🌀ಯಕ್ಷ💥ಮಂದಾರ🌀
#ಯಕ್ಷಮಂದಾರ - 16 | ದಿ.ಆಲ್ಮನೆ ಪದ್ಮನಾಭ | Almane Padmanabha | Achievements | Yakshaartists Tirthahalli ಇದು ಯಕ್ಷ ಕಲಾವಿದರ ಸಾಧನೆ ಮತ್ತು ಜೀವನಗಾಥೆಯ ಅನಾವರಣ... ಇಂದಿನ ನಮ್ಮ ಯಕ್ಷಸಾಧಕರು ದಿ.ಆಲ್ಮನೆ ಪದ್ಮನಾಭನವರು... ಯಕ್ಷಲೋಕದ ಬಾನಂಗಳದಲ್ಲಿ ಯಕ್ಷ ದ್ರುವತಾರೆಯೊಂದು ಮಿಂಚಿ ಮರೆಯಾಗಿ ಇಂದಿಗೆ ಮೂರು ವರ್ಷ.....ಯಕ್ಷಕಲಾಮಾತೆಯ ಮಡಿಲಿನಿಂದ ಜಾರಿ,ಕಾಲನ ಗರ್ಭದಲ್ಲಿ ಲೀನವಾಗಿ ಹೋದ ಬಡಗುತಿಟ್ಟಿನ ಸುಪ್ರಸಿದ್ದ ಪೋಷಕ ಪಾತ್ರಧಾರಿ.. ದಿ.ಆಲ್ಮನೆ ಪದ್ಮನಾಭನವರು... ಯಕ್ಷಗಾನದ ರಂಗಭೂಮಿಕೆಯಲ್ಲಿ ಪ್ರಸಂಗವೊಂದು ಪರಿಪೂರ್ಣತೆಯನ್ನು ಕಾಣಬೇಕಾದರೆ ಅಲ್ಲಿ ಸಮರ್ಥ ಪೋಷಕ ಪಾತ್ರದ ಪ್ರಸ್ತುತಿಯು ಅಗತ್ಯವಾಗಿ ಬೇಕು..ಆ ನಿಟ್ಟಿನಲ್ಲಿ ಗುರುತಿಸಬಹುದಾದ ಶ್ರೇಷ್ಠ ಕಲಾವಿದರಲ್ಲಿ ದಿ.ಆಲ್ಮನೆಯವರು ಖ್ಯಾತನಾಮರಾಗಿದ್ದರು... ಬಡಗುತಿಟ್ಟಿನ ಯಕ್ಷರಂಗಕ್ಕೆ ಅನೇಕ ಹಿರಿಯ, ಕಿರಿಯ ಕಲಾವಿದರನ್ನು ನೀಡಿರುವ ಮಲೆನಾಡಿನ ತೀರ್ಥಹಳ್ಳಿ ತಾಲೂಕಿನ ದೇವಂಗಿ ಸಮೀಪದ ಆಲ್ಮನೆ ಎಂಬ ಹಳ್ಳಿಯಲ್ಲಿ ಶ್ರೀ ಕೊರಗ ಪೂಜಾರಿ ಮತ್ತು ಚಿಕ್ಕು ದಂಪತಿಗಳ ಪುತ್ರನಾಗಿ ದಿನಾಂಕ:05.08.1971ರಲ್ಲಿ ಜನಿಸಿದರು.. ಮಾತಿನ ಚತುರರಾಗಿದ್ದ ದಿ.ಎಂ.ಕೆ. ಸತೀಶ ಆಚಾರ್ಯರಲ್ಲಿ ಯಕ್ಷಗಾನದ ಪ್ರಾಥಮಿಕ ಶಿಕ್ಷಣವನ್ನು ಪಡೆದ ಇವರು ಪ್ರಥಮ ಬಾರಿಗೆ ನಾಗರಕೊಡಿಗೆ ಮೇಳದಲ್ಲಿ ಗೆಜ್ಜೆಕಟ್ಟಿ ರಂಗಪ್ರವೇಶ ಮಾಡಿದರು..ನಂತರ ಪೆರ್ಡೂರು ಮೇಳವನ್ನು ಸೇರಿಕೊಂಡ ಇವರು ಅವಾಗಿನ ಹಿರಿಯ ವೇಷದಾರಿಯಾಗಿದ್ದ ದಿ.ಜಗನ್ನಾಥ ಶೆಟ್ಟರ ವೇಷದಿಂದ ಪ್ರಭಾವಿತರಾಗಿ ಅವರ ಸಾಂಗತ್ಯದಲ್ಲಿ ದೀರ್ಘಕಾಲ ಪೆರ್ಡೂರು ಮೇಳದಲ್ಲಿ ಪೋಷಕ ಪಾತ್ರದಾರಿಯಾಗಿ ಸೇವೆ ಸಲ್ಲಿಸುತ್ತ,ರಂಗದಲ್ಲಿನ ಪರಿಪೂರ್ಣ ಜ್ಞಾನವನ್ನು ಪಡೆದುಕೊಂಡರು..ಹಿರಿಯ ಕಲಾವಿದರ ರಂಗನಡೆಯನ್ನು ಅನುಸರಿಸಿ ನಡೆದರೂ ಕೂಡ..ಯಾರ ಅನುಕರಣೆಗೂ ಒಳಗಾಗದೆ ತನ್ನದೇ ವಿಶಿಷ್ಟ ಶೈಲಿಯ ಅಭಿನಯದಿಂದ ಯಕ್ಷರಂಗದಲ್ಲಿ ಅಪಾರ ಪ್ರೇಕ್ಷಕರ ಅಭಿಮಾನವನ್ನು ಗಳಿಸಿಕೊಂಡರು.. ಅಂದಿನ ಪೆರ್ಡೂರು ಮೇಳದಲ್ಲಿ,ಮೇಳೈಸುತ್ತಿದ್ದ ದೇವದಾಸ ಈಶ್ವರಮಂಗಲ ಅವರ ಯಶಸ್ವಿ ಪ್ರಸಂಗಗಳಲ್ಲಿ ಸುಬ್ರಮಣ್ಯ ದಾರೇಶ್ವರರ ಸಮರ್ಥ ನಿರ್ದೇಶನದಲ್ಲಿ.. ಸುರೇಶ ಶೆಟ್ಟಿ,ದುರ್ಗಪ್ಪ ಗುಡಿಗಾರ, ಗಜಾನನ ಭಂಡಾರಿ,ದಿ.ನಗರ ಜಗನ್ನಾಥ ಶೆಟ್ಟಿ,ದಿ.ಪದ್ಮಶ್ರೀ ಚಿಟ್ಟಾಣಿ,ದಿ ಜಲವಳ್ಳಿ ವೆಂಕಟೇಶರಾಯರು,ದಿ.ರಾಮ ನಾಯರಿ,ತೀರ್ಥಹಳ್ಳಿ ಗೋಪಾಲ ಆಚಾರ್ಯ ಮೊದಲಾದ ಹಿರಿಯ ಕಲಾವಿದರೊಂದಿಗೆ ಡೇರೆ ಮೇಳದಲ್ಲಿ ಭರ್ಜರಿ ಯಶಸ್ಸು ಪಡೆಯುತ್ತಿದ್ದ,ಡೇರೆಮೇಳಗಳಿಗೆ ಅನಿವಾರ್ಯವಾಗಿದ್ದ ಪೋಷಕ ಪಾತ್ರಗಳಿಗೆ ಜೀವ ತುಂಬುತ್ತಿದ್ದರು.. ಕಥೆಯ ಪ್ರಾರಂಭದಲ್ಲಿಯೇ ರಂಗಸ್ಥಳಕ್ಕೆ ಬರುತ್ತಿದ್ದ ಇವರು, ಕೊನೆಯ ಉಪಸಂಹಾರದವರೆಗೂ ವೇಷಗಾರಿಕೆಯಲ್ಲಿಯೇ ಚೌಕಿಯಲ್ಲಿ ಉಳಿಯಬೇಕಾದ ಅನಿವಾರ್ಯ ಪಾತ್ರಗಳಲ್ಲಿಯೂ ಕೂಡ ಬೇಸರಿಸಿಕೊಳ್ಳದ ಆಲ್ಮನೆಯವರು ಕಥೆಯ ಮುಕ್ತಾಯದ ಉಪಸಂಹಾರ ಭಾಗದಲ್ಲಿ ತನ್ನ ವ್ಯಾಕರಣಬದ್ದ ವಾಗ್ವೈಕರಿಯಿಂದ ರಂಗವನ್ನು ಹಿಡಿದಿಟ್ಟುಕೊಳ್ಳುತ್ತಿದ್ದ ಪರಿ ಅನನ್ಯವಾದದ್ದು...ಅನೇಕ ಪ್ರದಾನ ವೇಷಗಳು ರಂಗದಲ್ಲಿರುವಾಗ ಇವರು ಕಥಾಮುಕ್ತಾಯದ ಸನ್ನಿವೇಶವನ್ನು ಕಟ್ಟಿಡುತಿದ್ದ ಶೈಲಿ ಇತರರಿಗೆ ಅಸಾಧ್ಯವಾದದ್ದು.. ನಂತರ ಸಾಲಿಗ್ರಾಮ ಮೇಳವನ್ನು ಸೇರಿದ ಇವರು ಅಲ್ಲಿಯೂ ಅನೇಕ ದಿಗ್ಗಜ ಕಲಾವಿದರೊಂದಿಗೆ ಕೂಟಕ್ಕೆ ಬೇಕಾದ ಕಲಾವಿದರಾಗಿದ್ದರು.. ತನ್ನ ಮಾತಿನ ಚತುರತೆಯಿಂದಲೇ ರಂಗದಲ್ಲಿ ಮೋಡಿ ಮಾಡಬಲ್ಲ ಇವರು ಗಂಡುಗಲಿ ಮಯೂರದ ಕುಮಾರ ವಿಷ್ಣು,ಪವಿತ್ರ ಪದ್ಮಿನಿಯ ಆದಿತ್ಯ, ಶ್ರೀ ಪ್ರಸಂಗದ ಮನೋಜ ಮೊದಲಾದ ಪೋಷಕ ಪಾತ್ರಗಳಿಂದ ಆದುನಿಕ ಪ್ರಸಂಗಗಳಿಗೆ ತಾರಮೌಲ್ಯ ತಂದುಕೊಡುತಿದ್ದರು..ತನ್ನ ಗುರುಗಳಾದ ದಿ. ಸತೀಶ ಮಂಗಳಗಾರ್ ನಿಧನದ ನಂತರ ಅವರು ನಿರ್ವಹಿಸುತ್ತಿದ್ದ ಗಿರಿಮಲ್ಲಿಗೆಯ ಚಕ್ರಧರ ಮತ್ತು ಆರ್ಗೋಡು ಅವರು ನಿರ್ವಹಿಸುತ್ತಿದ್ದ ಶೂದ್ರತಪಸ್ವಿನಿಯ ಅರುಣ ಮತ್ತು ನಾಗಶ್ರೀಯ ಶ್ವೇತದತ್ತನ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿ ಅಪಾರವಾದ ಪ್ರಸಿದ್ದಿಯನ್ನು ಪಡೆದುಕೊಂಡರು..ಪೌರಾಣಿಕ ಪ್ರಸಂಗಳ ಸಂಜಯ,ವಿದುರ,ಸುಗ್ರೀವ ಮೊದಲಾದ ಪಾತ್ರಗಳನ್ನು ಬಾವಪೂರ್ಣವಾಗಿ ಅಭಿನಯಿಸುವ ಇವರು ಅರ್ಜುನ,ಶತ್ರುಘ್ನ,ರಕ್ತಭೀಜ ಮುಂತಾದ ಪಾತ್ರಗಳನ್ನು ತನ್ನ ಗಂಭೀರ ಹಾವಭಾವ ಮತ್ತು ಅಪ್ರತಿಮ ರಂಗನಡೆಯಿಂದ ಪ್ರಸ್ತುತಪಡಿಸಿ ಪ್ರೇಕ್ಷಕರ ಮನಗೆದ್ದ ಅಭಿಜಾತ ಕಲಾವಿದರು.. ಯಾವುದೇ ಕಲಾವಿದರು ಗೈರುಹಾಜರಾದರು ಅವರ ಪಾತ್ರವನ್ನು ನಿರ್ವಹಿಸುವ ಚಾಕಚಕ್ಯತೆಯನ್ನು ಹೊಂದಿರುವ ಇವರು ತಾಳಮದ್ದಳೆಯ ಅರ್ಥದಾರಿಗಳನ್ನು ಮೀರಿಸಬಲ್ಲ ಅತ್ಯುತ್ತಮ ವಾಗ್ವಿಶಾರದರು...ದೇಶಾದ್ಯಂತ ಸಂಚರಿಸಿ ಹಲವು ಸನ್ಮಾನ, ಪುರಸ್ಕಾರಗಳಿಗೆ ಭಾಜನರಾಗಿರುವ ಇವರು ನಾಗರಕೊಡಿಗೆ,ಗೋಳಿಗರಡಿ,ಪೆರ್ಡೂರು,ಸಾಲಿಗ್ರಾಮ, ನೀಲಾವರ,ಕೋಟ ಅಮೃತೇಶ್ವರಿ ಮತ್ತು ಆಜ್ರಿ ಶನೀಶ್ವರ ಮೇಳದಲ್ಲಿ ಸೇವೆಸಲ್ಲಿಸಿದ್ದಾರೆ... ಶ್ರೀಯುತರು ಶ್ರೀಮತಿ ಜ್ಯೋತಿಯವರೊಂದಿಗೆ ದಾಂಪತ್ಯ ಜೀವನವನ್ನು ನಡೆಸಿ,ದಿನಾಂಕ:31.08.2017 ರಲ್ಲಿ ಅಪಾರ ಬಂದುಮಿತ್ರರನ್ನು ಮತ್ತು ಅಭಿಮಾನಿ ಬಳಗವನ್ನು ಶೋಕಸಾಗರಕ್ಕೆ ತಳ್ಳಿ,ಇಹಲೋಕವನ್ನು ತ್ಯಜಿಸಿದರು...ಶ್ರೀ ಅನಂತಪದ್ಮನಾಭ ಸ್ವಾಮಿಯೂ ಇವರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ ಎನ್ನುವ ಪ್ರಾರ್ಥನೆಯೊಂದಿಗೆ 🌀ಯಕ್ಷ💥ಮಂದಾರ🌀ದ ಬಾವಪೂರ್ಣ ನಮನಗಳು... ಸಾಹಿತ್ಯ:ಹಾಲಾಡಿ ಸಂತೋಷ ಶೆಟ್ಟಿ.. ನಿರೂಪಣೆ:ಶ್ರೀಮತಿ ಅಮೃತ ಶೆಟ್ಟಿ... ಮಾಹಿತಿ ಮತ್ತು ಸಹಕಾರ: ಎಸ್.ವಿ.ಉದಯ ಕುಮಾರ ಶೆಟ್ಟಿ ಮಣಿಪಾಲ ಸುಬ್ರಹ್ಮಣ್ಯ ದಾರೇಶ್ವರ.. ನಾಗರಾಜ ಬಳ್ಕೂರು.. ರತ್ನಾಕರ ಕಂಚುಗಾರ್ ಮುಂಬೈ... ಯಕ್ಷಗಾನ ಕಲಾವಿದರ ಪರಿಚಯ ಸರಣಿಯ ಎಲ್ಲ ವಿಡಿಯೋಗಳು ನಮ್ಮಯಕ್ಷ💥ಮಂದಾರ ಯೂಟ್ಯೂಬ್ ಚಾನಲ್..ನಲ್ಲಿ ಲಭ್ಯವಿದೆ.. ನಮ್ಮ 🌀ಯಕ್ಷ💥ಮಂದಾರ🌀ಯೂಟ್ಯೂಬ್ ಚಾನಲ್ ಮತ್ತು ಫೇಸ್ಬುಕ್ ಪೇಜ್.. ನ್ನು download ಮಾಡಿಕೊಳ್ಳಿ..ಮತ್ತು ನಾವು upload ಮಾಡುವ ಎಲ್ಲ ಯಕ್ಷಗಾನ ವಿಡಿಯೋಗಳ ಮಾಹಿತಿ ಪಡೆಯಿರಿ..ನಮ್ಮ ವಿಡಿಯೋಗಳನ್ನು ನೋಡಿ like ಮಾಡಿ,share ಮಾಡಿ ಪ್ರೋತ್ಸಾಹಿಸಿ... ಯಕ್ಷಗಾನ ಕಲೆಯನ್ನು ಉಳಿಸಿ,ಬೆಳೆಸಿ, ಪ್ರೋತ್ಸಾಹಿಸಿ.. ಧನ್ಯವಾದಗಳು🙏🙏🙏
🌀💥🌀
This is the exhibition of the achievements and life of yakshaartists...
Our yakshaganas today are The Almane Padmanabha.
Three years from now, a yaksha-star shone in the sky of the Yakshaloka. The famous patron of the saint who slid from the lap of Yakshakalama, and was immersed in the womb of kala. The Almana Padmanabha...
In the yakshagana theatre, a presentation of a competent supporting character is essential for a perfection. The Almamawas were the most famous artists to be recognized in that regard.
He was born on 05.08.1971 as the son of Sri Koraga Priest and Chiku in almane village near Devangi in Tirthahalli taluk of Maldaguthahalli taluk, which has given many senior and junior artistes to the Yakshagana of Badaguthittt.
The speech-clever D.M.K. He received the primary education of Yakshagana in Satish Acharya and entered the stage at Nagarakodi for the first time. Later he joined perdur mela and was impressed with the disguise of the elder disguise of D. Jagannath Shettar, who served as a patron of the Perdur Mela for a long time and gained complete knowledge of the field. Even if the stage of the veteran artistes follows. Without imitating anyone, he gained immense public pride in the yakshagana with his own unique style of acting.
In the successful episodes of Devadasa Ishwaramangala, who was present at the Perdur Mela, subramaniam dareshwara's efficient direction. Suresh Shetty, Durgappa Gudigara, Gajanan Bhandari, D.Nagar Jagannath Shetty, The Padmashri Chittani, The Jalavalli Venkateswara Rao, D.Rama Nayari, Thirthahalli Gopalacharya, and other veteran artistes who were successful in the tent fair, were revitalising the supporting roles in the tent mela.
The whole story is unique in the story's end of the story, where he was in the stage, and the almsmen, who did not even get bored of the inevitable roles to be dressed up for the last upahara, held the stage with his grammarian rhetoric. When many output costumes are on the stage, the style of the story is impossible for others. Later he joined saligramam mela and was also a great artist for the party with many great artistes.
He was able to make a charm ingenious speech and he was a daunting character in the roles of The Saint Vishnu of Mayura, Aditya of The Holy Padmini, Manoj of Sri Parbhava and others. His master, The. After the death of Satish Mangalagar, he played the roles of Shudra Tapaswini Arun aka Shudra Tapaswini and Swedatta of Nagasree, which he was playing by The Cakradhara of Girimalliand Argodu. He plays the roles of Mythological Episodes Sanjaya, Vidura, Sugreeva and others, who have won the audience by presenting the characters arjuna, shatrughan, raktabhija with his serious gestureand incredible stage. Any artist absent, who has the ability to play his role, is a great rhetoric that can outdo the artisans of the rhythm... He has travelled across the country and has been honoured with many awards and has served in the Mela of Nagarakode, Goligaradi, Perdur, Saligramam, Neelavara, Kota Amriteshwari and Ajri Shaneswara Mela...
Mr. Jyoti married with Mrs. Jyoti and on 31.08.2017, he left the world with a large number of bandits and fans. The salutations of the 🌀Yaksh💥Mandar🌀 with the prayer that Sri Ananthapadmanabha Swamy may give him the peace of his soul forever.
Literature:Haladi Santosh Shetty..
Narrative:Mrs. Amrita Shetty...
Information and Cooperation:
S.V.Udaya Kumara Shetty Manipal
Subramanya Dareshwara..
Nagaraja Balkur..
Ratnakar Kanchugar Mumbai...
All the videos of the Yakshagana Artistes Introduction Series are our yaksha💥mandar YouTube channel.. Available in..
Our 🌀yss💥mandar🌀YouTube channel and Facebook page. Download.. And get information about all yakshagana videos we upload.. Watch our videos like, share and encourage... Save, develop and encourage yakshagana art..
Thank you🙏🙏🙏

ಯಕ್ಷಮಂದಾರ ವಿಡಿಯೋ ನೋಡಲೋಸುಗವಾಗಿ.
ವಾಹಿನಿಯ ಹೋಮ್ ಪೇಜ್ ಗಾಗಿ: https://www.youtube.com/channel/UCsrL
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: https://www.facebook.com/groups/27334
#ಯಕ್ಷಮಂದಾರ - 16 | ದಿ.ಆಲ್ಮನೆ ಪದ್ಮನಾಭ | Almane Padmanabha | Achievements | Yakshaartists Tirthahalli
No comments:
Post a Comment