇವೆ ಸಲ್ಲಿಸುತ್ತ ಬಂದ ಇವರಿಗೆ ಯಕ್ಷಗಾನದ ಮೇಲಿನ ಆಸಕ್ತಿ ಹೋಟೆಲ್ ಉದ್ಯೋಗದಲ್ಲಿ ದುಡಿಯಲು ಅಡ್ಡಿಯಾಯಿತು..ನಂತರ ತನ್ನ ಅಮ್ಮನ ಒಪ್ಪಿಗೆಯನ್ನು ಪಡೆದ ಇವರು ಮಂದಾರ್ತಿ ಯಕ್ಷಗಾನ ಕೇಂದ್ರವನ್ನು ಸೇರಿಕೊಂಡು,ಯಕ್ಷಗಾನ ಕೇಂದ್ರದ ಗುರುಗಳಾದ ಕೃಷ್ಣಯ್ಯ ಆಚಾರ್ ಬಿದ್ಕಲ್ಕಟ್ಟೆ ಮತ್ತು ಮಹೇಶ್ ಕುಮಾರ್ ಮಂದಾರ್ತಿಯವರಲ್ಲಿ ಹೆಜ್ಜೆಗಾರಿಕೆ, ಬಾಗವತಿಕೆಯ ತಾಳ,ಲಯ ಹಾಗೂ ಚಂಡೆವಾದನದ ಶಿಕ್ಷಣವನ್ನು ಪಡೆದರು.. ನಂತರ ಮಂದಾರ್ತಿ ಮೇಳವನ್ನು ಸೇರಿಕೊಂಡು ಪ್ರಥಮ ವರ್ಷದಲ್ಲಿ ಸಣ್ಣ ಪುಟ್ಟ ವೇಷವನ್ನು ನಿರ್ವಹಿಸಿದ ಇವರು,ಎರಡನೆಯ ವರ್ಷದಲ್ಲಿ ಸಂಗೀತಗಾರನಾಗಿ ಸೇರಿಕೊಂಡರು.. ಮೂರನೆಯ ವರ್ಷದಲ್ಲಿ ಚಂಡೆವಾದಕರಾಗಿ ಸೇವೆಸಲ್ಲಿಸಿದರು.. ದಿ.ನಗರ ಸುಬ್ರಮಣ್ಯ ಆಚಾರ್ಯ,ಸದಾಶಿವ ಅಮೀನ್,ನಾಗೇಶ ಕುಲಾಲ್ ನಾಗರಕೊಡಿಗೆ,ಆಜ್ರಿ ಗೋಪಾಲ ಗಾಣಿಗ,ಹಾರಾಡಿ ಸರ್ವೋತಮ ಗಾಣಿಗ,ಹಾರಾಡಿ ರಮೇಶ ಗಾಣಿಗ, ಪರಮೇಶ್ವರ ನಾಯ್ಕ ಕಾನಗೋಡು,ನಗರ ಅಣ್ಣಪ್ಪ ಶೆಟ್ಟಿ,ಬೆಳ್ವೆ ಗಣೇಶ ಶೆಟ್ಟಿ,ಬೆಪ್ಡೆ ಗಣಪತಿ ಶೆಟ್ಟಿ,ಪ್ರಭಾಕರ ಶೆಟ್ಟಿ ಬೆಳಂಜೆ,ಗುಂಡಿಬೈಲ್ ಗಣಪತಿ ಭಟ್ ಮೊದಲಾದ ಹಿರಿಯ ಕಲಾವಿದರನ್ನು ಮೆಚ್ಚಿಕೊಂಡಿರುವ ಇವರು,ತನ್ನ ಗುರುಗಳಾದ ಮಹೇಶ ಕುಮಾರ್ ಮಂದಾರ್ತಿಯವರು,ತನ್ನ ಬೆಳವಣಿಗೆಗೆ ನೀಡಿದ ಸಹಕಾರವನ್ನು ಮುಕ್ತ ಮನಸ್ಸಿನಿಂದ ಸ್ಮರಿಸುತ್ತಿದ್ದಾರೆ.. ಸರಳ ಸೌಜನ್ಯದ ಗುಣಗಳಿಂದ ಯಕ್ಷರಂಗದಲ್ಲಿ ಸರ್ವರ ಪ್ರೀತಿಗೆ ಪಾತ್ರರಾಗಿರುವ ಇವರು,ತನ್ನ ಕಠಿಣ ಪರಿಶ್ರಮ ಮತ್ತು ಕ್ರೀಯಾಶೀಲ ವ್ಯಕ್ತಿತ್ವದಿಂದಾಗಿ ಯಕ್ಷರಂಗದಲ್ಲಿ ಸವ್ಯಸಾಚಿ ಕಲಾವಿದರಾಗಿ ಗುರುತಿಸಿಕೊಂಡಿದ್ದು,ಮೇಳದ ಪ್ರಬಂದಕರು ಮತ್ತು ಹಿರಿಯ ಕಲಾವಿದರ ಸಹಾಯ ಮತ್ತು ಮಾರ್ಗದರ್ಶನದಲ್ಲಿ ಉತ್ತಮ ಕಲಾವಿದರಾಗಿ ಮೂಡಿಬರುತಿದ್ದು,ಕಲಾರಂಗದಲ್ಲಿ ಇವರ ಕೀರ್ತಿ ಆಕಾಸದೆತ್ತರಕ್ಕೇರಲಿ,ಇವರಿಗೆ ಯಕ್ಷರಂಗದಲ್ಲಿ ಹೆಚ್ಚಿನ ಸಾಧನೆ ಮಾಡುವ ಯೋಗವನ್ನು ಆ ಜಗನ್ಮಾತೆ ಮಂದಾರ್ತಿ ದುರ್ಗಾಪರಮೇಶ್ವರಿಯೂ ಅನುಗ್ರಹಿಸಲಿ, ಪ್ರಶಸ್ತಿ ಪುರಸ್ಕಾರಗಳು ಇವರ ಮುಡಿಗೇರಲಿ ಎನ್ನುವುದು ಯಕ್ಷಮಂದಾರದ ಶುಭಹಾರೈಕೆ.. ಸಾಹಿತ್ಯ:ಹಾಲಾಡಿ ಸಂತೋಷ ಶೆಟ್ಟಿ.. ನಿರೂಪಣೆ:ಶ್ರೀಮತಿ ಅಮೃತಾ ಶೆಟ್ಟಿ.. ಯಕ್ಷಗಾನ ಕಲಾವಿದರ ಪರಿಚಯ ಸರಣಿಯ ಎಲ್ಲ ವಿಡಿಯೋಗಳು ನಮ್ಮಯಕ್ಷ💥ಮಂದಾರ ಯೂಟ್ಯೂಬ್ ಚಾನಲ್..ನಲ್ಲಿ ಲಭ್ಯವಿದೆ.. ನಮ್ಮ ಯಕ್ಷ💥ಮಂದಾರ ಯೂಟ್ಯೂಬ್ ಚಾನಲ್ ಮತ್ತು ಫೇಸ್ಬುಕ್ ಪೇಜ್.. ನ್ನು download ಮಾಡಿಕೊಳ್ಳಿ..ಮತ್ತು ನಾವು upload ಮಾಡುವ ಎಲ್ಲ ಯಕ್ಷಗಾನ ವಿಡಿಯೋಗಳ ಮಾಹಿತಿ ಪಡೆಯಿರಿ..ನಮ್ಮ ವಿಡಿಯೋಗಳನ್ನು ನೋಡಿ like ಮಾಡಿ,share ಮಾಡಿ ಪ್ರೋತ್ಸಾಹಿಸಿ... ಯಕ್ಷಗಾನ ಕಲೆಯನ್ನು ಉಳಿಸಿ,ಬೆಳೆಸಿ, ಪ್ರೋತ್ಸಾಹಿಸಿ.. ಧನ್ಯವಾದಗಳು This is the exhibition of the achievements and life of yakshaartists... Today's young yakshaganas are.. Madhukar Hegde Madamaki, the yaksharanga savyasachi artist. He was born on 8.10.1997 at Madamakki as the son of Sri Hegde and Nagaratna Hegde. He completed his primary education at Madamakki Government High School and obtained his higher secondary education at Belje Herga Vithal Shetty High School. Later he graduated from the Government Undergraduate College Hebrew to secondary PUC and completed his education and worked in a hotel in Mangalore for two years. Under the influence of Bhagavatha santosh kumar rdi and heranjalu gopala ganiga, he was infinitely interested in yakshagana in his school life and had been in the ninth grade, doing a small role in the Madamakki mela for four years in a row, and serving sri veerbhadra, he was obstructed from working in the hotel. Later, he joined the Mandarthi Yakshagana Kendra and took the education of the yakshagana kendra gurukrishnayya achar bidkalkate and mahesh kumar mandarthi, the tall, rhythmandanda of bagavati. Later he joined The Mandarti Mela and performed a small dress in the first year and joined the second year as a musician. In the third year he served as a chandelier. He has admired the great artistes like D Nagar Subramanya Acharya, Sadashiv Amin, Nagesh Kulal Nagarkode, Ajri Gopal Ganiga, Haradi Sarvothama Ganiga, Haradi Ramesh Ganiga, Parameshwara Nayak Kanagodu, Nagar Annappa Shetty, Bepde Ganapati Shetty, Prabhakar Shetty Belje, Gundibail Ganapati Bhatt and others. He is a great artist in yakshagana, with his hard work and creative personality, and has been a great artist in the field of art, and his reputation in the field of art is a great achievement and he is also blessed with the awards and awards. Literature:Haladi Santosh Shetty.. Narration:Smt. Amrita Shetty.. All the videos of the Yakshagana Artistes Introduction Series are our yaksha💥mandar YouTube channel.. Available in.. ವಾಹಿನಿಯ ಹೋಮ್ ಪೇಜ್ ಗಾಗಿ: https://www.youtube.com/channel/UCsrL... ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: https://www.facebook.com/groups/27334...

No comments:

Post a Comment

#ಯಕ್ಷಮಂದಾರ - 51 | ಹೆನ್ನಾಬೈಲು ಸಂಜೀವ ಶೆಟ್ಟಿ | Hennabailu Sanjeeva Shetty | ಪ್ರಸಿದ್ದ ಸ್ತ್ರೀಪಾತ್ರದಾರಿ |

🌀ಯಕ್ಷ💥ಮಂದಾರ🌀 #ಯಕ್ಷಮಂದಾರ  - 51 | ಹೆನ್ನಾಬೈಲು ಸಂಜೀವ ಶೆಟ್ಟಿ | Hennabailu Sanjeeva Shetty | ಪ್ರಸಿದ್ದ ಸ್ತ್ರೀಪಾತ್ರದಾರಿ...