Tuesday, September 1, 2020

#ಯಕ್ಷಮಂದಾರ - 13 | ಮಂಜುನಾಥ ಶೆಟ್ಟಿ ಶಂಕರನಾರಾಯಣ | Manjunath Shetty Shankaranarayana | ಸ್ತ್ರೀಪಾತ್ರದಾರಿ |



🌀ಯಕ್ಷ💥ಮಂದಾರ🌀 ಇದು ಯಕ್ಷಕಲಾವಿದರ ಸಾಧನೆ ಮತ್ತು ಜೀವನಗಾಥೆಯ ಅನಾವರಣ... ಇಂದಿನ ನಮ್ಮ ಯಕ್ಷಸಾಧಕರು.. ಬಡಗುತಿಟ್ಟಿನ ಯುವ ಸ್ತ್ರೀಪಾತ್ರದಾರಿ.. ಸೌಕೂರು ಮೇಳದ ಕಲಾವಿದ ಮಂಜುನಾಥ ಶೆಟ್ಟಿ ಶಂಕರನಾರಾಯಣ.. ಇವರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಶಂಕರನಾರಾಯಣದ ಹೆಬ್ಬಾಡಿ ಎಂಬಲ್ಲಿ ಶ್ರೀರಾಮಣ್ಣ ಶೆಟ್ಟಿ ಮತ್ತು ಶ್ರೀಮತಿ ಸಾದಮ್ಮ ಶೆಡ್ತಿಯವರ ಐದು ಜನ ಮಕ್ಕಳಲ್ಲಿ ನಾಲ್ಕನೆಯವರಾಗಿ ದಿನಾಂಕ:08.01.1992ರಲ್ಲಿ ಜನಿಸಿದರು.. ತನ್ನ ಎಂಟನೆಯ ತರಗತಿಯವರೆಗಿನ ಶಿಕ್ಷಣವನ್ನು ಶಂಕರನಾರಾಯಣದಲ್ಲಿ ಪೂರೈಸಿದ ಇವರು,ಯಕ್ಷಗಾನದ ಮೇಲಿನ ಆಸಕ್ತಿಯಿಂದ ಮಂದಾರ್ತಿ ಯಕ್ಷಗಾನ ಕೇಂದ್ರದಲ್ಲಿ ಬಾಗವತರಾಗಿದ್ದ ಕೆ.ಪಿ.ಹೆಗಡೆ,ರವಿ ಕುಮಾರ್ ಸೂರಾಲು,ಮದ್ದಲೆವಾದಕರಾದ ಸುನಿಲ್ ಭಂಡಾರಿ ಮತ್ತು ಚಂಡೆವಾದಕರಾದ ಬಸವ ಮುಂಡಾಡಿಯವರಲ್ಲಿ ತಾಳ ಲಯವನ್ನು ಕಲಿತು ಹಾರಾಡಿ ರಮೇಶ ಗಾಣಿಗರಲ್ಲಿ ಹೆಜ್ಜೆಗಾರಿಕೆಯನ್ನು ಅಭ್ಯಸಿಸಿ,ಶ್ರೀಕ್ಷೇತ್ರ ಮಾರಣಕಟ್ಟೆ ಮೇಳದಲ್ಲಿ ಗೆಜ್ಜೆಕಟ್ಟಿದರು..ನಂತರ ಎರಡು ವರ್ಷ ಮೇಳವನ್ನು ತೊರೆದ ಇವರು ನಂತರ 2010ರಲ್ಲಿ ಸೌಕೂರು ಮೇಳಕ್ಕೆ ಬಾಲಗೋಪಾಲ ವೇಷಧಾರಿಯಾಗಿ ಸೇರ್ಪಡೆಗೊಂಡರು.. ನಂತರ ವೃಷಸೇನ,ಕೃಷ್ಣ,ದುಶ್ಶಾಸನ, ದೇವಿಮಹಾತ್ಮೆಯ ಬ್ರಹ್ಮ,ವಿದ್ಯುನ್ಮಾಲಿ, ಚಂಡ, ಮುಂಡ ಮೊದಲಾದ ಪಾತ್ರಗಳನ್ನು ನಿರ್ವಹಿಸಿದರು..ಹಾಗೆಯೇ ಅನಿವಾರ್ಯ ಪರಿಸ್ಥಿತಿಯಲ್ಲಿ ಸ್ತ್ರೀಪಾತ್ರವನ್ನು ನಿರ್ವಹಿಸುತ್ತಿದ್ದ ಇವರು,ಹೆನ್ನಾಬೈಲು ದಿನೇಶರ ನಿಧನದ ನಂತರ ಕೋಡಿ ವಿಶ್ವನಾಥ ಗಾಣಿಗರ ಸಲಹೆಯಂತೆ ಅವರ ಸ್ಥಾನವನ್ನು ತುಂಬಿದರು..ಮಧುರವಾದ ಸ್ವರ ಸ್ತ್ರೀವೇಷಕೊಪ್ಪುವ ಆಳಾಂಗ,ಕಣ್ಮನ ಸೆಳೆಯುವ ನಾಟ್ಯಶೈಲಿಯಿಂದ ಬಡಗಿನ ಭರವಸೆಯ ಯುವ ಸ್ತ್ರೀಪಾತ್ರದಾರಿ ಯಾಗಿ ಗುರುತಿಸಿಕೊಂಡಿರುವ ಇವರು ಪೌರಾಣಿಕ ಪ್ರಸಂಗಗಳಾದ ಮೀನಾಕ್ಷಿ ಕಲ್ಯಾಣದ ಮೀನಾಕ್ಷಿ,ಚಂದ್ರಾವಳಿ ವಿಲಾಸದ ರಾದೆ,ಪದ್ಮಗಂದಿನಿ,ಸುಭದ್ರೆ ಮತ್ತು ಆದುನಿಕ ಪ್ರಸಂಗಗಳಾದ ಮಾತಾಂತರಂಗದ ಹರ್ಷಿಣಿ,ಜನ್ಮದಾತೆಯ ಬಂಗಾರಿ,ಧರ್ಮಸಂಕ್ರಾಂತಿಯ ಚಂದ್ರಿಕೆ,ಮೇಘಮಯೂರಿಯ ಮಾಳವಿಕಾ,ಶ್ರೀ ದೇವಿ ಬನಶಂಕರಿಯ ಬನಶಂಕರಿ ಮತ್ತು ಚಂಪಾ ಮೊದಲಾದ ಪಾತ್ರಗಳನ್ನು ಬಹು ಸುಂದರವಾಗಿ ಅಭಿನಯಿಸುತ್ತಿದ್ದಾರೆ ಕೋಡಿ ವಿಶ್ವನಾಥ ಗಾಣಿಗ,ಕೋಟ ಸುರೇಶ ಬಂಗೇರ,ಉಳ್ಳೂರು ಶಂಕರ ದೇವಾಡಿಗ,ಭದ್ರಾಪುರ ಶ್ರೀದರ ಭಂಡಾರಿ,ಉಪ್ಪುಂದ ಕೃಷ್ಣ ದೇವಾಡಿಗ, ರವಿ ಸೂರಾಲು,ಕೊಳಲಿ ಕೃಷ್ಣ ಶೆಟ್ಟಿ ಮತ್ತು ಹರೀಶ ಜಪ್ತಿ ಮೊದಲಾದವರು ಇವರಿಗೆ ಯಕ್ಷರಂಗದಲ್ಲಿ ಬೆಳೆಯಲು ತುಂಬಾ ಸಹಕರಿಸಿದ್ದಾರೆ... ಕರಾವಳಿ,ಮಲೆನಾಡು ಮೊದಲಾದ ಕಡೆ ಪ್ರದರ್ಶನ ನೀಡಿರುವ ಇವರು, ಮಳೆಗಾಲದ ತಿರುಗಾಟದಲ್ಲಿ ಬೆಂಗಳೂರು, ಮುಂಬೈ,ಹೈದರಾಬಾದ್ ಮತ್ತು ಉತ್ತರಕರ್ನಾಟಕದ ಎಲ್ಲ ಜಿಲ್ಲೆಗಲ್ಲಿಯೂ ತಿರುಗಾಟ ನಡೆಸಿದ್ದಾರೆ.. ಸರಳ ವ್ಯಕ್ತಿತ್ವ ಮತ್ತು ಸೌಮ್ಯಸ್ವಭಾವದ ಇವರಿಗೆ ಶ್ರೀ ಸೌಕೂರು ದುರ್ಗಾಪರಮೇಶ್ವರಿ ದೇವಿಯೂ ಆಯುರಾರೋಗ್ಯ,ಸುಖ ಸಂಪತ್ತನ್ನು ಅನುಗ್ರಹಿಸಲಿ.. ಇವರಿಗೆ ಯಕ್ಷರಂಗದಲ್ಲಿ ಹೆಚ್ಚಿನ ಅವಕಾಶಗಳು ದೊರೆಯಲಿ ಎನ್ನುವುದು ಯಕ್ಷಮಂದಾರದ ಶುಭಹಾರೈಕೆ.. ಸಾಹಿತ್ಯ:ಹಾಲಾಡಿ ಸಂತೋಷ ಶೆಟ್ಟಿ... ನಿರೂಪಣೆ:ಶ್ರೀಮತಿ ಅಮೃತ ಶೆಟ್ಟಿ.. ಯಕ್ಷಗಾನ ಕಲಾವಿದರ ಪರಿಚಯ ಸರಣಿಯ ಎಲ್ಲ ವಿಡಿಯೋಗಳು ನಮ್ಮಯಕ್ಷ💥ಮಂದಾರ ಯೂಟ್ಯೂಬ್ ಚಾನಲ್..ನಲ್ಲಿ ಲಭ್ಯವಿದೆ.. ನಮ್ಮ 🌀ಯಕ್ಷ💥ಮಂದಾರ🌀ಯೂಟ್ಯೂಬ್ ಚಾನಲ್ ಮತ್ತು ಫೇಸ್ಬುಕ್ ಪೇಜ್.. ನ್ನು download ಮಾಡಿಕೊಳ್ಳಿ..ಮತ್ತು ನಾವು upload ಮಾಡುವ ಎಲ್ಲ ಯಕ್ಷಗಾನ ವಿಡಿಯೋಗಳ ಮಾಹಿತಿ ಪಡೆಯಿರಿ..ನಮ್ಮ ವಿಡಿಯೋಗಳನ್ನು ನೋಡಿ like ಮಾಡಿ,share ಮಾಡಿ ಪ್ರೋತ್ಸಾಹಿಸಿ... ಯಕ್ಷಗಾನ ಕಲೆಯನ್ನು ಉಳಿಸಿ,ಬೆಳೆಸಿ, ಪ್ರೋತ್ಸಾಹಿಸಿ.. ಧನ್ಯವಾದಗಳು🙏🙏🙏 This is the exhibition of the achievements and life of the yakshaganaartists... Today's yakshakas are.. The young woman of the badgutti.. Saukkur Mela artist Manjunatha Shetty Shankaranarayana.. He was born on 08.01.1992 as the fourth of the five children of Sriramanna Shetty and Mrs. Sadamma Shetty at Hebbadi in Shankaranarayana taluk of Udupi district. He completed his education in Shankaranarayana till eighth standard and studied the rhythm of the tala in TheKp Hegde, Ravi Kumar Suralu, madhavanaka sunelbhandari and chandevadaka basava mundadi, who studied the rhythm of the haradi ramesh ganiga, and built a sculpture at the Srikshetra Maranakate Mela. He left the mela for two years and later joined the Saukur Mela in 2010 as balgopal. He then played the roles of Vrishasena, Krishna, Dushasana, Devi Mahatma Brahma, Vidyunmali, Chanda, Munda etc. He played the female role in the inevitable situation and after the death of Dinesha, he was replaced by Kodi Vishwanath Ganigar. She is a young woman with a sweet voice, a beautiful dance style, and has been a promising young character in the mythical episodes of Meenakshi Kalyan, Chandravali Vilasa Rade, Padmagandini, Subhadra and adunika sequels like Matantara's Harshini, Birthplace Bangari, DharmaSankriti's Chandranike, Meghamayuri Malavika, Sri Devi Banashankari's Banashankari's Champa and others. Kodi Vishwanath Ganiga, Kota Suresh Bangera, Ullur Shankar Devadiga, Bhadrapura Sridarbhandari, Uppanda Krishna Devadiga, Ravi Suralu, Flute Krishna Shetty and Harish Seizure have helped them grow in yakshagana... He has performed in coastal and malnad and has toured all districts of Bangalore, Mumbai, Hyderabad and North Karnataka during the monsoon. May Sri Saukur Durga Parameswari Devi bless him with a simple personality and a mild nature. Wishthem a lot of opportunities in the Yakshagana. Saint Haladi Santosh Shetty Narration:Smt. Amrita Shetty.. All the videos of the Yakshagana Artistes Introduction Series are our yaksha💥mandar YouTube channel.. Available in.. ಯಕ್ಷಮಂದಾರ ವಿಡಿಯೋ ನೋಡಲೋಸುಗವಾಗಿ. ವಾಹಿನಿಯ ಹೋಮ್ ಪೇಜ್ ಗಾಗಿ:
https://www.youtube.com/channel/UCsrL... ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: https://www.facebook.com/groups/27334


 #ಯಕ್ಷಮಂದಾರ, #Yakshamandaar, #ಮಂಜುನಾಥ ಶೆಟ್ಟಿ

No comments:

Post a Comment

#ಯಕ್ಷಮಂದಾರ - 51 | ಹೆನ್ನಾಬೈಲು ಸಂಜೀವ ಶೆಟ್ಟಿ | Hennabailu Sanjeeva Shetty | ಪ್ರಸಿದ್ದ ಸ್ತ್ರೀಪಾತ್ರದಾರಿ |

🌀ಯಕ್ಷ💥ಮಂದಾರ🌀 #ಯಕ್ಷಮಂದಾರ  - 51 | ಹೆನ್ನಾಬೈಲು ಸಂಜೀವ ಶೆಟ್ಟಿ | Hennabailu Sanjeeva Shetty | ಪ್ರಸಿದ್ದ ಸ್ತ್ರೀಪಾತ್ರದಾರಿ...