Sunday, August 2, 2020

ಯಕ್ಷ ಮಂದಾರ - 4 | Nandeesh Mogaveera Janyadi | ನಂದೀಶ ಮೊಗವೀರ ಜನ್ಯಾಡಿ | Yakshaartists |

                                                              🌀ಯಕ್ಷ💥ಮಂದಾರ🌀


ಇದು ಯಕ್ಷ ಕಲಾವಿದರ ಸಾಧನೆ ಮತ್ತು ಜೀವನಗಾಥೆಯ ಅನಾವರಣ.. ಇಂದಿನ ನಮ್ಮ ಯಕ್ಷ ಯುವ ಪ್ರತಿಭೆ...ಬಡಗುತಿಟ್ಟಿನ ಯಕ್ಷಭೂಮಿಕೆಯಲ್ಲಿ ಬಣ್ಣದ ವೇಷಗಾರಿಕೆಯಲ್ಲಿ ಸದ್ದು ಮಾಡುತ್ತಿರುವ ಪ್ರತಿಭಾ ಸಂಪನ್ನ ಯುವ ಕಲಾವಿದ ನಂದೀಶ್ ಮೊಗವೀರ ಜನ್ಯಾಡಿ..... ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಾರ್ದಳ್ಳಿ ಮಂಡಳ್ಳಿ ಗ್ರಾಮದ ಜನ್ಯಾಡಿಯ ಮಂಜುನಾಥ ಮೊಗವೀರ ಮತ್ತು ಬೇಬಿ ದಂಪತಿಗಳ ಪುಣ್ಯ ಗರ್ಭದಲ್ಲಿ ದಿನಾಂಕ:13.07.1998ರಲ್ಲಿ ಜನಿಸಿದರು... ತನ್ನ ವಿದ್ಯಾಭ್ಯಾಸವನ್ನು ಸೌಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೂರೈಸಿದ ಇವರು,ಪ್ರೌಢ ಶಿಕ್ಷಣವನ್ನು ಬಿದ್ಕಲಕಟ್ಟೆ ಪದವಿಪೂರ್ವ ಕಾಲೇಜಿನಲ್ಲಿ ಒಂಬತ್ತನೇಯ ತರಗತಿಯವರೆಗೆ ಕಲಿತ ನಂತರ ಯಕ್ಷಗಾನ ಕ್ಷೇತ್ರದತ್ತ ಆಕರ್ಷಿತರಾದರು... ಯಕ್ಷಗಾನದ ಕಲಾವಿದರಾದ ಸೌಡ ಬಾಸ್ಕರ ಮತ್ತು ಸೌಡ ಸತೀಶರಲ್ಲಿ ಯಕ್ಷಗಾನದ ಮೂಲಸ್ವರೂಪ ಜ್ಞಾನವನ್ನು ಪಡೆದ ಇವರು, ಉಳಿದೆಲ್ಲವನ್ನು ರಂಗದಲ್ಲಿ ಹಿರಿಯ ಕಲಾವಿದರ ರಂಗನಡೆ,ಭಾಷಾಶೈಲಿ, ವೇಷಗಾರಿಕೆಯನ್ನು ನೋಡಿ ಕಲಿತಿದ್ದೆ ಹೆಚ್ಚು...ಯಕ್ಷಗಾನದ ಅಧ್ಯಯನ ಕೇಂದ್ರದಲ್ಲಿ ಸಮರ್ಥ ಗುರುಗಳಿಂದ ತಾಳ,ಲಯ,ಬಾಷಾಜ್ಞಾನವನ್ನು ಪಡೆಯದೆ ಇದ್ದರೂ,ಗುರಿಯನ್ನೇ ಗುರುವಾಗಿರಿಸಿಕೊಂಡು ಛಲ ಬಿಡದ ವಿಕ್ರಮನಂತೆ ಯಕ್ಷರಂಗದಲ್ಲಿ ಬೆಳೆಯುತ್ತಿರುವ ಈ ಚುರುಕುಮತಿಯ ಯುವಕನ ಸಾಧನೆ ಪ್ರಸಂಶನೀಯವಾದದ್ದು.... ಪ್ರಥಮ ಬಾರಿಗೆ ಮಡಾಮಕ್ಕಿ ಮೇಳದಲ್ಲಿ ಗೆಜ್ಜೆಕಟ್ಟಿ ರಂಗಪ್ರವೇಶಗೈದ ಇವರು ಐದು ವರ್ಷಗಳ ಕಾಲ ಕೊಡಂಗಿ, ಬಾಲಗೋಪಾಲ,ಬಣ್ಣದ ವೇಷ, ಪೋಷಕ ಪಾತ್ರ ಮತ್ತು ಅನಿವಾರ್ಯ ಪರಿಸ್ಥಿಯಲ್ಲಿ ಪುಂಡು ವೇಷಗಳನ್ನು ಸಮರ್ಥವಾಗಿ ನಿರ್ವಹಿಸಿ ಸೈ ಎನಿಸಿಕೊಂಡರು. ನಂತರ ಒಂದು ವರ್ಷ ಸಿಂಗಂದೂರು ಮೇಳದಲ್ಲಿ ಸೇವೆಸಲ್ಲಿಸಿ,ಪ್ರಸ್ತುತ ವರ್ಷದಿಂದ ಮಾರಣಕಟ್ಟೆ ಮೇಳದಲ್ಲಿ ಸೇವೆಸಲ್ಲಿಸುತ್ತಿದ್ದಾರೆ... ಇಂದಿನ ಸಮಯದಲ್ಲಿ ಯುವಕರು ಪುಂಡುವೇಷ ಮತ್ತು ಪುರುಷವೇಷದತ್ತ ಆಕರ್ಷಿತರಾಗುವ ಈ ಸಮಯದಲ್ಲಿಯೂ, ಇವರು ಸಾಂಪ್ರದಾಯಿಕಬದ್ದ ಬಣ್ಣದ ವೇಷವನ್ನು ನೆಚ್ಚಿಕೊಂಡಿರುವುದು ಅಭಿನಂದನೀಯವಾದದ್ದು... ಈ ವರ್ಷ ಮಾರಣಕಟ್ಟೆ ಮೇಳದಲ್ಲಿ ಜಯಭೇರಿ ಬಾರಿಸಿದ್ದ ಜ್ವಾಲಾಪ್ರತಾಪ ಪ್ರಸಂಗದ ಅಗ್ನಿ,ದೇವಿ ಮಹಾತ್ಮೆಯ ಮಹಿಷಾಸುರ,ಕ್ಷೇತ್ರ ಮಹಾತ್ಮೆಯ ಮಹಿದಾನವಿ,ರುದ್ರಕೋಪದ ರಕ್ತಕೇಶಿ,ಶ್ವೇತಕುಮಾರ ಚರಿತ್ರೆಯ ಕರಾಳನೇತ್ರೆ,ರಾಣಿ ಶಶಿಪ್ರಭೆಯ ಘೋರರೂಪಿ ಮೊದಲಾದ ಬಣ್ಣದ ವೇಷಗಳನ್ನು,ಮಡಾಮಕ್ಕಿ ಕ್ಷೇತ್ರ ಮಹಾತ್ಮೆಯ ಪಂಜುರ್ಲಿ, ಶ್ರೀ ರಾಮದರ್ಶನದ ಮೈಂದ ದ್ವಿವಿದ, ಪಾಪಣ್ಣ ವಿಜಯದ ದುರ್ಮುಖ,ದುರ್ಮತಿ ಮೊದಲಾದ ಪುಂಡು ವೇಷಗಳನ್ನು ಅಭಿನಯಿಸಿ ಅಪಾರ ಅಭಿಮಾನಿಗಳ ಪ್ರೀತಿ,ಮನ್ನಣೆಗೆ ಪಾತ್ರರಾಗಿದ್ದಾರೆ... ನಿಟ್ಟೂರು ಅನಂತ ಹೆಗಡೆ, ಮರವಂತೆ ಕೃಷ್ಣದಾಸರು,ಅರಳಿಸುರುಳಿ ಚಂದ್ರ ಶೆಟ್ಟಿ,ಕೊಳಲಿ ಕೃಷ್ಣ ಶೆಟ್ಟಿ,ಅರೆಹೊಳೆ ಸಂಜೀವ ಶೆಟ್ಟಿ,ಮಹಮದ್ ಗೌಸ್,ಆನೆಗದ್ದೆ ಸತೀಶ ಹೆಗಡೆ,ಕಟ್ಟಿನಬೈಲು ಶಿವರಾಮ ಶೆಟ್ಟಿ,ಕೊಳಲಿ ಕೃಷ್ಣ ಶೆಟ್ಟಿ,ಆಲೂರು ಸುರೇಂದ್ರ,ಉಪ್ಪುಂದ ಶ್ರೀದರ ಗಾಣಿಗ ಮೊದಲಾದ ಹಿರಿಯ ಕಲಾವಿದರೊಂದಿಗೆ ತಿರುಗಾಟ ನಡೆಸಿದ್ದಾರೆ,ಹಿರಿಯ ಕಲಾವಿದರಿಂದ ಅನುಭವದ ಆಗರದಂತಿರುವ ಮಾರಣಕಟ್ಟೆ ಮೇಳದಲ್ಲಿ ವೃತ್ತಿ ನಿರ್ವಹಿಸುತ್ತಿರುವುದರಿಂದ ಇವರಿಗೆ ಯಕ್ಷಗಾನದಲ್ಲಿ ಅಭಿವೃದ್ಧಿ ಹೊಂದುವುದಕ್ಕೆ ವಿಪುಲ ಅವಕಾಶಗಳು ದೊರೆಯುತ್ತಿದೆ...ಅತಿ ಚಿಕ್ಕ ವಯಸ್ಸಿನಲ್ಲೇ ಮಹಿಷಾಸುರನಂಥ ದೊಡ್ಡ ಪಾತ್ರವನ್ನು ನಿರ್ವಹಿಸುದಕ್ಕೆ ಅವಕಾಶ ದೊರೆತಿರುವ ಬಗ್ಗೆ ಸಂತೋಷ ವ್ಯಕ್ತಪಡಿಸುವ ಇವರು ಮೇಳದ ವ್ಯವಸ್ಥಾಪಕರು ಮತ್ತು ಹಿರಿಯ ಕಲಾವಿದರ ಸಹಕಾರವನ್ನು ಮುಕ್ತ ಮನಸ್ಸಿನಿಂದ ಒಪ್ಪಿಕೊಳ್ಳುತ್ತಿದ್ದಾರೆ... ಇವರ ಚುರುಕುಮತಿತ್ವ ಮತ್ತು ರಂಗದಲ್ಲಿನ ಪ್ರಬುದ್ಧ ಅಭಿನಯವನ್ನು ಮೆಚ್ಚಿ ಕುಂಟುನೇರಳೆ ನರಸಿಂಹ ಆಚಾರ್ಯ ಕುಟುಂಬದವರು ಸನ್ಮಾನ ನೀಡಿ ಪ್ರೋತ್ಸಾಹಿಸಿದ್ದಾರೆ... ಇವರಿಗೆ ಯಕ್ಷರಂಗದಲ್ಲಿ ಹೆಚ್ಚಿನ ಯಶಸ್ಸು ದೊರೆಯಲಿ..ಅಗ್ರಪಂಕ್ತಿಯ ಕಲಾವಿದರ ಸಾಲಿನಲ್ಲಿ ಗುರುತಿಸಿಕೊಳ್ಳುವಂತಾಗಲಿ..ಶ್ರೀ ಬ್ರಹ್ಮಲಿಂಗೇಶ್ವರ ಸ್ವಾಮಿಯು ಆಯುರಾರೋಗ್ಯ, ಸುಖಸಂಪತ್ತನ್ನು ನೀಡಿ ಪೊರೆಯಲಿ ಎನ್ನುವುದು ನಮ್ಮ🌀ಯಕ್ಷ💥ಮಂದಾರ🌀ದ ಶುಭಹಾರೈಕೆ.. ಸಾಹಿತ್ಯ:ಹಾಲಾಡಿ ಸಂತೋಷ ಶೆಟ್ಟಿ... ನಿರೂಪಣೆ:ಅಮೃತ ಶೆಟ್ಟಿ... This is an exhibition of the achievements and life of yakshaartists. Today's young talent... Nandish Mogaveera Janyadi, a young artist who is making a colourful dress in the yakshabhanu of Badgutittt. Born on 13.07.1998 in the holy womb of Manjunatha Mogaveera and Baby in Jandyadi in Hardalli Mandalli village in Kundapur taluk of Udupi district. After completing his education at Sauda Primary School, he studied secondary education in The Bidkalakatte Pre-Graduate College, and was attracted to yakshagana after studying in the ninth standard. He gained knowledge of the basic form of Yakshagana in Yakshagana artistes Sauda Baskar and Sauda Satish, and i had learnt everything else by looking at the theatre, linguistic style and costumes of the veteran saints. The achievement of this young man who is growing in yakshagana as a persistent vikram, who has not received the knowledge of rhythm, rhythm and rhythm in the yakshagana study centre is remarkable. He made his debut at madamakki mela and for five years he was able to perform kodangi, balagopal, colourdress, patronrole and unavoidable dresses. Then he served at Singandur Mela for one year and from this year he has served in the Marankate Mela... Even today, young people are attracted to the purusa and the dress, and it is admirable that they rely on traditional colours... This year, the fire of the fire of the maranakate mela, the mahamai mahishasura of the goddess, the mahishasura of the kshetra mahatma, the raktakeshof rudrakopa, the black eye of the history of Shwetakumara, the gorgeous robe of rani shastriprabh, the panjurli of madamakki kshetra mahatma mahatma, the minda of sri ramadarshana, the dvivida of sri ramadarshana, the durmukha of papanna vijaya, durmathi pundu etc. ವಾಹಿನಿಯ ಹೋಮ್ ಪೇಜ್ ಗಾಗಿ: https://www.youtube.com/channel/UCsrL... ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: https://www.facebook.com/groups/27334...

No comments:

Post a Comment

#ಯಕ್ಷಮಂದಾರ - 51 | ಹೆನ್ನಾಬೈಲು ಸಂಜೀವ ಶೆಟ್ಟಿ | Hennabailu Sanjeeva Shetty | ಪ್ರಸಿದ್ದ ಸ್ತ್ರೀಪಾತ್ರದಾರಿ |

🌀ಯಕ್ಷ💥ಮಂದಾರ🌀 #ಯಕ್ಷಮಂದಾರ  - 51 | ಹೆನ್ನಾಬೈಲು ಸಂಜೀವ ಶೆಟ್ಟಿ | Hennabailu Sanjeeva Shetty | ಪ್ರಸಿದ್ದ ಸ್ತ್ರೀಪಾತ್ರದಾರಿ...