Sunday, September 6, 2020

#ಯಕ್ಷಮಂದಾರ - 14 | ಸುಧಾಕರ ಕೊಠಾರಿ | Sudhakara Kotary | ಮಾರಣಕಟ್ಟೆ ಮೇಳ | ಕಿರುಪರಿಚಯ | Maranakatte Mela |

🌀ಯಕ್ಷ💥ಮಂದಾರ🌀


#ಯಕ್ಷಮಂದಾರ - 14 | ಸುಧಾಕರ ಕೊಠಾರಿ | Sudhakara Kotary | ಮಾರಣಕಟ್ಟೆ ಮೇಳ | ಕಿರುಪರಿಚಯ | Maranakatte Mela |

ಇದು ಯಕ್ಷ ಕಲಾವಿದರ ಸಾಧನೆ ಮತ್ತು ಜೀವನಗಾಥೆಯ ಅನಾವರಣ.. ಇಂದಿನ ನಮ್ಮ ಯಕ್ಷಸಾಧಕರು.. ಬಡಗುತಿಟ್ಟಿನ ಗಾನಕೋಗಿಲೆ.. ಮಾರಣಕಟ್ಟೆ ಮೇಳದ ಪ್ರಸಿದ್ಧ ಬಾಗವತರು..ಸುಧಾಕರ ಕೊಠಾರಿ ಯಳಜಿತ.. ಶ್ರೀಯುತರು ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಯಳಜಿತದ ಕೋಟೆಕೇರಿ ಎಂಬಲ್ಲಿ ಶ್ರೀ ನಾಗು ಕೊಠಾರಿ ಮತ್ತು ಶ್ರೀಮತಿ ಚಂದು ಇವರ ಸುಪುತ್ರನಾಗಿ ದಿನಾಂಕ:15.05.1978 ರಲ್ಲಿ ಜನಿಸಿದರು.. ತನ್ನ ಪ್ರಾಥಮಿಕ ಶಿಕ್ಷಣವನ್ನು ಯಳಜಿತ ಶಾಲೆಯಲ್ಲಿ ಪೂರೈಸಿದ ಇವರು,ಪ್ರೌಢ ಮತ್ತು ಪ್ರಥಮ ಪಿ.ಯು.ಸಿ ಶಿಕ್ಷಣವನ್ನು ಬೈಂದೂರು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮುಗಿಸಿದರು. ಬಾಲ್ಯದಲ್ಲಿಯೇ ಊರ ಸುತ್ತಮುತ್ತ ನಡೆಯುತ್ತಿದ್ದ ಯಕ್ಷಗಾನದ ಬಯಲಾಟಗಳಿಂದ ಆಕರ್ಷಿತರಾಗಿದ್ದ ಇವರ ಯಕ್ಷಗಾನದ ಆಸಕ್ತಿ ಇವರನ್ನು ಯಕ್ಷಲೋಕದತ್ತ ಕೊಂಡೊಯ್ದಿತು.. ನಂತರ ಶ್ರೀಸಿದ್ದೀವಿನಾಯಕ ದೇವಸ್ಥಾನದ ಮುಖ್ಯ ಅರ್ಚಕರಾದ ಜಗದೀಶ ಭಟ್ ಹರೆಗುಡಿ ಮತ್ತು ಮಂಗೇಶ ಶೆಣೈ ಅವರ ಪ್ರೇರಣೆ ಮತ್ತು ಮಾರ್ಗದರ್ಶನದಿಂದ ಶ್ರೀ ಸಿದ್ದೀವಿನಾಯಕ ಯಕ್ಷಗಾನ ಕಲಾಸಂಘ ಹರೆಗುಡಿ ಅಲ್ಲಿ ಮಾರಣಕಟ್ಟೆ ಮೇಳದ ಪ್ರಸಿದ್ಧ ಕಲಾವಿದರಾದ ನಾಗೂರು ಶ್ರೀನಿವಾಸ ದೇವಾಡಿಗರಲ್ಲಿ ಯಕ್ಷಗಾನದ ಹೆಜ್ಜೆಗಾರಿಕೆಯನ್ನು ಕಲಿತರು ನಂತರ ಗೆಜ್ಜೆಕಟ್ಟಿ ಹಲವಾರು ವೇಷಗಳನ್ನು ರಂಗದಲ್ಲಿ ನಿರ್ವಸಿದ ಇವರು ನಂತರದ ದಿನಗಳಲ್ಲಿ ಬಾಗವತಿಕೆಯ ಬಗ್ಗೆ ಒಲವನ್ನು ತಾಳಿ,ಪ್ರಸಿದ್ಧ ಗುರುಗಳಾಗಿದ್ದ ಹೆರಂಜಾಲು ವೆಂಕಟರಮಣ ಗಾಣಿಗರಲ್ಲಿ ತಾಳ,ಶ್ರುತಿ,ಲಯ ಜ್ಞಾನವನ್ನು ಪಡೆದರು.. ಸುದೀರ್ಘ ಇಪ್ಪತ್ತೈದು ವರ್ಷಗಳ ಕಲಾಜೀವನವನ್ನು ನಡೆಸಿರುವ ಇವರು ಒಂದು ವರ್ಷ ಬಗ್ವಾಡಿ ಮೇಳದಲ್ಲಿ ಸೇವೆಸಲ್ಲಿಸಿದ್ದು ಬಿಟ್ಟರೆ,ನಂತರ ಯಕ್ಷಭೀಷ್ಮ ದಿ.ಎಂ.ಎಂ ಹೆಗ್ಡೆ ಮತ್ತು ಧರ್ಮದರ್ಶಿಗಳಾಗಿದ್ದ ಚಿತ್ತೂರು ಮಂಜಯ್ಯ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಮಾರಣಕಟ್ಟೆ ಮೇಳವೊಂದರಲ್ಲೇ ಇಪ್ಪತ್ನಾಲ್ಕು ವರ್ಷಗಳ ಕಾಲ ಸಹಬಾಗವತರಾಗಿ ಸೇವೆಸಲ್ಲಿಸಿದ ಇವರು ಮುಂದಿನ ವರ್ಷದಿಂದ ಮಾರಣಕಟ್ಟೆ"ಎ"ಮೇಳದ ಪ್ರಧಾನ ಬಾಗವತರಾಗಿ ಸೇವೆ ಸಲ್ಲಿಸಲಿದ್ದಾರೆ.. ಶ್ರುತಿ ರಾಗ ತಾಳದ ಅದ್ಬುತ ಜ್ಞಾನವನ್ನು ಹೊಂದಿರುವ ಇವರು ಬಡಗುತಿಟ್ಟಿನ ಪ್ರಸಿದ್ಧ ಶೈಲಿಯಾದ ಕುಂಜಾಲು ಶೈಲಿಯಲ್ಲಿ ಅತ್ಯುತ್ತಮವಾದ ಏರುಧ್ವನಿಯಲ್ಲಿ ಹಾಡಬಲ್ಲ ಸಮರ್ಥ ಬಾಗವತರು...ಮದ್ಯಮಾವತಿ,ಹಿಂದೊಳ,ಸಾವೇರಿ,ಅರಭಿ,ಕಲಾವತಿ, ಮೋಹನ, ಭೀಮ್ ಪಲಾಸ್ ಮೊದಲಾದ ರಾಗಗಳನ್ನು ಕರ್ಣಾನಂದಕರವಾಗಿ ಹಾಡುವ ಇವರು,ಮಾರಣಕಟ್ಟೆ ಕ್ಷೇತ್ರ ಮಹಾತ್ಮೆಯಲ್ಲಿ ಮೂಕಸುರ ಮತ್ತು ದೇವಿ ಸಂಭಾಷಣೆಯ ಸನ್ನಿವೇಶದಲ್ಲಿ ವ್ಯವಹರಿಸುವ ರೀತಿ ಮತ್ತು ಹಾಡುವ ಶೈಲಿ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.. ಹೆರಂಜಾಲು ಗೋಪಾಲ ಗಾಣಿಗ,ಸುರೇಶ ಶೆಟ್ಟಿ ಶಂಕರನಾರಾಯಣ, ಮರವಂತೆ ಕೃಷ್ಣದಾಸರು,ಸುಬ್ರಮಣ್ಯ ನಾವಡ, ದಿನೇಶ ಶೆಟ್ಟಿ,ಜನ್ಸಾಲೆ ರಾಘವೇಂದ್ರ ಆಚಾರ್ಯ,ಐರಬೈಲು ಆನಂದ ಶೆಟ್ಟಿ,ಗೋಳಿಕೆರೆ ಚಂದ್ರಗೌಡ,ನಾಗೂರು ಶ್ರೀನಿವಾಸ ದೇವಾಡಿಗ,ಆಲೂರು ಸುರೇಂದ್ರ,ಕೊಳಲಿ ಕೃಷ್ಣ ಶೆಟ್ಟಿ,ಅನಂತ ಕುಲಾಲ, ಮಡಾಮಕ್ಕಿ ಪ್ರಭಾಕರ ಶೆಟ್ಟಿ ಮತ್ತು ಮಾರಣಕಟ್ಟೆ ಮೇಳದ ಎಲ್ಲ ಹಿರಿಯ ಕಿರಿಯ ಕಲಾವಿದರನ್ನು ಮೆಚ್ಚಿಕೊಂಡಿದ್ದಾರೆ.. ಕರಾವಳಿ ಮಲೆನಾಡು ಬೆಂಗಳೂರು, ಹೈದರಾಬಾದ್, ಮುಂಬೈ ಮೊದಲಾದ ಕಡೆ ತಿರುಗಾಟವನ್ನು ನಡೆಸಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಇವರಿಗೆ ಯಳಜಿತದಲ್ಲಿ ಹುಟ್ಟೂರ ಸನ್ಮಾನ,ಮೇಲ್ ಹೊಸೂರು ಅಭಿಮಾನಿಗಳಿಂದ ಸನ್ಮಾನ ಸೇರಿದಂತೆ ಹಲವು ಗೌರವಗಳಿಗೆ ಪಾತ್ರರಾದ ಹಿರಿಮೆ ಇವರದ್ದು... ಶ್ರೀಮತಿ ರೇವತಿಯವರೊಂದಿಗೆ ಸುಖ ದಾಂಪತ್ಯ ಜೀವನವನ್ನು ನಡೆಸಿ ಸುರಭಿ ಮತ್ತು ಸುಶಾಂತ್ ಎನ್ನುವ ಇಬ್ಬರು ಮುದ್ದುಮಕ್ಕಳನ್ನು ಪಡೆದಿರುವ ಇವರು ಸಂತೃಪ್ತ ಜೀವನವನ್ನು ನಡೆಸುತ್ತಿದ್ದಾರೆ.. ಸರಳ ಸಜ್ಜನರಾದ ಇವರಿಗೆ ಶ್ರೀ ಬ್ರಹ್ಮಲಿಂಗೇಶ್ವರ ಸ್ವಾಮಿಯೂ ಆಯುರಾರೋಗ್ಯ, ಸುಖ ಸಂಪತ್ತನ್ನು ನೀಡಿ,ನಿರಂತರವಾಗಿ ಕಲಾಸೇವೆಯನ್ನು ಮಾಡುವ ಯೋಗಬಾಗ್ಯವನ್ನು ಅನುಗ್ರಹಿಸಲಿ ಎನ್ನುವುದು ಯಕ್ಷ💥ಮಂದಾರದ ಶುಭಹಾರೈಕೆ.. ಸಾಹಿತ್ಯ:ಹಾಲಾಡಿ ಸಂತೋಷ ಶೆಟ್ಟಿ... ನಿರೂಪಣೆ: ಶ್ರೀಮತಿ ಅಮೃತ ಶೆಟ್ಟಿ.. ಮಾಹಿತಿ ಮತ್ತು ಸಹಕಾರ: ರಮೇಶ ಕೊಠಾರಿ ನಾಯ್ಕನಕಟ್ಟೆ.. ಜಯರಾಮ ಶೆಟ್ಟಿ ಹೈಗಿನಕಟ್ಟೆ ಹೊಸೂರು ಸುಧಾಕರ ಕೊಠಾರಿ ಅಭಿಮಾನಿಗಳು ಯಕ್ಷಮಂದಾರದ ಸದಸ್ಯರು ಮಾರಣಕಟ್ಟೆ ಮೇಳದ ಅಭಿಮಾನಿಗಳು ಯಕ್ಷಗಾನ ಕಲಾವಿದರ ಪರಿಚಯ ಸರಣಿಯ ಎಲ್ಲ ವಿಡಿಯೋಗಳು ನಮ್ಮಯಕ್ಷ💥ಮಂದಾರ ಯೂಟ್ಯೂಬ್ ಚಾನಲ್..ನಲ್ಲಿ ಲಭ್ಯವಿದೆ.. ನಮ್ಮ 🌀ಯಕ್ಷ💥ಮಂದಾರ🌀ಯೂಟ್ಯೂಬ್ ಚಾನಲ್ ಮತ್ತು ಫೇಸ್ಬುಕ್ ಪೇಜ್.. ನ್ನು download ಮಾಡಿಕೊಳ್ಳಿ..ಮತ್ತು ನಾವು upload ಮಾಡುವ ಎಲ್ಲ ಯಕ್ಷಗಾನ ವಿಡಿಯೋಗಳ ಮಾಹಿತಿ ಪಡೆಯಿರಿ..ನಮ್ಮ ವಿಡಿಯೋಗಳನ್ನು ನೋಡಿ like ಮಾಡಿ,share ಮಾಡಿ ಪ್ರೋತ್ಸಾಹಿಸಿ... ಯಕ್ಷಗಾನ ಕಲೆಯನ್ನು ಉಳಿಸಿ,ಬೆಳೆಸಿ, ಪ್ರೋತ್ಸಾಹಿಸಿ.. ಧನ್ಯವಾದಗಳು🙏🙏🙏

🌀💥🌀 This is an exhibition of the achievements and life of yakshaartists. Today's yakshakas are.. The singing cuckoo of the saint.. The famous Bagavatars of The Marankate Mela.. Sudhakar Kothari Yalajita.. Mr. Nagu Kothari and Mrs. Chandu were born on 15.05.1978 at Kotkeri in Yalajita in Byndoor Taluk of Udupi District. He completed his primary education at Yalajita School and completed his secondary and first PUC course in The Government Undergraduate College, Bindur. His interest in yakshagana, who was attracted by the yakshagana saga around the village, took him to Yakshaloka. Later, under the inspiration and guidance of Jagadish Bhatt Haregudi and Mangesh Shenoy, the chief priest of srisiddhivinayaka temple, learned the footprint of Yakshagana in the famous artists of The Marankate Mela, Nagur Srinivasa Devadiga, who later gave a lot of disguises to the stage and later became a favorite guru, heranjalu venkataramana ganiga. He has spent a long career of twenty-five years in the Bagwadi Mela and later served as the main bugatof the Maranaketta A mela for twenty-four years under the guidance of Yakshasbhishma D.M.M. Hegde and trustee Chittoor Manjayya Shetty. With the great knowledge of the tune of the shruti, he is capable of singing in the best sound of kunjalu, the famous style of badaguthitta. He sings the tunes of Madhyamavathi, Hindola, Saveri, Arabi, Kalavathi, Mohan, Bhim Palas and the way in which he deals with the context of the dialogue and the style of singing in the context of the dialogue singing and the manner of the deity in the Maranakate kshetra mahatma.
Heranjalu Gopala Ganiga, Suresh Shetty Shankaranarayana, Maravante Krishnadas, Subramanya Navada, Dinesh Shetty, Jansale Raghavendra Acharya, Irabailu Ananda Shetty, Golikere Chandra Gowda, Nagur Srinivasa Devadiga, Alur Surendra, Kolly Krishna Shetty, Anantha Kulala, Madamakki Prabhakar Shetty and all the senior artistes of Maranakatte mela have been appreciated. He has a huge fan base in Coastal Malappuram, Bangalore, Hyderabad, Mumbai and has a great fan base in Yalajitha, and has been honoured with many respects from the fans of Mail Hosur. Having two beautiful children, Surabhi and Sushant, she leads a happy life with Mrs. Revathi. The yaksha💥 mandara wishes to the simple staunch, good man, and the lord of the yaksha💥 and the saint saint, who is a great person, will be given a good health and prosperity. Saint Haladi Santosh Shetty Narration: Mrs. Amritshetty.. Information and Cooperation: Ramesh Kothari Naikanakate.. Jayaram Shetty Haiginakate Hosur Sudhakar Kothari Fans Members of Yakshamandar Marankatte Mela Fans All the videos of the Yakshagana Artistes Introduction Series are our yaksha💥mandar YouTube channel.. Available in.. Our 🌀yss💥mandar🌀YouTube channel and Facebook page. Download.. And get information about all yakshagana videos we upload.. Watch our videos like, share and encourage... Save, develop and encourage yakshagana art..

ಯಕ್ಷಮಂದಾರ ವಿಡಿಯೋ ನೋಡಲೋಸುಗವಾಗಿ. ವಾಹಿನಿಯ ಹೋಮ್ ಪೇಜ್ ಗಾಗಿ: https://www.youtube.com/channel/UCsrL... ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: https://www.facebook.com/groups/27334...

No comments:

Post a Comment

#ಯಕ್ಷಮಂದಾರ - 51 | ಹೆನ್ನಾಬೈಲು ಸಂಜೀವ ಶೆಟ್ಟಿ | Hennabailu Sanjeeva Shetty | ಪ್ರಸಿದ್ದ ಸ್ತ್ರೀಪಾತ್ರದಾರಿ |

🌀ಯಕ್ಷ💥ಮಂದಾರ🌀 #ಯಕ್ಷಮಂದಾರ  - 51 | ಹೆನ್ನಾಬೈಲು ಸಂಜೀವ ಶೆಟ್ಟಿ | Hennabailu Sanjeeva Shetty | ಪ್ರಸಿದ್ದ ಸ್ತ್ರೀಪಾತ್ರದಾರಿ...